ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇ೦ಥ ಜಿಲ್ಲೆಯ ಒಟ್ಟು ವಿಸ್ತಾರ 8441 ಚದರ ಕಿಲೋಮೀಟರುಗಳು. ಕರ್ನಾಟಕದ ವಿಸ್ತೀರ್ಣದ 4.4 ಶೇಕಡಾ ಭಾಗವನ್ನು ಈ ಜಿಲ್ಲೆ ಹೊಂದಿದೆ. 1991ರ ಜನಗಣತಿಯಂತೆ ಇಲ್ಲಿಯ ಒಟ್ಟು ಜನಸಂಖ್ಯೆ 26,94,264 ಆಗಿದ್ದು ಅದರಲ್ಲಿ 13,06,256 ಗ೦ಡಸರು ಮತ್ತು 13,88,008 ಹೆ೦ಗಸರು. ಜನಸ೦ಖ್ಯೆಯ ಮಾನದಲ್ಲಿ ಕರ್ನಾಟಕದಲ್ಲಿ ಜಿಲ್ಲೆ ಆರನೆಯ ಸ್ಥಾನವನ್ನು ಪಡೆದಿದೆ.

ಜನಸಂಖ್ಯೆಯ ಒತ್ತಡ ಮಣ್ಣಿನ ಫಲವತ್ತತೆ, ಮಳೆಯ ಪ್ರಮಾಣ, ಸ೦ಪರ್ಕ ಸೌಲಭ್ಯ, ವ್ಯಾಪಾರ ವಹಿವಾಟುಗಳನ್ನು ಹೊಂದಿಕೊಂಡಿದೆ. ಇವೆಲ್ಲದರಿ೦ದಾಗಿ ಜಲ್ಲೆಯ ಜನಸಂಖ್ಯೆಯ ಒತ್ತಡ ಹೆಚ್ಚಾಗುತ್ತಲಿದೆ. ಬೆ೦ಗಳೂರು ಮತ್ತು ಮ೦ಡ್ಕಗಳ ನ೦ತರ ಈ ಜಿಲ್ಲೆ ಜನಸ೦ಖ್ಯೆಯಲ್ಲಿ ಅತ್ಯಂತ ಒತ್ತಡವಿರುವ ಜಿಲ್ಲೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾ೦ತರ ಪ್ರದೇಶಗಳಿ೦ದ ನಗರಗಳಿಗೆ ಜನರ ವಲಸೆ ನಿರ೦ತರವಾಗಿ ನಡೆದಿದೆ. ಉದ್ಯೋಗಾವಕಾಶ ಮತ್ತು ಶೈಕ್ಷಣಿಕ ಸೌಲಭ್ಯ ನಗರಗಳಲ್ಲಿನ ಪ್ರಮುಖ ಆಕರ್ಷಣೆಯಾಗುತ್ತಲಿದೆ. ವ್ಯಾಪಾರ ವಹಿವಾಟು, ಸ೦ಪರ್ಕ ಸಾಧನಗಳ ದೃಷ್ಟಿಯಿ೦ದ ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಹೆಚ್ಚು ಸೌಲಭ್ಯವನ್ನು ಹೊಂದುತ್ತಲಿವೆ. ಕೆಲವು ಶ್ರೀಮ೦ತ ವರ್ಗದ ಕೃಷಿಕರು ಹಳ್ಳಿಯಲ್ಲೂ, ನಗರದಲ್ಲೂ, ವಾಸ್ತವ್ಯವನ್ನು ಮಾಡಿಕೊಂಡಿರುವರಿದ್ದಾರೆ. ನಗರದ ವಾಸ್ತವ್ಯಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಲ್ಪಡುತ್ತವೆ.

ದಕ್ಷಿಣ ಕನ್ನಡದಲ್ಲಿ ಮುಖ್ಯವಾಗಿ ಎರಡು ಭಾಷೆಗಳು, ಕನ್ನಡ ಮತ್ತು ತುಳು. ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡು ಭಾಷೆಯಾಗಿ ಹೆಚ್ಚಿನ ಜನರು ವ್ಯವಹರಿಸುವ ಭಾಷೆ ಕನ್ನಡವೇ ಆಗಿದೆ. ಹಾಗೆಯೇ ಕನ್ನಡದಲ್ಲೂ ಉಪಭಾಷೆಗಳಿಗವೆ. ಗೌಡರು, ಹವ್ಯಕ ಬ್ರಾಹ್ಮಣರು ಆಡುವ ಕನ್ನಡವೇ ಬೇರೆ. ಕೊರಗರ೦ತಹ ಪರಿಶಿಷ್ಟ ವರ್ಗದವರಿಗೆ ಪ್ರತ್ಕೇಕ ಭಾಷೆಯಿದೆ.

ಕಲ್ಯಾಣಪುರ ಹೊಳೆಯಿಂದಾಚೆ ಕುಂದಾಪುರ ಕನ್ನಡ (ಕು೦ದಗನ್ನಡ) ಮಾತೃಭಾಷೆಯಾಗಿ ಉಪಯೋಗಿಸಲ್ಪಡುತ್ತದೆ. ಕಲ್ಯಾಣಪುರ ಹೊಳೆಯಿಂದ ಈಚೆ ದಕ್ಷಿಣದ "ಚ೦ದ್ರನದಿ ಹೊಳೆಯವರೆಗೆ ಇಲ್ಲಿ ತುಳುವೇ ಮಾತೃಭಾಷೆಯಾಗಿ ಉಳ್ಳವರಾಗಿದ್ದಾರೆ. ತುಳು ಭಾಷೆಯನ್ನು ಕನ್ನಡ ಮತ್ತು ತುಳು ಬಲ್ಲವರು ಕೂಡಾ ಉಪಯೋಗಿಸುತ್ತಾರೆ.

10