ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪ / ಕುಕ್ಕಿಲ ಸಂಪುಟ

ವಿದೂಷಕನ ಸ್ವರೂಪವು ಹೇಗಿರಬೇಕೆಂದು ಇನ್ನೂ ಭರತನು ಹೇಳಿರುವುದನ್ನು ನೋಡಿ:


ವಾಮನೋ ದಂತುರಃ ಕುಬ್ಬೋ ದ್ವಿಜಿಷ್ಟೋ ವಿಕೃತಾನನಃ ।
ಖಲತಿಃ ಪಿಂಗಲಾಕ್ಷ ಸ ವಿಧೇಯೋ ವಿದೂಷಕಃ ।
ಕಲಹಪ್ರಿಯೋ ಬಹುಕ ವಿರೂಪೋ ಗಂಧಸೇವಕಃ ॥
ಮಾನ್ಯಾಮಾನ್ಯಾ ವಿಶೇಷಜ್ಞ...॥

'ಗಂಧಸೇವಕ'ನೆಂದರೆ ಎಲ್ಲಿ ಹೋದರಲ್ಲಿ ಯಾರು ಬಂದರೂ ಅವರ ಸೇವೆಯಲ್ಲಿ ನಿರತನಾದವನು ಎಂದರ್ಥ.

ಈ ವಿದೂಷಕನ ಹಾಸ್ಯಸಮೇತ ನಡೆಯತಕ್ಕ ನಡೆಯತಕ್ಕ ವೀಥೀಪ್ರಹಸನಗಳೆಂದರೆ ಅಸತ್ಪಲಾಪ, ವಾಲಿ, ಸಿಂಗಕ, ಛಲ ಇತ್ಯಾದಿ. ಅವುಗಳ ಕೆಲವು ಲಕ್ಷಣಗಳು ಹೀಗಿವೆ:


ಅಸಂಬದ್ಧ೦ತು ಯದ್ವಾಕ್ಕಂ ಅಸಂಬದ್ಧ ಮಥೋತ್ತರಂ ।
ಅಸಲಾಪಿತಂ ಚೈವ ವೀಡ್ಯಾಂ ಸಮ್ಯಕ್ಷಯೋಜಯೇತ್ ॥
ಭಗವಾಪಸ, ಭಿಕ್ಷು, ಪ್ರೋತ್ರಿಯ, ವಿಪ್ರಾತಿಹಾಸ, ಸಂಯುಕ್ತಂ ।
ನೀಚಜನಸಂಪ್ರಯುಕ್ತಂ ಪರಿಹಾಸಾಭಾಷಣ ಪ್ರಾಯಂ ।
ಸುವಿಕೃತ ಭಾಷಾಚಾರಂ ವಿಶೇಷಹಾಸೋಪವಾಸರಚಿತಪದಂ।
ಲೋಕೋಪಚಾರ ಯುಕ್ತಾ ಯಾ ವಾರ್ತಾ ಯಾ ಚ ದಂಭಸಂಯೋಗಃ ।
ತತ್ಸಹಸನೇ ಪ್ರಯೋಜ್ಯಂ ಧೂರ್ತವಿಟಿವಿವಾದ ಸಂಪನ್ನಂ ॥ (ಭ. ನಾ.)

(ಇವೆಲ್ಲ ಮುಖ್ಯ ಕಥಾರಂಭಕ್ಕೆ ಮೊದಲು 'ಆಮುಖ'ದಲ್ಲಿ ಪ್ರದರ್ಶಿಸಬೇಕಾದ ಹಾಸ್ಯ ಪ್ರಯೋಗಗಳು). ಇದು ವೀಥೀ ಪ್ರಹಸನಗಳ ಸಾಮಾನ್ಯ ಲಕ್ಷಣ.

ನಮ್ಮ ಆಟದಲ್ಲಿ ಬರುವ ಸಿಂಗಿಸಿಂಗರ ಹಾಸ್ಯ (ಸಿಂಗಕ) ಆಚಾರಿಭಟ್ಟನ (ಪ್ರೋತ್ರಿಯ) ಹಾಸ್ಯ (ಪುರೋಹಿತ ನಕಲಿ) ಒತ್ತೆ ಬೈರಾಗಿ (ಭಿಕ್ಷು) ಹಾಸ್ಯ, ಒಂಡು ಬೈರಾಗಿ ಹಾಸ್ಯ, ಬ್ರಾಹ್ಮಣಹಾಸ್ಯ (ವಿಪ್ರ) ಮಡಿವಾಳನ ಹಾಸ್ಯ, ಅರೆಪ್ಪಾವಿನ ಹಾಸ್ಯ, ಕೊರವಂಜಿ ಹಾಸ್ಯ, ಓಡಾರಿ ಹಾಸ್ಯ (ಧೂರ್ತ ವಿಟವಿವಾದ) ಮುಂತಾದ ಕನ್ನಡ, ತುಳು, ಹಿಂದೂಸ್ಥಾನಿ, ಮಲೆಯಾಳ, ತಮಿಳು ಮಾತುಗಳ ನಾನಾ ವಿಧವಾದ ಹಾಸ್ಯಗಳು ಈ ನಾಟ್ಯಶಾಸ್ರೋಕ್ತ ಲಕ್ಷಣಕ್ಕೆ ಸಮನ್ವಯವಾಗಿಯೇ ಇರುತ್ತವೆ ಎಂಬುದನ್ನು ಲಕ್ಷಿಸಬೇಕು.

ಹೀಗೆ 'ಆಮುಖ'ದ ಹಾಸ್ಯಪ್ರಯೋಗವಾದ ಮೇಲೆ 'ಪ್ರಸ್ತಾವಕ'ನು ಬಂದು (ಅವನಿಗೆ 'ಕಥಾಪ್ರಸಂಗಿ' ಎಂದೂ ಹೆಸರಿದೆ. ಮುಂದಿನ ಆಟದ ಕಥಾಭಾಗವನ್ನು ಪ್ರೇಕ್ಷಕರಿಗೆ ಹೇಳಿ ತಿಳಿಸಬೇಕೆಂದಿದೆ. ನಮ್ಮ ಆಟದಲ್ಲಿ 'ಕಥಾನುಸಾರ' ಹೇಳುವುದನ್ನು ಭಾಗವತನೇ ಮಾಡುತ್ತಾನೆ. ಆಮೇಲೆ ಯವನಿಕಾಂತರದಲ್ಲಿ, ಎಂದರೆ ತೆರೆಸೀರೆಯ ಒಳಭಾಗದಲ್ಲಿ ಭಾಗವತನು ರೌದ್ರರಸದ ಪದ್ಯವೊಂದನ್ನು ಹೇಳಬೇಕು. (ತತೋ ರೌದ್ರರಸಂ ಶ್ಲೋಕಂ ಪದಸಂಹರಣಂ ಪಠೇತ್‌-ಭ. ನಾ. ೫). ಅದರ ಬೆನ್ನಿಗೆ ವಾದಕರು ಶುಷ್ಕ ವಾದ್ಯಗಳನ್ನು ಬಾರಿಸಬೇಕು ಎಂದು ಶಾಸ್ತ್ರವಿಧಿ ಇದೆ. 'ಶುಷ್ಕವಾದನ' ಎಂದರೆ ಗೀತವಿಲ್ಲದೆ ಬಾರಿಸು ವುದು ಎಂದರ್ಥ. ನಮ್ಮ ಆಟದಲ್ಲಿಯೂ ಯಥಾಪ್ರಕಾರ ಭಾಗವತನು ಒಂದು ಭಾಮಿನಿ ಯನ್ನೋ, ವೃತ್ತವನ್ನೋ ಹೇಳಿ ಚೆಂಡೆ ಮದ್ದಳೆಗಳನ್ನು ತೆರೆಸೀರೆಯ ಹಿಂದೆ ಬಾರಿಸು ತ್ತಾರೆ. ಇದಕ್ಕೆ ನಾವು ಪೀಠಿಕೆ ಹೊಡೆಯುವುದೆನ್ನುತ್ತೇವೆ. ಆಮೇಲೆ ತೆರೆಯನ್ನು ಸರಿಸಿ ಪಾತ್ರಗಳು ನರ್ತನ ಗತಿಯಲ್ಲಿ ರಂಗಪ್ರವೇಶ ಮಾಡಿ, ತಮ್ಮ ತಮ್ಮ ಸ್ವಭಾವ ಪೌರುಷ