ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೨ / ಕುಕ್ಕಿಲ ಸಂಪುಟ

ಶಬ್ದಕ್ಕೆ - A poetic composition used in dramas ಎಂಬ ಅರ್ಥವನ್ನು ಕೊಡಲಾಗಿದೆ. ತೆಲುಗು ನಿಘಂಟುಗಳಲ್ಲಿಯೂ ನಾಟ್ಯಕ್ಕೆ ಉಪಯುಕ್ತವಾದ ದೃಶ್ಯಕಾವ್ಯ ಭೇದವೆಂಬ ಅರ್ಥವಿರುವುದಾಗಿದೆ. ಅದಲ್ಲದೆ, ಸಂಗೀತ ಶಾಸ್ತ್ರಕರ್ತರೂ 'ಯಕ್ಷಗಾನ' ವೆಂದು ಪ್ರಬಂಧವನ್ನೇ ಕುರಿತಾಗಿ ಕರೆದಿರುವುದನ್ನು ನೋಡಬಹುದು. ತಂಜಾವೂರ ನಾಳಿದ ರಘುನಾಥ ನಾಯಕನ (ಕ್ರಿ. ಶ. ೧೬-೧೭ನೇ ಶತಮಾನ) ಆಸ್ಥಾನ ವಿದ್ವಾಂಸ ನಾಗಿದ್ದ ಗೋವಿಂದ ದೀಕ್ಷಿತನು ತನ್ನ 'ಸಂಗೀತ ಸುಧಾ' ಎಂಬ ಶಾಸ್ತ್ರ ಗ್ರಂಥದಲ್ಲಿ, ಆ ನಾಯಕ ರಾಜನ ಗ್ರಂಥ ರಚನೆಗಳನ್ನು ಈ ರೀತಿಯಾಗಿ ಉಲ್ಲೇಖಿಸುತ್ತಾನೆ-
ಶ್ರೀರುಕ್ಷ್ಮಿಣೀ ಕೃಷ್ಣ ವಿವಾಹ ಯಕ್ಷಗಾನ, ಪ್ರಬಂಧಾನಪಿ ಸೈಕಭೇದಾನ್ ।
ನಿರ್ಮಾಯ ವಾಗ್ಲಿ: ಪ್ರಣುತಾರ್ಥಭಾಗ್ನಿರ್ವಿದ್ವತ್‌ ಕವೀನಾಂ ವಿದಧಾಸಿ ಹರ್ಷಂ ॥
(೧-೬೩) ಎಂದಿರುತ್ತಾನೆ. ರುಕ್ಷ್ಮಿಣೀ ಕೃಷ್ಣ ವಿವಾಹವೆಂಬ ಯಕ್ಷಗಾನವನ್ನೂ, ಇನ್ನಿತರ ಅನೇಕ ವಿಧದ ಪ್ರಬಂಧಗಳನ್ನೂ ನಿರ್ಮಿಸಿ ವಿದ್ವತ್ಕವಿಗಳಿಗೆ ಹರ್ಷವನ್ನುಂಟು ಮಾಡಿರುವೆ"

ಎಂಬ ಈ ಶ್ಲೋಕದಿಂದ ಯಕ್ಷಗಾನವೆಂದರೆ ಒಂದು ವಿಶಿಷ್ಟ ಪ್ರಬಂಧ ಜಾತಿ ಎಂಬುದು ಸ್ಪಷ್ಟವಾಗುವುದಷ್ಟೆ.

ಸಂಸ್ಕೃತ 'ಗಾನ' ಶಬ್ದಕ್ಕೆ ಭಾವಾರ್ಥದಲ್ಲಿ ಹಾಡುವಿಕೆ ಎಂಬ ಅರ್ಥವಾದರೆ, ಕರ್ಮಾರ್ಥದಲ್ಲಿ ಹಾಡಲ್ಪಡುವ ಪ್ರಬಂಧವೆಂದು ಅರ್ಥವಿರುವುದು. ಸಂಗೀತ ಶಾಸ್ತ್ರದಲ್ಲಿ ದೇಶೀಯ ಪ್ರಬಂಧಗಳು ಸರ್ವಸಾಮಾನ್ಯವಾಗಿ 'ಗಾನ'ವೆಂದೇ ಕರೆಯಲ್ಪಟ್ಟಿವೆ. ಅಲ್ಲಿ ಈ 'ಗಾನ'ಕ್ಕೆ, ರಾಗಾಂಗ ಭಾಷಾಂಗ ಕ್ರಿಯಾಂಗಾದಿ ದೇಶೀ ರಾಗಗಳಲ್ಲಿ, ಎಂದರೆ ಇಂದಿಗೂ ಸಂಗೀತರೂಢಿಯಲ್ಲಿರುವ ರಾಗಗಳಲ್ಲಿ ಹಾಡಲ್ಪಡತಕ್ಕ ದೇಶಭಾಷಾಪ್ರಬಂಧ ಎಂಬ ವಿಶಿಷ್ಟಾರ್ಥವಿರುತ್ತದೆ. 'ಸಂಗೀತ ರತ್ನಾಕರ'ದ ಪ್ರಬಂಧಾಧ್ಯಾಯದ ಈ ಶ್ಲೋಕಗಳನ್ನು ಪರಿಶೀಲಿಸಿರಿ-

ಯತ್ತು ವಾಗ್ಗೇಯಕಾರೇಣ ರಚಿತಂ ಲಕ್ಷಣಾನ್ವಿತಂ ।
ದೇಶಿರಾಗಾದಿಷ್ಟು ಪ್ರೋಕ್ಕಂ ತದ್ದಾನಂ ಜನರಂಜನಂ ॥

ಈ ಗಾನ (ಪ್ರಬಂಧ)ಗಳು ದೇಶಭಾಷಾರಚನೆಗಳಾಗಿರುವದರಿಂದ ಆ 'ಸಾಹಿತ್ಯ'ಕ್ಕೆ 'ಮಾತು' ಎಂದೇ ಲಕ್ಷಣ ಗ್ರಂಥಗಳಲ್ಲಿ ಕರೆದಿರುವುದನ್ನು ಲಕ್ಷಿಸಬಹುದು. ('ಮಾತು' ಸಂಸ್ಕೃತ ಶಬ್ದವಲ್ಲ).
ವಾಸ್ಮಾತುರುಚ್ಯತೇ ಗೇಯಂ ಧಾತುರಿತ್ಯಭಿಧೀಯತೇ
ವಾಗ್ವರ್ಣಸಮುದಾಯಸ್ತು ಮಾತುರಿತ್ಯುಚ್ಯತೇ ಬುದ್ಧ: - ಇತ್ಯಾದಿ.
ವಾಗ್ಗೇಯಕಾರರೆಂದರೆ ಮಾತು (ಸಾಹಿತ್ಯ) ಮತ್ತು ಧಾತು (ಸರಿಗಮಾದಿ ಸ್ವರವಿಧಿ ಅಥವಾ ರಾಮನಿರ್ದೇಶ) ಇವುಗಳಲ್ಲಿ ರಚನಾಸಾಮರ್ಥ್ಯವುಳ್ಳವರು ಎಂದರ್ಥ.

ಮಾತು ಧಾತುದ್ವಯೋ: ಕರ್ತಾ ಪ್ರೋಕ್ಕೋ ವಾಗ್ಗೇಯಕಾರಕಃ ।

ಯಕ್ಷಗಾನಗಳು ಅಂತಹ 'ವಾಗ್ಗೇಯಕಾರ ರಚನೆ'ಗಳೆಂದು ತೆಲುಗು ಲಕ್ಷಣಕಾರರು ಹೇಳಿದ್ದಾರೆ. ಈಗ ಸುಮಾರು ೩೦೦ ವರ್ಷಕ್ಕೆ ಹಿಂದಿನವನಾದ ಆಂಧ್ರದ ಪ್ರಸಿದ್ಧ ಯಕ್ಷಗಾನ ಕವಿ ಆದಿ ಭಟ್ಟ ನಾರಾಯಣದಾಸನೆಂಬವನು ಆ ಕುರಿತು ಹೀಗೆ ಹೇಳಿದ್ದಾನೆ-