ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ಶಾಸ್ತ್ರೀಯತೆ / ೭೩

'ಯಕ್ಷಗಾನಮುಗೂಡ ವಾಗ್ಗೇಯಕಾರಪ್ರಣೀತ ಮುಲೇ, ಶ್ರುತಿಲಯಾತ್ಮಕಮ್ಯ ರಾಗ ವೈವಿಧ್ಯಮು ಜಾತಿ ಮೂರ್ಭನಾಯುತಮೈನ ಸ್ವರಾಲಾಪಯುಗಲಿಗಿನ ಗೇಯರಚನ.'

ಅಂತೆಯೇ ಇದು ವೀಣಾದಿ ವಾದ್ಯದೊಂದಿಗೆ ಹಾಡಲ್ಪಡುತ್ತಿತ್ತು ಎಂಬುದನ್ನೂ, ತಂಚಾವೂರಿನ ವಿಜಯರಾಘವ ನಾಯಕನ ಆಸ್ಥಾನ ಕವಿಯಾಗಿದ್ದ ಚೆಂಗಲ್ವ, ಕಾಳಕವಿ ಎಂಬವನು 'ರಾಧಾವಿಲಾಸ'ವೆಂಬ ತನ್ನ ಕಾವ್ಯದಲ್ಲಿ ವರ್ಣಿಸಿರುವುದನ್ನು ನೋಡಬಹುದು-
'ಯಕ್ಷಗಾನಂಬುನು ರಾವಣಹಸ್ಯ, ಮುಡುಕು, ದಂಡೆಮೀಟಲು (ಜೆಂಗುಲು) ಜೇಕಟ, ತಾಳಮುಲನು, ಜೋಲ, ಸುವ್ವಾಲ, ಧವಳಂಬುಲೇಲಲಮರ, ಕೊಂದರತಿವಲು ಎನಿಪಿಂಚಿರಂದಮುಗನು'
(ರಾವಣಹಸ್ತ = ಇಪ್ಪತ್ತು ತಂತಿಗಳ ವೀಣೆ; ಮುಡುಕು = ಉಡುಕ್ಕೆ ಎಂಬ ಚರ್ಮ ವಾದ್ಯ ದಂಡೆಮೀಟಲು = ವೀಣೆ, ಜೇಕಟ = ಚಾಕಟೆ.
ಆಂಧ್ರದ ಲಕ್ಷಣ ಗ್ರಂಥಗಳಲ್ಲಿ 'ಯಕ್ಷಗಾನ ಲಕ್ಷಣ'ವೆಂದು ಕೊಟ್ಟಿರುವುದೂ, ಯಾವ ಯಾವ ವಿಧದ ಪದ್ಯಗಳು, ಹಾಡುಗಳು ಆ ರಚನೆಯಲ್ಲಿ ಬರುತ್ತವೆ ಎಂಬುದನ್ನೇ. ಅಲ್ಲಿಯ ಪ್ರಾಚೀನತಮ ಕಾವ್ಯಲಕ್ಷಣ ಗ್ರಂಥವೆನ್ನಲಾದ 'ಲಕ್ಷಣ ದೀಪಿಕಾ' ಎಂಬುದರಲ್ಲಿ ಅದು ಹೀಗಿದೆ-
"ಯಕ್ಷಗಾನಂಬುನನ್ ವಲಯು ಪದಂಬುಲು, ದರುವುಲು, ನೇಲಲು, ಧವಳಂಬುಲು, ಮಂಗಳಹಾರತುಲು, ಶೋಭನಂಬುಲು, ನುಯ್ಯಾಲಜೋಲಲು, ಜಕ್ಕುಲರೇಕು ಪದಂಬುಲು, ಕಂದವೃತ್ತಾದುಲು, ಚಂದಮಾಮ ಸುದ್ದುಲು, ಅಷ್ಟಕಂಬುಲು, ಏಕಪದ, ದ್ವಿಪದ, ಏಕಪದ, ದ್ವಿಪದ, ತ್ರಿಪದ, ಚತುಷ್ಪದ, ಷಟ್ಟದಾಷ್ಟಪದುಲು ನಿವಿಯಾದಿಗಾಗಲ್ಲು ನನ್ನಿಯು ಲಯಪ್ರಮಾಣಂಬುಲುನೊಪ್ಪಿ ಮೃದುಮಧುರ ರಚನಲ ಪ್ರಸಿದ್ಧಂಬೈನ ಕವಿತ್ವಂಬುಲು' (ಲಕ್ಷಣ ದೀಪಿಕಾ' -ಪ್ರಾಚ್ಯಲಿಖಿತ ಪುಸ್ತಕ ಭಂಡಾರ ಡಿ. ನಂ. ೧೬೨೯).
ಇದರಲ್ಲಿ ತೋರುವ ದರುಗಳು ಅಥವಾ ದರುಪದಗಳು, ಏಲೆಗಳು (ಯಾಲ ಪದಗಳು), ಮಂಗಳಾರತಿ ಪದಗಳು, ಶೋಭನ, ಜೋಗುಳ, ಜಕ್ಕುಲರೇಕು ಇತ್ಯಾದಿ ಪದಗಳು ಮತ್ತು ಕಂದ, ವೃತ್ತ, ದ್ವಿಪದ, ತ್ರಿಪದ, ಷಟ್ಟದ ಮುಂತಾದ ಛಂದಸ್ಸುಗಳು ಸೇರಿರುವ ಪ್ರಬಂಧವು 'ಯಕ್ಷಗಾನ'ವಾಗಿದೆ ಎಂಬ ತಾತ್ಪರ್ಯ, ಹೀಗೆ ಚಿತ್ರಕವಿ ಪೆದ್ದನನೆಂಬವನ 'ಲಕ್ಷಣಸಾರ ಸಂಗ್ರಹ', 'ಅಪ್ಪಕವೀಯ' ಮುಂತಾದ ಲಕ್ಷಣ ಗ್ರಂಥ ಗಳಿಂದಲೂ ಯಕ್ಷಗಾನವೆಂಬುದು ಪ್ರಬಂಧದ ಹೆಸರೆಂದು ತಿಳಿಯಬಹುದು.
ಇದು ವರೆಗೆ ದೊರೆತಿರುವ ಕನ್ನಡ, ಆಂಧ್ರ, ತಮಿಳು : ಯಕ್ಷಗಾನಗಳೆಲ್ಲ ಹದಿನಾರನೇ ಶತಮಾನಕ್ಕಿಂತ ಈಚೆಗಿನವೇ ಆಗಿರುವದರಿಂದ, ಹಾಗೂ ಅದಕ್ಕಿಂತ ಹಿಂದೆ ನಮ್ಮ ಹಿಂದಿನ ಕಾವ್ಯಾದಿಗಳಲ್ಲಿ ಯಕ್ಷಗಾನವೆಂಬ ಹೆಸರೇ ದೊರೆಯದಿರುವುದರಿಂದ ಸಹ, ಈ ಸಂಪ್ರದಾಯವು ಆ ಮೇಲೆಯೇ ಹುಟ್ಟಿದ್ದಿರಬೇಕೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆಂಧ್ರದಲ್ಲಿಯೂ, ಹದಿನೈದನೇ ಶತಮಾನದ ಪೂರ್ವಭಾಗದಲ್ಲಿದ್ದ ಶ್ರೀನಾಥನೆಂಬ ಪ್ರಸಿದ್ಧ ಕವಿಯ, ಭೀಮೇಶ್ವರ ಪುರಾಣ'ದಲ್ಲಿ ಈ ಹೆಸರು ಮೊದಲಾಗಿ ಕಾಣುವುದೆಂದೂ ಹೇಳುತ್ತಾರೆ. ನಮ್ಮ ಹಿಂದಿನ ಕಾವ್ಯಾದಿಗಳಲ್ಲಿ ಈ ಹೆಸರು ಕಾಣ ದಿದ್ದರೂ ದಶಾವತಾರ ಆಟದ ಸಂಪ್ರದಾಯವು ಕಳೆದ ೧೨-೧೩ನೇ ಶತಮಾನಗಳಲ್ಲಿ ಇದ್ದಿತ್ತೆಂಬುದಕ್ಕೆ ಗ್ರಂಥಾಧಾರ ದೊರೆಯುವುದು. ಚೌಂಡರಸನೆಂಬ ಕವಿಯ