ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ಶಾಸ್ತ್ರೀಯತೆ / ೮೩

ವ್ಯಕ್ತಪಡಿಸಿದ್ದಾನೆ. ನಾವಾದರೂ ಆತನ ನಾಟ್ಯವನ್ನು ಕಲ್ಲುಗಳಲ್ಲಿ ಕತ್ತಿ, ಗೋಡೆಗಳಲ್ಲಿ ಬರೆದು, ಉಳಿಸಿ ಬೆಳೆಸಿ ಆತನಿಗೆ ಪ್ರತಿಗೌರವವನ್ನು ಸಲ್ಲಿಸಿದವರು. ನಮ್ಮ ಕವಿಗಳೆಲ್ಲ ಭರತಾಗಮಪಾಠಕರು. ಅಗ್ಗಳನಂಥ ಕೆಲವರು ಕಾವ್ಯನೆಪದಿಂದ ಭರತಾಗಮವನ್ನೇ ಕನ್ನಡಿಸಿದವರು. ಸಂಗೀತ, ನಾಟ್ಯ, ಸಾಹಿತ್ಯಗಳಲ್ಲಿ ಭರತನ 'ಮಾರ್ಗ' ನಮ್ಮ 'ದೇಸಿ'ಗಳೊಳಗೆ ಸಮರಸವನ್ನು ಸಾಧಿಸಿರುವುದು ನಮ್ಮ ಕಲಾ ಸಂಸ್ಕೃತಿಗಳ ವೈಶಿಷ್ಟ್ಯ. ಇದರ ಹೆಗ್ಗುರುತು 'ಯಕ್ಷಗಾನ ಬಯಲಾಟ'. ಒಂದು ಹಜ್ಜೆಯನ್ನು 'ದೇಸಿ'ಯಲ್ಲಿಯೂ ಇನ್ನೊಂದನ್ನು ಮಾರ್ಗದಲ್ಲಿಯೂ ಇಟ್ಟು, ಲಾಸ್ಯ ತಾಂಡವ ಆಡುವ ಈ ದೇಶೀ ವಿಶಿಷ್ಟ ಮಾರ್ಗ ಸಂಪ್ರದಾಯವು ಚಿರಕಾಲ ಬಾಳಲಿ.

ಹೃದಯ ಕಮಲವೆಂಬ ಹರಿವಾಣದೊಳು ದಿವ್ಯ
ಸದಮಲ ಭಕ್ತಿರಸದ ತೈಲದಿ |
ಪದುಮನಾಭನ ನಾಮವೆಂಬ ಜ್ಯೋತಿಯ ತಂದು
ಮುದದಿಂದ ಜ್ಞಾನದಾರತಿಯೆತ್ತಿರೇ ||(ಪಾರ್ತಿಸುಬ್ಬನ ಯಕ್ಷಗಾನಗಳು)

ಮಂಗಲಂ






(ಯಕ್ಷಗಾನ ಮಕರಂದ : ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ, ಮಂಗಳೂರು ೧೯೮೦.)