೯೮ / ಕುಕ್ಕಿಲ ಸಂಪುಟ
ಶಾಸ್ತ್ರೀಯ ಪ್ರಯೋಗಗಳೆನ್ನುವ 'ಕೂಚಿಪುಡಿ', 'ಮೇಳತ್ತೂರು', 'ದಕ್ಷಿಣ ಕನ್ನಡ', ('ತೆಂಕಮಟ್ಟು), 'ತಂಜಾವೂರು' ಇತ್ಯಾದಿ ಯಕ್ಷಗಾನ ಪ್ರಯೋಗಗಳಾದರೂ, ಕೇರಳದ 'ಕಥಕಳಿ'ಯಾದರೂ ನಾಟ್ಯಶಾಸ್ರೋ ಲಕ್ಷಣಕ್ಕೆ ಸಂಪೂರ್ಣ ಒಳಪಟ್ಟಿರುವುದಿಲ್ಲ. ದೇಶೀ (ಶಾಸ್ತ್ರೀಯ) ವಿಧಾನಗಳು ಕೆಲಮಟ್ಟಿಗೆ ಅವುಗಳಲ್ಲಿ ಸೇರಿಕೊಂಡಿವೆ. ಆದುದರಿಂದ ಇವೆಲ್ಲ ಸಂಪ್ರದಾಯಗಳೂ 'ಬಾಹ್ಯಪ್ರಯೋಗ' ಪರಂಪರೆಯಲ್ಲಿ ನಡೆದು ಬಂದುದಿರ ಬೇಕು. ಆದುದರಿಂದಲೇ ಬಯಲಾಟ, ವೀಥಿನಾಟಕ, ತೆರುಕ್ಕೂತ್ತು, ಪುರುಕೂತ್ತು ಎಂಬ ಹೆಸರಾಗಲು ಕಾರಣವೆಂದೆಣಿಸಬಹುದು- ಶಾಸ್ತ್ರ ಬಹಿಃಸೃತವೆಂಬ ಅರ್ಥದಲ್ಲಿ.
ಅಂತಹ ಬಾಹ್ಯ ಪ್ರಯೋಗಗಳು ಪ್ರೇಕ್ಷಾಗೃಹಗಳಿಲ್ಲದೆ, ಬಾಹ್ಯ ಪ್ರದೇಶಗಳಲ್ಲಿ ಎಲ್ಲಿ ಬೇಕೆಂದರಲ್ಲಿ ರಂಗಸ್ಥಳಗಳಲ್ಲಿ ಹಾಕಿ ಆಡಲ್ಪಡುತ್ತವೆಂದೂ ಭರತನು ಹೇಳಿದ್ದಾನೆ :
ಅಥ ಬಾಹ್ಯ ಪ್ರಯೋಗೇಷು ಪ್ರೇಕ್ಷಾಗೃಹ ವಿವರ್ಜಿತೇ |
ವಿಧಿಕ್ಷಪಿ ಭವೇದ್ರಂಗಃ ಕದಾಚಿದ್ಭರ್ತುರಾಜ್ಞಯಾ ǁ
ಇದುವರೆಗೆ ಮಾಡಿದ ವಿವೇಚನೆಯಿಂದ
'ಯಕ್ಷಗಾನ-ಬಯಲಾಟ'ವೆಂಬುದು
ನಾಟ್ಯಶಾಸ್ತ್ರ ಪರಂಪರೆಯಲ್ಲಿ ನಡೆದುಬಂದಿರುವ (ಶಾಸ್ತ್ರೀಯ) ಸಂಪ್ರದಾಯವೇ ಹೊರತು
'ಜಾನಪದ'ವಲ್ಲವೆಂದು ವಾಚಕರಿಗೆ ಮನದಟ್ಟಾಗಬಹುದೆಂದು ನಂಬುತ್ತೇನೆ.
ಪೋಷಕರೂ, ಪ್ರೋತ್ಸಾಹಕರೂ, ಅಭಿಮಾನಿಗಳೂ, ಸಾಮಾಜಿಕರೂ 'ಯಕ್ಷಗಾನ-
ಬಯಲಾಟ'ದಲ್ಲಿ ಪರಂಪರೆಯಿಂದ ನಡೆದು ಬಂದಿರುವ ಶಾಸ್ತ್ರೀಯಾಂಶಗಳನ್ನು ಉಳಿಸಿ
ಬೆಳೆಸುವುದಕ್ಕೆ ಪ್ರಯತ್ನಿಸಬೇಕೆಂದು ವಿನಮ್ರತೆಯಿಂದ ಪ್ರಾರ್ಥಿಸುತ್ತೇನೆ. ಸಂಗೀತ
ವಿದ್ವಾಂಸರೂ ಇದರ ಕಡೆಗೆ ದೃಷ್ಟಿ ಹಾಯಿಸುವರೆಂದು ಆಶಿಸುತ್ತೇನೆ.
(ಈ ಲೇಖನದಲ್ಲಿ ಬರುವ ಸಂಕ್ಷೇಪಗಳು 'ಕೌಸ್ತುಭ'ದ ಸಂಪಾದಕರು ಮಾಡಿದವುಗಳು.) (ಕೌಸ್ತುಭ : ವಜ್ರಮಹೋತ್ಸವ ಸಂಪುಟ, ಸಾಹಿತ್ಯ ಪರಿಷತ್ತು, ೧೯೭೭)