ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೨ / ಕುಕ್ಕಿಲ ಸಂಪುಟ

ಏಕೆಂದರೆ, ಮುಖದಿಂದಾಗುವ ಭಾವಾಭಿವ್ಯಕ್ತಿ ಇದರಲ್ಲಿ ಹೆಚ್ಚು. ಆಟದ ವೇಷಧಾರಿಗಳ ಬಣ್ಣಹಚ್ಚಿದ ಮುಖದಲ್ಲಿ ಸ್ಟೇದ ವಿವರ್ಣಾದಿ ಸಾತ್ವಿಕ ವ್ಯಾಪಾರಗಳು ವ್ಯಕ್ತವಾಗುವು ದಿಲ್ಲ. ಕುಣಿತದ ಶ್ರಮವಿಲ್ಲದಿರುವುದರಿಂದ 'ತಾಳಮದ್ದಳೆ'ಯಲ್ಲಿ ವಾಚಿಕಾಭಿನಯವನ್ನು ನಿರರ್ಗಳವಾಗಿಯೂ, ಹೆಚ್ಚು ಸತ್ಯಯುತವಾಗಿಯೂ, ಸಮರ್ಪಕವಾಗಿಯೂ ನಿರ್ವಹಿಸಲಿಕ್ಕೆ ಶಕ್ಯವಾಗುವುದು. ಅರ್ಥವನ್ನು ಮನಸ್ಸಿನಲ್ಲಿ ಭಾವಿಸಿಕೊಳ್ಳಲಿಕ್ಕೂ ವಾಕ್ಯ ರಚನೆಗೂ, ಉಚ್ಚಾರಣೆಗೂ, ಧ್ವನಿನಿಯಂತ್ರಣಕ್ಕೂ ಸಾಕಷ್ಟು ವ್ಯವಧಾನ ದೊರೆಯು ವುದು. ಕುಣಿತವೂ, ಮಾತೂ ಸ್ವಭಾವತಃ ಒಂದಕ್ಕೊಂದು ಅನುಕೂಲವಾದ ವ್ಯಾಪಾರ ಗಳಲ್ಲವಷ್ಟೆ? ಅದು ಕಾರಣ ತಾನೇ ಸಂಸ್ಕೃತದಲ್ಲಿಯೂ ಮತ್ತೆ, ಪದಾರ್ಥಾಭಿನಯಾತ್ಮಕ ವಾದ ಉಪರೂಪಕಗಳು ಹುಟ್ಟಿಕೊಂಡುದೂ ಕಥಕ್, ಕಥಕಳಿ, ಕೂಚಿಪುಡಿ ಮೊದಲಾದ ಸಂಪ್ರದಾಯಗಳು ಅವನ್ನೇ ಅನುಸರಿಸಿಕೊಂಡು ಬಂದುದೂ ಆಗಿದೆ.

ಹಾಡುಗಾರಿಕೆಯಲ್ಲಿಯೂ, ಆಟದ್ದಕ್ಕೂ, ತಾಳಮದ್ದಳೆಯದಕ್ಕೂ ವ್ಯತ್ಯಾಸವುಂಟು. ಆಟದಲ್ಲಾದರೆ ಅದು ನರ್ತನಕ್ಕೆ ಅಧೀನವಾಗಿಯೇ ನಡೆಯಬೇಕಾಗುವುದು. ಆಗ ನಾದ ವಿಸ್ತಾರಕ್ಕೆ ಸಾಕಷ್ಟು ಆಸ್ಪದ ದೊರೆಯುವುದಿಲ್ಲವಾದುದರಿಂದ ಗಾನದ ರಂಶ ಕಡಮ ಯಾಗುವುದು. 'ನೃತ್ಯಂ ತಾಳಲಯಾಶ್ರಯಂ' ಎಂಬಂತೆ, ಅಲ್ಲಿ ತಾಳಲಯವೇ ಪ್ರಧಾನವಾದ್ದು. ಪದ್ಯದ ಚರಣಗಳ ಮಧ್ಯದಲ್ಲಿಯೂ, ಕೊನೆಯಲ್ಲಿಯೂ ನರ್ತನಕ್ಕಾಗಿ 'ಬಿಡಿತಿಗೆ' 'ಮುಕ್ತಾಯ'ಗಳ ವಾದ್ಯಘೋಷಗಳಿರುವುದರಿಂದ ನಾದದ ರಕ್ಷಂಶಕ್ಕೆ ಮಾತ್ರವಲ್ಲ, ಸಾಹಿತ್ಯಕ್ಕೆ ಪೋಷಕವಾದ ರಾಗಭಾವವೇನಿದ್ದರೂ ಅದಕ್ಕೂ ಮುಂದಿನ ವಾಚಿಕಾಭಿನಯಕ್ಕೂ ಅನುಬಂಧವಿಲ್ಲದಂತಾಗುವುದು. 'ತಾಳಮದ್ದಳೆ'ಯಲ್ಲಿ ಪ್ರತಿಬಂಧವಿಲ್ಲದಿರುವುದರಿಂದ ರಾಗಭಾವವು ಅರ್ಥವ್ಯಕ್ತಿಗೆ ಪೋಷಕವಾಗಿ ನಿಲ್ಲುವುದು. ಆದುದರಿಂದ 'ತಾಳಮದ್ದಳೆ'ಯ ಗಾನವು ರಾಗಶುದ್ಧವಾಗಿಯೂ, ಭಾವೋಚಿತವಾದ ವರ್ಣಾಲಂಕಾರ ಗಮಕಗಳಿಂದ ಕೂಡಿದ್ದಾಗಿಯೂ ಹಾಡಲ್ಪಡಬೇಕಾದ್ದು, ಹಿಂದೆ ಹಾಗೇ ಹಾಡಲ್ಪಡುತ್ತಿದ್ದುದೂ.

ಇಂಥ ವಿಶೇಷ ಗುಣವಿದ್ದುದರಿಂದಲೂ, ಎಲ್ಲಿ ಬೇಕೆಂದರಲ್ಲಿ ಪೂರ್ವಸಿದ್ಧತೆ ಯಿಲ್ಲದೆ ಯಾವ ಕಾಲದಲ್ಲಿ ಬೇಕಿದ್ದರೂ ನಡೆಸುವ ಸೌಲಭ್ಯವಿರುವುದರಿಂದಲೂ, ವರ್ಷದ ಆರು ತಿಂಗಳು ಮಳೆ ಹೊಯ್ಯುತ್ತಿರುವ ದಕ್ಷಿಣ ಕನ್ನಡ, ಉತ್ತರ ಕನ್ನಡಗಳ ಕರಾವಳಿಸೀಮೆಯಲ್ಲಿ ಇದು ಆಟಕ್ಕಿಂತ ಹೆಚ್ಚು ಜನಪ್ರಿಯವಾಗಿ ನಿಂತಿತು. ವಿದ್ಯಾರ್ಥಿಗಳೂ ಅರ್ಥಗಾರಿಕೆಯನ್ನು ಕಲಿಯುವುದಕ್ಕಾಗಿ ಶಾಲೆಗಳಲ್ಲಿ ಅಭ್ಯಾಸ ಕೂಟಗಳನ್ನೇರ್ಪಡಿಸು ತಿದ್ದರು. ಹಳ್ಳಿ ಹಳ್ಳಿಗಳಲ್ಲಿಯೂ ನಾಲ್ಕು ಮನೆಯವರು ಸೇರಿ ಪ್ರಸಂಗ ಓದಿ 'ಅರ್ಥ ಮಾತಾಡುವುದು' ನಿತ್ಯ ಕಥೆಯಾಗಿ ನಡೆಯುತ್ತಿತ್ತು. ಹತ್ತು ಜನ ಸೇರುವ ಮದುವೆ, ಮುಂಜಿ, ವ್ರತ, ಪೂಜೆ, ತಿಥಿ ಇತ್ಯಾದಿ ಸಂದರ್ಭಗಳಲ್ಲಂತೂ 'ತಾಳಮದ್ದಳೆ' ಒಂದು ವಿಧಿಯೆಂಬಂತೆ ನಡೆಯುತ್ತಿತ್ತು. ಹೀಗೆ 'ಅರ್ಥಗಾರಿಕೆ'ಯದೇ ಉತ್ಸಾಹವು ವ್ಯಾಪಕ ವಾದಂತೆಲ್ಲ ಹಾಡುಗಾರಿಕೆ ಕ್ಷೀಣವಾಗುತ್ತ ಬಂದದ್ದು ದೋಷ. ಇದಕ್ಕೆ ಅದರ ಅಭ್ಯಾಸವು ಸುಲಭಸಾಧ್ಯವಲ್ಲದ್ದು ಒಂದು ಕಾರಣ, 'ಅರ್ಥ ಮಾತಾಡುವವರ ವಾಕ್ಚಾಪಲ್ಯ ಹೆಚ್ಚಿ ಎರಡು ನಿಮಿಷದ ಪದ್ಯಕ್ಕೆ ಎರಡು ಗಂಟೆ 'ಅರ್ಥ ಮಾತಾಡುವ ಹವ್ಯಾಸವುಂಟಾದದ್ದು ಇನ್ನೊಂದು ಮುಖ್ಯ ಕಾರಣ. ಬರುಬರುತ್ತಾ, ಯಾರಾದರೂ ಪುಸ್ತಕನೋಡಿ ಪ್ರಸಂಗ ಓದಿದರೂ ಸರಿ ಎಂಬಷ್ಟೂ ಗಾನವು ಗೌಣವಾಯಿತು. ಇದರಿಂದ, ಸಂಗೀತಾಭ್ಯಾಸ ಮಾಡಿ ಪದ್ಯ ಕಲಿಯುವ ಪ್ರಯತ್ನವು ಸ್ವತಏವ ಕಡಿಮೆಯಾಯಿತು. ಅಭ್ಯಾಸಿಗಳಾದ ಹಳೆಯ