ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಂಧ್ರ ಯಕ್ಷಗಾನ - ತುಲನಾತ್ಮಕ ವಿವೇಚನೆ

ಯಕ್ಷಗಾನ-ಬಯಲಾಟವೆಂಬುದು ಬಹಳ ಪೂರ್ವದಿಂದ ನಡೆದುಬಂದಿರುವ ನಾಟ್ಯಕಲಾ ಸಂಪ್ರದಾಯ. ಕರ್ಣಾಟಕ, ಆಂಧ್ರ, ದ್ರಾವಿಡ, ಕೇರಳ- ಎಂಬ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿಯೂ ಇದರ ವ್ಯಾಪ್ತಿಯಿದೆ. 'ಯಕ್ಷಗಾನ'ವೆಂಬುದು ವಸ್ತುತಃ ಬಯಲಾಟಕ್ಕೆ ಉಪಯುಕ್ತವಾಗುವ ಗೇಯಕಾವ್ಯ ಅಥವಾ ಹಾಡುಗಬ್ಬ, ಈ ಕಾವ್ಯದ ಕಥಾರೂಪಕವನ್ನು ನೃತ್ಯಾಭಿನಯದೊಡನೆ ಆಡಿತೋರಿಸುವ ಪ್ರಯೋಗ ಬಯಲಾಟ, ರೂಢಿಯಲ್ಲಿ 'ಆಟ'ವೆಂದಷ್ಟೇ ಕರೆಯಲ್ಪಡುತ್ತದೆ. ಅಲ್ಲದೆ ದಶಾವತಾರ ದಾಟ, ಕೇಳಿಕೆ, ಭಾಗವತರಾಟ ಇತ್ಯಾದಿ ಹೆಸರುಗಳೂ ಈ ಪ್ರಯೋಗಕ್ಕೆ ಮೊದಲಿ ನಿಂದಲೂ ವ್ಯವಹಾರದಲ್ಲಿರುತ್ತವೆ. ಬೆಂಗಳೂರು ಪ್ರಾಂತದಲ್ಲಿ ಈ ಬಯಲಾಟವನ್ನು ಇಂದಿಗೂ 'ಕೇಳಿಕೆ' ಎಂದೇ ಕರೆಯುತ್ತಾರೆ. ಇದರ ಪ್ರಾಚೀನತೆ ಎಷ್ಟೆಂಬ ಬಗ್ಗೆ ಪುರಾತನ ಕನ್ನಡ ಕಾವ್ಯಗಳಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಉದಾಹರಣೆಗಾಗಿ ಕ್ರಿ. ಶ. ೧೩ನೇ ಶತಕದವನಾದ ಚೌಂಡರಸನೆಂಬ ಕನ್ನಡ ಕವಿ ತನ್ನ 'ಅಭಿನವ ದಶಕುಮಾರ ಚರಿತ್ರಂ' ಎಂಬ ಕಾವ್ಯಾರಂಭದಲ್ಲಿ ತನ್ನ ರಚನೆಗೆ ಹೋಲಿಕೆಯಾಗಿ 'ಪ್ರಸಿದ್ಧಿಯವತಾರಾ ಕಾರಮಂ ನಟ್ಟುವಂ ವಿದಿತಂ ರಂಗದೊಳಾಡಿ ತೋರ್ಪ ತೆರದಿಂ ಪೇಳ್ವೆಂ ಸುಕರ್ಣಾಟದಿಂ' ಎಂದಿರುವನಾದರೆ, ಕ್ರಿ. ಶ. ೧೩ನೇ ಶತಕದವನಾದ ಜನ್ನ ಕವಿಯ 'ಯಶೋಧರ ಚರಿತೆ' ಎಂಬ ಕಾವ್ಯದಲ್ಲಿ-

ತಡವಾದುದುಂಟು ನಲ್ಲನೆ
ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ
ತೊಡೆಯೇರಿಸಿ ಕೇಳಿಕೆಯಾ
ದೊಡೆ ನೋಡುತ್ತಿರ್ದನುಂತೆ ನಿಲಲುಣ್ಮುವೆನೇ |(೨೩೨)

-ಎಂಬ ಪದ್ಯವೊಂದಿದೆ. ಯಶೋಧರ ಭೂಪನರಾಣಿ ಅಮೃತಮತಿ ಎಂಬವಳು ತನ್ನ ಜಾರನಾದ ಅಷ್ಟಾವಂಕನಲ್ಲಿಗೆ ರಾತ್ರಿ ತಡಮಾಡಿ ಬಂದಳೆಂದು ಆತನು ಕೋಪಿಸಿ, ಬಡಿದು ಬಯ್ಯುತ್ತಿರುವಾಗ ಅವಳು ಹೇಳುವ ಮಾತಿದು. “ಪುರವೀಥಿಯಲ್ಲಿ 'ಕೇಳಿಕೆ'ಯಾಗು ತಿರಲು ಅರಸನೆಂಬ ಪಾತಕಿಯು ತನ್ನನ್ನು ತೊಡೆಯೇರಿಸಿಕೊಂಡು ಆ 'ಕೇಳಿಕೆ'ಯನ್ನು ನೋಡುತ್ತಿದ್ದುದರಿಂದ ಅಲ್ಲಿಂದ ವಂಚಿಸಿ ಬರಲು ತಡವಾಯಿತು, ಅಲ್ಲದಿರುತ್ತಿದ್ದರೆ, ನಾನು ಸುಮ್ಮನೆ ತಡಮಾಡುವವಳೇ? ಅದಕ್ಕಾಗಿ ನೀನು ಬಡಿಯುವುದಾದರೆ ಬಡಿ, ದಯಮಾಡಿ ಕೋಪಿಸಿಕೊಳ್ಳಬೇಡ" ಎಂದು ಈ ಪದ್ಯದ ಅರ್ಥ. 'ಕೇಳಿಕೆ' ಎಂಬ ದೃಶ್ಯ , ಪ್ರಯೋಗವು ಅಂದು ರೂಢಿಯಲ್ಲಿದ್ದಿತ್ತೆಂಬುದು ಇದರಿಂದ ಸುವ್ಯಕ್ತವಾಗುವುದು ತಾನೆ. ಇನ್ನೂ ಹಿಂದಕ್ಕೆ ನೋಡಿದರೆ, ಯಶಸ್ತಿಲಕ ಚಂಪೂ, ಭಟ್ಟಿ ಕಾವ್ಯ ಮುಂತಾದ ಸಂಸ್ಕೃತ ಗ್ರಂಥಗಳಿಂದಲೂ ಸಂಗೀತ ಕಾವ್ಯ ನಾಟ್ಯಾದಿ ಲಕ್ಷಣಗ್ರಂಥಗಳಿಂದಲೂ ಬಯಲಾಟ ಅಸ್ತಿತ್ವಕ್ಕೆ ಸಮರ್ಥನೆ ಕಾಣಬಹುದು. ಅಷ್ಟೇ ಏಕೆ, ಮೂಲ ಭರತನ ನಾಟ್ಯಶಾಸ್ತ್ರವನ್ನು ನೋಡಿದರೆ, ಅಂದಿಗೇ ಈ ಬಯಲಾಟವು ಜನಸಾಮಾನ್ಯರ ಪ್ರೇಕ್ಷಣೀಯಕವಾಗಿ ಪ್ರಸಿದ್ಧಿ ಯಲ್ಲಿದ್ದುದನ್ನು ಕಾಣಬಹುದು. ಲಕ್ಷಣಬದ್ಧವಾದ ನಾಟಕಾದಿ ರೂಪಗಳು ಪ್ರೇಕ್ಷಾಗೃಹ ವುಳ್ಳ ನಾಟ್ಯಶಾಲೆಯೊಳಗೆ ನಡೆಯುತ್ತಿದ್ದಂತೆಯೇ ಅವಕ್ಕಿಂತ ಕೆಲಮಟ್ಟಿಗೆ ನ್ಯೂನತೆಯುಳ್ಳ