ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೦ / ಕುಕ್ಕಿಲ ಸಂಪುಟ

ಉದ್ದಿಷ್ಟವಾದವುಗಳು ಎಂದೆನ್ನುವಂತಿಲ್ಲ. ಸಂಗೀತರೂಪದಲ್ಲಿ ದೇವರ ಮುಂದೆ ಹಾಡುವುದು ಅವುಗಳ ಮುಖ್ಯೋದ್ದೇಶವಿತ್ತು ಎನ್ನಬಹುದು.

'ಯಕ್ಷಗಾನ' ಎಂಬ ಹೆಸರಿನಲ್ಲಿಯೂ ನಾವು 'ಹಾಡಲ್ಪಡುವಂಥಾದ್ದು' ಎಂಬ ಅರ್ಥ ಕಾಣಬಹುದು. ಹೊರತು ನಾಟಕ ಎಂಬ ಹೆಸರಿನಂತೆ 'ಕುಣಿತ ಅಭಿನಯಗಳ ಪ್ರಯೋಗಕ್ಕೆ ಉದ್ದಿಷ್ಟವಾದದ್ದು' ಎಂಬ ಸೂಚನೆ ಅದರಿಂದ ಊಹಿಸುವಂತಿಲ್ಲ. 'ಯಕ್ಷ' ಎಂಬ ಸಂಸ್ಕೃತ ಶಬ್ದಕ್ಕೆ ಆರಾಧನೆಯೆಂದೇ ಅರ್ಥ (ಯಕ್ಷ ಪೂಜಾಯಾಂ- ಪಾಣಿನಿ), ಯಕ್ಷಗಾನ ವೆಂದರೆ, 'ಆರಾಧನಾರ್ಥವಾದ ಗೇಯಪ್ರಬಂಧ' ಎಂಬ ಅರ್ಥ ಸುಸ್ಪಷ್ಟವಾಗಿದೆ. ಗಾನ ಎಂಬ ಸಂಸ್ಕೃತ ಶಬ್ದವು ಭಾವಾರ್ಥದಲ್ಲಿ 'ಹಾಡುವಿಕೆ' ಎಂಬ ಅರ್ಥವನ್ನು ಕೊಡುವು ದಾದರೆ, ಕರ್ಮಾರ್ಥದಲ್ಲಿ 'ಹಾಡಲ್ಪಡುವ ಪ್ರಬಂಧ' ಎಂಬರ್ಥವನ್ನು ಕೊಡುತ್ತದೆ. ಸಂಗೀತಶಾಸ್ತ್ರದಲ್ಲಿ ಗೇಯ ಪ್ರಬಂಧಕ್ಕೆ 'ಗಾನ'ವೆಂದೇ ವ್ಯವಹಾರವಿರುವುದು.

ದೇವಸ್ಥಾನಗಳಲ್ಲಿ ನಿಯಮತಃ ಹೀಗೆ ಮಾಹಾತ್ಮ ಕಥೆಗಳನ್ನು ತಾಳಮದ್ದಳೆ ಸಮೇತ ಹಾಡುವ ಸಂಪ್ರದಾಯಕ್ಕೆ 'ತಾಳಮದ್ದಳೆ ಸೇವೆ' ಎಂಬ ಹೆಸರು ಆಂಧ್ರ ಕರ್ಣಾಟಕಗಳಲ್ಲಿ ಪ್ರಸಿದ್ಧವಾಗಿದ್ದಂತೆ ತಿಳಿಯುವುದು. ಈ ತಾಳಮದ್ದಳೆ ಸೇವೆಯಲ್ಲಿ ನಿಯುಕ್ತರಾದವರಿಗೆ ಉಂಬಳಿ ಉತಾರಗಳನ್ನು ಬಿಟ್ಟ ದಾಖಲೆಗಳೂ ದೇವಸ್ಥಾನಗಳಲ್ಲಿ ದೊರೆತಿವೆ. ನಮ್ಮಲ್ಲಿ ರೂಢಿಗೆ ಬಂದಿರುವ ಅರ್ಥ ವಿಸ್ತರಣೆಯ ರೂಪದ ಪ್ರಯೋಗಕ್ಕೆ 'ತಾಳಮದ್ದಳೆ' ಎಂಬ ಹೆಸರಾಗಿರುವುದಕ್ಕೂ ಇದೇ ಮೂಲವಾಗಿದ್ದಿರಬೇಕೆಂದು ತೋರುವುದು. ಇರಲಿ.

'ಲಕ್ಷಣದೀಪಿಕಾ' ಎಂಬುದೊಂದು ಆಂಧ್ರದಲ್ಲಿ ಕಾವ್ಯಲಕ್ಷಣ ಛಂದಸ್ಸು ಇತ್ಯಾದಿ ಗಳನ್ನು ನಿರೂಪಿಸುವ ಲಕ್ಷಣಗ್ರಂಥವಿದೆ. (ಪ್ರಾಚ್ಯಲಿಖಿತ ಪುಸ್ತಕ ಭಂಡಾರ, ಮದ್ರಾಸು, ಡಿ. ನಂ. ೧೩೨೯). ಇದು ಕ್ರಿ. ಶ. ೧೨ನೇ ಶತಕಕ್ಕಿಂತ ಈಚಿನ ರಚನೆಯಾಗಿರಲಿಕ್ಕಿಲ್ಲ ವೆಂದು ಊಹಿಸಲಾಗಿದೆ. ಎಂದರೆ ಇದನ್ನು ಆಂಧ್ರದಲ್ಲಿ ದೊರೆತಿರುವ ಪ್ರಾಚೀನತಮ ಲಕ್ಷಣಗ್ರಂಥವೆನ್ನಬಹುದು. ಇದರಲ್ಲಿ ಏನೇನು ವಿಧದ ಪದ್ಯಛಂದಸ್ಸುಗಳು ಯಕ್ಷಗಾನ ವೆಂಬ ರಚನೆಯಲ್ಲಿರಬೇಕೆನ್ನುವ ಲಕ್ಷಣವಾಕ್ಯ ಹೀಗಿದೆ: “ಯಕ್ಷಗಾನಂಬುನನ್ ವೆಲಯು, ಪದಂಬುಲು, ದರುವುಲು, ಏಲಲು (ಯಾಲಪದ), ಧವಳಂಬುಲು (ದವಳಾರ), ಮಂಗಳ ಹಾರತುಲು (ಮಂಗಳಾರತಿ ಪದ್ಯ), ಶೋಭ ನಂಬುಲು (ಸೋಬಾನೆ ಹಾಡು), ಉಯ್ಯಾಲ ಜೋಲಲು (ಉಯ್ಯಾಲೆ ತೊಟ್ಟಿಲು ತೂಗುವ ಪದ್ಯ), ಕಂದ ವೃತ್ತಾದುಲು, ದ್ವಿಪದ, ಚೌಪದ, ಷಟ್ಟದ, ಅಷ್ಟಪದಾದುಲು ನಿವಿಯಾದಿಗಾ ಮಧುರ ರಚನಲ ಪ್ರಸಿದ್ಧಂಬೈನ ಕವಿತ್ವಂಬುಲು”.

ಇದಲ್ಲದೆ ಚಿತ್ರಕವಿ ಪೆದ್ದನ, ಅಪ್ಪಕವಿ ಮುಂತಾದ ಆಂಧ್ರ ಲಕ್ಷಣಕರ್ತರು ತಮ್ಮ ಲಕ್ಷಣಗ್ರಂಥಗಳಲ್ಲಿ ಯಕ್ಷಗಾನ ಲಕ್ಷಣಗಳನ್ನು ರಾಗ-ತಾಳ-ಛಂದೋಲಕ್ಷಣ ಸಮೇತ ನಿರೂಪಿಸಿದ್ದನ್ನು ಕಾಣಬಹುದು.

ಇನ್ನು ಆಂಧ್ರದಲ್ಲಿ ತಾಳಪಾಕಂ (ತಿರುಪತಿ) ಅಣ್ಣಮಾಚಾರ್ಯರೆಂಬ ಸುಪ್ರಸಿದ್ಧ ವಾಗ್ಗೇಯಕಾರರು ಕ್ರಿ. ಶ. ೧೪-೧೫ನೇ ಶತಕದಲ್ಲಿ ಆಗಿಹೋದರು. 'ಆಂಧ್ರಪದ ಕವಿತಾ ಪಿತಾಮಹ'ರೆಂಬ ಬಿರುದು ಪಡೆದಿದ್ದು, ಸಾವಿರಾರು ಪದ್ಯಕೃತಿಗಳನ್ನು, ಕೀರ್ತನೆಗಳನ್ನು ರಚಿಸಿದವರು. ಸಂಸ್ಕೃತದಲ್ಲಿ 'ಪದ್ಯಕವಿತಾಲಕ್ಷಣ' ಗ್ರಂಥವನ್ನೂ ರಚಿಸಿದ್ದರು. ಅದರಲ್ಲಿ ಯಕ್ಷಗಾನ ಲಕ್ಷಣವನ್ನು ಪೂರ್ವಸಂಕೀರ್ತನಾಚಾರ್ಯರು ನಿರೂಪಿಸಿದ್ದಂತೆ ತಾನು