ದಾಖಲೆಯ ಮೂಲಕ ಲಿಂಗಪ್ಪನಿಗೆ ಬಂದ ಹಿತ್ತಿಲಿಗೆ 'ಮಾನುದಾಸನ ಹಿತ್ತಿಲು' ಎಂಬ
ಹೆಸರಿದ್ದುದೆಂದೂ 'ಪಾರ್ತಿಸುಬ್ಬನ ಹಿತ್ತಿಲು' ಬೇರೇ ಇದೆಯೆಂದೂ, ಅದನ್ನು ಪಾಟಾಳಿ
ಸುಬ್ಬಯ್ಯನೆಂಬವನು ಆ ಲಿಂಗಪ್ಪಯ್ಯನ ತಮ್ಮ ಪಾಡಿ ಸುಬ್ರಾಯ ಶ್ಯಾನುಭಾಗನಿಗೆ
ಆರ್ಧಾರ ಮಾಡಿಕೊಟ್ಟಿದ್ದನೆಂದೂ ಕಾಣುವ ಇನ್ನೆರಡು ದಾಖಲೆಗಳು ದೊರಕಿರುವುದನ್ನು
ತಿಳಿಸಿದರು. ಪಾರ್ತಿಸುಬ್ಬನ ಹಿತ್ತಿಲಿನ ಕುರಿತ ದಾಖಲೆ ಇದು.
ಚಿತ್ರ ೩
...ಕುತ್ತು ಸಂ| ರ ಮಾಗಶುಶೀಲ್ಲು ಶ್ರೀಮತ್ತೂ
...ಸುಬ್ಬಯ ಶ್ಯಾನುಭವರಿಗೆ - ಕಣಿಪು
...ಟಾಳಿ ಸುಬ್ಬಯನು ಬರಸಿಕೊಟ್ಟ ರಸಿದಿ
...ನೆಂದ್ರೆ ನಿಂಮಿಂದ ಯೀ ಸಂ| ಕ್ಕೆ ನಿಮಗೆ ನಾ
...ನು ಆರ್ರು ವಾರಕ್ಕೆ ಕೊಟ್ಟ ಪಾರ್ತಿಸುಬ್ಬನ
....ತ್ತಿಲ ಕಟ್ಟು, ಕಡಿಬಾಬ್ತು ಬರತಕ್ಕ 0||
ಅಡೊಬೆಳೆಯ್ಯು ಯೊತ್ತಿತ್ತಿಯನ್ನು ನಗದು
ನಿಉ ಕೊಟ್ಟಪ್ರಕಾರ ನನಗೆ ಬಂತುಯಂತ
ಬರ್ಸಿ ಕೊಟ್ಟರ್ಸಿದಿ ಬಗ್ಗೆ- ಪ ಸುಬಯನ ರುಜು
ಯೀ ಬಗ್ಗೆ ಸಾಕ್ಷಿ-ಕಾಸ್ರಗೋಡ ವೆಂಕಟಶ್ಯಾನ
ಮ | ಸುಬ್ರಾಯನ ಸಾಕ್ಷಿ ಕಿದೂರ ಅ | ಮ | ಯೀ
ಶ್ವರನ ಸಾಕ್ಷಿ
(ಕಟ್ಟು ಕಡಿ ಎಂದರೆ ಆರ್ವಾರಕ್ಕೆ ಕೊಟ್ಟ ಆಸ್ತಿಯ ಉತ್ಪತ್ತಿಯಲ್ಲಿ ಬಡ್ಡಿಯ ಅಂಶ ಕಳೆದು ಉಳಿಕೆ ಬರತಕ್ಕ ಹಣ).
ಇದರಲ್ಲಿ ಕಾಣುವ ಸುಬ್ಬಯ ಶ್ಯಾನುಭೋಗನೆಂದರೆ, ಹಿಂದಿನ ಕೋರ್ಟು ದಾಖಲೆ ಯಲ್ಲಿ ಕಾಣುವ ಪಾಡಿ ವೆಂಕಟೇಶ ಶ್ಯಾನುಭಾಗನ ಮಗ ಹಾಗೂ ಆ ಲಿಂಗಪ್ಪಯ್ಯನ ತಮ್ಮ, ಈ ಸುಬ್ಬಯ್ಯ ಶ್ಯಾನುಭಾಗನು ೧೮೬೦ನೆಯ ಇಸವಿಯ ವರೆಗೆ ಜೀವಿಸಿದ್ದನೆಂದು ತಿಳಿಯುವುದು. ಮೊದಲ ಒಂದೆರಡಕ್ಷರಗಳ ಭಾಗ ತುಂಡು ಹೋಗಿರುವ ಮೇಲಿನ ರಶೀದಿಯಲ್ಲಿ ಕಾಣುವ 'ಕ್ರುತು' ಸಂವತ್ಸರವೆಂಬುದು ಶುಭಕೃತು ಅಥವಾ ಶೋಭಕೃತು ಇಲ್ಲವೆ ವಿರೋಧಿಕೃತು ಸಂವತ್ಸರವಾಗಿರಬೇಕೆಂಬುದರಲ್ಲಿ ಸಂದೇಹವಿಲ್ಲ. ಹಾಗೂ ಅದು ಕಳೆದ ಇಸವಿ ೧೮೪೨ನೇ ಶುಭಕೃತು, ೧೮೪೩ನೇ ಶೋಭಕೃತು ಅಥವಾ ೧೮೫೧ನೇ ವಿರೋಧಿಕೃತು ಸಂವತ್ಸರಗಳಲ್ಲಿ ಒಂದಾಗಿರಬೇಕೆಂದೂ ನಿರ್ಣಯವಾಗುವುದು. ಆದ್ದರಿಂದ ಆರ್ವಾರ ಮಾಡಿಕೊಟ್ಟ ಪಾಟಾಳಿ ಸುಬ್ಬಯ್ಯನೆಂಬವನು, ಹಿಂದೆ ಹೇಳಿದಂತೆ ಪಾರ್ತಿಸುಬ್ಬನ ವಂಶೀಯನಾದ ನಾರಂಪಾಡಿ ರಾಮಯ್ಯನವರ ತಂದೆ ಪಾಟಾಳಿ ಸುಬ್ಬಯ್ಯನೇ ಆಗಿರುವುದು ಸಂಭವನೀಯವಾಗಿ ಕಾಣುವುದು. ಪಾರ್ತಿಸುಬ್ಬನ ವಂಶೀಯ ನಾಗಿದ್ದುದರಿಂದ ತಾನೇ ಅವನಿಗೆ ಆ ಹಿತ್ತಲಿನ ಅಧಿಕಾರ ಬಂದಿರಬೇಕು.
ಮಾನುದಾಸನ ಹಿತ್ತಿಲಿಗೆ ಸಂಬಂಧಪಟ್ಟ ದಾಖಲೆ ಎಂಬುದು ಆ ಹಿತ್ತಿಲಿನ ಬಗ್ಗೆ ಬರಕೊಟ್ಟ ಒಂದು ಗೇಣಿಚೀಟು. ಅದರಲ್ಲಿ ಕಾಣುವ ವಿಚಾರ ಹೀಗಿದೆ-
“ಪರಿಧಾವಿ ಸಂವತ್ಸರದ ಆಷಾಢ ಶು. ೯ರಲ್ಲು ಶ್ರೀಮತ್ತು ಪಾಡಿ ಸುಬ್ಬಯ್ಯ ಶಾನುಭಾಗರ ಅಣ್ಣನ ಚಿತ್ರ (ಮಗ) ಸುಬ್ರಾಯ ಶಾನುಭಾಗರಿಗೆ ಕಣಿಪುರ ಅಣ್ಣು ಮಗ