ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೦೬/ಕುಕ್ಕಿಲ ಸಂಪುಟ

ಎಂಬಿಬ್ಬರು ವಿದ್ವಾಂಸರೂ ಪ್ರಸಿದ್ಧರಾಗಿದ್ದರು. ಇವರೆಲ್ಲರೂ ಕ್ರಮಶಃ ಕೊಲ್ಲಂ ವರ್ಷ ೭೫೦-೯೦೦ರ ಮಧ್ಯಕಾಲಗಳಲ್ಲಿದ್ದವರು.
ಕೊಟ್ಟಾರಕರನ 'ರಾಮನಾಟ್ಟ'ವು ಮೊದಲಾಗಿ ಪ್ರಯೋಗ ಪ್ರಾಶಸ್ತ್ರವನ್ನು ಪಡೆದಿರುವುದು ಕೊಟ್ಟಾರಕರದ ನೆರೆಯೂರಾದ ವೆಟ್ಟತ್ತು ನಾಡಿನಲ್ಲಿ, ಅಲ್ಲಿಯ ರಾಜನು ಇದಕ್ಕೆ ಮಾಡಿದ ವಿಶೇಷ ಸಂಸ್ಕಾರವೆಂದರೆ : ಮೊದಲು ಕೆಲವೊಂದು ವೇಷಗಳು ಮುಖವಾಡ ಧರಿಸುತ್ತಿದ್ದುದನ್ನು ತೆಗೆದುಹಾಕಿ ಪ್ರತಿಯೊಂದು ವೇಷಕ್ಕೂ ಮುಖಕ್ಕೆ ಬೇರೆಬೇರೆ ಬಣ್ಣ ಹಚ್ಚುವ ವಿಧಾನಗಳನ್ನು ನಿರೂಪಿಸಿದ್ದು, ಮೊದಲು ವೇಷಗಳು ಅಡಿಕೆಯ ಮರದ ಹಾಳೆ ಗಳಿಂದ ಇಷ್ಟಬಂದಂತೆ ಮಾಡಿಕೊಂಡು ಧರಿಸುತ್ತಿದ್ದ ಕಿರೀಟಗಳಿಗೆ ಬದಲಾಗಿ ಶಾಸ್ರೋಕ್ತ ಕ್ರಮದಲ್ಲಿ ರಚಿಸಿದ ವರ್ಣರಂಜಿತ ಕಿರೀಟಗಳನ್ನು ವೇಷಕ್ಕೆ ತಕ್ಕಂತೆ ಅನುಗೊಳಿಸಿದ್ದು, ಯುದ್ಧಾದಿ ಉದ್ಧತ ವೃತ್ತಗಳಿಗೆ ಪ್ರಶಸ್ತವಾದ 'ಕಲಾಸ' ಕುಣಿತದಲ್ಲಿ ಇಡಕ್ಕಲಾಸ, ಇರಟ್ಟಿಕ್ಕಲಾಸ, ಅಷ್ಟಕಲಾಸ ಎಂಬ ಪ್ರಕಾರಾಂತರಗಳನ್ನು ವಿಧಿಸಿದ್ದು, ಪಾತ್ರಗಳೇ ಹಾಡುವುದನ್ನು ನಿವೃತ್ತಿ ಪಡಿಸಿ ಭಾಗವತನನ್ನು ನೇಮಿಸಿದ್ದು, ಅದುವರೆಗೆ ಉಪಯೋಗಿಸು ತಿದ್ದ 'ಶುದ್ಧ ಮದ್ದಳ', 'ತಪ್ಪು ಮದ್ದಳ' ಎಂಬ ಎರಡು ವಿಧದ ಮೃದಂಗವಾದ್ಯಗಳ ಜೊತೆಗೆ, ದೇವಾಲಯಗಳಲ್ಲಿ ದೇವರ ಸೇವೆಗೆ ಮೀಸಲಾಗಿದ್ದ 'ಚೆಂಡೆ' ಎಂಬ ವಾದ್ಯ ವನ್ನೂ ಬಳಕೆಗೆ ತಂದುದಲ್ಲದೆ ಕಲಾಸ ನರ್ತನಕ್ಕೆ ಅದನ್ನೇ ಪ್ರಧಾನವಾದ್ಯವನ್ನಾಗಿ ಮಾಡಿದ್ದು ಇತ್ಯಾದಿ. ಕಪ್ಪಿಂಗಾಡು ನಂಬೂದಿರಿಯು ಹೊಸತಾಗಿ ರೂಢಿಸಿದ ಸುಧಾರಣಗಳೆಂದರೆ : ಬಣ್ಣ ಹಚ್ಚಿದ ಮುಖದ ಮೇಲೆ, ಸುಣ್ಣ ಮತ್ತು ಅಕ್ಕಿಹಿಟ್ಟುಗಳಿಂದ ತಯಾರಿಸಿದ ಪಿಷ್ಟದಿಂದ 'ಚುಟ್ಟಿ' ಇಡುವ ಕ್ರಮವನ್ನು ಉಂಟುಮಾಡಿದ್ದು, ರಾಕ್ಷಸ ವೇಷಗಳಿಗೆ ಮೂಗಿನ ತುದಿಯಲ್ಲಿ ಮತ್ತು ಹಣೆಯ ಮೇಲ್ಬಾಗದ ಮಧ್ಯದಲ್ಲಿ ಹತ್ತಿ ಉಂಡೆಗಳನ್ನಿಡುವ ಪದ್ಧತಿಯನ್ನು ಕಲ್ಪಿಸಿದ್ದು, ಕಿರೀಟವಿಲ್ಲದ ವೇಷಗಳಿಗೆ ತಲೆಮುಡಿ ಕಟ್ಟುವ ವಿಶಿಷ್ಟ ಕ್ರಮವನ್ನು ರೂಪಿಸಿದ್ದು, ನಡುವಿಗೆ ನೆರಿನೆರಿಯಾಗಿ ಸುತ್ತುವ 'ಕಚ್ಚ ಗಳನ್ನೂ, ಅವುಗಳ ಮೇಲೆ ಮುಂಭಾಗದಲ್ಲಿ ಸೊಂಟದಿಂದ ಕೆಳಕ್ಕೆ ಇಳಿಬಿಡುವ 'ಮುನ್ನಿ' ಅಥವಾ 'ಒತ್ತೆನಾಕ್' ಎಂಬ ಪಟ್ಟಿಕೆಗಳನ್ನೂ ವಿರಚಿಸಿದ್ದು ಇತ್ಯಾದಿ.
ಕಲ್ಲಡಿಕ್ಕಾಡು ನಂಬೂದಿರಿಯು ಮಾಡಿದ ಸಂಸ್ಕಾರಗಳು : ಕಲಾಸಕುಣಿತಗಳಲ್ಲಿ ಕೆಲವೊಂದು ವಿಶೇಷ ವಿಧಿಗಳನ್ನು ಈತನೂ ಅನುಗೊಳಿಸಿದ್ದಿದೆ. ಇದಲ್ಲದೆ ನಾಟ್ಯ ಶಾಸ್ತ್ರೋಕ್ತವಾದ 'ಚಿತ್ರಾಭಿನಯ' ಕ್ಕೊಪ್ಪುವ ವಿಶೇಷವಾದ ಹಸ್ತಮುದ್ರೆಗಳನ್ನು ಯೋಜಿಸಿದ ಪ್ರತಿಭೆಯು ಇವನದೇ ಆಗಿದೆ. ಮತ್ತೂ ಮೊದಲು ವೆಟ್ಟತ್ತು ನಾಡಿನ ರಾಜನು ಮಾಡಿದ ಸಂಸ್ಕಾರಗಳಲ್ಲಿ ಈತನು ಕೆಲವೊಂದು ಬದಲಾವಣೆ ಗಳನ್ನು ಮಾಡಿರುವುದರಿಂದ ಈತನ ಸುಧಾರಿತ ಕ್ರಮವು 'ಕಲ್ಲಡಿಕ್ಕಾಟ್ಟು ಸಂಪ್ರದಾಯ'ವೆಂದು ಪ್ರತ್ಯೇಕ ಹೆಸರು ಪಡೆದು ದಕ್ಷಿಣ ಕೇರಳದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದಿತ್ತು. ಮೊದಲು ಪ್ರಸಿದ್ಧವಾಗಿದ್ದ 'ವೆಟ್ಟತ್ತು ನಾಟ್ಟು ಸಂಪ್ರದಾಯ'ವು ವೇಷರಚನೆಯಲ್ಲಿ ಹಾಗೂ ಅಭಿನಯದಲ್ಲಿ ನಾಟ್ಯಶಾಸ್ರೋಕ್ತ ಕ್ರಮವನ್ನು ಹೆಚ್ಚಾಗಿ ಅನುಗೊಳಿಸಿತ್ತಾದರೆ ಈತನ ಕ್ರಮವು ಸ್ವಯಂಕಲ್ಪಿತವಾದ ಪ್ರತಿಸಂಸ್ಕಾರವಿಶೇಷಗಳಿಂದ ಆಹಾರ್ಯಗಳಲ್ಲಿ ಹೊಸ ಸುಧಾರಣೆಯನ್ನು ರೂಢಿಸಿದ್ದಲ್ಲದೆ ಅಭಿನಯದ ಹಸ್ತಮುದ್ರೆಗಳಿಗೆ ಹೊಸ ಸಂವಿಧಾನವನ್ನೇ ಹಾಕಿಕೊಟ್ಟಿತು.
ಅಭಿನಯಪ್ರಕಾರಗಳಲ್ಲಿ ಮಾತ್ರವಲ್ಲ, ಪ್ರಬಂಧರಚನೆಯಲ್ಲಿಯೂ ಹಂತಹಂತಕ್ಕೆ ಸುಧಾರಣೆಗಳು ನಡೆದುಬಂದಿವೆ. ಹೀಗೆ ಸುಧಾರಿಸಿದ ಕವಿಗಳಲ್ಲಿಯೂ ಹಿಂದೆ ಹೇಳಿದ