೨೩೦ / ಕುಕ್ಕಿಲ ಸಂಪುಟ
ಪ್ರಯೋಗಿಸಲ್ಪಡುತ್ತವೆ ಎಂದು ವಿನಿಯೋಗ ಲಕ್ಷಣಗಳನ್ನು ಹೇಳುತ್ತಾ ಬಂದಿರುತ್ತಾರೆ.
ನೃತ್ಯಗೀತ ಸಹಿತವಾದ ನಾಟಕ ಪ್ರಯೋಗಗಳು ಕಳೆದ ಕ್ರಿ. ಶ. ಹದಿಮೂರನೆ ಶತಮಾನದ
ವರೆಗೂ ನಮ್ಮಲ್ಲಿ ಪ್ರಯೋಗದಲ್ಲಿದ್ದುವೆಂಬುದಕ್ಕೆ ಇದು ಪ್ರಬಲವಾದ ಆಧಾರವಾಗಿ
ಕಾಣುವುದು. ಉದಾಹರಣೆಗಾಗಿ ಸಂಗೀತರತ್ನಾಕರದಲ್ಲಿ 'ಅಧುನಾಪ್ರಸಿದ್ಧ'ವೆಂದೇ
ಶಾರ್ಙ್ಗದೇವನು ಕೊಟ್ಟಿರುವ ಕೆಲವು ರಾಗಲಕ್ಷಣಗಳು ಹೀಗಿವೆ :
ಮಧ್ಯಮ ಗ್ರಾಮ ರಾಗ-
ಲಕ್ಷ್ಯಾಧುನಾಪ್ರಸಿದ್ದಾನಾಂ ಸಹೇತೂನಾಂ ಬ್ರುವೇಧುನಾ
ಪ್ರಸನ್ನಾದ್ಯವರೋಹಿಭ್ಯಾಂ ಮುಖಸಂಧೇ ನಿಯುಜ್ಯತೇ
ಮಧ್ಯಮಗ್ರಾಮರಾಗೋಯಂ ಹಾಸ್ಯಶೃಂಗಾರಕಾರಕ:
ಗ್ರೀಷ್ಮನ್ನೇ ಪ್ರಥಮೇಯಾಮೇ ಧ್ರುವಪ್ರೀತ್ಯ....
ಬೋಟ್ಟ ರಾಗ-
ವಿಪ್ರಲಂಭೇ ಕಂಚುಕಿನ: ಪ್ರವೇಶೇ ಕೇತುದೈವತ
ಗೌಡ ಪಂಚಮ ರಾಗ-
ಭಯಾನಕೇಚ ಭೀಭತ್ಸ ವಿಪ್ರಲಂಭೇರಸೇ ಭವೇತ್
ಉದ್ಘಟೇ ನಟನೇ ಗೇಯೋ... |
ಶುದ್ಧಪಂಚಮ ರಾಗ-
ಶೃಂಗಾರ ಹಾಸ್ಯಯೋಃ ಸಂಧಾವವಮರ್ಷ ಪ್ರಯುಜ್ಯತೇ |
ಶುದ್ಧಷಾಡವ ರಾಗ-
ಪೂರ್ವರಂಗೇ ಪ್ರಯೋಕ್ಕವೋ ಹಾಸ್ಯಶೃಂಗಾರದೀಪಕ: |
ಭಿನ್ನಪಂಚಮ ರಾಗ-
ಭಯಾನಕೇ ಸಭೀಭತ್ಸ ಸೂತ್ರಧಾರಪ್ರವೇಶನೇ ǁ
ವರಾಟೀ ರಾಗ-
ವೀರರೌದ್ರದ್ಭುತರಸೇ ನಾರೀಹಾಸ್ಯ ನಿಯುಜ್ಯತೇ |
ಗೌಡೀ ರಾಗ-
ಷಡ್ಡ ಮಂದ್ರೇ ಪ್ರಯೋಕ್ತವ್ಯಾ ಪ್ರಿಯ ಸಂಭಾಷಣೇ ಬುಧೆ: ǁ
ಕ್ರಿಸ್ತಶಕಾರಂಭದಲ್ಲಿಯೇ ದಕ್ಷಿಣಕ್ಕೆ ಕನ್ಯಾಕುಮಾರಿಯ ವರೆಗೂ ನಾಟ್ಯಶಾಸ್ತ್ರ ಹಾಗೂ ಅದರ ಪ್ರಯೋಗವು ಪ್ರಚಾರದಲ್ಲಿತ್ತೆಂಬುದನ್ನು ತಮಿಳರ 'ಶಿಲಪ್ಪದಿಕಾರಂ' ಕಾವ್ಯದಲ್ಲಿ ವರ್ಣಿಸಿರುವ ನಾಟ್ಯಸಂಗೀತಲಕ್ಷಣಗಳಿಂದ ಹಾಗೂ 'ತೊಲ್ ಕಾಪ್ಪಿಯಂ' ಲಕ್ಷಣಗ್ರಂಥ ದಲ್ಲಿ ಕಾಣುವ ರಸಭಾವವಿವೇಕದಿಂದ ತಿಳಿಯಬಹುದಾಗಿದೆ. ಚಿದಂಬರದ ನಟರಾಜ ದೇವಾಲಯದಲ್ಲಿರುವ ನಾಟ್ಯಶಾಸ್ರೋಕ್ತ ಕರಣಾಂಗಹಾರಾದಿ ನೃತ್ಯ ಭಂಗಿಗಳ ಯಥಾ ವತ್ತಾದ ಶಿಲ್ಪಕೃತಿಗಳಂತೂ ಇದಕ್ಕೆ ಮೂರ್ತಿಮಂತ ಆಧಾರಗಳಾಗಿವೆಯಷ್ಟೆ?
ಹೀಗೆ ದಕ್ಷಿಣದಲ್ಲಿ ಅಚಲಪ್ರತಿಷ್ಠೆಯನ್ನು ಪಡೆದ ಸಂಸ್ಕೃತ ನಾಟ್ಯ ಪ್ರಯೋಗವು ಸಂಸ್ಕೃತ ವಿದ್ಯಾಭ್ಯಾಸವು ಸಾರ್ವಜನಿಕವಾಗಿ ವ್ಯಾಪಿಸಿದ್ದ ಕೇರಳದ ಪ್ರತಿ ದೇವಾಲಯ