ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಂಗೀತ ರತ್ನಾಕರ - ವ್ಯಾಖ್ಯಾನ / ೨೭೩

ವ್ಯಕ್ತಯೋ ಕುರ್ಮಹೇ ತಾಸಾಂ ವೀಣಾದ್ದಂದೇ ನಿದರ್ಶನಂ |
ದ್ವೇ ವೀಣೇ ಸದೃಶೇ ಕಾರ್ಯೇ ಯಥಾನಾದ: ಸಮೋಭವೇತ್‌ǁ೧೧ǁ
ತಯೋರ್ದ್ಘಾವಿಂಶತಿಸ್ತಂತ್ರ್ಯ ಪ್ರತ್ಯೇಕಂ ತಾಸು ಚಾದಿಮಾ |
ಕಾರ್ಯಾ ಮಂದ್ರತಮಧ್ವಾನಾ ದ್ವಿತೀಯೋಚ್ಚಧ್ವನಿರ್ಮನಾತ್ |
ಸ್ಯಾನ್ನಿರಂತರ ತಾಶ್ರುತ್ಯೋತ್ಯೋರ್ಮಧ್ಯೆ ಧ್ವನ್ಯಂತರಾಶ್ರುತೇ ǁ
ಅಧರಾಧರ ತೀವ್ರಾಸ್ತಾಸ್ತ್ರಜ್ಞೆ ನಾದಃ ಶ್ರುತಿರ್ಮತಃ

ಅವುಗಳು ಸ್ಪಷ್ಟ ಗೋಚರವಾಗುವಂತೆ ಎರಡು ವೀಣೆಗಳಲ್ಲಿ ಪ್ರತ್ಯಕ್ಷ ತೋರಿಸು ತ್ತೇವೆ. ಹೇಗೆಂದರೆ-

ಎರಡು ವೀಣೆಗಳನ್ನು ಸಮಾನ ನಾದಗಳು ಹುಟ್ಟುವಂತೆ ಒಂದೇ ತೆರನಾದ ರಚನೆ ಯಲ್ಲಿ ತಯಾರಿಸಬೇಕು. ಆ ಎರಡು ವೀಣೆಗಳಲ್ಲಿ ಒಂದೊಂದರಲ್ಲಿ ೨೨ರಂತೆ ತಂತಿ ಗಳಿರಬೇಕು. ಅವುಗಳಲ್ಲಿ ಮೊದಲನೇ ತಂತಿಯನ್ನು ಅತ್ಯಂತ ಕೆಳಗಿನ ನಾದ ಉಳ್ಳದಾಗು ವಷ್ಟು ಶಿಥಿಲವಾಗಿ ಮಾಡಬೇಕು. ಎರಡನೇ ತಂತಿಯನ್ನು ಮೊದಲನೆಯದಕ್ಕಿಂತ ಸ್ವಲ್ಪ ಏರಿಸಬೇಕು. ಹೇಗೆಂದರೆ, ಅವರಡು ನಾದಗಳ ಮಧ್ಯದಲ್ಲಿ ಇನ್ನೊಂದು ನಾದವು ಕೇಳಿಸುವುದಿಲ್ಲ ಎಂಬಷ್ಟು ನಿರಂತರತೆ ಅವುಗಳಲ್ಲಿರುವಂತಾಗಬೇಕು. ಎಂದರೆ ಎರಡನೇ ತಂತಿಯನ್ನು ಮಧ್ಯದಲ್ಲಿ ಮೂರನೆಯ ನಾದವು ಕೇಳಿಸುವಷ್ಟು ಏರಿಸಬಾರದು ಎಂದರ್ಥ.

ಹೀಗೆ ಉತ್ತರೋತ್ತರವಾಗಿರುವಂತೆ ತಂತಿಗಳನ್ನು ಒಂದರಿಂದೊಂದಾಗಿ ಶ್ರುತಿ ಏರಿಸಬೇಕು. ಆಗ ಆ ವೀಣೆಗಳ ತಂತಿಗಳು ಮೇಲಿಂದ ಕೆಳ ಕೆಳಗೆ ಒಂದರಿಂದೊಂದು ಹೆಚ್ಚು ಹೆಚ್ಚು ತೀವ್ರವಾಗಿರುವ ಈ ತಂತಿಗಳಲ್ಲಿ ಹೊರಡುವ ನಾದಗಳನ್ನೇ ಶ್ರುತಿಗಳೆಂದು ತಿಳಿಯಬೇಕು. ಒಂದೊಂದು ತಂತಿಯ ನಾದವು ಒಂದೊಂದು ಶ್ರುತಿ ಎಂಬ ತಾತ್ಪರ್ಯ.

ಶ್ರೀ ರಾ. ಸತ್ಯನಾರಾಯಣನವರು, ಶಾರ್ಙ್ಗದೇವನು ಹೇಳುವ ಧ್ವನ್ಯಂತರಾಶ್ರುತಿ ಎಂದರೆ ಎಷ್ಟು ಕಡಿಮೆ ಅಂತರದಲ್ಲಿ ಧ್ವನಿ ವೈಲಕ್ಷಣ್ಯವು ಕಿವಿಗೆ ಗೋಚರವಾಗುವುದೋ ಅಷ್ಟು ಕನಿಷ್ಠತಮ ಅಂತರ, ಆ ಪರಮಾಣುವಿನಷ್ಟು ಕನಿಷ್ಟಾಂತರದಲ್ಲಿರುವ ನಾದಗಳನ್ನ ಶಾರ್ಙ್ಗದೇವನು ಶ್ರುತಿಗಳೆನ್ನುವುದಾಗಿದೆ. ಹಾಗೂ ಆತನು ಈ ಶ್ರುತಿ ಕಲ್ಪನೆಯಲ್ಲಿ ಅಭಿನವಗುಪ್ತನಿಂದ ಸ್ಫೂರ್ತಿ ಪಡೆದಿದ್ದಾನೆ ಎನ್ನುತ್ತಾರೆ. ಸಂಗೀತ ರತ್ನಾಕರ ವ್ಯಾಖ್ಯಾನ : ಡಾ| ರಾ. ಸತ್ಯನಾರಾಯಣ, ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಾಶಿತ, ಭಾಗ ೧-೨೦೩) ಅವರು ಕೊಡುವ ಶ್ರುತಿ ಲಕ್ಷಣವೂ ಹೀಗಿದೆ- ಇದೇ ಹಿಂದು ಮುಂದಿನ ಧ್ವನಿಯ ಸಂಬಂಧದಿಂದ ಶ್ರವಣೇಂದ್ರಿಯವು ಗ್ರಹಿಸಲು ಆವಶ್ಯಕವಾದಷ್ಟು ಎಂದರೆ ಅದಕ್ಕಿಂತ ಕಡಿಮೆಯಾದರೆ ಕಿವಿಯು ಗ್ರಹಿಸಲಾರದು ಎನ್ನುವಷ್ಟು ಅತ್ಯಲ್ಪ ಪ್ರಮಾಣ ದಿಂದ ವಿವಕ್ಷಿತವಾದರೆ ಶ್ರುತಿ ಎನ್ನಿಸಿಕೊಳ್ಳುತ್ತದೆ.” (ಸಂ. ರ. ವ್ಯಾ. ಪುಟ ೨೫೮-೨೫೯)

“ಶ್ರೋತ್ರೇಯೇಂದ್ರಿಯಾ ತನ್ನ ಗ್ರಹಣದ ಶಕ್ತಿಯ ಪರಮಾವಧಿ ಸಾಮರ್ಥ್ಯದಲ್ಲಿ ಕೇಳಬಲ್ಲ ಅತ್ಯಲ್ಪವಾದ ನಾದಾಂತರ ಎಂದರೆ ಮಧ್ಯದಲ್ಲಿ ಬೇರೆ ಧ್ವನಿಯನ್ನು ಗ್ರಹಿಸಲಾರದಷ್ಟು ಸಮೀಪವಾಗಿರುವ ಎರಡು ಧ್ವನಿಗಳ ಮಧ್ಯದ ಪ್ರಮಾಣ.” (ಸಂ. ರ. ವ್ಯಾ. ೨೦೩)

“ಶ್ರುತಿಯು ಪರಮಾಣುಸ್ವರಾಪದಪ್ರಮಾಣಾಂತರ ಶ್ರಾವ್ಯತೆಯ ಕನಿಷ್ಟಾಂತರವುಳ್ಳ ಮಿತಿ ಅದು. (ಸಂ. ರಾ. ವ್ಯಾ. ೪೫೪)” ಇತ್ಯಾದಿ.