ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೈಕಸಿ
ಗೋಚರ
ಕೈಕಸಿ
ಬ್ರಹ್ಮಕುಲ ಸಂಭೂತನಾದ ಸುಕೇಶಿಯ ಮಗ ಸುಮಾಲಿ ಎಂಬ ರಾಕ್ಷಸನ ಮಗಳು. ರಾವಣನ ತಾಯಿ. ಕುಬೇರನ ಮಲತಾಯಿ. ಒಮ್ಮೆ ಸುಮಾಲಿ ಕೈಕಸಿಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ವಿಶ್ರವಸ ಮಹರ್ಷಿಯ ಆಶ್ರಮಕ್ಕೆ ಕರೆತಂದು ಆತನೇ ಅವಳ ಪತಿಯೆಂದೂ ಆತನ ಶುಶ್ರೂಷೆಯಲ್ಲಿ ನಿರತಳಾಗಿರಬೇಕೆಂದೂ ವಿಧಿಸಿ ಅವಳನ್ನು ಅಲ್ಲಿ ಬಿಟ್ಟುಹೋದ. ತಂದೆಯ ಆದೇಶದಂತೆ ಆಕೆ ಋಷಿಯ ಶುಶ್ರೂಷೆ ಮಾಡುತ್ತಿರಲು ಒಂದು ದಿನ ಬಹಿರ್ಮುಖನಾದ ಋಷಿ ಅವಳನ್ನು ಪ್ರಶ್ನಿಸಲಾಗಿ ಆಕೆ ತನ್ನ ಉದ್ದೇಶವನ್ನಾತನಿಗೆ ತಿಳಿಸಿದಳು. ಸಂಧ್ಯಾ ಸಮಯದಲ್ಲಿ ಪುತ್ರಸಂತಾನವನ್ನು ಬಯಸಿದ್ದರಿಂದ ಆಕೆಯ ಹೊಟ್ಟೆಯಲ್ಲಿ ಹುಟ್ಟುವವರೆಲ್ಲರೂ ರಾಕ್ಷಸರಾಗುವರು ಎಂದು ಆ ಮಹರ್ಷಿ ನುಡಿದ. ಅಂತೆಯೇ ರಾವಣ, ಕುಂಭಕರ್ಣ, ವಿಭೀಷಣ ಶೂರ್ಪನಖಿಯರು ಜನಿಸಿದರು. ಇಷ್ಟು ರಾಮಾಯಣದಲ್ಲಿ ಬರುವ ವಿವರ. *