ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪೮ / ಕುಕ್ಕಿಲ ಸಂಪುಟ

'ಪ್ರಮಾಣ' ಮತ್ತು 'ಸಮಾನ' ಎಂಬ ಸಂಜ್ಞೆಗಳಿಂದ ಕರೆಯಲ್ಪಟ್ಟಿವೆ. ವೀಣಾವಾದನದಲ್ಲಿ ತಾಳನಿರೂಪಣೆಗೆ ಈ ಕಾಲಮಾನಗಳನ್ನೇ ಪ್ರಮಾಣವಾಗಿಟ್ಟುಕೊಳ್ಳುವುದಾದ್ದರಿಂದ ಈ ಲಯಗಳಿಗೆ ಅನ್ವರ್ಥವಾಗಿ ಆ ಹೆಸರುಗಳು ಬಂದಿವೆ. 'ವೀಣಾವಾದ್ಯಂ ಮಾನತಾಲ ಯುಕ್ತಂ ತಂಪಾದಿವರ್ಜಿತಂ', (ಸಂ. ರ. ೬-೩೫). ೬-೬೫), ಶಂಪಾದಿವರ್ಜಿತಂ ಎಂದರೆ ಹಸ್ತಾಂಗುಲಿಗಳ ಘಾತಪಾತಾದಿ ಕ್ರಿಯೆಗಳಿಂದ ತಾಳನಿರೂಪಣೆ ಇಲ್ಲ ಎಂದರ್ಥ. ಅನುಷ್ಟುಪ್ ಶ್ಲೋಕದಲ್ಲಿ ಸಾಮಾನ್ಯವಾಗಿ ಈ ಲಯವಿನ್ಯಾಸ ಇರುವುದನ್ನು ಕಾಣುತ್ತೇವೆ ವಾಲ್ಮೀಕಿಯ ಅದೇ ಶ್ಲೋಕದಲ್ಲಿ ಕಾಣಬಹುದು. ಪಿಂಗಳನು ಅನುಷ್ಟುಪ್ ಛಂದಸ್ಸಿನಲ್ಲಿ ಈ ಎರಡು ವಿಧದ ಲಯಗಳು ನಿರಂತರವಾಗಿ ಇರುವುದನ್ನು ವಿಶೇಷ ಲಕ್ಷಣವಾಗಿ ಕೊಟ್ಟಿರುತ್ತಾನೆ. ಲಘು ನಂತರ ಗುರು ನಿರಂತರವಾಗಿ ಬರುವುದನ್ನು 'ಪ್ರಮಾಣೀ' ಎಂದೂ ಗುರುಲಘು ಕ್ರಮದಲ್ಲಿರುವುದನ್ನು ಸಮಾನೀ ಎಂದೂ ಕರೆದಿರುತ್ತಾನೆ (ತಿಪ್ರಮಾಣೀ ಗೃತಿ ಸಮಾನೀ (ಪಿಂ. ಸೂ. ೫-೬, ೫-೭.) ಇವು ಕ್ರಮಯುಕ್ತವಾಗಿಲ್ಲದಿರುವುದನ್ನು 'ವಿತಾನ'ವೆಂದು ಕರೆದಿದ್ದಾನೆ- (ವಿತಾನಮನ್ಮತ್ ೫-೮), ಇವಕ್ಕೆ ಉದಾಹರಣೆಗಳು ಕ್ರಮವಾಗಿ ಹೀಗಿವೆ.

ಪ್ರಮಾಣೀ- ಸಮಾನೀ- ವಿತಾನ- ಸರೋಜಯೋನಿರಂಬರೇ ರಸಾತಲೇ ತಥಾಚ್ಯುತಃ |
ತವ ಪ್ರಮಾಣಮೀಕ್ಷಿತುಂ ಕ್ಷಮ್ ನತ್ ಬಭೂವತುಃ ||
ವಾಸವೋSಪಿ ವಿಕ್ರಮೇಣ ಯತ್ಸಮಾನತಾಂ ನಯಾತಿ |
ತಸ್ಯ ವಲ್ಲಭೇಶ್ವರಸ್ಯ ಕೇನ ತುಲ್ಯತಾ ಕ್ರಿಯೇತ ||
ಹೃದಯಂ ಯಸ್ಯ ವಿಶಾಲಂ ಗಗನಾಭೋಗಸಮಾನಂ |
ಲಭತೇsಸೌ ಮಣಿಚಿತ್ರಂ ನೃಪತಿರ್ಮೂಧಿ ವಿತಾನಂ ||
ಕಾವ್ಯಾದಿಗಳ ಅನುಷ್ಟುಪ್ ಶ್ಲೋಕಗಳಲ್ಲಿ ಈ ತಂತ್ರಿಲಯಗಳೇ ಒಂದಂಶ ನಿಯಮತಃ ಸೇರಿಕೊಂಡಿರುವುದನ್ನು ಸಾಮಾನ್ಯವಾಗಿ ಎಲ್ಲಿಯೂ ಕಾಣಬಹುದು ಪಾದಾಂತ್ಯದ ನಾಲ್ಕು ಅಕ್ಷರಗಳಲ್ಲಿ, ವಿಶೇಷವಾಗಿ ಎರಡನೇ ನಾಲ್ಕನೇ ಪಾದಾಂತ್ಯಗಳಲ್ಲಿ ಈ ಲಯವಿದ್ದೇ ಇರುತ್ತದೆ.

ಇನ್ನೂ ಅನುಷ್ಟುಪ್ಪಿನ ಪಾದಗಳಲ್ಲಿ ಒಂದರಿಂದೊಂದಕ್ಕೆ ಕ್ರಮವಾಗಿ ಅಕ್ಷರಗಳು ನಾಲ್ಕರಂತೆ ಹೆಚ್ಚಿರುವುದು 'ಪದಚತುರೂರ್ಧ್ವ'ವೆಂಬ ವಿಷಮವೃತ್ತವಾಗುವುದು. ಇದಲ್ಲದೆ ಅನುಷ್ಟುಪ್ ವಿಷಮವೃತ್ತದಲ್ಲಿ 'ಉದ್ಧತಾ', 'ಉಪಸ್ಥಿತಪ್ರಚುಪಿತ' ಎಂಬ ಇನ್ನೆರಡು ಭೇದಗಳಿವೆ. ಅವುಗಳ ಲಕ್ಷಣ ಹೀಗಿದೆ-

ಉದ್ಧತಾ ಪ್ರಥಮಪಾದದಲ್ಲಿ ಸಗಣ + ಜಗಣ + ಅಕ್ಷರಗಳು, ಎರಡನೇ ಪಾದದಲ್ಲಿ ನಗಣ + ಸಗಣ ಹನ್ನೊಂದಕ್ಷರಗಳು, ಮೂರನೆಯ ಪಾದದಲ್ಲಿ ಭ + ಹನ್ನೊಂದು ಅಕ್ಷರಗಳು, ನಾಲ್ಕನೆಯದರಲ್ಲಿ ಸ + ಜ ಹದಿಮೂರು ಅಕ್ಷರಗಳಿರುತ್ತವೆ. ಉದಾ-

ಮೃಗಲೋಚನಾ ಶಶಿಮುಖೀ ಚ |
ರುಚಿರದಶನಾ ನಿತಂಬಿನೀ ||
ಹಂಸಲಲಿತಗಮನಾ ಲಲನಾ |
ಪರಿಣೀಯತೇ ಯದಿ ಭವೇತ್‌ ಕುಲೋದ್ಧ ತಾ ||
ಸಗಣ + ಲಘು ಸೇರಿ ಹತ್ತು + ಜಗಣ + ಗುರು ಹೀಗೆ ನ +2+0 + ಜ + ಲ + ಗ ಸೇರಿ + ಸ + ಜ + ಗ ಸೇರಿ