ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೫೬ / ಕುಕ್ಕಿಲ ಸಂಪುಟ

ನೀತಿಯುತ‌ರ್ ಅಮಳ ಕವಿತಾ ನೀತಿಯುತ‌ರ್ ಕೆಲರೆ...' ಎಂದು ಕವಿರಾಜಮಾರ್ಗಕಾರನು ಹೇಳುವಂತಹ ಪ್ರತಿಭಾಸಂಪನ್ನರಲ್ಲಿ ಇವರೊಬ್ಬರು.
'ದೊಡ್ಡವನಾಗುವಾಗ ದೊಡ್ಡ ಮಾವನಂತಾಗು' ಎಂಬ ಅಜ್ಜನ ಹರಕೆ, ಅದನ್ನು ಎಂದಾದರೂ ಸಲ್ಲಿಸಬೇಕೆಂಬ ನನ್ನ ಆಸೆ ಅಳಿಯಾಸೆಯಾಗಿಯೇ ಉಳಿದಿದೆ. ಇಂದೀಗ ನನಗೆ ಅರುವತ್ತು ದಾಟಿದರೂ ಆ ಲೆಕ್ಕದಲ್ಲಿ ನಾನು ದೊಡ್ಡವನಾಗಲೇ ಇಲ್ಲ. ಅವರ ಮುಂದೆ ಅದೇ ಅಂದಿನ 'ಅಳಿಯ ಮಾಣಿ'ಯಾಗಿದ್ದೇನೆ. ಆಸೆಯಂತೂ ಅಳೆಯುವುದಲ್ಲ. ಆ ಆಸೆಯೇ ನನ್ನನ್ನು ಇದಿಷ್ಟು ದೂರ ನಡೆಯಿಸಿಕೊಂಡು ಬಂದಿದೆ. ಮುಂದಿನ ದಾರಿಗೂ,

ಅದೇ ಪಾಥೇಯವಾಗಿರಲಿ. ದಾರಿಯುದ್ದಕ್ಕೂ ದೊಡ್ಡ ಮಾವ 'ಶ್ರೀರಾಮಾ ನಟಿಕೌಸ್ತುಭದ್ಯುತಿ ಕಿರತ್‌ಪುಷ್ಪಾಂಜಲಿಕ್ಷೇಪ...' ಎಂದು ಹಾಡುತ್ತಿರಲಿ, ಆ ಆನಂದ ಸಂದೋಹವನ್ನು ಭಗವಂತನು ನಮಗೀಯಲಿ, ಎಂಬುದಷ್ಟೇ ಈ ಅಳಿಯನ ಹಾರೈಕೆ.


('ಕಾಣಿಕೆ', ಬಡೆಕ್ಕಿಲ ವೆಂಕಟರಮಣ ಭಟ್ಟರ ಗೌರವ ಗ್ರಂಥ, ೧೯೭೨)