ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭೦ / ಕುಕ್ಕಿಲ ಸಂಪುಟ

ಇ ತಾ ಕೆಲಸ ಮಾಡುತ್ತಿದ್ದುದೂ ಉಂಟು. ಸ್ವಲ್ಪ ಕಾಲ ಹತ

ವನ್ನು ಹೇಳಿದರು. ಬನಾರಸ್ಸಿನ ಒಂದು ಪರೀಕ್ಷೆಗಾಗಿ ತ ತಯಾರಿ ನಡೆಸಿದ್ದರು. ಆದರೆ ಸ್ವಾತಂತ್ರ ಚಳವಳಿಯ ಕೋಲಾಹಲ 2 ಪಾಳ ಧು ದ ಉಪಾಧಿಗೂ ಸಿಕ್ಕಿಕೊಳ್ಳಲಿಲ್ಲ! ಕೃಷಿಕರಾಗಿದ್ದ ಅವರು ತಮ್ಮ ಹಳ್ಳಿಯಲ್ಲಿಯೇ ನೆಲೆಸಿ ಶ್ರಮದ

ಬ ಣಿ ಬದುಕನ್ನು ನಡೆಸಿದರು. ಜೊತೆಗೆ ವಿದ್ವತ್ತಿನ ಕೃಷಿಯನ್ನು ನಡೆಸಿ ಬದುಕಿಗೆ ಆನಂದ. ತೃಪಿ,ಗಳನ್ನು ತುಂಬಿಕೊಂಡರು. ಅವರ ಆಸಕ್ತಿಯ ಹರವು ವಿಸ್ತಾರವಾಗಿತ್ತು. ಅವರು ಭಾರತ ಬಿಂದೂರಾಯರ ಭಾರತವಾಚನ ಕೇಳಿ, ಮಾರುಹೋಗಿ ಗಮಕಾಬ್ದ್ಬಾಸವನೂ ಶಿ ಸ್ರ ಕೈಗೊಂಡಿದ್ದರಂತೆ! ಯಕ್ಷಗಾನವಂತೂ ಮನೆಯದೇ ವ್ಯವಹಾರ. ಸಹಜವಾದ ಆಸಕ್ತಿಗೆ ಅವರು ಪಾಂಡಿತ್ನದ ಬಲ ತಂದುಕೊಂಡರು. ಪಾರ್ತಿಸುಬ್ಬನ ಕೃತಿಗಳನ್ನು ವಿಶೇಷವಾಗಿ ಲ ಬಿ ಲ ಲ ಅಧ್ಯಯನ ಮಾಡಿದರು.

ನಾನು ಕುಕ್ಕಿಲ ಕೃಷ್ಣಭಟ್ಟರ ಹೆಸರು ಕೇಳಿದ್ದು ಅರುವತ್ತರ ದಶಕದ ಆರಂಭದಲ್ಲಿ. ಶಿವರಾಮ ಕಾರಂತರ ಬರಹದಿಂದಾಗಿ, ಪಾರ್ತಿಸುಬ್ಬನ ಬಗೆಗೆ ಆ ದಿನಗಳಲ್ಲಿ ತುಂಬ ಚರ್ಚೆ ನಡೆಯುತ್ತಿತ್ತು. ಕಾರಂತರ ಅಭಿಪ್ರಾಯವನ್ನು ವಿರೋಧಿಸುವವರ, ಖಂಡಿಸುವವರ ಸಂಖ್ಯೆ ದೊಡ್ಡದಾಗಿಯೇ ಇತ್ತು. ಅವರಲ್ಲಿ ಕೃಷ್ಣಭಟ್ಟರೂ ಸೇರಿದ್ದರು. ಆದರೆ ಅವರು ಸಮತೋಲನವನ್ನು ಕಳೆದುಕೊಂಡಿರಲಿಲ್ಲ. "ಕಾರಂತರು ಏನೇನು ಹೇಳಿರುವರೊ ಅದನ್ನೆಲ್ಲ ಖಂಡಿಸಬೇಕು. ಅವರು ಮಾಡಿದುದಕ್ಕೆ ದ್ವಿಗುಣಿತವಾದ ಅಧಿಕ್ಷೇಪವನ್ನು ನಾವೂ ಮಾಡಬೇಕು. ಅವರು ಸತ್ಕ ದ್ರೋಹಿಗಳೆಂದು ಸಾರಬೇಕು. ಆಗ ಮಾತ್ರ ಪಾರ್ತಿಸುಬ್ಬನ ಹೆಸರು ಉಳಿದೀತು. ಎನ್ನುವ ಉದ್ರೇಕಿತರ ಗುಂಪಿನಲ್ಲಿ ಕೃಷ್ಣಭಟ್ಟರು ಪಾಂಡಿತ್ಮ ಎಂದರೆ ಏನು ಎಂಬುದನ್ನು ಎತ್ತಿ ತೋರಿಸಿದರು. ಯಕ್ಷಗಾನ ಒಂದರಿಂದ ಕಾರಂತರನ್ನು ಅಳೆಯಬಾರದೆಂದೂ, ಅವರ ಅಸಾಮಾನ್ಮ ಪ್ರತಿಭೆಯನ್ನು ಗೌರವಿಸ ಬೇಕೆಂದೂ ಅವರು ಜೊತೆಯವರಿಗೆ ಹೇಳಿದರು. “ನಾವು ಪಾರ್ತಿಸುಬ್ಬನ ಊರಿನವರು. ಆತನಿದ್ದನೆಂಬುದಕ್ಕೆ ಒಂದೇ ಒಂದು ಸಾಕ್ಷ್ಯ ಪ್ರಮಾಣ ನಮ್ಮಲ್ಲಿಲ್ಲ. ಅವನ ಕುಲ, ಜಾತಿ, ನೀತಿ ಒಂದನ್ನು ನಾವರಿಯೆವು. ಆತನು ಯಕ್ಷಗಾನ ಕವಿ ಎನ್ನುತ್ತೇವೆ; ಆತನು ರಚಿಸಿದ ಪ್ರಸಂಗಗಳಾವುವು ಎಂಬ ನಿಷ್ಕರ್ಷೆ ನಮಗಿಲ್ಲ. ಆತನು ಯಕ್ಷಗಾನ ಸುಧಾರಕ ನೆನ್ನುತ್ತೇವೆ; ಸಭಾಲಕ್ಷಣ ಬರೆದವನೆನ್ನುತ್ತೇವೆ; ಆತನ ಸುಧಾರಣೆ ಏನು, ಸಭಾಲಕ್ಷಣದ ಕ್ಷಣ ಏನು ಎಂಬುದು ನಮಗೆ ಗೊತ್ತಿಲ್ಲ. ಅನ್ಯ ಕವಿಕೃತವಾದ ಪದ್ಮಗಳನ್ನು ಸುಬ್ಬನ ಪದ್ಮಗಳೆಂದು ಹಾಡುತ್ತೇವೆ. ಅವನ ಕೃತಿಗಳ ಮೂಲ ಪ್ರತಿಗಳನ್ನು ಕೇಳಿದರೆ ಅವೊಂದೂ ನಮ್ಮಲ್ಲಿಲ್ಲ. ಇಷ್ಟೊಂದು ಅಕೃತಾತ್ಮರಾಗಿ ನಾವಿರುತ್ತಾ ಶ್ರೀ ಕಾರಂತರ ವಾದಕ್ಕೆ ಉದ್ರೇಕ ಗೊಳ್ಳುವುದರಲ್ಲಿ ಅರ್ಥವಿದೆಯೇ? ಎಂದು. ಅವರು ಕೇಳಿದರು. "ಅಭಿಮಾನ ಮೂರ್ಛಿತರಾಗಿದ್ದ ನಮ್ಮನ್ನು ಶ್ರೀ ಕಾರಂತರು ಎಚ್ಚರಿಸಿ ಉಪಕಾರ ಮಾಡಿದರು ಎಂಬ ಸದ್ಭಾವನೆಯಿಂದ ಸಹನಶೀಲರಾಗಿ ಸತ್ಮ ಶೋಧನೆಯಲ್ಲಿ ಪ್ರವೃತ್ತರಾಗೋಣ ಎಂದು ಅವರು ಕಾರಂತರಿಗೆ ಉತ್ತರವಾಗಿ ತಮ್ಮ ಸಂಶೋಧನೆಯನ್ನು ಸಮರ್ಪಕವಾಗಿ ಮಂಡಿಸಿದರು.

ಕೃಷ್ಣಭಟ್ಟರು ಸಂಗ್ರಹಿಸಿದ ದಾಖಲೆಗಳನ್ನೂ, ಮಂಡಿಸಿದ ವಾದವನ್ನೂ ಮೆಚ್ಚಿ ಕೊಂಡು ಗೋವಿಂದ ಪೈಗಳು ಹೇಳಿದರು: "...ನೀವು ಮುಂದಿರಿಸಿರುವ ದಾಖಲೆಗಳು