ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹವ್ಯಾಸಿಗಳು : ಹೊಣೆ ಮತ್ತು ಸಮಸ್ಯೆಗಳು
149

ಹವ್ಯಾಸಿ ರಂಗಭೂಮಿಯಲ್ಲಿ ಕೆಲಸ ಮಾಡುವ ತಂಡಗಳಿಗೆ ಹಲವು ಸಮಸ್ಯೆಗಳಿವೆ ಮುಖ್ಯವಾಗಿ:

1. ಅಭ್ಯಾಸದ ಕೊರತೆ : ಹವ್ಯಾಸಿಗಳಲ್ಲಿ ಹೆಚ್ಚಿನವರು, ಒಮ್ಮೆ ವೇಷ ಮಾಡಿದರೆಂದರೆ ಮತ್ತೆ ಕಲಿಯುವುದು ಕಡಿಮೆ. ಹಲವರು ನೋಡಿ ಕಲಿತವರು. ಮಿತ್ರವರ್ಗದ, ಉತ್ಸಾಹದ ಪ್ರೀತಿಯ ಪ್ರೋತ್ಸಾಹ ಹೊಗಳಿಕೆ ಗಳಿಂದ ತಾನು ಕಲಾವಿದನಾಗಿದ್ದೇನೆಂಬ ಎಣಿಕೆ ಬಂದು ಬಿಡುತ್ತದೆ. ಪ್ರಸಂಗದ ಅಭ್ಯಾಸ, ಸನ್ನಿವೇಶದ ಕಲ್ಪನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಹವ್ಯಾಸಿಗಳು ಬಹಳ ಕಡಿಮೆ.

2. ಹೊಂದಾಣಿಕೆಯ ಅಭಾವ : ಬೇರೆ ಬೇರೆ ಹಿನ್ನೆಲೆಗಳಿಂದ, ಬರುವ ಕಲಾವಿದರು ಒಂದೋ ಎರಡೋ ಪ್ರದರ್ಶನಗಳಿಗಾಗಿ ಒಟ್ಟಾಗುತ್ತಾರೆ. ಒಂದೇ ಸಂಘದವರಾದರೂ ಕೂಡ, ಆಗೊಮ್ಮೆ ಈಗೊಮ್ಮೆ ಸೇರುವುದಾದುದ ರಿಂದ, ಹವ್ಯಾಸಿ ಪ್ರದರ್ಶನದಲ್ಲಿ ಹೊಂದಾಣಿಕೆ, ಜತೆಗಾರಿಕೆಯ ಅಭಾವ ಎದ್ದು ಕಾಣುತ್ತದೆ. ಅಚ್ಚುಕಟ್ಟುತನ ಇರುವುದಿಲ್ಲ. ಮೊದಲಾಗಿ ಸೇರಿ ಸಮಾಲೋಚಿಸುವ ವ್ಯವಧಾನ, ಅಥವಾ ಧೋರಣೆ ಇರುವುದಿಲ್ಲ.

3. ಉತ್ಸಾಹ ಹೆಚ್ಚು, ಗುಣಮಟ್ಟ ಕಡಿಮೆ : ಹವ್ಯಾಸಿಗಳಲ್ಲಿ ಕಂಡುಬರುವ ಉತ್ಸಾಹ, ಉಮೇದುಗಳು ಪ್ರಶಂಸನೀಯ. ಆದರೆ ಅದಕ್ಕೆ ತಕ್ಕ ಪ್ರಮಾಣದಲ್ಲಿ ಪರಿಶಾನೆ, ಪರಿಶ್ರಮ ಇರುವುದಿಲ್ಲ. ಅತ್ಯುತ್ಸಾಹವೇ ಹವ್ಯಾಸಿ ಕಲಾವಿದನಿಗೆ ದೊಡ್ಡ ತೊಡಕು. ಕೆಲವು ಹವ್ಯಾಸಿಗಳ ಆಟಗಳು, ನೋಡುವವರಿಗಿಂತ, ಆಡುವವರಿಗೇ ಹೆಚ್ಚು ಸಂತೋಷ ನೀಡುವಂತಹವು.

4. ವ್ಯವಸಾಯಿಗಳ ಅನುಕರಣೆ : ಹವ್ಯಾಸಿಗಳು ಮಾಡುವ ದೊಡ್ಡ ತಪ್ಪು ಎಂದರೆ, ಕೆಲವು ವ್ಯವಸಾಯಿ ಕಲಾವಿದರನ್ನು ಅನುಕರಿಸಿ, ಪ್ರತಿಮಾಡ ಹೋಗುವುದು. ಹವ್ಯಾಸಿಗೆ ಈ ದಾರಿ ಸಲ್ಲ, ಮತ್ತು ಬೇಕಾಗಿಯೂ ಇಲ್ಲ. ಉತ್ತಮ ಕಲಾವಿದನ ಆದರೆ ಹೆಚ್ಚಿನವರು 'ಕೋಪಿ' ಅನುಸರಣೆ ಇರಲಿ, ಅನುಕರಣೆ ಸಲ್ಲದು, ಹೊಡೆಯುವ ಸುಲಭದ ದಾರಿ ಹಿಡಿದು