ತನಾದನು.
-(೨೦೪, ಕಳ್ಳನ ಗಡ್ಡದಲ್ಲಿ ಎಳ್ಳಿನಕಾಳು ಅದೆ.)-
ಬಾದಶಹನ ಅಂತಃಪುರದಲ್ಲಿ ಒಂದು ರತ್ನದ ಅಲಂಕಾರವು ಕಳವಾಗಿ
ಹೋಯಿತು. ಕಳ್ಳನನ್ನು ಗೊತ್ತು ಹಚ್ಚಿಕೊಡು ? ಎಂದು ಬಾದಶಹನು ಬೀ
ರಬಲನಿಗೆ ಆಜ್ಞೆ ಮಾಡಿದನು, ಆಗ ಬೀರಬಲನು ಆ ಅಲಂಕಾರವನ್ನಿಟ್ಟಿದ್ದ
ಪೆಟ್ಟಿಗೆಗೆ ಕಿವಿಯನ್ನು ಹಚ್ಚಿ ಸ್ವಲ್ಪ ಹೊತ್ತು ಕುಳಿತುಕೊಂಡು ಆ ಮೇಲೆ
ಪೃಥ್ವಿನಾಥ! ಈ ಪೆಟ್ಟಿಗೆಯು ಹೇಳಿದ್ದೇನಂದರೆ ಕಳ್ಳನಗಡ್ಡದಲ್ಲಿ ಒಂದು
ಎಳ್ಳುಕಾಳು ಅದೆ, ಎಂದು ಹೇಳಿತು ಎಂದನು ಆಗ ಪರಿಚಾರಕನೊಬ್ಬನು
ತನ್ನ ಗಡ್ಡವನ್ನು ಹಿಡಿದುಕೊಂಡು ನೋಡಿದನು, ತೀಕ್ಷ್ಣ ದೃಷ್ಟಿಯುಳ್ಳ ಬೀ
ರಬಲನು ಅವನನ್ನು ಆ ಕೂಡಲೆ ಹಿಡಿದು ಕಿಂಚಿತ್ ಬೆದರಿಕೆ ಹಾಕಲು ಅವ
ನು ತನ್ನ ಅಪರಾಧವನ್ನು ಸ್ವೀಕರಿಸಿದನು.
- (೨೦೫, ಅತ್ಯದ್ಭುತ ಪ್ರಹೇಲಿಕಾ )-
ಅಕಬರ ಬಾದಶಹನು ಒಂದು ಸಾರೆ ಬೀರಬಲನಿಗೆ ಈ ಪ್ರಹೇಳಿಕೆ
ಯನ್ನು ಹೇಳಿದನು.
"ಊಪರ ಢಕ್ಕನ ನೀಚೇಢಕ್ಕನ ಬೀಚಮೆ ಖರಬೂಜಾ |
ಮೊಮ ಘರಿಸೋ ಆಸಹಿ ಕಾಟತಾನು ಅರ್ಥನಹಿ ದೂಜಾ||
ಈ ಪ್ರಹೇಲಿಕೆಯನ್ನು ಕೇಳಿ ಬೀರಬಲನು ಚಕಿತನಾದನು. ಅರ್ಥವನ್ನು
ಹೇಳಲಿಕ್ಕೆ ತಿಳಿಯಲಿಲ್ಲ ಕಿಂಚಿತ್ ಅವಕಾಶವನ್ನು ಕೊಡಿರಿ ! ಎಂದು ಕೇಳಿ
ಕೊಳ್ಳಲು ಬಾದಶಹನು ಅಪ್ಪಣೆಕೊಟ್ಟನು. ಬೀರಬಲನು ದಿಲ್ಲಿಯನ್ನು ಬಿ
ಟ್ಟು ಒಂದು ಸಮೀಪದ ಜನವಸತಿಗೆ ಹೋದನು. ಬಿಸಲಿನಿದ ಬಾಯಾರಿತ
ಳಮಳಿಸಹತ್ತಿದನು ಆಗ ಆಜನವಸತಿಯಲ್ಲಿದ್ದ ಒಂದು ಚಿಕ್ಕ ಮನೆಯನ್ನು
ಪ್ರವೇಶಿಸಿದನು ಆಗ ಅಲ್ಲಿ ಒಬ್ಬ ತರುಣಿಯು ಅಡಿಗೆಯನ್ನು ಮಾಡುತ್ತ ಕು
ಳಿತು ಕೊಂಡಿದ್ದಳು ಅವಳನ್ನು ಕುರಿತು, ಬಾಲಕಿಯೇ ! ಏನನ್ನು ಮಾಡು
ತಿರುವಿ !
ಬಾಲಕಿ-ಮಗಳನ್ನು ಬೇಯಿಸುತ್ತೇನೆ, ತಾಯಿಯನ್ನು ಸುಡಹತ್ತಿದ್ದೇನೆ.
ಬೀರಬಲ-ನಿನ್ನ ತಂದೆಯು ಏನು ಮಾಡುತ್ತಿರುವನು ?
ಬಾಲಕಿ-ಮಣ್ಣಿನಲ್ಲಿ ಮಣ್ಣು ಕೂಡಿಸಲಿಕ್ಕೆ ಹೋಗಿದ್ದಾನೆ
ಬೀರಬಲ- ನಿನ್ನ ತಾಯಿಯು ಎಲ್ಲಿ ಹೋಗಿದ್ದಾಳೆ.
ಬಾಲಕಿ- ಒಂದೊಂದನ್ನು ಎರಡೆರಡು ಮಾಡಲಿಕ್ಕೆ ಹೋಗಿದ್ದಾಳೆ.
ಈ ಉತ್ತರಗಳನ್ನು ಕೇಳಿ ಬೀರಬಲನು ದಿಗ್ಭ್ರಮೆಗೊಂಡನು ಅಮ್ಮ