ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೪
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.


ಸ್ನೇಹವು ವೃದ್ಧಿಯಾದಮೇಲೆ ಅವನನ್ನು ನಿಮ್ಮ ಮನೆಗೆ ಭೋಜನಕ್ಕೆ ಬರ ಬೇಕೆಂದು ಆಮಂತ್ರಣ ಕೊಡಿರಿ; ಅಂದರೆ ಅವನು ಬಂದೇಬರುವನು ಆ ದಿವಸ ನನಗೂ ಭೋಜನಕ್ಕೆ ಹೇಳಿರಿ ಅಂದರೆ ಮುಂದಿನ ಯಾವತ್ತೂ ಸಂಗತಿ ಯನ್ನು ವಿಚಾರಮಾಡೋಣ ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟನು.
ಆ ಕವಿಗಳಿಬ್ಬರೂ ಚತುರರಿದ್ದರು ಬೀರಬಲನ ಆಶಯವು ತಿಳಿದುಬಂದಿತು, ಮುಂದೆ ಸ್ವಲ್ಪದಿವಸಗಳಾದ ಮೇಲೆ ಆ ಎರಡನೇ ಕವಿಯ ಆ ಲೋಭಿಯೊಡನೆ ಸ್ನೇಹವನ್ನು ಬೆಳಿಸಿ ದಿನಾಲು ಅವನಮನೆಗೆ ಹೋಗಿ ಬರಹತ್ತಿ ದನು, ಈಪ್ರಕಾರ ಕೆಲವು ದಿವಸಗಳಲ್ಲಿ ಅವರಿಬ್ಬರ ನಡುವೆ ದೃಢವಾದ ಮೈತ್ರಿಯುಂಟಾಯಿತು, ಎರಡನೇಕವಿಯು ಆ ಲೋಭಿಗೆ ಒಂದುದಿವಸ ಔತಣ ಕೊಟ್ಟನು, ಅದರಂತೆ ಬೀರಬಲನಿಗೂ ತನ್ನ ಮಿತ್ರನಿಗೂ ಔತಣಕೊಟ್ಟನು ಅವರಿಬ್ಬರೂ ತಮ್ಮ ವೇಷವನ್ನು ಮರೆಮಾಚಿಕೊಂಡು ಊಟಕ್ಕೆ ಬಂದರು, ಸ್ವಲ್ಪ ಹೊತ್ತಿನೊಳಗಾಗಿ ಆ ಲೋಭಿಯೂ ಅಲ್ಲಿಗೆ ಬಂದನು. ಕವಿಯು ಆ ಲೋಭಿಗೆ ವಿಶೇಪವಾಗಿ ಆದರದ ಸತ್ಕಾರ ಮಾಡಿದನು; ಆ ಲೋಭಿಯು ಇವರನ್ನು ಗುರುತಿಸಲಿಲ್ಲ ಎಲ್ಲರೂ ಮಾತಾಡುತ್ತ ಕುಳಿತುಕೊಂಡರು ಸಂಜೆಯಾ ಗುತ್ತ ಬಂತು, ಆದರೆ ಭೋಜನದ ಮಾತೇ ಹೊರಡಲಿಲ್ಲ ಲೋಭಿಯಹೊರತು ಉಳಿದವರೆಲ್ಲರೂ ತಮ್ಮ ತಮ್ಮ ಮನೆಯಲ್ಲಿ ಊಟವನ್ನು ತೀರಿಸಿಕೊಂಡೇ ಬಂದಿದ್ದರು, ಲೋಭಿಯುಮಾತ್ರ ಉಪವಾಸವಾಗಿಯೇ ಇದ್ದನು ಇದರಿಂದ ಅವನುಬೇಸತ್ತು ಕಟ್ಟ ಕಡೆಗೆ " ಇನ್ನೂ ಭೋಜನವಾಗಬೇಕಾದರೆ ಎಷ್ಟು ಸಮಯವುಬೇಕು ? ಏನಾದರೂ ಸಿದ್ಧತೆಯನ್ನು ಮಾಡಿರುವಿರೋ ” ಎಂದು ಪ್ರಶ್ನೆ ಮಾಡಿದನು. ಆಗ ಕವಿಯ ಮಿತ್ರನು - ಯಾತರಸಿದ್ಧತೆ ? ” ಎಂದು ಕೇಳಿದನು. ಲೋಭಿಯು ಅನ್ನುತ್ತಾನೆ; - ನೀವು ನನಗೆ ಭೋಜನಕ್ಕೆ ಆಮಂತ್ರಣ ಕೊಟ್ಟಿಲ್ಲವೋ ? ” ಎಂದು ಕೇಳಿದನು. ಆಗ ಬೀರಬಲನು “ ನಾನು ನಿಮ್ಮನ್ನು ಪ್ರಸನ್ನಿಕರಿಸಿಕೊಳ್ಳಬೇಕೆಂದು ಆಮಂತ್ರಣವನ್ನು ಹೇಳಿದ್ದೆನು, ಇಷ್ಟೇ ಹೊರತು ಅನ್ಯಥಾ ಇಲ್ಲ. ನಾವೆಲ್ಲರೂ ಭೋಜನ ತೀರಿಸಿಕೊಂಡೇ ಕುಳಿತಿದ್ದೇವೆ” ಎಂದು ಹೇಳಿದಕೂಡಲೆ ಲೋಭಿಯ ಕಣ್ಣು ಕೆಂಪಗಾದವು ಅವರೊಡನೆ ಲೋಭಿಯು ಹೊಡೆದಾಡಹತ್ತಿದನು. ಆಗ ಬೀರ ಬಲನು ತನ್ನ ವೇಷವನ್ನು ತೆಗೆದುಚೆಲ್ಲಿ ಅವರೆದುರಿಗೆ ನಿಂತುಕೊಂಡು “ಸದ್ಗ್ರ ಹಸ್ಥನೇ ನೀನು ಹಿಂದಕ್ಕೆ ಇದೇ ಪ್ರಕಾರವಾಗಿ ಒಬ್ಬ ಕವಿಗೆ ಚೇಷ್ಠೆಯನ್ನು ನ್ನು ಮಾಡಿದ್ದಿಲ್ಲವೇ ? ಅವನಿಗೆ ಅದರಿಂದ ಎಷ್ಟು ಕಷ್ಟವಾಗಿದ್ದೀತು ? ?? ಎಂದು ಕೇಳಿದನು. ಅದಕ್ಕೆ ಲೋಭಿಯು ಆ ಕವಿಯು ಯಾರು ? ನಾನುಚೆ