ಗೋರಿಗೆ ನಮಸ್ಕಾರ ಮಾಡು ಎಂದು ಆಗ್ರಹ ಮಾಡಿದನು ಆಗಬೀರಬಲನು
ಅನ್ನುತ್ತಾನೆ; ಪೃಥ್ವಿನಾಥ, ತಾವು ದೇವರಕಿಂತಲೂ, ವಿಶ್ವಾಸವು ಅಧಿಕವಾದದ್ದೆಂದು ಒಪ್ಪಿಕೊಂಡರೆ ನಾನು ಪ್ರಣಾಮ ಮಾಡುತ್ತೇನೆ ” ಎಂದನು.
ಆಗ ಬಾದಶಹನು ಅನ್ನುತಾನೆ; ನಾನು ಈಗ ಸದ್ಯಕ್ಕೆ ವಿಶ್ವಾಸ
ಕ್ಕಿಂತಲೂ, ದೇವರೇ ಶ್ರೇಷ್ಟವಾದದ್ದೆಂದು ಅನ್ನುತ್ತೇನೆಯೇ ಹೊರತು,
ನಿನ್ನ ಮಾತಿಗೆ ಸಮ್ಮತಿಸಲಾರೆನು ನಾನು ಈ ವೀರಸಾಹೀಬನಿಗೆ ಪ್ರಾರ್ಥಿಸುವದೇನಂದರೆ, - “ ನನ್ನ ಮಗನು ಪ್ರತಾಪ ಸಿಂಹನನ್ನು ಜಯಿಸಿಕೊಂಡು ಬಂದರೆ, ಈ ಗೋರಿಯ ಮೇಲೆ ಸಂಗಮರವರೀ ಕಲ್ಲಿನ ಮಸೂತಿಯನ್ನು ಕಟ್ಟಿಸುವೆನು. ” ಎಂದು ಹೇಳಿದನು.
ಈ ಪ್ರಕಾರ ಅವರಿಬ್ಬರ ನಡುವೆ ವಾದವಿವಾದವು ನಡೆದಿರಲು ಒಬ್ಬ
ಕುದುರೆಯ ಸವಾರನು ಕುದರೆಯನ್ನು ಓಡಿಸುತ್ತ ಒಂದು ಮುಜರೆ ಮಾಡಿ
ನಿಂದದ್ದೇನಂದರೆ; - “ ತಮ್ಮ ಜೇಷ್ಟಪುತ್ರರಾದ ಸೇಲಿಮ ಬಾದಶಹರು
ಹೇಳಿ ಕಳುಹಿಸಿರುವದೇನಂದರೆ;. " ಮೇವಾಡದ ರಾಣಾಪ್ರತಾಪ ಸಿಂಹನು ನಿರ್ಬಲವಾಗಿ, ನಮ್ಮ ಕೈವಶವಾಗುವದಕ್ಕೆ ಒಪ್ಪಿಕೊಂಡಿದ್ದಾನೆ: ಇನ್ನು
ಸ್ವಲ್ಪ ದಿವಸಗಳಲ್ಲಿಯೇ ಅವನನ್ನು ಕರೆದುಕೊಂಡು ಸನ್ನಿಧಿಗೆ ಬರುತ್ತೇನೆ”
ಎಂಬದಾಗಿ ವಿಜ್ಞಾಪನೆ ಮಾಡಿಕೊಂಡಿದ್ದಾರೆ. ” ಎಂದು ಉಸುರಿದನು.
ಈ ಆನಂದದ ವಾರ್ತೆಯನ್ನು ಕೇಳಿದ ಕೂಡಲೇ ಬಾದಶಹನಿಗೆ ಅ
ತ್ಯಾನಂದವಾಯಿತು. ಆಗ ಅವನು ಬೀರಬಲನ ಕಡೆಗೆ ತಿರುಗಿ, “ ಬೀರಬಲ್ಲ
ಈಗಾದರೂ ವಿಶ್ವಾಸಕ್ಕಿಂತಲೂ ದೇವರು ಅಧಿಕನೆಂದು ತಿಳಿಯ ಬಂತೋ?
ನಾನು ಪೀರಶಾಹನಿಗೆ ಬೇಡಿಕೊಳ್ಳುವಷ್ಟರಲ್ಲಿಯೇ ಈ ಆನಂದದವಾರ್ತೆಯು ಬಂದುತಲ್ಪಿತು , ನೋಡಿದಿಯಾ !
ಆಗ ಬೀರಬಲನು ಅನ್ನುತ್ತಾನೆ: ಸ್ವಾಮೀ! ಈಪೀರನ ಮೇಲೆತಮ್ಮ
ವಿಶ್ವಾಸವು ಹುಟ್ಟಿ ಪ್ರಾರ್ಥಿಸಿಕೊಂಡದ್ದರಿಂದಲೇ ಈಗಿ ನಂದದ ವಾರ್ತೆಯು
ಬಂತಪ್ಪೇ ? ಇದರ ಮೇಲಿಂದ ವಿಶ್ವಾಸವೆಂಬದೇ ಅಧಿಕವಾದದ್ದೆಂದು ಸ್ಪಷ್ಟವಾಗಿ ಕಂಡು ಬರುತ್ತದೆ.
ಬಾದಶಹನು ಅನುತ್ತಾನೆ;- " ಈ ನಿನ್ನ ವಿಶ್ವಾಸವು ಒತ್ತಟ್ಟಿಗಿರಲಿ
ನನಗಂತೂ ಅದು ಅಧಿಕವೆಂದು ಕಂಡು ಬರುವದಿಲ್ಲ ? ನೀನು ಮಾಡಿದ ಪ್ರತಿಜ್ಞೆಯಂತೂ ನಿಷ್ಪಲವಾಯಿತು ಆದ್ದರಿಂದ ಮರಣಕ್ಕೆ ಸಿದ್ಧನಾಗು"
ಎಂದನು.
ಅದಕ್ಕೆ ಬೀರಬಲನು;- “ ಪೃಥ್ವಿನಾಥ ! ನಾನು ಇಷ್ಟು ತಮಗೆ ಪ್ರ