ಸುಮ್ಮನಾದನು. ಆಗ ಬೀರಬಲನಿಗೆ ಗಿಡಗಳು ಪ್ರೇಮಳದಾಸನವೇ ಎಂದು ಗೊತ್ತಾಯಿತು, ಕೂಡಲೆ ಕೇಶವದಾಸನನ್ನು ಒಳಿತಾಗಿ ತಳಿಸಿರಿ ಎಂದು ಕರ್ಮಚಾರಿಗಳಿಗೆ ಹೇಳಿದನು. ಆಗ ಕೇಶವದಾಸನು ಬೀರಬಲನ ಪಾದಗಳ ಮೇಲೆ ಅಡ್ಡಬಿದ್ದು, ಮಹಾರಾಜ, ನನ್ನನ್ನು ಹೊಡೆಸಬೇಡಿರಿ ಮಾವಿನಗಿಡಗಳು ಪ್ರೇಮಳದಾಸನವೇ ಅಹುದು ಎಂದು ಹೇಳಿದನು. ಆಗ ಬೀರಬಲನು ಆ ಗಿಡಗಳನ್ನು ಪ್ರೇಮಳದಾಸನ ವಶಕ್ಕೆ ಕೊಡಿಸಿ, ಕೇಶವದಾಸನಿಗೆ ದಂಡನೆಯನ್ನು ವಿಧಿಸಿದನು.
-(೨೯. ಪ್ರಾರಬ್ಧವು ಹೆಚ್ಚೋ, ಅಥವಾ ಉದ್ಯೋಗವೋ ? )-
ಒಂದುದಿವಸ ಬಾದಶಹನು ತನ್ನ ದರಬಾರದ ಈ "ಮುತ್ಸದ್ದಿಗಳಿಗೆ ಪ್ರಾರಬ್ಧವು ಅಧಿಕವಾದದ್ದೋ ! ಅಥವಾ ಉದ್ಯೋಗವು ಶ್ರೇಷ್ಠವಾದದ್ದೋ" ಎಂದು ಪ್ರಶ್ನೆ ಮಾಡಿದನು. ಆಗ ಅವರೆಲ್ಲರೂ ಒಂದೇಸ್ವರದಿಂದ "ಉದ್ಯೋಗವು ಶ್ರೇಷ್ಠವಾದದ್ದು" ಎಂದುತ್ತರಕೊಟ್ಟರು. ಆಗ ಬೀರಬಲನಿಗೆ ಪುನಃ ಇದೇ ಪ್ರಶ್ನೆಯನ್ನು ಮಾಡಿದನು. ಆಗ ಬೀರಬಲನು "ಮಹಾರಾಜ ! ಉದ್ಯೋಗಕ್ಕಿಂತ ಪ್ರಾರಬ್ಧವು ಬಲವಾದದ್ದು" ಎಂದು ಹೇಳಿದನು.
ಬಾದಶಹ-ಯಾವ ಮನುಷ್ಯನು ಪ್ರಾರಬ್ಧವನ್ನು ನಂಬಿ ಏನೂ ಉದ್ಯೋಗ ಮಾಡದೆ ಕುಳಿತುಕೊಂಡರೆ ಅವನಿಗೆ ಉದರಂಭರಣೆಯು ಹ್ಯಾಗಾಗುವದು ?
ಬೀರಬಲ-ಪ್ರಭುಗಳೇ ? ಮನುಷ್ಯನು ಬೇಕಾದ ಉದ್ಯೋಗವನ್ನು ಮಾಡಲಿ, ಅದು ಅವನ ಪ್ರಾರಬ್ಧದಲ್ಲಿ ಲಭಿಸುವದೇ ಇಲ್ಲದಿದ್ದರೆ ಏನೂಫಲ ದೊರೆಯಲಾರದು; ಆದ್ದರಿಂದ ಪ್ರಾರಬ್ಧವೇ ಶ್ರೇಷ್ಠವಾದದ್ದು.
ಉಳಿದ ಸಭಾಸದರು-ಪೃಧ್ವೀನಾಥ ? ಬೀರಬಲನು ಪ್ರಾರಬ್ಧವೇ ಶ್ರೇಷ್ಠವಾದದ್ದೆಂದು ಹೇಳುತ್ತಿರುವನಷ್ಟೇ! ಈಮಾತಿಗೆ ತಕ್ಕ ಪ್ರಮಾಣಗಳಾದರೂ ಅವನ ಬಳಿಯಲ್ಲಿರಬಹುದು.
ಬೀರಬಲ-ಇಂಥ ಪ್ರಮಾಣಗಳನ್ನು ಯಾರೂ ಸಂಗಡಕಟ್ಟಿಕೊಂಡು ಬಂದಿರಲಾರರು, ಸ್ವಲ್ಪಾವಕಾಶವನ್ನು ಕೊಟ್ಟರೆ ಪ್ರಮಾಣವನ್ನು ತೋರಿಸಿಕೊಡುವೆನು.
ಈಪ್ರಕಾರ ಮಾತು ಕಥೆಗಳಾದಮೇಲೆ ಸಭೆಯು ವಿಸರ್ಜನವಾಯಿತು. ಆಮೇಲೆ ಮುಂದೆ ಕೆಲವು ದಿವಸಗಳು ಗತಿಸಿಹೋದಮೇಲೆ ಬಾದಶಹನು ತನ್ನ ಮುಖ್ಯಮುಖ್ಯ ಮಂತ್ರಿಗಳನ್ನು ಸಂಗಡ ಕರೆದುಕೊಂಡು ಯಮುನಾತೀ