ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು
೮೩



ರಕ್ಕೆ ವಾಯುದಸೇವನಾರ್ಥವಾಗಿ ಹೋದನು ಎಲ್ಲರೂ ಒಂದು ನಾವೆಯನ್ನೆರಿ ಕುಳಿತುಕೊಂಡರು, ಸ್ವಲ್ಪ ಹೊತ್ತು ಆಕಡೆಯ ಈಕಡೆಯ ವರ್ತಮಾನಗಳು ಹೊರಟುಹೋದಮೇಲೆ ಬಾದಶಹನು ಪ್ರಾರಬ್ದ ಮತ್ತು ಉದ್ಯೋಗದ ಪ್ರಶ್ನೆಯನ್ನು ತೆಗೆದನು, ಮತ್ತು ಬೀರಬಲನಿಗೆ ಅನ್ನುತ್ತಾನೆ “ ಬೀರಬಲ ನೀನು ಪ್ರಾರಬ್ಧವೇ ಅಧಿಕವಾದದ್ದೆಂದು ಹೇಳಿದಮಾತು ನಿನ್ನ ಸ್ಮರಣೆಯ ಲ್ಲಿರುವದಷ್ಟೆ ? ” ಎಂದು ಕೇಳಿದನು. ಅದಕ್ಕೆ ಬೀರಬಲನು : ಅಹುದು ?? ಎಂದು ಹೇಳಿದನು. ಆಗ ಬಾದಶಹನಿಗೆ ಕ್ರೋಧವು ಬಂತು, ಅವನು ತನ್ನ ಅಂಗುಲಿಯಲ್ಲಿದ್ದ ಸುವರ್ಣದುಂಗುರವನ್ನು ನದಿಯಲ್ಲಿ ಒಗೆದು ಹೇಳುತ್ತಾನೆ ಬೀರಬಲ ! ನೀನು ಪ್ರಾರಬ್ಧ ಬಲದಿಂದ ಈ ಉಂಗುರವನ್ನು ಒಂದು ಮಾಸದೊಳಗಾಗಿ ಸಂಪಾದಿಸಿ ತೋರಿಸದಿದ್ದರೆ ನಿನಗೆ ಪ್ರಾಣದಂಡನೆಯನ್ನು ವಿಧಿಸುವೆನು' ಎಂದು ಅಪ್ಪಣೆ ಕೊಟ್ಟ ಕೂಡಲೆ ಸಭಾಸದರೆಲ್ಲರೂ ನಡುಗಹತ್ತಿದರು, ಬೀರಬಲನು ಸ್ವಸ್ಥ ಕುಳಿತುಕೊಂಡನು. ಮುದ್ರಿಕೆಯನ್ನು ಒಗೆದ ಸ್ಥಳದಲ್ಲಿ ನೀರು ಬಹಳ ಆಳವಾಗಿತ್ತು; ಮಂತ್ರಿಗಳೆಲ್ಲರೂ ಇಲ್ಲಿಂದ ಮುದ್ರಿಕೆಯು ಹೊರಹೊರಡುವ ಅಸಂಭವವು ಇದರಲ್ಲಿ ಬೀರಬಲನು ಸಾಯುವದೇ ನಿಶ್ಚಯವು ” ಎಂದು ತಿಳಿದುಕೊಂಡುಬಿಟ್ಟರು, ಬಾದಶಹನು ತಿರುಗಿಮನೆಗೆ ಹೋಗುವಮುಂದೆ ಅಲ್ಲಿ ಕೆಲವುಜನ ಸಿಪಾಯರನ್ನು ಕಾವಲಿಟ್ಟು ಬೀರಬಲನು ಇಲ್ಲಿಂದ ಮುದ್ರಿಕೆಯನ್ನು ತೆಗೆದುಕೊಂಡು ಹೋಗದಂತೆ ಜೋಕೆ ಯಿಂದ ಹಗಲು ಇರುಳು ಕಾಯುತ್ತಿರಬೇಕು” ಎಂದು ಆಜ್ಞಾಪಿಸಿ ಹಿಂದಿರುಗಿ ಅರಮನೆಗೆ ಬಂದುಬಿಟ್ಟನು ಬೀರಬಲನು ಪ್ರಾರಬ್ಧವನ್ನು ನಂಬಿಕೊಂಡು ಸ್ವಸ್ಥ ಚಿತ್ತದಿಂದ ಮನೆಯಲ್ಲಿ ಕುಳಿತುಕೊಂಡು ಬಿಟ್ಟನು, ಒಂದುಮಾಸವು ಕಳೆದುಹೋಯಿತು ಆಮೇಲೆ ಬಾದಶಹನು: - ಬೀರಬಲ್ಲ ! ಈಗಲಾದರೂ ಉದ್ಯೋಗವು ಶ್ರೇಷ್ಠವಾದದ್ದೆಂದು ಒಪ್ಪಿಕೋ ? ಅಂದರೆ ಜೀವದಿಂದ ಉಳಿದುಕೊಳ್ಳುತ್ತೀ ? ಒಂದುಮಾಸವು ಪೂರ್ತಿಯಾಗುವದಕ್ಕೆ ಇನ್ನು ಮೂರೇ ದಿವಸಗಳ ಅವಧಿಯು ಉಳಿದಿರುವದು ಎಂದು ಹೇಳಿದನು.

ಬೀರಬಲ-ಪ್ರಭುವೇ ? ಪ್ರಾರಬ್ಧ ಕ್ಕಿಂತ ಉದ್ಯೋಗವು ಎಂದೂ ಶ್ರೇಷ್ಟ ವಾಗಲಾರದು ಇನ್ನು ಮೂರುದಿವಸಗಳಲ್ಲಿ ಆ ಉಂಗುರವು ಯಾಕೆ ಸಿಗಬಾರದು !
ಈ ಉತ್ತರದಿಂದ ಬಾದಶಹನು ಅತಿ ಸಂತಪ್ತನಾದನು. ನಾಲ್ಕನೇದಿವಸ ಬಾದಶಹನು ಬೀರಬಲನನ್ನು ಕರೆಯಿಸಿ ಉಂಗುರವನ್ನು ಕೊಡುಯೆಂದು ಕೇಳಿದನು