ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೮೫



ನೋಡಿ ಬೀರಬಲನು ಆ ಮಾತಿಗೆ ಸಮ್ಮತಿಸಿದನು. ಒಬ್ಬನು ಮೀನವನ್ನು ಹಿಡಿದುಕೊಂಡು ಬರುವದಕ್ಕೆ ಯಮುನಾನದಿಗೆ ಓಡಿದನು. ಸ್ವಲ್ಪ ಹೊತ್ತಿ ನೊಳಗಾಗಿ ಒಂದು ಮೀನವನ್ನು ಹಿಡಿದುಕೊಂಡು ಬಂದು ಬೀರಬಲನಿಗೆ ಕೊಟ್ಟನು. ಆಗ ಅವನು ಚೂರಿಯಿಂದ ಆ ಮೀನದ ಹೊಟ್ಟೆಯನ್ನು ಸೀಳಲು ಅದರೊಳಗಿಂದ ಬಾದಶಹನ ಸುವರ್ಣ ಮುದ್ರಿಕೆಯು ಹೊರಬತ್ತು ಬಾದಶಹನು ಮೇಲುಪ್ಪರಿಗೆಯಲ್ಲಿ ಗವಾಕ್ಷದೊಳಗಿಂದ ವಧಸ್ಥಾನದ ಕಡೆಗೆ ನೋಡುತ್ತ ನಿಂತುಕೊಂಡಿದ್ದನು. ಆಗ ಬೀರಬಲನು ಮೀನವನ್ನು ಕೊಯ್ಯು ವದು ಅವನ ದೃಷ್ಟಿಗೆ ಬಿತ್ತು ಆದರೆ ಬೀರಬಲನಿಗೂ ಫಕೀರನಿಗೂ ನಡೆದ ಸಂಭಾಷಣವು ಮಾತ್ರ ಕೇಳಿಸಲಿಲ್ಲ ಮುದ್ರಿಕೆಯು ಹೊರಟ ಕೂಡಲೆ ಬಿರಬಲನು ಆ ಮತ್ಸ್ಯವನ್ನು ಕೆಳಗ ಚೆಲ್ಲಿ ಎದ್ದು ನಿಂತುಕೊಂಡು ಫಕೀರನನ್ನು ನೋಡಿದನು ಆದರೆ ಅವನು ಕಾಣಿಸಲಿಲ್ಲ ಆಗ ಬೀರಬಲನು ತನ್ನ ಸುತ್ತು ಮುತ್ತುಕೊಂಡಿದ್ದ ಕರ್ಮಚಾರಿಗಳನ್ನು ನೋಡಿ: ನನಗೆ ಇನ್ನೊಂದು ಸಾರೆ ಬಾದಶಹನನ್ನು ಕಾಣಬೇಕೆಂಬ ಇಚ್ಛೆಯು ” ಎಂದನು ಕೂಡಲೆ ಅವರು ಅವನನ್ನು ಕರೆದುಕೊಂಡು ಬಾದಶಹನ ಹತ್ತಿರ ಬಂದರು ಆಗ ಬಾದಶಹನು ತನ್ನ ಮನಸ್ಸಿನಲ್ಲಿ ಇವನು ಪ್ರಯತ್ನವು ಶ್ರೇಷ್ಟವಾದದ್ದು ಎಂದು ಒಪ್ಪಿಕೊಳ್ಳುವದಕ್ಕೆ ಬಂದಂತೆ ತೋರುತ್ತದೆ. ಆಗಲಿ ನಾನಂತೂ ಇವನಿಗೆ ಕ್ಷಮೆಯನ್ನು ಮಾಡಬಾರದು ಎಂದು ಯೋಚಿಸುತ್ತ ಕುಳಿತುಕೊಂಡನು ಬೀರಬಲನು ಬಾದಶಹನ ಸಮ್ಮುಖದಲ್ಲಿ ನಿಂತುಕೊಂಡು ಕೈಮುಗಿದನು.

ಆಗ ಬಾದಶಹನು-ಯಾಕೆ ಬೀರಬಲ್ಲ ! ಈಗ ಉದ್ಯೋಗವು ಶ್ರೇಷ್ಟವಾದದ್ದೆಂದು ಒಪ್ಪಿಕೊಳ್ಳುವದಕ್ಕೆ ಬಂದಂತೆ ತೋರುತ್ತದೆ ಈಗ ನಿನ್ನ ಪ್ರಾರ್ಥನೆಯು ಸಫಲವಾಗಲಾರದು.

ಬೀರಬಲ-ಪೃಥ್ವಿನಾಥ ? ನಾನು ಉದ್ಯೋಗವು ಶ್ರೇಷ್ಟವಾದದ್ದೆಂದು
ಒಪ್ಪಿಕೊಳ್ಳುವದಕ್ಕೆ ಬಂದಿರುವದಿಲ್ಲ ಈಗಲಾದರೂ ಪ್ರಾರಬ್ಧವೇ
ಅಧಿಕವಾದದ್ದೆಂದು ಹೇಳಲಿಕ್ಕೆ ಬಂದಿದ್ದೇನೆ.

ಬಾದಶಹ-(ಆಶ್ಚರ್ಯದಿಂದ) ಹಾಗಿದ್ದರೆ, ಪುನರಪಿ ನೀನು ನನ್ನ ದರ್ಶನಕ್ಕೆ ಬಂದದ್ದು ಯಾಕೆ !

ಬೀರಬಲ :-ಪ್ರಾರಬ್ಬವು ಶ್ರೇಷ್ಠವಾದದ್ದಿರುವದು ಎಂದು ನಿಮ್ಮನ್ನು ಒಡಂಬಡಿಸುವದಕ್ಕೆ.
ಬಾದಶಹ:- ಹೂ ಹೀಗೋ ?
ಬೀರಬಲ:- (ಮುದ್ರಿಕೆಯನ್ನು ಮುಂದಿಟ್ಟು )ಪ್ರಭುವೇ ! ತಮ್ಮ ಮುದ್ರಿಕೆ