ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೯೩



ಅವನು ರಾಕ್ಷಸನಿಗೆ ನಮಸ್ಕಾರಮಾಡಿ ಹೆ ದೇವ? ನನ್ನ ಅಪರಾಧವನ್ನು, ಕ್ಷಮಿಸು ನಿನ್ನ ಅಪ್ಪಣೆಯಮೇರೆಗೆ ನಡೆದುಕೊಳ್ಳುತ್ತೇನೆ. ” ಎಂದು ಬೇಡಿ ಕೊಳ್ಳಹತ್ತಿದನು. ಆಗ ಆ ರಾಕ್ಷಸರೂಪಿಯಾದ ಬೀರಬಲನು - ನಾನು ಹೇಳಿದಂತೆ ಕೇಳುವಿಯಾ? ಹಾಗಾದರೆ ನೀನು ಮೈಮೇಲಿನ ಎಲ್ಲ ವಸ್ತ್ರಗಳನ್ನು ತೆಗೆದುಚೆಲ್ಲಿ ನಗ್ನನಾಗಿ ಈ ನನ್ನ ಪಾದರಕ್ಷೆಗಳನ್ನು ತಲೆಯಮೇಲೆ ಹೊತ್ತು ಕೊಂಡು ಒಂದುನೂರು ಮೊಳದೂರ ಹೋಗಬೇಕು ಅಂದರೆ ನಾನು ನಿನಗೆ ಜೀವದಾನಕೊಡುತ್ತೇನೆ ” ಎಂದು ಹೇಳಿದನು ಬಾದಶಹನು ಆ ಮಾತಿಗೆ ಸಮ್ಮತಿಸಿದನು, ಆಮಾತು ಕೇಳಿ ರಾಕ್ಷಸ ರೂಪಿಯಾದ ಬೀರಬಲನ ಮನಸ್ಸಿನಲ್ಲಿ ದಯೆಹುಟ್ಟಿ ಹಾಗೆಯೇ ಹೋಗೆಂದು ಹೇಳಿ ಬಿಟ್ಟು ಬಿಟ್ಟನು. ಬಾದಶಹನು ಅಲ್ಲಿಂದ ಏಳುತ್ತ ಬೀಳುತ್ತ ಬಂದು ಪಟ್ಟಣಕ್ಕೆ ತಲುಪಿದನು, ಆದರೂ ಅವನ ಮನಸಿನೊಳಗಿಂದ ಆ ರಾಕ್ಷಸನ ಭಯವು ಕಡಿಮೆಯಾಗಲಿಲ್ಲ ಅದರಿಂದ ಅವನು ಅನ್ನ ನೀರುಗಳುನ್ನು ಸಹಾ ಬಿಟ್ಟು ಬಿಟ್ಟನು.
ಎರಡು ತಿಂಗಳುಗಳಾದ ಮೇಲೆ ಬೀರಬಲನು ಮನಗೆ ಬಂದನು ಈ ವರ್ತಮಾನವು ಬಾದಶಹನಿಗೆ ತಿಳಿದ ಕೂಡಲೆ, ಅವನು ಬೀರಬಲನನ್ನು ಕರೆಯಿಸಿಕೊಂಡನು. ಅವನು ಬಂದು ಬೆಟ್ಟಿಯಾದ ಕೂಡಲೆ ಬಾದಶಹನು ಬೀರಬಲ್ಲ ಬಲೆಯೊಳಗಿನ ಹಣ್ಣು ! ” ಎಂದನು ಆ ಕೂಡಲೆ ಬೀರಬಲನು ಪೃಥ್ವಿನಾಥ ! ಮಲವಿಸರ್ಜನೆಯ ಕಾಲಕ್ಕೆ ಬಂದದೇವರು ! ಎಂದು ಹೇಳಿದನು
ಈ ಮಾತು ಕಿವಿಗೆ ಬಿದ್ದಕೂಡಲೇ ಬಾದಶಹನು ಲಜ್ಜಿತನಾನು ಆ ದಿವಸದಿಂದ ಬಾದಶಹನು ತಿರುಗಿ ಆ ಮಾತನ್ನೇ ಬಿಟ್ಟುಬಿಟ್ಟನು. ಮುಂದೆ ಸ್ವಲ್ಪ ದಿವಸಗಳಾದ ಮೇಲೆ ಬೀರಬಲನು ಮಾಡಿದ ಕೃತಿಯು ಗೊತ್ತಾಗಲು ಮನಸಿನೊಳಗಿನ ಭಯವೆಲ್ಲ ಹೋಯಿತು. ಆನಂದದಿಂದ ಇರ ಹತ್ತಿದನು,

-(೩೫, ಅರ್ಧಬಿಸಿಲೂ, ಅರ್ಧನೆರಳೂ.)-

ಒಂದು ಸಮಯದಲ್ಲಿ ಬಾದಶಹನು ಬೀರಬಲನ ಮೇಲೆ ಕ್ರುದ್ಧನಾಗಿ ತನ್ನ ಪಟ್ಟಣದಿಂದ ಹೊರಗೆ ಹೋಗೆಂದು ಆಜ್ಞಾಪಿಸಿದನು. ಅದರಂತೆ ಬೀರಬಲನು ಬೇರೊಂದು ಗ್ರಾಮದಲ್ಲಿ ಹೋಗಿ ಗುಪ್ತದಿಂದ ಇರಹತ್ತಿದನು. ಮುಂದೆ ಕೆಲವು ದಿವಸಗಳು ಕಳೆದು ಹೋದಮೇಲೆ ಬೀರಬಲನು ಸ್ಮರಣೆಗೆ ಬಂದನು ಆಗ ಅವನು ಇರುವ ಸ್ಥಳವನ್ನು ಕಂಡು ಹಿಡಿಯಬೇಕೆಂದು, ಸೇವಕರನ್ನು ಕಳುಹಿಸಿ, ಬೇರೆ ಬೇರೆ ಪಟ್ಟಣಗಳಲ್ಲಿಯೂ; ಜನವಸತಿಯಲ್ಲಿಯೂ ಹುಡುಕಿಸಿದನು, ಆದರೆ ಎಲ್ಲಿಯೂ ಶೋಧವಾಗಲಿಲ್ಲ ಆಗ ಬಾದಶಹನು.-