ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು. -
೯೯


ಹ್ಮಣನ ಹತ್ತರ ತಂಬಿಗೆಯು ಇಲ್ಲದ್ದರಿಂದ ಅವನು ನೀರಡಿಸಿ ಇರಬೇಕಾಯಿತು, ಕತ್ತೆಗೆ ಮನಮುರಿ ಸಂಚಾರವಾಗದ್ದರಿಂದ ಅದು ಉದಾಸೀನತೆಯನ್ನು ಧರಿಸಿದೆ " ಎಂದು ವಿಸ್ತರಿಸಿ ಹೇಳಿದನು. ಬಾದಶಹನು ತಾನು ಮಾಡಿದ ಎರಡು ಪ್ರಶ್ನೆಗಳಿಗೆ ಸಮರ್ಪಕವಾದ ಒಂದೇ ಉತ್ತರವು ಬಂದದ್ದನ್ನು ನೋಡಿ ಸಂತೋಶ್ರಿತನಾದನು.

-[೪೫, ನಾಲ್ಕು ಪ್ರಶ್ನೆಗಳು.]-

ಒಂದು ಸಾರೆ ಬಾದಶಹನು ಬೀರಬಲನಿಗೆ ಕೇಳುತ್ತಾನೆ; - "ಮಳೆಗಾಲವನ್ನು ಯಾರು ಅಪೇಕ್ಷಿಸುವರು! ಬಿಸಿಲನ್ನು ಅಪೇಕ್ಷಿಸುವವರು ಯಾರು ವಾಕ್ಪುಟತೆಯನ್ನು ಯಾರು ಅಪೇಕ್ಷಿಸುವರು? ಯಾರು ಮೌನವಾಗಿರುವದನ್ನು ಅಪೇಕ್ಷಿಸುವರು! " ಈ ನಾಲ್ಕು ಪ್ರಶ್ನೆಗಳಿಗೆ ನಿನ್ನಿಂದ ಸಮರ್ಪಕ ಉತ್ತರವು ದೊರೆಯದಿದ್ದರೆ ನಿನಗೆ ಪ್ರಾಣದಂಡನೆಯನ್ನು ವಿಧಿಸುತ್ತೇನೆಂದು ಹೇಳಿದನು. ಆ ಕಡಲೆ ಬೀರಬಲನು;-
"ಮಾಲೀಚಾಹೈ ಬರಸನಾ, ಧೋಬಿಚಾಹೈ ಧೂಪ |
ಸಾಹಜುಚಾಹೈ ಬೋಲನಾ, ಚೋರಜುಚಾ ಧೂಪ"॥
ಬಾದಶಹ -ಈ ಪದ್ಯವನ್ನು ನೀನು ಒಳ್ಳೇ ಸರಸಾಗಿ ಹೇಳಿದಿ? ಆದರೆ ಅದರಿಂದ ನನಗೆ ಆಗತಕ್ಕಷ್ಟು ಸಂತೋಷವಾಗಲಿಲ್ಲ, ಅದರಿಂದ ಮತ್ತೊಂದು ಪ್ರಕಾರವಾಗಿ ಹೇಳು!

ಅತಿಕಾಭಲಾ ನ ಬರಸನಾ, ಅತಿಕ್ ಭಲೇ ನ ಧೂಪ ।
ಅತಿಕಾಭಲಾನ ಬೋಲನಾ, ಅತಿಕೀಭವೀ ನ ಚೂವ ॥

-(೪೬. ಯಾರು ಏನನ್ನು ಮಾಡಲಾರರು! )

ಒಂದುದಿವಸ ಬಾದಶಹನು ರಾಜಕಾರ್ಯಗಳಿಂದ ನಿವೃತ್ತನಾಗಿ ವಿನೋದದಿಂದ ಮಾತಾಡುತ್ತಕುಳಿತಿರಲು, ಬಾದಶಹನಿಗೆ ಒಂದು ಪದ್ಯವು ಸ್ಮರಣೆಗೆ ಬಂತು ಅದುಯಾವದೆಂದರೆ;

ಕಹಾನ ಅಬಲಾ ಕರಸಕೈ, ಕಹಾನಸಿಂಧು ಸಮಯ।
ಕಹಾನ ಪಾವಕಮೆ ಜಲೈ ಕಾಹಿಕಾಲ ನಹಿಖಾಯ॥

ಈ ವದ್ಯದ ಉತ್ತರವನ್ನು ಈಗಿಂದೀಗ ಹೇಳಬೇಕೆಂದು ಬೀರಬಲನಿಗೆ ಆಜ್ಞಾಪಿಸಿದನು. ಬೀರಬಲನು - ಸುತನಹಿ ಅಬಲಾ ಕರಸಕೈ ಯಶನಹಿಸಿಂಧು ಸಮಾಯ। ಧರ್ಮನಾವಕಮೆ ಜಲೈ: ನಾಮಕಾಲ ನಹಿಖಾಯ॥ " ಎಂಬ ಪದ್ಯದಿಂದ ಉತ್ತರಕೊಟ್ಟನು. ಈ ಉತ್ತರದಿಂದ ಬಾದಶ