ಮುಸಲ್ಮಾನ ಜಾತಿಯಲ್ಲಿ ಒಳ್ಳೇ ಪ್ರಸಿದ್ಧ ವಿದ್ವಾಂಸನಾಗಿಯೂ ಪ್ರತಿಷ್ಠಿತ ಮಂತ್ರಿಯಾಗಿಯೂ ಇದ್ದ ಶೇಖಫೈಜಿ ಎಂಬವನು ಖುರಾನಕ್ಕೆ "ಸವಾಹತ ಉಲ್ ಇಲಹಾಮ್ ” ಎಂಬ ಹೆಸರಿನ ಟೀಕಾಗ್ರಂಥವನ್ನು ಬರೆದನು. ಅದರಲ್ಲಿ ಬಿಂದುವಿಲ್ಲದ ಶಬ್ಬಗಳೇ ಬಂದಿದ್ದವು, ಇಂಥ ಅಮೌಲಿಕ ಗ್ರಂಥವನ್ನು ಹಿಂದಕ್ಕೆ ಯಾರೂ ರಚಿಸಿದ್ದಿಲ್ಲ; ಯಾಕಂದರೆ ಫಾರಸೀ, ಮತ್ತೂ ಅರಬ್ಬಿ ಅಕ್ಷರಗಳಲ್ಲಿ ಬಿಂದುವಿಲ್ಲದ ಅಕ್ಷರಗಳು ಹದಿನೈದು, ಬಿಂದುವಿನಿಂದ ಕೂಡಿದ ಅಕ್ಷರಗಳು ಹದಿನೆಂಟು ಇರುವವು ಈ ಕೆಲಸವು ಒಳ್ಳೆ ಪ್ರಶಂಸಾರ್ಹವಾಗಿತ್ತು, ಆದರೆ "ಬಿಸಮಿಲ್ಲಾ” ಎಂಬ ಶಬ್ದವನ್ನು ಬರೆಯುವದಕ್ಕೆ ಅವನಿಗೆ ಗ್ರಂಥಾರಂಭದಲ್ಲಿಯೇ ಸಂದೇಹವುಂಟಾಯಿತು. ಯಾಕಂದರೆ- ಈ ಶಬ್ಬವನ್ನು ಬರೆಯುವದು ಬಹುಕಾಲದಿಂದ ಮುಸಲ್ಮಾನರಲ್ಲಿ ಪ್ರಚಾರವಿತ್ತು ಆದರೆ ಆ ಶಬ್ಬವು ಬಿಂದುವಿಲ್ಲದೆ ಬರಿಯಲಿಕ್ಕೇ ಬರುವಂತೆಯಿದ್ದಿಲ್ಲ ಅದರಿಂದ ಅವನು ಬಹಳಚಿಂತೆಗೊಳಗಾದನು. ಕಡೆಗೆ ಅವನು ಬೀರಬಲನ ಬಳಿಗೆ ಬಂದು, "ಮಿತ್ರವರ್ಯ ? ನಾನು ಬಿಂದುವಿಲ್ಲದ ಶಬ್ದಗಳಿಂದ ಖುರಾನಕ್ಕೆ ಟೀಕೆಯನ್ನು ಬರೆದಿದ್ದೇನೆ. ಆದರೆ ಗ್ರಂಥಾರಂಭದಲ್ಲಿ "ಬಿಸಮಿಲ್ಲಾ", ಎಂಬ ಶಬ್ಬವನ್ನು ಹಾಕುವ ಪದ್ಧತಿಯು ನಮ್ಮ ಜನರಲ್ಲಿ ಉಂಟು; ಆದರೆ ಆ ಶಬ್ಬವು ಬಿಂದುವಿಲ್ಲದೆ ಬರೆಯಲಿಕ್ಕೆ ಬರುವದಿಲ್ಲ. ಆದರಿಂದ ಆ ಸ್ಥಳದಲ್ಲಿ ಯಾವ ಶಬ್ಧದ ಯೋಜನೆಮಾಡಲಿ, ಎಂದು ಕೇಳಿದನು, ಬೀರಬಲನು ಒಳ್ಳೇ ದೂರದರ್ಶಿಯಾಗಿದ್ದದರಿಂದ ಆ ಕೂಡಲೆ "ಕಲಮಾ, ಎಂದು ಬರೆ;" ಎಂದು ಹೇಳಿದನು. ಆಗ ಪೈಜಿಯು ಅವನ ಜಾಣತನಕ್ಕೆ ತಲೆದೂಗಿದನು. “ ಕಲಮಾ ಎಂಬ ಶಬ್ಬದಲ್ಲಿ ಬಿಂದುವೇ ಬರುವಂತೆ ಇದ್ದಿಲ್ಲ, ಕಡೆಗೆ ಪೈಜಿಯು "ಪಂಡಿತ ಮಹಾಶಯ ? ಈ ಒಂದೇ ಶಬ್ದವನ್ನು ನೀನು ನನಗೆ ಹೇಳಿದ್ದರಿಂದ ಈ ಗ್ರಂಥದಲ್ಲಿ ಗುರುವಿನ ಸ್ಥಾನದಲ್ಲಿ ನಿನ್ನ ಹೆಸರನ್ನು ಬರೆಯುತ್ತೇನೆ ಎಂದು ಹೇಳಿದನು.
ಒಂದು ದಿವಸ ಬಾದಶಹನು ಓಲಗದಲ್ಲಿ ಕುಳಿತುಕೊಂಡಿದ್ದನು. ರಾಜಕಾರ್ಯಗಳ ವಿಚಾರಣೆಯ ನಡೆದಿತ್ತು ? ಆಷ್ಟರಲ್ಲಿ ಬೀರಬಲನು ಸಭಾಸ್ಥಾನಕ್ಕೆ ಬಂದನು ಅದನ್ನು ಕಂಡು ಬಾದಶಹನು; “ಕ್ಷೀರವು ಯಾವ