ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೫೯



-[೧೫೨ ಬಾದಶಹನು ನಗುವಂತೆ ಮಾಡಿದ್ದು.] —
ಒಂದು ದಿವಸ ಬಾದಶಹನು ಬೀರಬಲನನ್ನು ಕುರಿತು, " ಈ ದಿವಸ ನೀನು ನನ್ನನ್ನು ನಗಿಸಿದರೆ ನಿನಗೆ ಅಧಿಕವಾದ ಪಾರಿತೋಷಕವನ್ನು ಕೊಡುವೆನು ” ಎಂದನು. ಬೀರಬಲನು ಹಾಸ್ಯರಸಯುಕ್ತವಾದ ಎಷ್ಟೋ ಪ್ರಬಂಧಗಳನ್ನು ಹೇಳಿದನು. ಆದರೆ ಬಾದಶಹನು ನಗಬಾರದೆಂದು ಸಂಕಲ್ಪ ಮಾಡಿಕೊಂಡು ಕುಳಿತಿದ್ದನು. ಅಂತ್ಯದಲ್ಲಿ ಬೀರಬಲನು ಪರಾಜಿತನಾಗಿ ಬಾದಶಹನ ಕಿವಿಯ ಹತ್ತರ ತನ್ನ ಮುಖವನ್ನು ಒಯ್ದು "ಈ ದಿವಸ ನೀವು ನಗುವಿರೋ ಇಲ್ಲವೋ ಎಂಬದನ್ನು ಸತ್ಯವಾಗಿ ಹೇಳಿಬಿಡಿರಿ; ನೀವು ನಗದಿದ್ದರೆ ನಾನು ಗುದುಗುಲಿಯನ್ನು ಮಾಡುವೆನು” ಎಂದನು ಈ ಮಾತು ಕಿವಿಗೆ ಬಿದ್ದ ಕೂಡಲೆ ಬಾದಶಹನು ನಗುತ್ತ ಎದ್ದು ಅಧಿಕವಾದ ಉಚಿತವನ್ನಿತ್ತನು. ... ... ... ... -[೧೫೩, ಪ್ರಸಂಗಾವ ಧಾನವು ಅಧಿಕವಾದದ್ದು.]- ಒಂದುದಿವಸ ಬೀರಬಲನು ಯಮುನಾ ನದಿಯಿಂದ ಸ್ನಾನಮಾಡಿಕೊಂಡು ಬರುತ್ತಿದ್ದನು ಆಗ ಬಾದಶಹನು ಅವನ ಪ್ರಸಂಗಾವಧಾನವನ್ನು ಪರೀಕ್ಷಿಸಬೇಕೆಂದು ಯೋಚಿಸಿ ಅವನ ಮೈಮೇಲೆ ಮತ್ತಗಜವನ್ನು ಬಿಡಿಸಿದನು, ಮಾರ್ಗವು ಬಹಳೇ ಇಕ್ಕಟ್ಟಾಗಿತ್ತು ಪಲಾಯನಮಾಡುವದಕ್ಕೂ ಸಹ ಸಂಧಿಯು ದೊರೆಯದೇ ಹೋಯಿತು, ಅದರಿಂದ ಆತ್ಮರಕ್ಷಣೆಯನ್ನು ಹ್ಯಾಗೆ ಮಾಡಿಕೊಳ್ಳಬೇಕೆಂದು ಸುತ್ತು ಮುತ್ತು ನೋಡುವಷ್ಟ ರಲ್ಲಿ ಒಂದು ಮಲಗಿದ ಶುನಕವು ದೃಷ್ಟಿಗೆ ಬಿತ್ತು ಆ ಕೂಡಲೇ ಬೀರಬಲನು ಆ ಗ್ರಾಮ ಸಿಂಹದ ಎರಡು ಹಿಂಗಾಲುಗಳನ್ನು ಹಿಡಿದು ಗಜದ ಸೊಂಡಿಯಮೇಲೆ ಹೊಡೆದನು. ನಾಯಿಯು ಗಜದ ಗಂಡಸ್ಥಳದಲ್ಲಿ ಬಿದ್ದ ಕೂಡಲೇ ಬೊಗಳುತ್ತಾ ಉಗುರುಗಳಿಂದ ಗಾಯವನ್ನು ಮಾಡಿತು, ಮದ್ದಾನೆಯು ಗಾಬರಿಯಾಗಿ ಹಿಂದಕ್ಕೆ ಸರಿಯಿತು, ಅವಸರವನ್ನು ನೋಡಿಕೊಂಡು ಬೀರಬಲನು ಪಲಾ ಯನಮಾಡಿದನು, ಬೀರಬಲನ ಪ್ರಸಂಗಾವಧಾನವು ಅಧಿಕವಾದದ್ದೆಂದು ಬಾದಶಹನು ಒಪ್ಪಿಕೊಂಡನು.
೧೫೪ ಯಾವಪುಷ್ಪವು ಶ್ರೇಷ್ಠವಾದದ್ದು ? ಯಾವದಂತವು ಶ್ರೀಷ್ಠವಾದದ್ದು? ಯಾವಪುತ್ರನು ಶ್ರೇಷ್ಠನು ! ರಾಜರಲ್ಲಿ ಶ್ರೀ ವ್ಯತೆಯನ್ನು ಪಡೆದವನು ಯಾವನು ! ಯಾವಗುಣವು ಪ್ರಶಂಸಾರ್ಹವಾದದ್ದು!ಒಂದುದಿವಸ ಬಾದಶಹನು ಎಲ್ಲಸಭಾಸದರಿಗಿಂತಲೂ ಮುಂಚಿತವಾಗಿ