ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೭೪
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.


ಕಿಂಚಿತ್ಕಾಲದಮೇಲೆ ಗೃಹದ ಯಜಮಾನನು ಊಟ ಉಡಿಗೆಗಳನ್ನು ತೀರಿಸಿಕೊಂಡು ಬಾದಶಹರೊಡನೆ ಮಾತುಕಥೆಗಳನ್ನಾಡುತ್ತ ಕುಳಿತುಕೊಂಡನು. ಆಗ ಬಾದಶಹನು “ ನಿನ್ನೆಯದಿವಸ ನಿಮ್ಮ ಈ ಪಟ್ಟಣದಲ್ಲಿ ಬಾದಶಹನು ಸಾರಿಸಿದ ಡಂಗುರದ ಅಭಿಪ್ರಾಯವನ್ನು ಕೇಳಿ ನನಗೆ ಪರಮ ಆಶ್ಚರ್ಯ ವಾಯಿತು, ಈಪ್ರಕಾರದ ರೂಢಿಯು ಪ್ರತಿಮಾಸದಲ್ಲಿ ಇರುವದೋ ಅಥವಾ ನಿನ್ನೆ ಒಂದೇ ದಿವಸವೋ ” ಎಂದು ಪ್ರಶ್ನೆ ಮಾಡಿದನು. ಆಗ ಗೃಹದೊಡೆಯನು “ ಇಲ್ಲ; ನಿನ್ನೆ ಯಾಕೆ ಈಪ್ರಕಾರ ಡಂಗುರವನ್ನು ಸಾರಿಸಿದನೋ ತಿಳಿಯಲಿಲ್ಲ ” ಎಂದನು. ಬಾದಶಹ " ನಿಮ್ಮ ಬಾದಶಹನು ಇಷ್ಟು ಹಾಲಂನು ತೆಗೆದುಕೊಂಡು ಏನುಮಾಡುವನು ” ಎಂದು ಪುನಃ ಕೇಳಿದನು ಅದಕ್ಕೆ ಗೃಹದ ಯಜಮಾನನು " ಅವನು ಏನಾದರೂ ಮಾಡಲೊಲ್ಲನೇಕೆ ! ಅದರ ಸಂಗತಿಯು ನನಗೆಬೇಡ, ನಾನಂತೂ ಸತ್ಯವಾಗಿ ಹೇಳುತ್ತೇನೆ. ಹಾಲುಹಾಕುವದಕ್ಕೆ ಪ್ರತಿಯಾಗಿ ನಾನು ಒಂದು ಕೊಡ ನೀರನ್ನು ಹಾಕಿ ಬಂದೆನು, ಸಾವಿರಾರುಕೊಡ ಹಾಲಿನಲ್ಲಿ ನಾನೊಬ್ಬನು ಒಂದು ಕೊಡ ನೀರನ್ನು ಹಾಕಿದರೆ ಅದನ್ನು ಯಾರು ಗೊತ್ತು ಹಿಡಿಯುತ್ತಾರೆ ?” ಎಂದನು. ಈಮಾತಿಗೆ ಬಾದಶಹನು "ವಾಹಾವ್ವಾ ; ವಾಹವ್ವಾ ; ಒಳ್ಳೇ ಶ್ರೇಷ್ಠವಾದ ಯುಕ್ತಿಯು. ಇರಲಿ; ಈ ಸಂಗತಿಯು ಬಾದಶಹನಿಗೆ ತಿಳಿದರೆ ನಿಮ್ಮ ಗತಿಯೇನಾಗುವದೆಂಬುದನ್ನು ವಿಚಾರಿಸಿದಿರಾ?” ಎಂದು ಕೇಳಿದನು. ಆಗ ಗೃಹಸ್ವಾಮಿಯು ಈ ಸಂಗತಿಯು ಬಾದಶಹನಿಗೆ ತಿಳಿಯುವದು ಅಸಾಧ್ಯವು ಎಂದನು ಆ ಕೂಡಲೇ ಬಾದಶಹನು ತನ್ನ ಮೈಮೇಲೆ ಇದ್ದ ಬಟ್ಟೆಗಳನ್ನು ತೆಗೆದುಹಾಕಿ ತನ್ನ ನಿಜಸ್ವರೂಪವನ್ನು ತೋರಿಸಿದನು, ಆ ಕೂಡಲೆ ಗೃಹದ ಯಜಮಾನನು ಗಾಬರಿಯಾದನು ಮುಖವು ಕಳೆಗುಂದಿತು, ಮುಖದಿಂದ ಶಬ್ದಗಳು ಹೊರಡದಾದವು; ಅದನ್ನು ನೋಡಿ ಬಾದಶಹನು ನೀನು ಅಂಜಬೇಡ, ನಿನ್ನ ಕೂದಲುಸಹ ಕೊಂಕಾಗಲಾರದು; - ಯಾಕಂದರೆ ನೀನು ಮಾಡಿದ ಅಪರಾಧವನ್ನು ನಿನ್ನ ಮುಖದಿಂದಲೇ ಸ್ವೀಕಾರಮಾಡಿದ್ದೇ ! ನಾನು ಪ್ರತ್ಯಕ್ಷವಾಗಿ ಬಂದು ಈ ವಿಷಯದಲ್ಲಿ ನಿನಗೆ ಪ್ರಶ್ನೆ ಮಾಡಿದ್ದರೆ ನೀನು ನಿಜಸಂಗತಿಯನ್ನು ಪ್ರಕಟಪಡಿಸುತ್ತಿದ್ದೀಯಾ ? ನನಗೆ ಕಾರ್ಯಂತರಕ್ಕಾಗಿ ಈ ವಿಷಯವನ್ನು ಪರೀಕ್ಷಿಸಿ ನೋಡಬೇಕಾಗಿ ಬಂದದರಿಂದ ನಾನು ಈಪ್ರಕಾರ ಪ್ರಚ್ಛನ್ನ ವೇಷ ದಿಂದ ಬಂದಿದ್ದೆನು ಎಂದುಹೇಳಿ, ಪುನಃ ಪ್ರವಾಸಿಗನಂತೆ ವೇಷ ಧಾರಣಮಾಡಿಕೊಂಡು ಅಲ್ಲಿಂದ ಹೊರಬಿದ್ದು ಮತ್ತೊಬ್ಬ ಧನಾಡ್ಯನಗೃಹಕ್ಕೆ ಹೋದನು ಆ ಪಟ್ಟಣದಲ್ಲಿ ಅವನು ಬಹಳೇ ದಾತೃವೆಂದು ಪ್ರಸಿದ್ಧಿಯನ್ನು ಹೊಂದಿ