ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
(೩೬)
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೮೧


ಯೊಳಗೆ ಹಾಕಬೇಕೆಂದು ಬಾದಶಹನು ಬೊಗ್ಗಿದನು ಆದರೆ ತೈಲವು ಪಸರಿ ಸಿದ್ದರಿಂದ ಅವನಪ್ರಯತ್ನವು ಸಾಧ್ಯವಾಗಲಿಲ್ಲ, ಈ ಸಮಯದಲ್ಲಿ ಬೀರಬ ಲನ ದೃಷ್ಟಿಯು ಬಾದಶಹನಮೇಲೆ ಬಿತ್ತು ಆಗ ಬಾದಶಹನು ಮನಸ್ಸಿನಲ್ಲಿ ಬೀರಬಲನು ಈ ಸಂಗತಿಯ ವಿಷಯವಾಗಿ ಎಂದಾದರೂ ಹಂಗಿಸದೆ ಬಿಡಲಿ ಕ್ಕಿಲ್ಲ ಎಂದು ನಿಶ್ಚಯಿಸಿಕೊಂಡನು. ಸಭಾವಿಸರ್ಜನೆಯಾಯಿತು ಸರ್ವರೂ ತಮ್ಮ ತಮ್ಮ ಗೃಹಗಳನ್ನು ಕುರಿತು ಗಮನಮಾಡಿದರು.
ಮರುದಿವಸ ತನ್ನ ದಾತೃತ್ವವನ್ನು ವ್ಯಕ್ತಪಡಿಸಬೇಕೆಂದು ಬಾದಶ ಹನು ಒಂದು ಹೌದನ್ನು ಸುಗಂಧತೈಲದಿಂದ ತುಂಬಿಸಿ, ಬೇಕಾದವರು ಬಂ ದು ತೈಲವನ್ನು ತೆಗೆದುಕೊಂಡು ಹೋಗಬಹುದೆಂದು ಡಂಗುರವನ್ನು ಸಾರಿ ಸಿದನು. ಆಮೇಲೆ ಈ ಸಮಾರಂಭವನ್ನು ನೋಡಬೇಕೆಂದು ಬೀರಬಲನನ್ನು ಕರೆದುಕೊಂಡು ಆ ಸ್ಥಳಕ್ಕೆ ಬಂದನು, ಬಾದಶಹನ ಆಶಯವು ಬೀರಬಲನಿಗೆ ವಿದಿತವಾಯಿತು ಆಗ ಬಾದಶಹನು. " ಬೀರಬಲ್ಲ ' ಎಂಥ ಆನಂದದ ಸಮ ಯವು ನೋಡಿದಿಯಾ ” ಎಂದನು. ಆಗ ಬೀರಬಲನು ಮುಕುಳಿ ತಹಸ್ತನಾಗಿ " ನರವರ ! ಅಪರಾಧವನ್ನು ಕ್ಷಮಿಸಬೇಕು; ಬಿಂದುವಿನಿಂದ ಆಗಿಹೋದ ಕೆಲಸವು ಹೌದಿನಿಂದಲೂ ಬರಲಾರದು, ಅಡಿಕೆಗೆ ಹೋದ ಮಾನವು ಆನೆಕೊ ಟ್ಟರೂ ಬರದು ” ಎಂಬ ಸಾಮತಿಯನ್ನು ಕೇಳಿಲ್ಲವೇ ಎಂದನು, ಈ ಮಾ ತನ್ನು ಕೇಳಿದಕೂಡಲೆ ಬಾದಶಹನಿಗೆ ಅತಿಶಯವಾದ ಕ್ರೋಧವು ಬಂತು, ಬೀರಬಲನ ಅಧಿಕ ಪ್ರಸಂಗತನದಿಂದ ತನಗೆ ಲಘುತ್ವವು ಬರುವದೆಂದು ನಿಶ್ಚ ಯಿಸಿದನು. ಆದರೆ ತನ್ನಿಂದಲೇ ಲಘುಕಾರ್ಯವು ಸಂಘಟ್ಟಿಸಿದ್ದರಿಂದ ಕ್ರೋ ಧವನ್ನು ಪ್ರಕಟೀಕರಿಸಲಿಲ್ಲ.
ಮರುದಿವಸವೇ ಬೀರಬಲನನ್ನು ಓಲಗಕ್ಕೆ ಬರಗೊಡಬೇಡಿರೆಂದು ದ್ವಾರ ರಕ್ಷಕರಿಗೆ ಆಜ್ಞಾಪಿಸಿದನು.
ಬಾದಶಹನ ಕ್ರೋಧವು ಇಳಿದಮೇಲೆ ತಾನೇ ಕರೆಯಕಳುಹುವನೆಂ ದು ತಿಳಿದು, ಬೀರಬಲನು ತನ್ನ ಮನೆಗೆ ಹೊರಟುಹೋದನು. ಎಂಟು ದಿವಸ ಗಳಾಗಿ ಹೋದವು ಬಾದಶಹನಿಂದ ಆಹ್ವಾನವು ಬರಲಿಲ್ಲ ಅದರಿಂದ ಬೀರಬ ಲನಿಗೂ ಕೋಪವು ಬಂದಿತು. ತಾನುಹೋದ ಸಂಗತಿಯನ್ನು ಪ್ರಕಟೀಕರಿ ಸದೆ ಮಾಳವಪ್ರಾಂತಕ್ಕೆ ಹೊರಟುಹೋದನು, ಅಲ್ಲಿ ಒಂದು ಜನವಸತಿಯ ಲ್ಲಿ ಒಬ್ಬ ಸಧನ ಮನುಷ್ಯನ ಆಶ್ರಯವನ್ನು ಪಡೆದು, ತನ್ನ ಗುಣವನ್ನೂ ನಿಜವಾದ ನಾಮಧೇಯವನ್ನೂ ವ್ಯಕ್ತಪಡಿಸದೆ ಗುಪ್ತರೀತಿಯಿಂದ ಇರಹ ತ್ರಿದನು.