ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೯೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.

ಬಾದಶಹನು ಅಪ್ಸರೆಯನ್ನು ಕಂಡು ಮಾತನಾಡಿ ಬರಬೇಕೆಂದು ಆತುರಪಡ ಹತ್ತಿದನು, ದೂರದರ್ಶಿಯಾಗಿದ್ದ ಬೀರಬಲನು ಅವನ ಮನದಾತುರವನ್ನು ಕಂಡು:- " ಪೃಥ್ವಿನಾಥ ! ತಾವೂ ತಮ್ಮ ಅನುಯಾಯಿಗಳು ಭೂಲೋ ಕಧ ಅಸ್ಥಿರವಾದ ವಸ್ತ್ರಭೂಷಣಗಳಿಂದ ಮಂದಿತರಾಗಿರುವಿರಿ, ಆದ್ದರಿಂದ ಅವುಗಳನ್ನು ತೆಗೆದಿಟ್ಟು ಸ್ವರ್ಗಲೋಕದ ವಸ್ತ್ರಾಭರಣಗಳನ್ನು ಧರಿಸಬೇಕು ನಾನು ಅವುಗಳನ್ನು ನನ್ನ ಸಂಗಡ ತೆಗೆದುಕೊಂಡುಬಂದಿದ್ದೇನೆ ಸ್ವರ್ಗಿಯ ವಸ್ತ್ರಾಭರಣಗಳು ನಾಶಹೊಂದತಕ್ಕವಲ್ಲ; ” ಎಂದು ಹೇಳಿ ಬಾದಶಹನ ವಸ್ತ್ರಆಭರಣಗಳನ್ನು ತೆಗೆಯಿಸಿ ಇಟ್ಟು ಹೊಸಬಟ್ಟೆಗಳನ್ನು ಕೊಟ್ಟನು ಅದ ರಿಂದ ಬಾದಶಹನ ಲಜ್ಜಾ ಭಂಗವಾಗುವಂತೆ ಇದ್ದಿಲ್ಲ, ಆಮೇಲೆ ನೂತನಮಂ ತಿಯನ್ನುದ್ದೇಶಿಸಿ- ಮಾನ್ಯವರ ? ತಾವೂ ತಮ್ಮ ಬಟ್ಟೆಗಳನ್ನು ತೆಗೆದಿಟ್ಟು ಸ್ವರ್ಗಿಯ ಬಟ್ಟೆಗಳನ್ನು ಧಾರಣಮಾಡಿಕೊಳ್ಳಬೇಕು ಎಂದು ವಿನಯದಿಂದ ಹೇಳಿದನು ಅದನ್ನು ಕೇಳಿ ಮಂತ್ರಿಯು ತನ್ನ ಮನಸ್ಸಿನಲ್ಲಿ ಈ ಸ್ವರ್ಗಿಯ ಬ ಟ್ಟೆಗಳನ್ನು ಧಾರಣಮಾಡಿಕೊಳ್ಳುವದೆಂದರೆ ನಗ್ನರಾಗಬೇಕೆಂದಹಾಗಾಯಿತು ಯಾಕಂದರೆ ಬಟ್ಟೆಗಳೇ ಕಂಡುಬರುವದಿಲ್ಲ ಬಟ್ಟೆಗಳು ಎಲ್ಲಿಅವೆ ಎಂದು ಪ್ರ ಶ್ನೆ ಮಾಡಿದರೆನನಗೆ ವರ್ಣಸಂಕಲ್ಪವುಬರುತ್ತದೆ ಈ ಪ್ರಕಾರಮಾನಗೇಡಿಯಾ ಗುವದಕ್ಕಿಂತಲೂ ನಗ್ನವಾಗುವದೆ ಮೇಲೆಂದು ಯೋಚಿಸಿ ತನ್ನ ಯಾವತ್ತು ಬಟ್ಟೆಗಳನ್ನು ತೆಗೆದು ಚೆಲ್ಲಿ ಸ್ಪರ್ಗಿಯ ಬಟ್ಟೆಗಳನ್ನು ಧರಿಸಿಕೊಳ್ಳುವವನಂತೆ ನಟಿಸಿ ದಿಗಂಬರನಾಗಿ ಕುಳಿತುಕೊಂಡನು ಅವನು ಒಂದು ಕೌಪೀನವನ್ನು ಮಾತ್ರ ಧಾರಣಮಾಡಿದ್ದನು, ಮಂತ್ರಿಯು ದಿಗಂಬರನಾದದ್ದನ್ನು ಕಂಡು, ಎಲ್ಲರೂ ಹಾಸ್ಯ ಮಾಡಹತ್ತಿದರು ಆದರೆ ತಾವು ಬಹಳನಕ್ಕರೆ ತಮ್ಮ ಪಾಲಿಗು ವರ್ಣಸಂಕರದೋಷವು ಬರುವದೆಂಬ ಭಯದಿಂದ "ತೇರೀಭೀಚುವ , ಔರ ಮೇರಿಭೀಚುವ” ಎಂಬ ಸಾಮತಿಯಂತೆ ಮನವನ್ನು ಧಾರಣಮಾಡಿದರು ನೂತನ ಮಂತ್ರಿಯು ತನ್ನ ಸ್ಥಾನದಲ್ಲಿ ಮಂಡಿತವಾದಮೇಲೆ ಉಳಿದ ಯಾ ವತ್ತರಿಗೂ ಸ್ವರ್ಗೀಯ ಬಟ್ಟೆಗಳನ್ನು ಕೊಟ್ಟು, ಕೌಪೀನಾ ವಶಿಷ್ಟರನ್ನಾ ಗಿ ಮಾಡಿ ತಾರ ತಮ್ಯಾನುಸಾರವಾಗಿ ಕುಳ್ಳಿರಿಸಿದನು ಬಾದಶಹನು ದಿಗಂ ಬರರಾಗಿದ್ದ ತನ್ನ ಅನುಯಾಯಿಗಳನ್ನು ಅವಲೋಕಿಸಿ, ಮನಸ್ಸಿನಲ್ಲಿ ಸ್ವರ್ಗದ ಚರಿತ್ರವು ಅತ್ಯದ್ಭುತವಾದದ್ದು ” ಎಂದು ನಿಶ್ಚಯಿಸಿಕೊಂಡು, ಬೀರ ಬಲನನ್ನು ಕುರಿತು-ಬೀರಬಲ್ಲ ! ಯಾವತ್ತರೂ ಸ್ವರ್ಗೀಯ ಬಟ್ಟೆಗಳನ್ನು ಧಾರಣಮಾಡಿಕೊಂಡರೇ? ” ಎಂದು ಕೇಳಿದನು ಅದಕ್ಕೆ ಬೀರಬಲನು - ಜೀ ಹಾ ! ಎಲ್ಲರೂ ಸಿದ್ಧರಾಗಿದ್ದಾರೆ” ಎಂದಕೂಡಲೆ, ಅಪ್ಸರೆಯ ಸಾನ್ನಿಧ್ಯದ