ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೩೬
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.


ಲನು ಈ ಪದಾರ್ಥಗಳ ಶೋಧಾರ್ಥವಾಗಿ ಒಂದು ಲಕ್ಷರೂಪಾಯಿಗಳನ್ನು ಬೊಕ್ಕಸದೊಳಗಿಂದ ತೆಗೆದುಕೊಂಡು ವರ್ತಕನ ವೇಷದಿಂದ ರೋಹಸೇನ ನ ರಾಜಧಾನಿಯನ್ನು ಕುರಿತು ತೆರಳಿದನು. ಅಲ್ಲಿ ಹೋಗಿ ತಲುಪಿದ ಮೇಲೆ ಕೊತವಾಲನ ಮನೆಯ ಹತ್ತಿರ ಒಂದು ಗ್ರಹವನ್ನು ಕ್ರಯಕ್ಕೆ ತೆಗೆದು ಕೊಂಡು ಅದರಲ್ಲಿ ತನ್ನ ಪ್ರಸ್ತಾನವನ್ನಿಟ್ಟು ವ್ಯವಹಾರವನ್ನು ಆರಂಭಿಸಿ ದನು ಆಮೇಲೆ ಆ ನಗರದ ಕೊತವಾಲ ನೊಡನೆ ಸ್ನೇಹವನ್ನು ಇಟ್ಟು ದಿನಾಲು ಅವನನ್ನು ತನ್ನ ಮನೆಗೆ ಊಟಕ್ಕೆ ಕರೆಯೋಣ, ದಾನ, ಮಾನಾ ದಿಗಳಿಂದ ಸತ್ಕರಿಸೋಣ ಮೊದಲಾದ ಸಾಧನಗಳಿಂದ ಆಸ್ನೇಹವನ್ನು ವೃದ್ಧಿ ಪಡಿಸಿದನು. ಆಗ ಕೊತವಾಲನು ನಗರದಲ್ಲಿ ಹೊಸದಾಗಿಬಂದ ಕಲಾ ವಂತಿನಿಯರನ್ನು ಕರೆದುಕೊಂಡು ಬಂದು, ಗಾಯನ ವಾದನಗಳನ್ನು ಮಾ ಡಿಸಿ ಈ ಸಾವುಕಾರನ ಕಡೆಯಿಂದ ಉಚಿತವನ್ನು ಕೊಡಿಸಿ ಕಳುಹುವ ಸಾಂಪ್ರದಾಯವನ್ನಿಟ್ಟನು. ಹೀಗಿರಲು ಆ ಪಟ್ಟಣಕ್ಕೆ ಷೋಡಶ ವರುಷ ಪ್ರಾಯದ ಒಬ್ಬ ವೇಶ್ಯಯು ಬಂದಳು. ಈ ವರ್ತಮಾನವು ಕೊತವಾಲನ ಕಿವಿಗೆ ಬಿದ್ದ ಕೂಡಲೆ ಅವನು ತನ್ನ ನೂತನ ಮಿತ್ರನ ಬಳಿಗೆ ಬಂದು ನಿನ್ನೆ ಯ ದಿವಸ ಈ ಪಟ್ಟಣಕ್ಕೆ ಒಬ್ಬ ವೇಶೈಯು ಬಂದಿದ್ದಾಳೆ. ಅವಳು ಗಾಯ ನವಾದನಗಳಲ್ಲಿ ಅತಿಪ್ರಖ್ಯಾತಿಯನ್ನು ಪಡೆದಿರುವಳಂತೆ ಅದು ಹ್ಯಾಗೆ ಇರ ಲಿ ! ಅವಳ ರೂಪವನ್ನಂತೂ ವರ್ಣಿಸುವದ ಸಾಧ್ಯವು ಅಪ್ಸರೆಯರಲ್ಲಿ ಅಂಥ ರೂಪವತಿಯು ದೊರಕುವಳೋ ಇಲ್ಲವೋ ? ನಾನಂತೂ ನೋಡಿ ಬ್ರಾಂತ ನಾದೆನು ಆದರೆ ನಾನು ಬ್ರಾಂತನಾಗಿ ಉಪಯೋಗವೇನು ! ಹೆಸರು ಕ್ರಿ ರಸಾಗರ ಭಟ್ಟ ಮನೆಯಲ್ಲಿ ಹುಳಿಮಜ್ಜಿಗೆ ಇಲ್ಲ, ಎಂಬ ಸಾಮತಿಯಂತೆ ನನ್ನ ಅವಸ್ಥೆಯದೆ ಆದರೆ ನಿನ್ನಂಥ ಲಕ್ಷ್ಮಿ ಪುತ್ರರಿಗೆ ಅವಳು ಯೋಗ್ಯ ಲಾಗಿದ್ದಾಳೆ ಇದರಲ್ಲಿ ಏನೂ ಸಂದೇಹವಿಲ್ಲ ನಿನಗೆ ಇಚ್ಛೆಯಿದ್ದರೆ ನಾಳೆ ಪ್ರಾ ತಃ ಕಾಲದಲ್ಲಿ ಅವಳನ್ನು ಇಲ್ಲಿಗೆ ಕರೆಸೋಣ ಎಂದು ಪ್ರಶಂಸೆ ಮಾಡಹತ್ತ ಲು ಧನಾಡ್ಯನಾದ ಬೀರಬಲನು "ವೇಷಧಾರಿಯಾದ ವರ್ತಕನು ಸಮ್ಮತಿಸಿ ದನು. ಮರುದಿವಸ ಆ ವೇಶ್ಯೆಯು ಸಾವುಕಾರನ ಮನೆಗೆ ಬಂದು ತನ್ನಲ್ಲಿದ್ದ ಗಾನ ವಿದ್ಯೆಯನ್ನೂ ನರ್ತನ ಚಮತ್ಕಾರವನ್ನೂ ವಿಶದ ಪಡಿಸಿದಳು ಬೀರ ಬಲನು ಅವಳ ವಿದ್ವತೆಗೆ ಆನಂದಪಟ್ಟು ಕೊತವಾಲನನ್ನು ಕುರಿತು, ಇವ ಳಿಗೆ ಏನು ಕೊಡಬೇಕು ! ಎಂದು ಪ್ರಶ್ನೆ ಮಾಡಿದನು ಆ ಕೂಡಲೆ ಕೊತವಾ ಲನು ಇವಳಯೋಗ್ಯತೆಗೆ ಸರಿಯಾಗಿ ಕೊಡಬೇಕಾದರೆ ಏನಿಲ್ಲೆಂದರೂ ಎರ ಡು ನೂರು ರೂಪಾಯಿಗಳನ್ನು ಕೊಡಬಹುದು ಎಂದು ಹೇಳಿದನು ತಕ್ಷ