ವಿಷಯಕ್ಕೆ ಹೋಗು

ಯುಗಾಂತರ

ವಿಕಿಸೋರ್ಸ್ದಿಂದ

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

ಯುಗಾಂತರ (1947)
ವಿ. ಕೃ. ಗೋಕಾಕ್

pages ಮುಖಪುಟ–ಮನೋಹರ ಗ್ರಂಥಮಾಲೆಯ ಕುಸುಮಗಳು

98732ಯುಗಾಂತರ1947ವಿ. ಕೃ. ಗೋಕಾಕ್


ಮನೋಹರ ಗ್ರಂಥಮಾಲೆಯ ೮೩ನೆಯ ಕುಸುಮ

ಯುಗಾಂತರ

(ಹೊಸಬಾಳಿನ ಸುಕುಮಾರ ಪ್ರಯೋಗ)

ಬರೆದವರು : ವಿ. ಕೃ. ಗೋಕಾಕ


ಎಪ್ರಿಲ್
೧೯೪೭


ಮನೋಹರ ಗ್ರಂಥ ಪ್ರಕಾಶನ ಸಮಿತಿ, ಧಾರವಾಡ


ಸಾಹಿತ್ಯ ವಿಷಯದಲ್ಲಿ ಸಲಹೆಗಾರರು :

ಶ್ರೀ ದ. ರಾ. ಬೇಂದ್ರೆ ಎಂ. ಎ.
ಶ್ರೀ ವಿ. ಕೃ. ಗೋಕಾಕ ಬಿ. ಎ., (ಆಕ್ಸ್‌ಫರ್ಡ )
ಶ್ರೀ, ರಂ. ಶ್ರೀ, ಮುಗಳಿ ಎಂ. ಎ., ಬಿ. ಟಿ.


ಸcಪಾದಕ :

ಜಿ ಬಿ. ಜೋಶಿ


[ ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ.]

ಬೆಲೆ ೦-೧೨-೦

ಪ್ರಕಾಶಕರು :
ಜಿ. ಬಿ. ಜೋಶಿ
ಮನೋಹರ ಗ್ರಂಥಮಾಲಾ
ಧಾರವಾಡ

ಮುದ್ರಕರು :
ಎನ್. ಎಸ್. ಬೆಂಗೇರಿ
. ವಿಜಯ ಮುದ್ರಾಲಯ
ಧಾರವಾಡ

'ಯುಗಾಂತರ'ವನ್ನು ಓದಿದ ಗೆಳೆಯರೊಬ್ಬರು : ಇದನ್ನು ಹೊಸ ಬಾಳಿನ ಸುಕುಮಾರ ಯೋಗ' ಎಂದು ಕರೆದಿದಿ (೬. ಇದು ಸುಕುಮಾರ ಪ್ರಯೋಗವೇನೋ ನಿಜ. ಆದರೆ ಇಲ್ಲಿ ಚಿತ್ರಿತವಾದ ಜೀವನದಲ್ಲಿ ಅಷ್ಟೊಂದು ಹೊಸತೇನಿದೆ ?” ಎಂದು ಕೇಳಿದ್ದಾರೆ. ಹೀಗಾಗಿ ಒಂದು ಹೆಸರನ್ನಿಟ್ಟ ನಾನು, ಆ ಹೆಸರಿಟ್ಟ ಕಾರಣವನ್ನು ವಿವರಿಸಬೇಕಾಗಿದೆ.

"ಯುಗಾಂತರ"ದಲ್ಲಿ ಚಿತ್ರಿತವಾದ ಬಾಳು ಯುಗ-ಯುಗಗಳ ಬಾಳೆಂಬುದು ಮೇಲೆಯೇ ಕಾಣುತ್ತದೆ. ಪ್ರೇಮ, ವಿವಾಹ, ತಾಯ್ತನ,ಇದರಲ್ಲಿ ಒಂದು ದೃಷ್ಟಿಯಿಂದ ಹೊಸತೇನೂ ಇಲ್ಲ. ಕವಿ, ಸಮಾಜಸೇವಕ, ವಂಚಕ, ಸನಾತನಿ,- ಈ ಪ್ರಕಾರಗಳೂ ಮಾನವಜಾತಿಯಲ್ಲಿ ಯಾವಾಗಲೂ ಕಾಣಿಸಿಕೊಂಡಿವೆ. ಆದರೆ ಇದೇ ವಿಚಾರಸರಣಿಯನ್ನು ಮುಂದುವರಿಸಿದಲ್ಲಿ ಜೀವನದಲ್ಲಿ ಎಲ್ಲವೂ ಪರ್ವತದಷ್ಟು ಪುರಾತನವೆಂಬ ಸಿದ್ಧಾಂತಕ್ಕೆ ನಾವು ಬಂದು ಮುಟ್ಟುತ್ತೇವೆ. ಅಂದರೆ, ಹೀಗೆಲ್ಲ ನೋಡುವಾಗ ನಾವು 'ಸತ್' ತತ್ವಕ್ಕೆ ಇಲ್ಲವೆ ಅಕ್ಷರ ಪುರುಷನಿಗೆ ಪಟ್ಟಗಟ್ಟ ಭಾವ (Heconing) ತತ್ವ ಇಲ್ಲವೆ ಕ್ಷರಪುರುಷನನ್ನು ಅಲಕ್ಷಿಸುತ್ತೇವೆ.

ಆದರೆ ಜೀವನವು ದತ್ತಾತ್ರೇಯನಂತೆ ತ್ರಿಮೂರ್ತಿಯಾಗಿದೆ. ಕ್ಷರಪುರುಷ ಅಕ್ಷರಪುರುಷ, ಪುರುಷೋತ್ತಮ,- ಈ ತ್ರಿಕೂಟದ ಪವಾಡವು ಕಣ-ಕಣ ದಲ್ಲಿಯೂ ಕಾಣುತ್ತದೆ. ಚಿರಂತನತೆಯ ನೂತನತೆಯೂ ಅಮರತೆಯೂ ಸೃಷ್ಟಿಯ ಪ್ರತಿಯೊಂದು ಕಣದಲ್ಲಿ ಬೆರೆತುಕೊಂಡಿವೆ. ಪ್ರತಿಯೊಂದು ಯುಗದಲ್ಲಿ ಚಿರಂತನತೆ-ನೂತನತೆಗಳು ಬೆರೆಯುವ ಪ್ರಮಾಣವು ಬದಲಿಸು ಇದೆ. ನಾವು 'ನೂತನ' ಎಂಬ ಶಬ್ದವನ್ನು ಪ್ರಯೋಗಿಸಿದಾಗ ಒಂದು ಯುಗದ ವಿಶೇಷ ಆವರಣವನ್ನು ಅನುಲಕ್ಷಿಸಿ ಮಾತನಾಡುತ್ತೇವೆ. ಇಂದು ಜಗತ್ತಿನಲ್ಲಿಯೇ ಒಂದು ಸಂಧಿಕಾಲವು ಒದಗಿ ಬಂದಿದೆ. ವಿಜ್ಞಾನದ ಅದ್ಭುತ ಪ್ರಗತಿಯಿಂದ ಮಾನವನ ಆರ್ಥಿಕ ಹಾಗು ಸಾಮಾಜಿಕ ಜೀವನದಲ್ಲಿ ಕ್ರಾಂತಿಯಾಗಿದೆ. ಹೀಗೆ ಹೊಸತಾಗಿ ಪ್ರಸ್ತಾಪಿತವಾದ ವಿಚಾರಸರಣಿಯು ಎಲ್ಲಿ ಯಾವ ಬೆಳಕಿಂಡಿಯೊಳಗಿಂದ ನೋಡಿದರೂ ಸಮ ತೆಯು ನೆಲೆಗೊಂಡ ಮಾನವಕುಲದೆದುರು ನಮ್ಮನ್ನು ಒಯ್ದು ನಿಲ್ಲಿಸುತ್ತದೆ. ಮಾರ್ಕ್ಸ್‌ವಾದವು ಈ ಸಮತೆಯ ಅವತಾರವನ್ನು ಬರಮಾಡಿಕೊಳ್ಳುವ ಮಾರ್ಗವೊಂದನ್ನು ಸೂಚಿಸಿರುವದಲ್ಲದೆ ಅದನ್ನು ಒಂದೆಡೆಗೆ ಕಟ್ಟಿ ನಿಂತಿದೆ. ಹೀಗಾಗಿ ಇಂದಿನ ಯಾವ ದರ್ಶನವೂ ಮಾರ್ಕ್ಸ್‌ದರ್ಶನವನ್ನು ಒಂದಿಲ್ಲೊಂದು ರೀತಿಯಿಂದ ಒಳಪಡಿಸಿಕೊಳ್ಳದೆ ಪೂರ್ಣವಾಗಲಾರದು.

ಆದರೆ ಮಾರ್ಕ್ಸ್‌ವಾದವು ಮೂಲದಲ್ಲಿ ಭೌತಿಕವಾಗಿದೆ. ಬುದ್ದಿವಿಜ್ಞಾನಗಳ ಸಹಾಯದಿಂದ ಕಂಡಿರುವದೇ ಸತ್ಯವೆಂದು ಅದು ಸಾರುತ್ತದೆ. ಸಾವಿರಾರು ವರ್ಷಗಳಿಂದ ಬೆಳೆದು ಬಂದ ಅನುಭಾವದ (mysticism) ಪರಂಪರೆಯನ್ನು ಅದು ಅಲ್ಲಗಳೆಯುತ್ತದೆ. ಬುದ್ದಿ ಯಿಲ್ಲದೆ ಬೇರೊಂದು ಜ್ಞಾನಸಾಧನೆಯೂ ಇದೆ; ಅದೇ ಸಮಗ್ರ ಮಾನವನ ಒಳನುಡಿ (Intuition). ಅದರ ಪ್ರಮಾಣಗಳು ಬೆರೆ; ಅದು ತೆರೆಯುವ ಸೂಕ್ಷ್ಮತರ ಜೀವನದ ಮೀಮಾಂಸೆಯೂ ಇದೆ: ಎಂಬುದನ್ನು ಮಾರ್ಕ್ಸ್‌ವಾದವು ಒಪ್ಪುವದಿಲ್ಲ. ಸಂತತ ಸಂಚಲನೆಯೇ ಸೃಷ್ಟಿಯ ನಿತ್ಯ ನಿಯಮವೆಂದು ಸಾರಿ ಚಲನರಹಿತವಾದ ಸ್ಟಾಣು ಬ್ರಹ್ಮದ ಇಲ್ಲವೆ ಅಕ್ಷರ ಪುರುಷನ ಅಸ್ತಿತ್ವವನ್ನು ಮಾರ್ಕ್ಸ್‌ವಾದವು ಅಲ್ಲಗಳೆಯುತ್ತದೆ.

ಆದರೆ ಈ ಸಂತತ ಸಂಚಲನೆಯು ಏಕೆ ? ಅದರ ತುದಿಮೊದಲೇನು ? ಎಂಬ ಪ್ರಶ್ನೆಗಳಿಗೆ ಮಾರ್ಕ್ಸ್‌ವಾದವು ಉತ್ತರ ಕೊಡುವದಿಲ್ಲ. ಯಾಕಂದರೆ ವಿಜ್ಞಾನವೇ ಅವಳ ಉತ್ತರವನ್ನು ಇನ್ನೂ ಕಂಡುಹಿಡಿದಿಲ್ಲ. ಹೀಗಾಗಿ ವಿಜ್ಞಾನದ ಅಪೂರ್ಣತೆಯೆ ಮಾರ್ಕ್ಸ್‌ವಾದವನ್ನು ಆವರಿಸಿದೆ.

ಈ ಅಪೂರ್ಣತೆಯ ಮೇಲೆ ಸಮಗ್ರ ಜೀವನದ ತಳಹದಿಯನ್ನು ಹಾಕುವದು ಶಕ್ಯವಾಗುವದಿಲ್ಲ. ಮಾರ್ಕ್ಸ್‌ವಾದವೇ ಹೇಳಿದೆ: ಸಮತೆಯು ನೆಲೆಗೊಂಡ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಂಸ್ಕೃತಿಕ ಜೀವನದ ನಿರ್ಮಾಣಕ್ಕಾಗಿ ಸರ್ವಸ್ವತಂತ್ರನಾಗಿರುವನೆಂದು. ಹೀಗಾಗಿ ಕವಿಯು ಇಂದು ಮಾರ್ಕ್ಸ್‌ವಾದದ ಹಾಗು ಅನುಭಾವಗಳ ನಡುವೆ ಒಂದು ಸೇತುವೆ ಕಟ್ಟಿ * ಪೂರ್ಣ ಜೀವನದ ದರ್ಶನವನ್ನು ನಿಚ್ಚಳವಾಗಿಸಬೇಕಾಗಿದೆ. ಮಾರ್ಕ್ಸ್‌ವಾದವು ಸಾರುವ ಕ್ರಾಂತಿ, ಕವಿಯ ದೃಷ್ಟಿಯಲ್ಲಿ ಒಂದು ದೈವಿಕ ಘಟನೆ; ವ್ಯಕ್ತಿಯನ್ನು ಪ್ರೇರಿಸುವ ಹಿಂಸೆಯಲ್ಲ. ಇಂಥ ಕ್ರಾಂತಿಯು ಬರುವದಿದ್ದರೆ ಅದನ್ನು ಯಾರೂ ತಡೆಗಟ್ಟಲಾರರು. ಮಾರ್ಕ್ಸ್‌ನೇ ಹಿಂಸೆಯನ್ನು ಬೋಧಿಸುವದಿಲ್ಲ. ಸಮತೆಯನ್ನು ಸಂಧಿಸುವಾಗ ಹಿಂಸೆಯು ವರ್ಗ ಸಮರದ ವಿಧಾಯಕ ಕಾರ್ಯಕ್ರಮದಲ್ಲಿ ನಡುವೆ ತಲೆಯೆತ್ತಿದರೆ ಅದು ವ್ಯಕ್ತಿಯ ಹಾಗು ಸಮಾಜದ ಅಪೂರ್ಣತೆಯೇ ಹೊರತು ಬೇರೆ ಏನೂ ಅಲ್ಲ.

ಆದಕಾರಣ ಕವಿಯು ಸಮಶಾಸಮಾಜವನ್ನು ತನ್ನ ಧೈಯವಾಗಿ ಸ್ವೀಕರಿಸುತ್ತಾನೆ. ಆದರೆ ಇದು ಸಾಮಾಜಿಕ ಪುನರ್ಘಟನೆಯ ವಿಷಯ ವಾಯಿತು. ವ್ಯಕ್ತಿಯ ಜೀವನದ ಪುನರ್ಘಟನೆಯೂ ಆಗಬೇಕಲ್ಲ? ಈ ಹಾದಿಯಲ್ಲಿ ವ್ಯಕ್ತಿಯ ಸಂಸ್ಕೃತಿಯೂ ಬೆಳೆಯಬೇಕು. ಮಾನವನನ್ನು ಷಡ್ರಿಪುಗಳ ಬಂಧನದಿಂದ ಸ್ವತಂತ್ರವಾಗಿಸಿ ಪ್ರೀತಿ, ಸ್ನೇಹ, ಕರುಣೆ, ಸೌಂದರ್ಯಗಳ ಹಾದಿಯನ್ನು ತುಳಿಯಹಚ್ಚುವದೇ ಈ ಸಂಸ್ಕೃತಿಯ ಸಾಧನಮಾರ್ಗ. ಆದಕಾರಣ ಕವಿಯು ಇದನ್ನೂ ತನ್ನ ಧೈಯವಾಗಿ ಸ್ವೀಕರಿಸುತ್ತಾನೆ. ಆತ್ಮ, ಅಮರತೆ, ಸೂಕ್ಷ್ಮತರ ಜೀವನ, - ಇವೆಲ್ಲ ಇನ್ನೂ ಅಸಾಮಾನ್ಯರ ಅನುಭವದ ಭಾಗಗಳಾಗಿವೆ. ವಿಜ್ಞಾನಿಯು ತನ್ನ ಪ್ರಯೋಗ ಮಂದಿರದಲ್ಲಿ ಸಂತತ ಸಂಚಲನೆಯ ಮೂಲವನ್ನು ಕಂಡುಹಿಡಿಯಲು ಪ್ರಯತ್ನಿಸುವಂತೆ ಸಂಸ್ಕೃತಿ-ಜಿಜ್ಞಾಸುವು ಆಶ್ರಮಗಳಲ್ಲಿ ಆತ್ಮ ಅಮರತೆಗಳನ್ನು ಕುರಿತು ತನ್ನ ಪ್ರಯೋಗಗಳನ್ನು ನಡೆಸುತ್ತಾನೆ. ಸಾಮಾನ್ಯ ಮಾನವರ ದೃಷ್ಟಿಯಿಂದ ಸಂಚಲನೆ-ಚಿರಂತನತೆಗಳೆರಡೂ ಇನ್ನೂ ಕಾಣಬೇಕಾದ ಸತ್ಯದ ವಿಸ್ತಾರವಾಗಿದೆ.

ಆದರೆ ಕವಿಯು ಮಾರ್ಕ್ಸ್‌ವಾದದ ಸಮತಾಸಮಾಜವನ್ನು ಸ್ವೀಕರಿಸಿದಂತೆ ಮಾರ್ಕ್ಸ್‌ವಾದಿಗೆ ಪ್ರೀತಿ-ಸ್ನೇಹ-ಕರುಣೆ -ಸೌಂದರ್ಯಗಳಲ್ಲಿ ನೆಲೆನೆಲೆಯಾಗಿ ನಿಂತ ಸಂಸ್ಕೃತಿಯು ಮಾನ್ಯವಾಗಬಹುದು. ಯಾಕಂದರೆ ಇದು ಹೃದಯದ ಸಂಪತ್ತು. ಇದನ್ನು ಸ್ವೀಕರಿಸುವ ಪೂರ್ವದಲ್ಲಿ ಅನುಭಾವದ ಸಿದ್ಧಾಂತಗಳಿಗೆ ಸಹಿ ಹಾಕಬೇಕಾಗುವದಿಲ್ಲ.

ಇಂದು ಜಗತ್ತನ್ನೇ ಎದುರಿಸಿದ ಜಟಿಲ ಸಮಸ್ಯೆಗೆ ಈ ಸಮನ್ವಯವೇ ಸಮರ್ಪಕ ಉತ್ತರವಾಗಬಹುದು. ಇದರ ತಳಹದಿಯ ಮೇಲೆ ಇದಕ್ಕೂ ಉಜ್ವಲವಾದ ಸಮನ್ವಯದ ಕಾರ್ಯವು ಪ್ರಾರಂಭವಾಗಬಹುದು. ಅಂತೇ ಈ ಸಮಯವನ್ನು ಚಿತ್ರಿಸಿ ತೋರಿಸುವ ಯುಗಾಂತರವನ್ನು ಹೊಸಬಾಳಿನ ಸುಕುಮಾರ ಪ್ರಯೋಗ” ಎಂದು ಕರೆದಿದೆ.

ಇಲ್ಲಿ ಚಿತ್ರಿತವಾದದ್ದು ಒಂದು ಬೌದ್ಧಿಕ ಸಮಸ್ಯೆಯಲ್ಲ. ಉಜೀವನದ ಒಂದು ಸರಿ, ಬೌದ್ದಿಕ ತತ್ವವು ಆ ಜೀವನದ ಒಂದು ಭಾಗ. ಆದರೆ ಈ ಬಾಳಿನ ಹೊಸತನವನ್ನು ಎತ್ತಿ ತೋರಿಸಲು ಆ ತತ್ವವೇ ಇಲ್ಲಿ ಹೆಚ್ಚು ಸಹಾಯಕಾರಿಯಾಗಿರುವದರಿಂದ ಅದನ್ನು ಇಲ್ಲಿ ವಿವರಿಸಲಾಗಿದೆ.

ಕೋಸಲೇಂದ್ರನ ಸೌಂದರ್ಯ-ಕಲ್ಯಾಣಗಳ ಸಮನ್ವಯ, ಮೃಣಾಲಿ ನಿಯ ಎದೆ-ಮನಗಳನ್ನು ಈ ಸಮನ್ವಯವು ಕ್ರಮೇಣ ಪ್ರೀತಿಯ ಮೂಲಕ ಸೆರೆಹಿಡಿದ ವಿಧಾನ, ಕಿಶನ್ ಕಿಶೋರ ದಂಪತಿಗಳಲ್ಲಿ ಅನುಭಾವ- ಸಂಸಾರಗಳ ಎಳೆತ, ಕಾಂತಿಚಂದ್ರ ದಂಪತಿಗಳಲ್ಲಿ ಕಾರ್ಯಪ್ರಿಯತೆಯ ಪ್ರಬಲತೆ, - ಈ ಎಲ್ಲ ಉದ್ದೀಪನಗಳಿಂದ ಮೇಲೆ ಹೇಳಿದ ಜೀವನದ ಪರಿಯು ಇಲ್ಲಿ ರೂಪ ಗೊಂಡಿದೆ.

ಭಾರತವು ಈ ಸಮಯಕ್ಕೆ ಫಲವತ್ತಾದ ಭೂಮಿಯಾಗಿದೆ. ಘಟನಾಸಮಿತಿಯ ಸಂಧಿಕಾಲವೇ ಯುಗಾಂತರದ ಸೂಚನೆಯನ್ನು ಕೊಡು ತದೆ. ಕನ್ನಡದ ನೆಲವನ್ನೇ ಒಂದಿಲ್ಲೊಂದು ರೀತಿಯಿಂದ ತೋರಿಸುವ ಇಂದಿನ ರಂಗಭೂಮಿಗೆ ದಿಲ್ಲಿ- ಮಾಹುಗಳ ಭೂಮಿಕೆಯನ್ನು ಇಲ್ಲಿ ಒದಗಿಸಿದೆ. ಬಳಕೆ ಮಾತಿನ ವಿವಿಧ ದೇಸಿಗಳಿಗೆ ಹೆಚ್ಚಾಗಿ ಒಳಗಾಗಿದ್ದ ಇಂದಿನ ದೃಶ್ಯ ಕಾವ್ಯಕ್ಕೆ ಇಲ್ಲಿ ಸಮಂಜಸವಾಗುವಂತೆ ಗ್ರಾಂಥಿಕ ಶೈಲಿಯನ್ನು ಒಳಪಡಿಸಿ ಕೊಳ್ಳಲಾಗಿದೆ. ದೃಶ್ಯ ಕಾವ್ಯದ ಮಿತವ್ಯಯಕ್ಕೂ ಜೀವಕಳೆಗೂ ಭಂಗ ಬರ ದಂತೆ ಇಲ್ಲಿಯ ಚಿತ್ರಣದ ಹವಣಿಕೆಯಿದೆ.

ವೀಸನಗರ
೨೫-೧೨-೧೯೪೭

-ವಿ.ಕೃ.ಗೋಕಾಕ
'ಯುಗಾಂತರ'ವು ಈ ವರುಷದ ಐದನೆಯ ಕುಸುಮ, ಒಂದು ಎರಡು, ಕೂಡಿದ್ದು (ಭಗ್ನ ಮಂದಿರ'; ಮೂರು ನಾಲ್ಕು, ಕೂಡಿದ್ದು “ ದೇವತಾ ಮನುಷ್ಯ'; ಐದನೆಯದೇ ಈ “ ಯುಗಾಂತರ'; ಇನ್ನು ಮುಂದೆ ಬರತಕ್ಕದ್ದು ( ತಾಯಿ. ಅಲ್ಲಿಗೆ ಈ ವರುಷ ಮುಗಿಯುತ್ತದೆ. ಗ್ರಂಥ ಮಾಲೆಯಿಂದ ಹೊರಬೀಳುವ ಗ್ರಂಥಗಳು ಅಗಸ್ಟದಿಂದ ಪ್ರಾರಂಭವಾಗಿ ಕೋಬರ, ಡಿ.ಬರ, ಫೆಬ್ರುವರಿ, ಎಪ್ರಿಲ್, ಜೂನ್ ತಿಂಗಳುಗಳಲ್ಲಿ ಕ್ರಮವಾಗಿ ಪ್ರಕಟವಾಗುತ್ತವೆ. ಒಮ್ಮೊಮ್ಮೆ ಎರಡೆರಡು ಮೂರು ಮೂರು ಕೂಡಿಸಿ ಪ್ರಕಟವಾಗಬಹುದು. ಭಗ್ನ ಮಂದಿರ ೩೪ ೨, ದೇವತಾ ಮನುಷ್ಯ ೨೨೨, ಯುಗಾಂತರ ೮೬; ಒಟ್ಟು ೬೨೨ ಪುಟಗಳನ್ನು ಇಲ್ಲಿಯ ವರೆಗೆ ಸಲ್ಲಿಸಿದಂತಾಗಿದೆ. ಇನ್ನು ೨೫೦ ಪುಟಗಳನ್ನು ಕೊಟ್ಟರೆ ಪ್ರತಿವರ್ಷಕ್ಕೆ ಗ್ರಾಹಕರಿಗೆ ನಾವು ಸಲ್ಲಿಸಬೇಕಾದ ೯೦೦ ಪುಟಗಳನ್ನು ಸಲ್ಲಿಸಿದಂತಾಗುವದು. ( ಒಂದು ವರ್ಷದಲ್ಲಿ ೧೨೦ ಪುಟಗಳ ಆರು ಗ್ರಂಥಗಳನ್ನು ಸಲ್ಲಿಸಲಾಗುವದು.' ಎಂದು ನಾವು ತಿಳಿಸುತ್ತ ಬಂದದ್ದೇ ನಮ್ಮ ಗ್ರಾಹಕರಲ್ಲಿ ಅನೇಕರಿಗೆ ತಪ್ಪು ಕಲ್ಪನೆ ಹುಟ್ಟಿಸಿರಬಹುದೆಂದು ಇತ್ತೀಚಿನ ಪತ್ರವ್ಯವಹಾರಗಳಿಂದ ಕಂಡು ಬಂದಿದೆ. ಭಗಮಂದಿರ' - ದೇವತಾ ಮನುಷ್ಯ' ಇವು ಎರಡೇ ಎಂದು ತಿಳಿದು ಇನ್ನೂ ನಾಲ್ಕು ಗ್ರಂಥಗಳು ಬರಬೇಕೆಂದು ಅನೇಕರು ಕೇಳುತ್ತಿದ್ದಾರೆ.

ಗ್ರಂಥಕರ್ತರಿಗೆ ಪುಟಗಳ ನಿರ್ಬಂಧವನ್ನು ಹಾಕುವುದು ಅಸಾಧ್ಯವಾದುದ ರಿಂದ-ಹಾಗೆ ಹಾಕುವುದೂ ಸಾಹಿತ್ಯ ನಿರ್ಮಾಣಕ್ಕೆ ಅನುಕೂಲವಲ್ಲವಾದುದ ರಿಂದ-ಒಂದು ಗ್ರಂಥ ನೂರೇ ವುಟವಾಗಬಹುದು; ಒಂದು ಮೂರುನೂರು ಪುಟಾಗಬಹುದು: ಒಂದು ಆದನೂರಕ್ಕೂ ಹೋಗಬಹುದು. ಅಂತೆಯೇ ಒಟು, ಸಲ್ಲಿಸತಕ್ಕ ಪುಟಗಳ ಮೇಲೆ ಗಮನವನ್ನಿಟ್ಟು ಗ್ರಾಹಕರೂ ಸಹಾನು ಕೊರೆಯಿಂದ ಸಹಕರಿಸಬೇಕಾಗಿ ಬೇಡುತ್ತೇವೆ.

'ಯುಗಾಂತರ'ವನ್ನು ಗ್ರಂಥಮಾಲೆಗಾಗಿ ಬರೆದುಕೊಟ್ಟ ಶ್ರೀಮಾನ್ ವಿ. ಕೃ ಗೋಕಾಕ ಅವರಿಗೆ ನಾವು ತುಂಬಾ ಉಪಕೃತರಾಗಿದ್ದೇವೆ.

ನಂತರ ಹೊದಿಕೆ ಚಿತ್ರವನ್ನು ಬರೆದುಕೊಟ್ಟೆ ಶ್ರೀ ರಾಘವೇಂದ್ರರಿಗೂ ಕೃತಜ್ಞರಾಗಿದ್ದೇವೆ.

-ಸಂಪಾದಕ

ಪಾತ್ರಗಳು

೧ ಕಿಶನ್‌ಕಿಶೋರ
...
ದಿಲ್ಲಿಯ ಗರ್ಭಶ್ರೀಮಂತ
೨ ರುಕ್ಮಿಣಿದೇವಿ
...
ಅವನ ಹೆಂಡತಿ
೩ ಕಾಂತಿಚಂದ್ರ
...
ಮಥುರೆಯ ಲಕ್ಷ್ಮೀಪುತ್ರ
೪ ರೋಹಿಣಿದೇವಿ
...
ಅವನ ಹೆಂಡತಿ
೫ ಕೋಸಲೇಂದ್ರ
...
ಉದಿತೋದಿತ ಕವಿ
೬ ಮೃಣಾಲಿನಿ
...
ಕಾಂತಿಚಂದ್ರರ ಆಪ್ತರ ಮಗಳು
೭ ಸೇಠ ಬನಸಿಲಾಲ
...
ದಿಲ್ಲಿಯ ಡಾಂಭಿಕ ಕಾರ್ಯ ಸಾಧು ಶ್ರೀಮಂತ
೮ ದಯಾರಾಮ
...
ಕಾಂತಿಚಂದ್ರರ ಮನೆಯ ಆಳು
೯ ಓಂಪ್ರಕಾಶ
...
ಕಿಶನ್ ಕಿಶೋರರ ಸೇವಕ

ಅಲ್ಲದೆ

ರೈತ; ಬಾಃಯ್




ಯುಗಾ೦ತರ

ಅಂಕು ೧

ಪ್ರವೇಶ ೧

[ಪುರಾತನ ದಿಲ್ಲಿಯ ರೇಲ್ವೆ ನಿಲ್ಮನೆಯಲ್ಲಿಯ ಒಂದನೆಯ ತರಗತಿಯ ತಂಗುಮನೆ. ಅಲ್ಲಿ ಕಿಶನ್ ಕಿಶೋರ, ರುಕ್ಕಿಣಿದೇವಿ, ಕಾಂತಿಚಂದ್ರ ಹಾಗು ರೋಹಿಣಿದೇವಿಯರು ಚಹ ತಗೆದುಕೊಳ್ಳುತ್ತ ಕುಳಿತಿದ್ದಾರೆ.

ಕಿಶನ್ ಕಿಶೋರರು ಗರ್ಭ ಶ್ರೀಮಂತರು, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬೇಸರಗೊಂಡು ಈಗ ಧಾರ್ಮಿಕವೃತ್ತಿಗೆ ಮನಸೋತಿದ್ದಾರೆ. ಅವರಿಗೆ ೫೫-೫೬ ವರ್ಷಗಳಾಗಿವೆ. ರುಕ್ಷ್ಮಿಣಿದೇವಿಯವರು ಅವರ ಹೆಂಡತಿ; ಅವರಿಗಿಂತ ೭-೮ ವರ್ಷಗಳಿಂದ ಚಿಕ್ಕವರು. ಇವರಿಬ್ಬರೂ ಮೂಲತಃ ದಿಲ್ಲಿಯವರು.

ಕಾಂತಿಚಂದ್ರರು ಮಥುರೆಯ ಪ್ರಸಿದ್ದ ಲಕ್ಷ್ಮೀಪುತ್ರರು, ಪರಂಪರಾನುಗತಿಕ ಧರ್ಮವನ್ನು ಪಾಲಿಸುತ್ತ ಬಂದು ಬೇಸತ್ತು ಸಮಾಜಸೇವೆಗೆಂದು ಮನಸ್ಸು ಮಾಡಿ ಈಗ ದಿಲ್ಲಿಯಲ್ಲಿ ನೆಲಿಸಲು ಬಂದಿದ್ದಾರೆ. ಇವರ ವಯಸ್ಸು ಐವತ್ತರೊಳಗೆ, ರೋಹಿಣಿದೇವಿಯವರು ಅವರ ಪತ್ನಿ.]

ಕಿಶನ್‌ ಕಿಶೋರ : ಒಮ್ಮೊಮ್ಮೆ ರೇಲ್ವೆ ನಿಲ್ಮನೆಯಲ್ಲಿ ಎಂಥ ಸೋಜಿಗಗಳು ಸಂಭವಿಸುತ್ತವೆ! ನಮ್ಮ ಭೆಟ್ಟಿ ಅಂಥದೊಂದು ಸೋಜಿಗವೆನ್ನಬೇಕು. ನೀವು ಕೈಬಿಟ್ಟ ಧರ್ಮವನ್ನು ನಾನು ಎತ್ತಿಹಿಡಿಯಬೇಕೆನ್ನುತ್ತೇನೆ. ನಾನು ತಡೆದು ನಿಲ್ಲಿಸಿದ ಪ್ರವೃತ್ತಿಯೆಡೆಗೆ ನೀವು ಪ್ರವೃತ್ತರಾಗಿದ್ದಿರಿ! ಬಾಳುವೆಯ ತಿರುವುಮುರುವನ್ನು ಅಳೆಯುವದು ಅಸಾಧ್ಯವಲ್ಲವೆ?

ಕಾಂತಿಚಂದ್ರ: ಹೌದು, ಸೋಜಿಗವಲ್ಲದೆ ಏನು! ಆದರೆ ಪ್ರತಿಯೊಂದು ವ್ಯಕ್ತಿತ್ವಕ್ಕೂ ಅದರ ಧರ್ಮದ ಪ್ರಭಾವಳಿಯೊಂದಿರುತ್ತದೆ. ಆ ಬೆಳಕಿನಲ್ಲಿಯೇ ಮಾತ್ರ ಅದು ಬೆಳೆಯಬಲ್ಲದು. ರೋಹಿಣಿದೇವಿ : ದೇವರ ಕರುಣೆಯಿಂದ ನನಗೇನೂ ಕಡಮೆಯಾಗಿಲ್ಲ. ಮಥುರೆಯಲ್ಲಿ ಬೇಕಾದಷ್ಟು ದೊಡ್ಡ ಮನೆಯಿದೆ. ಆದರೆ ಆಯುಷ್ಯ ಸಾರ್ಥಕವಾಗಬೇಕಾದರೆ, ಏನಾದರೂ ಸೇವೆಯನ್ನು ಸಲ್ಲಿಸಿದೆವೆಂದು ನಮಗನಿಸಬೇಕಲ್ಲ? ಮನೆಯಲ್ಲಿ ಕುಳಿತು, ಕುಳಿತು, ವಿಚಾರ ಮಾಡಿ, ಮಾಡಿ, ತಲೆ ಭ್ರಮಿಸಹತ್ತಿತು. ಜೀವನದಲ್ಲಿ ಜಿಗುಪ್ಪೆಯುಂಟಾಯಿತು. ದೇವರು ನನಗೆ ಸಂತತಿಯನ್ನು ಕೊಡಲಿಲ್ಲ. ಸಮಾಜವೇ ನಮ್ಮ ಸಂತತಿ ಎಂದಿದ್ದೇವೆ. ಜನತಾ ಜನಾರ್ದನನ ಸೇವೆಯೇ ನಮ್ಮ ಗುರಿಯೆಂದಿದ್ದೇವೆ. ಅದಕ್ಕೇ ಈಗ ದಿಲ್ಲಿಯಲ್ಲಿ ನೆಲೆಸಲು ಬಂದಿರುವದು.

ರುಕ್ಮಿಣಿದೇವಿ : ನಾವೂ ಸಂತತಿಹೀನರು. ದಿಲ್ಲಿಯ ಸಾರ್ವಜನಿಕ ಜೀವನದಲ್ಲಿ ಇವರು ಮನಸ್ಸು ಹಾಕಿದರು. ಆಪ್ತೇಷ್ಟರ ವರ್ಗದೊಡನೆ ಹೊಂದಿಕೊಂಡು ನಾನಿದ್ದೆ, ಇವರಿಗೇಕೋ ಬೇಸರಾಯಿತು. ಈಗ ಧರ್ಮವನ್ನೇ ನೆನೆದು ಆತ್ಮಶೋಧನೆಗಾಗಿ ಮಾಹುವಿಗೆ ನಡೆದಿದ್ದೇವೆ.

ಕಿಶನ್ ಕಿಶೋರ : ಹೌದು. ದೇವರು ನಮಗೂ ಸಂಪತ್ತು ಕೊಟ್ಟ. ಆದರೆ ಸಂತತಿಯನ್ನಲ್ಲ, ದಿಲ್ಲಿಯ ಜೀವನದಲ್ಲಿಯ ದ್ವೇಷ-ದೂಷಣೆಗಳಿಗೆ ಬೇಸತ್ತು ಈಗ ಅಲ್ಲಿಂದ ಹೊರಟಿದ್ದೇವೆ. ಜನದಿಂದ ದೂರವಾಗಿದ್ದು ವನಶ್ರೀಯ ಮಧ್ಯದಲ್ಲಿ ಮನಃಶಾಂತಿಯನ್ನು ಪಡೆಯುವದೆಂದು ನರ್ಮದೆಯ ತೀರದಲ್ಲಿ ಮಾಹುವಿನ ಹತ್ತಿರ ಒಂದು ಬಂಗಲೆ ಕೊಂಡಿದ್ದೇವೆ. ಆಯುಷ್ಯದ ಉಳಿದ ಭಾಗವನ್ನು ಅಲ್ಲಿಯೇ ಕಳೆಯಬೇಕೆಂದು ನಮ್ಮಿಬ್ಬರ ಸಂಕಲ್ಪವಾಗಿದೆ.

ಕಾಂತಿಚಂದ್ರ : ಬೇಸತ್ತರೆ ಹೇಗೆ? ಬಂದುದನ್ನೆಲ್ಲ ಎದುರಿಸಿ ಜಯಿಸಬೇಕಲ್ಲವೆ?

[ಇಷ್ಟರಲ್ಲಿ ಮೃಣಾಲಿನಿಯು ಪ್ರವೇಶಿಸುತ್ತಾಳೆ.]

ಮೃಣಾಲಿನಿ : ಓಹೋ! ಇಲ್ಲಿ ಹರಟೆ ಕೊಚ್ಚುತ್ತ ಕೂತಿದ್ದೀರಾ! ದಿನಾಲು ತಾಸುಗಟ್ಟಲೆ ತಡಮಾಡಿ ಬರುವ ಗಾಡಿ ಇಂದು ವೇಳೆಗೆ ಸರಿಯಾಗಿ ಬರ ಬೇಕೆಂದರೆ! ಬರುವಾಗ ಮಜದೂರ ಸಂಘದ ಕಾರ್ಯದರ್ಶಿ ಭೆಟ್ಟಿಯಾದ. ಅವನೊಡನೆ ಐದು ನಿಮಿಷ ಮಾತನಾಡುತ್ತ ನಿಂತೆ. ಅದೇ ತಪ್ಪಾಯಿತು! ಮುಂದೆ ನಿಲ್ಮನೆಯಲ್ಲೆಲ್ಲ ಹುಡುಕಿದೆ. ನೀವು ಕಾಣಲಿಲ್ಲ. ನಡೆಯಿರಿ. ಹೊರಗೆ ಕಾರು ನಿಂತಿದೆ.

[ಅಲ್ಲಿಯೇ ಇದ್ದ ಕುರ್ಚಿಯ ಮೇಲೆ ಕುಳಿತು ಬೆವರೊರಿಸಿಕೊಳ್ಳುತ್ತಾಳೆ.] ಕಾಂತಿಚಂದ್ರ: ( ನಗುತ್ತ ) ಹೌದು, ಮೃಣಾಲಿನಿ ! ನಾವು ಗಾಡಿಯಿಂದ
ಇಳಿದಾಗ ನೀನೆಲ್ಲಿಯೂ ಕಾಣಲಿಲ್ಲ. ಮಜದೂರ ಸಂಘವೋ ಕಾಮಗಾರ
ಮಂಡಳವೋ ನಿನ್ನನ್ನು ತಡೆದಿರಬೇಕೆಂದು ನಮಗೆನಿಸಿತು. ಇಲ್ಲಿ ದಾರಿ
ನೋಡುತ್ತ ಕುಳಿತೆವು. ಹೊರಡೋಣ. ಅದಕ್ಕೇನು? ಮೊದಲು ಸ್ವಲ್ಪ
ಚಹ ತೆಗೆದುಕೊ!

[ಚಹದ ಕಪ್ಪನ್ನು ಮುಂದೆ ಮಾಡುತ್ತಾನೆ.]

ಮೃಣಾಲಿನಿ : (ಇಸಿದುಕೊಂಡು ಅತ್ತಿತ್ತ ನೋಡುತ್ತ) ಎಲ್ಲಿ? ನಾನು ಚಹ
ತೆಗೆದುಕೊಳ್ಳಬೇಕಾದರೆ ಮೊದಲು ನಿಂಬೆಯ ಹಣ್ಣಿನ ಹೊಳಕೆ ಬೇಕು.
ಇಲ್ಲಿ ಕಾಣುವದಿಲ್ಲ?
ರೋಹಿಣಿ : ಹೌದು, ಮೃಣಾಲಿನಿ! ನೀನು ಹಾಲುಮತದವಳಲ್ಲ ಎಂಬುದು
ನನಗೆ ಗೊತ್ತು. ಅದಕ್ಕೇನಂತೆ? ತರಿಸೋಣ! ಬಾಯ್! ಲೆಮನ್
ಸ್ಪ್ಲಿಟ್ಟ್ ಲಾನಾ !
ಬಾ:ಯ್ : ಜೀ !

[ ಮಗ್ಗುಲಿಗೆ ನಿಂತಿದ್ದ ರೇಲ್ವೆ ವಿಶ್ರಾಂತಿಗೃಹದ 'ಹುಡುಗ' ತರಲು ಹೋಗುತ್ತಾನೆ.]


ರುಕ್ಕಿಣಿದೇವಿ : ಇವರು ಯಾರು ?
ಕಾಂತಿಚಂದ್ರ: ಇವರು ನಮ್ಮ ಆಪ್ತರೊಬ್ಬರ ಮಗಳು. ನಮ್ಮನ್ನು ಕರೆ
ಯಲು ನಿಲ್ಮನೆಗೆ ಬಂದಿದ್ದಾರೆ. (ನಸುನಕ್ಕು) ಇವರು ಸನತಾವಾದಿಗಳು.
ಬಿ. ಎ. ಆಗಿ ಈಗ ಕೂಲಿಕಾರರ ಬೆನ್ನು ಕಟ್ಟಿದ್ದಾರೆ. ಇವರು ಉಡುವ
ಸೀರೆ-ಕೆಂಪು ಸೀರೆ; ರಷ್ಯಾದ ಬಣ್ಣದ್ದು. ಇವರು ಕುಡಿಯವ ಚಹ,
ರಷ್ಯನ್ ಚಹ! ಅವರು ಸೀರೆಗೆ ಪಿನ್ ಮಾಡಿಕೊಂಡಿದ್ದ ಚಿನ್ನವನ್ನು
ನೋಡಿ,-ರಷ್ಯಾದ ಕುಡಗೋಲು-ಸುತ್ತಿಗೆಗಳು ಅಲ್ಲಿ ಸದಾ ಮೆರೆ
ಯುತ್ತಿರುತ್ತವೆ.
ಮೃಣಾಲಿನಿ : (ನಸು ಕೋಪದಿಂದ) ಕಾಂತಿಚಂದ್ರ್! ಈ ನಿಮ್ಮ ಬಂಡವಳ
ಶಾಹಿ ವ್ಯಂಗ್ಯವನ್ನು ಸಾಕುಮಾಡಿರಿ! ಇಂದಿಲ್ಲ ನಾಳೆ ಅದರ ಪೊಳ್ಳುತನ
ತಾನೇ ತಿಳಿಯುತ್ತದೆ!

[ಬಾಃಯ್ ತಂದಿದ್ದ ನಿಂಬೆ ಹೋಳಿಕೆಯನ್ನು ಚಹದಲ್ಲಿ ಹಿಂಡಿ ಕುಡಿಯುತ್ತಾಳೆ.]

ಕಿಶನ್ ಕಿಶೋರ: ಕಾ:ಮ್ರೇಡ್ ಮೃಣಾಲಿನಿದೇವಿಯವರು ... ....

ಮೃಣಾಲಿನಿ : ( ನಡುವೆ ಬಾಯಿ ಹಾಕಿ ) ದೇವಿ-ಗೀವಿಯೆಂದು ನೀವು ನನಗೆ ಮೇಲಿನ ವರ್ಗದ ಉಪನಾಮಗಳನ್ನು ಕೊಡಬೇಡಿರಿ ! ಕಾ:ಮ್ರೇಡ್ ಮೃಣಾಲಿನಿಯೆಂದರೆ ಸಾಕು. ಇವರು ಯಾರು, ಕಾಂತಿಚಂದ್ರಜಿ ? ನನ್ನ ಪರಿಚಯ ಮಾಡಿಕೊಟ್ಟು ಇವರನ್ನು ಹಾಗೆಯೇ ಮುಸುಕು ತೆರೆಯದೆ ಕೂಡಿಸಿದ್ದೀರಲ್ಲ ?
ಕಾಂತಿಚಂದ್ರ : ( ತುಸು ನಕ್ಕು ) ಹೌದು ! ನಾನು ಮೊದಲೇ ಹೇಳಬೇಕಿತ್ತು. ಇವರು ಕಿಶನ್ ಕಿಶೋರಜೀಯವರು. ದಿಲ್ಲಿಯಲ್ಲಿಯ ಕುಬೇರಪುತ್ರರು. ಅವರು ಕಿಶೋರಜೀಯವರ ಪತ್ನಿ , ರುಕ್ಕಿಣಿದೇವಿಯವರು. ( ಇಬ್ಬರೂ ನಮಸ್ಕರಿಸುತ್ತಾರೆ.)
ಮೃಣಾಲಿನಿ : ಅಡ್ಡಿ ಇಲ್ಲ! ಒಂದೇ ಮಾದರಿಯ ಪುಚ್ಚದ ಹಕ್ಕಿಗಳು ನೀವು. ಅಂತೇ ಇಲ್ಲಿ ಕೂಡಿದ್ದೀರಿ !
ಕಿಶನ್ ಕಿಶೋರ : ನಾನಂ/ತೂ ಬಂಡುವಳಗಾರ. ಆದರೆ ಕಾಂತಿಚಂದ್ರರು - ಗಾಂಧಿಟೊಪ್ಪಿಗೆ ಹಾಕಿದ್ದಾರಲ್ಲ ? ಅವರೂ ನಾನೂ ಹೇಗೆ ಒಂದಾದೇವು ?
ಮೃಣಾಲಿನಿ : (ತಿರಸ್ಕಾರದಿಂದ ಗಾಂಧಿಟೊಪ್ಪಿಗೆಯೂ ಬಂಡವಳಶಾಹಿಯ ಚಿನ್ಹ. ದಾಸ್ಯದಲ್ಲಿದ್ದು ವಿಮುಕ್ತವಾಗಲಿದ್ದ ಬಂಡುವಾಳದ ಚಿನ್ಹವೆಂಬುದಿಷ್ಟೇ ಅದರ ವೈಶಿಷ್ಟ!
ಕಾಂತಿಚಂದ್ರ : ( ನಕ್ಕು) ಹೌದು, ಕಿಶನ್ ಕಿಶೋರಜೀ ! ಮೃಣಾಲಿನಿ ಹೇಳುತ್ತಾಳೆ. ಒಂದಿಲ್ಲೊಂದು ದಿನ ಈ ಮಧ್ಯಪಥವನ್ನು ಬಿಟ್ಟು ನಾನೂ ಬಂಡವಾಳದ ಬಂಟ ಇಲ್ಲವೆ ಸಮತಾವಾದಿಯಾಗುವೆನೆಂದು !
ಕಿಶನ್ ಕಿಶೋರ : ಇನ್ನೂ ಹೀಗೆಯೇ ಕೆಲವು ವರ್ಷ ಕಾ:ಮ್ರೇಡ್ ಮೃಣಾಲಿನಿಯವರ ಸಹವಾಸದಲ್ಲಿ ನೀವಿದ್ದರೆ, --ಅದರಲ್ಲಿ ಅಸಂಭವನೀಯವಾದುದೇನೂ ಇಲ್ಲ. ಅವರಲ್ಲಿ ನಿಮ್ಮನ್ನು ಮತಾಂತರಿಸಬಲ್ಲ ಸಾಮರ'[ಎಲ್ಲರೂ ನಗುತ್ತಾರೆ. ಮೃಣಾಲಿನಿಯು ಕೋಪವನ್ನು ಸೂಚಿಸಿ ಸುಮ್ಮನೆ ಚಹ ಕುಡಿಯುತ್ತಾಳೆ.] ಕಾಂತಿಚಂದ್ರ: ಇನ್ನೊಂದು ಮಾತು, ಈಗ ತಾವು ದಿಲ್ಲಿಯಿಂದ ದೂರವಾಗುತ್ತೀರಿ. ತಮ್ಮ ಅನುಭವದ ಸಲಹೆಯನ್ನು ನಾನು ಪಡೆಯ ಬಹುದೆ?
ಕಿಶನ್‌ಕಿಶೋರ : ಓಹೋ, ಅವಶ್ಯವಾಗಿ, ಆದರೆ ತಮ್ಮ ಮನಸ್ಸನ್ನು ನಾನು ಕೆಡಿಸುವದು ಬೇಡ. ನನ್ನ ಮಾತಿನ ಸತ್ಯತೆಯನ್ನು ತಾವೇ ಸ್ವತಃ ಮನಗಾಣಬೇಕು. ದಾರಾಗಂಜದ ಹತ್ತಿರದಲ್ಲಿರುವ ಅನಾಥಾಶ್ರಮದ ಹೆಸರನ್ನು ತಾವು ಕೇಳಿದ್ದೀರಾ?
ರುಕ್ಮಿಣಿದೇವಿ: ನಾವೇ ಅದನ್ನು ಸ್ಥಾಪಿಸಿ ಸಂವರ್ಧಿಸಿದೆವು. ಇವರೇ ಇಲ್ಲಿಯ ವರೆಗೆ ಅದರ ಅಧ್ಯಕ್ಷರಾಗಿದ್ದರು.
ಕಾಂತಿಚಂದ್ರ : ಓಹೋ! ಕೇಳದೆ ಏನು? ಈಗ ಅದರ ಅಧ್ಯಕ್ಷರು ಯಾರು?
ಕಿಶನ್ ಕಿಶೋರ : ಬನಸಿಲಾಲರೆಂಬ ಸೇಠರು. ಸಂಸ್ಥೆಗೊಂದು ಟ್ರಸಿದೆ. ಈ ಸೇಠರ ಬಗ್ಗೆ ಮಾತ್ರ ತಾವು ಜಾಗರೂಕರಾಗಿರಬೇಕು.
ರೋಹಿಣಿದೇವಿ : (ಉತ್ಸುಕತೆಯಿಂದ) ಅದೇಕೆ? ಅವರ ವಿಷಯವೇನು ?
ರುಕ್ಮಿಣಿದೇವಿ: ಅರ್ಧ ಅವರಿಂದ ದಿಲ್ಲಿಯಲ್ಲಿ ನಾವು ನೆಲೆಗೆಟ್ಟೆವು. ಅವರೇ ಇವರ ಸಾರ್ವಜನಿಕ ಜೀವನದಲ್ಲಿ ವಿಷ ಬೆರಸಿದರು.
ಕಿಶನ್‌ಕಿಶೋರ : ಸೇಠ ಬನಸಿಲಾಲರು ವ್ಯವಹಾರನಿಪುಣರು. ದೇಶಭಕ್ತ ರೆಂದು ಜನತೆಯ ಮುಂದೆ ನಿಂತವರು. ಆದರೆ ದೇಶಸೇವೆ, ಸಮಾಜ ಸೇವೆ-ಎಲ್ಲವೂ ಅವರ ಸ್ವಂತದ ಸೇವೆಗೆ ಮಾತ್ರ ಸಾಧನಗಳು! ಅವರಿಗೆ ತಮ್ಮ ಬೇಳೆಯೊಂದು ಬೇಯ್ದರಾಯಿತು. ಯಾರ ಪಾತ್ರೆಯಾದರೂ ಸರಿಯೆ !
ಮೃಣಾಲಿನಿ : (ಏಳುತ್ತ) ಸರಿ. ಇನ್ನು ಈ ಹರಟೆಗೆ ಕೊನೆಯೇ ಇಲ್ಲ! ರೋಹಿಣಿಬೆನ್! ನಡೆಯಿರಿ ಇನ್ನು ಹೋಗೋಣ. ಮುಂದೆ ನನಗಿನ್ನೂ ನೂರು ಕೆಲಸ ಕಾದಿವೆ.
ರೋಹಿಣಿದೇವಿ : ಮೃಣಾಲಿನಿ! ಇದೇನು ಅವಸರ! ತಡೆ ... ....
ರುಕ್ಮಿಣಿದೇವಿ : (ನೊಂದುಕೊಂಡು) ತಾವು ಹೋಗಬಹುದು. ಈ ಹಾಳು ಗಾಡಿಗಳು ಯಾವಾಗಲೂ ತಡವಾಗಿಯೇ ಹೊರಡುತ್ತವೆ. ಯುದ್ಧದ ಎಲ್ಲ ಭಾರ ಇವುಗಳ ಮೇಲೆಯೇ ಬಿದ್ದ೦ತೆ ಕಾಣುತ್ತದೆ. (ಕಿಶನ್ ಕಿಶೋರರೆಡೆಗೆ ತಿರುಗಿ) ನಡೆಯಿರಿ! ಇನ್ನು ಹೋಗೋಣ, ಹೊತ್ತಾಗಿರಬಹುದು.
ಕಿಶನ್ ಕಿಶೋರ : ನಮ್ಮ ಕೋಸಲೇಂದ್ರ ಇನ್ನೂ ಬರಲೇ ಇಲ್ಲವಲ್ಲ?
ರುಕ್ಮಿಣಿದೇವಿ : ಆ ನಿಮ್ಮ ಕೋಸಲೇಂದ್ರ ಕವಿ ಯಾವ ಮೂಲೆಯಲ್ಲಿ ಕವಿತೆ ಬರೆಯುತ್ತ ಕೂತಿದ್ದಾನೋ! ಗಾಡಿ ವೇಳೆಗೆ ಸರಿಯಾಗಿ ಹೊರಟಿದ್ದರೆ ಇಷ್ಟೊತ್ತಿಗೆ ನಾವು ಮಥುರಾ ನಿಲ್ಮನೆಯನ್ನು ದಾಟುತ್ತಿದ್ದೆವು !
ಮೃಣಾಲಿನಿ : ನೀವು ಹೋಗುವದೆಲ್ಲಿಗೆ? ರುಕ್ಮಿಣಿದೇವಿ : (ತುಸು ಸಿಟ್ಟಿನಿಂದ) ಕಮಿಸಬೇಕು. ಮಾಹುವಿಗೆ ಹೋಗ ತೇವೆ. ನೀವಿರುವ ದಿಕ್ಕಲ್ಲ ಅದು. ನೀವು ಯೋಚನೆ ಮಾಡಬೇಕಾದುದಿಲ್ಲ.
ಕಾಂತಿಚಂದ್ರ : ಮೃಣಾಲಿನಿ! ಅವರು ಮಾಹುವಿಗೆ ಹೋಗಿ ಕೆಲವು ಕಾಲ ಧರ್ಮಸಾಧನೆಯಲ್ಲಿ ಕಳೆಯಬೇಕೆಂದಿದ್ದಾರೆ. ಸುಮ್ಮನಿರು. ಹಾಗೆ ಅಡ್ಡಡ್ಡ ಪ್ರಶ್ನೆ ಕೇಳಬಾರದು.
ಮೃಣಾಲಿನಿ : (ಆಶ್ಚರ್ಯದಿಂದ) ಮಾಹುವಿಗೆ! ಧರ್ಮಸಾಧನೆಗೋಸ್ಕರ! “ಓಹೋ!!!

[ಇಷ್ಟರಲ್ಲಿ ಕೋಸಲೇಂದ್ರಶರ್ಮನು ಪ್ರವೇಶಿಸುತ್ತಾನೆ. ಒಂದು ನೆಹರು ಶರ್ಟು, ನಯವಾದ ಧೋತರ, ವಯಸ್ಸು ಇಪ್ಪತ್ತೆಂಟರ ಹೊರವೊಳಗೆ.]


ಕೋಸಲೇಂದ್ರ: (ನಗುತ್ತ) ಕ್ಷಮಿಸಬೇಕು, ಕಿಶನ್ ಕಿಶೋರಜಿ! ವೇಳೆಗೆ ಸರಿಯಾಗಿ ಬರಬೇಕೆಂದು ಹೊರಟೆ ಹಾದಿಯಲ್ಲಿ ಹರಿಜನ ಸಂಘದ ಕಾರ್ಯದರ್ಶಿ ಭೆಟ್ಟಯಾಗಿ ಮಾತು ಬೆಳೆಸಿದ. ಮುಂದೆ ಬರುವಷ್ಟರಲ್ಲಿ ಒಂದು ಮಗು ದಾರಿ ತಪ್ಪಿಸಿಕೊಂಡು ರಸ್ತೆಯ ಮಧ್ಯದಲ್ಲಿ ನಡೆದಿತ್ತು. ಅಪಘಾತವಾದೀತೆಂದು ಅದನ್ನು ಮನೆಗೆ ಮುಟ್ಟಿಸುವಂತೆ ಪೋಲೀಸರ ಕೈಗೊಪ್ಪಿಸಿದೆ. ನಿಲ್ಮನೆಯ ಹತ್ತಿರ ಬಂದಾಗ ಅಲ್ಲಿ ಟಾಂಗಾದವರ ಜಗಳ ನಡೆದು ಕೈಗೆ ಕೈ ಹತ್ತಿತ್ತು. ಅಲ್ಲಿ ಮಧ್ಯಸ್ತಿಕೆ ಮಾಡಿದೆ. ಇಷ್ಟರಲ್ಲಿ ನೀವು ಹೋಗಿಬಿಟ್ಟರಬಹುದೆಂದು ತಿಳಿದಿದ್ದೆ. ಆದರೆ ಗಾಡಿ ತಡವಾಗಿದ್ದು ನನ್ನ ಸುದೈವ! ರುಕ್ಕಿಣಿದೇವಿ : ಹಾಗಲ್ಲ, ಕೋಸಲೇಂದ್ರ! ನಮ್ಮ ಜೊತೆಗೆ ನೀನು ಮಾಹುವಿಗೆ ಬರಲಿರುವಿಯೆಂದು ನೆನಪಿಟ್ಟಿದ್ದು ನಮ್ಮ ಸುದೈವ, ಇಲ್ಲಿದೆ ಚಹ. ತೆಗೆದುಕೊಂಡು ಮೊದಲು ದಣುವಾರಿಸಿಕೊ!
[ಕೂಸಲೇಂದ್ರ ಕುಳಿತು ಚಹ ತೆಗೆದು ಕೊಳ್ಳುತ್ತಾನೆ]
ಕಾಂತಿಚಂದ್ರ : ಇವರು ಯಾರು?
ಕಿಶನ್ ಕಿಶೋರ : ಇವರು ಉದಿತೋದಿತ ಕವಿಗಳು, ದಿಲ್ಲಿಯ ಸಾಮಾಜಿಕ ಚಟುವಟಿಕೆಗಳಲ್ಲಿ ನನಗೆ ಸಹಜವಾಗಿ ಇವರ ಪರಿಚಯವಾಯಿತು. ಅದು ಈಗ ಸ್ನೇಹವಾಗಿ ಬೆಳೆದಿದೆ. ಕೋಸಲೇಂದ್ರರ ಹಿಂದೀ ಕವನಗಳನ್ನು ತಾವು ನೋಡಿರಬಹುದಲ್ಲ?
ಕಾಂತಿಚಂದ್ರ : (ಸಂಕೋಚದಿಂದ) ಇಲ್ಲ ......... ನಾನಿನ್ನೂ ಸಾಹಿತ್ಯ ವನ್ನು ಹೆಚ್ಚಾಗಿ ಓದಿಕೊಂಡಿಲ್ಲ. ಇನ್ನು ಮೇಲೆ ನೋಡಬೇಕು ಎಂದಿದ್ದೇನೆ.
ರೋಹಿಣಿದೇವಿ : ('ದಿಲ್ಲಿಯ ಕಿಲ್ಲೆ' ಎಂಬ ಕವನವನ್ನು ಪ್ರಸಿದ್ದಿ ಸಿದ್ದಕ್ಕಾಗಿ ನವಜೀವನ ವಾರಪತ್ರಿಕೆಯ ಠೇವು ಜಪ್ತಾಯಿತಲ್ಲ? ಅದರ ಕರ್ತೃ ಇವರೇ ಎಂದು ಕಾಣುತ್ತದೆ? ಕೋಸಲೇಂದ್ರಬಾಬು ಎಂಬ ಹೆಸರನ್ನು ಆ ಸಂಬಂಧದಲ್ಲಿ ನಾನು ಓದಿದ್ದೆ.
ಕಾಂತಿಚಂದ್ರ : ಹೌದು! ಸರಕಾರದ ಕಣ್ಣು ಒಂದೆರಡು ಸಲ ನನ್ನ ಮೇಲೆ - ಬಿದಿ ದೆ?
ಮೃಣಾಲಿನಿ : ದಿಲ್ಲಿಯ ಕಿಲ್ಲೆ ಯಾಯಿತು; ರಾವಳಪಿಂಡಿಯ ಮೇಲೆ ಹಲ್ಲೆ - ಯಾಯಿತು! ಸಂಕುಚಿತ ರಾಷ್ಟ್ರೀಯತೆ ಇಲ್ಲವೆ ಮುಗಿಲಿನಾಚೆಗೆ ರೆಕ್ಕೆ ಬಡಿಯುವ ಆಧ್ಯಾತ್ಮಿಯತೆ-ಈ ಎರಡು ವಿಷಯಗಳ ನಡುವೆ ಉಯ್ಯಾಲೆ ಯಂತೆ ನಮ್ಮ ಕವಿಗಳು ಹೊಯ್ದಾಡುತ್ತಾರೆ. (ಕಿಶನ್ ಕಿಶೋರರೆಡೆಗೆ ತಿರುಗಿ) ಇವರಂತಹ ಸ್ವಪ್ನ ಜೀವಿಗಳು ನಿಮ್ಮಂತಹ ಶ್ರೀಮಂತ ಧರ್ಮಾಂಧರಿಗೆ ಗಂಟುಬಿದ್ದಿರುವುದು ಸಹಜವಾಗಿದೆ. ಜೀವನರಂಗವನ್ನು ಎದುರಿಸದೆ ಹೆದರಿ ಜಾರಿಹೋಗುವ ನಿಮಂಥ ಆತ್ಮವಾದಿಗಳಿಗೆ ಇವರ ಸಹವಾಸವಲ್ಲದೆ ಮತ್ತಾರದು ರುಚಿಸೀತು! [ಕೆಣಕಿಸಿಕೊಂಡವರಂತೆ ಕಿಶನ್ ಕಿಶೋರ-ರುಕ್ಕಿಣಿದೇವಿಯವರು ಮೃಣಾಲಿನಿಯನ್ನು ನೋಡುವರು, ಕಾಂತಿಚಂದ್ರ-ರೋಹಿಣಿದೇವಿ ಯವರು ಗಾಬರಿಯಾಗುವರು.] ಕೋಸಲೇಂದ್ರ : ನನ್ನನ್ನು ನೀವು ಸ್ವಷ್ಟ ಜೀವಿಯೆಂದು ಕರೆದಿರಿ, ನಿಮ್ಮದುಅದೆಂಥ ಜೀವ? ನೀವು ಪಿನ್ ಮಾಡಿಕೊಂಡಿದ್ದ ಆ ಸುತ್ತಿಗೆಯ ಚಿನ್ನ ಏನನ್ನು ಸೂಚಿಸುತ್ತದೆ? ಮಾರ್ಕ್ಸವಾದದ ಸ್ವಪ್ನ ವನ್ನಷ್ಟೆ?
ಮೃಣಾಲಿನಿ : (ಕೋಪದಿಂದ) ಮಾರ್ಕ್ಸವಾದವು ಸ್ವಪ್ನವೆಂದು ಹೇಳುವವರು ಕಣ್ಣಿಲ್ಲದವರು! ಅದು ದಾರುಣ ವಾಸ್ತವವಾದ, ನಗ್ನ ಸತ್ಯ, ನಿರ್ದಾಕ್ಷಿಣ್ಯ ಮೀಮಾಂಸೆ, ಕ್ರಾಂತಿಯ ಕಹಳೆ, ಅದು ಧರ್ಮದ ಅಫೀಮಲ್ಲ, ಆತ್ಮದ ಕ್ಲೋರೊಫಾರ್ಮಲ್ಲ!
ರೋಹಿಣಿ : (ಅವಸರದಿಂದ) ಹುಶ್, ಮೃಣಾಲಿನಿ! ಸಾಕುನಾಡು! ನಿನ್ನಮಾರ್ಕ್ಸವಾದವನ್ನು ನಾಳೆ ನಮ್ಮೊಡನೆ ಬಾಯಿತುಂಬ ಚರ್ಚಿಸುವಿಯಂತೆ! ಇಲ್ಲಿ ಮಂದಿಯೊಡನೆ ವಾದ ಹೂಡುವದು ಬೇಡ.
ಕೋಸಲೇಂದ್ರ : (ನಗುತ್ತ) ಹಾಗೆ ತಾವು ಭಯಪಡಬೇಕಾದುದಿಲ್ಲ. ಮನಸ್ಸು ಬಿಚ್ಚಿದರೆ ಮಾತ್ರ ಮಾತು ಮಲ್ಲಿಗೆಯಾಗುವದು. ಇಲ್ಲದೆ ಹೋದರೆ ಅದೆಲ್ಲಿಗೆ ಮುಟ್ಟಿತು? ಸಂಪ್ರದಾಯದಲ್ಲಿ ಸಿಕ್ಕು ಬಾಯಿ ಬಿಗಿ ಹಿಡಿದು ಹಿಡಿದು ಸಮಾಜವು ಸ್ಫೋಟವಾಗುವ ಸಮಯ ಬಂದಿದೆ ಈಗ ! ನೀವು, ನೀವು …. (ರುಕ್ಷ್ಮಿಣಿದೇವಿಯರ ಕಡೆಗೆ ತಿರುಗಿ) ಇವರ ಹೆಸರೇನು ರುಕ್ಕಿಣಿದೇವಿ?
ರುಕ್ಷ್ಮಿಣಿದೇವಿ : (ವ್ಯಂಗ್ಯದಿಂದ) ಕಾ:ಮೈಡ್ ಮೃಣಾಲಿನಿ.
ಕೋಸಲೇಂದ್ರ: ಕಾ:ಮೋಡ್ ಮೃಣಾಲಿನಿ! ನಿಮ್ಮ ಸ್ಪಷ್ಟೋಕ್ತಿಯನ್ನು ನಾನು ಒಪ್ಪಿದೆ. ಆದರೆ ನಿಮ್ಮ ಅಭಿಪ್ರಾಯವನ್ನಲ್ಲ. ಮಾರ್ಕ್ಸವಾದವು ಸೃಷ್ಣ ವಲ್ಲವೆಂದು ನೀವು ಹೇಳುತ್ತೀರಾ? 'ಪ್ರತಿಯೊಂದು ವಾದದಲ್ಲಿ ಸ್ವಪ್ನ-ಸತ್ಯಗಳು ತಳಕುಗೊಂಡಿರುವವೆಂದು ನಾನು ನಿಮಗೆ ತೋರಿಸಿ ಕೊಟ್ಟರೆ?
ಮೃಣಾಲಿನಿ : (ಸಿಟ್ಟಿನಿಂದ) ಕವಿವರ್ಯರೆ! ಇನ್ನು ನಾನು ಮಾತನಾಡು ವದಿಲ್ಲ. ಸುಮ್ಮನೆ ನನ್ನ ಮಾತಿನಿಂದ ಉಳಿದವರಿಗೆ ತಲೆಬೇಸರ. ಇನ್ನು ಮುಂದೆ ಮೇಲುವರ್ಗದ ಪ್ರಾಣಿಗಳ ಸಹವಾಸದಲ್ಲಿರುವ ತನಕ ಬಾಯಿಗೆ ಹೊಲಿಗೆ ಹಾಕಿಕೊಳ್ಳುತ್ತೇನೆ! ಕೋಸಲೇಂದ್ರ : (ನಗುತ್ತ) ಹೀಗೆ ಸಿಟ್ಟಿಗೆದ್ದೇನು ಪ್ರಯೋಜನ, ಕಾಃಮ್ರೇಡ್ ಮೃಣಾಲಿನಿ? ಮೇಲುವರ್ಗದ ಜನರಲ್ಲಿ ನಿಮ್ಮ ತತ್ವಪ್ರಸಾರ ಮಾಡುವದು ನಿಮ್ಮ ಕರ್ತವ್ಯವಾಗಿದೆ. ಹಾಗೆ ಮಾಡದೆ ಹೋದರೆ ನೀವು ಕರ್ತವ್ಯಚ್ಯುತರಾಗುತ್ತೀರಿ!

ಮೃಣಾಲಿನಿ : (ಕವಕ್ಕನೆ) ನನ್ನ ಕರ್ತವ್ಯದ ಬಗ್ಗೆ ನಿಮ್ಮಿಂದ ಉಪನ್ಯಾಸ ಬೇಕಾಗಿಲ್ಲ! ನನ್ನ ಕರ್ತವ್ಯವನ್ನು ಪಾಲಿಸಲು ನನಗೆ ನೂರು ವೇದಿಕೆಗಳಿವೆ; ಕೂಲಿಕಾರರಿದ್ದಾರೆ; ಒಕ್ಕಲಿಗರಿದಾರೆ, (ಕಿಶನ್‌ಕಿಶೋರರನ್ನು ಬೊಟ್ಟು ಮಾಡಿ ತೋರಿಸಿ) ಇವರಂತೆ ಗಜರ್, ಹಲವಾ ತಿಂದು ಹೊಟ್ಟೆ ಉಬ್ಬಿಸಿಕೊಳ್ಳದ ಮಧ್ಯಮವರ್ಗದವರಿದ್ದಾರೆ. ಇಂಥ ಈ ಪ್ರಾಣಿಗಳನ್ನು ತೆಗೆದುಕೊಂಡು ನನಗೇನು ಮಾಡಬೇಕಾಗಿದೆ!!

[ಮೋರೆ ತಿರುವಿ ಕೂಡುತ್ತಾಳೆ ಕಿಶನ್ ಕಿಶೋರರು ಗಾಬರಿಯಾಗಿ ತನ್ನ ದುರಿಗಿರುವ ಗಜರ್ ಹಲವಾದ ಪ್ಲೇಟನ್ನು ನೋಡುತ್ತಾರೆ.]

ರೋಹಿಣಿದೇವಿ : (ಬಿಗುವಿನಿಂದ) ಹಾಗೆ ಮಾತಾಡಬಾರದು, ಮೃಣಾಲಿನಿ! ಇನ್ನೊಬ್ಬರ ಬಗ್ಗೆ ಆದರವಿರದಿದ್ದರೆ ಹೋಗಲಿ. ಕನಿಷ್ಟ ಅವರನ್ನು ಹೀಗೆ ಅಪಮಾನಗೊಳಿಸಬಾರದು. ನಿನ್ನ ಪಿತಾಜಿಯವರಿಗೆ ಇದು ಗೊತ್ತಾದರೆ ಅವರು ಏನಂದಾರು!

ಮೃಣಾಲಿನಿ : ನನ್ನ ಪಿತಾಜಿಯವರು ನನ್ನ ಹಾದಿಯನ್ನು ಅದೆಂದಿಗೋ ಬಿಟ್ಟುಬಿಟ್ಟಿದ್ದಾರೆ. ಹೀಗೆ ಮಾತಾಡದಿದ್ದರೆ ಹೇಗೆ ಮಾತಾಡಬೇಕು? ಮಾತು-ಮಾತಿಗೆ ಹೂಂಗುಡುತ್ತ ಕವಲೆತ್ತಿನಂತೆ ತಲೆ ಹಾಕಬೇಕೊ?

ರುಕ್ಮಿಣಿದೇವಿ : (ಉದ್ವಿಗ್ನಳಾಗಿ) ಅದೇಕಾದೀತು? ಹೀಗೆಯೇ ಸಾಗಲಿ! (ಮೃಣಾಲಿನಿಯ ಎದುರಿಗಿದ್ದ ಭಜಿಯ ಭೇಟನ್ನು ತೋರಿಸುತ್ತ) ಗಜರ್ ಹಲವಾದ ವಿಷಯ ಹಾಗಿರಲಿ, ನೀವು ಖಾರ ತುಂಬಿದ ಈ ಭಜಿಗಳನ್ನು ತಿನ್ನುತ್ತ ಹೀಗೆಯೇ ಉರುಪು ಬೀಳುವಂತೆ ಮಾತಾಡುತ್ತ ಹೋಗಿರಿ! ಕೋಸಲೇಂದ್ರ, ಇನ್ನು ನಡೆ, ಗಾಡಿಯ ಹೊತ್ತಾಯಿತು!

[ಏಳುತ್ತಾಳೆ, ಓಂಪ್ರಕಾಶನೆಂಬ ಕಿಶನ್ ಕಿಶೋರರ ಸೇವಕನು ಬರುತ್ತಾನೆ.]

ಓಂಪ್ರಕಾಶ : ಗಾಡಿಯು ಪ್ಲಾಟಫಾಃರ್ಮಿಗೆ ಬಂದಿದೆ, ಸರಕಾರ! ಇನ್ನು ಹೊರಡುವದಾಗಬೇಕು. ಕಿಶನ್ ಕಿಶೋರ : ಒಳ್ಳೇದು. ನೀನು ಮುಂದೆ ನಡೆ; ಸಾಮಾನು ಗಾಡಿಯಲ್ಲಿ ಹಾಕಿಸು. ['ಜಿ' ಎಂದು ಓಂಪ್ರಕಾಶನು ಹೋಗುತ್ತಾನೆ. ಕಾಂತಿಚಂದ್ರರ ಕಡೆಗೆ ತಿರುಗಿ ಏಳುತ್ತ] ಬರುತ್ತೆವೆ, ಕಾಂತಿಚಂದ್ರ ! ಬರುತ್ತವೆ; ರೋಹಿಣಿದೇವಿ ! ನಾನು ಬರಲೊ, ಕಾ:ಮ್ರೇಡ್ ಮೃಣಾಲಿಸಿ ? ಕಾಂತಿಚಂದ್ರ ! ಇನ್ನೊಮ್ಮೆ ನಾವು ಭಟ್ಟಿಯಾಗುವಷ್ಟರಲ್ಲಿ ಕಾ:ಮ್ರೇಡ್ ಮೃಣಾಲಿನಿಯವರಿಗೆ ಗಜರ್‌ಹಲವಾ ತಿನ್ನುವ ರೂಢಿ ಕಲಿಸಿರಿ. ಅವರ ಬಾಯಿ ತುಸು ಸಿಹಿಯಾಗಲಿ !

ಕಾಂತಿಚಂದ್ರ : ನಮಸ್ಕಾರ, ಹೋಗಿ ಬನ್ನಿರಿ. ( ಮೆಲ್ಲನೆ ಕಿಶನ್ ಕಿಶೋರರ ಹತ್ತಿರ ಬಂದು ) ಮೃಣಾಲಿನಿಯ ಮಾತನ್ನು ತಾವು ಮನಸ್ಸಿಗೆ ಹಚ್ಚಿಕೊಳ್ಳ ಬಾರದು. ಆಕೆ ಮಾತನಾಡುವದೇ ಹೀಗೆ. ಆದರೆ ಆಕೆಯ ಹೃದಯ ಶುದ್ಧವಾಗಿದೆ.

ಕಿಶನ್ ಕಿಶೋರ : ಛೇ ! ಛೇ ! ಅಷ್ಟು ನನಗೆ ತಿಳಿಯುವದಿಲ್ಲವೆ ? ಅದರ ಬಗ್ಗೆ ಅನ್ಯಥಾ ವಿಚಾರ ಬೇಡ. ಬರುತ್ತೇನೆ. ನಮಸ್ಕಾರ.

ರುಕ್ಮಿಣಿದೇವಿ : (ಬಿಗುವಿನಿಂದ ಕಾಂತಿಚಂದ್ರ ರೋಹಿಣಿದೇವಿಯನ್ನು ನೋಡುತ್ತ) ಬರುತ್ತೇನೆ, ನಮಸ್ಕಾರ !

ರೋಹಿಣಿದೇವಿ: (ತುಸು ಹತ್ತಿರ ಬಂದು ಮೆಲ್ಲನೆ) ಮೃಣಾಲಿನಿಯ ಹುಚ್ಚು ಮಾತಿಗೆ ತಾವು ನೊಂದುಕೊಳ್ಳಬಾರದು.ಆಕೆಯ ರೀತಿಯೇ ಹೀಗೆ ನನ್ನ ಮನಸ್ಸನ್ನು ಸಹ ಒಮ್ಮೊಮ್ಮೆ ಹೀಗೆಯೆ ನೋಯಿಸುತ್ತಾಳೆ.

ರುಕ್ಮಿಣಿದೇವಿ : ಛೇ ! ಆ ಹುಡುಗಿಯ ಮಾತಿಗೂ ತನಗೂ ಏನು ಸಂಬಂಧ! ಆದರೂ ಈ ಹೊಸ ಪೀಳಿಗೆ ವಿಚಿತ್ರವಾಗಿದೆ. ನಮಸ್ಕಾರ ! ಕೋಸಲೇಂದ್ರ, ನಡೆ ! ಇನ್ನು ತಡಮಾಡಿದರೆ ನೀನು ಇಲ್ಲಿಯೇ ಉಳಿಯ ಬೇಕಾದೀತು !

[ಕಿಶನ್ ಕಿಶೋರ-ರುಕ್ಮಿಣೀದೇವಿಯವರು ಹೋಗುತ್ತಾರೆ.]

ಕೋಸಲೇಂದ್ರ : (ಕಾಂತಿಚಂದ್ರ-ರೋಹಿಣಿದೇವಿಯವರನ್ನುದ್ದೇಶಿಸಿ) ಬರುತ್ತೇನೆ. ನಮಸ್ಕಾರ ! ತಾವು ಇನ್ನೂ ಕೆಲವು ದಿನ ದಿಲ್ಲಿಯಲ್ಲಿಯೇ ಇರುವಿರಷ್ಟೆ ? ಕಾಂತಿಚಂದ್ರ : ಕೆಲವು ದಿನವೇಕೆ? ಇನ್ನು ದಿಲ್ಲಿಯಲ್ಲಿಯೇ ನೆಲಸಿರುತ್ತೇವೆ! ನಮ್ಮ ವಿಷಯವನ್ನೆಲ್ಲ ಕಿಶನ್ ಕಿಶೋರರು ಹಿಂದಿನಿಂದ ತಮಗೆ ತಿಳಿಸಬಹುದು.

ರೋಹಿಣಿದೇವಿ : ಅವರ ಜೊತೆಗೆ ತಾವೂ ಮಾಹುವಿಗೆ ಹೋಗುತ್ತೀರಾ?

ಕೋಸಲೇಂದ್ರ : ಹೌದು, ಹೋಗಿ ನಾಲ್ಕು ದಿನ ಅಲ್ಲಿ ಇದ್ದು ಬರಬೇಕೆಂದಿದ್ದೇನೆ. ಬಂದ ಮೇಲೆ ಬಿಟ್ಟಯಾಗಿಯೇ ಆಗುವದಲ್ಲ! ನಮಸ್ಕಾರ! ಜಯ ಹಿಂದ್, ಕಾ:ಮೋಡ್ ಮೃಣಾಲಿನಿ! ನಾನು ಮರಳಿದ ಮೇಲೆ ನಮ್ಮ ತಾತ್ವಿಕ ಚರ್ಚೆಯನ್ನು ಪ್ರಾರಂಭಿಸೋಣ!

ಮೃಣಾಲಿನಿ : ಜಯಹಿಂದ್ ಎಂದು ನನ್ನನ್ನು ಬೀಳ್ಕೊಳ್ಳಲು ನಾನೇನು ಜಪಾನಿಗಳ ಕೈಗೊಂಬೆಯೆಂದು ತಿಳಿದಿರಾ! ಇನ್ನು ತಾತ್ವಿಕ ಚರ್ಚೆಯ ವಿಷಯ ಹಾಗಿರಲಿ, ನೀವು ನರ್ಮದಾ ತೀರದಿಂದ ಮರಳಿ ಬರುವ ಕಾರಣವೇ ಇಲ್ಲ! ನನಶ್ರೀ, ಬೆಳದಿಂಗಳು, ಹೂ, ಹಸಿರು ಹುಲ್ಲು, ಇವು ಅಲ್ಲಿ ಬೇಕಾದಷ್ಟಿರಬಹುದು. ಅಲ್ಲಿಯೇ ನೀವು' ಸಮಾಧಿಸ್ಥರಾಗಿ ಕುಳಿತು ಬಿಡಿರಿ! ಜೀವಂತ ಸಮಾಜದಲ್ಲಿ ನಿಮಗೆ ಸ್ಥಾನವಿಲ್ಲ

ಕೋಸಲೇಂದು : (ನಕ್ಕು) ಬಂದ ಮೇಲೆ ನೋಡೋಣ, ನಿಮ್ಮ ಜೀವಂತ ಸಮಾಜ ಹೇಗಿರುವದೆಂದು! ಅಲ್ಲಿಯ ವರೆಗೆ,-ನಮಸ್ತೆ- (ಹೋಗುತ್ತಾನೆ.)

ರೋಹಿಣಿದೇವಿ : ಮೃಣಾಲಿನಿ! ನಡೆ ಇನ್ನು! ಎಲ್ಲಿದೆ ನೀನು ತಂದ ಕಾರು? ಇಲ್ಲಿಯವರೆಗಾದ ಕಲಹ ಇವತ್ತಿಗೆ ಸಾಕು !

ಕಾಂತಿಚಂದ್ರ : ಮೃಣಾಲಿನಿಯು ಆಗ್ನಿಯ ಪುಟಿಚೆಂಡಿದ್ದಂತೆ. ಅವಳನ್ನು ಹಿಡಿತದಲ್ಲಿಡುವದು ಸಾಧ್ಯವಿಲ್ಲ. ಅಂತೇ ಅವಳ ಪಿತಾಜಿಯವರು ಕೈಯೂರಿರಬೇಕು!

ಮೃಣಾಲಿನಿ : ನಡೆಯಿರಿ, ಕಾರು ಕಾದಿದೆ, ಮಾತು ಬೆಳೆದಿದ್ದು ನನ್ನಿಂದಲ್ಲ, ನಿಮ್ಮಿಂದ! ಇಲ್ಲಿ ನಡೆದಿದ್ದು ಕಲಹವಲ್ಲ, ವರ್ಗಸಮರ, ವರ್ಗಭೇದವು ನಿರ್ಮೂಲವಾಗುವ ತನಕ ಅದು ತಾನಾಗಿಯೇ ನಡೆದಿರುತ್ತದೆ. ನಾವು ಬೇಡವೆಂದರೂ ಕೇಳುವದಿಲ್ಲ. ಈ ಸಮರದಲ್ಲಿಯ ಸಿಡಿಮದ್ದು ನಾನು!

[ಹೋಗುತ್ತಾರೆ. ತೆರೆ.]



ಪ್ರವೇಶ ೨

[ಮಾಹುವಿನ ಹತ್ತಿರ ನರ್ಮದೆಯ ತೀರದಲ್ಲಿದ್ದ ದೊಡ್ಡ ಬಂಗಲೆಯ ಅಟ್ಟದ ಮೇಲಿನ ಪಟಾಂಗಣ ಸೂರ್ಯಾಸ್ತದ ಸಮಯವಾಗಿದೆ ಅಲ್ಲಿ ಕಿಶನ್ ಕಿಶೋರ- ರುಕ್ಕಿಣಿದೇವಿ- ಕೋಸಲೆಂದ್ರರು ಹಿಮ ಫೇನವನ್ನು (jce-cream ) ಶೀತಲವಾಯುವನ್ನು ಸೇವಿಸುತ್ತ ಕುಳಿತಿದ್ದಾರೆ. ಟೇಬಲ್ಲಿನ ಮೇಲೆ ಸರಬತ್ತಿನ ಗ್ಲಾಸುಗಳೂ ಇವೆ.]

ಕಿಶನ್ ಕಿಶೋರ : ದಿಲ್ಲಿಯಲ್ಲಿ ಇನ್ನೂ ಅದೇ ಬೇಸಿಗೆ ಪ್ರಾರಂಭವಾಗಿತ್ತು. ಆದರೂ ಏನು ಸೆಕೆ ಅಲ್ಲಿ! ಇಲ್ಲಿ ಕಮ್ಮಾರನ ತಿದಿಯಿಂದೆತ್ತಿ ತಂಗೊಳದ ತುವಿ ಯಲ್ಲಿ ಇಟ್ಟ ಹಾಗಿದೆ. ಸಿಮ್ಲಾದ ವೃಥಾಡಂಬರವಿಲ್ಲ. ನೈನಿತಾಲದಲ್ಲಿಯಂತೆ ಪರಿಚಿತರ ಪೀಡೆಯಿಲ್ಲ. ಈ ಶಾಂತ- ಪ್ರಶಾಂತ ವಾತಾವರಣದಲ್ಲಿ ಅಮೃತ ಸಿಂಚನವಾದ ಈ ಹವೆಯಲ್ಲಿ-ಜೀವನವು ಚೇತರಿಸಿಕೊಳ್ಳುತ್ತಿದೆ. ಜೀವನವು ಒಂದು ಮಧುರ ಸ್ವಪ್ನದಂತೆ ಕಾಂತಿಯುತವಾಗಿದೆ, ಪ್ರಿಯವಾಗಿದೆ.

ರುಕ್ಮಿಣಿದೇವಿ : ನೀವು ಹೇಳಿದ ಆ ತಂಗೋಳವು ಬರಿ, ಕನಸಲ್ಲ. ಅಲ್ಲಿ ನೋಡಿರಿ! ನೆಲ-ಮುಗಿಲಿನಂಚಿನಲ್ಲಿ ಪ್ರಾತಃಕಾಲದಲ್ಲಿ ಥಳಥಳಿಸುವ ನರ್ಮದೆ ಈಗ ಹೇಗೆ ಶಾಂತಸಲಿಲಲೀಲೆಯಲ್ಲಿ ಲೀನಳಾಗಿದ್ದಾಳೆ ಪಡುವಣದ ಸಿರಿಗಂಸೆಲ್ಲ ಅವಳ ಹೃದಯವನ್ನು ಹೊಕ್ಕು ಹೇಗೆ ಪ್ರಕಾಶಿ ಸುತ್ತದೆ. ಆತ್ಮದ ಸ್ವಯಂಪ್ರಕಾಶವು ನಮ್ಮ ಜೀವನತರಂಗಿಣಿಯಲ್ಲಿ ಇನ್ನು ಹೀಗೆಯೇ ಮೂಡಲಿದೆ.

ಕಿಶನ್ ಕಿಶೋರ : ದಿಲ್ಲಿಯಲ್ಲಿಯ ಆ ಅಸೂಯೆ, ಆ ರಾಜಕಾರಣ, ಆ ಕೋಲಾಹಲ, ಅವನ್ನು ನೆನೆದರೆ ಮೈಗೆ ಮುಳ್ಳು ಹೆಚ್ಚುತ್ತದೆ. ತಡವಾಗಿ ಜೀವನದಲ್ಲಿ ಈ ದಾರಿ ದೊರೆಯಿತು. ಇನ್ನು ಈ ದಾರಿಯನ್ನೇ ತುಳಿಯೋಣ!

ರುಕ್ಮಿಣಿದೇವಿ : (ಇನ್ನೊಂದು ದಿಕ್ಕಿಗೆ ಬೊಟ್ಟು ಮಾಡಿ) ಅದೋ ಅಲ್ಲಿ ಕಾಣುವ ದಲ್ಲ, ಆ ಮಾವಿನ ತೋಪಿಗೆ ನಾಳೆ ಕಾರಿನಲ್ಲಿ ಹೋಗೋಣ! ಈಗ ಎರಡು ದಿನಗಳಿಂದ ಅದು ನನ್ನನ್ನು ಕರೆಯುತ್ತಿದೆ. ಕಿಶನ್ ಕಿಶೋರ : ನರ್ಮದೆಯ, ದಂಡೆಗೆ ಅಲ್ಲಿ ಕಾಣುವ ಆ ಬುರುಜು, ಅದು ನನ್ನನ್ನು ಮೋಹಿಸಿದೆ. ನಾಡಿದ್ದು ಬೆಳಗಿನಲ್ಲಿ ಅಲ್ಲಿಗೆ ಹೋಗಿ ನಾಶಾ ಮಾಡೋಣ. ಇಂಥ ವನಸಿರಿಯ ನಡುವೆ ತಿಂದ ಅನ್ನವೆಲ್ಲ ರಕ್ತವಾಗುವದು. ಆರೋಗ್ಯವು ಇಲ್ಲಿ ಗಳಿಸಬೇಕಾದ ಗಳಿಕೆಯಲ್ಲ,-ಅನಾಯಾಸವಾಗಿ ಲಭಿಸುವ ವರ,

ರುಕ್ಕಿಣಿದೇವಿ: ಅಹಾ! ಅಲ್ಲಿ ನೋಡಿರಿ ಸಂಧ್ಯೆಯ ಪ್ರಥಮ ನಕ್ಷತ್ರ ಹೇಗೆಮಿನುಗುತ್ತಲಿದೆ ! ಇನ್ನು ಕೆಲವು ನಿಮಿಷಗಳಲ್ಲಿಯೇ ಅದು ದೇದೀಷ್ಟಮಾನವಾಗುವದು. ಇಲ್ಲಿ ಒಂದು ಅರ್ಧ ಗಂಟೆ ನಾನು ಆ ನಕ್ಷತ್ರವನ್ನೇ ನೋಡುತ್ತ ಕೂಡುವೆ. ಇಂದಿನ ನನ್ನ ಕನಸುಗಳಲ್ಲಿ ಅದರ ಪವಿತ್ರ ಪ್ರಕಾಶವು ಮೂಡಲಿ.

ಕಿಶನ್ ಕಿಶೋರ : ಇತ್ತ ಮೂಡಣದ ಕಡೆಗೆ ನೋಡು! ನಿಶಿಕಾಂತ ಹೇಗೆ ಕಳೆಹೊಂದುತ್ತಲಿದ್ದಾನೆ! ನಾಳೆ ಹುಣ್ಣಿಮೆ, ನಾಳೆ ರಾತ್ರಿ ಇಲ್ಲಿಯೇ ಬೆಳುದಿಂಗಳ ನೋಟ ಮಾಡೋಣ!

ರುಕ್ಕಿಣಿದೇವಿ : ಮುಂದಿನ ವಾರ ನರ್ಮದೆಯ ದಂಡೆಗುಂಟ ಐವತ್ತು ಮೈಲು ಕಾರಿನಲ್ಲಿ ಹೋಗಿ ನದಿಯ ಮಣಿತ-ಕುಣಿತಗಳನ್ನೆಲ್ಲ ನಿರೀಕ್ಷಿಸೋಣ!

ಕಿಶನ್ ಕಿಶೋರ: ಅದರ ಮುಂದಿನ ವಾರ ವಿಂಧ್ಯಾದ್ರಿಯ ತುಂಗ ಶೃಂಗವನ್ನೇರಿ ಅಗಸ್ತ್ಯ ನಂತೆ ದಾಟಬೇಕೆನ್ನುತ್ತೇನೆ. ನೀನೂ ಬರುವಿಯಷ್ಟೆ? ಕ್ಕಿಣಿದೇವಿ : ಆಗಸ್ತ್ಯನಿದ್ದಲ್ಲಿ ಲೋಪಾಮುದ್ರೆ, ಬರದೆ ಏನು? ಆದರೆ ಆ ಶೃಂಗದ ವರೆಗೆ ಕಾರು ಹೋಗುವದಷ್ಟೆ?

[ಕೋಸಲೇಂದ್ರನು ನಗುತ್ತಾನೆ.]

ಕಿಶನ್ ಕಿಶೋರ : ಹೋಗುವಂಥ ಶೃಂಗವನ್ನೇ ಆರಿಸೋಣ. ಯಾಕೆ, ಕೋಸಲೇಂದ್ರ ! ಸುಮ್ಮನೆ ನಗುತ್ತೀ! ನೀನು ಕವಿ. ನಮಗಿಲ್ಲದ ತನ್ಮಯತೆ ಈ ಪ್ರಕೃತಿ ಸೌಂದರ್ಯದಲ್ಲಿ ನಿನಗೆ ತುಂಬಿ ಬಂದಿದ್ದೀತು !

ಕೋಸಲೇಂದ್ರ : ನೀವಿಬ್ಬರೂ ಕವಿಗಳಾಗಿ ರಸವಾಣಿಯಿಂದ ನುಡಿಯುತ್ತಿರುವಾಗ ನಾನೇತರ ಕವಿ! ವಿಂಧ್ಯಾದ್ರಿಯ ಶೃಂಗಕ್ಕೂ ರೋಲ್ಸ್ ರಾಃಯಿಸ್ ಕಾರಿಗೂ ರುಕ್ಕಿಣಿದೇವಿಯವರು ಹಚ್ಚಿದ ಸಂಬಂಧವನ್ನು ಕೇಳಿ ನಗೆ ಬಂತು. ಅಷ್ಟೆ! ಕಿಶನ್ ಕಿಶೋರ : ಅದೇನೇ ಇರಲಿ, ಮಾಹುವಿಗೆ ಬಂದು ನಿನ್ನ ಸೌಂದರ್ಯ ದೃಷ್ಟಿ ಸೂಕ್ಷ್ಮತರವಾಗಿಲ್ಲವೆ? ಹೊಸತಾಗಿ ಎಷ್ಟು ಕವನಗಳನ್ನು ರಚಿಸಿದ್ದೀ?

ಕೋಸಲೇಂದ್ರ : ಏನೇನೋ ಬರೆದಿದ್ದೇನೆ. ಆದರೆ ಇಲ್ಲಿಗೆ ಬಂದು ತಿಂಗಳಾಗುತ್ತ ಬಂತು. ದಿಲ್ಲಿಗೆ ಯಾವಾಗ ಹೊರಡುವದು ಎಂದು ಯೋಚಿಸುತ್ತಿದ್ದೇನೆ.

ಕಿಶನ್ ಕಿಶೋರ : ಏನು? ದಿಲ್ಲಿಗೆ? ದಿಲ್ಲಿಗೆ ಹೋಗಬೇಕೆನ್ನುತ್ತೀಯಾ?

ಕೋಸಲೇಂದ್ರ : ಹೌದು, ಇನ್ನು ಈ ನಿರ್ಜನ ಪ್ರದೇಶದಲ್ಲಿ ಇರುವದಾದರೂ ಎಷ್ಟು ದಿನ? ದಿಲ್ಲಿ ನನ್ನನ್ನು ಕರೆಯುತ್ತಲಿದೆ.

ರುಕ್ಕಿಣಿದೇವಿ : ದಿಲ್ಲಿ ಕರೆಯುವದೆ? ಮೋಹಿನಿಯ ಕರೆ ಅದು, ಆ ಧ್ವನಿಯಲ್ಲಿ ವಂಚನೆಯಿದೆ, ಮಾಯೆಯಿದೆ. ಅದಕ್ಕೆ ಕಿವಿಗೊಟ್ಟು ನಿನ್ನ ಜೀವಿತ ವನ್ನು ಹಾಳುಮಾಡಿಕೊಳ್ಳಬೇಡ!

ಕಿಶನ್ ಕಿಶೋರ : ಇಲ್ಲಿ ಕೆಲವು ದಿನ ಪ್ರಕೃತಿಸೌಂದರ್ಯವನ್ನು ಅನುಭವಿಸಲೆಂದು ನಿನ್ನನ್ನು ಕರೆತಂದಿದ್ದು ನಿಜ. ಆದರೆ ನರ್ಮದೆಯ ಸಾನ್ನಿಧ್ಯ ಉಳಿದ ಕೆಲಸವನ್ನು ಮಾಡುವದೆಂದು ನನಗೆನಿಸಿತ್ತು, ಕೋಸಲೇಂದ್ರ, ಇದೇ ಬಂಗಲೆಯಲ್ಲಿಯ ಒಂದು ಭಾಗವನ್ನು ನಿನಗಾಗಿ ಮೀಸಲಿರಿಸುತ್ತೇನೆ. ಇಲ್ಲಿ ನಿನ್ನ ಕಾವ್ಯ ಸಮಾಧಿಯು ಅವ್ಯಾಹತವಾಗಿ ಸಾಗಿ ಜಗತ್ತಿನಲ್ಲಿ ನನ್ನ ಈ ಶಾಂತಿಕುಟೀರವು ಅಮರವಾಗಲಿ! ನಾಳೆ ನಿನ್ನ ಮದುವೆಯಾದಾಗ ಆ ಗೃಹಣಿಯೂ ಇಲ್ಲಿ ನಿನ್ನ ಜೊತೆಗಾರ್ತಿಯಾಗಲಿ. ನಾವಿಬ್ಬರೂ ಮನೆಗೆ ಸೊಸೆ ಬಂದಳೆನ್ನುತ್ತೇವೆ.

ರುಕ್ಕಿಣಿದೇವಿ : ಆದರೆ ನೀನು ಮದುವೆಯಾಗುವದಕ್ಕಿಂತ ಮುಂಚೆ ಆ ಸೊಸೆಯನ್ನು ನಾನು ನೋಡಬೇಕು, ಕೋಸಲೇಂದ್ರ! ನನಗೆ ......... ಸೊಸೆ ಬರುವ ಹಾಗಿಲ್ಲ. ಆದರೆ ಒಂದು ವೇಳೆ ಬಂದರೆ ಹೇಗಿರಬೇಕು ಎಂದು ಅನೇಕ ಸಲ ನಾನು ಕಲ್ಪಿಸಿದ್ದೇನೆ, ಆ ಚಿತ್ರಕ್ಕೆ ಸರಿಹೋಗಬೇಕು ನಿನ್ನ ಗೃಹಿಣಿ! ಕೋಸಲೇಂದ್ರ : ( ನಗುತ್ತ) ಅದೆಲ್ಲ ಸರಿ, ರುಕ್ಕಿಣಿದೇವಿ ! ಆದರೆ ನೀವೇ ಹೇಳಿರಿ, ಈ ಅರಣ್ಯದಲ್ಲಿ ಕುಳಿತರೆ ನಾನು ಮದುವೆಯಾಗುವ ಬಗೆ ಹೇಗೆ?

ಕಿಶನ್ ಕಿಶೋರ : ಹೋಗಿ ಮದುವೆ ಗೊತ್ತು ಮಾಡಿಕೊಂಡು ಬರಬಹುದಲ್ಲ ? ಆದರೆ ನೀನು ನಮ್ಮೊಡನೆ ಇಲ್ಲಿಯೇ ಇರಬೇಕು ಕೋಸಲೇಂದ್ರ ! ಇಲ್ಲಿ ಕೃತ್ರಿಮತೆ ಇಲ್ಲ. ಈ ಘಟ್ಟದ ಹತ್ತಿರ ಬನಸೀಲಾಲರಂತಹ ಘಟಸರ್ಪಗಳಿಲ್ಲ, ನಗರದ ನಾಗರಹಾವುಗಳಿಲ್ಲ.

ಕೋಸಲೇಂದ್ರ : ಅದೆಲ್ಲ ನಿಜ. ಆದರೆ ಇಲ್ಲಿ ಅರಣ್ಯದ ಅಜಗರಗಳಿರಬಹುದಲ್ಲವೆ ? ಅಲ್ಲದೆ ನಗರದ ನಾಗರಹಾವುಗಳೂ ದೇವರ ಸೃಷ್ಟಿಯಲ್ಲಿ ಒಂದು ಭಾಗ, ಅವುಗಳನ್ನು ತಿಳಿಯದೆ ನಮ್ಮ ಅನುಭವವು ಪೂರ್ಣವಾಗುವದೆಂತು ?

ರುಕ್ಕಿಣಿದೇವಿ : ಏನನ್ನುತ್ತೀ? ನಾಗರಹಾವನ್ನು ತಿಳಿಯಲು ಅದರಿಂದ ಕಚ್ಚಿಸಿಕೊಳ್ಳುವದು ಅವಶ್ಯವೋ ?

ಕೋಸಲೇಂದ್ರ : ನಾನು ಹೇಳುವದು ಹೀಗೆ : ಇಂಥ ಸರ್ಪಗಳು ಸುಳಿಯುವ ಸಮಾಜದಲ್ಲಿ ನಾವು ಬಾಳಿ ಬದುಕಬೇಕೆಂದು. ಅಮೃತದೊಡನೆ ವಿಷವನ್ನು ಬೆರಸಿದ ಜಗತ್ತಿನಲ್ಲಿ ನಮ್ಮ ಪಾಲಿಗೆ ವಿಷದ ಬಟ್ಟಲು ಬಂದರೆ ಅದನ್ನು ಕುಡಿಯದೆ ಇರುವದು ಸ್ವಂತದ ಧೈಯಕ್ಕೆ ಅಸಾಧ್ಯವಾದರೆಆಗ ಅದನ್ನು ಕುಡಿಯಬೇಕು.

ಕಿಶನ್ ಕಿಶೋರ : ( ಸುತ್ತಲೂ ನೋಡಿ) ಇಲ್ಲಿ ನೋಡು ಕೋಸಲೇಂದ್ರ ! ಇದೂ ದೇವರು ಸೃಜಿಸಿದ ಸೃಷ್ಟಿ, ಆದರೆ ಇದರ ರಮ್ಯತೆಗೆ ಕುಂದೇ ಇಲ್ಲ. ಇದರ ಅಮೃತದಲ್ಲಿ ವಿಷ ಬೆರೆತಿಲ್ಲ. ಇಲ್ಲಿ ಹೂಡಿದ ಬಾಳು ಹೂವಿನಂತೆ ಅರಳಿ ಹೂವಿನಂತೆ ಒಂದು ದಿನ ಮುಗಿಯುವದು.

ಕೋಸಲೇಂದ್ರ: ಇರಬಹುದು ಆದರೆ ಇಚ್ಚಿಸಿದ ಶಾಂತಿಯು ದೊರಕಿದ ಮೇಲೆ ಈ ಏಕಾಂತವು ಅಸಹನೀಯವಾಗುವದು. ಮನಸ್ಸಿನ ಅಲೆದಾಟಕ್ಕಾಗಿ ದಿಲ್ಲಿಯ ದರವಾಜಗಳಂಥ ಹತ್ತೆಂಟು ಮಹಾದ್ವಾರಗಳಿವೆ. ಒಂದನ್ನು ಹಾಯ್ದು ಬಂದಾಗ, ಅಲ್ಲಿ ಕಂಡ ನೋಟವೇ ಪೂರ್ಣ ಎಂದೆನಿಸಿಬಿಡುತ್ತದೆ. ಆದರೆ ಇನ್ನೊಂದರ ವಿಷಯದಲ್ಲಿ ಜುಗುಪ್ಪೆಯು ಕಡಮೆಯಾಗಲು, ಮನಸ್ಸು ಮತ್ತೆ ಆ ದಾರಿಯನ್ನು ತುಳಿಯಲು ಮತ್ತೆ ಹವಣಿಸುತ್ತದೆ. ಪೂರ್ಣತೆಯು ನಮ್ಮ ಅಂತರಂಗದಲ್ಲಿದೆ; ಸೃಷ್ಟಿಯಲ್ಲಿಲ್ಲ. ರುಕ್ಕಿಣಿದೇವಿ: ಇನ್ನೂ ದಿಲ್ಲಿಯ ಆಸೆ ನಿನಗೆ ಬಿಟ್ಟಿಲ್ಲ. ಅಂತೇ. ಹೀಗೆ ಹೊಯ್ದಾಡುತ್ತಿದ್ದೀ, ಇನ್ನೂ ಪರಿಪಕ್ವವಾಗಿಲ್ಲ ನಿನ್ನ ಮನಸ್ಸು !

ಕಿಶನ್‌ಕಿಶೋರ : ಎಲ್ಲರ ದೀಪಗಳನ್ನು ಹಚ್ಚಲು ಹೋಗಿ ನನ್ನಂತೆ ನಿನ್ನ ದೀಪವನ್ನೇ ನೀನು ನಂದಿಸಿಕೊಂಡಿಲ್ಲ. ಅಂತೇ ಹೀಗೆ ಮಾತನಾಡುತ್ತೀ ?

ಕೋಸಲೇಂದ್ರ: ಈ ರಮ್ಯ ಪ್ರಕೃತಿಯ ಛಿದ್ರ-ಛದ್ಮಗಳು ನಿಮಗಿನ್ನೂ ಗೊತ್ತಾಗಿಲ್ಲ. ಅಂತೇ ಈ ಮಾತು. ಇರಲಿ. ಕಿಶನ್ ಕಿರೋರಜಿ ! ಇದನ್ನು ಒರೆಗೆ ಹಚ್ಚಿ ಬಿಡೋಣ ! ಇನ್ನು ಕೆಲವು ತಿಂಗಳ ಮೇಲೆ ನಾನು ಮತ್ತೆ ಇಲ್ಲಿ ಬರುತ್ತೇನೆ ಆಗ ಇನ್ನೂ ಇದೇ ವಿಚಾರ ನಿಮ್ಮ ತಲೆಯಲ್ಲಿ ಸುಳಿಯುತ್ತಿದ್ದರೆ,-- ನಾನೂ ನಿಮ್ಮ ಜೊತೆಗೆ ಇಲ್ಲಿ ಇದ್ದು ಬಿಡುತ್ತೇನೆ, ಇದಕ್ಕೆ ಒಪ್ಪಿಗೆಯಷ್ಟೆ ?

ರುಕ್ಕಿಣಿದೇವಿ : ಓಹೊ ! ಒಪ್ಪಿಗೆ !

ಕಿಶನ್ ಕಿಶೋರ : ಆಗಬಹುದು. ಇದರಿಂದ ಈಗ ನಿಲ್ಲುವದೇ ಇನ್ನು ಕೆಲವು ತಿಂಗಳ ಮೇಲೆ ನೀನು ಇಲ್ಲಿ ನೆಲಿಸುವಿಯೆಂದು ನಾನು ತಿಳಿಯುತ್ತೇನೆ !

ಕೋಸಲೇಂದ್ರ : (ನಗುತ್ತ) ಹಾಗೇ ಆಗಲಿ. ಇನ್ನು ನಾಳೆ ಹೊರಡಲು ನನಗೆ ಅಪ್ಪಣೆಯಷ್ಟೆ ?

ಕಿಶನ್ ಕಿಶೋರ : (ಮುಗುಳು ನಗೆಯಿಂದ) ಅಪ್ಪಣೆಯಿರದಿದ್ದರೆ ನೀನು ಕೇಳುತ್ತೀಯಾ ?

[ ಒಳಗೆ ಊಟದ ಗಂಟೆಯಾಗುತ್ತದೆ.]

ಓಹೊ ! ಊಟದ ಹೊತ್ತಾಯಿತು. ನಡೆ, ಕೋಸಲೇಂದ್ರ, ಇದೊಂದು ರಾತ್ರಿ ನಮ್ಮೊಡನೆ ನಿಮ್ಮ ಮನೋಪಹಾರವಾಗಲಿ, ನಾಳಿನಿಂದ ಚೀಲದಲ್ಲಿ ಅರಳೆ ತುಂಬುವಂತೆ ಹೊಟ್ಟೆಗೆ ಹಾಕುವದಿದ್ದೇ ಇದೆ ! ಊಟವೂ ಇಲ್ಲಿಯ ಸೌಂದರ್ಯೋಪಾಸನೆಯ ಒಂದು ಭಾಗವಾಗಿದೆ.

ರುಕ್ಕಿಣಿದೇವಿ : ತುಂಬಿಗಳು ಜೇನನ್ನು ಸವಿಯುವಂತೆ ಇಲ್ಲಿಯ ಸ್ವಚ್ಛಂದ ಜೀವನ ಹೀಗೆಯೇ ನಿಶ್ಚಿಂತನಾಗಲಿ !

[ಹೊರಡುತ್ತಾರೆ. ತೆರೆ.]



ಪ್ರವೇಶ ೩

[ದಿಲ್ಲಿಯಲ್ಲಿ ಕಾಂತಿಚಂದ್ರರ ಮನೆ, ಮಧ್ಯಾಹ್ನದ ಊಟ ಮುಗಿಸಿ ಕಾಂತಿಚಂದ್ರ-ರೋಹಿಣಿದೇವಿಯರು ಡ್ರಾಯಿಂಗ್ ರೂಮಿನಲ್ಲಿ ಸೋಫಾದ ಮೇಲೆ ಒರಗಿಕೊಂಡು ಕುಳಿತಿದ್ದಾರೆ. ಕಾರ್ಲ್ ಮಾರ್ಕ್ಸ್ ಎಂಜಲ್ಸರ ಪತ್ರವ್ಯವಹಾರ' ಎಂಬ ಪುಸ್ತಕವನ್ನೊದುತ್ತ ಮೃಣಾಲಿನಿಯು ಕುಳಿತಿದ್ದಾಳೆ]

ಕಾಂತಿಚಂದ್ರ : ಬಂದ ತಿಂಗಳೆರಡು ತಿಂಗಳಲ್ಲಿಯೇ ದಿಲ್ಲಿಯು ನಮ್ಮನ್ನು ಎಷ್ಟೊಂದಾಗಿ ಸ್ವಾಗತಿಸಿದೆ! ಹಿಂದುಸ್ತಾನ ಟೈಮು ನಮ್ಮ ಆಗಮನವನ್ನು ಕುರಿತು ಒಂದು ಉಪಾಗ್ರಲೇಖವನ್ನು ಬರೆಯಿತು. ನಗರದ ನೂರು ಸಂಘಗಳು ನಮ್ಮನ್ನು ಆಮಂತ್ರಿಸಿದವು. ಎಲ್ಲ ವೇದಿಕೆಗಳು ನಮಗೆ ವೇದ್ಯವಾದವು. ನಿನ್ನೆ ಮಹಿಳಾ ಸಂಘದ ಅಧ್ಯಕ್ಷಸ್ಥಾನದಿಂದ ನೀನೇನು ಮಾತಾಡಿದೆ ?

ರೋಹಿಣಿದೇವಿ: ಭಾರತೀಯ ಸ್ತ್ರೀಯರೆಲ್ಲ ಐ. ಎನ್.ಎ.ದ ವೀರ ಮಹಿಳೆಯರಂತೆ ಎಲ್ಲ ತ್ಯಾಗಕ್ಕೂ ಸಿದ್ದರಾಗಬೇಕು - ಎಂದು ಹೇಳಿದೆ. ನಾಳೆ ನೆಹರು ಅವರ ಭಾಷಣವಾಗುವಾಗ ವಿದ್ಯಾಸಮಿತಿಯ ಕಾರ್ಯದರ್ಶಿಗಳಾಗಿ ನೀವು ಅವರನ್ನು ಸ್ವಾಗತಿಸುವಿರಲ್ಲ ! ಆಗೇನು ಹೇಳಬೇಕೆಂದು ಮಾಡಿರುವಿರಿ !

ಕಾಂತಿಚಂದ್ರ : ಅವರ ಭಾಷಣ ಕೇಳುವದೇ ಒಂದು ವಿದ್ಯೆ; ಅದರಂತೆ ನಡೆಯುವದೇ ಒಂದು ಯೋಗ: ಎಂದು ಹೇಳಬೇಕೆಂದು ಮಾಡಿದ್ದೇನೆ. ಆ ಬನಸಿಲಾಲನು ವಿದ್ಯಾಸಮಿತಿಯ ಅಧ್ಯಕ್ಷನಾಗಿದ್ದಾನೆ ! ಅವನ ಹೊಟ್ಟೆ ಸೀಳಿದರೆ ಓನಾಮದ ಗಂಧವಿಲ್ಲ !!

ರೋಹಿಣಿದೇವಿ : ವೇಳೆ ಸಾಧಿಸಿ ಅದನ್ನೂ ನೋಡೋಣ. ಈಗಂತೂ ನೀವು ಕಿಶನ್ ಕಿಶೋರರು ಹೇಳಿದ ಆ ಅನಾಥಾಶ್ರಮದ ಅಧ್ಯಕ್ಷರಾದ ಹಾಗಾಯಿತಲ್ಲ ?

ಕಾಂಚಂದ್ರ: (ನಕ್ಕು) ಆಗದೆ ಏನು ? ಆ ಸಂಸ್ಥೆಗೆ ಇಪ್ಪತ್ತು ಸಾವಿರ ರೂಪಾಯಿ ದಾನ ಮಾಡುವೆನೆಂದು ಟ್ಟಸ್ಟಿನವರಿಗೆ ಹೇಳಿದೆ. ಅವರೆಲ್ಲ ಸಂತೋಷದಿಂದ ಕುಣಿದಾಡಿದರು. ಆದರೆ ಸಂಸ್ಥೆಯೊಡನೆ ನನ್ನ ಸಂಬಂಧ ಇರಬೇಕಲ್ಲ, ಎಂದು ಪ್ರಶ್ನೆ ಎತ್ತಿದೆ. ತಾವು ಅಧ್ಯಕ್ಷರಾಗ ಬೇಕೆಂದು, ಎಂದು ಅವರು ನನ್ನನ್ನು ಬೆನ್ನನಿಸಿದರು. ಈ ಸುದ್ದಿ ತಿಳಿದಾಗ, ತಾನು ಸಂಸ್ಥೆಗೆ ಇಪ್ಪತ್ತೈದು ಸಾವಿರ ರೂಪಾಯಿ ಕೊಡುವದಾಗಿ ಟ್ರಸ್ಸಿನವರಿಗೆ ಬನಸಿಲಾಲನು ಹೇಳಿದ. ಆಗ ಸದಸ್ಯರು ಹಿಂದೆ ಮುಂದೆ ನೋಡಿದರು. ನನಗೆ ಕೊಟ್ಟ ವಚನವೆಲ್ಲ ? ಎಂದು ನಾನು ಬಿಗಿಹಿಡಿದೆ. ಕಾಂತಿಚಂದ್ರರ ಸರತಿ ಮುಗಿಯಲಿ ಎಂದು ಅವರು ಬನಸಿಲಾಲರಿಗೆ ಹೇಳಿಬಿಟ್ಟರು !

ರೋಹಿಣಿದೇವಿ : ಒಳ್ಳೆಯದಾಯಿತು. ಈ ಸ್ವಾರ್ಥಸಾಧಕರ ಮಗ್ಗಲು ಹೀಗೆಯೆ ಮುರಿಯಬೇಕು. ಇಂದ್ರಪ್ರಸ್ಥದಲ್ಲಿ ಬನಸಿಲಾಲನ ಪ್ರಸ್ಥ ಇನ್ನು ಬೆಳೆಯುವದು ಸಾಧ್ಯವಿಲ್ಲ. ಈ ಎಲ್ಲ ಕೆಲಸಕ್ಕೆ ನಿಮ್ಮಂಧ ಹಸಿರು ಬೇಕು; ಕಿಶನ್ ತಿಕೋರರಿಂದ ಮೃದು ಸ್ವಭಾವಿಗಳಲ್ಲ.

ಕಾಂತಿಚಂದ್ರ : ನನ್ನ ಸಾಹಸ ಎಲ್ಲಿಗೆ ಹತ್ತು ? ಅದಕ್ಕೆ ನಿನ್ನ೦ಧ ರಾಜಕಾರಣವಿಶಾರದೆಯದು ಬೇಕು ! ಅದಿರಲಿ, ರ್ರೋರೆ ! (ಮೃಣಾಲಿನಿಯ ಕಡೆಗೆ ನೋಡುತ್ತ) ಎಲ್ಲರನ್ನೂ ಜಯಿಸಬಹುದು; ಆದರೆ ಈ ನಮ್ಮ ಮೃಣಾಲಿನಿಯನ್ನು ಜಯಿಸುವದು ಹೇಗೆ ? ಇದು ನನಗೆ ತಿಳಿಯ ದಾಗಿದೆ ?

ರೋಹಿಣಿದೇವಿ : (ಮೃಣಾಲಿನಿಯ ಕಡೆಗೆ ತಿರುಗಿ) ಏನು ಓಮ೨ ದಿ. ಮೃಣಾಲಿಸಿ ! ಎಂದಿಲ್ಲೊಂದು ದಿನ ಬೆಟ್ಟಗೆಂದು ಬರುತ್ತೀ. ಬಂದಾಗ ಕೈಯಲ್ಲಿ ಪುಸ್ತಕ ಹಿಡಿದುಕೊಂಡೇ ಬರುತ್ತಿಯಲ್ಲ !

ಮೃಣಾಲಿನಿ : (ಪುಸ್ತಕದಿಂದ ಮೋರೆ ಮೇಲೆ ನನಗೆ ಊಟ ಮಾಡಲು ಬಿಡುವಿರುವದಿಲ್ಲ. ಆದರೂ ನೀವು ಹೇಳಿದ್ದೀರೆಂದು ಆಗೀಗ ವಿಶ್ವ ಪ್ರಯತ್ನ ಮಾಡಿ ಬರುತ್ತೇನೆ. ಕೆಲಸ ಮಾಡಬೇಕೆನ್ನುವವರು; ಇಂದಿಲ್ಲ ನಾಳೆ ನನ್ನ ಹಾದಿಗೆ ಬಂದಾರು : ಎಂಬ ಪ್ರತೀಕ್ಷೆಯೂ ಅದರಲ್ಲಿ ಕೂಡಿದೆ ಎನ್ನಿರಿ ! ಆದರೆ ನಾನು ಇಲ್ಲಿ ಬಂದಾಗೆಲ್ಲ ನಡೆಯುತ್ತಿರುವ ಮಾತನ್ನು ಕೇಳಿ ಕೇಳಿ ಬೇಸರ ಬಂದಿದೆ. ನನ್ನ ಸಹಾಯಕ್ಕೆ ಪುಸ್ತಕವಾದರೂ ಇರಲಿ ಎಂದು ಒಂದನ್ನು ತೆಗೆದುಕೊಂಡು ಬರುತ್ತೇನೆ. ಈ ಪುಸ್ತಕದ ಹೆಸರು - ಮಾರ್ಕ್ಸಎಂಜರ ಪತ್ರವ್ಯವಹಾರ' ಎಂದು. ಇಂಥ ಪುಸ್ತಕ ನಿಮ್ಮ ಕಣ್ಣಿಗಾದರು ಬಿದ್ದರೂ ಎಷ್ಟೋ ಕೆಲಸವಾಯಿತು ! ಕೋಪಿಣಿದೇವಿ : ನಮ್ಮ ಮಾತಿನ ತರಹ ಏನೇ ಇರಲಿ, ಆ ಪುಸ್ತಕದಲ್ಲಾ ಗರೂ ಏನು ಬರೆದಿದೆ ಹೇಳು, ಕೇಳಿ ಜಾಣರಾಗುತ್ತೇವೆ ! [ಕಾಂತಿಚಂದ್ರರ ಕಡೆಗೆ ನೋಡಿ ಮುಗುಳುನಗೆ ನಗುವಳು.]

ಮೃಣಾಲಿನಿ : ನನ್ನ ವೇಳೆ ಕಳೆಯುವದಲ್ಲಗೆ ನನ್ನನ್ನು hಳು ಮಾಡುವರು ಬೇರೆ ಬೇಕು. [ಸಿಟ್ಟಿನಿಂದ ಪುಸ್ತಕವನ್ನು ಟೀಕಾ:ಯದ ಮೇಲೆ ಅಪ್ಪಳಿಸುತ್ತಾಳೆ. ಅದರ ಮೇಲಿದ್ದ ಚಹದ ಕಪ್ಪ ಉರಳಿ ಕೆಳಗೆ ಬೀಳುತ್ತವೆ, ಒಡೆಯುತ್ತದೆ.] ಊಂ ! ಇದೇನಾಯಿತು ! ... .... ಆಗಲಿ, ಇದಕ್ಕಾಗಿ ನಾನು ಸಿನ ಕ್ಷಮೆ ಕೇಳುವದಿಲ್ಲ ! ಇದಕ್ಕೆ ನೀವೇ ಕಾರಣ. ನಿಮ್ಮ ನತಿನಿಂದ ಉಂಟಾದ ಬೇಸರದ ಪರಿಣಾಮ ಇದು ! [ಒಡೆದ ತುಣುಕುಗಳನ್ನು ಬಳಿಯ ತೊಡಗುತ್ತಾ.]

ಕಾಂತಿಚಂದ್ರ: ( ನಗುತ್ತ ) ಇರಲಿ ಬಿಡು, ಮೃಣಾತ: ! ಎ ದಯಾರಾಮ! ಇಲ್ಲಿ ಬಾ ! ಇದನ್ನು ಸ್ವಚ್ಛ ಮಾಡು !

[ದಯಾರಾಮನು 'ಜೀ!' ಎಂದು ಓಡುತ್ತ ಬಂದು ಎಲ್ಲ ಬಳಿದು. ಕಂಡು ಟೀಪಾಃಯಿ ಒರೆಸಿ, ಮೃಣಾಲಿನಿಯ ಕಡಗೆ ನೋಡುತ್ತ ಹೋಗುತ್ತಾನೆ]

ಅಲ್ಲ ಮೃಣಾಲಿನಿ ! ಇದು ನಮ್ಮ ಮಾತಿನ ವರಿಣಾಮನಲ್ಲ. ಆ ಕ ನಲ್ಲಿದ್ದ ಚಹದ ಪರಿಣಾಮ, ರಶ್ಯನ್ ಚಹ ಅದು. ನಿನಗೆ ಸ್ಪೆಶಲ್ ಆಗಿ ತಯಾರಿಸಿದ್ದು !

ಮೃಣಾಲಿನಿ : ( ಸಿಟ್ಟಿನಿಂದ ) ನಿಮ್ಮ ಮನೆಯಲ್ಲಿ ರಶ್ಯನ್ ಚರ ಸಿಗುರು ನಾಧ್ಯವೇ ಇಲ್ಲ. ಸಮಾಜವೇ ಪರದೇಶಿಯಾದಾಗ, ಒಂದು ಮೂಲೆಯಲ್ಲಿಯ ಅನಾಥಾಶ್ರಮದ ಅಧ್ಯಕ್ಷರು ಯಾರಾಗಬೇಕು ಎಂದು ಹಗಲಿರುಳು ಹೊಂಚು ಹಾಕುವವರು ನೀವು ! ಕೆಳಗಿನ ವರ್ಗವೆಲ್ಲ ಕೂಳಿಲ್ಲದೆ ಗೋಳಿಡುವಾಗ,---ನಮ್ಮ ಭಾಷಣ ಎಷ್ಟು ಒಳ್ಳೆಯದಾಯಿತಲ್ಲ ! ಎಂದು ಹೊಟ್ಟೆ ತುಂಬ ಹಿಗ್ಗುವವರು ನೀವು ! _

[ಸಿಟ್ಟಿನಿಂದ ಕುರ್ಚಿಯಲ್ಲಿ ಹಿಂದಕ್ಕೆ ಸರಿದು ಕೂಡುವಳು, ಕಾಂತಿಚಂದ್ರ ರೋಹಿಣಿದೇವಿಯರು ನಿಸ್ತೇಜರಾಗಿ ಒಬ್ಬರನ್ನೊಬ್ಬರು ನೋಡುವರು] ರೋಹಿಣಿದೇವಿ: ಹಾಗಾದರೆ ನಾನೇನು ಮಾಡಬೇಕೆಂದು ನಿನ್ನ ಅಭಿಪ್ರಾಯವಿದೆ, ಮೃಣಾಲಿನಿ !

ಮೃಣಾಲಿನಿ: ಏನು ಮಾಡಬೇಕು? ಭಾರತದಲ್ಲಿ ಏನು ಮಾಡಬೇಕೆಂಬ ಪ್ರಶ್ನೆಯನ್ನು ಕೇಳುವ ಪ್ರಸಂಗವೇ ಬರುವದಿಲ್ಲ! ಜನತೆಯ ಹಕ್ಕಿಗಾಗಿ ಹೋರಾಡಬೇಕು. ಔದ್ಯೋಗೀಕರಣವನ್ನು ಆಮೂಲಾಗ್ರವಾಗಿ ಪ್ರಾರಂಭಿಸಬೇಕು. ವರ್ಗಭೇದಗಳನ್ನು ತೊಡೆದು ಹಾಕಿಬಿಡಬೇಕು!

ರೋಹಿಣಿದೇವಿ: ಈಗ ಕಾಂಗ್ರೆಸ್ಸೂ ಅದೇ ಹಾದಿಯಲ್ಲಿ ಪ್ರಯತ್ನಿಸುತ್ತಿದೆಯಲ್ಲ!

ಮೃಣಾಲಿನಿ: (ತಿರಸ್ಕಾರದಿಂದ) ಉಂ! ಆ ಕಾಂಗ್ರೆಸ್ಸಿನ ಹೆಸರು ತೆಗೆಯಬೇಡಿರಿ ! ಅದು ಬಂಡುವಲಶಾಹಿ ಸಂಸ್ಥೆ, ಗಿರಣೀಶ್ವರರ ಸಂಘ!

ಕಾಂತಿಚಂದ್ರ : ಅಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕಾಂಗ್ರೆಸ್ಸನ್ನು ....

[ ದಯಾರಾಮನು ಬರುತ್ತಾನೆ. ]

ದಯಾರಾಮ : ಸೇಠ ಬನಸಿಲಾಲರು ಭೆಟ್ಟಗೆ ಬಂದಿದ್ದಾರೆ, ಸರಕಾರ್ !

ಕಾಂತಿಚಂದ್ರ : ಹೀಗೋ ! ಇದೊಂದು ವಿಶೇಷ ! ದಯಾರಾಮ್ ! ಅವರನ್ನು ಕರೆದುಕೊಂಡು ಬಾ !

ದಯಾರಾಮ : ಜೀ ! ( ಹೋಗುತ್ತಾನೆ. )

ಕಾಂತಿಚಂದ್ರ : (ನಗೆಮೊಗದಿಂದ ರೋಹಿಣಿದೇವಿಯನ್ನು ನೋಡುತ್ತ ) ಈಗ ಬನಸೀಲಾಲರಿಗೆ ಬಿಸಿ ಹತ್ತಿದ ಹಾಗೆ ಕಾಣುತ್ತದೆ !

ರೋಹಿಣಿದೇವಿ : ಹತ್ತದೆ ಏನು ? ಇಲ್ಲಿ ಬಂದರೇನು ಶೈತ್ಯೋಪಚಾರ ಸಿಗುವದಿಲ್ಲ. ಇನ್ನಿಷ್ಟು ಬಿಸಿ ಹತ್ತುತ್ತದೆ.

ಮೃಣಾಲಿನಿ : ಉಂ! ಮತ್ತೆ ಸುರುವಾಯಿತು ನಿಮ್ಮ ಮಾತಿಗೆ ! ಇಲ್ಲಿ ಕೊಡಿರಿ ನನ್ನ ಪುಸ್ತಕವನ್ನು ! ಮತ್ತೆ ನನ್ನ ಓದನ್ನು ಮುಂದುವರಿಸುತ್ತೇನೆ!

[ ಪುಸ್ತಕವನ್ನು ತೆಗೆದುಕೊಂಡು ಓದತೊಡಗುತ್ತಾಳೆ. ಸೇಠ ಬನಸಿ ಲಾಲನು ಬರುತ್ತಾನೆ.]

ಬನಸಿಲಾಲ: ನಮಸ್ತೇ, ಕಾಂತಿಚಂದ್ರಜಿ !

ಕಾಂತಿಚಂದ್ರ : (ಏಳುತ್ತ) ನಮಸ್ತೆ ! ಹೀಗೆ ಇಲ್ಲಿ ದಯಮಾಡಿಸಿರಿ !

[ ತನ್ನ ಹತ್ತಿರ ಕರೆದು ಕೂಡಿಸಿಕೊಳ್ಳುತ್ತಾನೆ. ]

ಇವರು ನನ್ನ ಶ್ರೀಮತಿಯವರು. ಅವರ ಪರಿಚಯವಿದೆಯಷ್ಟೆ ? ಮೊನ್ನೆ ಮಹಿಳಾ ಸಂಘದಲ್ಲಿ ಅವರು ಮಾತನಾಡಿದ ವಿಷಯ ತಮಗೆ ತಿಳಿದಿರಬಹುದು?

[ ಬನಸಿಶಾಲನು ಕೈಜೋಡಿಸಿ ನಮಸ್ಕಾರ ಮಾಡುತ್ತಾನೆ. ರೋಹಿಣಿ ದೇವಿಯೂ ವಂದಿಸುತ್ತಾಳೆ.]

ಬನಸಿಲಾಲ : ಓಹೋ ! ಗೊತ್ತಿರದೆ ಏನು? (ಮೃಣಾಲಿನಿಯ ಕಡೆಗೆ ತಿರುಗಿ ) ಇವರು ಯಾರು ?

ಕಾಂತಿಚಂದ್ರ : ಇವರು ದೇವಿ .... .... ಅಲ್ಲ ಅಲ್ಲ ! ಕಾಮ್ರೇಡ್ ಮೃಣಾಲಿನಿಯವರು. ಬಿ. ಎ. ಆಗಿ ಜನತೆಯ ಸೇವೆಗೆಂದು ಕಂಕಣಬದ್ಧರಾಗಿದ್ದಾರೆ. ಮೃಣಾಲಿನಿ ! ಇವರೇ ಸೇಠ ಬನಸಿಲಾಲರು. ಇವರ ವಿಷಯ ನಿನಗೆ ಕೇಳಿ ಗೊತ್ತಿದೆ.

ಮೃಣಾಲಿನಿ : ( ಪುಸ್ತಕದಿಂದ ಮೋರೆ ಎತ್ತಿ) ನನಗೆ ಗೊತ್ತು. ಖಾಸಗಿ ಸಂಸ್ಥೆಗಳಿಗೆ ಹತ್ತುವ ಬಿಳಿ ಇರುವೆ ಬೆಡಂಗರು ಇವರು. ಸಂಸ್ಥೆ ಮೇಲೆ ಇದ್ದ ಹಾಗೆಯೇ ಇರುತ್ತದೆ. ಒಳಗೆಲ್ಲ ವಿಧ್ವಂಸ.

ರೋಹಿಣಿದೇವಿ : ಹುಶ್, ಮೃಣಾಲಿನಿ ! ಹೀಗೆ ಮಾತಾಡಬಾರದು.

( ಬನಸಿಲಾಲನ ಕಡೆಗೆ ತಿರುಗಿ ) ತಾವು ಕ್ಷಮಿಸಬೇಕು, ಮೃಣಾಲಿನಿಯು ಮಾತನಾಡುವದೇ ಹೀಗೆ ! ( ಕಾಂತಿಚಂದ್ರನ ಕಡೆಗೆ ತುಂಟನಗೆಯಿ೦ದ ನೋಡುತ್ತಾಳೆ.)

ಬನಸಿಲಾಲ : ( ನಗುತ್ತ) ಕಾಮ್ರೇಡರಿಂದ ಇಂಥ ಪದವೀದಾನ ನಿರೀಕ್ಷಿತವೇ ಇದೆ ! ಅದಕ್ಕೇನು ? ಆದರೆ ......... ಕಾಮ್ರೇಡ್ ಮೃಣಾಲಿನಿಯವರೆ ! ನಿಮಗೆ ಗೊತ್ತಿಲ್ಲದ ಸುದ್ದಿ ಇದು. ಇತ್ತೀಚೆಗೆ ನನ್ನ ಅಭಿಪ್ರಾಯ ಬದಲಾಗಹತ್ತಿದೆ. ಕಾಮ್ರೇಡ್‍ವಾದದಿಂದ ಮಾತ್ರ ಸ್ವಾತಂತ್ರ್ಯ ದೊರೆಯಬಲ್ಲದೆಂದು ನನಗೆನಿಸಹತ್ತಿದೆ. ಇಂದು ನಾಳೆ ನಿಮ್ಮ ಪಾರ್ಟಿ ಸೇರದೆ ನನಗೆ ಮನಃಶಾಂತಿ ಸಾಧ್ಯವಿಲ್ಲ.

ಮೃಣಾಲಿನಿ : ( ಉತ್ಸುಕತೆಯಿಂದ ಪುಸ್ತಕ ಮುಚ್ಚಿ) ಹೀಗೋ ! ಹಾಗಾದರೆ ವಾಸ್ತವವಾದದ ಪ್ರಜ್ಞೆಯಿದೆ ನಿಮಗೆ ! ಇಂದಿಲ್ಲ ನಾಳೆ ದೇಶಕ್ಕೆ ನಿಮ್ಮಿಂದ ನಿಜಸೇವೆ ಸಲ್ಲಬಹುದೆಂದು ಆಸೆ ಉಂಟಾಗುತ್ತದೆ. ಈ ನಮ್ಮ ಕಾಂತಿಚಂದ್ರ ರಿಗೂ ನೀವಿಷ್ಟು ಬುದ್ದಿ ಹೇಳಿರಿ ! ಸೂತ್ರಯಜ್ಞವನ್ನೂ ಚರಖಾಜಯಂತಿಯನ್ನೂ ಸಾಗಿಸುತ್ತ ಇವರು ನಮ್ಮನ್ನು ಒಂದಲ್ಲ ಎರಡು ಸಾವಿರ ವರುಷ ಹಿಂದೆ ಒಯ್ಯಬೇಕೆಂದಿದ್ದಾರೆ.

[ ಈಗ ಬನಸಿಲಾಲನು ಬಿದ್ದು ಬಿದ್ದು ನಗುತ್ತಾನೆ. ಕಾ೦ತಿಚಂದ್ರ ರೋಹಿಣಿದೇವಿಯರು ಮೋರೆ ಬಿಗಿದುಕೊಂಡು ಸುಮ್ಮನೆ ಕೂಡುತ್ತಾರೆ ]

ಬನಸಿಲಾಲ : ನೋಡೋಣ ! ಅವರೂ ಬದಲಾಗಬಹುದು ! ಕಾಂತಿಚಂದ್ರಜಿ ! ಕಾಃಮ್ರೇಡ್ ಮೃಣಾಲಿನಿಯವರ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದು. ಕಾಃಮ್ರೇಡ್ ಪಾರ್ಟಿಯ ನಾಲಗೆಯೇ ಹೀಗೆ. ಅಲ್ಲಿ ಸರಸ್ವತಿ ನೆಲಿಸಿರುವದಿಲ್ಲ. ಮಹಂಕಾಳಿ ಯುದ್ಧ ಸನ್ನದ್ಧಳಾಗಿ ನಿಂತಿರುತ್ತಾಳೆ. ಅದಿರಲಿ, ನಾನೀಗ ಒಂದು ಕೆಲಸದ ನಿಮಿತ್ತ ಬಂದಿದ್ದೇನೆ. ಸ್ವಲ್ಪ .... ಇನ್ನೊಂದು ಕಡೆಗೆ ....

ಕಾಂತಿಚಂದ್ರ: ಇಲ್ಲಿ ಪರಕೀಯರಾರೂ ಇಲ್ಲ. ತಾವು ಮುಕ್ತ ಮನಸ್ಸಿನಿಂದ ಮಾತನಾಡಬಹುದು. [ ಅರ್ಥಪೂರ್ಣವಾಗಿ ರೋಹಿಣಿದೇವಿಯ ಕಡೆಗೆ ನೋಡುತ್ತಾನೆ.]

ಬನಸಿಲಾಲ: ಹ್ಹ! ಹ್ಹ! ಹ್ಹ! ಹಾಗೇನೂ ಇಲ್ಲ. ಯಾವುದಕ್ಕೂ ನಾನು ಸಿದ್ಧ. ನಾನು ಈಗ ಬಂದಿದ್ದು ಅನಾಥಾಶ್ರಮದ ವಿಷಯವಾಗಿ, ಮತ್ತೆ ....... ಮತ್ತೆ .... ಕಾಃಮ್ರೇಡ್ ಮೃಣಾಲಿನಿ ! ಇತ್ತ ನೀವು ಕಿವಿಗೊಡಬೇಡಿರಿ ! ಇದು ಬರಿ ಗೊಡ್ಡು ಹರಟೆ!

ಮೃಣಾಲಿನಿ : [ ಪುಸ್ತಕದಿಂದ ಮೋರೆ ಎತ್ತಿ] ನನ್ನನ್ನು ಮಾತನಾಡಿಸಬೇಡಿರಿ ! ನಾನೀಗ ಪುಸ್ತಕದ ನಾದದಲ್ಲಿದ್ದೇನೆ. ನನ್ನ ಕಿವಿ ತೆರೆದಿದ್ದರೂ ಅಲ್ಲಿ ಕೇಳುವ ಶಬ್ದಗಳನ್ನು ಮನಸ್ಸು ಗ್ರಹಿಸುವದಿಲ್ಲ. ಏನು ನಾನು ಇಲ್ಲಿಂದ ಎದ್ದು ಹೋಗಲೇನು ? ಹಾಗೆ ಮಾಡಲೂ ನನ್ನ ತಯಾರಿಯಿದೆ. ಮುಚ್ಚುಮರೆಯಿಲ್ಲದೆ ಇದ್ದುದನ್ನು ಇದ್ದ ಹಾಗೆ ಹೇಳಿರಿ !

ಬನಸಿಲಾಲ : ಛೇ ! ಛೇ ! ಹಾಗೆಂದಿಗಂದೇನು ! ಇದು ತಾತ್ವಿಕ ವಿಚಾರವಲ್ಲ. ಅದರಿಂದ ನಿಮ್ಮೆದುರಿಗೆ ಮಾತನಾಡಲು ಸಂಕೋಚವೆನಿಸಿತು. ಅಷ್ಟೆ, ಕಾಂತಿಚಂದ್ರಜಿ ! ಅನಾಥಾಶ್ರಮದ ಅಧ್ಯಕ್ಷರಾಗಲು ತಾವು ಒಪ್ಪಿರುವಿರೆಂದು ನಾನು ಕೇಳುತ್ತೇನೆ. ಆದರೆ ಈ ಸಲ ನಾನು ಅಧ್ಯಕ್ಷ ನಾಗಬೇಕೆಂದಿದ್ದೇನೆ. ರಾಜಕಾರಣದಲ್ಲಿ ಧುಮುಕುವ ಮೊದಲು ಅನಾಥಾಶ್ರಮಕ್ಕಿಷ್ಟು ಸೇವೆಯನ್ನು ಸಲ್ಲಿಸಬೇಕೆಂದು ಮನಸ್ಸಿದೆ. ನನ್ನ ಬಿನ್ನಹ ವನ್ನು ತಾವು ಮನ್ನಿಸಬೇಕು.

ರೋಹಿಣಿದೇವಿ: ಕಾಂತಿಚಂದ್ರರೇ ಅಧ್ಯಕ್ಷರಾಗಬೇಕೆಂದು ಟ್ರಸ್ಟಿನ ಸದಸ್ಯರೆಲ್ಲರ ಆಗ್ರಹವಿದೆ. ತಾವು ಈ ಮಾತನ್ನು ಸದಸ್ಯರಿಗೆ ಹೇಳಬೇಕು !

ಕಾಂತಿಚಂದ್ರ: ಹೌದು, ಬನಸಿಲಾಲಜಿ ! ಸದಸ್ಯರೆಲ್ಲ ಹಟ ಹಿಡಿದರೆ ನಾನೇನು ಮಾಡಲಿ !

ಬನಸಿಲಾಲ: ( ಬೇಕರಿಸಿ) ಕಾಂತಿಚಂದ್ರಜಿ! ಸಾರ್ವಜನಿಕ ಜೀವನದಲ್ಲಿ ತಾವು ಹೊಸಬರಿರಬಹುದು. ಆದರೆ ಅದರಲ್ಲಿ ದಿಲ್ಲಿಯಷ್ಟು ಪುರಾತನ ಅನುಭವ ನನಗಿದೆ. ಅಧ್ಯಕ್ಷರಾಗುವದೂ ಬಿಡುವದೂ ತನ್ನ ಕೈಯಲ್ಲಿಯೇ ಇದೆ. ಇದು ನಮ್ಮಿಬ್ಬರಿಗೂ ಚೆನ್ನಾಗಿ ಗೊತ್ತು. ನನ್ನ ನಿಮ್ಮ ನಡುವೆ ಇಲ್ಲದ ಈರ್ಷೆ ಬೀಳಬಾರದು. ಇನ್ನೊಮ್ಮೆ ವಿಚಾರ ಮಾಡಿರಿ.

ರೋಹಿಣಿದೇವಿ: ಅಂದರೇನು ? ಕಾಂತಿಚಂದ್ರರನ್ನು ತಾವು ಅಂಜಿಸ ಬೇಕೆಂದಿದ್ದೀರಾ ? ಈಗ ವಿಚಾರ ಮಾಡಿದ ಹಾಗೆಯೇ ಇದೆ. ಸದಸ್ಯರು ಮಾಡಿದ ಆಯ್ಕೆಯನ್ನು ಬಿಟ್ಟು ಕೊಟ್ಟರೆ ಅವರಿಗೆ ದ್ರೋಹ ಬಗೆದ ಹಾಗಾದೀತು !

ಕಾಂತಿಚಂದ್ರ: ಹೌದು. ಅವರ ಇಚ್ಛೆಗೆ ಎರವಾಗುವದು ಸಾಧ್ಯವಿಲ್ಲ.

ಬನಸಿಲಾಲ:( ಕ್ರೂರ ದೃಷ್ಟಿಯಿಂದ ನೋಡುತ್ತ ) ಇದು ನಿಶ್ಚಯವೆ ?

ಕಾಂತಿಚಂದ್ರ:( ರೋಹಿಣಿದೇವಿಯನ್ನು ನೋಡುತ್ತ ) ಹೌದು, ನಿಶ್ಚಯ

ಬನಸಿಲಾಲ : ( ಏಳುತ್ತ ) ಆಗಬಹುದು. ನಿಮ್ಮಿಷ್ಟ. ........ ಹೂಂ .......ಆಗಲಿ ..... .... ಬರುತ್ತೇನೆ, ರೋಹಿಣಿದೇವಿಯವರೆ! ಈ ವಿಷಯದಲ್ಲಿ ನನಗೆ ತಮ್ಮಿಂದ ತುಂಬ ಸಹಾಯವಾಯಿತು!

ರೋಹಿಣಿದೇವಿ: ( ಬಿಗುವಿನಿಂದ) ಇರಬಹುದು. ಆಗಿದ್ದರೆ ಬಹಳ ಸಂತೋಷ.

ಮೃಣಾಲಿನಿ : ( ಪುಸ್ತಕ ಮುಚ್ಚಿ ) ಏನು, ಸೇಠರೆ ! ಮುಗಿಯಿತೇ ನಿಮ್ಮ ಮಾತು ?

ಬನಸಿಲಾಲ : ಇಲ್ಲ, ಕಾ:ಮ್ರೇಡ್ ಮೃಣಾಲಿನಿ ! ಈಗ ಸುರುವಾಯಿತು ! ನೀವು ಇಷ್ಟು ತಲ್ಲೀನರಾಗಿ ಓದುತ್ತಿದ್ದ ಆ ಪುಸ್ತಕ ಯಾವುದು ? ಓದುವದು ಮುಗಿದ ಮೇಲೆ ನನಗೆ ಕೆಲವು ದಿನ ಅದನ್ನು ಕೊಡಿರಿ !

ಮೃಣಾಲಿನಿ : ಅವಶ್ಯವಾಗಿ ! ಆದರೆ ಅದು ಸುಲಭವಾಗಿ ತಿಳಿಯಲಾರದು. ಅದರ ಮೇಲೆ ನಿಮಗೊಂದು ಉಪನ್ಯಾಸ ಕೊಡಬೇಕಾದೀತು !

ಬನಸಿಲಾಲ : ಆಗಬಹುದು. ಅದನ್ನು ಯಾರು ಬರೆದಿದ್ದಾರೆ !

ಮೃಣಾಲಿನಿ : ಮಾರ್ಕ್ಸ-ಎಂಜಲ್ಪರ ಪತ್ರವ್ಯವಹಾರ ಇದು.
ಬನಸಿಲಾಲ : ಮಾರ್ಕಸ್ ಏನ್ ಜಲಸಾ ?

[ ಎಲ್ಲರೂ ನಗುತ್ತಾರೆ.]

ಮೃಣಾಲಿನಿ : ನಿಮಗೆ ಗೊತ್ತಿರುವದು ಜಲಸಾ ಒಂದೇ ! ಅದೂ ನಿಶ್ಚಿತವಿಲ್ಲ. ರೂಪಾಯಿಯ ಸಂಗೀತ ನಿಮ್ಮ ಕಿವಿ ಕಟ್ಟಿದೆ ಅಲ್ಲವೆ ?

ಬನಸಿಲಾಲ : ಹ್ಹ! ಹ್ಹ! ನಿಮ್ಮಂಥವರ ಸಹವಾಸದಿಂದ ಮಾತ್ರ ನಮ್ಮಲ್ಲಿ ಸುಧಾರಣೆಯಾಗಬೇಕು ! ಬರುತ್ತೇನೆ, ನಮಸ್ತೇ! (ಕಾಂತಿಚಂದ್ರ.ರೋಹಿಣಿ ದೇವಿಯರ ಕಡೆಗೆ ಬಿಗುವಿನಿಂದ ನೋಡುತ್ತ ) ನಮಸ್ತೆ !

[ಹೋಗುತ್ತಾನೆ ಒಂದು ಕ್ಷಣಹೊತ್ತು ಸುಮ್ಮನಿದ್ದು ಎಲ್ಲರೂ ಒಬ್ಬರ ಮೊರೆಯನ್ನೊಬ್ಬರು ನೋಡುತ್ತಾರೆ.]

ರೋಹಿಣಿದೇವಿ : ಏನು ಮೃಣಾಲಿನಿ ? ಹೇಗಿತ್ತು ನಮ್ಮ ಧರ್ಮಯುದ್ದ ?

ಮೃಣಾಲಿನಿ : ಧರ್ಮಯುದ್ಧ ? ಇದು ಪ್ರತಿಷ್ಠೆಗಳ ತಾಕಲಾಟ. ದುರಭಿಮಾನಗಳ ಗುದುಮುರಿಗೆ !”

ರೋಹಿಣಿದೇವಿ: (ಸರಕ್ಕನೆ ಸರಿದು ನೊಂದ ಧ್ವನಿಯಲ್ಲಿ) ಯಾಕೆ ಮೃಣಾಲಿನಿ ಹೀಗೆಯೇ ನೀನು ನಮ್ಮ ಮನಸ್ಸನ್ನು ನೋಯಿಸುತ್ತೀ! ನನ್ನ ಹೊಟ್ಟೆ ಯಲ್ಲಿ ಹುಟ್ಟಿದ ಮಗಳಂತೆ ನಿನ್ನನ್ನು ಕಂಡರೆ ನನಗೆ ಪ್ರೀತಿ ಬರುತ್ತದೆ. ಆದರೆ ನಿನ್ನ ಮಾತಿನ ಬಾಣಕ್ಕೆ ಸಿಲುಕಿ ದಿನಂಪ್ರತಿ ನಾನು ಗಾಸಿ ಗೊಳ್ಳುತ್ತೇನೆ !

[ ಆಳುಮೋರೆ ಮಾಡುತ್ತಾಳೆ. ]

ಕಾಂತಿಚಂದ್ರ: ನಮ್ಮ ಮೇಲೆ ಇಷ್ಟೇಕೆ ಅವಕೃಪೆ, ಮೃಣಾಲಿನಿ ! ಮೃಣಾಲಿನಿ : ನನಗೂ ತಾಯಿಯಿಲ್ಲ. ನಿನ್ನನ್ನು ಕಂಡರೆ ಕಳೆದುಕೊಂಡ ತಾಯಿ ಮರಳಿದಂತೆ ಭಾಸವಾಗುತ್ತದೆ. ಇಲ್ಲದಿದ್ದರೆ ಹೀಗೆ ನಿಮ್ಮಲ್ಲಿಗೆ ಬರುತ್ತಿದ್ದೆನೇ ! ಆದರೆ ಅಸತ್ಯವನ್ನು ಸತ್ಯವೆಂದೂ ಸ್ವಾರ್ಥವನ್ನು ಸಮಾಜ ಸೇವೆಯೆಂದೂ ನಾನು ಕರೆಯುವದು ಹೇಗೆ ? ಇದಕ್ಕಾಗಿ ನನ್ನ ತಂದೆಗೂ ಎರವಾಗಿದ್ದೇನೆ. ನೀವಂತೂ ದೂರದ ಕರುಳುಬಳ್ಳಿ!
ರೋಹಿಣಿದೇವಿ : ಬನಸಿಲಾಲನಷ್ಟು ನೀಚರೆ ನಾವು, ಮೃಣಾಲಿನಿ ?
ಮೃಣಾಲಿನಿ : ಅವನು ಸ್ವಾರ್ಥಿ; ನೀವು ಅಹಂಕಾರಿಗಳು ! ಆ ಅಧ್ಯಕ್ಷ ಪದವಿಯನ್ನು ಬಿಟ್ಟಿದ್ದರೆ ನಿಮಗೇನು ಹಾನಿಯಿತ್ತು ? ದಾನಕ್ಕೂ ಪ್ರತಿಫಲ ಬೇಕೆ ?
ಕಾಂತಿಚಂದ್ರ : ನೀಚರಿಗಿಂತ ಕಾರ್ಯಬುದ್ಧಿಯುಳ್ಳವರು ಇಂಥ ಸ್ಥಾನದಲ್ಲಿ ಇದ್ದರೆ ಒಳ್ಳೆಯದಲ್ಲವೆ?

ಮೃಣಾಲಿನಿ: (ಉದ್ವಿಗ್ನಳಾಗಿ ಏಳುತ್ತೆ) ಕಾರ್ಯಬುದ್ದಿಯುಳ್ಳವರಿಗೆ ಸ್ಥಾನ ಮಾನ ಬೇಕಾಗುವುದಿಲ್ಲ. ರೋಹಿಣಿಬೆನ್, ಇವತ್ತಿಗೆ ಇಷ್ಟು ಮಾತು ಸಾಕು. ಹೆಚ್ಚು ಮಾತಾಡಿ ಹಟಮಾರಿಯೆಂದು ನಾನು ಮತ್ತೆ ಕರೆಯಿಸಿ ಕೊಳ್ಳಬೇಕಾಗಿಲ್ಲ. (ಮುಂಗೈ ಗಡಿಯಾರ ನೋಡುತ್ತ) ಅಲ್ಲದೆ ಮುಜದೂರ ಸಂಘದ ಸಭೆಯಿದೆ. ವೇಳೆಯಾಯಿತು. ನೀವೇ ವಿಚಾರ ಮಾಡಿರಿ ! ಇನ್ನೊಮ್ಮೆ ಬಂದಾಗ ಮತ್ತೆ ಅರೆದಾಡೋಣ ! (ಹೋಗುತ್ತಾಳೆ, ಕಾಂತಿ ಚಂದ್ರರೂ ರೋಹಿಣಿದೇವಿಯೂ ಮೃಣಾಲಿನಿಯನ್ನೇ ನೋಡುತ್ತ ನಿಲ್ಲುತ್ತಾರೆ).

ಪ್ರವೇಶ ೪.

[ಕೋಸಲೇಂದ್ರನು ದಿಲ್ಲಿಯಲ್ಲಿಯ ತನ್ನ ಕೋಣೆಯಲ್ಲಿ ಕುಳಿತಿರುತ್ತಾನೆ. ತಾನು ಕಟ್ಟಿದ ಒಂದು ಕವನವನ್ನು ತನ್ನಷ್ಟಕ್ಕೆ ತಾನು ಹೇಳುತ್ತಿರುತ್ತಾನೆ.]
ಕೋಸಲೇಂದ್ರ : ನರ್ಮದೆಯಾ ನಿರ್ಮಲ ಹೊನಲಲ್ಲಿ
ಅಮೃತಪುಲಿನವದು ಹೊಳೆಹೊಳೆವಲ್ಲಿ
ಬೆಳುದಿಂಗಳಿನೈಸಿರಿ ಕರೆವಲ್ಲಿ
ವನಿಯೆ ತಾನೊಲಿದಿರುವಲ್ಲಿ -
ಆಡ ಬಾ !
ನೋಡ ಬಾ !
ಹಾಡ ಬಾ !
ಬಾ, ಬಾ, ಬಾ, ಬಾ, ಬಾ !
ಜನವು ವಿರಸವಿರೆ ಬನ ರಸಮಯವು !
ಬವು ಶೂನ್ಯವಿರೆ, ಜನ ನೂತನವು !
ತೂಗುಯ್ಯಲೆಯಂತಾಗಿರೆ ಮನವು
ಅದೊಂದು ದಿನ ತೆರೆವುದು ಚಿದ್ರನವು,
ತ್ರಿಯ ಬಾ !
ಅಳೆಯು ಬಾ !
ಹೊಳೆಯ ಬಾ !
ಬಾ, ಬಾ, ಬಾ, ಬಾ, ಬಾ !

[ಇಷ್ಟರಲ್ಲಿ ಮೃಣಾಲಿನಿಯು ಕೈಯಲ್ಲಿ ಮಾರ್ಕ್ಸ್-ಏಂಜಲ ಪತ್ರವ್ಯವಹಾರದ ಪುಸ್ತಕವನ್ನು ಹಿಡಿದುಕೊಂಡು ಬರುತ್ತಾಳೆ.]

ಓಹೋ ಹೋ ಹೋ ಹೋ ! ಬರಬೇಕು, ಬರಬೇಕು, ಕಾ:ಮ್ರೆಡ್ ಮೃಣಾಲಿನಿ ! ನಾನೇ ನಿಮ್ಮನ್ನು ಎಲ್ಲಿ ನೋಡಬೇಕು, ಹೇಗೆ ನೋಡಬೇಕು, ಯಾವಾಗ ನೋಡಬೇಕು ಎಂದು ಆಲೋಚಿಸುತ್ತಿದ್ದೆ, ನೀವೇ ಹೇಳಿ ಕಳಿಸಿ ದ೦ತೆ ಬಂದಿರಿ ! ಮೃಣಾಲಿನಿ : ( ಕುಳಿತುಕೊಳ್ಳುತ್ತ ) ಅದೇಕೆ ! ಇಷ್ಟೊಂದು ಗಿರಣೀಶ್ವರೀ ಉಪಚಾರವೇಕೆ ? ಹೋ ಹೋ ಹೋ ಎಂದು ಮನೆ ಹಾರಿಬೀಳುವ ಸ್ವಾಗತವೇಕೆ ? ಇದಾವುದೂ ಅವಶ್ಯವಿಲ್ಲ. ಬನಸಿಲಾಲರ ಮನೆಗೆ ಹೊರಟಿದ್ದೆ. ಹಾದಿಯಲ್ಲಿ ನಿನ್ನ ಬೋರ್ಡು ಕಂಡಿತು. ಈ ಪ್ರಾಣಿ ಏನು ಮಾಡುತಿದೆ ನೋಡೋಣ ಎಂದು ಹಣಿಕಿ ಹಾಕಿ ಹೋಗಲು ಬಂದೆ.

ಕೋಸಲೇಂದ್ರ : ಒಳ್ಳೆಯದಾಯಿತು, ಬಹಳ ಒಳ್ಳೆಯದಾಯಿತು. ಅದರಿಂದ ಈ ಪ್ರಾಣಿಗೆ ಎಷ್ಟು ಸಂತೋಷವಾಗಿದೆಯೆಂಬುದರ ಕಲ್ಪನೆ ನಿಮಗಿಲ್ಲ. ಎಲ್ಲರನ್ನೂ ಬಿಟ್ಟು ಬನಸಿಲಾಲರ ಕಡೆಗೇಕೆ, ತಮ್ಮ ಸ್ವಾರಿ ಹೊರಟಿದ್ದು?

ಮೃಣಾಲಿನಿ : ಯಾರು ಕಾರ್ಲ ಮಾರ್ಕ್ಸನ ತತ್ವಗಳನ್ನು ತಿಳಿಯಲು ಹವಣಿಸುವರೋ ಅವರ ಕಡೆಗೆ ಹೋಗಿ ತಿಳಿಸಿಕೊಡುವದು ನನ್ನ ಕರ್ತವ್ಯ. ಬನಸಿಲಾಲರೇನು, ಮುನಸಿಲಾಲರೇನು ? ಎಲ್ಲರೂ ನನಗೆ ಅಷ್ಟೇ.

ಕೋಸಲೇಂದ್ರ: ಇದಾವ ಪುಸ್ತಕ,- ನಿಮ್ಮ ಕೈಯಲ್ಲಿರುವುದು ?

ಮೃಣಾಲಿನಿ : ಮಾರ್ಕ್ಸ್-ಏಂಜಲ್ಸರ ಪತ್ರವ್ಯವಹಾರ. ಬನಸಿಲಾಲರು - ಇದನ್ನು ಓದಿ ತಿಳಿದುಕೊಳ್ಳಬೇಕೆಂದಿದ್ದರು.

ಕೋಸಲೇಂದ್ರ: ಕಾ:ಮ್ರೇಡ್ ಮೃಣಾಲಿನಿ, ನಿಮ್ಮಲ್ಲಿ ನನ್ನದೂ ಒಂದು ಬಿನ್ನಹವಿದೆ.

ಮೃಣಾಲಿನಿ : ಇದೇನು ! ಕವಿಗಳೂ ಆಗೀಗ ಬಿನ್ನವಿಸುವರೇನು ?

ಕೋಸಲೇಂದ್ರ : ಅದೇನೋ ಗೊತ್ತಿಲ್ಲ. ಆದರೆ ನಿಮ್ಮನ್ನು ನೋಡಿದಂದಿನಿಂದ ಮಾರ್ಕ್ಸವಾದವನ್ನು ತಿಳಿದುಕೊಳ್ಳಬೇಕೆಂಬ ಆಸೆ ನನ್ನಲ್ಲಿ ಪ್ರಬಲವಾಗಿದೆ, ನನಗೂ ಪಾಠ ಹೇಳುವಿರಾ? ನಿಮಗೆ ಹೆಚ್ಚು ಶ್ರಮ ಕೊಡುವದಿಲ್ಲ. ವಾರಕ್ಕೆ ಒಂದು ಸಲ ಹೇಳಿದರೆ ಸಾಕು.

ಮೃಣಾಲಿನಿ : ನಿಮ್ಮಂಥ ಕವಿಗಳಿಗೆ ನಾನು ಪಾಠ ಹೇಳುವ ಅವಶ್ಯಕತೆಯೆಲ್ಲಿ? ಪುಸ್ತಕಗಳನ್ನು ತಂದು ಕೊಡುತ್ತೇನೆ. ನೀನಾಗಿ ಓದಬಹುದಲ್ಲ ?

ಕೋಸಲೇಂದ್ರ : ಹಾಗಲ್ಲ, ಕಾ:ಮೈಡ್' ಮೃಣಾಲಿನಿ ! ಕವಿಯು ತನ್ನ ಕವನ ವನು ತಾನೇ ಹೇಳಿದರೆ ಅದು ರಸ ತುಂಬಿ ತಿಳಿಯಲು ಸುಲಭವಾಗುತ್ತದೆ. ಮಾರ್ಕ್ಸ್ ತತ್ವದ ದಾರ್ಶನಿಕರು ನೀವು. ನಿಮ್ಮ ದನಿಯು ಆ ತತ್ವದೊಡನೆ ಬೆರೆತಾಗ ತತ್ವವು ನೇರವಾಗಿ ಹೃದಯವನ್ನು ಸೇರುತ್ತದೆ. ಅದು ಬರಿ ಬುದ್ಧಿ ಗ್ರಾಹ್ಯವಾಗುವದಿಲ್ಲ; ರಕ್ತದೊಡನೆ ಬೆರೆಯುವದು !

ಮೃಣಾಲಿನಿ : ( ಉತ್ಸಾಹದಿಂದ ) ನಿಮ್ಮ ಇಚ್ಛೆ ಇಷ್ಟು ನೈಜವಾಗಿದ್ದರೆ ನಿಮ್ಮ ಜೊತೆಗೆ ಓದಲು ನನಗೆ ಸಂತೋಷವಿದೆ. ಮಧ್ಯಮ ವರ್ಗದ ಒಬ್ಬ ಉದಿತೋದಿತ ಕವಿಯನ್ನು ಮತಾಂತರಿಸಿದ ಶ್ರೇಯಸ್ಸು ನನಗೆ ಬರುವದಿದ್ದರೆ,- ಏಕೆ ಬೇಡವೆನ್ನಲಿ ! ಒಂದು ಮಾತು, ಕವಿವರ್ಯರೆ ! ಆ ಗ್ರಂಥಗಳನ್ನು ಓದಿದಾಗ ನಿಮ್ಮ ಕಾವ್ಯ ಜೀವನದಲ್ಲಿ ಕ್ರಾಂತಿಯಾಗುವದು. ನಿಮ್ಮ ತತ್ವಮಂದಿರವೆಲ್ಲ ಕಳಚಿ ಬಿದ್ದು ಅದರ ಹಾಳಿನೊಳಗಿಂದ ಇನ್ನೊಂದು ಉಜ್ವಲ ಕಟ್ಟಡವೇಳುವದು, ಬರಲಿರುವ ಕ್ರಾಂತಿಯ ವೈತಾಳಿಕರಾಗುವಿರಿ ನೀವು !

ಕೋಸಲೇಂದ್ರ : (ಎಳೆನಗೆಯಿಂದ ಮೇಜಿನ ಮೇಲಿನ ಒಂದು ಚಿಕ್ಕ ಹೊತ್ತಿಗೆಯನ್ನು ತೆಗೆದುಕೊಂಡು) ಏನೇನಾಗುವದೋ ನೋಡೋಣ, ಕಾಃಮ್ರೆಡ್ ಮೃಣಾಲಿನಿ ! ಮೊನ್ನೆ ಮೊನ್ನೆ ರ್‍ಯಾಫೆಲ್ ಆಲ್‍ಬರ್ತೈ ಎಂಬ ಸ್ಪಾನಿಶ್ ಕವಿಯ ಕೆಲವು ಕವನಗಳನ್ನು ಓದುತ್ತಿದ್ದೆ. ಅವುಗಳಲ್ಲಿ ಒಂದರ ಕೆಲವು ಚರಣಗಳಿವು !

A spectre is haunting Europe,
The world.
We call him Comrade!

ನಿಮ್ಮನ್ನು ನೋಡಿದಂದಿನಿಂದ ಒಂದು ಹೊಸ ಚೈತನ್ಯವು ನನ್ನ ಕಣ್ಣುಕಟ್ಟಿದೆ. I call that, - Comrade Mrunalini !

ಮೃಣಾಲಿಸಿ: ಏನು ! ಆಲ್‍ಬರ್ತೈನ ಕವನಗಳನ್ನು ಓದಿದ್ದೀರಾ ! ತೀರ ಈಚೆಗಿನ ಪ್ರಕಟನೆ ಅದು.

ಕೋಸಲೇಂದ್ರ : ಇಂಥ ಕಾವ್ಯವನ್ನು ಆಗೀಗ ಓದುತ್ತಿರುತ್ತೇನೆ. ಅದಿರಲಿ, ಕಾಃಮ್ರೆಡ್ ಮೃಣಾಲಿನಿ, ವಾರಕ್ಕೊಂದು ಸಲ ನಮ್ಮ ಪಾಠ ನಿಶ್ಚಿತವಾಯಿತಲ್ಲ! ಇನ್ನು ನೀನೇ ಇಲ್ಲಿಗೆ ಬರುವಿರಾ? ಏನು ನಾನೇ ನಿಮ್ಮಲ್ಲಿಗೆ ಬರಲೊ? ________________

ಅಂಕು ೧
೨೯

ಮೃಣಾಲಿನಿ : ನಾನೇ ಬರುತ್ತೇನೆ. ನಮ್ಮ ಮನೆಗೆ ಬಂದರೆ,- ಬರಿ ನಿಚ್ಚ. ಣಿಕೆಗಳು ಅಲ್ಲಿ ನಿಮ್ಮ ಕಣ್ಣಿಗೆ ಬೀಳುವವು. ನನ್ನ ತಂದೆ ಸಾಮ್ರಾಜ್ಯ ಸರಕಾರದ ಸೇವೆ ಮಾಡಿ ದೊಡ್ಡ ಪೆನ್ಶನ್ ತೆಗೆದುಕೊಂಡು ಕುಳಿತಿದ್ದಾರೆ.ನನ್ನ ತಮ್ಮ ಐ. ಸಿ. ಎಸ್. ಆಗಬೇಕೆಂದು ಅವರ ವಿಶ್ವ ಪ್ರಯತ್ನ ನಡೆದಿದೆ. ಚಾಕರಿ, ನೌಕರಿ, ಮಾನ, ಅಧಿಕಾರ, ಇದರ ಹೊರತು ಅಲ್ಲಿ ಮಾತೇ ಇಲ್ಲ ! ಉಹ್ 1 ಅದರ ನೆನಪಾದರೆ ಮೈಗೆ ಮುಳ್ಳು ಹಚ್ಚುತ್ತದೆ !ನಾನು ತಂದೆಗೆ ಹೇಳಿಬಿಟ್ಟದೇನೆ, ನಾನು ನಿಮ್ಮ ಪಾಲಿಗಿಲ್ಲವೆಂದು ತಿಳಿಯಿ ರೆಂದು ಈಗ ನಾನು ಮನೆಗೆ ಹೋಗುವದು,- bed and breakfast ಗೆ ಮಾತ್ರ!

ಕೋಸಲೇಂದ್ರ : ಮತ್ತೆ ರೋಹಿಣಿದೇವಿಯವರ ಮನೆ ಇದೆಯಲ್ಲ ?

ಮೃಣಾಲಿನಿ : ಮನೆ ಏನೋ ಇದೆ. ಅವರು ನನ್ನನ್ನು ಪ್ರೀತಿಸುವದೂ ನಿಜ.ಆದರೆ ತಂದೆಯಲ್ಲಿ ಸಾಮಾಜಸೇವೆಯ ಅಹಂಕಾರ ತುಂಬಿದ್ದರೆ ಇವರಲ್ಲಿ ಸಮಾಜಸೇವೆಯ ಅಹಂಕಾರ ತುಂಬಿದೆ. ಕೋಸಲೇಂದ್ರರೆ. ಮಾರ್ಕ್ಸ್‌ ವಾದಿಯು ವಾಸ್ತವವಾದಿ. ಅವನಿಗೆ ಆತ್ಮವಂಚನೆಯನ್ನು ಕಂಡರೆ ಬರ್ಷಣ.ಆ ನಿಮ್ಮ ಕಿಶನ್ ಕಿಶೋರರ ಆಧ್ಯಾತ್ಮಿಕ ಸ್ವಪ್ನವನ್ನು ಕಂಡಂತೆ!

ಕೋಸಲೇಂದ್ರ: ( ನಗುತ್ತ ) ಅದು ಹೋಗಲಿ ಬಿಡಿರಿ! ನಾವು ಮೊದಲು ಯಾವ ಪುಸ್ತಕ ಪ್ರಾರಂಭಿಸೋಣ ?

ಮೃಣಾಲಿನಿ : ಮೊದಲು Manifesto ಓದಬೇಕು. ಅದರಲ್ಲಿ ಎಲ್ಲ ಮಾರ್ಕ್ಸ್ ತತ್ವಗಳ ಸಾರವಿದೆ.

ಕೋಸಲೇಂದ್ರ : ಆಗಬಹುದು..........

('ಕೂಸಲೇಂದ್ರ ಬಾಬು ! ಕೂಸಲೇಂದ್ರ ಬಾಬು! ” ಎಂದು ಹೊರಗಿ
ನಿಂದ ಕೂಗುತ್ತ ಬನಸಿಲಾಲನು ಬರುತ್ತಾನೆ )
ಓಹೊ ! ಬನಸಿಲಾಲರು ! ಹೀಗೆ ಬನ್ನಿರಿ! ಇವತ್ತು ಯಾವ ಬೇಪಾರಿ
ಗತ್ತು ಹಾಕಿಕೊಂಡು ಬಂದಿದ್ದಿರಿ ? (ನಗುತ್ತಾನ)

ಬನಸಿಲಾಲ : ( ನಗುತ್ತ ಕುಳಿತುಕೊಂಡು ) ನೀನೇನು ಕವಿಗಳು ! ನಿಮ್ಮ ಕಲ್ಪನಾಶಕ್ತಿ ನಿರಂಕುಶ ! ಓಹೊ ! ಕಾಮ್ರೆಡ್ ಮೃಣಾಲಿನಿಯವರೂ ಇಲ್ಲಿದ್ದಾರಲ್ಲ ! ನಮಸ್ತೆ ! ಮೃಣಾಲಿನಿ: ನಮಸ್ತೆ,

ಬನಸಿಲಾಲ : ನಿಮ್ಮ ಪುಸ್ತಕ ಬರಲಿಲ್ಲವಲ್ಲ ? ಈಗ ಇಲ್ಲಿ ಕವಿಗಳಿಗೂ ಪಾಠ ಹೇಳುವುದು ನಡೆದಿದೆಯೇನು ?

ಮೃಣಾಲಿನಿ : ಕವಿಗಳಿಗೂ ಹೇಳುತ್ತೇನೆ; ಕಪಿಗಳಿಗೂ ಹೇಳುತ್ತೇನೆ. ನನ್ನಲ್ಲಿ ಭೇದಭಾವವಿಲ್ಲ.

( ಎಲ್ಲರೂ ನಗುತ್ತಾರೆ. )

ಬನಸಿಲಾಲ : ಕಾ:ಮ್ರೆಡ್ ಮೃಣಾಲಿನಿಯವರು ವಿನೋದಪ್ರಿಯರು. ಅವರ ಮಾತು ಯಾವಾಗಲೂ ಸ್ವಾರಸ್ಯಮಯವಾಗಿರುತ್ತದೆ.

ಕೋಸಲೇಂದ್ರ: ಹೌದು, ಸೇಠ್ ! ಅಂತೇ ಇನ್ನು ಮೇಲೆ ನಾನೂ ವಾರಕ್ಕೊಂದು ಸಲ ಅವರಿಂದ ಪಾಠ ಹೇಳಿಸಿಕೊಳ್ಳಬೇಕೆಂದಿದ್ದೇನೆ !

ಬನಸಿಲಾಲ : ಓಹೊ ! ವಾರಕ್ಕೊಂದು ಸಲವೆ ? ಹಾಗಾದರೆ, ಕಾ:ಮ್ರೆಡ್ ಮೃಣಾಲಿನಿಯವರೆ, ನನ್ನ ಸಲುವಾಗಿ ನಿಮಗೆ ಹೆಚ್ಚಿನ ತೊಂದರೆ ಏಕೆ ? ಕೋಸಲೇಂದ್ರಬಾಬುಗಳ ಪಾಠ ಮುಗಿಯಲಿ. ಆಮೇಲೆ ನಮ್ಮದನ್ನು ಪ್ರಾರಂಭಿಸೋಣ.

ಕೋಸಲೇಂದ್ರ : ( ನಗುತ್ತ ) ಇದೊಳ್ಳೆಯ ಯುಕ್ತಿ ! ಕಾ:ಮ್ರೆಡ್ ಮೃಣಾಲಿನಿಯವರ ಕೈಯೊಳಗಿಂದ ಪಾರಾಗಲು ನೀವು ಒಳ್ಳೆಯ ಹಂಚಿಕೆ ಹಾಕಿದಿರಿ ! ಆದರೆ, ಸೇಠ್, ನೀವು ನೆನಪಿಡಬೇಕು. ಅವರ ಪಾಠಗಳನ್ನು ಕೇಳದೆ ಹೋದರೆ ನಿಮಗೆ ನಿಮ್ಮ ಚಟುವಟಿಕೆಗಳಲ್ಲಿ ಅವರ ಸಹಕಾರ ಸಿಗಲಾರದು !

ಬನಸಿಲಾಲ : ಹ್ಹ! ಹ್ಹ! ಹ್ಹ! ಈ ಮಾತಿನಿಂದ ನೆನಪಾಯಿತು. ಇಂಥ ಸಹಕಾರ ಕೇಳಲೆಂದೇ ನಾನು ಈಗ ಬಂದಿದ್ದೇನೆ.

ಕೋಸಲೇಂದ್ರ : ಯಾವುದರಲ್ಲಿ ? ನೀವು 'ಸಹಕಾರ' ಎಂದ ಕೂಡಲೆ ನನ್ನ ಮೈಮೇಲಿನ ಕೂದಲು ನೆಟ್ಟಗಾಗುತ್ತವೆ!

ಬನಸಿಲಾಲ: ಹ್ಹ! ಹ್ಹ! ಒಳ್ಳೇ ತಮಾಷೆ ! ನೀವು ಅಂಜುವ ಕಾರಣವಿಲ್ಲ, ಕೋಸಲೇಂದ್ರಬಾಬು! ಬಡ ವಿದ್ಯಾರ್ಥಿಗಳ ಸಹಾಯಕ್ಕಾಗಿ ಹಣ ಕೂಡಿಸಲು ಒಂದು ಸಾಹಿತ್ಯಗೋಷ್ಠಿಯನ್ನು ಏರ್ಪಡಿಸಬೇಕೆಂದಿದ್ದೇನೆ. ಕಾ:ಮ್ರೆಡ್ ಮೃಣಾಲಿನಿಯವರೆ, 'ರಶ್ಯಾದಲ್ಲಿ ವಿದ್ಯಾರ್ಥಿಗಳ ಪರಿಸ್ಥಿತಿ' ಎಂಬ ವಿಷಯದ ಮೇಲೆ ಆ ಗೋಷ್ಟಿಯಲ್ಲಿ ನೀವು ಹತ್ತು ನಿಮಿಷ ಮಾತನಾಡಬಹುದೆ ?

ಕೋಸಲೇಂದ್ರ: ( ನಗುತ್ತ ) ಅವರು ರಶ್ಯಾದ ಮೇಲೆ ಬೇಕಾದಾಗ ಬೇಕಾದಲ್ಲಿಂದ ಬೇಕಾದಷ್ಟು ಹೊತ್ತು ಮಾತನಾಡುತ್ತಾರೆ. ಅದು ಅವರ ಜೀವಿತದ ಧೈಯ.

ಬನಸಿಲಾಲ : ಬಹಳ ಸಂತೋಷ, ಕೋಸಲೇಂದ್ರಬಾಬು, ನೀವೂ ನಿಮ್ಮ ಕೆಲವು ಕವನಗಳನ್ನು ಆ ಗೋಷ್ಠಿಯಲ್ಲಿ ಅಂದು ತೋರಿಸಬೇಕು. ದುಡು ಕೊಟ್ಟು ಗೋಷ್ಠಿಗೆ ಬಂದ ಜನರಿಗೆ ಕಾವ್ಯ ಗಾಯನವಿಲ್ಲದೆ ರುಚಿಸುವದಿಲ್ಲ.

ಕೋಸಲೇಂದ್ರ : ಅಂದರೆ ? ನಾನೇನು ಸಂಗೀತಬುವಾ ಎಂದು ತಿಳಿದಿರೇನು, ಸೇಠ್ ಜಿ!

ಬನಸಿಲಾಲ : ಛೇ ! ಛೇ ! ಹಾಗೆ ತಾವು ತಿಳಿಯಬಾರದು ! ಆದರೆ......ಆದರೆ ....... ...

ಕೋಸಲೇಂದ್ರ : ( ನಗುತ್ತ) ಆಗಲಿ, ಬರುತ್ತೇನೆ. ಇನ್ನು ನಿಮ್ಮಿಂದ ವಿವರಣೆ ಬೇಕಾಗಿಲ್ಲ.

ಬನಸಿಲಾಲ : ನಾನು ಬಹಳ ಉಪಕೃತ, ಕಾ:ಮ್ರೆಡ್ ಮೃಣಾಲಿನಿ, ತಮ್ಮ ಅನುಮತಿಯೂ ಇದೆಯೆಂದು ತಿಳಿಯುತ್ತೇನೆ. ಇದ್ದೇ ಇರಬೇಕು !

ಮೃಣಾಲಿನಿ : ಆಗಬಹುದು. ಆದರೆ ಒಂದು ಕರಾರಿನ ಮೇಲೆ, ಕಾರ್ಯ ಸೂಚಿಯಲ್ಲಿ ನನ್ನ ಹೆಸರನ್ನು ಕೊನೆಯದಾಗಿ ಹಾಕಿರಿ, ಉಳಿದ ಭಾಷಣ ಕಾರರು ರಶ್ಯಾವನ್ನು ಆಗೀಗ ಟೀಕಿಸಬಹುದು. ಕೊನೆಯ ಏಟು ನನ್ನ ಕೈಯಿಂದ ಬಿದ್ದಿರಬೇಕು !

ಬನಸಿಲಾಲ: ( ನಕ್ಕು) ಅಗತ್ಯವಾಗಿ, ಹಾಗಾದರೆ ಇನ್ನು ನಾನು ಹೊರಡ ಬೇಕು. ಕೆಲಸ ಬಹಳವಿದೆ. ಕಾ:ಮ್ರೆಡ್ ಮೃಣಾಲಿನಿಯವರ ಭೇಟಿ ಇಲ್ಲಿಯೇ ಆಗಿದ್ದು ಬಹಳ ಚೆನ್ನಾಯಿತು, ನಮಸ್ತೇ, ನಮಸ್ತೆ !

( ಹೋಗುತ್ತಾನೆ. )

ಕೋಸಲೇಂದ್ರ : ಕುಳಿತುಕೊಳ್ಳಿರಿ ಇನ್ನು ! ಈ ಮಹಾವ್ಯಕ್ತಿಗೆ ಮಾರ್ಕ್ಸ್ ವಾದದ ಪಾಠ ಹೇಳಿಕೊಡುವವರೋ ನೀವು ?

ಮೃಣಾಲಿನಿ : ಹೌದು, ನಮ್ಮ ಪ್ರಚಾರ ಕಾರ್ಯಕ್ಕೆ ಒಗ್ಗುವವರೆಲ್ಲ ನಮಗೆ ಮಹಾವ್ಯಕ್ತಿಗಳೇ !

ಕೋಸಲೇಂದ್ರ : ಅದೇನೇ ಇರಲಿ, ಇವರಿಗೆ ಮಾತ್ರ ನಿಮ್ಮಿಂದ ನಾನು ಪಾಠ ಹೇಳಿಸಿಕೊಡುವದಿಲ್ಲ.

ಮೃಣಾಲಿನಿ : (ಸಿಟ್ಟಿನಿಂದ) ಏನು, ಇದೆಲ್ಲಿಯ ಮಾತು ? ನನ್ನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ನೀವು ಯಾರು ?

ಕೋಸಲೇಂದ್ರ : (ನಗುತ್ತ) ನಾನು ಯಾರೂ ಅಲ್ಲ. ಆದರೆ ನೀವು ನನಗೆ ಹೇಳುವ ಪಾಠ ಮುಗಿಯುವುದೇ ಇಲ್ಲ ! ಅದು ಮುಗಿದರಲ್ಲವೇ ನೀವು ಬನಸಿಲಾಲರಿಗೆ ಹೇಳಿಕೊಡುವದು?

ಮೃಣಾಲಿನಿ: ( ನಗುತ್ತ ) ಅದೇಕೆ ಅಷ್ಟು ಹಸಿ ದಡ್ಡರೋ ನೀವು ?

ಕೋಸಲೇಂದ್ರ : ನಿಮಗೆ ಕ್ರಮೇಣ ತಿಳಿಯುತ್ತದೆ. ನಾನಾಗಿಯೇ ಯಾಕೆ ಹೇಳಬೇಕು ! ಸ್ವಲ್ಪ ಕುಳಿತುಕೊಳ್ಳಿರಿ, ಮೃಣಾಲಿನಿ !

ಮೃಣಾಲಿನಿ: ಇಲ್ಲ ಹೊರಡಬೇಕು. ಕಾಲೇಜು ವಿದ್ಯಾರ್ಥಿಗಳ ಮಾರ್ಕ್ಸಿಸ್ಟ್ ಅಭ್ಯಾಸಕೂಟದ ಹೊತ್ತಾಯಿತು. ಮುಂದಿನ ವಾರ ಯಾವಾಗ ಬರಲಿ ?

ಕೋಸಲೇಂದ್ರ : ಬೇಕಾದಾಗ, ನಿಮ್ಮ ದಾರಿ ಕಾಯುತ್ತ ಇಲ್ಲಿಯೇ ಹೀಗೆ ಕುಳಿತುಬಿಡುತ್ತೇನೆ.

ಮೃಣಾಲಿನಿ : ( ನಕ್ಕು ಪ್ಯಾಕೆಟ್ ಡೈರಿ ನೋಡುತ್ತ ) ನೀವು ಹೀಗೆಯೇ ಮನಸ್ಸಿಗೆ ಬಂದಷ್ಟು ಹೊತ್ತು ಕೂಡಬಹುದು. ಆದರೆ ನಾನು ಮಾತ್ರ....... ನಾನು........ಬುಧವಾರ ಸಂಜೆಗೆ ಬರುತ್ತೇನೆ. So long !

ಕೋಸಲೇಂದ್ರ: ಆಗಬಹುದು. So long, ಕಾ:ಮ್ರೆಡ್ ಮೃಣಾಲಿನಿ !

[: ಹೋಗುತ್ತಿರುವ ಮೃಣಾಲಿನಿಯನ್ನೇ ನೋಡುತ್ತ ನಿಲ್ಲುತ್ತಾನೆ. ] [ತೆರೆ.]

ಅಂಕು ೨

ಪ್ರವೇಶ ೧

[ ಮಾಹುವಿನ ಹತ್ತಿರದಲ್ಲಿ ಕಿಶನ್ ಕಿಶೋರರ ಬ೦ಗಲೆ, ಒಳಗೆಲ್ಲ ಕತ್ತಲೆಯಾಗಿದೆ. ಕಿಶನ್ ಕಿಶೋರರೂ ರುಕ್ಮಿಣಿ ದೇವಿಯರೂ ತಮ್ಮ ಕೋಣೆಯಲ್ಲಿ ಬೇರೆ ಬೇರೆ ಮಂಚಗಳ ಮೇಲೆ ಮಲಗಿಕೊಂಡಿದ್ದಾರೆ. ಮಧ್ಯರಾತ್ರಿಯ ಸಮಯವಾಗಿದೆ. ಕಿಶನ್ ಕಿಶೋರರು ಜೋರಾಗಿ ಗೊರಕೆ ಹೊಡೆಯುತ್ತಿದ್ದಾರೆ, ಈ ಸುಮಾರಿಗೆ ಹೊರಗಿನಿಂದ ಓಂಪ್ರಕಾಶನು ಬಾಗಿಲು ತಟ್ಟಿ ಸರಕಾರ! ಸರಕಾರ!' ಎಂದು ಕೂಗುತ್ತಾನೆ. ]

ಕಿಶನ್ ಕಿಶೋರ: ( ಗಡಬಡಿಸಿ ಹಾಸಿಗೆಯ ಮೇಲೆದ್ದು ಕುಳಿತು ) ಯಾರವರು? ಏನದು?

ಓಂಪ್ರಕಾಶ: ನಾನು, ಸರಕಾರ! ಓಂಪ್ರಕಾಶ, ಅಡವಿಯೊಳಗಿನ ಒಂದು ಹೆಬ್ಬಾವು ಮನೆಯೊಳಗೆ ಬಂದಿದೆ, ಪಹರೆಯವನನ್ನು ಅದು ಕಚ್ಚಿತು. ಎಚ್ಚರ ತಪ್ಪಿ ಅವನು ಗೇಟಿನ ಹತ್ತಿರ ಬಿದ್ದಿದ್ದಾನೆ. ಹಾವು ಕೆಳಗಿನ ಡ್ರಾಯಿಂಗ ರೂಮನ್ನು ಸೇರಿದೆ.

ಕಿಶನ್ ಕಿಶೋರ: ( ಎದ್ದು ದೀಪ ಹಚ್ಚಲು ಹೋಗಿ ) ಎಲ ಇವೇನು?ಸ್ವಿಚ್ ಒತ್ತಿ ಹಿಡಿದು ಅಲುಗಾಡಿಸಿದರೂ ದೀಪ ಹತ್ತಲೊಲ್ಲದು!

ಓಂಪ್ರಕಾಶ: ಡೈನಮೋ ಕೆಟ್ಟಿದೆ, ಸರಕಾರ! ಪವರ್‌ಹೌಸಿನ ಮೇಲ್ವಿ ಚಾರಕ ಒಂದೇ ಸವನೆ ಪ್ರಯತ್ನಿಸುತ್ತಿದ್ದಾನೆ. ಇನ್ನೂ ಯಾವ ದೀಪ ಹತ್ತಲೊಲ್ಲವು.

ಕಿಶನ್ ಕಿಶೋರ: ಬಟ್ಲರನನ್ನು ಎಬ್ಬಿಸು! ನೀನೂ, ಬಟ್ಲರ್ ಹಾಗು ನೇಟರ್ - ಕೂಡಿ ಆ ಹಾವನ್ನು ಹೊಡೆಯಿರಿ.

ಓಂಪ್ರಕಾಶ: ಕತ್ತಲೆಯಲ್ಲಿ ಕಾಣುವದಿಲ್ಲ, ಸರಕಾರ್! ಮೇಲಾಗಿ ಅವರೆಲ್ಲ ಬಾಗಿಲು ಹಾಕಿಕೊಂಡು ಮನೆಯಲ್ಲಿ ಕೂತಿದ್ದಾರೆ. ಹೊರಗೆ ಬರಲೊಲ್ಲರು.

ರುಕ್ಮಿಣಿ ದೇವಿ: ( ಹಾಸಿಗೆಯ ಮೇಲೆ ಎದ್ದು ಕುಳಿತು ) ಏನದು? ಎಷ್ಟು ಗದ್ದಲವಾಗಿದೆಯಲ್ಲ? ಕಿಶನ್ ಕಿಶೋರ: ಓಹೋ! ನಿನಗೆ ಎಚ್ಚರಾಯಿತೇ! ಕೆಳಗಿನ ಡ್ರಾಯಿಂಗ್ ರೂಮಿನಲ್ಲಿ ಹೆಬ್ಬಾವು ಬಂದಿದೆಯಂತೆ; ಹೊಡೆಯಲು ಹೇಳುತ್ತಿದ್ದೇನೆ.
ರುಕ್ಮಿಣಿ ದೇವಿ: ( ಗಾಬರಿಯಾಗಿ ) ಹೆಬ್ಬಾವೇ? ಅಯ್ಯೋ! ಇನ್ನೇನು ಗತಿ! ಈ ಅಡವಿಯಲ್ಲಿ ನಾವು ಪಾರಾಗುವದು ಹೇಗೆ?

( ಮೂರ್ಚ್ಚೆ ಹೋಗುತ್ತಾಳೆ. )

ಕಿಶನ್ ಕಿಶೋರ: ( ದಿಙ್ಮೂಢನಾಗಿ ) ಘಾತವಾಯಿತು, ಓಂಪ್ರಕಾಶ! ಸ್ವಲ್ಪ ನೀರು ತಾ! ಬೇಡ, ಬೇಡ! ಈಗ ಬಾಗಿಲು ತೆರೆಯುವದಿಲ್ಲ. ಇಲ್ಲಿಯೇ ಒಂದು ಲೋಟ ನೀರಿದೆ. ನೀನು ಹೋಗಿ ಪಹರೆಯವನನ್ನು ನೋಡು. ನಾನು ಇಲ್ಲಿ ಉಪಚರಿಸುತ್ತೇನೆ. ಅಯ್ಯೋ! ಅಯ್ಯೋ!!

[ ಶುಶೂಷಿಸುತ್ತಾನೆ.]

[ತೆರೆ.]




________________

ಅಂಕು೨


ಪ್ರವೇಶ ೨

[ ಕಾಂತಿಚಂದ್ರರ ಮನೆ ಕಾಂತಿ ಚಂದ್ರ-ರೋಹಿಣಿದೇವಿಯರು ಚಿಂತಾಕ್ರಾಂತರಾಗಿದ್ದಾರೆ. ಕಾಂತಿಚಂದ್ರರು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ರೋಹಿಣಿದೇವಿಯರು ಅವರ ಬಳಿ ಕುಳಿತಿದ್ದಾರೆ. ]

ರೋಹಿಣಿದೇವಿ : ಕಿಶನ್‌ಕಿಶೋರರು ಹೇಳಿದ್ದು ನಿಜ. ಬನಸಿಲಾಲನನ್ನು ನಾವು ತಡವಬಾರದಾಗಿತ್ತು. ದುಃಸ್ವಪ್ನದಂತೆ ನಾವು ಅಡಿಯಿಟ್ಟಲ್ಲೆಲ್ಲ ಅವನು ನಮ್ಮ ಬೆನ್ನು ಹತ್ತಿದ್ದಾನೆ.

ಕಾಂತಿಚಂದ್ರ: ( ನರಳುತ್ತ ) ನಾನೂ ಅದನ್ನೇ ಹೇಳುತ್ತ ಬಂದೆ, ರೋಹಿಣಿ! ಆದರೆ ಅದು ನಿನಗೆ ಹಿಡಿಸಲಿಲ್ಲ. ಆ ನೀಚ ಯಾವುದಕ್ಕೂ ಹೇಸುವವನಲ್ಲ. ವಿದ್ಯಾರ್ಥಿಗಳ ನಿಧಿಯೊಂದನ್ನು ಕೂಡಿಸಿದಂತೆ ಮಾಡಿ ಬನಸಿಲಾಲನು ಅವರನ್ನು ಬಗಲಲ್ಲಿ ಹಾಕಿಕೊಂಡಿದ್ದಾನೆ. ಬಡವರಿಗಾಗಿ ಒಂದು ಕೋಆಪರೇಟಿವ್ ಸ್ಟೋರ್ ತೆಗೆದು ರೋಖು ಹಣವಿಲ್ಲದೆ ಸಾಮಾನು ಕೊಡುತ್ತ ಬಂದು ಅವರ ಜೀವವನ್ನೂ ವೋಟನ್ನೂ ಕೂಡಿಯೇ ಕೈಯಲ್ಲಿ ಹಿಡಿದಿದ್ದಾನೆ. ಆಗಸ್ಟ್ ಗಲಭೆಯಲ್ಲಿ ನಾಲ್ಕೆಂಟು ತಾರು- ಕಂಬಗಳನ್ನು ಕಿತ್ತು ಹಾಕಿ ಒಂದೆರಡು ನಿಲ್ಮನೆಗಳನ್ನು ಸುಟ್ಟು ಜೇಲಿಗೆ ಹೋಗಿ ಕಾಂಗ್ರೆಸ್ಸಿನ ಮುಖ್ಯಸ್ಥರ ಪ್ರೇಮವನ್ನು ಗಳಿಸಿದ್ದಾನೆ. ಮಾರ್ಕ್ಸ್‌ವಾದಕ್ಕೆ ಮತಾಂತರ ನಾಗುವ ಆಸೆ ಹಚ್ಚಿ ನಮ್ಮ ಮೃಣಾಲಿನಿಯಿಂದ ಕಾಮ್ರೆಡ್ ಜೋಶಿಯ ವರೆಗೆ ಎಲ್ಲರ ಮೂಗಿಗೆ ತುಪ್ಪ ಹಚ್ಚಿದ್ದಾನೆ. ಶ್ರೀಮಂತರೂ ಅಧಿಕಾರಿಗಳೂ ಅದೆಂದಿಗೋ ಅವನ ಕಿಸೆಯಲ್ಲಿ ಬಿದ್ದಿದ್ದಾರೆ. ಇಂಥ ಬನಸಿಲಾಲನನ್ನು ವಿರೋಧಿಸಿ ಏನು ಪ್ರಯೋಜನ ? ........ ಸ್ವಲ್ಪ ನೀರು ತಾ, ರೋಹಿಣಿ ! ಮತ್ತೆ ಬಾಯಿ ಆರಿತು.

ರೋಹಿಣಿದೇವಿ : ( ನೀರು ಕೊಡುತ್ತ ) ನೀವು ಹಾಗೆ ಮಾತನಾಡಬೇಡಿರಿ, ಕಾಂತಿಚಂದ್ರ ! ವ್ಯರ್ಥ ಆಯಾಸವಾಗುತ್ತದೆ. ನಿದ್ರೆಯಲ್ಲಿಯೂ ಇದೇ ________________

ಯುಗಾಂತರ

ವಿಷಯವನ್ನು ನೀವು ಬಡಬಡಿಸುತ್ತಿರಿ. ನಿಮ್ಮನ್ನು ಸುಮ್ಮನೆ ಎಲ್ಲಿಗೆ ಕರೆದು ಕೊಂಡು ಬಂದು ಈ ಸಂಕಟಕ್ಕೆ ಗುರಿಮಾಡಿದೆನಲ್ಲ, ಎಂದು ಕೆಡಕೆಸಿಸುತ್ತದೆ. ( ರೋಹಿಣಿಯು ಕಣ್ಣೀರನ್ನು ಒರಿಸಿಕೊಳ್ಳುತ್ತಾಳೆ. )

ಕಾಂತಿಚಂದ್ರ : ಅದರಲ್ಲಿ ನಿನ್ನದೇನು ತಪ್ಪು, ರೋಹಿಣಿ ! ನಾನೇ ಒಪ್ಪಿದೆ ನಲ್ಲ. ಧರ್ಮಯುದ್ದದಲ್ಲಿ ಎಂಥ ಶತ್ರುವನ್ನಾದರೂ ನಾನು ಎದುರಿಸಬಲ್ಲೆ. ಆದರೆ ಈ ಬನಸಿಲಾಲನ ನೀಚತನಕ್ಕೆ ಬೇಸತ್ತು ಜೀವನದ ಬಗ್ಗೆ ಅಸಹ್ಯ ಪಟ್ಟು ಕೊಂಡಿದ್ದೇನೆ. ನಿನ್ನೆ ಮಹಿಳಾ ಸಂಘದಲ್ಲಿ ಏನಾಯಿತು, ರೋಹಿಣಿ ?

ರೋಹಿಣಿದೇವಿ : ಏನಾಗುವದು ಗೊತ್ತೇ ಇದೆ. ಹೊಸ ವರುಷ ಸಂಘಕ್ಕೆ ನಾನೇ ಅಧ್ಯಕಳಾಗಬೇಕೆಂದು ಒಬ್ಬ ಗೆಳತಿ ನನ್ನ ಹೆಸರು ಸೂಚಿಸಿದಳು. ಸರಿ, ಮರುಕ್ಷಣವೇ ಪ್ರತಿಸ್ಪರ್ಧಿಯಾಗಿ ಇನ್ನೊಂದು ಹೆಸರು ಬಂತು, - ಬನಸಿಲಾಲನ ಹೆಂಡತಿಯದು. ಕೊನೆಗೆ ವೋಟಿಗೆ ಬಿದ್ದು ಎರಡು ವೋಟ ಒಡೆದು ಹೋಗಿ ಅವಳೇ ಆರಿಸಿಬಂದಳು. ಇನ್ನು ಮೇಲೆ ಸಂಘದ ಸದಸ್ಯತ್ವಕ್ಕೆ ನಾನು ತ್ಯಾಗಪತ್ರ ಕೊಡಬೇಕೆಂದಿದ್ದೇನೆ.

ಕಾಂತಿಚಂದ್ರ : ( ಹಾಸಿಗೆಯ ಮೇಲೆ ಒಂದು ಮಗ್ಗಲಾಗುತ್ತ ) ಒಂದೊಂದು ಸಂಸ್ಥೆಯು ಇಂದಿಗೆ ಮುಳ್ಳುಗಳ್ಳಿಯ ಕೊಂಪೆಯಾಗಿದೆ. ವ್ಯಕ್ತಿಯ ಶಕ್ತಿಯನ್ನು ಹೀರುವ ಯಂತ್ರಮಾಯೆಯಾಗಿದೆ.
ರೋಹಿಣಿದೇವಿ: ( ಮುಂಗೈ ಗಡಿಯಾರ ನೋಡಿಕೊಂಡು ) ಕಾಂತಿಚಂದ್ರ್, ಈಗ ನಿಮಗೆ ಇನ್ನೊಂದು ಡೋಜು ಔಷಧ ಕೊಡಬೇಕು. ತೆಗೆದುಕೊಳ್ಳಿರಿ.

( ಕೊಡುತ್ತಾಳೆ. )


ಓಹೋ ! ಮತ್ತೆ ಜ್ವರ ಏರಹತ್ತಿದ ಹಾಗಿದೆಯಲ್ಲ. ಇದನ್ನು ಕುಡಿದ ಕೂಡಲೆ ಮಲಗಿಕೊಳ್ಳಿರಿ.

ಕಾಂತಿಚಂದ್ರ : ( ಎದ್ದು ಕುಳಿತು ಔಷಧ ಕುಡಿದು ಪುಟ್ಟ ಗ್ಲಾಸನ್ನು ಕೆಳಗಿಡುತ್ತ) ಆ ನೀಚ - ತುಂಬಿದ ಸಭೆಯಲ್ಲಿ ನಾನು ಸ್ವಾರ್ಥಸಾಧು, ಕೀರ್ತಿ ಕಾಮುಕ ಎಂದು ಸೂಚಿಸಿದನಲ್ಲ. ಅದಕ್ಕೆ ನನ್ನ ಮೈಯೆಲ್ಲ ಉರಿಯಹತ್ತಿದೆ. ಆ ಬನಸಿ
ಲಾಲನನ್ನು ನನ್ನೆದುರಿಗೆ ತಂದು ನಿಲ್ಲಿಸಿರಿ. ಅವನಿಗೆ ದೇಹಾಂತ ಶಿಕ್ಷೆ ಕೊಡುತ್ತೇನೆ. ನೀಚ! ನೀಚ!!

( ಯಾರನ್ನೋ ಹೊಡೆಯಲು ಹೋದ ಹಾಗೆ ಕೈ ಬೀಸಿ ಧೊಪ್ಪನೆ ಹಾಸಿಗೆಯ ಮೇಲೆ ಬೀಳುತ್ತಾನೆ.)

ರೋಹಿಣಿದೇವಿ : ( ಭಯ ಕಂಪಿತಳಾಗಿ ) ಯಾರೋ, ಯಾರಿದ್ದಿರಲ್ಲಿ? ಮತ್ತೆ ಯಜಮಾನರಿಗೆ ಸನ್ನಿ ಬಂದಿದೆ. ಓಡಿಬನ್ನಿರಿ !

( ಉಪಚರಿಸುತ್ತಾಳೆ. ದಯಾರಾಮನು ಓಡಿಬರುತ್ತಾನೆ; ಕಾಂತಿಚಂದ್ರರ ಕಾಲ ಬಳಿಗೆ ನಿಂತು ಉಪಚರಿಸುತ್ತಾನೆ. ಇದೇ ವೇಳೆಗೆ ಕೋಸಲೇಂದ್ರನು ಪ್ರವೇಶಿಸಿ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡೊಡನೆ ಕಾಂತಿಚಂದ್ರರ ಬಳಿಗೆ ಬಾಗಿ ಶುಶ್ರೂಷಿಸುತ್ತಾನೆ.)

ಕೋಸಲೇಂದ್ರ : ಏನಿದು ರೋಹಿಣಿದೇವಿ !ಕಾ:ಮ್ರೆಡ್ ಮೃಣಾಲಿನಿಯವರು ನನಗೆ ಹೇಳಿದರು. ಆದರೆ ಕಾಂತಿಚಂದ್ರರ ಪ್ರಕೃತಿ ಇಷ್ಟು ಕ್ಷೀಣವಾಗಿದೆಯೆಂದು ನನಗೆನಿಸಿರಲಿಲ್ಲ.

ರೋಹಿಣಿದೇವಿ : ( ಕಣ್ಣೊರಸಿಕೊಂಡು ) ಏನೂ ಇಲ್ಲ. ನನ್ನ ದುರದೃಷ್ಟ ಇರು, ಕೋಸಲೇಂದ್ರಬಾಬು.

( ಇಷ್ಟರಲ್ಲಿ ಕಾಂತಿಚಂದ್ರರು ಚೇತರಿಸಿಕೊಂಡು ನರಳುತ್ತ "ರೋಹಿಣಿ ! ಸ್ವಲ್ಪ ನೀರು ಕೊಡು ! ” ಎಂದು ಕ್ಷೀಣ ಧ್ವನಿಯಲ್ಲಿ ಕೇಳುತ್ತಾರೆ. ರೋಹಿಣಿದೇವಿ ನೀರು ತಂದು ಕುಡಿಸುತ್ತಾಳೆ, ಕೋಸಲೇಂದ್ರನು ಸಮೀಪದಲ್ಲಿದ್ದ ಒಂದು ಕುರ್ಚಿಯ ಮೇಲೆ ಕುಳಿತು ಕೊಳ್ಳುತ್ತಾನೆ. )

ಕೋಸಲೇಂದ್ರ : ಇನ್ನು ನೀವು ಕುಳಿತುಕೊಳ್ಳಿರಿ, ರೋಹಿಣಿದೇವಿ! ಅವರಿಗೆ ಈಗ ಎಚ್ಚರಾಗಿದೆ. ಅಶಕ್ತತೆ ಇದ, ಮತ್ತೇನೂ ಅಲ್ಲ.

ಕಾಂತಿಚಂದ್ರ : ( ಹಾಸಿಗೆಯ ಮೇಲೆ ಹೊರಳಿ ನೋಡಿ ) ಯಾರು ? ಕೋಸ ಲೇಂದ್ರರೇನು ? ಕ್ಷಮಿಸಬೇಕು, ಕೋಸಲೇಂದ್ರ ಬಾಬು, ನಾನು ಎದ್ದು ಕೂಡುವ ಹಾಗಿಲ್ಲ.

ಕೋಸಲೇಂದ್ರ: ಛೇ ! ಛೇ ! ಹಾಗೆ ನೀವು ತೊಂದರೆ ಪಟ್ಟುಕೊಳ್ಳಬಾರದು. ಈಗ ನಿಮಗೆ ವಿಶ್ರಾಂತಿ ಬೇಕು, ಯಾವ ವಿಚಾರವಿಲ್ಲದೆ ಸ್ವಸ್ಥವಾಗಿ ಮಲಗಿರಿ. ಕಾಂತಿಚಂದ್ರ : ( ನರಳುತ್ತ ) ದಿಲ್ಲಿಯು ನನ್ನನ್ನು ಮಲಗಿಸಿಬಿಟ್ಟಿದೆ ಕೋಸ ಲೇಂದ್ರರೆ!

ಕೋಸಲೇಂದ್ರ : ಹೌದು, ರೋಹಿಣಿದೇವಿಯವರೆ, ಬನಸಿಲಾಲನ ವಿಷಯ ಇಷ್ಟು ದೀರ್ಘಕ್ಕೆ ಹೋಗಿದೆಯೆಂದು ನನಗೆ ಗೊತ್ತಿರಲಿಲ್ಲ. ಮೃಣಾಲಿನಿಯವರು ಹೇಳಿದರು.

ರೋಹಿಣಿದೇವಿ : ಅದೃಷ್ಟದಂತೆ ಆ ಮಹಾರಾಯ ನಮ್ಮ ಬೆನ್ನು ಹತ್ತಿದ್ದಾನೆ. ಇದನ್ನೆಲ್ಲ ನೆನೆಸಿದಾಗ ಆ ಅನಾಥಾಶ್ರಮದ ಅಧ್ಯಕ್ಷಪದವಿಯಿಂದ ಇಷ್ಟೆಲ್ಲ ಆಯಿತು; ಅದನ್ನೇಕೆ ಬಿಟ್ಟುಕೊಡಬಾರದು ? ಎಂದೆನಿಸಹತ್ತಿದೆ.

ಕೋಸಲೇಂದ್ರ : ಬಹಳ ಒಳ್ಳೆಯದು. ಅದನ್ನು ಬಿಟ್ಟು ಕೊಡಿರಿ, ಕಾಂತಿಚಂದ್ರಜಿ ! ಅದರಿಂದೇನಾಗಬೇಕಾಗಿದೆ.

ಕಾಂತಿಚಂದ್ರ : ( ನರಳುತ್ತ ) ಅದು ನನಗೆಲ್ಲಿ ಬೇಕು ? ರೋಹಿಣಿ ಹೇಳಿದರೆ ಇವತ್ತೇ ತ್ಯಾಗಪತ್ರವನ್ನು ಕಳಿಸುತ್ತೇನೆ.

ರೋಹಿಣಿದೇವಿ : ಇವತ್ತು ಕಳಿಸಿಬಿಡೋಣ.

ಕೋಸಲೇಂದ್ರ : ರೋಹಿಣಿದೇವಿಯರೆ, ಇದೇ ಸಮಯದಲ್ಲಿ ನಾನು ನಿಮಗೆ ಇನ್ನೊಂದು ಮಾತು ಹೇಳಬಹುದೆ ? ಜನತೆಯ ಸೇವೆ ಮಾಡಲು ನಾವು ಹಾತೊರೆಯಬೇಕಾಗಿಲ್ಲ. ನಿಷ್ಕಾಮಸೇವೆಯ ಮರ್ಮವನ್ನು ಅರಿತಿದ್ದರೆ ಕಣ್ಣು ಹೊರಳಿಸಿದ ಕೆಲಸ ರಾಶಿಯಾಗಿ ಬಿದ್ದಿರುತ್ತದೆ.

ರೋಹಿಣಿದೇವಿ : ( ತುಸು ಸಿಟ್ಟಿನಿಂದ ) ಈ ಮಾತನ್ನು ಅನೇಕ ಸಲ ಕೇಳಿದ್ದೇನೆ. ಮಾರ್ಕ್ಸ್‌ವಾದಿಯಾದ ನಮ್ಮ ಮೃಣಾಲಿನಿ ಹೇಳುವದು ಇದನ್ನೇ. ಇಂದು ನೀವು ಕವಿಗಳೂ ಇದಕ್ಕೆ ದನಿಗೂಡಿಸುತ್ತಿದ್ದೀರಲ್ಲ! ಸಲ್ಲಿಸಿದ ಸೇವೆಗೆ ತಕ್ಕುದಾಗಿ ಮಾನ- ಕೀರ್ತಿಗಳ ಸುಖವೊಂದು ಬರುತ್ತದೆ. ಅದನ್ನೂ 'ಕೃಷ್ಣಾರ್ಪಣ' ಎನಬೇಕೆ ?

ಕಾಂತಿಚಂದ್ರ : ( ಸಾವಕಾಶವಾಗಿ ) ಈ ಮಾತು ನನಗೆ ಅರ್ಥವಾಗುವದಿಲ್ಲ, ಕೋಸಲೇಂದ್ರಬಾಬು ! ಮನುಷ್ಯನಿಗೆ ಲಭಿಸುವ ಸುಖಗಳಲ್ಲಿ ಉತ್ತಮ ವೆಂದರೆ ಇದು. ಇದನ್ನು ಬಿಟ್ಟರೆ ಉಳಿಯಿತೇನು ? ಮೃಣಾಲಿನಿಯ ಎಲ್ಲ ನಿರ್ದಾಕ್ಷಿಣ್ಯತೆಯನ್ನು ನಾನು ಅರಗಿಸಬಲ್ಲೆ. ಆದರೆ ಅಂಕುಶದಿಂದ ತಿವಿದ ಹಾಗೆ ಸದಾ ಈ ಮಾತನ್ನು ಆಕೆ ಎತ್ತುತ್ತಾಳೆ. ನೀವು ತಿಳಿದವರೂ ಹೀಗೆ ಅನಬೇಕೆ ?

ಕೋಸಲೇಂದ್ರ : ( ಸ್ವಲ್ಪ ನಕ್ಕು ) ಈ ಮಾತಿನಲ್ಲಿ ನನ್ನ ಹಾಗು ಮೃಣಾಲಿನಿ ಯವರ ತಿಳುವಳಿಕೆ ಒಂದೇ ಆಗಿದೆ. ಸುಖಕ್ಕೂ ಮಿಗಿಲಾದ ಇನ್ನೊಂದು ಅನುಭವವಿದೆ, ಕಾಂತಿಚಂದ್ರಜಿ. ಅದು ಆನಂದ.

ಕಾಂತಿಚಂದ್ರ: ಆನಂದ ? ಸುಖವಲ್ಲದ ಆನಂದ ಯಾವುದು ? ಎಲ್ಲಿ ಸಿಕ್ಕುತ್ತದೆ ?

ಕೋಸಲೇಂದ್ರ : ವ್ಯಕ್ತಿಯ ಅಂತರಾಳದಲ್ಲಿ.

ರೋಹಿಣಿದೇವಿ : ಅದು ನಿಮ್ಮಂಥ ಕವಿಗಳಿಗೆ ಮಾತ್ರ ಸಾಧ್ಯ. ನಮಗಲ್ಲ.

ಕೋಸಲೇಂದ್ರ : ( ಏಳುತ್ತ) ರೋಹಿಣಿದೇವಿಯವರೆ, ಒಂದಿಲ್ಲೊಂದು ದಿನ ಈ ಆನಂದ ಎಲ್ಲರ ಬದುಕಾಗುವದು. ಆದರೆ ಈಗ ಈ ಚರ್ಚೆ ಬೇಡ. ಅದರಿಂದ ಕಾಂತಿಚಂದ್ರರಿಗೆ ಸುಮ್ಮನೆ ಆಯಾಸ. ನಾನಿಲ್ಲಿದ್ದರೆ ಮಾತಿಗೆ ಮುಕ್ತಾಯವಿಲ್ಲ. ಕಾಂತಿಚಂದ್ರರು ವಿಶ್ರಮಿಸಲಿ. ಸದ್ಯಕ್ಕೆ ಹೊರಡುತ್ತೇನೆ. ನಮಸ್ತೇ, ನಮಸ್ತೇ.

(ಹೋಗುತ್ತಾನೆ)

ಕಾಂತಿಚಂದ್ರ: ( ಮೆಲ್ಲನೆ ) ಈಗಿನ ಹುಡುಗರು ಒಡೆಯದ ಒಗಟವಾಗಿದ್ದಾರೆ, ರೋಹಿಣಿ, ಅವರ ಮಾತೊಂದೂ ಅರ್ಥವಾಗುವದಿಲ್ಲ.

ರೋಹಿಣಿದೇವಿ : ಕಾಂತಿಚಂದ್ರ, ಅವರ ನೆತ್ತಿಯ ಮೇಲಿನ ಮಾಸ ಇನ್ನೂ ಆರಿಲ್ಲ. ಅಂತೇ ಹೀಗೆ ಮಾತಾಡುತ್ತಾರೆ. ನಿಮಗೆ ಗುಣವಾಗಲಿ. ಈ ಅನಾಥಾಶ್ರಮವನ್ನು ಇಂದಿಗೇ ಬನಸಿಲಾಲನಿಗೆ ಬಿಟ್ಟುಕೊಡೋಣ. ಅವನ ಹಾದಿ ಬೇಡ ನಮಗೆ, ಅವನ ಸಂಬಂಧವಿಲ್ಲದ ಬೇರೆ ಕಾರ್ಯವನ್ನಾರಿಸಿ ಅದರಲ್ಲಿ ಕೆಲಸ ಮಾಡೋಣ, ಭಾರತದ ಘಟನೆಯ ಮಹಾಕೂಟವನ್ನು ಏರ್ಪಡಿಸಲು ಇನ್ನು ಮೇಲೆ ಶಾಸನ ಸಭೆಯ ಚುನಾವಣೆಗಳಾಗುವವೆಂದು ಸರಕಾರ ಸಾರಿದೆಯಲ್ಲ ? ದಿಲ್ಲಿಯಿಂದ ನೀವು ಅಸೆಂಬ್ಲಿಗೆ ನಿಲ್ಲುವಿರಂತೆ.  ೪೦

ಯುಗಾಂತರ

ಕಾಂತಿಚಂದ್ರ : ಇದೊಂದು ಒಳ್ಳೆಯ ಯೋಚನೆ, ರೋಹಿಣಿ, ಹಾಗೆ
ಮಾಡಿದರೆ ದೇಶಕ್ಕೆ ಹಿತಕರವಾದ ಕೆಲಸ ನನ್ನಿಂದ ಆಗಬಹುದು.

ದಯಾರಾಮ್ : ಮೊನ್ನೆ ಅವರ ಆಳುಮಗ ಹೇಳುತ್ತಿದ್ದ, ಸರಕಾರ್ ! ಬನಸಿ
ಲಾಲರು ಯಾವುದೋ ಚುನಾವಣಿಗೆ ನಿಲ್ಲುವವರಿದ್ದಾರಂತೆ.
ಮಂತ್ರಿಯಾಗ ಬೇಕೆಂದು ಮಾಡಿದ್ದಾರಂತೆ.

ಕಾಂತಿಚಂದ್ರ : ( ನೊಂದ ಧ್ವನಿಯಲ್ಲಿ ) ಏನು, ಆ ನೀಚ ಇದರಲ್ಲಿಯೂ ಕೈ
ಹಾಕಿದನೇ ?

ರೋಹಿಣಿದೇವಿ : ( ಉದ್ವೇಗದಿಂದ ) ಇದು ಯಾವ ಹಾರುಸುದ್ದಿ , ದಯ
ರಾಮ ? ಯಾರು ಹುಟ್ಟಿಸಿದರು ಇದನ್ನು ?

ದಯಾರಾಮ್ : ಬನಸಿಲಾಲರು ಮಾತಾಡುವದನ್ನು ಆ ಆಳುಮಗ ಕೇಳಿದ
ನಂತೆ, ಸರಕಾರ್.

ರೋಹಿಣಿದೇವಿ : ಅದನ್ನೆಲ್ಲ ನೋಡಿಕೊಳ್ಳುತ್ತೇನೆ. ಕಾಂತಿಚಂದ್ರ !
ನಿಮ್ಮ - ಎಲ್ಲ ಚಿಂತೆಯನ್ನು ತಳ್ಳಿಹಾಕಿರಿ. ಮೊದಲು ನಿಮ್ಮ
ಪ್ರಕೃತಿ ಗುಣವಾಗಲಿ.ನಾನು ಈ ವಿಷಯದಲ್ಲಿ
ಎಲ್ಲ ಹಂಚಿಕೆ ಮಾಡುತ್ತೇನೆ.

ಕಾಂತಿಚಂದ್ರ: ( ನರಳುತ್ತ ) ಎಲ್ಲಿ, ರೋಹಿಣಿ, ಸ್ವಲ್ಪ ನೀರು ಕೊಡು.
ಮತ್ತೆ ಬಾಯಾರಿಕೆ ಆಗಿದೆ.

( ರೋಹಿಣಿದೇವಿ ನೀರು ಕೊಡುತ್ತಾಳೆ. )}}
[ ತೆರೆ ]

ಪ್ರವೇಶ ೩

[ ಕೋಸಲೇಂದ್ರನ ಕೋಣೆ. ಕೋಸಲೇಂದ್ರನು ಆರಾಮ ಕುರ್ಚಿಯಲ್ಲಿ ಕಾವ್ಯಮಗ್ನನಾಗಿ ಕುಳಿತಿದ್ದಾನೆ ]

ಕೋಸಲೇಂದ್ರ : ( ತನ್ನಷ್ಟಕ್ಕೆ ತಾನೆ )
ನಾನು ಕವಿ, ನಾ ಪ್ರವಾದಿ,
ನೀನೆಂದಿಗು ಮಾರ್ಕ್ಸವಾದಿ !
ಕವಲೊಡದಿವೆ ನಮ್ಮ ಹಾದಿ,
ನೀನು ನವ್ಯ, ನಾ ಬುನಾದಿ.
ಮೃಣಾಲಿನಿ, ಮೃಣಾಲಿನಿ !
ನವೋನ್ಮೇಷಶಾಲಿನಿ !
ಕವಲೊಡೆದೂ ಕಲೆಯಬಹುದು.
ಭಿನ್ನವಿದ್ದು ಬೆರೆಯಬಹುದು. ಕ್ಷಿತಿಜ, --ಭೂಮಿ-ವ್ಯೋಮದಂಚು.
ರಶ್ಮಿ ತುಂತುರಗಳ ಸಂಚು,--
ಇಂದ್ರಧನು ! ಮೃಣಾಲಿನಿ !
ನವೋನ್ಮೇಷಶಾಲಿನಿ !

( ಮೃಣಾಲಿನಿಯು ಕೈಯಲ್ಲಿ ಒಂದು ಪುಸ್ತಕವನ್ನು ಹಿಡಿದುಕೊಂಡು ಪ್ರವೇಶಿಸುತ್ತಾಳೆ. )

ಮೃಣಾಲಿನಿ : ಏನು ಕವಿಗಳೆ, ಯಥಾಪ್ರಕಾರ ಕಾವ್ಯಸಮಾಧಿಯಲ್ಲಿದ್ದೀರಾ ?

ಕೋಸಲೇಂದ್ರ: ( ಎದ್ದು ಸ್ವಾಗತಿಸುತ್ತ ) ಬಾ, ಬಾ ಮೃಣಾಲಿನಿ ! ನಿನ್ನ ದಾರಿಯನ್ನೇ ನೋಡುತ್ತ ಕುಳಿತಿದ್ದೇನೆ. ಹೀಗೆ ಬಾ, ಇವತ್ತು ಯಾವ ಪುಸ್ತಕ ತಂದೆ ?

ಮೃಣಾಲಿನಿ : ( ಕುಳಿತುಕೊಳ್ಳುತ್ತ, ಉತ್ಸಾಹದಿಂದ ) ಇವತ್ತು ಮ್ಯಾಕ್ಜಿಮ್ ಗಾಃರ್ಕಿಯ Problems of Soviet Literature ತಂದಿದ್ದೇನೆ ಕೋಸಲೇಂದ್ರ ! ಬಹಳ ಒಳ್ಳೆಯ ಪುಸ್ತಕ ಇದು. ಇದನ್ನು ಓದಿ ಚರ್ಚಿಸೋಣ. ________________

೪೨

ಯುಗಾಂತರ

ಕೋಸಲೇಂದ್ರ : ( ಪುಸ್ತಕವನ್ನು ಇಸಿದುಕೊಂಡು ಬದಿಗಿಟ್ಟು ) ಇನ್ನು ಈ ಪುಸ್ತಕಗಳ ಮಾತು ಹಾಗಿರಲಿ, ಮೃಣಾಲಿನಿ ! ಸಹಪಾಠಿಗಳಾದ ತತ್ವ ಶೋಧಕರೆಂದು ನಾವು ಒಬ್ಬರನ್ನೊಬ್ಬರು ಏಕವಚನದಿಂದ ಕರೆಯಹತ್ತಿದೆ ನಲ್ಲ ? ಅದರಂತೆ ಇನ್ನೂ ಕೆಲವು ನಿಯಮಗಳನ್ನು ಅಮಲಿನಲ್ಲಿ ತರ. ಬೇಕಾಗಿದೆ. ಇಂದು ಅವುಗಳಲ್ಲಿ ಒಂದರ ಬಗ್ಗೆ ನಿರ್ಣಯಿಸೋಣ.

ಮೃಣಾಲಿನಿ : ಯಾವ ಮಾತದು ಕೋಸಲೇಂದ್ರ ?

ಕೋಸಲೇಂದ್ರ : ( ಕುರ್ಚಿಯಲ್ಲಿ ಹಿಂದಕ್ಕೆ ಸರಿದು ಕುಳಿತುಕೊಂಡು ) Manifesto ಓದಿದೆವು, ಭಾಂಡವಲದ ಮೇಲಿನ ಕಾರ್ಲ್ ಮಾರ್ಕ್ಸನ ಪುಸ್ತಕ ವನ್ನು ಅರಗಿಸಿದೆವು. ಸಾಮ್ರಾಜ್ಯ ವಾದದ ಮೇಲಿನ ಮಾರ್ಕ್ಸ-ಏಂಜೆಲ್ಸ್ ವಿಚಾರ ಮಾಲಿಕೆಯನ್ನೆಲ್ಲ ತಿರುವಿ ಹಾಕಿದೆವು, ಲೆನಿನ್ ಆದ. ಟ್ರಾಃಟ್‌ಸ್ಕಿ ಆದ. ಇನ್ನು ಉಳಿದ ಪುಸ್ತಗಳನ್ನು ನಾನೇ ಓದಿಕೊಳ್ಳುತ್ತೇನೆ, ಮೃಣಾಲಿನಿ. ಸುಮ್ಮನೆ ನಿನಗೆ ತೊಂದರೆ ಏಕೆ ?

ಮೃಣಾಲಿನಿ : ( ಕಂಪಿತಳಾಗಿ ) ಅಂದರೆ ? ಇನ್ನು ನಮ್ಮ ಈ ಅಭ್ಯಾಸಕೂಟ ಗಳು ಬೇಡವೆಂದು ಹೇಳುವೆಯಾ ? ಅದೇಕೆ ? ವಾರಕ್ಕೊಂದು ಸಲದಂತೆ ಪ್ರಾರಂಭಿಸಿ ವಾರಕ್ಕೆ ಹತ್ತು ಸಲ ಸೇರಿ ನಾವು ಚರ್ಚಿಸಿದೆವು. ನಿನ್ನ ಜೊತೆಗೆ ಓದಿದಾಗ ಅದಾವುದೋ ನನ್ನ ಕೊರತೆಯೊಂದು ತುಂಬಿಕೊಳ್ಳುತ್ತದೆ, ಕೋಸಲೇಂದ್ರ. ಇದರಿಂದ ನನಗೆ ತೊಂದರೆಯಿಲ್ಲವೆಂದಿಷ್ಟೇ ಅಲ್ಲ, ಹೊಸ ದೊಂದು ಆನಂದ ದೊರೆತಿದೆ. ಅದು ಕಳೆದರೆ, ನಾನೇನು ಮಾಡುವೆನೋ ನನಗೆ ತಿಳಿಯಲಿಕ್ಕಿಲ್ಲ.

ಕೋಸಲೇಂದ್ರ: ( ಮುಗುಳು ನಗೆಯಿಂದ ) ಎಲ ! ಮಾರ್ಕ್ಸವಾದಿಯ ಬಾಯಲ್ಲಿ ಇದೇನು ನಾನು ಕೇಳುತ್ತಿದ್ದೇನೆ ! ನನ್ನ ಕಿವಿಗಳ ಮೇಲಿನ ವಿಶ್ವಾಸವೇ ಹಾರಿತು. ಈ ಅಸ್ಪುಟ ಭಾಷೆ ನಿನ್ನಿಂದ ಬರಬಾರದು, ಮೃಣಾಲಿನಿ,

ಮೃಣಾಲಿನಿ : ಸ್ಪುಟವೋ ಅಸ್ಪುಟವೋ ನನಗೆ ಗೊತ್ತಿಲ್ಲ. ಆದರೆ ಇದು ಮಾರ್ಕ್ಸವಾದಕ್ಕೆ ವಿರುದ್ಧವಾದುದೇನೂ ಅಲ್ಲ. ಸ್ನೇಹ, ಪ್ರೀತಿ, ಎಂದು ಹೇಳುತ್ತಾರಲ್ಲ; ಅದು ಇದೇ ಎಂದು ಕಾಣುತ್ತದೆ.
________________

೪೩

ಅoಕು ೨

ಕೋಸಲೇಂದ್ರ : ( ನಕ್ಕು ) ಅದು ಸ್ನೇಹವೋ? ಪ್ರೀತಿಯೊ? ತೂಗಿ ನೋಡು ಮೃಣಾಲಿನಿ ! ಸ್ನೇಹ' ಎಂದರೆ ನಾನು ಗೆಳೆಯ' ನಾಗುತ್ತೇನೆ. ( ಪ್ರೀತಿ? ಎಂದರೆ ಪ್ರೇಮಿ'ಯಾಗುತ್ತೇನೆ.

ಮೃಣಾಲಿನಿ : ಸದ್ಯಕ್ಕೆ ಗೆಳೆಯ' ಎಂದು ತಿಳಿದು ಸಾಗೋಣ. ನಿನ್ನ ಗೆಳೆತನ ಅದು ಹೇಗೋ ನನ್ನ ಹೃದಯವನ್ನು ಮುಟ್ಟಿದೆ, ಕೋಸಲೇಂದ್ರ ! ಮಾರ್ಕ್ಸ್ ವಾದಿಯದು ಸ್ವಯಂಪೂರ್ಣ ವ್ಯಕ್ತಿತ್ವವೆಂದು ನಾನು ತಿಳಿದಿದ್ದೆ. ಆದರೆ ನೀನು ಈಗ ಅದರ ಭಾಗವಾಗಿದ್ದೀ.

ಕೋಸಲೇಂದ್ರ : ಇದು ನಿನಗೊಂದು ಒಗಟವಾದರೂ ನನಗೆ ಅರ್ಥವಾಗುತ್ತದೆ, ಮೃಣಾಲಿನಿ. ಇನ್ನು ಬೇಕಾದರೆ ನಾವು ಸೇರಿ ವಿವಿಧ ವಿಷಯಗಳನ್ನು ಚರ್ಚಿಸಬಹುದು. ಆದರೆ ಆ ಪುಸ್ತಕಗಳನ್ನು ನಾನು ಕೇಳಲಾರೆ. ಇನ್ನು ಅವನ್ನೆ ಓದಿ ತೋರಿಸುವದಿದ್ದರೆ ನೀನು ಆ ಬನಸಿಲಾಲನ ಕಡೆಗೆ ಹೋಗು.

ಮೃಣಾಲಿನಿ : ಥೂ ! ಆ ಬನಸಿಲಾಲನ ಹೊಲವನ್ನು ನಾನಿನ್ನು ದಾಟುವ ದಿಲ್ಲ. ಮಾರ್ಕ್ಸನ ಗ್ರಂಥಗಳನ್ನು ತಿಳಿಯುವ ಸಾಮರ್ಥ್ಯ ಹೋಗಲಿ, ಅವನ ಹೆಸರನ್ನು ಉಚ್ಚರಿಸಲು ಸಹ ಬನಸಿಲಾಲನಿಗೆ ಬರುವದಿಲ್ಲ. ಸಹಾಧ್ಯಾಯ ವೆಂದರೆ ಜೀವದಾಯಿಯಾಗಿರಬೇಕು. ಬನಸಿಲಾಲನಂಥವರ ಸಂಪರ್ಕ, ಇದ್ದ ಜೀವವನ್ನು ಹೀರುತ್ತದೆ.

ಕೋಸಲೇಂದ್ರ : ಹೀಗೇನು ? ಈಗ ನೀನು ನನ್ನ ಭಾಷೆಯನ್ನು ಆಡಹತ್ತಿದೆ, ಮೃಣಾಲಿನಿ, ಅಭ್ಯಾಸಕೂಟದ ಮೂಲಕ ನಿನ್ನ ಭಾಷೆ ನನ್ನ ನಾಲಿಗೆಯ ಮೇಲೆ ಕೂತಿದೆ. ಇನ್ನು ಬರಬರುತ್ತ ನೀನು ಕವಿಯಾಗಿ ನಾನು ಮಾರ್ಕ್ಸ ವಾದಿಯಾಗುವ ಸಂಭವವಿದೆ.

ಮೃಣಾಲಿನಿ : ಕೋಸಲೇಂದ್ರ, ಕೆಲವು ವಾರಗಳ ಹಿಂದೆ ಯಾವುದು ಸಂಭವನೀಯ, ಯಾವುದು ಅಸಂಭವನೀಯ ಎಂಬುದರ ಬಗ್ಗೆ ನನಗೆ ನಿಶ್ಚಿತ ಅಭಿಪ್ರಾಯಗಳಿದ್ದವು. ಆದರೆ ಈಗ ನನ್ನ ಅಂತರಂಗದಲ್ಲಿಯೇ ಏನೋ ಒಂದು ಕ್ರಾಂತಿ ಎದ್ದಿದೆ. ಈ ಕ್ರಾಂತಿಯಲ್ಲಿ ಎಲ್ಲ ಅಭಿಪ್ರಾಯಗಳು ಸಂಜೆಯ ಮುಗಿಲಿನಲ್ಲಿ ವಿವಿಧ ಪಕ್ಷಿಗಳಂತೆ ಹಾರಾಡಹತ್ತಿವೆ. ಅವುಗಳಲ್ಲಿ ಯಾವುದು ನನ್ನದು, ಯಾವುದು ನನ್ನದಲ್ಲ ಎಂಬುದನ್ನು ಗುರುತಿಸಲು ನಾನು ಅಸಮರ್ಥಳಾಗಿದ್ದೇನೆ. ೪೪

ಯುಗಾಂತರ

ಕೋಸಲೇಂದ್ರ : ಓಹೋ ! ಇದು ಬೇರೆ ! ಹಾಗಿದ್ದರೆ ನೀನು ಮೇಲಿಂದ ಮೇಲೆ ಕೇಳುತ್ತಿದ್ದ ಒಂದು ಪ್ರಶ್ನೆಗೆ ಉತ್ತರ ಹೇಳಲು ಇದು ಒಳ್ಳೆಯ ಸಮಯ, ಕವಿಯೆಂದರೆ ಏನು ? ಎಂದು ನೀನು ನನ್ನನ್ನು ಕೆಣಕುತ್ತಿದೆ. ಈಗ ಹೇಳುತ್ತೇನೆ. ಒಂದು ಅಭಿಪ್ರಾಯವನ್ನು ಇನ್ನೊಂದರ ಮೇಲೆ -ಇಟ್ಟಂಗಿಯ ಮೇಲೆ ಇಟ್ಟಂಗಿಯನ್ನಿಟ್ಟಂತೆ-ಇಟ್ಟು ತನ್ನ ಮನೆ-ಮನ ಕಟ್ಟಿ ಕೊಳ್ಳುವವನೇ ಶಾಸ್ತ್ರಿ-ಮೇಸ್ತ್ರಿ ! ತನ್ನ ಮನೆಯ ಎಲ್ಲ ಜಂತಿಗಳನ್ನೂ ತೊಲೆಗಳನ್ನೂ ಅವನು ಎಣಿಸಬಲ್ಲ. ಆದರೆ ಇಂಥ ನೂರು ಮನೆಗಳನ್ನು ಕಟ್ಟಲು ಬೇಕಾದ ಕಲ್ಲು-ಮಣ್ಣನ್ನು ಒಳಗೊಂಡ ನೆಲವಾಗಿದ್ದಾನೆ ಕವಿ. ಮನೆಯಂತೆ ನೆಲ ಒಂದು ಆಕಾರವನ್ನು ಮುಟ್ಟಿಲ್ಲ. ಆದರೆ ಸೃಷ್ಟಿಗೂ ಒಂದು ಆಕಾರವಿದೆಯಲ್ಲವೆ?

ಮೃಣಾಲಿನಿ : ನಾನು ಶಾಸ್ತ್ರಿಯಂತೂ ಅಲ್ಲ. ಹಾಗಾದರೆ ನಾನು ಮೇಸ್ತ್ರಿ'ಯೆಂದು ನೀನು ಸೂಚಿಸುವಿಯೋ ಏನು ? ಏನು ಬೇಕಾದುದನ್ನು ಹೇಳು. ನಿನ್ನ ಕೈಯಲ್ಲಿ ಸಿಕ್ಕಿದ್ದೇನೆ.

ಕೋಸಲೇಂದ್ರ : ( ನಕ್ಕು ) ಮೇಸ್ತ್ರಿಯೆಂದು ಹೇಗೆ ಹೇಳ: ? ಆದರೆ ಆ ಮೇಸ್ತ್ರಿಯಂತೆ ನೀನೂ ನಿನ್ನ ಮನೆ ಕಟ್ಟಿದೆ, ಕೆಲವು ದಿನಗಳ ಹಿಂದೆ ಆ ಮನೆಯ ತೊಲೆ-ಕಂಬಗಳ ಗಣಿತವೇ ನಿನಗೆ ಏಕಮೇವ ಸತ್ಯವಾಗಿತ್ತು. ಆ ತೊಲೆ- ಕಂಬಗಳನ್ನು ನಾನೂ ಎಣಿಸಿದ್ದೇನೆ.

ಮೃಣಾಲಿನಿ : ನಿನಗೆ ಸೇರದ ಕಂಬಗಳಿವೆಯೇ ಆ ಮನೆಯಲ್ಲಿ ?

ಕೋಸಲೇಂದ್ರ : ಒಂದೆರಡಿವೆ. ವರ್ಗಸಮರದ ಬಗ್ಗೆ ನೀನು ಮಾತನಾಡು ವಾಗ ನಿನ್ನನ್ನು ನೋಡಬೇಕು. ಪ್ರತ್ಯಕ್ಷ ದುರ್ಗೆಯ ಅವತಾರವಾಗಿ ಕಾಣುತ್ತಿ ! ದ್ವೇಷದ ಮೇಲೆ ಕಟ್ಟಿದ ಮನೆ ಮಳಲಿನ ಮನೆಯಂತೆ, ಮೃಣಾಲಿನಿ ! ಅದು ಚಿರಕಾಲ ಬಾಳುವದಿಲ್ಲ.

ಮೃಣಾಲಿನಿ : ( ಸಿಟ್ಟಿನಿಂದ ) ಮಾರ್ಕ್ಸ್ ಸ್ವತಃ ಎಲ್ಲಿಯೂ ದ್ವೇಷದ ಪಾಠ ವನ್ನು ಕಲಿಸಿಲ್ಲ. ಅವನದು ಐತಿಹಾಸಿಕ ಘಟನಾವಾದ. ಇದ್ದುದನ್ನು ಇದ್ದ ಹಾಗೆ ನಿರ್ವಗವಾಗಿ ಹೇಳುತ್ತಾನೆ.

ಕೋಸಲೇಂದ್ರ : ನಿಜ. ಆದರೆ ಮಾರ್ಕ್ಸನ ಮನಸ್ಸು ಗ್ರಂಥಗಳಲ್ಲಿಲ್ಲದ

ದ್ವೇಷ ಮಾರ್ಕ್ಸವಾದಿಗಳ ಆಚಾರ- ಪ್ರಚಾರಗಳ ರೀತಿಯಿಂದ ಉದ್ದವಿ
೪೫

ಅoಕು ೨

ಸುತ್ತದೆ. ರಕ್ತದ ಕಾಲುವೆ ಹರಿಯುವದಿದ್ದರೆ ಹರಿದಾವು. ಆದರೆ ರಕ್ತ ಪಾತಕ್ಕೆ ನಾವೇಕೆ ಔತಣ ಕೊಡಬೇಕು ?

ಮೃಣಾಲಿನಿ : ಅದು ಅನಿವಾರ್ಯ ಎಂದು ಮಾರ್ಕ್ಸ ಹೇಳಿದ್ದಾನೆ; ಉಪಾಸ್ಯೆ “ದೇವತೆ ಎಂದು ಎಲ್ಲಿಯೂ ಸೂಚಿಸಿಲ್ಲ. ಬಂಡುವಲಗಾರನು ರಕ್ತ ಹೀರುವ ಜಿಗಳೆ ಇದ್ದ ಹಾಗೆ. ಸತ್ತಾಗ ಮಾತ್ರ ಜಿಗಳೆಯು ರಕ್ತ ಹೀರುವವನ್ನು ಬಿಟ್ಟಿತು.

ಕೋಸಲೇಂದ್ರ: ಹಾ ! ಮತ್ತೆ ಪ್ರಾರಂಭವಾಯಿತು, ನಿನ್ನ ವರ್ಗಸಮರ. ಅದು ಹೋಗಲಿ; ಮಾರ್ಕ್ಸ, ಮಾರ್ಕ್ಸ ಎಂದು ನಿನ್ನ ಗುರುವನ್ನು ಇಷ್ಟೊಂದು ಮೇಲುಗಟ್ಟಿಕೊಂಡು ಬರುತ್ತೀ ! ಆದರೆ ಆ ಮಾರ್ಕ್ಸನೂ ಸಂಪಾದಿಸಿದ ಕೆಲವು ಮಾರ್ಕ್ಸ' ಇವೆ. ತೋರಿಸಿಕೊಡಲೇನು ?

ಮೃಣಾಲಿನಿ : ಆಗಲಿ, ಇನ್ನೂ ನಿನ್ನ ಬಾಯಿಂದ ಏನೇನು ಕೇಳುವದಿದೆಯೋ “ಯಾರು ಕಂಡಿದ್ದಾರೆ.'

ಕೋಸಲೇಂದ್ರ: ದೇವರಿಲ್ಲ, ಆತ್ಮವಿಲ್ಲ, ಅಮರತೆ ಇಲ್ಲ ಎಂದು ಮಾರ್ಕ್ಸ್ ಸಾರಿದ.. ... .......

ಮೃಣಾಲಿನಿ : ( ಆವೇಶದಿಂದ ) ಹೌದು. ಆ ವಿಷಯವನ್ನೆತ್ತಬೇಡ ! ದೇವ ರೆಂದರೆ ಬರಿ ಕಲ್ಲು, ಧರ್ಮವು ಒಂದು ದೊಡ್ಡ ಒಳಸಂಚು. ವೈಕುಂರವ,ಮೇಲಿನ ವರ್ಗದವರ ಸ್ವಾರ್ಥ ಕಂಡ ಕನಸು ! ( ಸ್ವಲ್ಪ ಯೋಚಿಸಿ ) ಅಲ್ಲದೆ ಮಾರ್ಕ್ಸ ಹೇಳಿದ್ದು ಅವನ ವೈಯ್ಯಕ್ತಿಕ ಅಭಿಪ್ರಾಯವಲ್ಲ. ನಿಸರ್ಗ ಇತಿಹಾಸ- ವಿಜ್ಞಾನಗಳು ತೋರಿಸಿದ ಸತ್ಯಾಂಶವೆ; ಅವನ ಸಿದ್ದಾಂತ.

ಕೋಸಲೇಂದ್ರ: ಅದಿರಲಿ, ಮಾನವ ಜನಾಂಗಕ್ಕೆ ಬುದ್ದಿಯ ಇತಿಹಾಸ ವೊಂದು ಇದ್ದಂತೆ ಪರಾಬುದ್ದಿಯ ಇತಿಹಾಸವೂ ಇದೆ, ಮೃಣಾಲಿನಿ ! ವಿಜ್ಞಾನಿಯ ಅನುಭವದೊಂದಿಗೆ ಅನುಭಾವಿಯ - ವಿಜ್ಞಾನ' ವೂ ಇದೆ.

ಮೃಣಾಲಿನಿ: ಅದೆಲ್ಲ ಸುಳ್ಳು. ಜಗತ್ತು ಪ್ರತಿಕ್ಷಣಕ್ಕೆ ಮಾರ್ಪಡುತ್ತಿರುತ್ತದೆ. ಇದೊಂದೇ ಸತ್ಯ.

ಕೋಸಲೇಂದ್ರ : ಅದು ಹೇಗಾದೀತು ? ಕ್ಷರ ಪುರುಷನ ಬೆನ್ನಿಗಂಟಿಕೊಂಡು ಅಕ್ಷರ ಪುರುಷನಿದ್ದಾನೆ. ಅದೇನೇ ಇರಲಿ, ಮೃಣಾಲಿನಿ ! ನಿನಗೆ ದೇವರನ್ನು ತೋರಿಸಿದರೆ ? ೪೬

ಯುಗಾಂತರ

ಮೃಣಾಲಿನಿ: ನೀನು ನನಗೆ ಓಸಿಯಮ್ ಇಲ್ಲವೆ ಮದಿರೆಯನ್ನು ಕೊಡದ `ಹೊರತು ಅದು ಸಾಧ್ಯವಿಲ್ಲ. ಮಾಂತ್ರಿಕನ ಇಂದ್ರಜಾಲ-ಮಹೇಂದ್ರಜಾಲ ಗಳು ಈ ಮಾರ್ಕ್ಸವಾದಿಯ ಬುದ್ದಿಯ ಮೇಲೆ ನಾಟುವದಿಲ್ಲ, ಕೋಸಲೇಂದ್ರ,

ಕೋಸಲೇಂದ್ರ : ಇಲ್ಲ ! ನಿನಗೆ ಇದ್ದಕಿದ್ದ ಹಾಗೆ ಯಾವ ಮಂತ್ರ-ತಂತ್ರ ಇಲ್ಲದೆ ದೇವರನ್ನು ತೋರಿಸಿದರೆ ?"

ಮೃಣಾಲಿನಿ : ಆಗಲಿ, ಹಾಗಾದರೆ, ಆ ನಿನ್ನ ದೇವರನ್ನು ಒಂದು ಕೈ ನೋಡಿ - ಬಿಡುತ್ತೇನೆ,

ಕೋಸಲೇಂದ್ರ : ಆಗಬಹುದು. ಹಾಗಿದ್ದರೆ ನಾಡಿದ್ದು ನನ್ನ ಜೊತೆಗೆ ಪ್ರಯಾಣಕ್ಕೆ ಸಿದ್ಧಳಾಗು.

ಮೃಣಾಲಿನಿ : ಎಲ್ಲಿಗೆ ?

ಕೋಸಲೇಂದ್ರ : ಒಂದು ಪವಿತ್ರ ಸ್ಥಾನಕ್ಕೆ.

ಮೃಣಾಲಿನಿ : ಪವಿತ್ರವೋ ಅಪವಿತ್ರವೋ ನೋಡಿದ ಮೇಲೆ ಹೇಳುತ್ತೇನೆ. ಹೊರಡುವ ತಯಾರಿಯನ್ನಂತೂ ಮಾಡುತ್ತೇನೆ.

ಕೋಸಲೇಂದ್ರ : ( ನಗುತ್ತ ಆದರೆ ಈ ಪುಸ್ತಕಗಳು ಮಾತ್ರ ಇಲ್ಲಿಯೇ ಇರಲಿ, ಇನ್ನು ಪುಸ್ತಕಪಾಂಡಿತ್ಯ ಸಾಕು. ಜಗತ್ತನ್ನನ್ನು ಕಣ್ಣೆರೆದು ನೋಡೋಣ. ( ಅತ್ತಿತ್ತ ತಿರುಗಾಡುತ್ತಾನೆ. )

ಮೃಣಾಲಿನಿ : ಅಂದರೇನು ? ಇಷ್ಟು ದಿನ ಕಣ್ಣು ಮುಚ್ಚಿಕೊಂಡು ನಾವು - ಬಾಳಿದಿವೆ ?

ಕೋಸಲೇಂದ್ರ : ಮುಂದೆ ತಾನೇ ಗೊತ್ತಾಗುವದು. So long, ಮೃಣಾಲಿನಿ.

ಮೃಣಾಲಿನಿ: so long, ಆದರೆ ಕೋಸಲೇಂದ್ರ, ಇನ್ನೊಂದೇಕೆ ಸ್ಪಂದನ ನಿನ್ನಲ್ಲಿ ಇವತ್ತು ? ನಾನಿಲ್ಲದಾಗ ಆ ದೇವರು ಬಂದಾನು ? ಎಚ್ಚರಿಕೆ !
( ನಗುತ್ತ ಹೋಗುತ್ತಾಳೆ, ನಗೆಮೊಗದಿಂದ ಕೋಸಲೇಂದ್ರನು ಅವಳನ್ನು ನೋಡುತ್ತ ನಿಲ್ಲುತ್ತಾನೆ. )

ತೆರೆ

——


೪೭

ಅ೦ಕು ೨

ಪ್ರವೇಶ ೪,

[ ಮಾಹುವಿನ ಹತ್ತಿರದಲ್ಲಿಯ ಬಂಗಲೆ, ಕಿಶನ್‌ಕಿಶೋರ ರುಕ್ಮಿಣಿದೇವಿಯರು ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದಾರೆ. ಹತ್ತಿರದಲ್ಲೇ ಓಂಪ್ರಕಾರನು ನಿಂತಿದ್ದಾನೆ. ]

ಕಿಶನ್‌ಕಿಶೋರ : ಪಹರೆಯವ ಇನ್ನಾವನೂ ಸಿಗುವದಿಲ್ಲೋ, ಓಂಪ್ರಕಾಶ ?

ಓಂಪ್ರಕಾಶ: ಇಲ್ಲ, ಸರಕಾರ್‌, ಸರ್ಪದಂಶವಾಗಿ ಅವನು ತೀರಿಕೊಂಡಂದಿನಿಂದ ಯಾರೂ ಇತ್ತ ಕಡೆಗೆ ಒಡಹಾಯುತ್ತಿಲ್ಲ. ನಾನು ವಿಶ್ವ ಪ್ರಯತ್ನ ಮಾಡಿದೆ. ಜೀವಕ್ಕೆ ಸುರಕ್ಷತೆಯಿಲ್ಲದಾಗ ಎಷ್ಟು ಸಂಬಳ ತೆಗೆದುಕೊಂಡೇನು ಮಾಡುವದು ಎಂದು ಕೇಳುತ್ತಾರೆ ಜನ.

ಕಿಶನ್‌ಕಿಶೋರ : ಮನೆಯಲ್ಲಿ ಬಾಗಿಲ ಹಾಕಿ ಕುಳಿತರೆ ಸಾವು ತಪ್ಪಿಸಬಹು ದೆಂದು ತಿಳಿದರೋ ಆ ಜನ ? ಸಾವು ಬರುವದಿದ್ದರೆ, ಹಾಸಿಗೆಯಲ್ಲಿಯೇ ಬಂದು ಕಚ್ಚುತ್ತದೆ. ಆಯುಷ್ಯ ಗಟ್ಟಿಯಾಗಿದ್ದರೆ ಅಗ್ನಿದಿವ್ಯದೊಳಗಿಂದ ಸಹ ಮನುಷ್ಯ ಪಾರಾಗುತ್ತಾನೆ.

ಓಂಪ್ರಕಾಶ : ಹೌದು, ಸರಕಾರ್ ! ಆದರೆ ಆ ಜನರಿಗೆ ಇದು ಹೊಳೆ ಯುವದಿಲ್ಲ.

ಕಿಶನ್‌ಕಿಶೋರ : ಅಡಿಗೆಯವನ ವಿಷಯ ಎಲ್ಲಿಗೆ ನಿಂತಿದೆ, ರುಕ್ಮಿಣಿ ?

ರುಕ್ಮಿಣಿ ದೇವಿ: ಅಂದು ಆಭರಣಗಳನ್ನು ಕದ್ದು ಕೊಂಡು ಓಡಿಹೋದವ ಇನ್ನೂ ವರೆಗೂ ಪತ್ತೆಯಾಗಿಲ್ಲ. ನನ್ನ ಅದೃಷ್ಟಕ್ಕೆ ಇನ್ನೊಬ್ಬ ಅಡಿಗೆಯ ವನೂ ಸಿಕ್ಕಿಲ್ಲ. ಸದ್ಯಕ್ಕೆ ಓಂ ಪ್ರಕಾಶನೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ.

ಕಿಶನ್‌ಕಿಶೋರ : ಕೈತುಂಬ ಸಂಬಳ ಕೊಟ್ಟರೂ ಈ ಜನ ಹೀಗೇಕೆ ಮಾಡುವ ವರು, ಓಂಪ್ರಕಾಶ ?

ಓಂಪ್ರಕಾಶ : ಇನ್ನೂ ಯುದ್ಧ - ಪಾಕಶಾಲೆಗಳಿಗೆ ಹೋದ ಅಡಿಗೆಯವರು ತಿರುಗಿ ಮನೆಗೆ ಬಂದಿಲ್ಲ, ಸರಕಾರ್ ! ಇದ್ದ ಬಿದ್ದ ನಾಲ್ಕು ಮಂದಿ, ಅಲ್ಲಿ ಅರಣ್ಯದಲ್ಲಿ ಕುಳಿತೇನು ಮಾಡುವದು ಎಂದು ಮೂಗು ಮುರಿಯುತ್ತಾರೆ.

ಕಿಶನ್‌ಕಿಶೋರ : ಅವರಿಗೆ ಇನ್ನೇನು ಬೇಕಂತೆ ?

೪೮

ಯುಗಾಂತರ

ಓಂಪ್ರಕಾಶ : ಕುಳಿತು ಹರಟಿ ಕೊಚ್ಚಲು ರಿಸ್ತರಾಂ ಗೃಹಗಳು, ಸಿನೇಮಾ. ಮತ್ತೆ........ ಮತ್ತೆ......

ಕಿಶನ್ ಕಿಶೋರ : ತಿಳಿಯಿತು ಬಿಡು ಅವರ ಹಣೆಬರಹ ! ಮನುಷ್ಕನು ಪಶುವಾದಾಗ ಈ ಪ್ರಕೃತಿಸೌಂದರ್ಯವು ಅವನಿಗೆ ಬರಿ ಬಣ್ಣದಾಟ. ಇನ್ನು ಲೈಟನ ಗತಿಯೇನು ? ಇವತ್ತು ಸಂಜೆಗಾದರೂ ದೀಪ ಹತ್ತುವವೆ ?

ರುಕ್ಮಿಣಿದೇವಿ : ಡೈನಮೋ ಸಂಪೂರ್ಣ ಕೆಟ್ಟಿದೆ. ಇನ್ನೊಂದು ಸಿಗುವಹಾಗಿಲ್ಲ, ಇದರ ಜೊತೆಗೆ ಎಲ್ಲಿ ಗುದ್ದಾಡುವದೆಂದು ಇನ್ನೊಂದು ಕೆಲಸ ಹುಡುಕಿ ಕೊಂಡು ಹೋಗಿದ್ದಾನೆ, ಪವರ್ ಹೌಸಿನ ಮನುಷ್ಯ.

ಕಿಶನ್ ಕಿಶೋರ : ಚೆನ್ನಾಗಿದೆ. ಪಹರೆಯವನಿಲ್ಲ, ಅಡಿಗೆಯವನಿಲ್ಲ, ಆಳಿಲ್ಲ. ಬೆಳಕಿಲ್ಲ. ದೇವರು ಒಳ್ಳೆಯ ಪ್ರಸಂಗ ತಂದ ನಮ್ಮ ಮೇಲೆ, ಇನ್ನೂ ಹೊತ್ತಿಗೆ ಸರಿಯಾಗಿ ಊಟವಾದರೂ ಸಿಕ್ಕುತ್ತದೆ. ಇದೇ ನಮ್ಮ ಪುಣ್ಯ. ನಿನ್ನ ಪ್ರಕೃತಿಯನ್ನು ಜಪ್ಪಿಸು, ಓಂಪ್ರಕಾಶ ! ಫಕ್ಕನೆ ನೀನು ಕಾಯಿಲೆ ಯಾಗಿ ಮಲಗಿದರೆ ನಮ್ಮ ಪುಂಗಿಯೇ ಬಂದಾದೀತು.

ಓಂಪ್ರಕಾಶ : ಆಗಲಿ, ಸರಕಾರ ! ( ಕೈಯಿಂದ ತಲೆ ಒತ್ತಿ ಹಿಡಿದುಕೊ೦ಡು ) ಇಂದು ಬೆಳಗಿನಿಂದ ಏನೋ ಸ್ವಲ್ಪ ತಲೆಶೂಲಿ ಎದ್ದಂತಿದೆ.

ಕಿಶನ್ ಕಿಶೋರ : ( ಗಾಬರಿಯಾಗಿ ) ಏನು ? ತಲೆಶೂಲಿಯೆ ? ರುಕ್ಮಿಣಿ, ಕೂಡಲೆ ಅವನಿಗೆ Aspirin ಕೊಡು ! ಡಬ್ಬಲ್‌ಡೋಜ್? ನಾಳೆ ಬೆಳಿಗ್ಗೆ ನೀನು ಮಾಹುವಿಗೆ ಕಾರಿನಲ್ಲಿ ಹೋಗಿ ಡಾಕ್ಟರಿಗೆ ಪ್ರಕೃತಿ ತೋರಿಸಿ ಕೊಂಡು ಬಾ,

ಓಂಪ್ರಕಾಶ : ಜೀ !.......ಮೊನ್ನೆ ಹೋದಾಗ ಡಾಕ್ಟರು ಕೇಳುತಿದ್ದರು, ಸರಕಾರ್! ನಿಮ್ಮ ಯಜಮಾನರು ಇಲ್ಲಿಯೇ ಇರುವದಾದರೆ ಮಾಹುವಿನಲ್ಲಿ ಏಕೆ ನೆಲಿಸುವದಿಲ್ಲ ? ಹೀಗೆ ಅರಣ್ಯದಲ್ಲಿರಬಹುದೇ ? ನಿಮ್ಮ ಯಜಮಾನತಿ ಯರಿಗೆ ಮೂರ್ಚ್ಛೆ ಬಂದಾಗ ನಾನು ಬಂದು ಶುಶ್ರೂಷಿಸಲು ಒಂದು ಗಂಟೆ ಹಿಡಿಯಿತು, ಆಡವಿಯಲ್ಲಿ ಮನೆಮಾಡಿ ಊರೊಳಗಿದ್ದು ಬೇಕಾದಾಗ ಕಾರಿನಿಂದ ಅಡವಿಗೆ ಹೋಗಬಹುದಲ್ಲ ? ಎಂದರು. ಈ ಮಾತನ್ನು ಕೇಳಿದೆ ನೆಂದು ತಿಳಿಸು ಎಂದು ಒತ್ತಿ ಹೇಳಿದರು,
೪೬

ಆಂಕ ೨

ಕಿಶನ್ ಕಿಶೋರ : ಸಿಟ್ಟಿನಿಂದ ) ವನಶ್ರೀಯ ಮಧ್ಯದಲ್ಲಿದ್ದು ಧ್ಯಾನ ಮಾಡ ವದು ಎಷ್ಟು ಅನುಕೂಲವೆಂಬುದು ಆ ಮೂರ್ಖನಿಗೇನು ಗೊತ್ತು? ರುಕ್ಕಿಣಿ ಇದು ನಮ್ಮ ಪರೀಕ್ಷಾ ಸಮಯ. ಈಗ ನಾವು ಹೊಯ್ದಾಡಬಾರದು. ಸ್ಥಿರ ಮನಸ್ಸಿನಿಂದ ನಮ್ಮ ಧ್ಯಾನವನ್ನು ಬೆಳಿಸಬೇಕು. ನಿಶ್ಚಯವಾಗಿ ಅದರ ಫಲ ಸಿಕ್ಕುವುದು, ಏನು ?

ರುಕ್ಮಿಣಿ ದೇವಿ: ( ಬಹಳ ಪ್ರಯತ್ನಿಸಿ ) ಹೂಂ.

ಕಿಶನ್ ಕಿಶೋರ : ಈ ಎಲ್ಲ ಪ್ರತಿಕೂಲಗಳಿಂದ ಮನಸ್ಸು ಚಂಚಲವಾಗಿರುವ ದೇನೋ ನಿಜ, ಈಗ ಕೆಲವು ದಿನಗಳಿಂದ ಚಿತ್ರದ ಏಕಾಗ್ರತೆಯೆ ನನಗೆ ಸಾಧಿಸದಾಗಿದೆ.

ರುಕ್ಮಿಣಿ ದೇವಿ: ( ಉತ್ಕಂಠಯಿಂದ ) ನನಗಂತೂ ಈಗ ಕೆಲವು ದಿನಗಳಿಂದ ಕಣ್ಣು ಮುಚ್ಚಿದೊಡನೆ ಘಟಸರ್ಪಗಳೇ ಎದುರಿಗೆ ಬಂದು ನಿಂತ ಹಾಗಾಗುತ್ತದೆ. ನಿದ್ದೆಯ ವೇಳೆಯೊಂದನ್ನು ಬಿಟ್ಟು ಉಳಿದ ಸಮಯದಲ್ಲಿ ನಾನು ಕಣ್ಣನ್ನೇ ಮುಚ್ಚುವದಿಲ್ಲ.

ಕಿಶನ್ ಕಿಶೋರ : ಛೇ ! ಹುಚ್ಚಿ ! ಹೀಗೆ ಅಂಜುಬುರುಕರಾದರೆ ಹೇಗೆ ? ಧ್ಯಾನದಿಂದ ನಿನ್ನ ಕುಂಡಲಿನಿಯು ಈಗ ಜಾಗೃತವಾಗುತ್ತಿರಬಹುದು. ಅಂಥ ಸಮಯಕ್ಕೆ ಆದಿಶೇಷನು ಕಾಣಿಸಿಕೊಳ್ಳುತ್ತಾನಂತೆ.

ರುಕ್ಮಿಣಿ ದೇವಿ : ( ನಿಟ್ಟುಸಿರು ಬಿಟ್ಟು ) ಏನೋ ! ದೇವರೇ ಬಲ್ಲ.

ಕಿಶನ್‌ಕಿಶೋರ : ( ಪ್ರಯತ್ನ ಪಟ್ಟು ಉಲ್ಲಾಸದಿಂದ ) ರುಕ್ಕಿಣಿ, ಈಗ ಕಬೀರನ ಕೆಲವು ಗೀತಗಳನ್ನು ಅಂದು ತೋರಿಸುತ್ತೇನೆ. ಅದರಲ್ಲಿ ಇಂಥ ಅನುಭವದ ವರ್ಣನೆ ಇದೆ. ಓಂಪ್ರಕಾಶ, ನನ್ನ ಟೇಬಲ್ಲಿನ ಮೇಲೆ ಒಂದು ಪುಸ್ತಕ ತೆರೆದಿಟ್ಟಿದೆ ನೋಡು; ತಂದು ಕೊಡು.

ಓಂಪ್ರಕಾಶ : ಜೀ ! ತರುತ್ತೇನೆ. ಆದರೆ ಇನ್ನೊಂದು ಮಾತನ್ನು ತಮ್ಮ ಕಿವಿಯ ಮೇಲಿಡಬೇಕು. ಈಗೆಂಟು ದಿನಗಳಿಂದ ಇಲ್ಲಿ ಒಂದು ಹುಲಿಯ ಹಾವಳಿಯಾಗಿದೆ. ದನ ಕಾಯುವವ ಇಂದು ಬೆಳಿಗ್ಗೆ ಹೇಳುತಿದ್ದ ; ಇಲ್ಲಿಂದ ಸಮೀಪದಲ್ಲಿರುವ ಅವನ ಗುಡಿಸಲಕ್ಕೆ ಬಂದು ಒಂದು ಕರು ತಿಂದು ಹೋಯಿತಂತೆ. ನಾವೂ ಎಚ್ಚರದಿಂದಿರಬೇಕು, ಸರಕಾರ್ ! ದಿಲ್ಲಿಯಲ್ಲಿ ೫೦

ಯುಗಾಂತರ

ಇದ್ದಾಗ ಆ:ಗಸ್ಟ್ ಗಲಭೆಯಲ್ಲಿ ನಮ್ಮ ಬಂದೂಕು ಒಯ್ದು ಪೋಲೀಸ ಕಚೇರಿಯಲ್ಲಿಟ್ಟು ಬಂದೆವು. ಈಗ ಅದನ್ನು ತರಿಸಬೇಕು. ಇಲ್ಲಿ ಬೇಕಾಗ ಬಹುದು
.

ರುಕ್ಮಿಣಿ ದೇವಿ : ಏನು ! ಹುಲಿಯೆ ? ಅಯ್ಯೋ ! ದೇವರೆ ! ಹಾವು,ಹೋಗುವ ದರಲ್ಲಿ ಹುಲಿ ಬಂತೆ ? ( ಥರಥರ ನಡುಗುವಳು. )

ಕಿಶನ್ ಕಿಶೋರ : ( ಸಿಟ್ಟಿನಿಂದ ) ಏ! ಮೂರ್ಖ ! ಹೆಣ್ಣು ಮಕ್ಕಳಿದ್ದಾಗ ಇಂಥ ಸುದ್ದಿ ಹೇಳಬೇಕೆ ? ನಿನಗೆ ತಿಳುವಳಿಕೆಯೇ ಇಲ್ಲ. ನಗರದಿಂದ ದೂರವಿದ್ದು ಇಲ್ಲಿ ಧ್ಯಾನ ಮಾಡಬೇಕೆಂದರೆ, ಇಲ್ಲಿ ಹುಲಿ, ಹೂಲಿ, ಹುಂಬತನ ತಾಪತ್ರಯ. ಎಲ್ಲಿ ಹೋಗಬೇಕೋ ತಿಳಿಯದಾಗಿದೆ ! ಓಂಪ್ರಕಾಶ. ಹೋಗು; ಪ್ಯಾಡ್ ತೆಗೆದುಕೊಂಡು ಬಾ. ಈಗಿಂದೀಗ ದಿಲ್ಲಿಯ ಪೊಲೀಸ ಇನ್ಸ್ಪೆಕ್ಟರರಿಗೆ ಪತ್ರ ಬರೆಯುತ್ತೇನೆ.
[ ಓಂಪ್ರಕಾಶನು ಗಾಬರಿಯಾಗಿ ಲಗುಬಗೆಯಿಂದ ಹೋಗುತ್ತಾನೆ ಕಿಶನ್‌ಕಿಶೋರರು ಅತ್ತಿಂದಿತ್ತ ಪ್ರಕ್ಷುಬ್ದ ರಾಗಿ ತಿರುಗಾಡುತ್ತಾರೆ. ]

[ ತರೆ, ]

——

೫೧

ಆಂಕು ೨

ಪ್ರವೇಶ ೫.

[ ನರ್ಮದೆಯ ತೀರದಲ್ಲಿಯ ಒಂದು ಹಳ್ಳಿಯ ದಾರಿಯಲ್ಲಿ, ಖಾಕಿ ಪೋಷಾಕಿನಲ್ಲಿ ಕೋಸಲೆಂದ್ರನು ಕೈಯಲ್ಲಿ ಒಂದು ಬೆತ್ತವನ್ನು ಹಿಡಿದು ಕೊಂಡು ಹೆಗಲಿಗೆ ಸೈನಿಕನು ಹೊರುವಂತಹ ಚೀಲವನ್ನು ಹಾಕಿರುತ್ತಾನೆ. ಅವನ ಹಿಂದಿನಿಂದ ದಣಿದು ಹೋದ ಮೃಣಾಲಿನಿಯು ಕಾಲೆಳೆಯುತ್ತ ಬರುತ್ತಾಳೆ, ]

ಕೋಸಲೇಂದ್ರ : ಇಲ್ಲಿ ಹೀಗೆ ಬಾ, ಮೃಣಾಲಿನಿ ! ಈ ಮರದ ನೆಳಲಿನಲ್ಲಿ ತುಸು ವಿಶ್ರಮಿಸೋಣ, ನಾಡಿದ್ದು ಒಂಮ ಪವಿತ್ರ ಸ್ಥಳಕ್ಕೆ ಹೋಗೋಣ, ಎಂದು ಆಗ ನಿನಗೆ ಹೇಳಿದ್ದೆ. ಆ ಮಾತಿಗೆ ಈಗ ಎರಡು ತಿಂಗಳ ಮೇಲಾಯಿತು. ಕಾಂತಿಚಂದ್ರರ ಶುಶ್ರೂ ಷೆಗೆಂದು ನೀನು ನಿಂತೆ. ಬರುವಾಗ ಅವರನ್ನು ಕಾಣುವದಾಗಲಿಲ್ಲ. ಅವರಿಗೆ ಹೇಗಿದೆ ಈಗ, ಮೃಣಾಲಿನಿ ?

ಮೃಣಾಲಿನಿ : ( ಮರಕ್ಕೆ ಆತು ಕೂಡುತ್ತ ದಣಿದ ದನಿಯಲ್ಲಿ ) ಉಶ್! ನಾನಿನ್ನು ಮಾತಾಡಲಾರೆ. ಅವರಿಗೆ ಹೇಗಿದೆ ಎಂದು ಕೇಳುವದಕ್ಕಿಂತ ನನಗೆ ಹೇಗಿದೆ ಎಂದು ಕೇಳು, ಕೋಸಲೇಂದ್ರ ! ಇನ್ನು ಈ ಬಿಸಿಲಿನಲ್ಲಿ ನಡೆಯುವದು ಸಾಧ್ಯವಿಲ್ಲ.

ಕೋಸಲೇಂದ್ರ : ಅದನ್ನೇ, ನಾನು ಕೇಳಿದ್ದು, ಈಗ ಎರಡು ತಿಂಗಳ ಹಿಂದೆಯೇ ಬಂದಿದ್ದರೆ ಇನ್ನೂ ಚಳಿಗಾಲವಿರುತ್ತಿತ್ತು.

ಮೃಣಾಲಿನಿ : ಈ ಹಾಳು ನಿಲ್ಮನೆ ! ಹಳ್ಳಿ ಮುಟ್ಟಲು ಒಂದು ಟ್ಯಾಕ್ಸಿ "ಹೋಗಲಿ, ಟಾಂಗಾ ಸಹ ಸಿಗಬಾರದೆಂದರೆ !

ಕೋಸಲೇಂದ್ರ : ( ತುಸು ನಕ್ಕು ಅಂತಃಕರುಣದಿಂದ ) ದಿಲ್ಲಿಯಲ್ಲಿ ಮೋಟರಿ ನಲ್ಲಿ ಕುಳಿತು ಮಾರ್ಕ್ಸ ತತ್ವಗಳನ್ನು ಪ್ರಚಾರ ಮಾಡಿದಂತಲ್ಲ ಇದು, ಮೃಣಾಲಿನಿ ! ಬಿಸಿಲಿನಲ್ಲಿ ನಟ್ಟು ಕಡಿಯುತ್ತಿದ್ದ ಆ ರೈತನನ್ನು ನೋಡು ! ಮಾರ್ಕ್ಸವಾದ ಅವನ ನಾಲಿಗೆಯ ಮೇಲೆ ಇರದಿದ್ದರೂ ಅವನ ರಕ್ತದಲ್ಲೆಲ್ಲ ಹರಿದಾಡುತ್ತಿದೆ,

ಮೃಣಾಲಿನಿ:-( ತುಸು ಸಿಟ್ಟಿನಿಂದ ) ಮತ್ತೆ ನೀನಾದರೂ ಏನು ? ಕೋಣೆ ಯಲ್ಲಿ ಕುಳಿತು ಕವಿತೆ ಬರೆಯುವ ಪ್ರಾಣಿ ನೀನು, ೫೨

ಯುಗಾಂತರ

ಕೋಸಲೇಂದ್ರ : ನಾನು ಕವಿತೆ ಬರೆಯುವದು ನಿಜ. ಆದರೆ ಇಂಥ ರೈತ - ರೊಡನೆ ನಾನು ಬೆಳೆದಿದ್ದೇನೆ, ಮೃಣಾಲಿನಿ,

ಮೃಣಾಲಿನಿ : ( ಬೇಸತ್ತು ) ಇರಲಿ ಬಿಡು, ಮಹಾರಾಯಾ ! ಈಗ ನನಗೆ ನಿನ್ನ ಪುರಾಣ ಬೇಕಾಗಿಲ್ಲ, ಹಸಿವೆಯಾಗಿದೆ.

ಕೋಸಲೇಂದ್ರ : ( ಬದಿಗಿರಿಸಿದ ಚೀಲವನ್ನು ಹಿಡಿದು ನೋಡುತ್ತ) ತಂದಿದ್ದ ಬಿಸ್ಕಿಟ್-ಬ್ರೆಡ್ ಎಲ್ಲ ತೀರಿ ಹೋಯಿತು. ನಿಲ್ಮನೆಯಲ್ಲಿ ಏನೂ ಸಿಕ್ಕಲಿಲ್ಲ. ಇನ್ನೊಂದು ತಾಸು ತಡೆ, ಮೃಣಾಲಿನಿ, ಊರಿಗೆ ಹೋಗಿ ಊಟ ಮಾಡೋಣ,

ಮೃಣಾಲಿನಿ: ನಾನು ಇನ್ನೊಂದು ತಾಸು ತಡೆದರೆ ನಿನಗೆ ಸ್ತ್ರೀ ಹತ್ಯದ ಪಾಪ ಬರುವದು, ಕೋಸಲೇಂದ್ರ ! ಇನ್ನು ತಡೆಯುವದು ಸಾಧ್ಯವಿಲ್ಲ. ( ಕಣ್ಣು ಮುಚ್ಚಿ ಕೊ೦ಡು ಮರಕ್ಕೆ ಒರಗಿ ಕೂಡುತ್ತಾಳೆ. )

ಕೋಸಲೇಂದ್ರ : ಇದೇನು ? ಪಾಪ-ಪುಣ್ಯ ಎಂಬ ನನ್ನ ಭಾಷೆ ನಿನ್ನ ನಾಲಗೆಯ ಮೇಲೇಕೆ ? ತುಸು ವಿಚಾರ ಮಾಡು, ಮೃಣಾಲಿನಿ, ನಿನಗೆ ಈಗಾದ ಹಸಿವೆಯಂಥ ಹಸಿವೆಯನ್ನು ನಾನು ದಿವಸಗಟ್ಟಲೆ ಅನುಭವಿಸಿದ್ದೇನೆ.

ಮೃಣಾಲಿನಿ : ( ಕವಕ್ಕನೆ ) ನೀನು ಎದೆಗಾರ, ಧೈರ್ಯಶಾಲಿ; ಮಹಾಪುರುಷ ಯಾವ ಬೇಕಾದ ಹೆಸರಿನಿಂದ ನಿನ್ನನ್ನು ಕರೆಯುತ್ತೇನೆ. ಮೊದಲು ನನ್ನ ಹಸಿವೆಯನ್ನು ಕಳೆ. ಹಸಿದ ಹೊಟ್ಟೆಯಿಂದ ಕಾರ್ಯಪ್ರವೃತ್ತರಾಗಬೇಕೆಂದು ಮಾರ್ಕ್ಸ ಎಲ್ಲಿಯೂ ಹೇಳಿಲ್ಲವಲ್ಲ ?

ಕೋಸಲೇಂದ್ರ: ( ತುಸು ನಕ್ಕು ) ಆಗಲಿ. ಈಗ ನಿನ್ನನ್ನು ಕೆಣಕುವದು ಸಾಧ್ಯವಿಲ್ಲ. ಏ ! ಯಜಮಾನ, ಇಲ್ಲಿ ಸ್ವಲ್ಪ ಬಂದು ಹೋಗು. ಕೆಲಸವಿದೆ.
( ಬದಿಯ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮುದುಕ ರೈತನು ಕೆಲಸ ಬಿಟ್ಟು ಬರುತ್ತಾನೆ. )

ರೈತ : ಯಾಕೆ, ಬಾಬು ?

ಕೋಸಲೇಂದ್ರ: ತೊಂದರೆ ಕೊಟ್ಟಿದ್ದಕ್ಕೆ ಮಾಫ್ ಮಾಡು. ಇವರಿಗೆ ಹಸಿವೆ ಯಾಗಿದೆ. ತಿನ್ನಲು ಏನಾದರೂ ಸಿಗಬಹುದೊ ?

೫೩

ಅoಕು ೨

ರೈತ : ಇಲ್ಲೇನಿದೆ, ಬಾಬು? ಬರಿ ಮಣ್ಣು ನೆಲ, ನನಗಾಗಿ ರೊಟ್ಟಿಯ ಗಂಟು ತಂದಿದ್ದೆನೆ. ಅದು ನಿಮಗೆ ಸರಿಹೋದರೆ ಅದರಲ್ಲಿ ಅರ್ಧ ಕೊಡಬಲ್ಲೆ. ಆದರೆ ಶಹರದವರು ನೀವು ! ನಿಮಗೆ ಹೇಗೆ ಸರಿಹೋದೀತು ?

ಮೃಣಾಲಿನಿ : ಎಲ್ಲ ಸರಿಹೋಗುತ್ತದೆ. ತಗೊಂಡು ಬಾ, ಮುದುಕಪ್ಪ ! ಹಸಿವೆಯಾದಾಗ ಹುಲ್ಲನ್ನು ಸಹ ಮೇಯಬಹುದು.

ರೈತ : ಇಷ್ಟು ಹಸಿವೆಯಾಗಿದೆಯೇನು, ತಾಯಿ ! ಹಾಗಾದರೆ ಮೊದಲು ತರುತ್ತೇನೆ"( ಲಗುಬಗೆಯಿಂದ ಹೋಗುತ್ತಾನೆ. )

ಮೃಣಾಲಿನಿ : ಕೋಸಲೇಂದ್ರ, ಇನ್ನು ನಾನು ಕವಿಗಳ ಬೆನ್ನು ಹತ್ತುವದಿಲ್ಲ. - ಅವರಿಗೆ ಒಂದಿಷ್ಟು ಸಹ ಸಂಗಾತಿಯ ಹೊಟ್ಟೆಯ ಪರಿವೆಯಿರುವದಿಲ್ಲ.

ಕೋಸಲೇಂದ್ರ : ಹಾಗಾದರೆ ನಿನ್ನಂಥ ಮಾರ್ಕ್ಸವಾದಿಗಳ ಸಂಗತಿ ಹಿಡಿಯ ಬೇಕೊ ? ಅವರಿಗೆ ಒಂದಿಷ್ಟು ಸಹ ಹಸಿವೆಯನ್ನು ತಡೆಯುವದಾಗುವದಿಲ್ಲ.

[ ಮುದುಕನು ಊಟದ ಗಂಟನ್ನು ತಂದು ಬಿಚ್ಚಿ ಮೃಣಾಲಿನಿಯ ಎದುರು ಇಡುತ್ತಾನೆ. ]

ರೈತ : ತೊಗೊಳ್ಳಿರಿ, ತಾಯಿ, ಇದರಲ್ಲಿ ಬೇಕಾದುದನ್ನು ಊಟ ಮಾಡಿರಿ.

ಮೃಣಾಲಿನಿ : ( ಒಂದು ರೊಟ್ಟಿ ಒಂದಿಷ್ಟು ಪಲ್ಲೆಯನ್ನು ತಗೆದುಕೊಳ್ಳುತ) ನನಗಿಷ್ಟು ಸಾಕು, ಮುದುಕಪ್ಪ ! ಉಳಿದದ್ದನ್ನು ನೀನು ತಿನ್ನು, ಹೊಲದಲ್ಲಿ ಒಂದೇ ಸಮನೆ ದುಡಿಯುತ್ತಿದ್ದೀ

ರೈತ : ನನಗೇನು ? ಈ ದುಡಿತ ಮೈಯ್ಯುಂಡಿದೆ, ತಾಯಿ, ನೀವಿನ್ನು ಹಿಡಿ * ಯಿರಿ, ಬಾಬು ! ( ಕೋಸಲೇಂದ್ರನ ಕಡೆಗೆ ಗಂಟನ್ನು ನೀಡುತ್ತಾನೆ. )

ಕೋಸಲೇಂದ್ರ : ( ಒಂದು ತುಣುಕು ರೊಟ್ಟಿ ಒಂದಿಷ್ಟು ಪಲ್ಲೆಯನ್ನು ತೆಗೆದು ಕೊಳ್ಳುತ್ತ) ನೀನೂ ತಿನ್ನು, ಮುದುಕಪ್ಪ ! ದುಡಿದು ದಣಿದಿದ್ದಿ.

ರೈತ: ಛೇ ! ಛೇ ! ನಿಮ್ಮದು ಮುಗಿಯದೆ ನಾನು ಹೇಗೆ ತಿಂದೇನು.

( ನಗುತ್ತಾನೆ. )

ಮೃಣಾಲಿನಿ ಅದೇಕೆ? ನಿನ್ನ ರೊಟ್ಟಿಯಲ್ಲಿ ಪಾಲು ತೆಗೆದುಕೊಂಡರೂ ನೀನೇ *ಆಮೇಲೆ ತಿನ್ನಬೇಕೊ ? ಒಳ್ಳೇ ಲೆಕ್ಕಾಚಾರ ! ಸರಕಾರ ನಿನ್ನ ಬೆಳೆಯ ತಲೆಯ ಮೇಲೆ ತೆರಿಗೆ ವಸೂಲು ಮಾಡುತ್ತದೆ. ನಾವೂ ಸರಕಾರವಾದೆವಲ್ಲ!

ರೈತ : ಸರಕಾರದ ಅನ್ಯಾಯ ಸರಕಾರದ ಸುತ್ತ, ಆದರೆ ಇದು ನಾನು ಸ್ವಸಂತೋಷದಿಂದ ನಿಮಗೆ ಕೊಟ್ಟ ಪಾಲು.
೫೪

ಯುಗಾಂತರ

ಮೃಣಾಲಿನಿ : ಈ ಪಲ್ಲೆ ರುಚಿಯಾಗಿದೆ, ಮುದುಕಪ್ಪ ! ಇಂಥ ಪಲ್ಲೆ ಯನ್ನು ದಿಲ್ಲಿಯಲ್ಲಿಯೂ ತಿಂದಿಲ್ಲ.

ರೈತ : ದಿಲ್ಲಿಯಲ್ಲಿ ನೀವು ತಿನ್ನುವ ಸಾಮಾನು ಬೇರೆ, ತಾಯಿ ! ನಮ್ಮಂಥ * ಬಡವರಿಂದ ಅವು ಹೇಗೆ ದೊರೆತಾವು ? ಆದರೆ ನಮ್ಮದು ನಮಗೆ ರುಚಿ ಯಾಗಿದೆ. ಇಲ್ಲದಿದ್ದರೆ ನಾವು ತಿಂದು ಬದುಕೇವೇ !

ಮೃಣಾಲಿನಿ : ಆದರೆ ಈ ನಿನ್ನ ಚಟ ಬಲು ಖಾರ, ಮುದುಕಪ್ಪ ! ಇದರ ಜೊತೆಗೆ ನೀರು ಬೇಕು.

ಮುದುಕ: ಅವಸರದಲ್ಲಿ ಹಾಗೇ ಬಂದೆ. ಈಗ ತರುತ್ತೇನೆ, ತಾಯಿ, ( ಹೋಗುತ್ತಾನೆ. )

ಕೋಸಲೇಂದ್ರ: ಎಂಥೆಂಥ ಭಜಿ ತಿಂದ ನಾಲಗೆ ನಿನ್ನದು. ಇದು ಖಾರ - ಹತ್ತಿ ತೆ ? ( ನಗುತ್ತಾನೆ. )

ಮೃಣಾಲಿನಿ : ( ನಕ್ಕು ) ಹೌದು. ಇದನ್ನು ತಿಂದು ಮಾತನಾಡಿದರೆ ರುಕ್ಕಿಣಿದೇವಿಯರು ನನ್ನೆದುರು ನಿಲ್ಲಲಿಕ್ಕಿಲ್ಲ. ಆದರೆ, ಕೋಸಲೇಂದ್ರ ಇಷ್ಟೊಂದು ಖಾರ ತಿಂದು, ಇಷ್ಟು ಕಷ್ಟವನ್ನು ಅನುಭವಿಸಿ ಇಷ್ಟೊಂದು ಸವಿ ಮಾತಾಡುತ್ತಾನಲ್ಲ, ಈ ರೈತ ! ಇವನು ಒಳ್ಳೆಯ ಮಾರ್ಕ್ಸವಾದಿ ಯಾಗಬಲ್ಲ. ಆ ತತ್ವದರ್ಶನವೊಂದನ್ನು ಇವನಿಗೆ ಮುಟ್ಟಿಸಿದರೆ ಸಾಕು. ಕೋಸಲೇಂದ್ರ, ತಿರುಗಿ ಹೋಗುವಾಗ ಅವನಿಗೊಂದು ಕಾಣಿಕೆಯನ್ನು ನಾವು ಕೊಡಬೇಕು. ಆಗ ಮಾರ್ಕ್ಸವಾದದ ಒಂದು ಪಾಠವನ್ನೂ ಕಲಿಸಿ ಹೋಗುತ್ತೇನೆ.

ಕೋಸಲೇಂದ್ರ: ( ನಕ್ಕು ) ಮೃಣಾಲಿನಿ, ಕಲಿಸುವ ಹವ್ಯಾಸ ಇನ್ನೂ ನಿನ್ನನ್ನು ಬಿಟ್ಟಿಲ್ಲವೆಂದು ಕಾಣುತ್ತದೆ. ಆ ಕ್ರಾಂತಿ ನಿನ್ನ ರೇಲ್ವೆ-ಗಿರಣಿಗಳ ಕೆಲಸಗಾರರಿಂದ ಬರಬೇಕಾದ್ದು , ಈ ರೈತ ಅದನ್ನು ದೇವರ ನ್ಯಾಯ ಎಂದು ಮಾತ್ರ ಸ್ವೀಕರಿಸಬಲ್ಲ. ನಾನು ಅವನಿಂದ ಕಲಿತಿದ್ದ ಪಾಠ ಇದು - ಇನ್ನೊಬ್ಬರ ಸಲುವಾಗಿದ್ದ ಆ ಕರುಣೆಯ ಕಣ್ಣು , ಆ ತ್ಯಾಗದ ಮನಸ್ಸು!

ಮೃಣಾಲಿನಿ : ( ನಗುತ್ತ ) 'ಹೂಂ! ಇನ್ನು ದಾರಿಯಲ್ಲಿ ಮತ್ತೆ ಕಲಹ ಬೇಡ, ನೀರನ್ನಿ ಷ್ಟು ಕುಡಿದು ಮತ್ತೆ ಹೊರಡೋಣ. ಇದ್ದ ಬಿದ್ದ ಶಕ್ತಿಯನ್ನೆಲ್ಲ ಈ ನಿನ್ನ ಪವಿತ್ರ ಸ್ಥಳವನ್ನು ಮುಟ್ಟಲು ವೆಚ್ಚ ಮಾಡಬೇಕಾಗಿದೆ.

[ತೆರೆ,]

ಅಂಕು

ಪ್ರವೇಶ ೧

[ ಬನಸಿಲಾಲನ ಮನೆ, ಬನಸಿಲಾಲನ ದಾರಿ ಕಾಯುತ್ತ ಡ್ರಾಯಿಂಗ್ ರೂಮಿನಲ್ಲಿ ಕಾಂತಿಚಂದ್ರ ರೋಹಿಣಿದೇವಿಯವರು ಕುಳಿತಿರುತ್ತಾರೆ.]

ಕಾ೦ತಿಚಂದ್ರ : ( ನಿಟ್ಟುಸಿರುಗರೆಯುತ್ತ ) ಸುಮ್ಮನೆ ಇಲ್ಲಿ ಬರುವದರಿಂದ ಪ್ರಯೋಜನವಿಲ್ಲವೆಂದು ಹೇಳಿದೆ. ಆ ನೀಚ ಬನಸಿಲಾಲ ಸಾಧ್ಯವಿದ್ದಷ್ಟು ಮಟ್ಟಿಗೆ ನಮ್ಮನ್ನು ಅಪಮಾನಗೊಳಿಸಲು ಯತ್ನಿ ಸುತ್ತಿದ್ದಾನೆ. ಅರ್ಧಗಂಟಿ ಯಾಯಿತು ಇಲ್ಲಿ- ಅವನ ಮನೆಯಲ್ಲಿ- ಬಂದು ಕೂತು, ಮೂರು ಸಲ ಹೇಳಿ ಕಳಿಸಿದರೂ ಹಣಿಕಿ ಹಾಕೊಲೊಲ್ಲ.

ರೋಹಿಣಿದೇವಿ : ಇದು ಕೊನೆಯ ಪ್ರಯತ್ನ, ಇದು ಯಶಸ್ವಿಯಾಗದಿದ್ದರೆ ನೆಟ್ಟಗೆ ನೈನಿತಾಲದ ದಾರಿ ಹಿಡಿಯೋಣ, ಅಲ್ಲಿ ಬೇಸಿಗೆಯನ್ನು ಕಳೆದು ಮುಂದೆ ದಿಲ್ಲಿಯಲ್ಲಿರಬೇಕೋ ಮರಳಿ ಮಥುರೆಗೆ ಹೋಗಬೇಕೋ ವಿಚಾರ ಮಾಡೋಣ. ಯಾವುದಕ್ಕೂ ಮುಖ್ಯ ನಿನ್ನ ಪ್ರಕೃತಿ, ಅದನ್ನು ಸರಿ ಇಟ್ಟು ಕೊಂಡ ಮೇಲೆ ಉಳಿದ ಮಾತು.

ಕಾಂತಿ ಚಂದ್ರ : ಬನಸಿಲಾಲನ ಉತ್ತರವನ್ನು ನಾನು ಮೊದಲೇ ನಿನಗೆ ಕೊಟ್ಟಿದ್ದೇನೆ. ಹೀಗೆ ಇಲ್ಲಿ ದಾರಿಕಾಯಲು ಹಚ್ಚಿರುವದರಿಂದ ಅದು ಇಷ್ಟು ದೃಢವಾಗುತ್ತದೆ. ಇನ್ನು ಈ ಮಾಯಾಮೃಗದ ಬೆನ್ನು ಹತ್ತಿ ಉಪ ಯೋಗವಿಲ್ಲ, ರೋಹಿಣಿ, ಕೋಸಲೇಂದ್ರ ಹೇಳಿದ ಮಾತು ನೆನಪಿದೆಯೆ ? ಮನುಷ್ಯ ಸುಖಿಯಾಗಲು, ಅವನಲ್ಲಿ ಆಳ ಬೇಕು. ಅಂತರಂಗದಲ್ಲಿ ಆಳವಿದ್ದ ಹಾಗೆ ಬಹಿರಂಗದ ಜೀವಿತವು ಅರ್ಥಪೂರ್ಣವಾಗುತ್ತದೆ. ಪ್ರತಿಯೊಂದು ಸನ್ನಿವೇಶದ ಸತ್ಯವನ್ನು ಹೀರಿ ಬೆಳೆಯುವ ಶಕ್ತಿ ಬೇಕು ವ್ಯಕ್ತಿಗೆ, ಇನ್ನು ನೈನಿತಾಲಕ್ಕೆ ಹೋಗಿ ಈ ಹಾದಿಯನ್ನೇ ಶೋಧಿಸೋಣ.

೫೬

ಯುಗಾಂತರ

ರೋಹಿಣಿದೇವಿ : ನೋಡೋಣ. ಪ್ರತಿಕ್ಷಣವೂ ಇಲ್ಲಿಯ ಆಸೆ ಕೈಗೂಡುವಂತೆ ಕಾಣುತ್ತದೆ; ಕಂಡು ಜೋಲಿ ಹೊಡೆಯುತ್ತದೆ. ಓಹೊ ! ನಮಸ್ತೇ ! ಬನಸಿಲಾಲಜಿ ! ಇಲ್ಲಿ ಬಹಳ ಹೊತ್ತು ನಾವು ದಾರಿನೋಡಿದೆವು !
[ನೆಹರು ಶರ್ಟನ್ನು ಹಾಕಿಕೊಂಡು ಅಚ್ಚ ಬಿಳಿ ಗಾಂಧಿ ಟೊಪ್ಪಿಗೆಯನ್ನು ಧರಿಸಿ ಬನಸಿಲಾಲನು ಪ್ರವೇಶಿಸುತ್ತಾನೆ. ]

ಬನಸಿಲಾಲ: ( ಅತ್ಯಂತ ವಿನಯದಿಂದ ) ನಮಸ್ತೇ, ನಮಸ್ತೆ ರೋಹಿಣಿ ದೇವಿ, ನಮಸ್ತೇ, ಕಾಂತಿಚಂದ್ರಜಿ ! ಕೆಲಸದಲ್ಲಿದ್ದೆ. ಕ್ಷಮಿಸಬೇಕು. ( ಕುಳಿತುಕೊಂಡು ) ಎಲ್ಲ ಕ್ಷೇಮವಷ್ಟೆ ?

ರೋಹಿಣಿದೇವಿ : ಕ್ಷೇಮವಿಲ್ಲದಿರಲು ಇದೆಯೆಂದು ಹೇಗೆ ಹೇಳುವದು ? ಅದ ಕ್ಕಾಗಿಯೇ ತಮ್ಮ ಕಡೆಗೆ ಬಂದಿದ್ದೇವೆ.

ಬನಸಿಲಾಲ : ( ಗಾಬರಿಯನ್ನು ನಟಿಸಿ,) ಅದೇನು ಸಮಾಚಾರ ? ನನ್ನಿಂದ ಏನಾದರೂ ಸಹಾಯವಾಗಬಹುದೇ ?

ರೋಹಿಣಿದೇವಿ; ಈಗೆರಡು ತಿಂಗಳಿಂದ ಕಾಂತಿಚಂದ್ರರು ಹಾಸಿಗೆ ಹಿಡಿ ದಿದ್ದಾರೆ, ಬನಸಿಲಾಲಜಿ ! ನೋಡಿರಿ ! ಅವರ ಪ್ರಕೃತಿ ಮೊದಲು ಹೇಗಿತ್ತು; ಈಗ ಹೇಗಿದೆ.

ಬನಸಿಲಾಲ : ಹೌದು. ಬಹಳ ಸೊರಗಿದ್ದಾರೆ. ಔಷಧೋಪಚಾರ ನಡೆ ದಿದೆಯೆ, ಕಾಂತಿಚಂದ್ರಜಿ ?

ಕಾಂತಿಚಂದ್ರ : ನಡೆದಿದೆ. ಸ್ವಲ್ಪ ಗುಣವಿದೆ ಈಗ,

ರೋಹಿಣಿದೇವಿ : ಇವರ ಪರವಾಗಿ ಒಂದು ಬಿನ್ನಹ ಮಾಡಲು ಬಂದಿದ್ದೇನೆ ನಾನು ಬನಸಿಲಾಲಜಿ! ನಾನು, ಸ್ತ್ರೀ, ಇಂಥ ಕೆಲಸ ಹಚ್ಚಿಕೊಳ್ಳಬಾರದು. ಆದರೆ ಕಾಂತಿಚಂದ್ರರು ಈ ವಿಷಯದಲ್ಲಿ ತಮ್ಮ ಮೌನವ್ರತವನ್ನು ಮುರಿ ಯುವದಿಲ್ಲ. ಆದಕಾರಣ ನಾನೇ ಅವರ ಪರವಾಗಿ ಮಾತನಾಡ ಬೇಕೆಂದಿದ್ದೇನೆ.

ಬನಸಿಲಾಲ : ( ವಿನಯದಿಂದ ) ಅದೇನು, ರೋಹಿಣಿದೇವಿಯವರೆ ? ಅಂಥ ದೇನನ್ನು ಅವರ ಸಲುವಾಗಿ ನಾನು ಮಾಡಬಲ್ಲೆ ?
೫೭

ಅಂಕು ೩


ರೋಹಿಣಿದೇವಿ : ಈಗ ಮಧ್ಯವರ್ತಿ ಅಸೆಂಬ್ಲಿಯ ಚುನಾವಣೆ ಬಂದಿದೆಯಲ್ಲ. ಅದಕ್ಕೆ ಕಾಂತಿಚಂದ್ರರು ನಿಲ್ಲಬೇಕೆಂದಿದ್ದಾರೆ. ತಾವು ಅವರ ಹಾದಿಯಲ್ಲಿ ಬರಬಾರದು.

ಬನಸಿಲಾಲ : ಅಂದರೆ ? ರೋಹಿಣಿದೇವಿ: ತಮ್ಮ ಪ್ರತಿಸ್ಪರ್ಧಿಗಳಾಗಿ ನಿಲ್ಲುವ ಮನಸ್ಸಿಲ್ಲ ಇವರಿಗೆ. ಇಬ್ಬರೂ ಕಾಂಗ್ರೆಸ್ಸಿನ ವತಿಯಿಂದ ನಿಲ್ಲುವದಾದರೆ ಪಾರ್ಲಿಮೆಂಟರಿ ಬೋರ್ಡು ತಮ್ಮನೇ ಆರಿಸುವದು, ಆದರೆ ಕಾಂತಿಚಂದ್ರರು ಈ ಸಲ ನಿಲ್ಲುವದು ಅವಶ್ಯವಿದೆ.

ಬನಸಿಲಾಲ : ಈಗ ರೋಗಿ ಹಾಸಿಗೆಯಿಂದೆದ್ದಿದ್ದಾರೆ. ಪಾಪ! ಅವರಿಗೇಕೆ ತೊಂದರೆ ಪಡಿಸುತ್ತೀರಿ ?

ರೋಹಿಣಿದೇವಿ : ಇದು ಆಯಾಸದ ಇಲ್ಲವೆ ಸಾಂಕ್ರಾಮಿಕ ರೋಗವಲ್ಲ, ಬನಸಿ ಲಾಲಜಿ ! ಅದು ಹೃದ್ರೋಗ, ಅವರು ದಿಲ್ಲಿಗೆ ಬಂದಿದ್ದು ಒಂದು ಉದ್ದೇಶ ದಿಂದ. ಆದರೆ ಇಲ್ಲಿ ಆಗಿದ್ದು ಇನ್ನೊಂದು. ನಿಮ್ಮನ್ನು ಒಬ್ಬರೊಬ್ಬರ ಹಾದಿಯಲ್ಲಿ ವಿಧಿ ತಂದು ನಿಲ್ಲಿಸಿತು. ಹಿಂದಾದುದನ್ನು ಉದಾರ ಹೃದಯ ದಿಂದ ಮರೆತುಬಿಡಿರಿ, ಈ ಅಸೆಂಬ್ಲಿಯೊಂದರಲ್ಲಿ ಕಾಂತಿಚಂದ್ರರು ಭಾಗ ವಹಿಸಬೇಕೆಂದಿದ್ದಾರೆ. ಆಮೇಲೆ ಯಾವ ವಿಷಯದಲ್ಲಿಯೂ ಅವರು ಮನಸ್ಸು ಹಾಕುವದಿಲ್ಲ,

[ ಬನಸಿಲಾಲನು ಕುಳಿತಲ್ಲಿಂದ ಎದ್ದು ಕೋಣೆಯಲ್ಲಿ ಅತ್ತಿಂದಿತ್ತ ತಿರುಗಾಡುತ್ತಾನೆ.]

ಬನಸಿಲಾಲ : ರೋಹಿಣಿದೇವಿಯವರೆ, ನಾನು ತಮ್ಮಲ್ಲಿ ಒಂದು ವಿಷಯ ವನ್ನು ಪ್ರಸ್ತಾಪಿಸಬಹುದೆ ?

ಕಾಂತಿಚಂದ್ರ : ರೋಹಿಣಿ, ಇನ್ನು ಏಳು, ಹೋಗೋಣ, ಏನು ಉತ್ತರ ಬರುವದೆಂಬುದು ನನಗೆ ಗೊತ್ತಿದೆ.

ರೋಹಿಣಿದೇವಿ : ಅವಸರ ಬೇಡ. ಕುಳಿತುಕೊಳ್ಳಿರಿ. (ಬನಸಿಲಾಲನೆಡೆಗೆ ತಿರುಗಿ) ಬನಸಿಲಾಲಜಿ, ಅವಶ್ಯವಾಗಿ ಪ್ರಸ್ತಾಪಿಸಬಹುದು. 

ಯುಗಾಂತರ

೫೮

ಬನಸಿಲಾಲ : ಕೆಲವು ತಿಂಗಳ ಹಿಂದೆ ಅನಾಥಾಶ್ರಮದ ಅಧ್ಯಕ್ಷಸ್ಥಾನದ ಬಗ್ಗೆ.............

ರೋಹಿಣಿದೇವಿ : ಹಿಂದಿನದನ್ನೆಲ್ಲ ಮರೆತುಬಿಡಿರೆಂದು ನಾನು ಪ್ರಾರ್ಥಿಸಿದ್ದೇ ನಲ್ಲ, ಬನಸಿಲಾಲಜಿ ! ಆ ಅಧ್ಯಕ್ಷಸ್ಥಾನಕ್ಕೆ ಕಾಂತಿಚಂದ್ರರು ರಾಜಿನಾಮೆ ಸಹ ಕೊಟ್ಟಿದ್ದಾರೆ.

ಬನಸಿಲಾಲ : ಇಂಥ ಮರವಿಗೂ ಮೇರೆಯಿದೆ, ರೋಹಿಣಿದೇವಿಯವರೆ ! ನೀವಿಬ್ಬರೂ ಆಗ ಅಪಮಾನಗೊಳಿಸಿ ನನ್ನನ್ನು ಹೊರಗೆ ಹಾಕಿದಿರಿ. ಆದೊಂದು ಸಂದರ್ಭವನ್ನು ಬಿಟ್ಟರೆ ನಾನು ಯಾವ ಪ್ರತಿಸ್ಪರ್ಧಿಯ ಮನೆಗೂ ಈ ಜನ್ಮದಲ್ಲಿ ಕಾಲಿಕ್ಕಿಲ್ಲ. ಆ ಅಪಮಾನ ನನ್ನ ಹೃದಯದಲ್ಲಿ ಕುದಿಯುವ ಕಬ್ಬಿಣದಂತೆ ಹೊಯ್ದಾಡುತ್ತದೆ. ಕಾಂತಿಚಂದ್ರರಂತೆ ನಾನೂ ಮನುಷ್ಯ, ರೋಹಿಣಿದೇವಿಯವರೆ ! ಅಂತರವಿಷ್ಟೆ; ಝಳತಾಕಲು ಕಾಂತಿ ಚಂದ್ರರು ಒಣಗುತ್ತಾರೆ; ನಾನು ಕುದಿಯುತ್ತೇನೆ.

ಕಾಂತಿಚಂದ್ರ : ( ಏಳು ) ಇಷ್ಟು ಅಪಮಾನ ಸಾಕಲ್ಲ, ರೋಹಿಣಿ ? ನಡೆ ಇನ್ನು ಹೊಗೋಣ.

ರೋಹಿಣಿದೇವಿ : ( ದೀನಳಾಗಿ, ಇದೊಂದು ಮಾತನ್ನು ನಡೆಯಿಸಿಕೊಡಿರಿ. ಬನಸಿಲಾಲಜಿ ! ದೇಶದ ಸಂಧಿಕಾಲದಲ್ಲಿ ಸೇವೆ ಮಾಡಲು ಕಾಂತಿಚಂದ್ರರಿಗೆ ಇದೊಂದು ಅವಕಾಶವನ್ನು ಕೊಡಿರಿ.

ಬನಸಿಲಾಲ: ಇದೊಂದು ಬಿಟ್ಟು ಮತ್ತೇನನ್ನಾದರೂ ತಾವು ಕೇಳಬಹುದು. ಎಂದು ಘಟನಾ ಸಮಿತಿಗಾಗಿ ಚುನಾವಣೆಯಾಗುವದೆಂದು ಸರಕಾರ ಸಾರಿತೋ ಅಂದಿನಿಂದ ನಾನು ಇದರಲ್ಲಿ ಮನಸ್ಸು ಹಾಕಿದ್ದೇನೆ. ಬೇಕಾದರೆ ಕಾಂತಿಚಂದ್ರರೂ ಪಾರ್ಲಿಮೆಂಟರಿ ಬೋರ್ಡಿಗೆ ಅರ್ಜಿ ಕೊಡಲಿ, ಅವರು ಬೇಕಾದವರನ್ನು ಆರಿಸುತ್ತಾರೆ, ಆದರೆ ಬೋರ್ಡಿನವರು ಕಾಂತಿಚಂದ್ರ ರನ್ನು ಆರಿಸಿದರೆ ನಾನು ಸ್ವತಂತ್ರವಾಗಿ ಚುನಾವಣೆಗೆ ನಿಂತು ಅವರನ್ನು ಸೋಲಿಸುತ್ತೇನೆ. ಒಟ್ಟು ಈ ಚುನಾವಣೆಯಲ್ಲಿ ನನ್ನ ಶತ್ರು, ಸಾಮ್ರಾಜ್ಯ ಸರಕಾರವಲ್ಲ; ಕಾಂತಿಚಂದ್ರರು. ತಾವು ಹೆಣ್ಣು ಮಕ್ಕಳು, ವಂದನಾರ್ಹರು.
೫೯

ಅಂಕು 4


ತಮ್ಮೆದುರು ನಾನು ಹೀಗೆ ಮಾತಾಡಬಾರದು. ಆದರೆ.... ನನ್ನ ಮಾತು ಕೇಳಿದರೆ....ತಾವೂ ಈ ವಿಷಯದಲ್ಲಿ ಬೀಳಬಾರದಾಗಿತ್ತು.

ರೋಹಿಣಿದೇವಿ: ( ಎದ್ದು ನಿಲ್ಲುತ್ತ ) ಕ್ಷಮಿಸಿ, ಸೇಠಜಿ ! ನಾನು ಇಲ್ಲಿ ಬರ ಬಾರದಾಗಿತ್ತು. ಇದು ದೇಶಭಕ್ತರ ಮನೆಯಲ್ಲ; ಕಟುಕರ ಮನೆ, ಕಾಂತಿ ಚಂದ್ರ, ನಡೆಯಿರಿ. ಇನ್ನು ಹೋಗೋಣ.

ಕಾಂತಿಚಂದ್ರ : ( ಎದ್ದು ನಡೆಯುತ್ತ ) ನಮಸ್ಕಾರ.

ಬನಸಿಲಾಲ :ಹ್ಹ !ಹ್ಹ ! ನಮಸ್ಕಾರ.

[ ಹೋಗುತ್ತಿರುವ ಕಾಂತಿಚಂದ್ರ-ರೋಹಿಣಿದೇವಿಯವರನ್ನೇ ವಿಜಯೋತ್ಸಾಹದಿಂದ ನೋಡುತ್ತ ನಿಲ್ಲುತ್ತಾನೆ.]

[ ತೆರೆ.]

೬೦

ಯುಗಾಂತರ

ಪ್ರವೇಶ ೨


ಬನಖೇಡಿಯ ಹತ್ತಿರ ಹರಿಯುವ ನರ್ಮದೆಯ ತೀರದಲ್ಲಿ. ಅದೇ ಉಷಃಕಾಲ, ಕೋಸಲೇಂದ್ರ-ಮೃಣಾಲಿನಿಯರು ಅಲ್ಲಿ ಒಂದು ಬಂಡೆಗಲ್ಲಿನ ಮೇಲೆ ಕುಳಿತಿದ್ದಾರೆ.


ಕೋಸಲೇಂದ್ರ : ಈ ಒಂದು ವಾರದಲ್ಲಿ ನನ್ನ ಸ್ಫೂರ್ತಿಯ ತವರನ್ನೆಲ್ಲ ನಿಮಗೆ ತೋರಿಸಿದ್ದೇನೆ. ನಮ್ಮ ಹಳ್ಳಿಯಲ್ಲಿ ಎಂಬತ್ತು ವರ್ಷದ ಆ ಕುಷ್ಟ ಕುಷ್ಟ ಮುದುಕಿಯನ್ನು ನೋಡಿದೆಯಲ್ಲ. ನಾನು ಇಂಥವ ಎಂದು ಹೇಳಿ ನಮಸ್ಕರಿಸಿ ದಾಗ ನನ್ನ ಮೇಲೆ ಎಷ್ಟೊಂದು ಪ್ರೀತಿಯನ್ನು ತೋರಿಸಿದಳು ! ನನಗೂ ಆಕೆಗೂ ಯಾವ ಆಪ್ತತ್ವವು ಇಲ್ಲ. ಚಿಕ್ಕಂದಿನಿಂದ ಈ ಊರಲ್ಲಿ ಬೆಳೆದಿರು ವದೇ ನಮ್ಮ ಸಂಬಂಧ. ಎಂಥ ನಿರ್ವ್ಯಾಜ ಪ್ರೇಮವದು, ಮೃಣಾಲಿನಿ ! ಈ ಪ್ರೇಮವೇ ದೇವರು. ಇದೇ ಮರ್ತ್ಯ ರನ್ನು ದೇವತೆಗಳನ್ನಾಗಿ ಮಾಡುವದು,

ಮೃಣಾಲಿನಿ : ಸಾಗಲಿ, ನಾನು ಸುಮ್ಮನೆ ಕುಳಿತು ಕೇಳುತ್ತೇನೆ. ನಿನಗೆ ಒಮ್ಮೆ ಪಾಠವನ್ನು ಕಲಿಸಿದ ತಪ್ಪಿಗೆ ನಿರಂತರವೂ ಈಗ ನಾನು ಕಲಿಯ ಬೇಕಾಗಿದೆ.

ಕೋಸಲೇಂದ್ರ ಈ ಹಳ್ಳಿಗೆ ಬಂದಾಗ ನನ್ನ ತಂದೆ- ತಾಯಿಯ ನೆನಪಾಗು ತದೆ. ಎಷ್ಟು ಅಕ್ಕರತೆಯಿಂದ ಅವರು ನನ್ನನ್ನು ಸಲುಹಿದರು! ತಂದೆ ಸಾಲ ದಲ್ಲಿ ಮುಳುಗಿರುತ್ತಿದ್ದ. ಅವನ ಹೊಲಗಳೆಲ್ಲ ಒತ್ತಿ ಬಿದ್ದವು. ನನ್ನನ್ನು ಹಡೆದ ಮೇಲೆ ತಾಯಿಯನ್ನು ಒಂದು ಭಯಂಕರ ವ್ಯಾಧಿಯು ಹಿಡಿದು ಕೊಂಡಿತು. ಒಂದು ದಿನವಾದರೂ ಅವಳು ಸುಖ ಪಡಲಿಲ್ಲ. ತಂದೆಗೆ ಉಡ ಲಿಕೆ ಹರುಕು ಧೋತರವಿರುತ್ತಿರಲಿಲ್ಲ. ಆದರೆ ಪ್ರತಿನಿತ್ಯ ಓರಣದ ಬಟ್ಟೆ ಗಳನ್ನು ಹಾಕಿ ನನ್ನನ್ನು ಸಾಲೆಗೆ ಕಳಿಸುತ್ತಿದ್ದ ತಾಯಿಗೆ ಒಮ್ಮೊಮ್ಮೆ ತಿನ್ನಲು ಕೂಳಿರುತ್ತಿರಲಿಲ್ಲ. ಆದರೆ ಮುಂಜಾನೆ ಒಂದು ಬಟ್ಟಲು ಹಾಲನ್ನು ಕೊಡದೆ ಆಕೆ ನನ್ನನ್ನು ಸಾಲೆಗೆ ಕಳಿಸುತ್ತಿರಲಿಲ್ಲ. ತಂದೆ ಹೇಳುತ್ತಿದ್ದ: “ನನ್ನ ಕಥೆ ಮುಗಿಯಿತು. ಕೋಸಲೇಂದ್ರನೇ ಈ ಮನೆಯ ದೀಪ, ಅವನಿಗೆ ಕಡಿಮೆ
೬೧

ಅಂಕು ೩


ಮಾಡಬೇಡ."ತಂದೆ ಚಿಂತಿಸಿ ಚಿಂತಿಸಿ ತೀರಿಕೊಂಡ. ತಾಯಿ ಮಲಗಿ ಕೊಂಡಲ್ಲಿಯೇ ನಡೆದು ಹೋದಳು. ಆದರೆ ಮಾನವ ಕುಲದ ಸಂಸ್ಕೃತಿಯ ಶಾಶ್ವತ ಭಾಗವಾಗಿ ಉಳಿದಿದೆ ಅವರ ತ್ಯಾಗ, ಮೃಣಾಲಿನಿ, ಆ ತ್ಯಾಗವೇ ದೇವರು.

ಮೃಣಾಲಿನಿ : ಮುಂದೆ, ದೇವರ ವಿಷಯ ಹಾಗಿರಲಿ, ನಿನ್ನ ಕಥೆ ಕೇಳಲು ಆತುರಳಾಗಿದ್ದೇನೆ.

ಕೋಸಲೇಂದ್ರ : ಮುಂದೆ ದೂರದ ಆಪ್ತರು ನನ್ನನ್ನು ದಿಲ್ಲಿಗೆ ಕರೆದೊಯ್ದರು. ಅಲ್ಲಿ ಸಾಲೆಗೆ ಹೋದೆ. ಕಾಲೇಜಿನಲ್ಲಿಯೂ ಒಂದೆರಡು ವರುಷ ಕಳೆದೆ. ನನಗೆ ಬೇಕಾದ ಗ್ರಂಥಗಳನ್ನೋದಿಕೊಂಡೆ, ಕಲೋಪಾಸನೆಯೇ ನನ್ನು ಜೀವಿತದ ಕಾರ್ಯವೆಂದು ಮನದಟ್ಟಾಯಿತು. ದಿಲ್ಲಿಯಲ್ಲಿಯ ಕೃತ್ರಿಮತೆ, ಸಾಮ್ರಾಜ್ಯ-ಮದ, ವಿರಸ, ಅನ್ಯಾಯ ಇವುಗಳನ್ನೆಲ್ಲ ನೆನೆದಾಗ ನನಗೆ ದಿಲ್ಲಿ ಯಲ್ಲಿ ಉಸಿರು ಕಟ್ಟಿದಂತಾಗುತ್ತಿತ್ತು. ಆಗ ನನ್ನನ್ನು ಉಳಿಸಿದ ಶಕ್ತಿಯು ಯಾವುದು ಬಲ್ಲೆಯಾ ?

ಮೃಣಾಲಿನಿ: ಯಾವುದು ಆ ಶಕ್ತಿ ?

ಕೋಸಲೇಂದ್ರ : ನಿಸರ್ಗ, ಅದರ ರಮಣೀಯತೆ, ಸೂರ್ಯಚಂದ್ರರ ನನ್ನನ್ನು ಉಳಿಸಿದರು. ಈ ನರ್ಮದೆಯ ತೀರದಲ್ಲಿ ನನ್ನನ್ನು ಕುಣಿದಾಡಿಸಿದ ದೃಶ್ಯಗಳೆಲ್ಲ ದಿಲ್ಲಿಯಲ್ಲಿ ಮಂಕು ಕವಿದ ನನ್ನ ಮನಸ್ಸನ್ನು ರಮಿಸಿದವು. ಇತಿಹಾಸದ ವಿಕಟ ಚೇಷ್ಟೆಗಳೆಲ್ಲ ವಿಕೃತವಾಗಿಸಿದ ದಿಲ್ಲಿಯಲ್ಲಿ ಅವು ಪೂರ್ಣತೆಯನ್ನು ನನಗೆ ತಂದು ಕೊಟ್ಟವು. ಮೃಣಾಲಿನಿ, ಅಲ್ಲಿ ಸೂರ್ಯನು ಹೇಗೆ ಉದಯಿಸುವನು ನೋಡು, ಸೃಷ್ಟಿಯ ಮೊದಲನೆಯ ದಿನ ಉದಯಿಸಿ ದಂತೆ, ಈ ತರಂಗಗಳು ಹೇಗೆ ಶಾಂತವಾಗಿ ಸಾಗಿವೆ ನೋಡು, ಸಮತೆ ಯನ್ನರಿತು ಆಚರಿಸುವ ಮಾನವರಂತೆ. ಅಲ್ಲಿ ಹಕ್ಕಿ ಮುಗಿಲಲ್ಲಿ ಹೇಗೆ ತೂರಾಡುತ್ತವೆ ನೋಡು, ದೇವನ ರಮ್ಯ ಕಲ್ಪನೆಗಳಂತೆ, ಅವುಗಳ ಗರಿ ಗಳನ್ನು ರವಿಕಿರಣಗಳು ಹೇಗೆ ಬಣ್ಣ ಬಣ್ಣವಾಗಿಸಿವೆ ನೋಡು, ಬರಲಿರುವ ಸಂಸ್ಕೃತಿಯಂತೆ ! ಮೃಣಾಲಿನಿ, ರಕ್ತಪಾತದಿಂದ ತೊಯ್ದು ಬಸಿಯುತ್ತಿ ರುವ ಈ ಧರಿಣಿಯಲ್ಲಿ ಇಂದಿಗೂ ಒಂದು ಹೂವು, ಒಂದು ಪಾರಿವಾಳದಲ್ಲಿ

೬೨

ಯುಗಾಂತರ


ತುಂಬಿದ ಈ ಚೆಲುವಿದೆಯಲ್ಲ, ಈ ಚೆಲುವೇ ಮಾನವ ಕುಲದ ಧ್ರುವತಾರೆ. ಇದೇ ಅಭ್ಯುದಯದ ಸಂಚಕಾರ, ಮೃಣಾಲಿನಿ, ಈ ಚೆಲುವೇ ದೇವರು.

ಮೃಣಾಲಿನಿ: ದಿಲ್ಲಿಯಲ್ಲಿ ಮುಂದೇನು ಮಾಡಿದೆ, ಕೋಸಲೇಂದ್ರ ? ಅದನ್ನು ತಿಳಿಯಲು ಕುತೂಹಲವಾಗಿದೆ.

ಕೋಸಲೇಂದ್ರ : ಮುಂದೆ ಜೀವನವು ಭವ್ಯ-ದಿವ್ಯವಾಯಿತು. ಸಾಕ್ಷಿಯಾಗಿ ನಿಂತು ಸುತ್ತಲಿನ ಮಾನವಸೃಷ್ಟಿಯನ್ನು ನೋಡಿದೆ: ಒಂದು ಮೆರವಣಿಗೆ ಅದು; ಕೇರಿ-ಕೇರಿಗಳನ್ನು ತುಂಬಿ ಸಾಗುತ್ತಿತ್ತು. ಅಲ್ಲಿ ಬನಸಿಲಾಲನ್ನಂತಹ ಧೂರ್ತರು-ಜೇಡವು ಮೂಲೆಯಲ್ಲಿ ತನ್ನ ಬಲೆಯನ್ನು ಪಸರಿಸಿದಂತೆ ಸುತ್ತಲು ತನ್ನ ಜಾಲವನ್ನು ಹರಹಿ ಸಾಗುತ್ತಿದ್ದರು, ಕಾಂತಿಚಂದ್ರರಂಥ ಕೀರ್ತಿಲೋಲುಪರು ಮೃಗಜಲದ ಬೆನ್ನು ಹತ್ತಿದ್ದರು. ಕಿಶನ್ ಕಿಶೋರರಂಥ ಧಾರ್ಮಿಕರು ಹೊರಗಿನ ಜಗತ್ತಿನಲ್ಲಿ ಬೆಳಕು ಕಾಣದೆ ಕಣ್ಣು ಮುಚ್ಚಿ ಏನನ್ನೋ ಶೋಧಿಸುತ್ತ ಕಾಲು ಒಯ್ದತ್ತ ನಡೆದಿದ್ದರು. ( ತುಸು ನಕ್ಕು ಮೃಣಾಲಿನಿ, ಕೆಲವೊಂದು ಪುಸ್ತಕಗಳನ್ನು ಬರಿ ಗಿಳಿಪಾಠ ಮಾಡಿ ಜೀವನದ ಸತ್ಯಕ್ಕೆ ಕಣ್ದೆರೆಯದ ಕನ್ನೆಯರೂ ಆ ಗುಂಪಿನಲ್ಲಿದ್ದ ರು.

ಮೃಣಾಲಿನಿ : ( ಕೊಂಕು ನುಡಿಯಿಂದ ) ಮತ್ತೆ........ಕಿರಿದರಲ್ಲಿ ಹಿರಿದನ್ನು ಕಾಣುವ ಕೋಸಲೇಂದ್ರನಂಥ ಕವಿಗಳು ಅಲ್ಲಿದ್ದಿಲ್ಲವೇನು ?

ಕೋಸಲೇಂದ್ರ : ಅವರೂ ಇದ್ದರು. ಇಂಥ ಎಲ್ಲ ವ್ಯಕ್ತಿಗಳನ್ನೊಳಗೊಂಡ ಆ ಗುಂಪು, ಆ ಮೆರವಣಿಗೆ ಯಾವ ಮಹಾಕವಿಯ ಸಜೀವ ಸೃಷ್ಟಿ, ಎಂದು ಬೆರಗಾದೆ. ಯುಗಯುಗದಲ್ಲಿ ಈ ನಯನೋತ್ಸವ ಸಂತತವಾಗಿ ಪ್ರವಹಿ ಸುತ್ತಿದೆಯಲ್ಲಾ ! ಎಂದು ತೂಣಗೊಂಡೆ, ಈ ಸಮೂಹದ ಹೃದಯದಿಂದ ಒಂದು ಭಾವನೆಯೇಳುತ್ತಿತ್ತು: ಒಂದೊಂದು ರಾಷ್ಟ್ರವೂ ಬಾಳಿ ಬದುಕ ಬೇಕೆಂದು ಇನ್ನೊಂದು ಭಾವನೆಯೇಳುತ್ತಿತ್ತು. ಜಗತ್ತಿಗೆ ಒಂದೇ ಒಂದು ಕೋಶ, ಒಂದೇ ಒಂದು ಕಣಜ, ಒಂದೇ ಒಂದು ನೀತಿಯಿರಬೇಕೆಂದು. ಆಗ ನನಗೆನಿಸಿತು, ಮಾನವನ ಕರುಣೆಯೇ ಜಗತ್ತಿನ ಪ್ರಗತಿಗೆ ಮೂಲ. ಆನಂದವೇ ವ್ಯಕ್ತಿ ವಿಕಾಸದ ಗುಟ್ಟು, ಕರುಣೆಯು ನಿರ್ಗುಣೋಪಾಸನೆ ಯಾದರೆ ಆನಂದವು ಸಗುಣೋಪಾಸನವೆಂದುಕೊಂಡೆ, ಮೃಣಾಲಿನಿ, ಈ ಕರುಣೆ, ಆನಂದಗಳೇ ದೇವರು,

ಅಂಕು ೩

೬೩

ಮೃಣಾಲಿನಿ : ( ನಗುತ್ತ ) ಇದೆಲ್ಲ ಸುಂದರವಾಗಿದೆ, ಕೋಸಲೇಂದ್ರ ! ಆದರೆ ನೀನು ಹೇಳಿದ ಈ ದೇವರಿಗೆ ಅಮರತೆಯೆಲ್ಲಿ? ಪುನರ್ಜನ್ಮದ ರೀತಿಯೇನು? ದೈವ-ಕರ್ಮ- ನಾದಗಳ ಗತಿಯೇನು ?

ಕೋಸಲೇಂದ್ರ : ಮೂಲ ವಸ್ತುವನ್ನು ಬಿಟ್ಟು ಬರಿ ಅದರ ರೂಪದ ಲಾಕ್ಷಣಿಕ, ರಾಗಬೇಕೆ, ಮೃಣಾಲಿನಿ ? ಈ ಕರುಣೆ-ಆನಂದಗಳು ನಮಗಿರಲಿ. ಮೀಮಾಂಸಕರಿಗೆ ಉಳಿದುದನ್ನು ಬಿಟ್ಟು ಕೊಡೋಣ, ಅಮರತೆ ಬರಿ ಒಂದು ಶಬ್ದ, ಆಳವಾಗಿ ಅನುಭವಿಸಿದ್ದೇ ಅಮರತೆಯ ಆಗರ. ಇನ್ನುಳಿದ ಅಮರತೆ ಎಲ್ಲಿ?

ಮೃಣಾಲಿನಿ : ಈ ನಿನ್ನ ದೇವರಿಗೂ ಉಳಿದ ಧರ್ಮಗಳಿಗೂ ಸಂಬಂಧವೇನು?

ಕೋಸಲೇಂದ್ರ : ಎಲ್ಲ ಧರ್ಮಗಳ ಹೃದಯ, ಈ ನನ್ನ ದೇವರು. ಆದರೆ ಧರ್ಮದ ಹೃದಯವನ್ನು ಬಿಟ್ಟು ಅದರ ಕೈಯನ್ನೋ ಕಾಲನ್ನೋ ಪೂಜಿ ಸುತ್ತಿದ್ದಾರೆ ಜನ.

ಮೃಣಾಲಿನಿ: ಈ ನಿನ್ನ ದೇವರ ಮಂದಿರವೆಲ್ಲಿ ?

ಕೋಸಲೇಂದ್ರ : ಮನುಷ್ಯನ ಹೃದಯದಲ್ಲಿ.

ಮೃಣಾಲಿನಿ : ಅವನ ಪೂಜೆಯ ಮಂತ್ರವಾವುದು ?

ಕೋಸಲೇಂದ್ರ : ವಾಙ್ಮಯವೇ ಪೂಜೆಯ ಮಂತ್ರ.

ಮೃಣಾಲಿನಿ: ಅವನನ್ನು ಪೂಜಿಸುವ ವಿಧಾನವಾವುದು ?

ಕೋಸಲೇಂದ್ರ : ಆ ಆನಂದ-ಕರುಣೆಗಳು ಮಾನವನ ಜೀವನ-ಭಾವನೆ ಗಳಲ್ಲಿ ಸದಾ ಜಾಗ್ರತವಿರುವಂತೆ ತ್ರಿಕರಣಪೂರ್ವಕವಾಗಿ ಯತ್ನಿಸುವದೇ ಆ ವಿಧಾನ,

ಮೃಣಾಲಿನಿ: (ಎದ್ದು ನಿಂತು ) ಕೋಸಲೇಂದ್ರ, ಈ ಧರ್ಮಕ್ಕೆ ನಾನು ಒಪ್ಪಿದೆ. ನಿನ್ನ ಮಠದ ಮೊದಲನೆಯ ಶಿಷ್ಯಳು ನಾನು.

ಕೋಸಲೇಂದ್ರ : ( ನಕ್ಕು ) ಹಾಗಲ್ಲ, ಮೃಣಾಲಿನಿ, ಇಲ್ಲಿ ಮಠವೂ ಇಲ್ಲ. ಸ್ವಾಮಿಯೂ ಇಲ್ಲ. ಆದರೆ ನನ್ನ ಈ ಧರ್ಮವನ್ನು ನೀನು ಒಪ್ಪುವ ಪಕ್ಷ ದಲ್ಲಿ ನನ್ನ ಸ್ವಾಮಿನಿಯಾಗಬೇಕು ನೀನು. ೬೪

ಯುಗಾಂತರ


ಮೃಣಾಲಿನಿ : ( ಮುಗುಳು ನಗೆಯಿಂದ ) ಅಂದರೆ ?

ಕೋಸಲೇಂದ್ರ : ನೀ ಭೆಟ್ಟಿಯಾಗದಿದ್ದರೆ ಈ ಧರ್ಮದ ಸೂತ್ರ ನನಗೆ ಅಷ್ಟು ಸುಲಭವಾಗಿ ಹೊಳೆಯುತ್ತಿರಲಿಲ್ಲ. ನಿನ್ನಿಂದ ನಾನು bourgouisie, proletariat ಮೊದಲಾದ ಶಬ್ದಗಳನ್ನು ಮಾತ್ರ ಕಲಿಯಲಿಲ್ಲ. ನಿರ್ಮಲ ಚಿತ್ರದ ನಿರ್ಭಿತಿ, ಎಣೆಯಿಲ್ಲದ ಉತ್ಸಾಹ, ಇವುಗಳನ್ನು ನಿನ್ನಲ್ಲಿ ಮೊದಲಿಗೆ ಕಂಡೆ. ಅವುಗಳ ಸಹಾಯ ದಿನವೂ ನನಗೆ ದೊರಕದೆ ಹೋದರೆ ನನ್ನ ಬಾಳ- ರಥ ಮುಂದೆ ಸಾಗಲಾರದು. ನನ್ನ ಕಾವ್ಯ ಪರಿಣತಿಯನ್ನು ನಿನಗೆ ಕಾಣಿಕೆಯಾಗಿ ಕೊಡುತ್ತೇನೆ. ನನಗೆ ನಿನ್ನ ಉತ್ಸಾಹ-ಕರ್ಮಕುಶಲತೆಗಳ ಜೋಡಣೆ ಇರಲಿ.

ಮೃಣಾಲಿನಿ : ಕೋಸಲೇಂದ್ರ ! ಇಲ್ಲಿದೆ ನನ್ನ ಕಾಣಿಕೆ, ( ಉಂಗುರವನ್ನು ತೆಗೆದು ಕೊಡುತ್ತಾಳೆ. ) ಮದುವೆಯೆಂದರೆ ಬಂಡುವಲಶಾಹಿಯು ಹೂಡಿದ ಇನ್ನೊಂದು ಸಂಸ್ಥೆಯೆಂದುಕೊಂಡಿದ್ದೆ. ಕಾಮವನ್ನು ಸಂಸ್ವೀಕರಿಸುವದೇ ಮದುವೆಯೆಂದುಕೊಂಡಿದ್ದೆ ನಾನು ! ಆದರೆ, ಓ ನರ್ಮದೆ ! ನಿನ್ನ ಈ ದಂಡೆಗೆ ಬಂದು ದಡ ಮುಟ್ಟಿದೆ. ಈ ರಮ್ಯ ಸೂರ್ಯೋದಯದಲ್ಲಿ- ಅರಿಸಿಣಕುಂಕುಮದ ಮೆರುಗನ್ನು ಪಡೆದ ನಿನ್ನ ತರಂಗಗಳ ಮಂತ್ರಪಠಣದಲ್ಲಿ ವಿಹಂಗಮಗಳ ಮಂಗಲಾಚರಣದಲ್ಲಿ ಸೂರ್ಯನ'ಪ್ರಭೆ ಎಲ್ಲೆಡೆಗೆ ಶೋಭನ ಶೋಭೆಯನ್ನು ಪಡೆದ ಕಾಲದಲ್ಲಿ-ನನ್ನ ಉತ್ಸಾಹವನ್ನು ಕೋಸಲೇಂದ್ರನ ಬಾಳಿಗೆ ಜೊತೆಯಾಗಿಸುತ್ತೇನೆ. ಅವನ ದರ್ಶನವು ನನ್ನ ಹಣೆಗಣ್ಣಾಗಲಿ. ಇದೇ ಪಾಣಿಗ್ರಹಣ,

[ ಮೆಲ್ಲಗೆ ಕೈ ನೀಡುತ್ತಾಳೆ, ಕೋಸಲೇಂದ್ರನು ಆವಳ ಕೈ ಹಿಡಿಯುತ್ತಾನೆ. ]

[ ತೆರೆ]

೬೫

ಅಂಕು ೩

ಪ್ರವೇಶ ೩

{ ಮಾಹುವಿನ ಹತ್ತಿರದ ಬಂಗಲೆ, ಕಿಶನ್ ಕಿಶೋರ-ರುಕ್ಮಿಣಿ ದೇವಿ ಯರು ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದಾರೆ. ಸಾಮಾನುಗಳ ಬ್ಯಾಗುಗಳ ಪ್ಯಾಕ್ ಆಗಿ ಅತ್ತಿತ್ತ ಬಿದ್ದಿವೆ. ಓಂಪ್ರಕಾಶ ಹತ್ತಿರ ನಿಂತಿದ್ದಾನೆ }

ಕಿಶನ್ ಕಿಶೋರ : ಇನ್ನು ನಾಳೆ ಬೆಳಗಿನ ಗಾಡಿಗೆ ಇಲ್ಲಿಂದ ಹೊರಡೋಣ ರುಕ್ಕಿಣಿ. ದಿಲ್ಲಿಗೆ ಹೋಗಿ ಮುಂದೆ ಏನೆಂಬುದನ್ನು ನಿಶ್ಚಯಿಸೋಣ. ಅಂತೂ ಇಲ್ಲಿ ನೆಲಿಸಲೆಂದು ನಿನ್ನನ್ನು ಕರೆದುಕೊಂಡು ಬಂದು ಬಹಳ ಹಿಂಸಿಸಿದಂತಾಯಿತು.

ರುಕ್ಮಿಣಿ ದೇವಿ : ನೀವು ಹಾಗೆ ತಿಳಿಯಬೇಡಿರಿ. ಅದು ನನ್ನ ತಪ್ಪು. ದಿಲ್ಲಿಯಲ್ಲಿದ್ದು ಅಷ್ಟು ರೂಢಿಯಾಗಿಬಿಟ್ಟಿದೆ ನನಗೆ, ಈ ಅರಣ್ಯದಲ್ಲಿ ಮುಂಜಾನೆಯಿಂದ ಸಂಜೆಯ ವರೆಗೆ ಏನು ಮಾಡಬೇಕೆಂಬುದೇ ನನಗೊಂದು ಸಮಸ್ಯೆ ಯಾಗುತ್ತವೆ. ನಿಮ್ಮ ಹಾಗೆ ಧ್ಯಾನದ ಪ್ರೀತಿಯನ್ನು ದೇವರು ನನಗೆ ಕೊಡಲಿಲ್ಲ. ಕೊಟ್ಟಿದ್ದರೆ.......ಕೊಟ್ಟಿದ್ದರೆ ......ಎಷ್ಟು ಚೆನ್ನಾಗಿತ್ತು !

( ಕಣ್ಣೀರಿಡುವಳು )

ಕಿಶನ್ ಕಿಶೋರ : ( ಅವಳ ಕಣ್ಣೊರಸುತ್ತ ) ಛೇ ! ರುಕ್ಕಿಣಿ ! ನೀನು ಹೀಗೆ ಕಣ್ಣೀರಿಡಬಾರದು. ಮೇಲಾಗಿ ನಾನು ಇಲ್ಲಿಂದ ಕಾಲು ಕಿತ್ತುವದು ನಿನ್ನೊಬ್ಬಳ ಸಲುವಾಗಿ ಎಂದಲ್ಲ. ಹಾವು, ಹುಲಿ, ಪಹರೆಯವ, ಅಡಿಗೆಯವ, ಇವರೆಲ್ಲ ಕೂಡಿ ನನ್ನ ಮನಸ್ಸಿನ ಸಮಾಧಾನವನ್ನೇ ಕಳೆದಿದ್ದಾರೆ. ಶಾಂತ ಮಯ ವಾತಾವರಣದಲ್ಲಿ ನಿಂತು ಧ್ಯಾನವನ್ನು ಬೆಳೆಸುವದೆಂದು ಇಲ್ಲಿಗೆ ಬಂದೆ. ಆದರೆ ಇಲ್ಲಿಯೂ ಒಂದಿಲ್ಲೊಂದು ಚೇಳು ನಿತ್ಯವೂ ಮನಸ್ಸನ್ನು ಕಟಕುತ್ತಿದೆ. ಅಂದ ಮೇಲೆ ನನಗೆ ದಿಲ್ಲಿಯೇನು, ಆರಣ್ಯವೇನು ? ನನ್ನೊಳಗೇ ಎಲ್ಲಿಯೋ ಕೀಲ ತಪ್ಪಿದಂತೆ ಕಾಣುತ್ತದೆ. ಅದನ್ನು ಸರಿಪಡಿಸಬೇಕು.

ಓಂಪ್ರಕಾಶ : ( ಅಳುಮೊಗದಿಂದ ) ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಬೇಕು, ಸರಕಾರ್.

೬೬

ಯುಗಾಂತರ

ಕಿಶನ್ ಕಿಶೋರ : ನಿನ್ನದೂ ತಪ್ಪಿಲ್ಲ, ಓಂಪ್ರಕಾಶ ! ನನ್ನಲ್ಲಿಯೇ ಇದ್ದ ಅಪೂರ್ಣತೆಯನ್ನು ನೀನು ಇನ್ನಿಷ್ಟು ಸ್ಪುಟವಾಗಿಸಿದೆ, ಅಷ್ಟೆ. ಯಾರದೂ ತಪ್ಪಿಲ್ಲ. ಇದರಲ್ಲಿ ತಪ್ಪು ನನ್ನದೇ !

ಓಂಪ್ರಕಾಶ : ( ಬಾಗಿಲ ಕಡೆ ನೋಡುತ್ತ ) ಯಾರೋ ಇಬ್ಬರು ತಮ್ಮ ಕಡೆಗೆ ಬರುತ್ತಿರುವಂತೆ ಕಾಣುತ್ತದೆ, ಸರಕಾರ್, ಓಹೋ ! ” ಕೋಸಲೇಂದ್ರ ಬಾಬುಗಳು !
ಕಿಶನ್'ಕಿಶೋರ : ( ತವಕದಿಂದ) ಯಾರು, ಕೋಸಲೇಂದ್ರನೇ ? ಹೇಳಿ ಕಳಿಸಿದಂತೆ ಬಂದನಲ್ಲ! ಹೋಗು; ಕರೆದುಕೊಂಡು ಬಾ.

(“ಜೀ' ಎಂದು ಓಂಪ್ರಕಾಶನು ಹೋಗುತ್ತಾನೆ. )

ಕಿಶನ್ ಕಿಶೋರ : ದೇವರು ಕರುಣಿಸಿದಂತೆ ಕಾಣುತ್ತದೆ, ರುಕ್ಮಿಣಿ. ಇದೊಂದು ಹೊಸದಾರಿ ತೆರೆಯುವ ಹಾಗೆ ಕಾಣುತ್ತದೆ.

ರುಕ್ಮಿಣಿದೇವಿ : ಅದೋ ನೋಡಿರಿ. ಕೋಸಲೇಂದ್ರ ಬಂದ.

( ಕೋಸಲೇಂದ್ರನು ನಮಸ್ಕರಿಸುತ್ತ ಬರುತ್ತಾನೆ. )

ಕಿಶನ್‌ಕಿಶೋರ : ಬಾ, ಕೋಸಲೇಂದ್ರ. ಕರೆಯಿಸಿದ ಹಾಗೆ ಬಂದೆ. ಎಲ್ಲಿಂದ ಬಂದಿದ್ದು ?

ಕೋಸಲೇಂದ್ರ : ( ಅತ್ತಿತ್ತ ನೋಡುತ್ತ ) ಓಹೋ ! ಇದೇನು ? ಸಾಮಾನು ಎಲ್ಲ ಕಟ್ಟಿದೆಯಲ್ಲ ? ಇಲ್ಲಿಗೆ ಆರಣ್ಯಕಾಂಡ ಮುಗಿದಂತಾಯಿತೇನು ?

ಕಿಶನ್ ಕಿಶೋರ : ( ಸಣ್ಣ ಮೊರೆಯಿಂದ ) ಹೌದು, ಕೋಸಲೇಂದ್ರ, ಈಗ ದಿಲ್ಲಿಗೆ ಹೊರಟು ನಿಂತಿದ್ದೇವೆ.

ಕೋಸಲೇಂದ್ರ : ಈ ಮಾರ್ಪಾಟಗೆ ಏನು ಕಾರಣ ?

ರುಕ್ಮಿಣಿದೇವಿ : ( ವಿಷಾದದಿಂದ ) ಒಂದು ರೀತಿಯಿಂದ ಇದಕ್ಕೆ ನಾನು ಕಾರಣ, ಕೋಸಲೇಂದ್ರ. ಇಲ್ಲಿ ಬಂದ ಮೇಲೆ ನನ್ನ ಪ್ರಕೃತಿಯೇ ಸರಿ ಯಾಗಿಲ್ಲ. ಇಲ್ಲಿಯ ಅನಾನುಕೂಲಗಳೂ ಇದಕ್ಕೆ ಕಾರಣವಾಗಿವೆ. ಪಹರೆಯವನಿಲ್ಲ, ಅಡಿಗೆಯವನಿಲ್ಲ, ಹಾವು ...ಹುಲಿ.......
೬೭

ಅಂಕು 4

ಕೋಸಲೇಂದ್ರ : ( ನಕ್ಕು ) ಅಡವಿಯಲ್ಲಿ ಬಂದು ನಿಂತು ಹಾವು, ಹುಲಿ ಎಂದರೆ ಹೇಗೆ ರುಕ್ಷ್ಮಿಣಿದೇವಿಯವರೆ ? ಸಮಾಜದಲ್ಲಿದ್ದರೆ ಎರಡು ಕಾಲಿನ ಹುಲಿ ತೊಂದರೆ ಕೊಡುತ್ತವೆ. ಅದಿರಲಿ, ನಿಮ್ಮ ಮುಂದಿನ ಅನುಕ್ರನು ಏನು, ಕಿಶನ್ ಕಿಶೋರಜಿ ? -

ಕಿಶನ್‌ಕಿಶೋರ : ( ಬೇಸರದ ದನಿಯಲ್ಲಿ ) ಈಗಂತೂ ದಿಲ್ಲಿಗೆ ಹೋಗುವದು. ಮುಂದಿನ ಮಾತು ಮುಂದೆ. ಜಗತ್ತಿನ ಯಾವ ಮೂಲೆಗೆ ಹೋದರೂ ಶಾಂತಿ-ಸುಖದಿಂದ ಜೀವಿಸುವುದು ಕಠಿಣವೆಂದು ನನಗೆ ತೋರುತ್ತದೆ. ಭಾರತದಲ್ಲಿ ಅರ್ಧಪಾತದ ನರಕ, ಒಟ್ಟು ಮೂಡಣದಲ್ಲಿಯೇ ದಾಸ್ಯದ ಹೀನತೆ. ಇಂಗ್ಲೆಂಡಿನಲ್ಲಿ ಸಾಯದ ಸಾಮ್ರಾಜ್ಯ - ಮದ, ಒಟ್ಟಾರೆ ಪಡುವಣ ದಲ್ಲಿಯೇ ವರ್ಣದ್ವೇಷ, ರಶ್ಯಾದಲ್ಲಿ ನಾಗರಿಕ ಸ್ವಾತಂತ್ರ್ಯದ ಅಭಾವ. ಹೀಗಾಗಿ ಎಲ್ಲಿ ಹೋಗಬೇಕೋ ತಿಳಿಯದಾಗಿದೆ.

ಕೋಸಲೇಂದ್ರ : ಈ ವಿಷಯದಲ್ಲಿ ನನ್ನ ದೊಂದು ಸೂಚನೆಯಿದೆ, ಕಿಶನ್ ಕಿಶೋರಜಿ.

ಕಿಶನ್ ಕಿಶೋರ : ಅದೇನು ಅಗತ್ಯವಾಗಿ ಹೇಳು, ಹೊಸ ಪೀಳಿಗೆಗೆ ಮಾತ್ರ ಈ ಒಗಟ ಒಡೆದೀತು.

ಕೋಸಲೇಂದ್ರ: ನಾವೇ ಕೊಸರಿಕೊಂಡು ಏಳದ ಹೊರತು ಅಪೂರ್ಣತೆ ಗಳು ನಮ್ಮನ್ನು ಬಿಡುವದಿಲ್ಲ. ಭಾರತ ನಮ್ಮ ದೇಶ, ಬದುಕಿದರೆ ಇಲ್ಲಿಯೆ ನಾವು ಬದುಕಬೇಕು. ಎಲ್ಲ ಸಂಗ್ರಾಮಗಳನ್ನು ಎದುರಿಸಲು ತರುಣರು ನಾವು ಸಿದ್ದರಾಗಿದ್ದೇವೆ. ದಿಲ್ಲಿಯಲ್ಲಿ ನಾನಿನ್ನು ಮನೆ ಮಾಡುತ್ತೇನೆ. ಎಲ್ಲ ಬನಸಿಲಾಲರ ಮೇಲೆ ಯುದ್ಧ ಸಾರುತ್ತೇನೆ. ಈ ಸಮಸ್ಯೆಗಳನ್ನು ನನಗೆ ಬಿಟ್ಟು ನೀವು ಸುಖವಾಗಿ ನನ್ನ ಮನೆಯಲ್ಲಿ ಇದ್ದು ಬಿಡಿರಿ, ಆಧ್ಯಾತ್ಮವು ಇಲ್ಲಿಯ ವರೆಗೆ ನಾಡನ್ನೇ ಹಾಳು ಮಾಡುವ ಬ್ರಹ್ಮರಾಕ್ಷಸವಾಗಿತ್ತು. ಈಗ ಸಂಶೋಧನ-ಕಾರ್ಯವೆಂದೆನಿಸಿ ಅದೊಂದು ಮಾನವ ಪ್ರಗತಿಯ ಸುಚಿಹ್ನೆವಾಗಿದೆ. ಅರವಿಂದರ ಆಶ್ರಮ, ರುಮಣಮಹರ್ಷಿಗಳ ನಿವಾಸ, ಹಿಮಾಲಯದ ತಪೋವನ, ಇವೆಲ್ಲ ಈ ಸಂಶೋಧನದ ಪ್ರಯೋಗಶಾಲೆಗಳಾಗಿವೆ. ಧ್ಯಾನದ ಹಾದಿಯಲ್ಲಿ ಮುಂದುವರಿಯಬೇಕೆಂದಾಗ, ಅಲ್ಲಿಗೆ ನೀವು ಹೋಗಬಹುದಲ್ಲ. ೬೮

ಯುಗಾಂತರ

ಕಿಶನ್ ಕಿಶೋರ : ( ಹರುಷದಿಂದ ) ಇದೊಂದು ಒಳ್ಳೆಯ ಸೂಚನೆ, ಕೋಸ ಲೇಂದ್ರ. ಮಕ್ಕಳಿಲ್ಲದೆ ನಾನು ನಿರ್ಗತಿಕನಾಗಿದ್ದೆ. ನೀನು ಮಗನಂತೆ ಎಲ್ಲವನ್ನೂ ನೋಡಿಕೊಂಡರೆ ನಾನು ಸುಖವಾಗಿ ಮನಸ್ಸಿಗೆ ತಿಳಿದಂತೆ ಇರಬಲ್ಲೆ, ಆದರೆ....ಆದರೆ.... ( ರುಕ್ಕಿಣಿಯ ಕಡೆಗೆ ತಿರುಗಿ ) ಈಕೆಯ ವಿಚಾರವೇನು?

ಕೋಸಲೇಂದ್ರ : ( ನಗುತ್ತ ) ಆ ವಿಷಯವನ್ನೂ ವಿಚಾರ ಮಾಡಿದ್ದೇನೆ, ಕಿಶನ್‌ಕಿಶೋರಜಿ ! ರುಕ್ಮಿಣಿದೇವಿಯವರಿಗೆ ನಿಮ್ಮ ಹಾಗೆ ಆತ್ಮ ಸಂಶೋಧನದ ಆತುರತೆ ಇಲ್ಲ. ಅವರಿಗೆ ಸೊಸೆ ಬೇಕು; ಮನೆತುಂಬ ಮೊಮ್ಮಕ್ಕಳು ಮರಿಮಕ್ಕಳು ಬೇಕು; ( ನಗುತ್ತ ) ಮರಿಮಕ್ಕಳಾದರೆ ಇನ್ನೂ ಸಂತೋಷ. ಆ ಸಂಭ್ರಮದಲ್ಲಿ ಅವರು ಎಲ್ಲ ಕೊರತೆಗಳನ್ನು ಮರೆಯುತ್ತಾರೆ. ಅದಕ್ಕಾಗಿ ಅವರಿಗೆಂದು ಒಬ್ಬ ಸೊಸೆಯನ್ನು ತಂದಿದ್ದೇನೆ, ಕಿಶನ್ ಕಿಶೋರಜಿ.

ಕಿಶನ್ ಕಿಶೋರ : | ರುಕ್ಮಿಣಿದೇವಿ  : ಎಲ್ಲಿ ? ಯಾರನ್ನು ಕರೆದುಕೊಂಡು ಬಂದಿದ್ದೀ? ನಿನ್ನ ಮದುವೆಯಾಯಿತೆ ?

ಕೋಸಲೇಂದ್ರ : ( ನಗುತ್ತ ) ಮದುವುಗಳನ್ನು ತಂದಿದ್ದೇನೆ. ನೀವೇ ಮದುವೆ ಮಾಡಬೇಕು. ಒಳ್ಳೆಯ ಹುಡಿಗೆ ಆಕೆ. ಚಿತ್ರಾಂಗದೆಯಂತೆ ಧೀರಳು. ಅರ್ಜುನನೊಡನೆ ನಿಂತು ಲೋಕವನ್ನೇ ಎದುರಿಸಬಲ್ಲಳು. ಆಕೆ ನಿಮ್ಮಿಬ್ಬರ ಮನಸ್ಸಿಗೆ ಬರುವದು ನಿಶ್ಚಿತ. ಆದರೆ....ಆದರೆ....ತಿಳಿಯದೆ ನಿಮ್ಮ ವಿಷಯದಲ್ಲಿ ಆಕೆ ಒಂದು ಅಪರಾಧ ಮಾಡಿದ್ದಾಳೆ. ಅದನ್ನು ಕ್ಷಮಿಸುವದಾಗಿ ನೀವು ವಚನ ಕೊಟ್ಟರೆ ಆಕೆಯನ್ನು ಇಲ್ಲಿಗೆ ಕರೆತರುತ್ತೆನೆ.

ರುಕ್ಮಿಣಿದೇವಿ : ಏನದು ಅಪರಾಧ, ಕೋಸಲೇಂದ್ರ ? ಯಾವ ತರುಣಿಯೂ ಇಂಥ ಅಪರಾಧ ಮಾಡಿದ್ದು ನನಗೆ ನೆನಪಿಲ್ಲವಲ್ಲ ?

ಕೋಸಲೇಂದ್ರ: ( ನಗುತ್ತ ) ಆಕೆಯನ್ನು ನೋಡಿದಾಗ ನಿಮಗೆ ನೆನಪಾಗದೆ ಇರದು. ಆದರೂ ಅಂಥದೇನು ಮಹಪರಾಧವಲ್ಲ ಅದು. ಅದನ್ನು ನೀವು ಕ್ಷಮಿಸಬಹುದೆ, ರುಕ್ಮಿಣಿದೇವಿ ?

ರುಕ್ಮಿಣಿದೇವಿ : ನೀನು ಅವಳ ಗುಣಗಾನವನ್ನು ಇಷ್ಟೊಂದಾಗಿ ಮಾಡುತ್ತಿರುವಾಗ ಆ ಹುಡುಗಿ ಅಂಥ ಆಪರಾಧ ಮಾಡಿದ್ದರೂ ಕ್ಷಮಿಸುತ್ತೇನೆ. ( ಕಿಶನ ಕಿಶೋರರ ಕಡೆಗೆ ತಿರುಗಿ ) ನೀವೂ ಕ್ಷಮಿಸುವಿರಲ್ಲವೆ ?

೬೯

ಆಂಕ ೩

ಕಿಶನ್ ಕಿಶೋರ : ಓಹೋ ! ಕ್ಷಮಿಸದೆ ಏನು ? ನಿನ್ನ ಕ್ಷಮೆಯಲ್ಲಿ ನನ್ನದು ಆಗಲೆ ಸಮಾವೇಶವಾಗಿಬಿಟ್ಟಿವೆ.

ರುಕ್ಮಿಣಿದೇವಿ : ಈಗಾದರೂ ನಿನಗೆ ಖಾತ್ರಿಯಾಯಿತೇ ಕೋಸಲೇಂದ್ರ ?

ಕೋಸಲೇಂದ್ರ : ಓಂಪ್ರಕಾಶ್ !

ಓಂಪ್ರಕಾಶ : ( ಹೊರಗಿನಿಂದ ಬಂದು ) ಜೀ

ಕೋಸಲೇಂದ್ರ : ಪಕ್ಕದ ಕೋಣೆಯಲ್ಲಿ ಕುಳಿತ ಬಾಯಿಯವರಿಗೆ ಇಲ್ಲಿ ಬರ ಹೇಳು. ಓಂಪ್ರಕಾಶ : ಜೀ, ( ಹೋಗುತ್ತಾನೆ. )

ಕಿಶನ್ ಕಿಶೋರ : ( ನಗೆಮೊಗದಿಂದ ) ಈಗ ಯಾರು ಬರಲಿರುವರು ನಿನಗೆ - ಹೊಳೆಯಿತೆ, ರುಕ್ಮಿಣಿ ?

ರುಕ್ಮಿಣಿದೇವಿ : ಇಲ್ಲ,

ಕಿಶನ್ ಕಿಶೋರ : ಹಾಗಾದರೆ ಬಂದರು ನೋಡು.

( ಮೃಣಾಲಿನಿಯು ಪ್ರವೇಶಿಸುತ್ತಾಳೆ. )

ಮೃಣಾಲಿನಿ : ನಮಸ್ತೆ,

ರುಕ್ಮಿಣಿದೇವಿ : ಕಾಮ್ರೆಡ್ ಮೃಣಾಲಿನಿ! ( ಮೃಣಾಲಿನಿಯನ್ನೂ ಕೊಸಲೇಂದ್ರ - ನನ್ನೂ ಅವಾಕ್ಕಾಗಿ ನೋಡುತ್ತಾಳೆ. )

ಕೋಸಲೇಂದ್ರ: ಕಾಮ್ರೆಡ್ ಮೃಣಾಲಿನಿ ! ಹೌದು, ರುಕ್ಮಿಣಿ ದೇವಿಯವರೆ! ಆದರೆ ಈಗ ಆಕೆ ನನ್ನ ವಧುವಾದ ಮೃಣಾಲಿನಿ, ಮಾತಿನಲ್ಲಿ ಬಹಳ ಮೃದುವಾಗಿದ್ದಾಳೆ ಈಗ ಮಾರ್ಕ್ಸನ ತತ್ವಗಳಲ್ಲಿ ಇನ್ನೂ ಆಕೆಗೆ ಶ್ರದ್ದೆಯಿದೆ. ಆದರೆ ಆ ವಾದಪ್ರಿಯ ವೃತ್ತಿ ಈಗ ಇಲ್ಲವಾಗಿದೆ. ಆಕೆಯ ತಪ್ಪನ್ನು ನೀವು ಕ್ಷಮಿಸಬೇಕು.

( ರುಕ್ಮಿಣಿದೇವಿ ಕಿಶನ್ ಕಿಶೋರರನ್ನು ನೋಡಿ ಸುಮ್ಮನಿರುತ್ತಾಳೆ. )

ಕಿಶನ್‌ಕಿಶೋರ : ( ನಗೆಮೊಗದಿಂದ ) ಈ ವಿಷಯದಲ್ಲಿ ಮೃಣಾಲಿನಿಯವರು ಏನೆನ್ನುತ್ತಾರೆ ?

ಮೃಣಾಲಿನಿ : ( ತುಸು ನಾಚಿಕೊಂಡು ನಕ್ಕು ) ಹೌದು. ಹಾಗೆ ನಾನು ಮಾತಾಡಬಾರದಾಗಿತ್ತು. ತಾವೂ ರುಕ್ಮಿಣಿದೇವಿಯವರೂ ನನ್ನನ್ನು ಕ್ಷಮಿಸ ಬೇಕು. ________________

೭೦

ಯುಗಾಂತರ

ಕಿಶನ್ ಕಿಶೋರ : ಹಾಗಾದರೆ ಒಂದು ಪ್ರಶ್ನೆ ಮಾಡುತ್ತೇನೆ, ಮೃಣಾಲಿನಿ - ದೇವಿ ! ಅದಕ್ಕೆ ಉತ್ತರ ಕೊಡುತ್ತೀರಾ ?

ಮೃಣಾಲನಿ : ( ಉತ್ಕಂಠತೆಯಿಂದ ) ಕೊಡುತ್ತೇನೆ.

ಕಿಶನ್ ಕಿಶೋರ : ಇನ್ನು ಮೇಲೆ ಗಜರ್ ಹಲವಾ ತಿನ್ನಲು ನಿಮ್ಮ ಅಡಿ ಇಲ್ಲವಲ್ಲ ? ನಿಮ್ಮಿಬ್ಬರಿಗೂ ಗಜರ್ ಹಲವಾದ ಮೇಲೆ ವಿಶೇಷ ಪ್ರೀತಿ. ಅದಕ್ಕೆ ಕೇಳುತ್ತೇನೆ,

ಮೃಣಾಲಿನಿ : ( ನಗುತ್ತ) ಇಲ್ಲವೇ ಇಲ್ಲ. ಕೆಲವು ದಿನವಂತೂ ದಿನಾಲು ಅದನ್ನು ತಿನ್ನಲು ನನ್ನ ಸಿದ್ಧತೆಯಿದೆ.

ಕಿಶನ್ ಕಿಶೋರ : ( ನಕ್ಕು ) ಹಾಗಿದ್ದರೆ ತೀರಿತು. ನಾನು ಇನ್ನೇನೂ ಕೇಳೆ ಬೇಕಾದ್ದಿಲ್ಲ. ಕೋಸಲೇಂದ್ರ, ನಿನ್ನ ವಧುವನ್ನು ನಾನು ಸಂಪೂರ್ಣ ವಾಗಿ ಮೆಚ್ಚಿದೆ. ರುಕ್ಮಿಣಿ, ನೀನೇನಾದರೂ ಪ್ರಶ್ನೆ ಕೇಳುವಿಯಾ ?

ರುಕ್ಮಿಣಿದೇವಿ : ನಾನು........ಹೌದು, ಕೇಳುತ್ತೇನೆ. ಮೃಣಾಲಿನಿದೇವಿ, ಆ ಖಾರ ತುಂಬಿದ ಭಜಿ ಕಂಡರೆ ನನಗಾಗುವದಿಲ್ಲ. ಸಾಮೋಸಾ ನಡೆಯ ಬಹುದು. ಅಂಥ ಭಜಿ ತಿನ್ನಬೇಕೆಂದು ನಿನಗೆನಿಸಿದಾಗ ಬರಿ ಸಾಮೋಸದ ಮೇಲೆ ಸಾಗಿಸಬಲ್ಲೆಯಾ ?

ಮೃಣಾಲಿನಿ : ( ತುಸು ನಕ್ಕು ) ನನಗೂ ಇತ್ತೀಚೆಗೆ ಅಂಥ ಭಜಿ ಕಂಡರೆ ಸೇರುವದಿಲ್ಲ. ಅದೇಕೋ ನನ್ನ ರುಚಿಯಲ್ಲಿಯೇ ಬದಲಾವಣೆಯಾಗಿದೆ.

ರುಕ್ಮಿಣಿದೇವಿ : ಬಹಳ ಒಳ್ಳೆಯದಾಯಿತು. ಹಾಗಾದರೆ ಕೋಸಲೇಂದ್ರ, ನೀನು ತಂದ ಸೊಸೆಗೆ ನಾನು ಒಪ್ಪಿದೆ. ಇನ್ನು ಎಷ್ಟು ಬೇಗನೆ ಆಕೆ ಮನೆಗೆ ಬಂದಾಳೋ ಅಷ್ಟು ಸಂತೋಷ ನನಗೆ,

ಕೋಸಲೇಂದ್ರ : ( ನಗುತ್ತ ) ಈಗ ಆಕೆ ಮನೆಗೆ ಬಂದುಬಿಟ್ಟಿದ್ದಾಳೆ.

[ ತರೆ, ]

________________

ಆcಕು ೩

ಪ್ರವೇಶ ೪

[ ಹಳೆಯ ದಿಲ್ಲಿ ನಿಲ್ಮನೆಯಲ್ಲಿ ಒಂದನೆಯ ತರಗತಿಯ ವಿಶ್ರಾಂತಿಗೃಹ, ಕಿಶನ್ ಕಿಶೋರ-ರುಕ್ಷ್ಮಿಣಿದೇವಿ, ಕಾಂತಿಚಂದ್ರ-ರೋಹಿಣಿದೇವಿ ಹಾಗೂ ಕೋಸಲೇಂದ್ರ-ಮೃಣಾಲಿನಿಯು ಅಲ್ಲಿ ಕುಳಿತಿದ್ದಾರೆ.]

ರೋಹಿಣಿದೇವಿ : ಯುದ್ಧ ಮುಗಿದರೂ ಈ ರೇಲ್ವೆ-ಆಲಸ್ಯ ಮುಗಿಯ ಲೊಲ್ಲದು. ಗಾಡಿ ನಿಲಂಬ ಎಷ್ಟೆಂದು ತಿಳಿಯಲು ಆಳು ಕಳಿಸಿದೆವು. ವೇಳೆಗೆ ಸರಿ ಎನ್ನುತ್ತ ಅವನು ತಿರುಗಿ ಬಂದ, ಆಗ ನಿಲ್ಮನೆಗೆ ಎಲ್ಲರೂ ಬಂದೆವು. ಒಂದೂವರೆ ಗಂಟೆಯಾಯಿತು. ಇಲ್ಲೇನಿದೆ ? ಬ್ರಿಟಿಶ್ ಸಾಮ್ರಾಜ್ಯದಲ್ಲಿ ಎಂದೂ ಅಸ್ತನಾಗದಿದ್ದ ಸೂರ್ಯನ ಉದಯಾಸ್ತಗಳೇ ಈಗ ಅನಿಶ್ಚಿತ ವೆಂದು ತೋರುತ್ತದೆ. ನಾವು ತಮ್ಮನ್ನು ಉಳಿದ ಕೆಲಸಗಳಿಂದ ತಡೆಹಿಡಿ ದಿಲ್ಲವಷ್ಟೆ ?

ಕಿಶನ್‌ಕಿಶೋರ : ಛೇ ! ಛೇ ! ತಾವು ನಮ್ಮನ್ನು ನೋಡದೆ ಹೋಗಿದ್ದರೆ ಭೆಟ್ಟಿಯ ಸಂಧಿಯೇ ತಪ್ಪುತ್ತಿತ್ತು.

ರೋಹಿಣಿದೇವಿ : ಗ್ಯಾಂಗ್‌‍ವೇನಲ್ಲಿ ಮೊದಲು ಮೃಣಾಲಿನಿ ಕಂಡಳು, ಕಾಂತಿ ಚಂದ್ರರ ಆರೈಕೆಗೆ ಬರುವದಾಗಿ ವಚನ ಕೊಟ್ಟು ಐದಾರು ದಿನಗಳಲ್ಲಿ ತಿರುಗಿ ಬರುವೆನೆಂದು ಹೇಳಿದ ಮೃಣಾಲಿನಿಗೆ ಒಮ್ಮೆ ಚೆನ್ನಾಗಿ ಮಾತನಾಡಿಸಬೇಕು ಎಂದುಕೊಂಡೆ. ಅಷ್ಟರಲ್ಲಿ ಕೋಸಲೇಂದ್ರ ಬಾಬುಗಳು ಕಂಡರು. ತಮ್ಮನ್ನೂ ನೋಡಿದೆ. ಮಾಹುವಿನಿಂದ ಇಂಥ ಬೇಸಿಗೆಯಲ್ಲಿ ತಾವು ತಿರುಗಿ ಬರಬಹುದೆಂದು ನನಗೆನಿಸಿರಲಿಲ್ಲ. ಅಲ್ಲಿ ಎಲ್ಲವೂ ಸುಖವಾಗಿತ್ತೇ ?

ರುಕ್ಮಿಣಿದೇವಿ : ದೇವರ ದಯೆಯಿಂದ ಎಲ್ಲವೂ ಸುಖಕರವಾಗಿ ಮುಕ್ತಾಯ ವಾಯಿತು. ಮೃಣಾಲಿನಿ ನಿಮಗೆ ಹೇಳಿದ ಹಾಗೆ ಬೇಗನೇ ತಿರುಗಿ ಬರುತ್ತಿದ್ದಳೋ ಏನೋ, ನಾವೇ ಕೆಲವು ದಿನ ಆಕೆಯನ್ನು ತಡೆದು ನಿಲ್ಲಿಸಿದೆವು. ಈಗ ತಾವು ಹೋಗುವದೆಲ್ಲಿಗೆ ?

೬೨

ಯುಗಾಂತರ

ರೋಹಿಣಿದೇವಿ : ಮಥುರೆಗೆ ಹೊರಟಿದ್ದೇವೆ.

ಕಿಶನ್‌ಕಿಶೋರ : ಯಾಕೆ, ಕಾಂತಿಚಂದ್ರಜಿ! ತಾವು ಬಹಳ ಸೊರಗಿದ್ದೀರಲ್ಲ?

ರುಕ್ಮಿಣಿದೇವಿ: ಹೌದು, ನಾನೂ ಕೇಳಬೇಕೆಂದಿದ್ದೆ.

ರೋಹಿಣಿದೇವಿ : ( ಸಣ್ಣ ಮೋರೆ ಮಾಡಿ ) ಅವರ ಪ್ರಕೃತಿಯ ಸಲುವಾಗಿಯೇ ನಾವು ಈಗ ಮಥುರೆಗೆ ಹೊರಟಿದ್ದು, ಮುಂದೆ ಕೆಲವು ದಿನ ನೈನಿತಾಲಕ್ಕೆ ಹೋಗಬೇಕೆಂದಿದ್ದೇವೆ.

ಕಾಂತಿಚಂದ್ರ: ಕಿಶನ್ ಕಿಶೋರಜಿ ! ತಮ್ಮೆದುರಿಗೆ ಸತ್ಯವನ್ನು ಹೇಳುವದಾದರೆ, ದಿಲ್ಲಿಯು ನನ್ನನ್ನು ನೆಲಕ್ಕುರುಳಿಸಿದೆ, ಬಹಳ ಉತ್ಸಾಹದಿಂದ ನಾನು ಇಲ್ಲಿಗೆ ಬಂದೆ. ಆದರೆ ಆ ಬನಸಿಲಾಲ........

ಕಿಶನ್‌ಕಿಶೋರ : ಓಹೊ ? ಕಾಂತಿಚಂದ್ರ: ಅವನು ನನ್ನನ್ನು ಹಿಂಡಿ ಹಿಪ್ಪೆ ಮಾಡಿದ. ಈಗ ದಿಲ್ಲಿಗಿಂತ ಮಥುರೆಯೆ ಒಳಿತೆಂದು ತಿರುಗುತ್ತಿದ್ದೇವೆ. ( ವಿಷಾದದಿಂದ ನಕ್ಕು ) ಕೋಸಲೇಂದ್ರಬಾಬು ನನಗೊಂದು ಔಷಧ ಹೇಳಿದ್ದಾರೆ. ಇನ್ನು ಅದನ್ನು ಸಾಧಿಸ ಬೇಕಾಗಿದೆ.

ಕಿಶನ್ ಕಿಶೋರ : ( ನಗುತ್ತ ) ಹೀಗೋ ! ಕೋಸಲೇಂದ್ರನು ತಮಗೆ ಯಾವ ಔಷಧ ಹೇಳಿದ ?

ಕಾಂತಿಚಂದ್ರ : ಸಂಸತ್ತು-ಅಧಿಕಾರ-ಕೀರ್ತಿಗಳನ್ನು ದಾಟಿ ಒಂದು ಆನಂದ ವಿದೆಯಂತೆ. ಇನ್ನು ಅದನ್ನು ಸಾಧಿಸಬೇಕು.

ಕೋಸಲೇಂದ್ರ: ( ನಗುತ್ತ ) ಆದರೆ ಕಾಂತಿಚಂದ್ರಜಿ ! ಇದಕ್ಕಾಗಿ ದಿಲ್ಲಿ ಯನ್ನು ತ್ಯಜಿಸಬೇಕೆಂದು ನಾನು ಹೇಳಿಲ್ಲವಲ್ಲ ? ಈಗ ಬೇಕಾದರೆ ಒಂದೆರಡು ತಿಂಗಳು ಹೋಗಿ ನೈನಿತಾಲದಲ್ಲಿ ವಿಶ್ರಮಿಸಬಹುದು. ಆದರೆ ತಮ್ಮಂಥ ಕಾರ್ಯಶಾಲಿಗಳನ್ನು ದಿಲ್ಲಿಯು ಹೀಗೆ ಕಳೆದುಕೊಳ್ಳಲಾರದು.

ರೋಹಿಣಿದೇವಿ : ವಿಶ್ ! ಇದೇನು ಹೇಳುತ್ತೀರಿ, ಕೋಸಲೇಂದ್ರಬಾಬು! ದಿಲ್ಲಿಗೆ ಎರವಾಗಬಾರದೆಂದು ನಾವು ವಿಶ್ವ ಪ್ರಯತ್ನ ಮಾಡಿದೆವು. ಆದರೆ ಈಗ ದಿಲ್ಲಿಯೇ ನಮ್ಮನ್ನು ಹೊರದೂಡುತ್ತಿದೆ. ನಾವು ಯಾರಿಗೂ ________________

ಅಂಕು ೩

೭೪

ಬೇಕಾಗಿಲ್ಲ. ಮೃಣಾಲಿನಿಯನ್ನು ನಾನು ಮಗಳಂತೆ ನೋಡುತ್ತೇನೆ. ತಾಯಿಯನ್ನು ಕಳೆದುಕೊಂಡ ಆಕೆಯೂ ನನ್ನನ್ನು ಪ್ರೀತಿಸುತ್ತಾಳೆ. ಆದರೆ ಆ ಮಾರ್ಕ್ಸ ತತ್ವಗಳಲ್ಲಿ ನನಗೆ ಶ್ರದ್ದೆ ಇರಬೇಕಲ್ಲ ? ಅದಕ್ಕಾಗಿ ಆಕೆಗೂ ನಾನು ಬರ್ಷಣವಾಗಿದ್ದೇನೆ ! ಅಲ್ಲವೆ, ಮೃಣಾಲಿನಿ ?( ಮೃಣಾಲಿನಿ ಉತ್ತರ ಕೊಡಲು ಹಿಂದೆ ಮುಂದೆ ನೋಡುವದನ್ನು ಕಂಡು ) ಇಷ್ಟೇಕೆ ಸುಮ್ಮನಿದ್ದೀ! ಇದೆಲ್ಲಿಯ ಮೌನವ್ರತ ?

ಕೋಸಲೇಂದ್ರ : ( ನಗುತ್ತ ) ಅತ್ತೆ-ಮಾವಂದಿರೆದುರಿಗೆ ಮಾತನಾಡಲು ಆಕೆ ನಾಚುತ್ತಾಳೆ.

ಕಾಂತಿಚಂದ್ರ: ರೋಹಿಣಿಜೀವಿ: { ( ಆಶ್ಚರ್ಯದಿಂದ ) ಅತ್ತೆ-ಮಾವಂದಿರು ? ಯಾರು ? ಮದುವೆ ಎಂದಾಯಿತು ? ಯಾರೊಡನೆ ? ನಮಗೆ ಗೊತ್ತೇ ಇಲ್ಲವಲ್ಲ !

ಕೋಸಲೇಂದ್ರ : ಇವರೇ ಆಕೆಯ ಅತ್ತೆ-ಮಾವಂದಿರು. ನಾನು ಅವರ ಮಾನಸಪುತ್ರ, ಮೃಣಾಲಿನಿ ನನ್ನ ವಧು, ಆದರೆ ಮದುವೆ ಇನ್ನೂ ಆಗುವದಿದೆ.

ರೋಹಿಣಿದೇವಿ: ಆಶ್ಚರ್ಯ ! ಪರಮಾಶ್ಚರ್ಯ !

ಕೋಸಲೇಂದ್ರ : ಇರಬೇಕು, ರೋಹಿಣಿದೇವಿಯವರೆ ! ಆ ವಿಷಯವನ್ನೆಲ್ಲ ಹಿಂದಿನಿಂದ ಮೃಣಾಲಿನಿ ಹೇಳುತ್ತಾಳೆ. ಆದರೆ ನಿಮ್ಮಿಬ್ಬರಲ್ಲಿ ನನ್ನದೊಂದು ಸೂಚನೆಯಿದೆ.

ಕಾಂತಿಚಂದ್ರ : ಏನು ಸೂಚನೆ, ಕೋಸಲೇಂದ್ರಬಾಬು ?

ಕೋಸಲೇಂದ್ರ : ಭಾರತದಲ್ಲಿಯ ಆಧ್ಯಾತ್ಮಿಕ ಕೇಂದ್ರಗಳು ಶಕ್ತಿಯ ಕೋಶಾಗಾರಗಳಾಗಿವೆ. ಕಿಶನ್ ಕಿಶೋರಜಿ ಅವರು ಪ್ರತಿವರ್ಷ ಕೆಲವು ತಿಂಗಳಾದರೂ ಇಂಥ ಕೇಂದ್ರಗಳಿಗೆ ಹೋಗಬೇಕೆಂದು ಗೊತ್ತು ಮಾಡಿದ್ದಾರೆ. ತಾವೂ ಅವರ ಜೊತೆಗೆ ಹೋಗಬಹುದು. ಆದರೆ ತಿರುಗಿ ಬಂದಾಗ ದೇಶದ ಭವಿತವ್ಯವನ್ನು ಬರೆಯಲು ಭಾರತದ ಲಲಾಟದಂತಿದ್ದ ಈ ದಿಲ್ಲಿಯಲ್ಲಿ ಆ ಶಕ್ತಿಯನ್ನು ತಾವು ಉಪಯೋಗಿಸಬೇಕು. ತನ್ನ ಗೌರವಕ್ಕೆ ತಕ್ಕ ಕಾರ್ಯಕ್ಷೇತ್ರವನ್ನು ನಾನಿಲ್ಲಿ ತಮಗೆ ಕಲ್ಪಿಸಬೇಕೆಂದಿದ್ದೇನೆ. ೭೪

ಯುಗಾಂತರ


ಕಾಂತಿಚಂದ್ರ : ( ಸಂತೋಷದ ಮುಗುಳುನಗೆಯಿ೦ದ ) ನಿಮ್ಮಂಥವರ ನೆರವು ದೊರೆತರೆ ಅದೇನು ಅಸಾಧ್ಯವಲ್ಲ.

ಕೋಸಲೇಂದ್ರ : ಕಿಶನ್ ಕಿಶೋರು ಮಾಡಬೇಕಾದುದನ್ನು ಮಾಡಿ ಅಚಿಂತ್ಯದ ಕಡೆಗೆ ತಿರುಗಿದ್ದಾರೆ. ಅಲ್ಲದೆ, ಇನ್ನೂ ಒಂದು ಕಾರಣವಿದೆ. ನೀವು ಒಬ್ಬರು ವಿರಕ್ತರಾದರೆ ರೋಹಿಣಿದೇವಿಯವರೇನು ಮಾಡಬೇಕು ? ಮಥುರೆಯ ಧರ್ಮಾಂಧತೆಗೆ ಬೇಸತ್ತು ಸಾರ್ವಜನಿಕ ಜೀವನದಲ್ಲಿ ಅವರು ತುಂಬ ಮನಸ್ಸು ಹಾಕಿದ್ದಾರೆ. ಅವರ ತೃಪ್ತಿಯೂ ಆಗಬೇಕಲ್ಲ ? ಆದರೆ ... ರೋಹಿಣಿದೇವಿಯವರೆ, ತಮ್ಮಲ್ಲಿಯೂ ನನ್ನದೊಂದು ಬಿನ್ನಹವಿದೆ.

ರೋಹಿಣಿದೇವಿ : ಅದೇನು, ಕೋಸಲೇಂದ್ರಬಾಬು ? ಎಲ್ಲರ ಹೃದ್ಗತವನ್ನು ನೀವು ಹೀಗೆ ನಿಮಿಷಮಾತ್ರದಲ್ಲಿ ತಿಳಿಯುವದನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ.

ಕೋಸಲೇಂದ್ರ : ( ನಗುತ್ತ ) ಹೇಳಲು ಒಂದು ನಿಮಿಷ ಹತ್ತಿದರೂ ತಿಳಿ ಯಲು ಕೆಲವು ಕಾಲ ಕಳೆದಿದ್ದೇನೆ, ರೋಹಿಣಿದೇವಿಯವರೆ, ನನ್ನ ಬಿನ್ನಹ ಇದು, ಈಗ ನೀವು ಮೃಣಾಲಿನಿಯನ್ನು ನೋಡಿದ್ದೀರಿ. ಈಕೆ ಮೊದಲಿನ ಮೃಣಾಲಿನಿಯೆ ? ಮಾತಿನ ಮಲ್ಲಳಾದ ಈಕೆ ಈಗ ಮೌನದ ಮಾದರಿ ಯಾಗಿಲ್ಲವೆ ?

ರೋಹಿಣಿದೇವಿ : ಹೌದು. ಅದನ್ನೇ ನಾನು ಕೇಳಬೇಕೆಂದಿದ್ದೆ, ತನಗೆ ಮದುವೆ ಬರ್ಷಣನೆಂದು ಮೃಣಾಲಿನಿ ಹೇಳುತ್ತಿದ್ದಳು. ಆದರೆ ಈಗ ಮದುವೆಯಾಗಲು ಮುಂದುವರಿದಿದ್ದಾಳೆ. ಒಂದೊಂದು ಮಾತಿಗೆ ಒಬ್ಬೊಬ್ಬರ ಮನಸ್ಸು ನೋಯಿಸುತ್ತಿದ್ದವಳು ಈಗ ಇನ್ನೊಬ್ಬರು ಕೆಣಕಿದರೂ ಮಾತನಾಡುವದಿಲ್ಲ. ಆಕೆಯ ರೀತಿಯಲ್ಲಿಯೇ ಒಂದು ಕ್ರಾಂತಿಯಾಗಿದೆ.

ಮೃಣಾಲಿನಿ : ( ನಗುತ್ತ ) ನಾನು ಮಾತನಾಡುವದಾದರೂ ಏನೆಂದು ! ನಾನು ಹೇಳಬಹುದಾದುದನ್ನು ಕೋಸಲೇಂದ್ರ ನನಗಿಂತ ಚೆನ್ನಾಗಿ ಹೇಳುತ್ತಿದ್ದಾನೆ. ನೀವೆಲ್ಲರೂ ನನ್ನನ್ನು ಕೆಣಕುವದನ್ನು ನೋಡಿ ನನಗೆ ಮಾತನಾಡಬೇಕೋ ಸುಮ್ಮನಿರಬೇಕೋ, ನಗಬೇಕೋ ಅಳಬೇಕೋ ತಿಳಿಯದಾಗಿದೆ. ________________

೭೫

ಅಂಕು ೩

ಕೋಸಲೇಂದ್ರ : ( ಮುಗುಳುನಗೆಯಿಂದ ) ಯಾವ ಕಾಲಕ್ಕೆ ಏನು ಮಾಡ ಬೇಕೆಂದು ಪ್ರೇರಣೆಯಾಗುವದೋ ಹಾಗೆ ಮಾಡು, ಮೃಣಾಲಿನಿ, ಆ ಪ್ರೇರಣೆ ನನ್ನ ಹೇಳಿಕೆಯನ್ನೇ ಸಮರ್ಥಿಸುವದು, ರೋಹಿಣಿದೇವಿಯರ. ಮೃಣಾಲಿನಿಯಲ್ಲಿ ಇನ್ನೂ ಒಂದು ಮಾರ್ಪಾಟಾಗಿದೆ. ಮೃಣಾಲಿನಿ ಈಗ ಕಾಮ್ರೆಡ್ ಮೃಣಾಲಿನಿಯಲ್ಲ: ಮಾರ್ಕ್ಸವಾದಿಯಾದ ಮೃಣಾಲಿನಿದೇವಿರೆ. ಮಾರ್ಕ್ಸನ ತತ್ವಗಳಲ್ಲಿ ಆಕೆಗೆ ಶ್ರದ್ದೆಯಿದೆ; ಆದರೆ ಆಕೆಯ ಮಾತು ರೀತಿಯಲ್ಲಿ ಭಾರತಕ್ಕೆ ಒಪ್ಪುವ ನಯವಿನಯವಿದೆ.

ರೋಹಿಣಿದೇವಿ : ನನಗೆ ಒಬ್ಬ ಮಗಳಿದ್ದರೆ ಹೇಗಿರಬೇಕೆಂದುಕೊಂಡಿದ್ದೆನೋ ತದ್ರೂಪ ಹಾಗೆ ಮೃಣಾಲಿನಿ ಇದ್ದಾಳೆ. ಮೃಣಾಲಿನಿಯ ನಾಲಗೆ ಬಲು ಚುರುಕು, ಅದು ಈಗ ಹದಕ್ಕೆ ಬಂದಿದೆ. ಆದರೆ ಆಕೆಯ ಈ ಮಾರ್ಕ್ಸ ತತ್ವಗಳು ..... ... ಕೋಸಲೇಂದ್ರ ( ನಕ್ಕು ) ಆ ತತ್ವಗಳಿಗೆ ನೀವು ಹೆದರುವ ಕಾರಣವಿಲ್ಲ, ರೋಹಿಣಿದೇವಿ ! ಆ ತತ್ವಗಳೊಡನೆ ಬೇರೆ ತತ್ವಗಳನ್ನೂ ಬೆರೆಸಲು ಮೃಣಾಲಿನಿಯು ಹವಣಿಸಿದ್ದಾಳೆ. ಒಮ್ಮೆ ಆಕೆಯಿಂದ ನೀವು ಪಾಠ ಹೇಳಿಸಿ ಕೊಳ್ಳಬೇಕು. ಆಗ ಆ ತತ್ವಗಳ ಬಗ್ಗೆ ನಿಮಗಿದ್ದ ಭಯವೂ ಹೋಗುವದು. ನಿಮ್ಮ ಮನಸ್ಸಿನಲ್ಲಿ ಪೂರ್ವಗ್ರಹವಿಲ್ಲವೆಂದು ಆಕೆಗೂ ಸಮಾಧಾನ ವಾಗುವದು.

ರೋಹಿಣಿದೇವಿ: ( ನಗುತ್ತ ) ಹಾಗೇ ಆಗಲಿ, ಕೋಸಲೇಂದ್ರಬಾಬು ! ಹಾಗಾದರೆ ನಮ್ಮೊಡನೆ ನೈನಿತಾಲಕ್ಕೆ ನೀವಿಬ್ಬರೂ ನಡೆಯಿರಿ. ಅಲ್ಲಿ ಪಾಠ ಸುರುವಾಗಲಿ.

ಕೋಸಲೇಂದ್ರ : ನಾವಿಬ್ಬರೇ ಏಕೆ ? ಕಿಶನ್ ಕಿಶೋರರೂ ರುಕ್ಮಿಣಿದೇವಿ ಯರೂ ಅಲ್ಲಿಗೆ ಬರುತ್ತಾರೆ. ನೀವು ಮಥುರೆಗಂತೂ ಹೋಗಿ ಬನ್ನಿರಿ.

ಮೃಣಾಲಿನಿ : ನನ್ನ ಬಗ್ಗೆ ರೋಹಿಣಿಬೆನ್ರಲ್ಲಿ ನೀನು ಮಾಡಿದ ಮಧ್ಯಸ್ತಿಕೆ "ಯನ್ನು ಒಪ್ಪಿದೆ, ಕೋಸಲೇಂದ್ರ, ಆದರೆ ಈ ಪಾಠ ಹೇಳುವ ಕೆಲಸವೇಕೆ? ( ತುಂಟು ನಗೆಯಿಂದ ) ನಾನು ಹೇಳುವ ರೀತಿ ನಿನಗೆ ಒಪ್ಪಿಗೆಯಾಗದಿದ್ದರೆ? ೭೬

ಯುಗಾಂತರ

ಕೋಸಲೇಂದ್ರ : ನೋಡೋಣ. ಅದನ್ನೆಲ್ಲ ಹಿಂದಿನಿಂದ ಸರಿಪಡಿಸಿಕೊಳ್ಳ ಬಹುದು. ರೋಹಿಣಿದೇವಿಯವರೆ, ಈ ಪಾಠದ ವಿಷಯ ನಿಮಗೆ ಒಪ್ಪಿಗೆಯಾಗಿದ್ದು ನನಗೆ ಸಂತೋಷ. ಇನ್ನು ಮುಂದೆ ವಿದ್ಯಾರ್ಥಿನಿಯರ ಸಂಘದಲ್ಲಿ, ಮಹಿಳಾಮಂಡಳದಲ್ಲಿ........

ಕಾಂತಿಚಂದ್ರ : ( ಆನಂದದಿಂದ ) ತಿಳಿಯಿತು, ಕೋಸಲೇಂದ್ರ ಬಾಬು ! ಕಿಶನ್ ಕಿಶೋರರನ್ನು ನೀವು ಹೇಗೋ ಹಾಗೆ ಮೃಣಾಲಿನಿ ನಮ್ಮನ್ನು ನೋಡಿಕೊಳ್ಳುತ್ತಾಳೆ,

ರೋಹಿಣಿದೇವಿ : ( ಉಲ್ಲಸಿತಳಾಗಿ ) ಹಾಗಾದರೆ ಈ ಮದುವೆ ನೈನಿತಾಲ ದಲ್ಲಿಯೇ ಆಗಿಬಿಡಲಿ, ಹುಡಿಗೆಯನ್ನು ಧಾರೆಯೆರೆದು ಕೊಡುವ ಅಧಿಕಾರ ನಮ್ಮದು.

ಕೋಸಲೇಂದ್ರ : ( ನಗುತ್ತ ) ಆಗಬಹುದು.

ರುಕ್ಮಿಣಿದೇವಿ : ಶುಭದ ಮೇಲೆ ಶುಭ, ದೇವರು ಕಡೆಗೊಮ್ಮೆ ನನ್ನ ಮೇಲೆ ಕಣ್ಣು ತೆರೆದ !
[ ಬನಸಿಲಾಲನು ಅವಸರದಿಂದ ಪ್ರವೇಶಿಸಿ ಮೂಲೆಯಲ್ಲಿಟ್ಟಿದ್ದ ತನ್ನ ಸಾಮಾನನ್ನು ಆಳುಮಗನಿಂದ ಹೊರಿಸಿಕೊಂಡು ಹೋಗಲು ಬರುತ್ತಾನೆ] 

ಕಿಶನ್ ಕಿಶೋರ : ಓಹೋ ! ತಮ್ಮ ಗಾಡಿಯ ವೇಳೆಯಾಯಿತೆಂದು ಕಾಣುತ್ತದೆ ! ಇಲ್ಲಿ ಸಾಮಾನು ಇಟ್ಟವರು ತಿರುಗಿ ಬಂದರು....ಯಾರವರು ? ಪರಿಚಿತರಂತೆ ಕಾಣುತ್ತದೆ. ಓಹೋ, ಕಾಂತಿಚಂದ್ರಜಿ ! ಬನಸಿಲಾಲ ! ಅಸಾಮಿ ಬಹಳ ಅವಸರದಲ್ಲಿದ್ದಂತೆ ಕಾಣುತ್ತದೆ.

[ ಎಲ್ಲರೂ ಅತ್ತ ಕಡೆಗೆ ನೋಡುತ್ತಾರೆ. ]

ಕಾಂತಿಚಂದ್ರ: ( ಸಾವಕಾಶವಾಗಿ ) ಅವನನ್ನು ಬರಿ ನೋಡಿದರೂ ಸಹ ನನ್ನ ತಲೆಗೆ ಪಿತ್ತವೇರುತ್ತದೆ.

ರೋಹಿಣಿದೇವಿ : ನಾನು ಹೆಂಗಸು, ಅವನ ಬಾಗಿಲ ವರೆಗೆ ಹೋಗಿ ಬೇಡಿ ಕೊಂಡೆ. ಆದರೂ ಆ ನೀಚ ತನ್ನ ಹಟ ಬಿಡಲಿಲ್ಲ. ________________

ಆಂಕು ೩

೭೭


ಕೋಸಲೇಂದ್ರ : ಇಂಥವರ ಬಾಗಿಲಿಗೆ ಹೋಗಬಾರದು, ರೋಹಿಣಿದೇವಿ ಯವರೆ. ಅವರೇ ನಮ್ಮ ಬಾಗಿಲಿಗೆ ಬರಬೇಕು. ಇನ್ನು ಬನಸಿಲಾಲರ ಮುಖವನ್ನು ಸ್ವಲ್ಪ ಪರೀಕ್ಷಿಸಿರಿ. ಅದು ಹೇಗೆ ಬದಲಾಗುವದೆಂದು ( ಗಟ್ಟಿಯಾಗಿ ) ಏನು, ಬನಸಿಲಾಲಜಿ ! ಬಹಳ ಅವಸರದಲ್ಲಿದ್ದಂತೆ ಕಾಣುತ್ತದೆ ? ನಮಸ್ತೆ ?

ಬನಸಿಲಾಲ : ( ತಿರುಗಿ ನೋಡಿ ) ಓಹೋ! ಕೋಸಲೇಂದ್ರಬಾಬು ! ನಮಸ್ತೆ! ( ಕಿಶನ್ ಕಿಶೋರ ದಂಪತಿಗಳನ್ನೂ ಕಾಂತಿಚಂದ್ರ ದಂಪತಿಗಳನ್ನೂ ನೋಡಿದವನೆ ನೊಣ ಕಡಿದವನಂತ ; ಓ ...ಓ...ಓ ...! ಕಾಮ್ರೆಡ್ ಮೃಣಾಲಿನಿಯವರೂ ಇದ್ದಾರೇನು ? ನಮಸ್ತೆ ! ಕ್ಷಮಿಸಿರಿ ! ( ಮುಂಗೈ ಗಡಿಯಾರ ನೋಡುತ್ತ ) ಗಾಡಿಯ ಹೊತ್ತಾಯಿತು.

ಕೋಸಲೇಂದ್ರ: ( ನಕ್ಕು ) ನಿಮ್ಮ ಗಾಡಿ ತಪ್ಪಿಸುವ ಇಚ್ಛೆಯಿಲ್ಲ ನನಗೆ, ಸೇಠಜಿ. ಆದರೆ ಒಂದೇ ಒಂದು ಮಾತು ತಿಳಿಸುವದಿತ್ತು. ಈಗ ನೀವು ಎಲ್ಲಿಗೆ ಹೊರಟಿದ್ದೀರಿ ನನಗೆ ಗೊತ್ತು, ಪಂಡಿತ ನೆಹರು ಹಾಗು ವಲ್ಲಭ ಭಾಯಿಯವರ ಬೇಟಿಗಲ್ಲವೆ ? ಅಲ್ಲಗಳೆಯುವದೇಕೆ ? ನೀವು ಇಲ್ಲವೆಂದು ತಲೆ ಹಾಕಿದರೂ ಹೌದೆಂದು ನಿಮ್ಮ ಕಣ್ಣು ಹೇಳುತ್ತವೆ. ಆದರೆ ಬರುವಾಗ ರಾಜೇಂದ್ರ ಬಾಬುಗಳನ್ನು ನಾನು ಗಾಡಿಯಲ್ಲಿ ಕಂಡೆ, ಅಸೆಂಬ್ಲಿಗೆ ದಿಲ್ಲಿಯ ಭಾಗದಿಂದ ಅಸಫ್ ಅಲಿಯವರನ್ನು ನಿಲ್ಲಿಸಬೇಕೆಂದು ಗೊತ್ತಾಗಿದೆ.

[ ಎಲ್ಲರೂ ವಿಜಯೋತ್ಸಾಹದಿಂದ ಬನಸಿಲಾಲನನ್ನು ನೋಡುತ್ತಾರೆ. ಅವನ ಮೊರೆಯು ಕಪ್ಪಿಡುತ್ತದೆ. ]

ಬನಸಿಲಾಲ : ಯಾರನ್ನು ?..ಅ....ಸ........ಫ್ ಅಲಿಯವರನ್ನೊ ?

ಕೋಸಲೇಂದ್ರ : ಹೌದು. ಇನ್ನು ನೀವು ನಿಮಗೆ ಬೇಕಾದ ಪಾರ್ಟಿಯಿಂದ ನಿಲ್ಲಬಹುದು. ಕಾಮ್ರೆಡ್ ಮೃಣಾಲಿನಿಯವರ ಸಹಾಯದಿಂದ ಅವರ ಮಾರ್ಕ್ಸ ತತ್ವಗಳನ್ನೊಪ್ಪಿ-ವೋಟು ದೊರಕಿಸಬಹುದೆಂದು ನೀವು ತಿಳಿವಿರಿ ಮತ್ತೆ ! ಅದು ಸಾಧ್ಯವಿಲ್ಲ. ಯಾಕೆ, ಮೃಣಾಲಿನಿ? ೭೮

ಯುಗಾಂತರ

ಮೃಣಾಲಿನಿ : ( ತುಂಟ ನಗೆಯಿಂದ ) ಬನಸಿಲಾಲರಿಗೆ ಜನರಿಂದ ವೋಟು ಬೀಳಲಿಕ್ಕಿಲ್ಲ; ಏಟು ಬೀಳಬಹುದು.

[ ಎಲ್ಲರೂ ನಗುತ್ತಾರೆ. ]

ರೋಹಿಣಿದೇವಿ : ಕೋಸಲೇಂದ್ರಬಾಬು, ಮೃಣಾಲಿನಿಯು ಮೌನವನ್ನು ಸಾಧಿಸಿರುವದೇನೋ ನಿಜ, ಆದರೆ ಆಕೆಯ ಮಾತಿನ ರೀತಿಯಲ್ಲಿ ಏನೂ ಬದಲಾವಣೆ ಕಾಣುವದಿಲ್ಲವಲ್ಲ?

ಕೋಸಲೇಂದ್ರ : ಮೊದಲಿನ ಖಾರ ಇನ್ನೂ ಉಳಿದಿರುವದು ನಿಜ, ಆದರೆ ಈಗ ಪ್ರಸಂಗಕ್ಕೆ ತಕ್ಕಂತೆ ಮಾತು ಬರುತ್ತಿದೆ, ರೋಹಿಣಿದೇವಿ, ಒಂದೇ ಪಡಿಯಚ್ಚಲ್ಲ ! ( ಬನಸಿಲಾಲನ ಕಡೆಗೆ ತಿರುಗಿ ) ಸೇಠಜಿ, ನಿನ್ನ ಗಾಡಿಯ ಹೊತ್ತಾಯಿತು. ನಿಮ್ಮ ಗಾಡಿ ತಪ್ಪಿಸುವ ಇಚ್ಛೆಯಿಲ್ಲ ನನಗೆ.

ಬನಸಿಲಾಲ : ಹ! ಹ ! ಹಾಗೇನೂ ಇಲ್ಲ ! ಆದರೆ ಈ ವಿಷಯದ ವಿವರ ಗಳು ಇನ್ನಿಷ್ಟು ತಿಳಿದರೆ.....

ಕೋಸಲೇಂದ್ರ : ನೀವು ಊರಿನಿಂದ ತಿರುಗಿ ಬಂದ ಮೇಲೆ ಮಾತ ನಾಡೋಣ.

ಬನಸಿಲಾಲ : ಹ ! ಹ ! ನಿಮ್ಮೊಡನೆ ಮಾತಾಡುವದೇ ಮಹತ್ವದ್ದು. ಗಾಡಿ ಇವತ್ತು ತಪ್ಪಿದರೆ ನಾಳೆ ಹತ್ತಿದರೂ ನಡೆದೀತು.

ಕೋಸಲೇಂದ್ರ : ( ನಗುತ್ತ ) ಹೀಗೋ ಹಾಗಾದರೆ ! ಇಂದು ರಾತ್ರಿ ನನ್ನ ಕೋಣೆಗೆ ಬನ್ನಿರಿ.

ಬನಸಿಲಾಲ : ಅವಶ್ಯವಾಗಿ ಬರುತ್ತೇನೆ. ನಮಸ್ತೆ ! ನಮಸ್ತೆ, ಮೃಣಾಲಿನಿ ದೇವಿ ! ಹ ! ಹ ಹ !

[ ಹೋಗುತ್ತಾನೆ, ]

ರೋಹಿಣಿದೇವಿ : ಒಳ್ಳೆಯ ಶಾಸನವಾಯಿತು. ಇಂಥವರಿಗೆ ಹೀಗೆಯೇ ಆಗಬೇಕು.

ಕಾಂತಿಚಂದ್ರ: ರಾತ್ರಿ ನಿಮ್ಮ ಕಡೆಗೆ ಬಂದಾಗ ಈ ನಾಗರಿಕ ಸರ್ಪಕ್ಕೆ ಏನು ಹೇಳುತ್ತೀರಿ, ಕೋಸಲೇಂದ್ರಬಾಬು ? ಇಂಥವರನ್ನು ನೋಡಿದಾಗ ________________

ಅಂಕು ೩
೭೯

ನನಗೆನಿಸುತ್ತದೆ: ಒಂದೊಂದು ಊರೂ ಇಂದಿಗೆ ಹಾವಿನ ಹುತ್ತಾಗಿದೆ ಎಂದು.

ಕಿಶನ್ ಕಿಶೋರ : ಹೌದು, ಜಗತ್ತೇ ಇಂಥವರ ಸರ್ಪಗಾವಲಿನಲ್ಲಿ ಸಿಕ್ಕಿದೆ.
ಕೋಸಲೇಂದ್ರ: ಅದು ನಿಜ. ಆದರೆ ಇಂಥವರಿಗೂ ಜಗತ್ತಿನಲ್ಲಿ ಸ್ಥಾನವಿದೆ. ಚಂದ್ರಮೌಳಿಯ ಆಭರಣಗಳಲ್ಲಿ ನಾಗವೂ ಒಂದು ಎಂಬುದನ್ನು ಮರೆಯ ಬೇಡಿರಿ. ಆದರೆ ದೇವರು ನಾಗಭೂಷಣನಾದಂತೆ ಗರುಡವಾಹನನೂ ಹೌದು, ಒಳಿತು-ಕೆಡಕಿನ ಈ ಚಿರಂತನ ಸಂಗ್ರಾಮದಲ್ಲಿ ಗರುಡಪಕ್ಷಿಗೆ ವಿಜಯವು ಕಟ್ಟಿಟ್ಟದ್ದು .

ರೋಹಿಣಿದೇವಿ : ಇದೆಲ್ಲ ನಿಮ್ಮ ಕಾವ್ಯವಾಯಿತು ಕೋಸಲೇಂದ್ರಬಾಬು ! ಅದನ್ನು ನಾನು ಒಪ್ಪುತ್ತೇನೆ. ಆದರೆ ಇಂದು ರಾತ್ರಿ ಆ ಮಹಾನುಭಾವನಿಗೆ ಏನು ಹೇಳುತ್ತೀರಿ ? ಅವನ್ನು ತಿಳಿಸಿರಿ.

ಕೋಸಲೇಂದ್ರ : ( ನಗುತ್ತ ) ಇಂದು ರಾತ್ರಿ, ಬನಸಿಲಾಲನು ಮಾಡಿದ ಮಹಾ ಕೃತ್ಯಗಳನ್ನೆಲ್ಲ ಅವನೆದುರಿಗೆ ವರ್ಣಿಸುತ್ತೇನೆ. ಹೀಗೆಯೇ ನಡೆದರೆ ನನ್ನ ಹಾಗು ಮೃಣಾಲಿನಿಯ ಸಹಾನುಭೂತಿ ಅವನಿಗೆ ಸಾಧ್ಯವಿಲ್ಲವೆಂದು ತಿಳಿಸುತ್ತೇನೆ. ತಿಳುವಳಿಕೆಯಿಂದ ಕ್ರಿಯಾಪೂರ್ಣವಾಗಿ ನಡೆದರೆ, ಸಮಾಜ ದಲ್ಲಿಯೂ ಸ್ಥಾನವಿದೆ; ಸಂಯುಕ್ತ ಪ್ರಾಂತದ ಅಸೆಂಬ್ಲಿಯಲ್ಲಿಯೂ ಸ್ಥಾನ ವಿದೆ, ಎಂದು ತಿಳಿಸುತ್ತೇನೆ. ಸಮಾಜದ ಸಫಲತೆಯಲ್ಲಿ ಅವನ ಸ್ವಾರ್ಥದ ಸಾಫಲ್ಯವೂ ಅಡಕವಾಗಿದ್ದರೆ, ಅವನಿಗೆ ಅದರಿಂದಲೇ ಸಮಾಧಾನವಾಗುತ್ತಿದ್ದರೆ ಅದಕ್ಕೆ ನಾವು ಅಡ್ಡಿ ಬರುವವರಲ್ಲ ಎಂದು ಹೇಳುತ್ತೇನೆ.

ರೋಹಿಣಿದೇವಿ : ಆಗಬಹುದು. ಇದು ನನಗೆ ಸಮ್ಮತ. ( ಮುಂಗೈ ಗಡಿ ಯಾರವನ್ನು ನೋಡುತ್ತ ) ಆಗಲಿ ಕೋಸಲೇಂದ್ರಬಾಬು ! ಇನ್ನು ನಾವು ಹೊರಡುತ್ತೇವೆ. ಬನಸಿಲಾಲ ಇಷ್ಟೆಲ್ಲ ಗಡಿಬಿಡಿ ಮಾಡಿದರೂ ಗಾಡೀ ತಪ್ಪಿಸಿ ಕೊಂಡ. ಇನ್ನು ನಾವು ಹೊರಡದಿದ್ದರೆ, ನಮಗೂ ಗಾಡಿ ಸಿಗಲಿಕ್ಕಿಲ್ಲ. ರುಕ್ಮಿಣಿದೇವಿಯವರೆ, ಇನ್ನೊಂದು ವಾರದಲ್ಲಿ ನಾವು ಮಥುರೆಯಿಂದ ೮೦

ಯುಗಾಂತರ

ವರುಳುತ್ತೇವೆ. ಆಗ ಎಲ್ಲರೂ ನೈನಿತಾಲಕ್ಕೆ ಹೋಗೋಣ. ಮೃಣಾಲಿನಿ, ನಿನ್ನ ಪುಸ್ತಕಗಳನ್ನು ತೆಗೆದುಕೊಂಡು ಬರಬೇಕು ನೀನು. ನನ್ನ ಪಾಠ ಅಲ್ಲಿ ಸುರುವಾಗಲಿ.

ಕಾಂತಿಚಂದ್ರ : ಕೋಸಲೇಂದ್ರಬಾಬು ! ನೀವು ನಿಮ್ಮ ಕವನ ಸಂಗ್ರಹ ಗಳನ್ನು ತನ್ನಿರಿ. ನಿಮ್ಮ ಮಾತನ್ನು ಕೇಳುವದೇ ಒಂದು ಸಮಾಧಾನ. ನಿಮ್ಮ ಕವಿತೆಗಳನ್ನು ಕೇಳಲು ಆತುರನಾಗಿದ್ದೇನೆ.

ರೋಹಿಣಿದೇವಿ : ಬರುತ್ತೇವೆ. ನಮಸ್ತೆ !
ಕಿಶನ್ ಕಿಶೋರ : ನಮಸ್ತೆ !
ರುಕ್ಮಿಣಿದೇವಿ : :

[ ತೆರೆ, ]

——

________________

ಅಂಕು ೩

ಪ್ರವೇಶ ೫

[ ಕೂಸಲೇಂದ್ರ ಮೃಣಾಲಿನಿಯವರ ಮನೆ, ಮೃಣಾಲಿನಿಯು ಕಸೂತಿ ಹಾಕುತ್ತ ಕುಳಿತಿರುತ್ತಾಳೆ. ಹತ್ತಿರ ಅರ್ಧ ತೆರೆದಿಟ್ಟ ಒಂದೆರಡು ಪುಸ್ತಕಗಳು ಟೇಬಲ್ಲಿನ ಮೇಲೆ ಬಿದ್ದಿರುತ್ತವೆ. ಆಗ ಹೊರಗಿನಿಂದ ನೆಹರು ಶರ್ಟು-ಜಾಕಿಟನಲ್ಲಿದ್ದ ಕೋಸಲೇಂದ್ರನು ಪ್ರವೇಶಿಸುತ್ತಾನೆ. ]


ಕೋಸಲೇಂದ್ರ : ( ಮೃಣಾಲಿನಿಯ ಎದುರು ( ಉಶ್' ಎಂದು ಸೋಫಾದ ಮೇಲೆ ಕೂಡುತ್ತ) ಏಕೆ ? ಒಬ್ಬಳೇ ಇದ್ದೀ, ಮೃಣಾಲಿನಿ ! ರುಕ್ಮಿಣಿದೇವಿ ಎಲ್ಲಿ ಹೋಗಿದ್ದಾರೆ ?

ಮೃಣಾಲಿನಿ : ( ಕಸೂತಿಯನ್ನು ಹೆಣೆಯುತ್ತ ) ರೋಹಿಣಿಬೆನ್' ಹಾಗು ಅವರೂ ಕೂಡಿ ಮಹಿಳಾ ಸಭೆಗೆ ಹೋಗಿದ್ದಾರೆ.

ಕೋಸಲೇಂದ್ರ : ನೀನಿಲ್ಲದೆ ? ನೀನಿಲ್ಲದೆ ಇಂಥ ಸಭೆ ಆಗುವದು ಹೇಗೆ ? ನೀನೇಕೆ ಹೋಗಿಲ್ಲ ?

ಮೃಣಾಲಿನಿ : ( ತುಸು ಕೆಳಗೆ ಮೋರೆಮಾಡಿ ) ಇಲ್ಲ.

ಕೋಸಲೇಂದ್ರ : ( ಸ್ಲಿಪರ್ ತೆಗೆದು ಜಾಕೀಟನ್ನು ತೆಗೆದಿಡುತ್ತ ) ಕಿಶನ್ ಕಿಶೋರರ ಪತ್ರ ಇವತ್ತಾದರೂ ಬಂದಿದೆಯೇ ?

ಮೃಣಾಲಿನಿ : ( ಟೇಬಲ್ಲಿನ ಮೇಲಿನ ಪತ್ರವನ್ನು ಕೈಚಾಚಿ ಕೊಟ್ಟು ) ಹೌದು, ಅವರೂ ಕಾಂತಿಚಂದ್ರರೂ ಕೂಡಿ ಇನ್ನು ಹದಿನೈದು ದಿನಗಳಲ್ಲಿ ಅರುಣಾ ಚಲದಿಂದ ತಿರುಗಿ ಬರುವದಾಗಿ ಬರೆದಿದ್ದಾರೆ.

ಕೋಸಲೇಂದ್ರ : ( ಪತ್ರವನ್ನು ಓದುತ್ತ ) ಇದೊಂದು ಒಳ್ಳೆಯವಾಯಿತು. ಬನಸಿಲಾಲರ ಸುದ್ದಿಯೇನು ? ಏನಾದರೂ ಹೇಳಿ ಕಳಿಸಿದ್ದರೋ ?

ಮೃಣಾಲಿನಿ : ಸಮತಾವಾದಿ ಪಕ್ಷದಿಂದ ಕಾಂತಿಚಂದ್ರರು ಚುನಾವಣೆಗೆ ನಿಲ್ಲುವದಿದ್ದರೆ ನಿಲ್ಲಲಿ; ಸಂಯುಕ್ತ ಪ್ರಾಂತದ ಅಸೆಂಬ್ಲಿಯಲ್ಲಿ ತಮಗೆ ಸ್ಥಾನ ಸಿಕ್ಕರೆ ಸಾಕು : ಎಂದು ಹೇಳಿ ಕಳಿಸಿದ್ದಾರೆ. ೮೨

ಯುಗಾಂತರ

ಕೋಸಲೇಂದ್ರ : ( ಕೋಣೆಯಲ್ಲಿ ತಿರುಗಾಡುತ್ತ ) ಆ ಮನುಷ್ಯ ಈಗ ಹಾದಿಗೆ ಬರಹತ್ತಿದ್ದಾನೆ. ಕಾಂಗ್ರೆಸಿನ ಸಮತಾಪ ಪ್ರಬಲವಾದಾಗ ಮಾತ್ರ ಅವನಿಗೆ ಬುದ್ದಿ ಬಂತು. ಅಲ್ಲವೆ, ಮೃಣಾಲಿನಿ ?

ಮೃಣಾಲಿನಿ : ( ಸುಮ್ಮನೆ ಕಸೂತಿಯ ಕಡೆಗೆ ನೋಡುತ್ತ ) ಹೂಂ.

ಕೋಸಲೇಂದ್ರ : ( ಗಾಬರಿಯಾಗಿ ಮೃಣಾಲಿನಿಯ ಎದುರಿಗೆ ನಿಂತು ದಿಟ್ಟಿಸಿ ನೋಡುತ್ತ) ಇದೇನು, ಮೃಣಾಲಿನಿ ! ಹಾಂ ! ಹೂಂ! ಎಂದಿಷ್ಟರ ಮೇಲೆಯೇ ಸಾಗಿಸುತ್ತಿದ್ದೀ ! ಮೈ ಯಲ್ಲಿ ಚೆನ್ನಾಗಿದೆಯ ?

ಮೃಣಾಲಿನಿ : ಹೂಂ.

ಕೋಸಲೇಂದ್ರ : ( ಗಾಬರಿಯಿಂದ ಆಕೆಯ ಪಕ್ಕದಲ್ಲಿ ಕುಳಿತು ) ಇಲ್ಲ, ನಿನ್ನ ಮೈಯಲ್ಲಿ ಸರಿಯಿಲ್ಲ. ಇಲ್ಲದಿದ್ದರೆ ನೀನು ಹೀಗೆ ಹೋಂಗೊಡುವದು ಸಾಧ್ಯವೇ ಇಲ್ಲ. ಡಾಕ್ಟರರನ್ನು ಕರೆಕಳಿಸುತ್ತೇನೆ.

( ಏಳುತ್ತಾನೆ. )

ಮೃಣಾಲಿನಿ : ಏನೂ ಇಲ್ಲ, ಕುಳಿತುಕೋ, ಕೋಸಲೇಂದ್ರ, ಉ ...ಶ್ ! ಅಂ !


ಕೋಸಲೇಂದ್ರ : ( ಗಾಬರಿಯಿಂದ ) ಇದೇನು, ಮೃಣಾಲಿನಿ ! ಎನೋ ಆಗಿದೆ ! ಓಂಪ್ರಕಾಶ.

( ಏಳುತ್ತಾನೆ. )

ಮೃಣಾಲಿನಿ : ( ವ್ಯಥೆಯಲ್ಲಿಯೂ ತುಸು ನಕ್ಕು ) ಏನೂ ಇಲ್ಲ, ಕೋಸಲೇಂದ್ರ ಕುಳಿತುಕೊ, ಕುಳಿತುಕೊಂಡರೆ ಹೇಳುತ್ತೇನೆ.

ಕೋಸಲೇಂದ್ರ : ( ಕುಳಿತು ಮೃಣಾಲಿನಿಯ ಕೈಹಿಡಿದು ) ಹೇಳು ಹಾಗಾದರೆ.

ಮೃಣಾಲಿನಿ: ವಾಂತಿಯಾಗುವ ಹಾಗಾಗಿ ಕೈ ಕಾಲು ಹರಿಯುತ್ತವೆ. ಕೋಸಲೇಂದ್ರ: ( ಗಾಬರಿಯಿಂದ ಎದ್ದು ) ಪಿತ್ತವಾಗಿರಬೇಕು. ಈಗ ಡಾಕ್ಟ ರೆಡೆಗೆ........


ಮೃಣಾಲನಿ : ( ತುಸು ನಕ್ಕು ಕೈ ಹಿಡಿದು ಕೋಸಲೇಂದ್ರನನ್ನು ಪಕ್ಕದಲ್ಲಿ ಕೂಡಿಸುತ್ತ ) ಡಾಕ್ಟರರು ಮನೆಗೆ ಬರುವ ಆವಶ್ಯಕತೆಯಿಲ್ಲ, ಕೋಸಲೇಂದ್ರ. ೮೩

ಆ೦ಕ ೩

ಇನ್ನೊಬ್ಬರು ಯಾರೋ ಇಲ್ಲಿಗೆ ಬರಬೇಕೆಂದಿದ್ದಾರೆ. ಅದಕ್ಕೆ ಹೀಗೆಲ್ಲ ಆಗುತ್ತಲಿದೆ.

ಕೋಸಲೇಂದ್ರ : ಯಾರು ? ಯಾರು ಬರುವವರಿದ್ದಾರೆ ?

ಮೃಣಾಲಿನಿ ! ( ತುಸು ನಕ್ಕು ) ಅವರ ಮೇಲೆ ಸಿಟ್ಟಿಗೆದ್ದೇನು ಪ್ರಯೋಜನ ? ನಿನಗೆ ಮಗನೋ ಮಗಳೋ ಹುಟ್ಟಿ ಬರಬೇಕಾಗಿದೆ, ಕೋಸಲೇಂದ್ರ, ಅದಕ್ಕಾಗಿ ನಾನು ಇಷ್ಟೆಲ್ಲ ತೊಂದರೆಪಡಬೇಕು.

ಕೋಸಲೇಂದ್ರ : ಓ.......ಹೊ! ಹೀಗೇನು ! ಮೊದಲೇ ಏಕೆ ಹೇಳಲಿಲ್ಲ, ಮೃಣಾಲಿನಿ. ನಾನು ಎಷ್ಟು ಗಾಬರಿಯಾಗಿದ್ದೆ. ( ತನ್ನ ಅಜ್ಞಾನಕ್ಕೆ ತಾನೇ ನಗುತ್ತಾನೆ. )

ಮೃಣಾಲಿನಿ : ( ನಕ್ಕು ) ನಾನು ಹೇಳುವದಕ್ಕಿಂತ ಮೊದಲೇ ನೀನು ಡಾಕ್ಟ ರೆಡೆಗೆ ಓಡಹತ್ತಿದರೆ ನಾನೇನು ಮಾಡಬೇಕು.

ಕೋಸಲೇಂದ್ರ : ಇದು ರುಕ್ಮಿಣಿದೇವಿಯರಿಗೆ ಗೊತ್ತಾಗಿದೆಯೇ, ಮೃಣಾಲಿನಿ. ಕೇಳಿದ ಕೂಡಲೆ ಅವರು ಕುಣಿದಾಡುವರು.

ಮೃಣಾಲಿನಿ : ಅವರು ಕುಣಿದಾಡುವದರಲ್ಲಿಯೇ ನಾನು ಒದ್ದಾಡುವ ಪ್ರಸಂಗ ಬಂದಿದೆ ಕೋಸಲೇಂದ್ರ. ನೀವು ಗಂಡಸರು ಬಲು ಸ್ವಾರ್ಥಿಗಳು, ಹೆಣ್ಣು ಮುಂದುವರಿದು ಸಮಾಜದಲ್ಲಿ ಕೆಲಸಮಾಡುವದು ನಿಮಗೆ ಸರಿಬರುವದಿಲ್ಲ

ಕೋಸಲೇಂದ್ರ : ಅದೇಕೆ, ಮೃಣಾಲಿನಿ.

ಮೃಣಾಲಿನಿ : ಏಕೆಂದರೇನು ? ಇನ್ನು ರುಕ್ಮಿಣಿದೇವಿಯವರ ಸಲುವಾಗಿ ಒಂಬತ್ತು ತಿಂಗಳ ನಾನು ಮನೆಯಲ್ಲಿ ಕೂಡಬೇಕು. ಇಲ್ಲದಿದ್ದರೆ ಸಭೆಗಳಿಗೆ ಹೋಗಿ ಮಾತನಾಡುವಾಗ ಈ ಪ್ರದರ್ಶನ ಮಾಡಲಿಕ್ಕಾದೀತೆ ! ರುಕ್ಮಿಣಿ ದೇವಿಯವರದೇನು ಹೋದೀತು ! ಎಲ್ಲರಂತೆ ವರ್ಷಕ್ಕೊಂದು ಹೆರೆಯುವ ಹೆಣ್ಣಾಗಿ ಸಣ್ಣ ಮರಿಗಳ ಗುಂಪನ್ನೇ ಬೆನ್ನು ಹಚ್ಚಿಕೊಂಡು ತಿಪ್ಪೆಯ ಮೇಲೆ ತಿರುಗಾಡುವ ಹೆಣ್ಣು ಗೋಳಿಯಂತೆ ಕೊಕ್ ! ಕೊಕ್ ! ಎಂದು ನಾನೂ ಕೊಕ್ಕರಿಸಿದರೆ ಅವರಿಗೆ ಬಹಳ ಸಂತೋಷ.

ಕೋಸಲೇಂದ್ರ: (ನಗು) ಆದರೆ ಒಂದು ಗಂಡು, ಒಂದು ಹೆಣ್ಣು , ಹೀಗೆ ಎರಡು ಮಗು ಬೇಕೆಂದು ನೀನೇ ಹೇಳಿರುವಿಯಲ್ಲ. ಕೆಲವು ವರ್ಷ ________________

ಯುಗಾಂತರ

ಗಳ ನಂತರ ಆಗುವದಕ್ಕಿಂತ ರುಕ್ಕಿಣಿದೇವಿಯವರ ಸಲುವಾಗಿ ಈಗ ಆಗಿ ಬಿಡಲಿ ಎಂದು ನಾನು ಹೇಳಿದ್ದು ನಿಜ, ಆದರೆ ಅದರಿಂದ ನಿನಗೇನು ಆತಂಕ ? ಸಾರ್ವಜನಿಕ ಜೀವನದಿಂದ ನಿಸರ್ಗವೇ ಕೆಲವು ತಿಂಗಳು ರಜೆ ಕೊಟ್ಟಿದ್ದಕ್ಕೆ ನೀನು ಆನಂದಪಡಬೇಕು. ನೀನು ಕೋಸಲೇಂದ್ರನಾಗಿ ನಾನೇ ಮೃಣಾಲಿನಿಯಾಗಿದ್ದರೆ ಆಯುಷ್ಯದಲ್ಲಿ ನಾವು ಲೆಕ್ಕ ಹಾಕಿದ್ದ ಈ ಎರಡು ದೊಡ್ಡ ರಜೆಗಳನ್ನು ನಾನು ಸಂತೋಷದಿಂದ ಸ್ವಾಗತಿಸುತ್ತಿದ್ದೆ.

ಮೃಣಾಲಿನಿ: ಹಾಗಾದರೆ ನನಗೊಂದು ಬಯಕೆಯಾಗಿದೆ, ಕೋಸಲೇಂದ್ರ ! ನೀನೇ ಮೃಣಾಲಿನಿಯಾಗು, ನಾನು ಕೋಸಲೇಂದ್ರನಾಗುತ್ತೇನೆ. ಈ ಎಲ್ಲ ಭಾರವನ್ನು ನಿನ್ನ ಮೇಲೆ ಹಾಕಿ ನಿಶ್ಚಿಂತಳಾಗಿರುತ್ತೇನೆ.

ಕೋಸಲೇಂದ್ರ : ( ನಗುತ್ತ ) ಹಾಗೆ ನಾವಿಬ್ಬರೂ ಅದಲುಬದಲಾಗದಿದ್ದರೆ ನಮ್ಮ ಪ್ರೀತಿ ಎಲ್ಲಿ ಕೂಡುತ್ತಿತ್ತು, ಮೃಣಾಲಿನಿ. ನಿನ್ನ ರಕ್ತ- ಮಾಂಸ ಬುದ್ದಿ -ಹೃದಯಗಳ ಭಾಗವಾಗಿ ಮುತ್ತಿನಂಥ ಒಬ್ಬ ಮಗನನ್ನು ಬೆಳೆಸಿ ಅವನ ಬುದ್ದಿ - ಒಲವುಗಳನ್ನು ತೆರೆದು ದೇಶಕ್ಕೆ ಅವನನ್ನು ಕಾಣಿಕೆಯಾಗಿ ಕೊಡುವದೆಂದರೆ ಕಡಿಮೆಯ ಸೇವೆಯೇನು ? ಮಾತೆಯಾಗುವದೆಂದರೆ, ಪೆನ್ಶನ್ ತೆಗೆದುಕೊಂಡಂತೆ ಎಂದು ನೀನೇಕೆ ತಿಳಿಯುತ್ತೆ !

ಮೃಣಾಲಿನಿ : ( ಪುಲಕಿತಳಾಗಿ) ಇದನ್ನು ಒಪ್ಪುತ್ತೇನೆ, ಕೋಸಲೇಂದ್ರ, ಒಮ್ಮೊಮ್ಮೆ ಹೀಗೆಯೇ ಧೇನಿಸುತ್ತ ಕುಳಿತಾಗ, ಅಣುವೊಂದು ಪಿಂಡವಾಗಿ ಒಂದು ಮೊಂಡ ಶಿಲೆಯ ಮೇಲೆ ಒಡಮೂಡಿದ ಮೂರ್ತಿಯಂತೆ ಆ ಪಿಂಡವೇ ಒಂದು ಮಗುವಾಗಿ ಮಾನವ ಪರಿಪೂರ್ಣ ವಿಕಸನವನ್ನೆಲ್ಲ ಪಡೆಯುವದೆಂದರೆ, ಅದೊಂದು ಮಹಾದ್ಭುತವಾಗಿ ಕಾಣುತ್ತದೆ. ಈ ಅದ್ಭುತದ ಪ್ರಯೋಗ ನಡೆದಿರುವ ಪ್ರಯೋಗಶಾಲೆ ನಾನು !.........ಆದರೆ, ಕೋಸಲೇಂದ್ರ ! ನಿನಗೆ ಪುತ್ರೋತ್ಸವವಾಗುವದೆಂದೇ ನೀನು ನಿರ್ಧರಿಸಿದಂತೆ ಕಾಣುತ್ತದೆ. ಮುತ್ತಿನಂತಹ ಮಗ, ಮಗ, ಎಂದು ಕನವರಿಸುತ್ತಿ, ಹುಟ್ಟಿದ ಮಗು ಹವಳದಂಥ ಮಗಳಾದರೇನು ಮಾಡುತ್ತೀ.

ಕೋಸಲೇಂದ್ರ : ನನ್ನಲ್ಲಿ ಅಂಥ ಪಕ್ಷಪಾತವೇನೂ ಇಲ್ಲ, ಮೃಣಾಲಿನಿ. . ಮಗಳು ಹುಟ್ಟಿದರೆ " ನಾನು ಫೇಡೆ ಹಂಚುತ್ತೇನೆ. ಮಗ ಹುಟ್ಟಿದರೆ

ಅಂಕು ೩

“ ನೀನು ಬರ್ಫಿ ” ಹಂಚು. ಈಗಾದರೂ ಆಯಿತೆ ?........ಒಟ್ಟಾರೆ ನೀನೇ ದೈವಶಾಲಿ, ಮೃಣಾಲಿನಿ ! ನೀನು ಬಯಸುವಂತೆ ನೀನೇ ಕೋಸಲೇಂದ್ರ ನಾಗಿದ್ದರೆ, ಅದೆಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು.

ಮೃಣಾಲಿನಿ : ಯಾವ ಸಮಸ್ಯೆಗಳು, ಕೋಸಲೇಂದ್ರ ?

ಕೋಸಲೇಂದ್ರ : ಒಂದೇ ! ಎರಡೇ ! ಈಗ ನೋಡು, ನಮ್ಮ ಸಾದಾಜೀವನ ರುಕ್ಮಿಣಿದೇವಿಯರಿಗೆ ಮನಸ್ಸು ಬರುವದಿಲ್ಲ. ಇದ್ದುದನ್ನೆಲ್ಲ ಬಡವರಿಗೆ ಕೊಟ್ಟು ಬಡವರಂತೆ ಬಾಳುವದರಲ್ಲಿ ಏನು ಸಾರ್ಥಕತೆಯಿದೆ ? ಎಂದು ಅವರು ಕೇಳುತ್ತಾರೆ.

ಮೃಣಾಲಿನಿ: ಅದರಲ್ಲೇನಿದೆ ? ಅವರ ಹಣಕ್ಕೆ ನಾವು ಕೈ ಹಾಕಿಲ್ಲವಲ್ಲ ? ನಮ್ಮ ಬರವಣಿಗೆಯಿಂದ ನಮ್ಮ ಜೀವಿತ ಸಾಗಿದೆ. ನೀನು ಇದನ್ನು ಸಮಸ್ಯೆಯೆಂದು ತಿಳಿಯಬೇಕಾಗಿಲ್ಲ, ಕೋಸಲೇಂದ್ರ, ರುಕ್ಮಿಣಿದೇವಿಯವರೊಡನೆ ನಾನು ಅದನ್ನೆಲ್ಲ ಸರಿಪಡಿಸುತ್ತೇನೆ.

ಕೋಸಲೇಂದ್ರ : ಇನ್ನು ದೇಶದ ಕಡೆಗೆ ಹೊರಳಿದರೆ, ಭಾರತವೇನೋ ಸ್ವತಂತ್ರವಾಗಿದೆ. ಆದರೆ ಅದರ ಅತಂತ್ರ ಸ್ಥಿತಿಮಾತ್ರ ಹಾಗೆಯೇ ಉಳಿದಿದೆ. ಅಜ್ಞಾನ, ದ್ವೇಷ, ಸ್ವಾರ್ಥ... ...

ಮೃಣಾಲಿನಿ : ಇದು ನಿನ್ನೊಬ್ಬನ ಸಮಸ್ಯೆಯಲ್ಲ. ಎಲ್ಲರ ಸಮಸ್ಯೆ, ಎಲ್ಲ ತ್ಯಾಗಕ್ಕೆ ಸಿದ್ಧರಾಗಿದ್ದೇವೆ. ಅದೇ ನಮ್ಮ ಸಮಾಧಾನ.

ಕೋಸಲೇಂದ್ರ : ಒಮ್ಮೊಮ್ಮೆ ನಾನು ಮಾಡುತ್ತಿರುವ ಈ ಸೇವೆಯನ್ನು ಸಹ ಮಂಜು ಕವಿಯುತ್ತಿದೆ. ಈ ಪೀಳಿಗೆಗಾಗಿ ಸಂಸ್ಥೆಗಳನ್ನು ಕಟ್ಟಬೇಕೋ ಇಲ್ಲವೆ ಒಟ್ಟು ಜನಾಂಗದ ಏಳಿಗೆಗಾಗಿ ಕವನಗಳನ್ನು ಕಟ್ಟಬೇಕೋ ? ಎರಡನ್ನೂ ಮಾಡಲು ಹೋಗಿ ಈ ಎರಡೂ ಕೆಲಸ ಅಪೂರ್ಣವಾಗುತ್ತವೆ.

ಮೃಣಾಲಿನಿ : ' ನಸುನಕ್ಕು ) ಒಮ್ಮೊಮ್ಮೆ ನನ್ನಂತಹ ಸಾಮಾನ್ಯರ ಬುದ್ದಿಯೂ ನಿನ್ನಂಥ ಪ್ರತಿಭಾಶಾಲಿಗಳಿಗೆ ಉಪಯೋಗವಾಗುವದು, ಕೋಸಲೇಂದ್ರ ! ವಿಚಾರಮಾಡು. ಈ ಎರಡೂ ಕೆಲಸಗಳ ಅಪೂರ್ಣತೆಯಲ್ಲಿಯೇ ನಿನ್ನ ಪೂರ್ಣತೆಯಿದೆ; ನಿನ್ನ ಜೀವಿತಕ್ಕೆ ಬೇಕಾದ ವೈಶಾಲ್ಯ ವಿದೆ. ವ್ಯಕ್ತಿತ್ವದ ತಿರುಳನ್ನೆಲ್ಲ ಜೀವಿತಕ್ಕೆ ತಿರುಗಿಸುವದೇ ಪೂರ್ಣತೆಯ ಕುರುಹು. ಇದನ್ನುಳಿದ ಪೂರ್ಣತೆ ಯಾವುದು ? ಕೋಸಲೇಂದ್ರ : ( ಸಂತುಷ್ಟನಾಗಿ ಮೃಣಾಲಿನಿಯ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ) ನನ್ನ ಜೀವನದಲ್ಲಿ ಇನ್ನೂ ಒಂದು ಪೂರ್ಣತೆ ಇದೆ. ಅದು ನಿನಗೆ ಗೊತ್ತಿದೆಯೇ ?

ಮೃಣಾಲಿನಿ : ಅದಾವುದು, ಕೋಸಲೇಂದ್ರ ?

ಕೋಸಲೇಂದ್ರ : ನಾನೂ ನೀನೂ ಬೆರೆತು ನಮ್ಮ ಈ ಚಿಕ್ಕ ಸಂಸಾರದ - ಅರ್ಧನಾರಿ ನಟೇಶ್ವರನಾಗಿರುವದು.

ಮೃಣಾಲಿನಿ : ( ತುಸುನಕ್ಕು ) ಆದೆಲ್ಲ ಕವಿಯಾದ ನಿನಗೇ ಗೊತ್ತು. ಮಾರ್ಕ್ಸವಾದಿಯಾದ ನಾನೇನು ಬಲ್ಲೆ.

ಕೋಸಲೇಂದ್ರ : ಆದರೆ ಈ ಮಾರ್ಕ್ಸವಾದಿಯೂ ಆಗೀಗ ನನ್ನ ಕವನಗಳನ್ನು ಓದುತ್ತಾಳಲ್ಲ.

ಮೃಣಾಲಿನಿ : (ನಕ್ಕು ) ಅದು ನಿಜ. ಓದಬೇಕೆಂದೇ ಕೈ ಹಿಡಿದಿದ್ದಾಳೆ.

ಕೋಸಲೇಂದ್ರ: ಮಾತಿನಲ್ಲಿ ನೀನೆಂದಿಗೂ ಸೋಲಲಿಲ್ಲ, ಮೃಣಾಲಿನಿ !.... ಎಲ್ಲಿ ನೋಡೋಣ, ಈಗ ನನಗೆ ಬಹಳ ಆಯಾಸವಾಗಿದೆ. ನನ್ನ ಒಂದು ಕವನವನ್ನು ನೀನು ಆಗೀಗ ಅಂದುಕೊಳ್ಳುತ್ತೀಯಲ್ಲ. ಅದನ್ನು ಹೇಳು, ಮೃಣಾಲಿನಿ ಕೇಳುತ್ತ ಸುಮ್ಮನೆ ಇಲ್ಲಿ ಒರಗಿರುತ್ತೇನೆ.

ಮೃಣಾಲಿನಿ : ಕವನವನ್ನು ಕಲ್ಪಿಸುವ ಹೃದಯ ನಿನ್ನದು, ಕೋಸಲೇಂದ್ರ, ಅದನ್ನು ನುಡಿಯುವ ಬಾಯಿ ನನ್ನದು. ಹೇಳುತ್ತೇನೆ. ಅದಕ್ಕೇನು ?

(ಕೋಸಲೇಂದ್ರನು ಕುಳಿತಲ್ಲಿಯೇ ಸೋಫಾದ ಮೇಲೆ ಹಿಂದಕ್ಕೆ ಕಣ್ಣು - ಚ್ಚಿಕೊಂಡು ಒರಗುತ್ತಾನೆ. ಅವನ ಮುಂಗುರುಳನ್ನು ತೀಡುತ್ತ ಮೃಣಾಲಿನಿಯು ಕವನವನ್ನು ಹೇಳುತ್ತಾಳೆ.)

ಒಂದು ಹೂವು, ಒಂದು ಹಣ್ಣು ;
ಅದನು ನೋಡುತ್ತಿರುವ ಕಣ್ಣು ;
ಕಣ್ಣರಳಿಸಿರುವ ಮನ;
ಮನವ ಮಾಗಿಸಿರುವ ಘನ;
ಇದೇ ಇದೇ ಜೀವನ.
ಎಂದೆಂದಿಗು ಪಾವನ.

ಒಂದು ದಿನ, ಒಂದು ಕ್ಷಣ;

ಕಾಲಶರಧಿಯೊಂದು ಕಣ;
ಅದರಲಿ ನವರಸದ ಛಂದ;
ರಸದಾಚೆಗೆ ಘನಾನಂದ;
ಇದೇ, ಇದೇ ಜೀವನ
ಎಂದೆಂದಿಗು ಪಾವನ.


ಸ್ಥಿರೆಯಲಿ ಜಂಗಮದ ಸುಳವು;
ಸುಳವಿನೊಣಾತುಮದ ಹೊಳವು;
ಸಂತತ ಸಂಭಾವನ
ಭವ್ಯ ದಿವ್ಯ: ಭಾವನಾ
ಇದೇ, ಇದೇ ಜೀವನ.
ಎಂದೆಂದಿಗು ಪಾವನ.

[ ತೆರೆ.]


ಮನೋಹರ ಗ್ರಂಥಮಾಲೆ ಧಾರವಾಡ
——:•:——
ನಿಮ್ಮ ಗ್ರಂಥಮಾಲೆಗೆ ವಾರ್ಷಿಕ ಚಂದಾಹಣ ಎಷ್ಟು?
–೫-೧೦-೦; ಇದರಲ್ಲಿ ಅಂಚೆವೆಚ್ಚವೂ ಸೇರಿದೆ.
ವರ್ಷಕ್ಕೆ ಎಷ್ಟು ಗ್ರಂಥಗಳನ್ನು ಸಲ್ಲಿಸುತ್ತೀರಿ?
— ೧೫೦ ಪುಟಗಳಂತೆ ಆರು ಕಂತುಗಳಲ್ಲಿ ಒಟ್ಟು ೯೦೦ ಪುಟಗಳನ್ನು ಒಂದು ವರ್ಷದಲ್ಲಿ ಸಲ್ಲಿಸುತ್ತೇವೆ. ಗ್ರಂಥಗಳು ಆರಾಗಬಹುದು, ಮೂರಾಗಬಹುದು, ಒಂದೇ ಆಗಬಹುದು.
ಯಾವ ಯಾವ ತಿಂಗಳುಗಳಲ್ಲಿ ಪ್ರಕಟಿಸುತ್ತೀರಿ?
— ಅಗಸ್ಟ, ಅಕ್ಟೋಬರ, ಡಿಸೆಂಬರ, ಫೆಬ್ರುವರಿ, ಎಪ್ರಿಲ್, ಜೂನ್.
ಗ್ರಂಥಮಾಲೆಯ ಹೊಸ ವರ್ಷ ಪ್ರಾರಂಭ ಯಾವಾಗ?
— ಅಗಸ್ಟದಿಂದ.
ಗ್ರಂಥಮಾಲೆಗೆ ಯಾವಾಗ ಬೇಕಾದಾಗ ಚಂದಾದಾರರನ್ನು ಮಾಡಿಕೊಳ್ಳುವಿರಾ?
— ಚಂದಾದಾರರನ್ನು ಯಾವಾಗ ಬೇಕಾದರೂ ಮಾಡಿಕೊಳ್ಳುತ್ತೇವೆ. ಆದರೆ ವರ್ಷ ಪ್ರಾರಂಭದಿಂದಲೇ ಚಂದಾದಾರರನ್ನು ಮಾಡಿಕೊಳ್ಳುತ್ತಿರುವುದರಿಂದ ಆ ವರ್ಷದಲ್ಲಿ ಅವಧಿಯೊಳಗಾಗಿ ಪ್ರಕಟವಾಗಿರುವ ಗ್ರಂಥಗಳನ್ನು ಹೊಸ ಗ್ರಾಹಕರು ತೆಗೆದುಕೊಳ್ಳಬೇಕಾಗುವುದು.
ಗ್ರಂಥಮಾಲೆಯ ಹಿಂದಿನ ಪುಸ್ತಕಗಳನ್ನೆಲ್ಲಾ ಚಂದಾ ಸವಲತ್ತಿನಲ್ಲಿಯೇ ಕೊಡುವಿರಾ?
— ಸಾಧ್ಯವಿಲ್ಲ. ಮುಖಬೆಲೆ ಕೊಟ್ಟು ಕೊಳ್ಳಬೇಕಾಗುವುದು.
ಚಂದಾಹಣ ಹೇಗೆ ಕಳುಹಿಸಬೇಕು?
— ಮನಿಯಾರ್ಡರದಿಂದ ಅಥವಾ ವ್ಹಿ.ಪಿ.ಯಿಂದ ತರಿಸಿಕೊಳ್ಳುಬಹುದು. ಚೆಕ್ಕುಗಳನ್ನು ಸ್ವೀಕರಿಸಲಾಗುವುದಿಲ್ಲ.
ಯಾವ ವಿಳಾಸಕ್ಕೆ ಕಳಿಸಬೇಕು.?
— ಕೆಳಗಿನ ವಿಳಾಸಕ್ಕೆ.
ಜಿ. ಬಿ. ಜೋಶಿ
ಮನೋಹರ ಗ್ರಂಥಮಾಲೆ ಧಾರವಾಡ
ಸದ್ಯಕ್ಕೆ ಮಾರಾಟಕ್ಕೆ ದೊರೆಯುವ
ಮನೋಹರ ಗ್ರಂಥಮಾಲೆಯ ಕುಸುಮಗಳು
ಕಾದಂಬರಿಗಳು
ಸುದರ್ಶನ[] ಆನಂದಕಂದ ೧-೮-೦
ರಾಜಯೋಗಿ[] " ೨-೦-೦
ಧರ್ಮಸೆರೆ ಜಡಭರತ ೨-೦-೦
ಇಜ್ಜೋಡು(೧ರಿಂದ ೩) ವಿ. ಕೃ. ಗೋಕಾಕ ೬-೪-೦
ಮಹಾಪೂರ[] ಎಸ್. ಜಿ. ಕುಲಕರ್ಣಿ ೧-೦-೦
ಸಂಧ್ಯಾರಾಗ[] ಅ. ನ. ಕೃಷ್ಣರಾಯ ೨-೦-೦
ಮಂಗಳಸೂತ್ರ[] " ೨-೮-೦
ನಟಸಾರ್ವಭೌಮ " ೫-೦-೦
ಭಾರತಮಾರ್ಗ ಗು.ಭಿ.ಜೋಶೀ ೩-೦-೦
೧೦ ಮರಳಿ ಮಣ್ಣಿಗೆ[] ಕೋ.ಶಿ. ಕಾರಂತ ೪-೮-೦
೧೧ ಬೆಟ್ಟದ ಜೀವ " ೨-೦-೦
೧೨ ಸರಸಮ್ಮನ ಸಮಾಧಿ[] " ೧-೮-೦
೧೩ ಚಕ್ರದೃಷ್ಟಿ ನಾ. ಕಸ್ತೂರಿ ೧-೮-೦
೧೪ ಮಲಮಗಳು[] ರಾ, ವೆಂ. ಶ್ರೀ. ೧-೧೨-೦
೧೫ ನಿಸರ್ಗ ಮಿರ್ಜಿ ಅಣ್ಣಾರಾಯ ೩-೮-೦
೧೬ ಅನಂತ ಸತ್ಯಬೋಧ ೧-೪-೦
೧೭ ಭಗ್ನ ಮಂದಿರ ಹೇಮಂತ ೪-೮-೦
೧೮ ದೇವತಾಮನುಷ್ಯ ಕೆ. ಶಂಕರಭಟ್ಟ ೨-೧೨-೦
ಸಣ್ಣ ಕತೆಗಳು ಮತ್ತು ಹರಟೆಗಳು
ಪುಷ್ಪಮಾಲೆ[] ಶ್ರೀಸ್ವಾಮಿ ೧-೪-೦
ಸುಳುವು ಹೊಳವು ಬೇರೆ ಬೇರೆಯವರು ೧-೮-೦

  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ ೧.೭ ೧.೮ * ಈ ಗುರುತಿನ ಗ್ರಂಥಗಳ ಎರಡನೆಯ ಆವೃತ್ತಿಗಳನ್ನು ಬೇರೆಯವರು ಪ್ರಕಟಿಸಿದ್ದಾರೆ.

-೨-

ಕಾದಂಬರಿಗಳು
ಮಾರ್ಗದರ್ಶಕ[] ಎಂ ವೀ.ಸೀ. ೧-೮-೦
ಕೆನ್ಸಿಂಗ್ಟನ್ ಪಾರ್ಕ ಕೆ. ಗೋಪಾಲಕೃಷ್ಣ ೧-೮-೦
ನಾಟಕ ಮತ್ತು ಏಕಾಂಕಗಳು
ಜಯಶ್ರೀ ಚಿ. ಸದಾಶಿವಯ್ಯ ೨-೪-೦
ತೆನ್ನಾಲಿ ರಾಮಕೃಷ್ಣ ಸಿ. ಕೆ. ವೆಂಕಟರಾಮಯ್ಯ ೧-೪-೦
ಮಿಂಚಿನ ಹುಡಿ ಕೃಷ್ಣ ಕುಮಾರ ೨-೮-೦
ಎತ್ತಿದ ಕೈ ರಂ. ಶ್ರೀ. ಮುಗಳಿ ೧-೧೪-೦
ಯುಗಾಂತರ ವಿ. ಕೃ. ಗೋಕಾಕ ೦-೧೨-೦
ಆಶುನಾಟಕಗಳು ಬೇರೆ ಬೇರೆಯವರು ೦-೧೨-೦
ವಿಮರ್ಶಕ ವೈದ್ಯ ವಿ. ಕೃ. ಗೋಕಾಕ ೦-೬-೦
ಕವನಸಂಗ್ರಹಗಳು
ಸಖೀಗೀತ[] ಅಂಬಿಕಾತನಯದತ್ತ ೧-೮-೦
ಬಾಸಿಗ ರಂ. ಶ್ರೀ. ಮುಗಳಿ ೧-೪-೦
ಸಮುದ್ರಗೀತಗಳು ವಿ. ಕೃ. ಗೋಕಾಕ ೧-೪-೦
ವಿಮರ್ಶಕ ಗ್ರಂಥಗಳು
ಸಾಹಿತ್ಯ ಸಂಶೋಧನ ದ. ರಾ. ಬೇಂದ್ರೆ ೨-೮-೦
ದತ್ತವಾಣಿ ಮಿರ್ಜಿ ಅಣ್ಣಾರಾಯ ೧-೪-೧
ಇತರ ಪ್ರಕಟಣೆಗಳು
ಬಿಡುಗಡೆಯ ಬೆಲೆ[] ಅಶ್ವಥನಾರಾಯಣರಾವ ೧-೮-೦
ಯುಗಪ್ರವರ್ತಕ ಬಸವಣ್ಣ ಚಿಂತಾಮಣಿ ೧-೦-೦
ವಾಸುದೇವ ಸಾಹಿತ್ಯ
ನಲದಮಯಂತಿ (ನಾಟಕ) ೧-೮-೦
ಔರಂಗಜೇಬ (ಕಾದಂಬರಿ) ೩-೦-೦

  1. ೧.೦ ೧.೧ ೧.೨ * ಈ ಗುರುತಿನ ಗ್ರಂಥಗಳ ಎರಡನೆಯ ಆವೃತ್ತಿಗಳನ್ನು ಬೇರೆಯವರು ಪ್ರಕಟಿಸಿದ್ದಾರೆ.
ಮನೋಹರ ಗ್ರಂಥಮಾಲೆಯಲ್ಲಿ ಅರಳಿದ ಕುಸುಮಗಳು
ವಾಸುದೇವ ಸಾಹಿತ್ಯ
ಸುದರ್ಶನ ೧ ಆನಂದಕಂದ ೧-೮-೦
ನವಿಲುಗರಿ[] ಬೇರೆ ಬೇರೆಯವರು (ಮುಗಿದಿವೆ)
ತ್ರಿಪುರ ದಹನ[] ದೊರೆಸ್ವಾಮಿ ಅಯ್ಯಂಗಾರ "
ಬಾಳುರಿ[] ರಂ. ಶ್ರೀ. ಮುಗಳಿ "
ಬ್ರಾಹ್ಮಣರ ಹುಡುಗಿ[] ಆರ್. ವ್ಯಾಸರಾವ್ "
೬-೭ ವಿಶ್ವಾಮಿತ್ರನ ಸೃಷ್ಟಿ[] ಶ್ರೀರಂಗ "
ಜೀವನ[] ಕೃಷ್ಣ ಕುಮಾರ "
ಕಾಳರಾತ್ರಿ[] ಮಧುರಚೆನ್ನ "
೧೦ ಧರ್ಮಸೆರೆ ಜಡಭರತ ೨-೦-೦
೧೧ ರಾಜಯೋಗಿ ೨ ಆನಂದಕಂದ ೨-೦-೦
೧೨ ಕೋಲ್ಮಿಂಚು[] ಬೇರೆ ಬೇರೆಯವರು (ಮುಗಿದಿವೆ)
೧೩-೧೪ ಇಜ್ಜೋಡು ವಿ. ಕೃ. ಗೋಕಾಕ ೨-೧೦-೦
೧೫ ಕುರಿಹಿಂಡು[] ಜಲಧರ (ಮುಗಿದಿವೆ)
೧೬ ಧೂಮಕೇತು[] ಕೆ. ಶಂಕರಭಟ್ಟರು "
೧೭ ಧರ್ಮಜ್ಯೋತಿ[] ದೊರೆಸ್ವಾಮಿ ಅಯ್ಯಂಗಾರ "
೧೮ ಸೇವಾಪ್ರದೀಪ[] ರಂ. ಶ್ರೀ. ಮುಗಳಿ "
೧೯ ದಿಲ್ಲೀಶ್ವರನ ದಿನಚರಿ[] ನಾ. ಕಸ್ತೂರಿ "
೨೦ ಪುಷ್ಪ ಮಾಲೆ ೩ ಶ್ರೀ ಸ್ವಾಮಿ ೧-೪-೦

  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ * ಈ ಗುರುತಿನ ಪುಸ್ತಕಗಳ ಪ್ರತಿಗಳು ತೀರಿವೆ.

-೪-

೨೧ ಸೋಲೋ ಗೆಲುವೋ[] ದೇವುಡು (ಮುಗಿದಿವೆ)
೨೨ ಹಳ್ಳಿಯ ಸಮಾಜ[] ಆರ್. ವ್ಯಾಸರಾವ್ "
೨೩ ಪಾವನ ಪಾವಕ[] ರಂ. ಶ್ರೀ. ಮುಗಳಿ "
೨೪ ಸಮುದ್ರದಾಚೆಯಿಂದ[] ವಿ. ಕೃ. ಗೋಕಾಕ "
೨೫ ಸರಸಮ್ಮನ ಸಮಾಧಿ[] ಕೋ. ಶಿ. ಕಾರಂತ ೧-೮-೦
೨೬-೨೭ ಎರಡು ಧ್ರುವ[] ವಿ.ಎಂ.ಇನಾಮದಾರ "
೨೮ ಸಮುದ್ರದಾಚೆಯಿಂದ[] ವಿ. ಕೃ. ಗೋಕಾಕ "
೨೯ ಹೂಬಾಣಗಳು[] ಪ. ರಮಾನಂದ "
೩೦ ಮಹಾಪೂರ ೫ ಎಸ್. ಜಿ. ಕುಲಕರ್ಣಿ ೧-೦-೦
೩೧ ಸಂಧ್ಯಾರಾಗ ೬ ಅ. ನ. ಕೃಷ್ಣರಾಯ ೨-೦-೦
೩೨-೩೩ ಪ್ರೇಮಾಹುತಿ[] ಗು. ಭೀ. ಜೋಶಿ (ಮುಗಿದಿವೆ)
೩೪ ಜನನಾಯಕ[] ವಿ. ಕೃ. ಗೋಕಾಕ (ಮುಗಿದಿವೆ)
೩೫ ಸುಳುವು ಹೊಳವು ಬೇರೆ ಬೇರೆಯವರು ೧-೮-೦
೩೬ ಕಾರಣಪುರುಷ[] ರಂ. ಶ್ರೀ. ಮುಗಳಿ (ಮುಗಿದಿವೆ)
೩೭ ಹತ್ತು ವರುಷ[] ಜಿ. ಪಿ. ರಾಜರತ್ನಂ "
೩೮ ತುಟಿ ಮೀರಿದುದು[] ರಾ. ಶಿ. "
೩೯-೪೦ ಭಾರತ ಮಾರ್ಗ ಗು. ಭೀ. ಜೋಶಿ ೩-೦-೦
೪೧ ಗ್ರಾಮ ಪಂಚಾನನ[] ಬಾ.ಕೃ. ಲಕ್ಷ್ಮೇಶ್ವರ (ಮುಗಿದಿವೆ)
೪೨ ಮಾರ್ಗದರ್ಶಕ ೭ ಎಂ. ವಿ. ಸೀತಾರಾಮಯ್ಯ ೧-೮-೦
೪೩ ಗಾಳಿಗೋಪುರ[] ನಾ. ಕಸ್ತೂರಿ (ಮುಗಿದಿವೆ)
೪೪-೪೫ ಮಂಗಳ ಸೂತ್ರ ೮ ಅ. ನ. ಕೃಷ್ಣರಾಯ ೨-೮-೦
೪೬ ಬಿಡುಗಡೆಯ ಬೆಲೆ ೯ ಅಶ್ವಥನಾರಾಯಣ ೧-೮-೦
೪೭-೪೮ ವೈಯಾರಿ[] ಗೊರೂರ (ಮುಗಿದಿವೆ)
೪೯-೫೦-೫೧-೫೨ ಮರಳಿ ಮಣ್ಣಿಗೆ೧೦ ಕೋ.ಶಿ. ಕಾರಂತ (ಮುಗಿದಿವೆ)
೫೩ ಭರಮಪ್ಪನ ಭೂತ[] ಶ್ರೀರಂಗ "
೫೪ ಜಯಶ್ರೀ ಚಿ. ಸದಾಶಿವಯ್ಯ ೨-೪-೦

  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ ೧.೧೪ ೧.೧೫ ೧.೧೬ * ಈ ಗುರುತಿನ ಪುಸ್ತಕಗಳ ಪ್ರತಿಗಳು ತೀರಿವೆ.

--೫--

೫೫ ಪಚ್ಚೇ ಉಂಗುರ[] ಎಂ. ಜಿ. ವೆಂಕಟೇಶಯ್ಯ (ಮುಗಿದಿವೆ)
೫೬ ಮೇಡಂಕ್ಯೂರಿ[] ಕೆ. ವಿ. ರತ್ನಮ್ಮ "
೫೭ ಮೋಡಗಳು[] ಶ್ರೀಸ್ವಾಮಿ "
೫೮ ತೆನ್ನಾಲಿ ರಾಮಕೃಷ್ಣ ಸಿ. ಕೆ. ವೆಂಕಟರಾಮಯ್ಯ ೧-೪-೦
೫೯-೬೦ ಬೆಟ್ಟದ ಜೀವ ೧೧ ಕೋ .ಶಿ. ಕಾರಂತ ೨-೦-೦
೬೧ ಹೂವಿನ ಹಾಸಿಗೆ[] ಹೊಯಿಸಳ (ಮುಗಿದಿವೆ)
೬೨ ಕನಸಿನ ಕೆಳದಿ[] ರಂ. ಶ್ರೀ. ಮುಗಳಿ "
೬೩ ಕೆನ್ಸಿಂಗ್ಟನ್ ಪಾರ್ಕ ಕೆ. ಗೋಪಾಲಕೃಷ್ಣ ೧-೮-೦
೬೪ ಚಕ್ರದೃಷ್ಟಿ ನಾ. ಕಸ್ತೂರಿ ೧-೮-೦
೬೫-೬೬ ಮಿಂಚಿನ ಹುಡಿ ಕೃಷ್ಣ ಕುಮಾರ ೨-೮-೦
೬೭ ನಕ್ಕಳಾತಾಯಿ[] ಜಿ. ಪಿ. ರಾಜರತ್ನಂ (ಮುಗಿದಿವೆ)
೬೮ ಮಲಮಗಳು ೧೨ ರಾ.ವೆಂ. ಶ್ರೀನಿವಾಸ ೧-೧೨-೦
೬೯ ನಟಸಾರ್ವಭೌಮ(ಭಾಗ ೧) ಅ. ನ. ಕೃಷ್ಣರಾಯ ೧-೧೦-೦
೭೦ ಇಜ್ಜೋಡು(ಭಾಗ ೨) ವಿ. ಕೃ. ಗೋಕಾಕ ೧-೧೦-೦
೭೧-೭೨ ನಿಸರ್ಗ ಮಿರಜಿ ಅಣ್ಣಾರಾಯ ೩-೮-೦
೭೩ ಅನಂತ ಸತ್ಯಬೋಧ ೧-೪-೦
೭೪-೭೫ ನಟಸಾರ್ವಭೌಮ (ಭಾಗ ೨-೩) ಅ.ನ ಕೃಷ್ಣರಾಯ ೩-೬-೦
೭೬-೭೭ ಇಜ್ಜೋಡು (ಭಾಗ ೩) ವಿ. ಕೃ. ಗೋಕಾಕ ೨-೦-೦
೭೮ ಎತ್ತಿದ ಕೈ ರಂ. ಶ್ರೀ, ಮುಗಳಿ ೧-೧೪-೦
೭೯-೮೦ ಭಗ್ನ ಮಂದಿರ ಹೇಮಂತ ೪- ೮-೦
೮೧-೮೨ ದೇವತಾ ಮನುಷ್ಯ ಕೆ. ಶಂಕರಭಟ್ಟರು. ೨-೧೨-೦
೮೩ ಯುಗಾಂತರ ವಿ. ಕೃ ಗೋಕಾಕ, ೦-೧೨-೦
೮೪ ತಾಯಿ ಕೃಷ್ಣ ಕುಮಾರ (ಅಚ್ಚಿನಲ್ಲಿ)
೮೫-೮೬-೮೭ ಅನ್ನ ರಂ. ಶ್ರೀ. ಮುಗಳಿ "
೮೮-೮೯-೯೦-೯೧-೯೨ ರಾಷ್ಟ್ರಪುರುಷ ಮಿರ್ಜಿ ಅಣ್ಣಾರಾಯ "

  1. ೧.೦ ೧.೧ ೧.೨ ೧.೩ ೧.೪ ೧.೫ * ಈ ಗುರುತಿನ ಪುಸ್ತಕಗಳ ಪ್ರತಿಗಳು ತೀರಿವೆ.
ಬಿಡಿ ಮುತ್ತುಗಳು
ಕಾದಂಬರಿಗಳು
ಸಖಿಗೀತ೧೨ ಅಂಬಿಕಾತನಯದತ್ತ ೧-೮-೦
ಸಾಹಿತ್ಯ ಸಂಶೋಧನ " ೨-೮-೦
ನಿರಾಭರಣ ಸುಂದರಿ[] " (ಮುಗಿದಿದೆ)
ಬಾಸಿಗ ರಂ.ಶ್ರೀ. ಮುಗಳಿ ೧-೪-೦
ಸಮುದ್ರಗೀತಗಳು ವಿ. ಕೃ. ಗೋಕಾಕ ೧-೪-೦
ಆಶುನಾಟಕಗಳು ಬೇರೆ ಬೇರೆಯವರು ೦-೧೨-೦
ಯುಗಪ್ರವರ್ತಕ ಬಸವಣ್ಣ (ಚರಿತ್ರ) ಚಿಂತಾಮಣಿ ೧-೦-೦
ನಲದಮಯಂತಿ ಕೆರೂರ ವಾಸುದೇವಾಚಾರ್ ೧-೮-೦
ಔರಂಗಜೇಬ (ಕಾದಂಬರಿ) " ೩-೦-೦
೧೦ ದತ್ತವಾಣಿ (ವಿಮರ್ಶೆ) ಮಿರ್ಜಿ ಅಣ್ಣಾರಾಯ ೧-೪-೦
೧೧ ವಿಮರ್ಶಕ ವೈದ್ಯ ವಿ.ಕೃ. ಗೋಕಾಕ ೦-೬-೦

ಅಂಕಿಗಳಿಂದ ಗುರುತಿಸಿದ ಗ್ರಂಥಗಳ ಮೊದಲನೆ ಆವೃತ್ತಿ ನಮ್ಮ ಗ್ರಂಥಮಾಲೆಯಲ್ಲಿ ಪ್ರಕಟವಾಗಿ ಮುಂದಿನ ಆವೃತ್ತಿಗಳು ಬೇರೆ ಪ್ರಕಾಶಕರಿಂದ ಪ್ರಕಟಿಸಲ್ಪಟ್ಟಿವೆ.

ಸುದರ್ಶನ ಆನಂದಕಂದ ೧-೮-೦
ರಾಜಯೋಗಿ " ೨-೦-೦
ಪುಷ್ಪಮಾಲೆ ಶ್ರೀಸ್ವಾಮಿ ೧-೪-೦
ಮಹಾಪೂರ ಎಸ್. ಜಿ. ಕುಲಕರ್ಣಿ ೧-೦-೦
ಸಂಧ್ಯಾರಾಗ ಅ. ನ. ಕೃಷ್ಣರಾಯ ೨-೦-೦
ಮಾರ್ಗದರ್ಶಕ ಎಂ.ವಿ.ಸೀ. ೧-೮-೦

  1. * ಈ ಗುರುತಿನ ಪುಸ್ತಕಗಳ ಪ್ರತಿಗಳು ತೀರಿವೆ.
ಮಂಗಳಸೂತ್ರ ಅ. ನ. ಕೃಷ್ಣರಾಯ ೨-೮-೦
ಬಿಡುಗಡೆಯ ಬೆಲೆ ಅಶ್ವಥನಾರಾಯಣರಾವ ೧-೮-೦
ಮರಳಿ ಮಣ್ಣಿಗೆ ಕಾರಂತ ೪-೮-೦
೧೦ ಬೆಟ್ಟದ ಜೀವ " ೨-೦-೦
೧೧ ಸರಸಮ್ಮನ ಸಮಾಧಿ " ೧-೮-೦
೧೨ ಮಲಮಗಳು ರಾ.ವೆಂ.ಶ್ರೀ. ೧-೧೨-೦
೧೩ ಸಖಿ ಗೀತ ಅಂಬಿಕಾತನಯದತ್ತ ೧-೮-೦


ಮನೋಹರ ಗ್ರಂಥಮಾಲೆಯಿಂದ ಬೇಗನ ಪ್ರಕಟವಾಗಲಿರುವ
ಎರಡನೆಯ ಆವೃತ್ತಿಗಳು
ಕುರಿಹಿಂಡು ಜಲಧರ
ಬಾಳುರಿ ರಂ .ಶ್ರೀ. ಮುಗಳಿ
ಕಾರಣ ಪುರುಷ "
ಪಾವನ ಪಾವಕ "
ಕನಸಿನ ಕೆಳದಿ "
ಸಮುದ್ರದಾಚೆಯಿಂದ ವಿ. ಕೃ. ಗೋಕಾಕ
ಜನನಾಯಕ "
ಹೂಬಾಣಗಳು ಪರಮಾನಂದ
ತುಟಿಮೀರಿದುದು ರಾ. ಶಿ.
೧೦ ನವಿಲುಗರಿ ಬೇರೆ ಬೇರೆಯವರು
೧೧ ಕೋಲ್ಮಿಂಚು "

"https://kn.wikisource.org/w/index.php?title=ಯುಗಾಂತರ&oldid=273207" ಇಂದ ಪಡೆಯಲ್ಪಟ್ಟಿದೆ