ವಿಷಯಕ್ಕೆ ಹೋಗು

ಸುಶೀಲೆ

ವಿಕಿಸೋರ್ಸ್ದಿಂದ

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

ಸುಶೀಲೆ (1922)
ಶ್ರೀಮತಿ ತಿರುಮಲಾಂಬಾ, edited by Srimati Tirumalamba

Nanjangud: Hitaishini Matru Mandira, pages ಮೊದಲ ಪುಟ–—

ಶ್ರೀಮತಿ ತಿರುಮಲಾಂಬಾ98736ಸುಶೀಲೆ1922Srimati Tirumalamba
OSMANIA UNIVERSITY

LIBRARY

Call No K83 S34S

Name of Book ಸುಶೀಲೆ

Name of Author ಸತೀ ಹಿತೈಷಿಣಿ


UNIVERSAL
LIBRARY
OU_200231 UNIVERSAL
LIBRARY

ಸತೀಹಿತೈಷಿಣಿ ಗ್ರಂಥಮಾಲಾ.



SUSHEELE.




ಸುಶೀಲೆ



————♦————



Third Edition (1,500 Copies)



(All Rights Reserved)



1922.



Edited and Published by
Srimati Tirumalamba
at the
Hitaishini Matru Mandira
NANJANGUD.



Printed by K. Singalacharya, Proprietor
at the City Press, Fort,
BANGALORE CITY.



ಶ್ರೀಃ

ಸಮರ್ಪಣಂ.

ಶ್ರೀರಾಮಶ್ಶರಣಮ್

ಶ್ಲೋ||ಪತಿರೇವಪರಂ ದೈವಂ-ಪತಿಸೇವಾ ಕುಲವಧೂಶರಣಮ್'||
ಪ್ರತ್ಯುರ್ನಾನ್ಯತ್ ಪರಮಿಹ-ಪತಿಪದಮೇಕಂ ಸ್ಮರೇನ್ನಿತ್ಯಂ ||

ಅಸ್ಮದಾರಾಧ್ಯ ದೇವನೂ, ಮದೀಯಾಂತರಂಗವಾಸಿಯೂ ಆದ
ನನ್ನ ಸ್ವಾಮಿಯ ಚರಣಾರವಿಂದದಲ್ಲಿ ಈ ಗ್ರಂಥಪುಷ್ಟವನು
ಅನನ್ಯ ಭಕ್ತಿಭಾವದಿಂದ ಸಮರ್ಪಿಸಿರುವನು
.

ಗ್ರಂಥಕರ್ತ್ರೀ.

ವಿಷಯಾನುಕ್ರಮಣಿಕ
ಪರಿಚ್ಛೇದ ವಿಷಯ ಪುಟಸಂಖ್ಯಾ
ಪ್ರಥಮ ... ವಿಷಬೀಜ ೧-೧೦
ದ್ವಿತೀಯ ... ಸಂಪ್ರಾರ್ಥನೆ ೧೦-೧೯
ತೃತೀಯ ... ಕ್ರೋಧಾನಲ ೧೯-೨೫
ಚತುರ್ಥ ... ಅಂತರಂಗದ ಅಭಿಸಂಧಿ ೨೫-೩೧
ಪಂಚಮ ... ನಮ್ಮ ಸ್ತ್ರೀಸಮಾಜ ೩೧-೩೯
ಷಷ್ಠ ... ದುರಾಗ್ರಹ ೩೯-೪೭
ಸಪ್ತಮಿ ... ಘೋರಕೃತ್ಯ ೪೭-೫೪
ಅಷ್ಟಮಿ ... ಪಾಪಪಂಕ ೫೪-೬೧
ನವಮಿ ... ಕರ್ಮಫಲ ೬೧-೬೮
ದಶಮ ... ನ್ಯಾಯಸ್ಥಾನ ೬೮-೭೭
ಏಕಾದಶ ... ಆನಂದಸಾಮ್ರಾಜ್ಯ ೭೭-೮೦


ಪ್ರಥಮಮುದ್ರಣದ ಪ್ರಸ್ತಾವನೆ


ಪ್ರಿಯ ಸೋದರಿಯರೇ! ಸಹೃತ್ಸೋದರರೇ!!
ನಾನು ವಿದ್ಯಾಗಂಧನನ್ನೇ ತಿಳಿಯದ ಅಲ್ಫಮತಿಯಾದ ಸಾಮಾನ್ಯಸ್ತ್ರೀ; ನವನಾಗರಿಕತೆಯ ಸುಳಿವಾಗಲೀ, ತಿಳಿವಳಿಕೆಯ ತಿರುಳಾಗಲೀ ತಿಳಿಯದ ಬಾಲಕೆ; ಆದರೂ, ನಮ್ಮ ಸೋದರೀವರ್ಗಕ್ಕೆ ನನ್ನಕಯ್ಯಲ್ಲಾಗುವ ಸೇವೆ ಯನ್ನು ಮಾಡಬೇಕೆಂಬ ಅಸ್ಯತ್ಮಟೇಚ್ಛೆಯು ನನ್ನನ್ನು ಬಿಡಲೊಲ್ಲದು.

"ಸೋದರೀವರ್ಗವನ್ನು ಹೇಗೆ ಸೇವಿಸಲಿ? ಹೇಗೆ ಉಪಕರಿಸಲಿ?" ಎಂದು ಚಿನ್ತಿಸಿ, ಚಿನ್ತಿಸಿಯೇ ನನ್ನ ಸ್ವಾಮಿಯ ವಿಯೋಗ ಕಾಲದಿಂದ ಮೊದಲು, ಈವರೆಗಿನ ಕಾಲವನ್ನೂ ಕಳೆದು, ದೈವಯೋಗ ಬಲದಿಂದ ಈಗ ಈ ಗ್ರಂಥರಚನಾಕಾರ್ಯದಲ್ಲಿ ತೊಡಗಿರುವೆನು. ಕೇವಲ ಪಂಡಿತರಿಗೆ, ಮತ್ತೂ ಬಹು ಭಾಷಾವಿಶಾರದರಿಗೆ ಮಾತ್ರವೇ ಸಾಧ್ಯವಾದ ಈ ಪ್ರಯತ್ನವ, ನನ್ನಿಂದ ಸಾರ್ಥಕ್ಯವನ್ನು ಹೊಂದಲಾರದೆಂಬ ಭರವಸೆಯಿದ್ದರೂ ವಿದ್ವನ್ಮಣಿಗಳೂ, ದೇಶವತ್ಮಲರೂ, ಭಾಷಾಭೂಷಣರೂ ಆದ ಸುಹೃದರ ಸಹಾಗು ಸಂಪತ್ತಿಯೇ ಸರ್ವ ಪ್ರಕಾರದಿಂದೆಯೂ ಪ್ರೋತ್ಸಾಹಿಸದಿರಲಾರದೆಂಬ ಬಲವಾದ ನಂಬುಗೆಯೊಂದು ಈ ಕಾರ್ಯದಲ್ಲಿ ಕಾಯ್ಚಾಚಿರುವ ನನ್ನನ್ನು ಪ್ರೋತ್ಸಾಹಿಸುತ್ತಿರುವುದು. ಈ ಸಂಸಾರಿಕ ಕಾದಂಬರಿಯು ಕೇವಲ ಬಾಲಿಶ ವಿದ್ಯಾರ್ಥಿನಿಯ ಸ್ವಕಪೋಲ ಕಲ್ಪಿತವು; ಕಥಾನಕವು ಅಷ್ಟಾಗಿ ಸ್ವಾರಸ್ಯವಾಗಿಲ್ಲವೆಂದರೂ ಗೃಹಿಣಿಯರಿಗೆ ಸಾಕಾದಷು ನೀತಿಬೋಧಕವಾಗಿರುವುದೆಂಬ ಭರವಸೆಯುಂಟು. ಕೆಲವೆಡೆಗಳಲ್ಲಿ ತೋರಿ ಬರುತ್ತಿರುವ ದಷ್ಯ ವಚನಗಳಿಗೆ ಆಯಾ ದೂಷ್ಯ ಪಾತ್ರಗಳೇ ಕಾರಣಗಳು, ಹಾಗೂ ಅಂತಹ ಕೆಟ್ಟ ಬಯ್ಗು ಳಿಂದಾಗುವ ಕೇಡಾವುದೆಂಬುದನ್ನು ಸೂಚಿಸಲಿಕ್ಕೆಂದರೂ ಸಾಕು.

ಈ ಚಿಕ್ಕ ಕಾದಂಬರಿಯಲ್ಲಿ ದೋಷಗಳೇನಾದರೂ ಇದ್ದರೆ ಅವೆಲ್ಲವೂ ನನ್ನವೆಂದೂ ಗುಣಗಳೆಲ್ಲವೂ ನನ್ನ ಸ್ವಾಮಿಗೆ ಸೇರಿವೆಂದೂ ಭಾವಿಸಬೇಕಾಗಿ ಪ್ರಾರ್ಥಿಸುವೆನು. ಮತ್ತು ದೋಷಗಳನ್ನು ತೋರಿಸಿ ಕೊಟ್ಟವರಿಗೆ ವಂದನೆಗಳನ್ನು ಸಮರ್ಪಿಸಿ ಚಿರಕೃತಜ್ಞಳಾಗಿರುವೆನಲ್ಲದೆ, ದೋಷಗಳನ್ನು ಸರಿಪಡಿಸಿ, ಮತ್ತೆ ಆಂತಹ ದೋಷಗಳುಂಟಾಗದಂತೆ ಎಚ್ಚತ್ತುಕೊಳ್ಳುವೆನು.

ಈ ಗ್ರಂಥವು ಪ್ರೋತ್ಸಾಹಾರ್ಹವಾದುದಾಗಿದ್ದರೆ, ಪ್ರೋತ್ಸಾಹವಿತ್ತು. ನನ್ನ ಇತರ-ಇದಕ್ಕೂ ಉತ್ತಮವಾದ-ಗ್ರಂಥಗಳು ಜಾಗ್ರತೆ ಯಾಗಿ ಪ್ರಕಟವಾಗಲು ಅವಕಾಶವನ್ನು ಕಲ್ಪಿಸಿ, ತನ್ಮೂಲಕ ದೇಶ ಭಾಷಾಸೇವೆಯಿಂದ ಧನ್ಯಳನ್ನಾಗಿ ಮಾಡಬೇಕೆಂದು ವಿನಯಪೂರ್ವಕ ವಾಗಿ ಪ್ರಾರ್ಥಿಸುತ್ತಿರುವೆನು.


1-10-1913

ದೇಶೀಯಸೋದರಿ
ನಂಜನಗೂಡು




ಸಹೃದಯ ವಾಚಕರೇ!

ಸತೀಹಿತೈಷಿಣೀ! ಗ್ರಂಥಮಾಲೆಯ ಪ್ರಥಮ ಪುಸ್ತಕವಾದಿ ಈ ಸುಶೀಲೆಯ ಪ್ರಥಮ ಮುದ್ರಣದ ಒಂದು ಸಾವಿರ ಪ್ರತಿಗಳು ಒಂದು ವರ್ಷದೊಳಗಾಗಿ ಮುಗಿದು ಹೋದುವು.

ದೇಶಭಾಷಾವತ್ಸಲರಾದ ಗ್ರಾಹಕರ ಉದಾರಾಶ್ರಯದಿಂದೆಯೂ ದೇಶೋದ್ದಾರಕರೂ, ಗುಣೈಕದೃಕ್ಕುಗಳೂ ಆದ ಮೈಸೂರು, ಮದರಾಸು ಮತ್ತು ಬೊಂಬಾಯಿ ವಿದ್ಯಾ೦ಗದವರ ಬಲವತ್ಸಹಾಯ ಸಂಪತ್ತಿಯಿಂದೆಯೂ ಈ ಗ್ರಂಥವು ಈಗಳೀಗಳೇ ಪುನರ್ಮುದ್ರಣವಾಗುವಂತಾಯಿತೆ೦ದು ಹೇಳಲು ಸಂತೋಷವಾಗುವುದು.

ಅಲ್ಲದೆ ಉದಾತ್ತರಾದ ಬೊಂಬಾಯಿ ಮತ್ತು ಮದರಾಸು ವಿದ್ಯಾಭ್ಯಾಸದ ಸಂಘದವರು, ಅತ್ತಲಿನ ಬಾಲಿಕಾಜನೋಪಯೋಗ ಕ್ಕಾಗಿ ಇದನ್ನು ವಿನಿಯೋಗಿಸಬಹುದೆಂದು ನಿಯಮಿಸಿರುವುದರಿಂದ, ಮತ್ತಷ್ಟು ಹೆಚ್ಚಾಗಿಯೂ ಆತುರವಾಗಿಯ ಮುದ್ರಣಕಾರ್ಯವು ನಡೆದಿರುವುದು.

ನಮ್ಮ ಸುಹೃದ್ವರ್ಗದವರು ಪ್ರಥಮ ಮುದ್ರಣದಲ್ಲಿ ತೆಗೆದು ತೋರಿಸಿದ ರೋಷಭಾಗಗಳನ್ನು ತಕ್ಕ ಮಟ್ಟಿಗೆ ಕ್ರಮಪಡಿಸಿ ಸಾಧ್ಯ ವಾದಷ್ಟು ಸುಧಾರಿಸಿಯೇ ಮುದ್ರಿಸಿರುವುದು, ಈಗಳೂ ಅಲ್ಲಲ್ಲಿ ಅಜ್ಞಾತವಾಗಿದ್ದು ತೋರುವದೋಷಗಳಾವುವೆಂಬುದನ್ನು ಸೂಚಿಸಿ ದವರಿಗೆ ಕೃತಜ್ಞತೆಯಿಂದ ವಂದನೆಯನ್ನು ಸಮರ್ಪಿಸುವುದು ನಮ್ಮ ಕರ್ತವ್ಯವಾಗಿರುವು.

4-4-1519

ಹಿತೈಷಿಣಿ
ನಂಜನಗೂಡು



ತೃತೀಯ ಮುರ್ದಣದ ಪೀಠಿಕೆ.

1919ನೆ ಇಸವಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಈ ಪುಸ್ತಕದ 1000ಪ್ರತಿಗಳು 1915ನೆ ಇಸವಿಯ ಏಪ್ರಿಲ್ ತಿಂಗಳೊಳಗಾಗಿ ಮುಗಿದು ಹೋಗಿ ಮತ್ತೆ ಅದೇ ವರ್ಷದ ಮೇ ತಿಂಗಳಲ್ಲಿ ದ್ವಿತೀಯ ಆವೃತ್ತಿ 1500ಪ್ರತಿಗಳು ಮುದ್ರಿ ತವಾಗಿದ್ದವು. ಈ ವರೆಗೆ ಆ ಪ್ರತಿಗಳಲ್ಲಿ 1200ಪ್ರತಿಗಳು ಮುಗಿದು ಹೋಗಿ, ಈಗ ಅಂದರೆ ಇದೇ ೧೯೨೨ನೆ ವರ್ಷದ ಮದ್ರಾಸ್‌ ಸರಕಾ ರದವರು ಅಲ್ಲಿಯ ಸ್ಕೂಲ್ ಫೈನಲ್ ಪರೀಕ್ಷೆಗೆ ಪಠ್ಯ ಪುಸ್ತಕವಾಗಿಟ್ಟುದರಿಂದ ಉಳಿದ ಪ್ರತಿಗಳೂ ಮುಗಿದವು. ಮತ್ತು ನಮ್ಮ ಮೈಸೂರು ವಿದ್ಯಾಭ್ಯಾಸದವರು ಇಲ್ಲಿಯ V ಫಾರಮಿಗೆ ಇದೇ 1922-23 ನೆ ವರ್ಷದ ಪರೀಕ್ಷಾ ಪದ್ಯ ಪುಸ್ತಕವಾಗಿ ನೇಮಿಸಿದ್ದರಿಂದ ಈಗ ಇದರ ತೃತೀಯ ವೃತ್ತಿ ಮುದ್ರಣವಾಗ ಬೇಕಾಯಿತು. ಹೀಗೆ 6 ವರ್ಷದೊಳಗಾಗಿ ಮೂರು ಆವೃತ್ತಿ ಮುದ್ರ ಣವಾಗಿ ಪ್ರಕಟಗೊಳ್ಳುವಂತಾಯಿತು.ಇದಕ್ಕೆ ಪ್ರೋತ್ಸಾಹಿಸಿದ ನಮ್ಮ ದೇಶೀಯ ಸೋದರಿ-ಸೋದರ ಭಾಷಾಭಿಮಾನಕ್ಕೂ ಮದ್ರಾಸ್ ಮತ್ತು ನಮ್ಮ ಮೈಸೂರು ವಿದ್ಯಾಭ್ಯಾಸದ ಇಲಾಖೆಯವರ ದಯಾಳುತ್ವ ಮತ್ತು ಗುಣಗ್ರಹಣ ತತ್ಪರತೆಗಳಿಗೂ ನಾವು ಚಿರಕೃತಜ್ಞರಾಗಿರುವೆವಲ್ಲದೆ ಹೀಗೆಯೇ ಸತೀ ಹಿತೈಷಿಣಿಯ ಇತರ ಎಲ್ಲಾ ಗ್ರಂಥಗಳ ಲೋಕಾದರಕ್ಕೆ ಪತ್ರಗಳಾಗಿಯೂ ಇರುವಂತೆ ಕೃಪೆಗೈಯಲೆಂದು ಪರಮಾತ್ಮನಲ್ಲಿ ಪ್ರಾರ್ಥಿಸುವೆವು.

1-4-22

ಇತಿ

ಹಿತೈಷಿಣಿ
ನಂಜನಗೂಡು

॥ಶ್ರೀ॥

ಶ್ರೀರಾಮತ್ಕರಣಮ್

ಸುಶೀಲ

ಸಮಸ್ತ ಜನನೀಂವನ್ಹೇ ಚೈತನ್ಯಸ್ತನ್ಯದಾಯಿನೀಮ್ ।

ಶ್ರೀಯುಸೀ॰ ಶ್ರೀನಿವಾಸಯ್ಯ ಕರುಣಾಮಿವರೂಮ್॥೬॥

ಪ್ರಥಮ ಪರಿಚ್ಛೇದ

(ಏಷಬೀಜ)

ಸಂಧ್ಯಾಕಾಲವು ಸಮಾಪಿಸಿದ್ದುದು, ಭಗವಂತನಾದ ಭಾಸ್ಕರನು ಸಂಧ್ಯಾಲಿಂಗನದಲ್ಲಿ ಆತುರಗೊಂಡಿದ್ದಂತೆ ಭಾಸವಾಗುತ್ತಿದ್ದುದು, ಪಶು ಪಕ್ಷಿಸಮಹಗಳು ನಿಜನಿವಾಸಗಳಿಗೆ ಭಿಮುಖವಾಗಿ, ಸ್ವಬಂಧುಗಳನ್ನು ಕುರಿತು ಕರಗುತ್ತಿದ್ದವು, ಆದರೂ ಎನೋದನು ಇನ್ನೂ ಮನೆಗೆ ಬಂದಿಲ್ಲ, ಪತಿಯ ಅಗಮನಕ್ಷೆಯಿಂದಿ ಸಾದ್ವೀಮನಿಯಾದ ಸುಶೀಲೆ, ಇನ್ನೂ ನಿರಾಹಾರೆ!

ವಿನೋದನು ಮಲಯಪುರದಲ್ಲಿ, ವಿದ್ಯಾವಂತನಾದ ಶ್ರೀಮಂತ ಯುವಕನು, ವಿದ್ಯಾವೈಭವಗಳಿಗೆ ತಕ್ಕಂತಹ ಅಧಿಕಾರವು ತನಗೆ ದೊರೆಯಲಿಲ್ಲವಾದುದರಿಂದ, ಸರ್ಕಾರದ ಉದ್ಯೋಗವಾವುದಕ್ಕೂ ಈತನು ಸೇರಿರಲಿಲ್ಲ. ಮನೆಯಲ್ಲಿ ಸತಿಪತಿಯರಲ್ಲದೆ ಮತ್ತಾರು ಇರಲಿಲ್ಲ, ಆದರೆ ಸುಶೀಲೆಯ ಸಹಾಯಕ್ಕಾಗಿ ಚೀಟಿಯೊಬ್ಬಳೂ, ಇಬ್ಬರು ಆಳುಗಳೂ ಇದ್ದರು. ಇವರೂ ಈ ವೇಳೆಯಲ್ಲಿ ತಮ್ಮ ತಮ್ಮ ಕಾರ್ಯಗಳಲ್ಲಿ ನಿರತರಾಗಿದ್ದರು, ಆದುದರಿಂದ ಸುಲಿಯೊಬ್ಬಳೇ ತುನಯ ವಿಶಾಲವಾದ ಅಂಗಳದ ಮಧ್ಯದಲ್ಲಿ ಕುಳಿತು, ಮನಸ್ಸಮಾ ಧಾನಕ್ಕಾಗಿ ಆವುದೋ ಪುಸ್ತಕವನ್ನು ಓದುತ್ತಿದ್ದಳು, ಬೀದಿಯ ಬಾಗಿಲು ತೆರೆದಿದ್ದಿತು.

ಸುಶೀಲೆಯು ಕುಳಿತಿದ್ದಡೆಗೆ, ನಡುಹರೆಯದ ಹೆಂಗಸೊಬ್ಬಳು ಬಂದು ನಗುತ್ತ ನಿಂತಳು, ಪುಸ್ತಕವಲೋಕನದಲ್ಲಿದ್ದ ಸುಶೀಲೆ, ತಲೆಯ, ತನ್ನ ಮುಂದೆ ನಿಂತಿದ್ದವಳನ್ನು ನೋಡಿ, ವಿಸ್ಮಯದಿಂದ; ಗಿರಿಯಮ್ಮನವರೇ! ಅದೇಕೆ ಹೀಗೆ ನಗುವಿರಿ? ಕುಳಿತುಕೊಳ್ಳಿರಿ ಎಂದಳು

ಗಿರಿಯಮ್ಮ- (ಕುಳಿತುಕೊಂಡು,)-'ಇದೇನೆ? ಸುಮ್ಮನೆ ಕುಳಿತೆ'?

ಸುಶೀಲೆ-ಓದುತ್ತಿರುವೆನು; ಸಮ್ಮನೆ ಕುಳಿತಿಲ್ಲ.

ಗಿರಿ-ಓದುವುದು ಇಂತಹ ಹೊತ್ತಿನಲ್ಲಿ!

ಸುಶೀಲೆ-ಮತ್ತೇನು? ಸದ್ಯದಲ್ಲಿ ಮಾಡಬೇಕಾದ ಕೆಲಸವೇನೂ ಇಲ್ಲ.
ವಿರಾಮವು ದೊರೆತಾಗ ಓದಿದರೆ ನಷ್ಟವಿಲ್ಲವಷ್ಟೆ?

ಗಿರಿ-ಒಳ್ಳೆಯ ಓದು ಒಳ್ಳೆಯ ಓದು!! ವಿರಾಮ ದೊರೆತು,
ಹೊತ್ತು ಹೋಗದಿದ್ದರೆ ಹಾಳು ಪುಸ್ತಕವನ್ನು ಓದಬೇಕೆ?
ನಮ್ಮ ಮನೆಗೆ ಬರಬಾರದಾಗಿತ್ತೇ? ಇಲ್ಲವ, ನನ್ನನ್ನು ಕರೆ
ದಿದ್ದರೆ ನಾನೇ ಬರುತ್ತಿದ್ದೆ? ಈಗಲೂ ಏನಾಯ್ತು? ನೀನು
ಕರೆಯದೆಯೇ ನಾನೇ ಬಂದಿರುವೆನು.

ಸುಶೀಲೆ-ಅಮ್ಮಾ! ನೀವು ದೊಡ್ಡವರು; ಹೇಗೆ ಬೇಕಾದರೂ ಹೇಳ
ಬಲ್ಲಿರಿ! ಮನೆಯನ್ನು ಬಿಟ್ಟು ಹೆರವರ ಮನೆಗೆ ಹೋಗಿ ಸುಮ್ಮನೆ
ಕೆಲಸಕ್ಕೆ ಬರದ ಹರಟೆಯನ್ನು ಹರಟಲು ನನಗೆ ಇಷ್ಟ
ವಿಲ್ಲ. ನಿಮ್ಮನ್ನು ಕರೆಯಬಹುದಾಗಿತ್ತೆಂದು ಹೇಳುವಿರಿ; ಅದರೆ, ನಮ್ಮ ನಮ್ಮ ಕಾವ್ಯಗೌರವಗಳಿಗೆ ತಕ್ಕಂತೆ
ನಾವು ಪ್ರವತಿಸಬೇಕಲ್ಲವೆ? ನಿಮ್ಮನ್ನು ಕರೆದು, ನಿಮ್ಮ ಕೆಲಸವನ್ನು
ಕಂಸುವುದು ನನಗೆ ತಕ್ಕುದಾಗಿ ಕಾಣಲಿಲ್ಲ.
ಗಿರಿ--ನನ್ನನ್ನು ಕರೆಯದಿದ್ದರೇನಾಯ್ತು ? ನೀನೇ ನಮ್ಮ ಮನೆಗೆ
ಬಂದು, ನಿನಗೆ ಹರಟಿ ಬೇಡವಾಗಿದ್ದರೆ, ಒಳ್ಳೆಯ ಮಾತುಗಳ
ನ್ನೇ ಆಡಬಹುದಾಗಿತ್ತು.
ಸುಶೀಲಿ-ಅಮ್ಮಾ! ನೀವು ಈ ರೀತಿ ಮಾತನಾಡಬಾರದು. ನಾನು
ಕೂಗಿದ್ದರೆ ನೀವು ನಿಮ್ಮ ಕೆಲಸಗಳನ್ನೆಲ್ಲಾ ಬಿಟ್ಟು ಬರಬೇಕಾಗಿ
ತ್ತಲ್ಲವೆ? ಗಿರಿ-ಕೆಲಸದಮನೆ ಹಾಳಾಯ್ತು! ಅದು ಇಲ್ಲೇ ಇದೆ!! ನಾನು
ಸಿರಿದುಬಿದ್ದಾಗಲ್ಲವೇ ಅದೂ ಮುಗಿಯಬೇಕು?
ಸುಶೀಲೆ-ಹಾಗೆ ಹೇಳಲಾದೀತೆ? ಕ್ಲಿಪ್ತ ಕಾರ್ಯಗಳನ್ನು ಕ್ಲಿಪ್ತಕಾಲ
ದಲ್ಲಿ ಮಾಡದೆ ಬಿಡಲಾಗದಲ್ಲವೆ?
ಗಿರಿ-ಯಾವಾಗಲಾದರೂ ಮಾಡಿದರಾಯ್ತು, ಇಲ್ಲವೆ ಬಿದ್ದಿರೆಂದು
ಬಿಟ್ಟರೂ ಆಯ್ತು, ಒಂದರಡು ಗಳಿರಯಕರ ವಿರಾಮನೇ
ಬೇರವೆ? ಏನೋಡದಿಂದ ಹೊತ್ತು ಕಳೆಯದಿರಲು ನನ್ನಿಂದಾಗ
ದಮ್ಮ! ಹಾಳು ಕೆಲಸಕ್ಕೆ ಬೆಂಕಿ ಬೀಳಲಿ!
ಸುಶೀಲೆ-ಅಮ್ಮ! ನೀವು ಹೇಳುವುದು ಸರಿಯಾಗಿರುವಂತೆ ನನಗೆ
ಕಾಣುವುದಿಲ್ಲ, ಕಾಲವೆಂಬುದು ಅಮೂಲ್ಯವಾದುದು,
ಅದನ್ನು ಕಳೆದುಕೊಳ್ಳುವುದು ನಷಕ್ಕೆ ಆಕರವು ಕ್ಲಿಪ್ತ
ಕಾಲದಲ್ಲಿ, ಕ್ಷಿಪ್ತ ಕಾರ್ಯವನ್ನು ನೆರವೇರಿಸಿಬಿಟ್ಟರೆ, ವಿರಾ
ಮವು ದೂರ ದೊರೆವುದು. ಸಕಾಲದಲ್ಲಿ ಕಾರ್ಯವನ್ನು
ನೆರವೇರಿಸುವುದರಿಂದ ಮನಶ್ಯಾಂತಿ, ಸಮಾಧಾನ, ಆನಂದ ಉತ್ಸಾಹಗಳು ಹಚ್ಚುವುದಲ್ಲವೆ? ಸಕಾಲದಲ್ಲಿ ಕೆಲಸವನ್ನು
ಮಾಡರಿ, ಅವುಗಳನ್ನು ಮೂಲೆಗೊತ್ತರಿಸಿ, ಹಂದಿಗೆ
ಕುಳಿತರೆ ಅವು ಹಾಳಾಗುವುದಲ್ಲದೆ ನಾವು ಸೋಮಾರಿಗಳಾಗುವೆವು.
ಹಾಗೆ ಸೋನಂಗಳಾದ, ಹೊತ್ತು ಕಳೆಯುವುದಕ್ಕೆ
ಪರನಿಂದ ಆತ್ಮಪ್ರಶಂಸೆ ಅಹಂಕಾರ, ಮಾತ್ಸರ, ಅನ್ಯಸಂಸ್ಕಾರ
ಛಿದ್ರಾನ್ವೇಷಣೆ ಮೊದಲಾದ ದುರ್ಗುಣಗಳಿಗೆಡೆಗೊಡುವೆವು.
ಈ ದುರ್ಗುಣಗಳಲ್ಲಿ ಒಂದೊಂದೇ ಆತ್ಮನಾಶಕ್ಕೂ, ಧರ್ಮಚ್ಯು
ತಿಗೂ ಸಾಕಾಗಿದೆ. ಈ ವಿಷಯವನ್ನು ತಿಳಿದು ನಾವು ಅಕೃ
ತ್ಯವನ್ನು ಕಲ್ಲೋಳ್ಳಬಹುದೆ?

ಗಿರಿ-(ತಲೆಯನ್ನು ಓರೆವಾರಿ ವ್ಯಂಗಕ್ಕರದಿಂದ)-ಅಹುದಮ್ಮಾ
ಅಹುದು! ನೀನು ಮಹಾಜ್ಞಾನಿ-ಅಲ್ಲವೇ ಸುಶೀಲೆ ನೀನಿ
ನ್ನೂ ನನ್ನ ಕಣ್ಣು ಮುಂದಿನ ಹುಡುಗಿ! ನಿನಗಿಷ್ಟು ಬುದ್ಧಿವಂತಿ
ಗೆಯೇ? ಇದೆಲ್ಲ ಮೇಗಡೆಯ ಬಣ್ಣದ ಮಾತುಗಳಿಂದು
ಬಲ್ಲೆನೆ! ತಾನೇನೋ ಮಹಾಕಾರ್ಯಗಳನ್ನು ಕ್ರಮವಾಗಿ
ಮಾಡಿಟ್ಟು, ವಿರಾಮ ಕಾಲವನ್ನು ಸರಿಯಾಗಿ ವಿನಿಯೋಗಿಸು
ವಂತೆ ಹರಟುವಳು, ಅಹುದೇ, ನಾವೆಲ್ಲರೂ ಸೋಮಾರಿ
ಗಳು; ಕಾಲವನ್ನು ಕೊಲ್ಲುವವರು? ನಮ್ಮ ಪೂರ್ವಕರು
ದಡ್ಡರು, ನೀನೇ ಬಹುಬುದ್ದಿವಂತೆ! ಪೂರ್ವಿಕರು, ಮಾತು,
ಕಥೆ, ನಗರ, ದಚ್ಚೀಪಾರ, ಕವಡೆ, ಮತ್ತು ಗಜ್ಜಿಗೆ ಮೊದ
ಲಾದವುಗಳನ್ನಾಡಿ ಹೊತ್ತು ಕಳೆಯುತ್ತಿರಲಿಲ್ಲವೇನು?
ನಿನ್ನ ಹಾಗೆ ಪುಸ್ತಕವನ್ನೇ ಓರಿ ಹೊತ್ತು ಕಳೆಯುತ್ತಿದ್ದರ?
ಸುಶೀಲೆ-ಅಮ್ಮಾ! ನೀವೇ ಮೊದಲು ಮಾತಿಗೆ ಪ್ರಾರಂಭಿಸಿದುದ
ರಿoದ ನಾನೂ ಇಷ್ಟು ಮಾತುಗಳನಾಡಬೇಕಾಯ್ತು, ಸ್ವಲ್ಪ ವಿಚಾರ ಮಾಡಿ ನೋಡು ? ನಾವು ನಾಲ್ಕಯ್ದು ಮಂದಿ ಹೆಂಗ
ಸರು ಮಾತನಾಡಲು ಒಂದೆಡೆ ಕುಳಿತರೆ, ತುದಿ ಮೊದಲೇ
ತಿಳಿ ವುದಿಲ್ಲ, ನಾವು ಕುಳಿತುಕೊಳ್ಳುವುದಕ್ಕೆ ಮೊದಲು ಇಂತಹ
ವಿಷಯವನ್ನೇ ಕುರಿತು ಮಾತನಾಡಬೇಕೆಂದಾದರೂ ನಿಶ್ಚಯಿಸಿ
ರುವುದಿಲ್ಲ, ಅದುದರಿಂದ ಬಾಯಿಗೆ ಬಂದುದನ್ನೆಲ್ಲಾ ಆಡಿ
ಬಿಡುವೆವು, ಅವುಗಳಲ್ಲಿ ಮೊದಲು ಅಡುಗೆ, ಆ ಬಳಿಕ ಮನೆ
ಕೆಲಸಗಳ ವಿಚಾರವು ಚರ್ಚಿಸಲ್ಪಡುವುದು, ಇದಾಯ್ತೆಂದ
ಕೂಡಲೇ, ನಮ್ಮ ಗುಂಪಿನಲ್ಲಿ ಇಲ್ಲದ ಹೆಂಗಸರ ಮನೆಯಾಡಳಿ
ತದ ಗುಣ-ದೋಷ ಎಮರ್ಶೆಯೂ, ಬಲವಾಗಿ ನಡೆವುದು,
ಇದರಲ್ಲಿ ಅನೇಕರ ನಿಂದೆ-ಆತ್ಮಸ್ತುತಿಪೂರ್ವಕವಾಗಿ, ಸ್ವಗೃಹ
ಕೃತ್ಯದ ಗುಣಾಗುಣವೂ ಹೊರಹೊರಡುವುದು. ಇಂತಿರುವ
ವುಗಳ ನಡುವೆ, ಪರದೈವಸ್ವರೂಪನಾದ ಪತಿಯ ದೋಷವೂ,
ಮಾತೃಸದೃಶೆಯಾರ ಆತ್ತೆಯ ನಿಷ್ಠೂರವೂ ಆರೋಪಿತವಾಗಿ
ಯೇ ಇರುವುವು. ಹೀಗಾಗುವುದರಿಂದ ನಮ್ಮ ಕುಂದು ಕರವ
ರಿಗೂ, ಹರವರ ಕುಂದು ನಮಗೂ ತಿಳಿಯಲಾಗುವುದು.
ಅಲ್ಲಿಗೆ “ಸಂಸಾರಿಗುಟ್ಟು ವ್ಯಾಥಿಕಟ್ಟು ” ಎಂಬ ನಿಯಮವು
ತಪ್ಪಿಹೋಗುವುದು, ಸಂಸಾರದ ರಹಸ್ಯಗಳು, ಹೊರಬೀಳು
ವುದರಿಂದ ಎಂತೆಂತಹ ಅನಾಹುತವಾಗುವುದೆಂಬುದನ್ನು ನಾನಿಲ್ಲಿ
ಹೇಳಲಾರೆನು! ಕೆಲವು ಸಂದರ್ಭಗಳಲ್ಲಿ ಗುಂಪಿಗೆ ಸೇರದವರಿಗೂ
ಅನೇಕಾನೇಕ ತೊಂದರೆಗಳು ಸಂಭವಿಸುವುದು,
ಇವೆಲ್ಲವೂ ವಯೋವೃದ್ಧರಾದ ತಮಗೆ ತಿಳಿದ ವಿಷಯವೇ ಆಗಿದೆ.

ಗಿರಿ-ಹಗಲಮ್ಮ ! ಹಠಯೇನೋ ಕಟ್ಟುದು ; ಪಗಡೆಯನ್ನೂ
ಆಗಬಾರದೊ ? ಅದೇನು ಮಾಡುವುದು ? ಸುಶೀಲೆ- ಪಗಡೆಯಾಡುವುದು ವಿನೋದವನ್ನಲ್ಲದೆ ಮತ್ತೇನನ್ನೂ
ಮಾಡಲಾಗದು, ಆದರೆ, ಗ್ರಂಥಕಾಲಕ್ಷೇಪವು ಅದಕ್ಕೂ
ಬಳ್ಳೆಯದೆಂದು ನಾನು ನಂಬಿರುವೆನು.

ಗಿರಿ-ಹಾಗಾದರೆ, ನೀನು ವಿರಾಮಕಾಲದಲ್ಲಿ ಯಾವಾಗಲೂ ಪಗಡೆ
ಯಡುವುದೇ ಇಲ್ಲವೋ ?

ಸುಶೀಲೆ-ಇಲ್ಲ, ಆಡುವುದನ್ನು ನೋಡದೂ ಇಲ್ಲ !

ಗಿರಿ-ಆಡುವವರನ್ನು ಕಂಡರೇನು ಮಾಡುವೆ? ವಿನೋದಕಾಲಹರಣ
ಕ್ಕೇನುಮಾಡುವೆ?

ಸುಶೀಲೆ-ಅಡುವವರನ್ನು ಕಂಡರೆ, ಬೀಡವೆಂದು ಹೇಳುವನು. ವಿರಾ
ಮಕಾಲದಲ್ಲಿ ಓದುವೆನು, ಬೇಸರವಾದರೆ ಗಿಡಗಳಿಗೆ ನೀರನ್ನು
ಹಾಕುವೆನು. ಇಲ್ಲದೆ ಮತ್ತೇನನ್ನಾದರೂ ಮಾಡುವೆನು.

ಗಿರಿ-ಇದೆಲ್ಲವೂ ಬರಿಯ ಹರಟಿ ! ಕಯ್ಯಲ್ಲಿ ಬೇರೆ ಆ ರೀತಿ ಮಾಡುವು
ದಿಲ್ಲ, ಇಷ್ಟೆಲ್ಲಾ ಹೇಳುವವಳು ನಿನ್ನ ಗಂಡನನ್ನೇಕೆ ದಾರಿಗೆ
ತರಬಾರದು! ಮೂರುವೇಳೆಯೂ ಜೂಜುಗಾರರ ಮನೆಯಲ್ಲಿ ರುವನಲ್ಲ ?

ಸುಶೀಲೆ-ಏನು ? ಜೂಜುಗಾರರ ಮನೆಯಲ್ಲಿ !

ಗಿರಿ-ಜೂಜುಗಾರನಷ್ಟೇ ಅಲ್ಲವಮ್ಮ ! ನಿನ್ನ ಗಂಡ ಜಾರಾಗ್ರಣಿ !
ಅವನಿಗಿರುವುದೆಲ್ಲ ರಂಡೆ ಮುಂಡೆಯರ ಸಹವಾಸವೇ ?

ಸುಶೀಲೆ-ಅಮ್ಮಾ ! ನೀವು ಹಿರಿಯರು ! ಈ ರೀತಿ ದೋಷವನ್ನು
ಆರೋಪಿಸಬಾರದು. ನನ್ನ ಸ್ವಾಮಿ, ಜೂಜುಗಾರರೆಂದು
ನಾನೆಷ್ಟು ಮಾತ್ರಕ್ಕೂ ಹೇಳಲಾರೆನು. ಗಿರಿ- ಸರಿ; ನಾನು ಸುಳ್ಳಾಡುವೆನೆ? ನನಗದರಿಂದ ಬರುವ
ಲಾಭವೇನು? ಅವನಂತಹ ಪಟಿಂಗನು ಮತ್ತೊಬ್ಬನಿಲ್ಲ. ಅವನೇ
ನಾದರೂ ನನಗೆ ಗಂಡನಾಗಿದ್ದರೆ ಏನುಮಾಡಿಬಿಡುತ್ತಿದ್ದೆನೋ?
ನಮ್ಮ ಮನೆಯವರು.................... ಸ್ವಲ್ಪ ಆಟವಾಡಿದವರೇನು?
ಅವರನ್ನು ಇಷ್ಟರಮಟ್ಟಿಗೆ ತರಲು ನಾನೆಷ್ಟರ ಪ್ರಯತ್ನ
ಪಟ್ಟೆನೊ? ನೀನು ಯಾವ ಭಾಗದಲ್ಲಿ-ರೂಪು, ಲಾವಣ್ಯ,
ವಿದ್ಯೆ, ಐಶ್ವರ್ಯಗಳಲ್ಲಿ ಎತರಲ್ಲಿ ಕಡಮೆಯಾಗಿರುವೆಯೆಂದು
ಅವನು ಹಾಗೆ ಮಾಡಬೇಕು? ನೀನೊ೦ದು ಪೆದ್ದು; ಅದಕ್ಕೇ
ನಿನ್ನನ್ನು ಬಿಟ್ಟು ಅವನು ಹಾಗೆ ಅಲೆದಾಡಿ ಸಾಯುತ್ತಿದ್ದಾನೆ....
•••••••

ಸುಶೀಲೆಗೆ ಕೋಪವು ಮಿತಿಮಾರಿತು; ಸಂಕಟದಿoದ ತಲ್ಲಣಿಸಿದಳು. ಶರೀರವಾದ್ಯಂತವೂ ರೋಮಾಂಚನದಿಂದ ಕೂಡಿತು. ಕಣ್ಣಿನಲ್ಲಿ ನೀರು ತುಂಬಿತು. ಗದ್ಗದಸ್ವರದಿಂದ ಹೇಳಿದಳು;- 'ಗಿರಿಯಮ್ಮ! ಸಾಕು! ನಿಮ್ಮ ಮಾತುಗಳನ್ನು ನಿಲ್ಲಿಸಿರಿ. ನಾನು ಮೊದಲೇ ಹೇಳಲಿಲ್ಲವೇ? ಕೈಮುಗಿದು ಹೇಳುವೆನು ಸುಮ್ಮನಿರಿ. ನನ್ನ ಸ್ವಾಮಿಗೆ ನನ್ನಲ್ಲಿ ಪೂರ್ಣಪ್ರೇಮವಿದೆ. ಅವರ ದಯೆಯೂ ನನ್ನ ವಿಚಾರದಲ್ಲಿ ಅಪಾರವಾಗಿದೆ. ನನಗೆ ಅವರ ಪ್ರೇಮ, ಕ್ಷೇಮ, ದಯೆಯೇ ಸಾಕಾದ ನಿಧಿ? ಇನ್ನಾದರೂ ತಿಳಿಯಲಿಲ್ಲವೆ? ನೀವು ಅವರಲ್ಲಿ ದುರ್ಗುಣಗನ್ನು ಕಲ್ಪಿಸಿ ಹೇಳಿ ನನ್ನನ್ನು ಕೆರಳಿಸಬೇಡಿರಿ.

ಗಿರಿ- ಹುಚ್ಚಿ! ಹುಚ್ಚಿ!! ನಾನೇನು ಕೆಟ್ಟುದಕ್ಕೆ ಹೇಳುವೆನೆ?
ನೀನು ಅವನನ್ನು ಇನ್ನೂ ಹೀಗೆಯೇ ಬಿಟ್ಟರೆ, ಇನ್ನು ಸ್ವಲ್ಪಕಾಲದ
ಲ್ಲಿಯೇ ಕೆಟ್ಟುಹೋಗುವನಲ್ಲದೆ ಮಾರ್ಗಕ್ಕೆ ಬಂದಾನೆ? ಅವ
ನಾವಾಗಲೂ ಆ ರಂಡೆಯ ಮನೆಯಲ್ಲಿಯೇ ಸಾಯುತ್ತಿರುವನು. ಸುಶೀಲೆ-ಇದಕ್ಕಾಗಿಯೇ ನೀವೀಲ್ಲಿಗೆ ಬಂದಿರೇನು ? ನನ್ನ ಸ್ವಾಮಿಯ
ಕ್ಷೇಮಲಾಭವು, ನನ್ನ ಹಿತಚಿಂತೆಗೊಳಪಟ್ಟುದಲ್ಲದೆ ನಿಮ್ಮ
ನಿಷ್ಟುರಕ್ಕೆ ಒಳಗಾಗತಕ್ಕುದಲ್ಲ, ಈ ವಿಷಯವನ್ನು ಚೆನ್ನಾಗಿ
ತಿಳಿದಿರಿ | ಪತಿಯ ದೋಷಗಳನ್ನು ಕೇಳಿ, ದೂಷಕರನ್ನು ಪುರ
ಸ್ಕರಿಸುವ ಮಾತುಗಳನ್ನಾಡಿ, ಅವರಿಗೆ ವಸತಿಯನ್ನು ಅಣಿಮಾಡಿ
ಕೊಡುವವಳು ನಾನೆಂದು ತಿಳಿಯಬೇಡಿರಿ? ಇನ್ನು ಮುಂದೆ
ಇಂತಹ ಮಾತುಗಳನ್ನು ಹೇಳಲಾಗದು.

ಗಿರಿ-ಸಾಕು; ಸಾಕು ! ನಿನ್ನ ಪುರಾಣವನ್ನು ಕಟ್ಟಿಡು! ಉಪಯೋ
ಗವಿಲ್ಲದ ಮಾತು| ರಾತ್ರಿ ಏಳು ಗಂಟೆಯಾಗುತ್ತಿದ್ದರೂ
ಇನ್ನು ನಿನ್ನ ಗಂಡನು ಮನೆಗೆ ಬಂದಿಲ್ಲ. ನೀನು ಹಸಿದು
ಸಾಯುತ್ತಿರುವೆ ! ಅವನು ಅಲ್ಲಿ ಹೊಟೆ ಬಿರಿವಂತೆ ತಿಂದು,
ಕುಡಿದು, ಬಿದ್ದು ಒದ್ದಾಡುತ್ತಿರುವನು, ಅವನು ಬಾರದಿದ್ದರೆ
ನೀನೇಕೆ ಹಸಿದಿರಬೇಕು ?

ಸುಶೀಲೆ- (ಜಿಗುಪ್ಪೆಯಿಂದ) ಅಮ್ಮ | ಅವೆಲ್ಲವೂ ಹೆಚ್ಚು ಮಾತುಗಳು
ನಾನು ಊಟಮಾಡಿದರೇನು ? ಬಿಟ್ಟರೇನು ? ನಿಮಗದರಿಂದಾ
ಗುವ ಲಾಭ ನಷ್ಟಗಳಾದರೂ ಯಾವುವು? ವೃಥಾ ಕಾಲ
ಹರಣ | ನನ್ನ ಮನಸ್ಸಮಾಧಾನ-ಅಭ್ಯುದಯಗಳಿಗೆ ಕಾರಣವಾ
ಗಿದ್ದ ಪುಸ್ತಕಾಲೋಕನವನ್ನೂ ತಪ್ಪಿಸಿ, ಮನಸ್ಸನ್ನು ಅತಿ
ಯಾಗಿ ನೂಯಿಸಿದಿರಿ ? ಇದು... ....

ಗಿರಿ-ಎಲೆ ! ನೀನು ಸ್ವಲ್ಪ ' ಕಾ ಕೂ' ಕಲ್ಲಿರುವುದರಿಂದಲೇ ಹೀಗೆ
ಮಲೆತುಹೋಗಿರುವೆ ; ದುರಹಂಕಾರದಿಂದ ಮರೀಯಾದೇ ಮೀರಿ
ಮಾತನಾಡುತ್ತಿರುವೆ. ಇನ್ನೂಬ್ಬರಿಗೆ ಉಪದೇಶಮಾಡುವು
ದಕ್ಕೆ ಮಾತ್ರ ನಾಲ್ಕು ಬಾಯಾಗುವುವು, ಸಾಕು ; ಬಿಡು ! ನಿಮ್ಮ ಮ್ಮನು ನನಗೆ ಸಂಗಾತಿಯಾದುದರಿಂದಲೂ, ನೀನು ಅಭಿ
ವೃದ್ಧಿಗೆ ಬರಬೇಕೆಂಬ ಕುತೂಹಲದಿಂದಲೂ, ನಿನಗೆ ಹಿತವನ್ನು
ಬಯಸಿ, ಬುದ್ಧಿ ಹೇಳಿದುದಕ್ಕೆ, ತಕ್ಕ ಪುರಸ್ಕಾರವನ್ನು ಮಾ
ಡಿದೆಯ ನಾಣ್ಗೆ‍ಟ‌ವಳೆ ! ನೀನು ಹೇಳುವ ಮಾತುಗಳಿಂದ
ನಾನೇನು ಹೆದರುವೆನೆಂದು ತಿಳಿದೆಯೋ ? ನಿನ್ನನ್ನು ಆ
ನಿಮ್ಮ ಮೈ.........ಈ ನತದೃಷ್ಯನಿಗೆ ಕೊಟ್ಟು ಹಾಳುಮಾಡಿದಳು|
ಪಾಪ ! ನಿನ್ನ ಬಾವ, ಎಷ್ಟೋಬಗೆಯಿಂದ ನಿನ್ನನ್ನು ತನಗೆ
ಮದುವೆಮಾಡಿಕೊಡೆಂದು ನಿಮ್ಮಮನಲ್ಲಿ ಪ್ರಾರ್ಥಿಸಿದರು ; ಕೂಡ
ಲಿಲ್ಲ. ಕೊಟ್ಟಿದ್ದರೆ, ಅವನಷ್ಟು ಸುಖ. .... .......
ಸುಶೀಲೆ, ಮುಂದೆ ಕೋಪವನ್ನು ತಡೆಯಲಾರದೆ ಎದ್ದು ನಿಂತು, ದರ್ಪಿತಸ್ವರದಿಂದ ಹೇಳಿದಳು, “ಗಿರಿಯಮ್ಮ ! ಇನ್ನು ನಿಲ್ಲಬೇಡಿರಿ; ಮನೆಗೆ ನಡೆಯಿರಿ ! ಈ ಮಾತುಗಳನ್ನು ನಾನು ಕೇಳಲಾರೆನು ! ಇನ್ನು ಕ್ಷಣವಾದರೂ ನನಗೆ ಇಲ್ಲಿರಲಾಗದು, ನಿಮ್ಮ ದುರ್ಭಾಷೆಗಳು ನನ್ನ ಹೃದಯ ಭೇದಕಗಳ ಕ್ರೂರನಾರಾಚಗಳಾಗಿವೆ! ದೇವರು ನಿಮಗೆ ಇಂತಹ ಬುದ್ಧಿಯನ್ನೇಕೆ ಕೊಟ್ಟನೊ ? ನಿಮಗಿಷ್ಟು ವಯಸ್ಸಾಗಿದರು ವ್ಯರ್ಥ !! " ಎಂದು ಹೇಳಿ ನಿಲ್ಲದೆ ಮನೆಯೊಳಕ್ಕೆ ಹೊರಟುಹೋದಳು, ಗಿರಿಯಮ್ಮನು, ಮನದಾಗ್ರಹವ್ಯಗ್ರಳಾಗಿ ಬಿರಬಿರನೆ ನೋಡುತ್ತೆ, 'ಎಲೆಲೆ ಕಟವಾಣಿ ! ನಿನ್ನೀ ಅಹಂಕಾರಕ್ಕೆ ತಕ್ಕ ಪ್ರಾಯಶ್ಚಿತ್ತವನು‌‌‌‌‌‌‌‌‌‌‌‌‌

ನಾನು ಇನ್ನು ಒಂದು ವಾರದೊಳಗಾಗಿಯೇಮಡದಿದ್ದರೆ ನನ್ನ ಹೆಸರು ಗಿರಿಯಮ್ಮನಲ್ಲ ! ಚೆನ್ನಾಗಿ ತಿಳಿದಿರು,' ಹೀಗೆ ಹೇಳಿ ಅಲ್ಲದೆ ಸಲ್ಲದ ದೋಷಾರೋಪದಿಂದ ವಿಷಬೀಜವನ್ನು ನೆಟ್ಟು, ಸ್ವಗೃಹಾಭಿಮುಖಿಯಾಗಿ ಕೊರಟುಕೊರಳು, (ಇಂತಹ ವಿಷಬೀಜವನ್ನು ಬಿತ್ತಿ ಬೆಳೆಯಿಸತಕ್ಕ ಗಿರಿಯಮ್ಮನವರು ಈಗಲೂ, ಅಲ್ಲಲ್ಲಿ ಕಾಣುತ್ತಿರುವರಲ್ಲವೆ ? ಇರಲಿ.)

ಶ್ರೀ

ದ್ವಿತೀಯ ಹರಿಚ್ಛೇದ

(ಸಂಸ್ರಾರ್ಥನೆ.)

ಭಗರ್ವಾ ಭಾಸ್ಕರನು ಆಯಾಸ ಪರಿಹಾರಕ್ಕಾಗಿ ಅಪರಾಂಬುಧಿ ಯಲ್ಲಿ ಧುಮ್ಮಿಕ್ಕಿದನೇನೋ ? ಆತನ ಸುಳಿವೇ ಇಲ್ಲ. ಕ್ಷಣಮಾತ್ರ ಅಲ್ಲಿ ನಾಲ್ಕು ಕಡೆಯಿಂದೆಯೂ ಕತ್ತಲೆಯಾವರಿಸಿದುದು. ಆಕಾಶವು ಮೇಘಮಯ ; ಪ್ರಚಂಡವರುಶನ ಅಭ್ಯುದಯ | ಕ್ಷಣಕ್ಕೊಮ್ಮೆ ವಿದ್ಯುಲ್ಲತೆಯ ಸಂದರ್ಶನ!! ಬೀದಿಯಲ್ಲಿ ಒಬ್ಬರಾದರೂ ಇಲ್ಲ ! ಕತ್ತಲೆ ಯಾಗಿ ಇನ್ನೂ ಹೆಚ್ಚು ಹೊತ್ತಾಗಿಲ್ಲ. ಆಗಲೇ ಶಾಂತಿರಾಜ್ಯ ಸ್ಥಾಪ ನಂಗಾಗಿ ಹೋಗಿದೆ ! ಸಾಲದುದಕ್ಕೆ ಮಳೆ ಬರುವ ಸಂಭವವೂ ಉಂಟಾಗಿದೆ.
ಸುಶೀಲೆಯು ಆಕಾಶವನ್ನು ನೋಡಿದಳು. ಮಳೆ ಬರುವುದೆಂಬ ಭಯದಿ೦ದ ಅಳುಗಳನ್ನು ಮನೆಗೆ ಕಳಿಸಿಬಿಟ್ಟಳು, ದಾಸಿಯಾದ ಮಯೂರಿಯೊಬ್ಬಳನ್ನು ಮಾತ್ರ ಮನೆಯಲ್ಲಿರುವಂತೆ ಹೇಳಿ, ಒಳಹೊಕ‍್ಕು ದೇವ ಗೃಹವನ್ನು ಸೇರಿ, ದೀಪಾರಾಧನೆಯನ್ನು ನಡೆಯಿಸಿ, ಸ‍್ವಾಮಿಯನ್ನು ಅನನ್ಯ ಭಕ್ತಿಭಾವದಿಂದ ಸಂಪ್ರಾರ್ಥಿಸ ತೊಡಗಿದಳು,-ಸರ ಸರ್ವಶಕ್ತ!! ಕೃಪೆಮಡು ! ಅವ ನಿನ್ನ ಕಟಾಕ್ಷಮಾ ತ್ರದಿಂದ ಹರಡರಾತ್ಮಕವ: ದೀ ಪ್ರಪಂಚವು ಸೃಷ್ಟಿಸಲ್ಪಟ್ಟು ಸ್ಥಾಯಿ ಗೊಂಡಿರುವುದೆ, ಅವ ನಿನ್ನ ಸಂಕಲ್ಪಮಾತ್ರದಿಂದ ಕ್ಷಣಕಾಲದಲ್ಲಿ ನಾಶಕೆಎಂವಿಹುದೋ ಅದನ್ನು ಬಲ್ಲವರಾರು ? ದೇವರೇವೆ ! ಆ ನಿ ಕಟಾಕ್ಷ ಕಿರಣ‌ಶಿಪಲ್ಲಿ ಒಂದು ಕಿರಣವಾದರೂ ನನ್ನ ಪ್ರಸ ರಿಲಿ | ಜಗನ್ನಾಥ | ಅತಿಯ ಐಪರಾಧಿಯನ್ನು ಆತ ನಿನ್ನ ಪರ - ಅಶಗೊಳಿಸಿತೋ, ಆ ರಜಸ್ಸಿನ ಒಂದು ರೇಣು ವಾತ್ರವಾ ದರೂ ನನ್ನಿಂದ ಧರಿಸಲ್ಪಡುವಂತೆ ಅನುಗ್ರಹಿಸು! ಪರಮಪುರುಷ! ಆವ ನಿನ್ನ ದಿವ್ಯನಾಮಗುಣ ಕಥನಮಾತ್ರದಿಂದ ವಾಲ್ಮೀಕಿ, ಮಹರ್ಷಿಯೂ ಕವಿ ಸಾರ್ವಭೌಮನೂ ಆಗಿ ಆಚಂದ್ರಾರ್ಕವಾಗಿ ಕೀರ್ತ್ಯಂಗನೆಯಿಂದ ಸೇವೆ ಮಾಡಿಸಿಕೊಳ್ಳುತ್ತಿರುವನೋ, ಆ ನಿನ್ನ ದಿವ್ಯನಾಮಾವಳಿಯನ್ನು ಜಪಿಸುವಂತೆ ನನಗೆ ಕಟಾಕ್ಷಿಸು! ದಯಾಮಯ | ಈ ಸ್ತ್ರೀ ಜನ್ಮಧಾ ರಣೆಗೆ ಆವುದು ಮುಖ್ಯವಾದ ಆಶ್ರಯವಸ್ತುವೊ, ಆವುದು ಇಹಪರ ಸೌಖ್ಯಕ್ಕೂ ಸಾಧನಶ್ವಕೂಪವೋ,-ಆವ ಮೂರ್ತಿಯನ್ನುಳಿದು, ವ್ರತ ನಿಯಮಾದಿಗಳೂ, ಅಪ್ರಯೋಜಕಗಳೋ ಆ ನನ್ನ ಸ್ವಾಮಿಯನ್ನು ಸನ್ಮಾರ್ಗಗಾಮಿಯನ್ನಾಗಿ ಮಾಡು! ವಿವೇಕವನ್ನುಂಟುಮಾಡು || ದೇವ | ಕೃಪಾರ್ಣವ !! ಆ ನನ್ನ ಸ್ವಾಮಿಗೆ ಇಹದಲ್ಲಿ, ಅಪ್ರಿಯವೂ ಅಹಿತವೂ ಆದ ಕರ್ಮವಾವುದೇ ಆದರೂ, ನನ್ನಿಂದ ಚಿಂತಿಸಲ್ಪಡದಿರಲಿ | ಆ ನನ್ನ ಸ್ವಾಮಿಯಲ್ಲಿ ನನಗೆ ಭಕ್ತಿ, ಪ್ರೀತಿಗಳು ಮತ್ತು- ಮತ್ತೂ ಹೆಚ್ಚುತಿರಲಿ! ಆ ನನ್ನ ಪ್ರಭುವಿನ ವಿಚಾರವಾಗಿ ಅಸಲಪಿಸುವ ಕುಹು ಕರ ಕುತ್ಸತವಾರ್ತೆಗೆ ನನ್ನ ಕಿವಿಯೂ ಮನಸ್ಪೂ ವಿಮುಖವಾಗಿದ್ದು, ನಿಜಕರ್ತವ್ಯಪಾಲನೆಯಲ್ಲಿ ಮನವು ನೆಲೆಗೊಂಡಿರಲಿ| ಹೇ, ಮೀನ ಬಂಧೋ! ಮತ್ತೂಂದು ವರವನ್ನು ಅನುಗ್ರಹಿಸು! ಸತೀಶ್ವರಕ್ಷಣೆಗೆ ಅತ್ಯವಶ್ಯವಾದ- ಕುಮಂತ್ರ ಕುಠಾರಸ್ವರೂಪಗಳಾದ ಧೈರ್ಯ-ಸ್ಥೈರ್ಯ-ಸಾಹಸ-ಕ್ಷಮ-ದಮಾದಿ ಗುಣಗಳು ನನ್ನಲ್ಲಿ ಬೇರೂರುವಂತೆ ಕೃಪೆ ಮಾಡು, ಅಷ್ಟು ಮಾತ್ರ ಮಾಡು! ಇಂದಿನ.... ................ .... ...

ಸುಶೀಲೆಯ ಸಂಪ್ರಾರ್ಥನೆ, ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ ಅಂಗಳಕ್ಕೆ ಆಗಂತುಕನಾವನೋ ಬಂದು, ಹೊರಗೆ ಕಾವಲಿದ್ದ ಮಯೂರಿಯನ್ನು ಕುರಿತು ಪ್ರಶ್ನಿಸಿದನು-"ಮಯೂರಿ, ನಿಮ್ಮ ಯಜಮಾನಿಯವರೆಲ್ಲಿ?”

ಮುಯೂರಿ - "ಅವರು ದೇವರ ಸಮುಖದಲ್ಲಿ ಪ್ರಾರ್ಥಿಸುತ್ತಿರುವರು"
ಆಗಂತುಕನು ದೇವರ ಕಿರುಮನೆಯೊಳಹೊಕ್ಕು, ಸುಶೀಲೆಯ

ಮುoಗಡೆ ಹೋಗಿ ನಿಂತನು.

ಸುಶೀಲೆ - ಗಾಬರಿಯಿಂದ ತಲೆಯೆತ್ತಿ ನೋಡಿ ಎದ್ದುನಿಂತಳು. ಆಗಂತು
ಕನನ್ನು ನೋಡಿದೊಡನೆಯೇ ಇವಳ ಧೈರ್ಯ ಸ್ಥೈರ್ಯಗಳು
ಮರೆಯಾದುವು. ಮನವು ಕಳವಳಕ್ಕೀಡಾದುದು. ವಾಕ್ಯಕ್ತಿ ಲೋಪವಿಂದ
ಮಾತಿಲ್ಲದೆ ನಿಂತುಬಿಟ್ಟಳು.

ಆಗಂತುಕ - (ನಗುತ್ತ): ಏಕೆ? ಸುಶೀಲೆ| ನನ್ನನ್ನು ಮರತೆಯೋ?
ನಾನಾರು ಗೊತ್ತಿಲ್ಲವೊ? ಈಗ ನೋಡು | ನಾನು ನಿನ್ನ
ಬಾವ ತಂತ್ರನಾಥನಲ್ಲವೆ?

ಸುಶೀಲೆ - ನೆನಪಿಲ್ಲದಿಲ್ಲ.

ತಂತ್ರ - ಹಾಗಿದ್ದೂ ಬೆಚ್ಚರಗೊಳ್ಳುವದೇಕೆ? ನೀನು ಮೊದಲಿನ
ಸುಶೀಲೆಯಲ್ಲ! ನಿನ್ನ ಸ್ವಭಾವವು ಈಚೆಗೆ ಬಲು ಬದಲಾಯಿಸಿ
ಹೋಗಿದೆ. ಹೀಗಾಯ್ತೇಕೆ?

ಸುಶೀಲೆ - ಅದು ಆಗತಕ್ಕುದೇ ಸಹಜ; ಅದಿರಲಿ. ಮನೆಯಲ್ಲಿ ಎಲ್ಲರೂ
ಸೌಖ್ಯವಷ್ಟೆ?

ತಂತ್ರ - ಎಲ್ಲರೂ ಸೌಖ್ಯವಾಗಿಯೇ ಇರುವರು. ಆದರೆ ನಿಮ್ಮ
ಅಕ್ಕನು ಸತ್ತಂದಿನಿಂದ ಒಬ್ಬನು ಮಾತ್ರವೇ ಅಸುಖಿ!

ಸುಶೀಲೆ - ಕೈ ಕೂಸೊ?

ತಂತ್ರ - ಕೂಸಿಗೆ ಆಸೌಖ್ಯವಾಗುವ ಕಾರಣವಿಲ್ಲ. ಈಗ ಅಸುಖಿ
ಯಾದವನು ನಾನೊಬ್ಬನೇ! ಸುಶೀಲೆ- ಅದೇನು-ಸ್ವಲ್ಪಕಾಲದ ದುಃಖ ಹೊಸ ಹೆಂಡತಿ ಮನಗೆ
ಬಂದರೆ, ಅವಳಲ್ಲಿ ಅನುರಾಗ ಹೆಚ್ಚಿದಂತೆಲ್ಲಾ ಹಳೆಯ ಹೆಂಡತಿ
ನೆನಪು ಮರೆಯುವುದೇ ಲೋಕಸ್ವಭಾವವಾಗಿದೆ 1 ನಮ್ಮ
ಅಕ್ಕನು ಸತ್ತುದು, ಶೋಕವನ್ನುಂಟುಮಾಡತಕ್ಕ ವಿಚಾರವಾಗಿ
ದ್ದರೂ, ಅವಳು ತನ್ನ ಪತಿಯಿದರೆ ಮೃತಿ ಹೊಂದಿದುದು ಶ್ರೇಯಸ್ಕರವೆಂದೇ ನಾನು ನಂಬಿರುವೆನು.

ತಂತ್ರ-ಅದಿರಲಿ, ಸುಶೀಲೆ ! ನಾನು ಇದೇ ಊರಲ್ಲೇ ಇದ್ದರೂ ಅಡಿ
ಗಡಿಗೆ ಬಂದು ನಿನ್ನನ್ನು ನೋಡಲಾಗಲಿಲ್ಲವೆಂದು ಚಿಂತಿರುವೆನು.
ಬರಬೇಕೆಂಬ ಆಶೆ; ಅದರೆ--ಹೇಗೆ ಬರಲಿ ? ಇನ್ನು ಮುಂದ
ಹೇಗಾದರೂ ತಪ್ಪದೆ ಬರುತ್ತೇನೆ.

ಸುಶೀಲೆ ...ಬಾವ! ನೀವು ಬರಲಿಲ್ಲವೆಂಬ ಅಸಮಾಧಾನವಾರಿಗೂ ಇಲ್ಲ.
ಬಾರದೇ ಇದ್ದರೂ ಆಕ್ಷೇಪಿಸುವರಾರೂ ಇಲ್ಲ, ನಿಮ್ಮ
ಅನುಕೂವು ಹೇಗೋ ಹಾಗೆ ಮಾಡಬಹುದು, ಮನೆಗೆಲಸ
ವನ್ನು ಬಿಟ್ಟು ಬರಬೇಕಾದ ಅವಶ್ಯವೇನು ? ಇಲ್ಲದ ಚಿಂತೆಗಳನ್ನು
ಹತ್ತಿಸಿಕೊಳ್ಳುವುದು ಸರಿಯಾದುದಲ್ಲ,

ತಂತ್ರ-ಅಹುದು, ನಿಜ! ನಾನು ಸುಮ್ಮನೆ ಚಿಂತಿಸುವುದೊಂದದೆ |
ನಿನಗೆ ಬೇರೆ ನನ್ನಲ್ಲಿ ಪ್ರೇಮವಿಲ್ಲ ? ನನ್ನ ಹೆಂಡತಿಯಿದ್ದಾಗ
ನಿನಗೆ ನನ್ನಲ್ಲಿ ಎಷ್ಟು ಮರುಕವಿತ್ತು ? ಆಗ ನೀನು ಎಷ್ಟೋ
ಬಗೆಯಿಂದ ನನ್ನನ್ನು ಪ್ರೀತಿಸುತ್ತಿದ್ದೆ, ಈಗ ಅವೆಲ್ಲವೂ ಎಲ್ಲಿ ?

ಸುಶೀಲ-ಹೀಗೆ ಹೇಳಲಾಗದು, ಆಗಿನ ಮಮತೆಯೇ ಈಗಲೂ ಇದೆ
ಯೆಂದು ದೃರ್ಯ ಹೇಳಬಲ್ಲೆನು, ಅಗಳಿನ ಭ್ರಾತೃಭಾವವೇ
ಈಗಲೂ ನನ್ನ ಹೃದಯದಲ್ಲಿ ದೃಢವಾಗಿರುವುದು, ತಂತ್ರ - ಸುಶೀಲೆ! ಇದೇನು? ಇಂದು ನಿನ್ನ ಮುಖವು ಇಷ್ಟು ಬಾಡಿ ಹೋಗಿರುವುದು?

ಸುಶೀಲೆ - ಅಂತಹದೇನೂ ಇಲ್ಲ.

ತಂತ್ರ - ನನಗೆ ಗೊತ್ತಿದೆ. ಸುಶೀಲೆ! ಬಲ್ಲೆನು. ಅದಕ್ಕೆಂದೇ ನಾನಿಲ್ಲಿಗೆ ಬಂದೆನು. ಇಂದು ನೀನು ಈವರೆಗೂ ಉಪವಾಸವೆಂಬುದನ್ನು ತಿಳಿದೇ ಇಲ್ಲಿಗೆ ನಾನು ಬರಬೇಕಾಯ್ತು.

ಸುಶೀಲೆ - ನಾನು ಉಪವಾಸದಿಂದ ಇದ್ದರೇನು? ಅದು ತಮ್ಮ ಆಗಮನಕ್ಕೆ ಹೇಗೆ ಹೇತುವಾದೀತು?

ತಂತ್ರ - ಅದೇ ಹೇತುವಲ್ಲದಿದ್ದರೂ, ನಾನು ನನ್ನ ಕರ್ತವ್ಯವನ್ನು ನೆರವೇರಿಸಲಿಕ್ಕೂ, ನಿನ್ನ ಗಂಡನ ನಡತೆಯನ್ನು ತಿಳಿಸಲಿಕ್ಕೂ ಬಂದೆನು. ಸುಶೀಲೆ! ಹೇಗೂ ನನ್ನ ಮನಸ್ಸಿಗೆ ಸಮಾಧಾನವಿಲ್ಲ.

ಸುಶೀಲೆ - ಅದೇಕೆ ?

ತಂತ್ರ - ದುರ್ವೃತ್ತಿ ಹೆಚ್ಚುತ್ತಿದೆ. ಯಾವಾಗಲೂ,.......................

ಸುಶೀಲೆ - ಅಷ್ಟಕ್ಕೇ ತಡೆದು. -'ಬಾವ | ಇನ್ನು ಸಾಕು! ಹೊತ್ತು ಮೀರುತ್ತಿದೆ. ನಿಮ್ಮ ಮನೆಯಲ್ಲಿ ಜನರು ಊಟಕ್ಕೆ ಕಾದಿರಬಹುದು. ಇನ್ನು ಹೊರಡಿರಿ. ಗಂಡಸರಾರೂ ಮನೆಯಲ್ಲಿಲ್ಲದ ವೇಳೆ - ಅದರಲ್ಲೂ ಇಷ್ಟು ಹೊತ್ತಿನಲ್ಲಿ ನೀವು ಬಂದುದೇ ಸರಿಯಲ್ಲ. ಅದು ಸಾಲದೆ ಇಂತಹ ಮಾತುಗಳನ್ನಾಡುವುದು ಸರ್ವತಾ ಸರಿಯಾಗಿ ಕಾಣುತ್ತಿಲ್ಲ. ಅವರು ಬಂದ ಬಳಿಕ ಅವರಲ್ಲಿಯೇ ಅವರ ದುರ್ಗುಣಗಳನ್ನು ತೋರಿಸಬಹುದು. ಈಗ ಯಾವುದೂ ಹೇಳತಕ್ಕುದಿಲ್ಲ. ತಂತ್ರ - ಭಲೆ! ಸುಶೀಲೆ ಭಲೆ!! ಬಲು ಚೆನ್ನಾಗಿ ಹೇಳಿದೆ. ನಿನ್ನನ್ನು
ಬಿಟ್ಟು, ನಿನ್ನ ಗಂಡನೇ ನನಗೆ ಬೇಕಾದವನೋ? ಅವನಲ್ಲಿ
ನನಗೆ ನಿಜವಾದ ಅಭಿಮಾನವುಂಟೆಂದು ತಿಳಿದೆಯೋ? ನಿನ್ನ ತಂದೆ
ಅವನ ಆಸ್ತಿಗೆ ಮರುಳಾಗಿ ನ್ಯಾಯವಾಗಿಯೂ ನನಗೆ ಸಲ್ಲಬೇ
ಕಾಗಿದ್ದ ನಿನ್ನನ್ನು ಅವನಿಗೆ ಮದುವೆಮಾಡಿಕೊಟ್ಟ ಮಾತ್ರಕ್ಕೇ
ನನಗೆ ನಿನ್ನಲ್ಲಿರುವ ಅಭಿಮಾನವು ತಪ್ಪುದೆಂದಿರುವೆಯೋ?
ನೀನಿನ್ನೂ ಮುಗ್ಧೆ! ಆವುದನ್ನೂ ತಿಳಿದವಳಾಗಿಲ್ಲ, ನಿನ್ನ
ಗಂಡನಿಗೆ ನಿನ್ನಲ್ಲಿ ಸ್ವಲ್ಪವಾದರೂ ಪ್ರೇಮವಿರುವುದೆ?
ನೋಡು! ಐಶ್ವರ್ಯಕ್ಕೆ ಕೊರತೆಯಿಲ್ಲ. ಎಷ್ಟಿದ್ದರೂ ನಿನ್ನ ಮೈಮೇಲೆ
ಒಂದು ಪಾವು ಭಂಗಾರವನ್ನಾದರೂ ಹಾಕಿಲ್ಲ. ನಿನಗೆ ಸವಿ
ಯೂಟಕ್ಕಾದರೂ ಅವಕಾಶವಿರುವುದೋ ಹೇಗೆ ?............
ಈಗ ನೋಡು! ಇಷ್ಟು ಹೊತ್ತಾದರೂ ಇನ್ನೂ ಮನೆಗೆ
ಬಂದಿಲ್ಲ. ಅಲ್ಲಿ ತಾನು ಉಂಡು ನಲಿಯುತ್ತಿರುವನು. ಇಲ್ಲಿ
ನೀನು ಹಸಿದು ಸಾಯುತ್ತಿರುವೆ? ಹಣವನ್ನೆಲ್ಲಾ ಹಾಳುಮಾ
ಡುತ್ತಿರುವನು. ಸುಶೀಲೆ | ನಿನ್ನೀ ಸೌಂದರ್ಯ................

ಸುಶೀಲೆ - (ಕೋಪವನ್ನು ತಡೆಯಲಾರದೆ ತಲೆಯತ್ತಿ ದರ್ಪಿತಸ್ವರ‍ದಿಂ
ದ) "ಮಹಾಶಯ! ಕ್ಷಮಿಸಿರಿ! ನಿಮ್ಮ ಅತ್ಯುಕ್ತಿ ನನಗೆ
ಬೇಕಾಗಿಲ್ಲ. ತಮ್ಮ ಉಪದೇಶಕ್ಕಾಗಿ ಇದೆ ಇದೆ ನೂರಾರು
ವಂದನೆಗಳು! ಇನ್ನು ಹೊರಡಿರಿ!"

ತಂತ್ರ - (ಗರ್ವದಿಂದ ಪರಿಹಾಸವಾಗಿ ನಗುತ್ತೆ) - ಮುಗ್ಧೆ! ಅನ್ಯಾಯ
ವಾಗಿ ಕೆಟ್ಟು ಹೋಗುವೆ. ಈ ನವಯೌವನ ರೂಪಲಾವ
ಣ್ಯಾದಿಗಳನ್ನು ಈಗಲೇ ಸರಿಯಾದ ದಾರಿಯಲ್ಲಿ ವಿನಿಯೋಗಿಸು.
ನಿನ್ನ ಗಂಡನು ಅದರ ಬೆಲೆಯನ್ನು ತಿಳಿದವನಾಗಿಲ್ಲ! ಇನ್ನಾ
ದರೂ ನನ್ನ ಮಾತನ್ನು ಕೇಳಿ ನನ್ನೊಡನೆ ಹೊರಡು. ನಿನಗೆ ಸ್ವರ್ಗ ಸುಖವನ್ನೇ ಉಂಟುಮಾಡುವೆನಲ್ಲದೆ ನಾನೂ ನಿನ್ನ
ದಾಸಾನುದಾಸನಾಗಿರುವೆನು. ನಿನಗೆಂದೆಂದಿಗೂ ಯಾವ
ಭಾಗದಲ್ಲಿಯೂ ಕೊರತೆಯಾಗದಂತೆ ನಡೆದುಕೊಳ್ಳುವೆನು.
ವಿಳಂಬಿಸಬೇಡ.............................

ಸುಶೀಲೆಗೆ ಕೋಪವು ಮಿತಿಮೀರಿತು. ಶೋಕದಿಂದ ಕಣ್ಣುಗಳಲ್ಲಿ ನೀರು ತುಂಬಿತು. ಆಗಲೇ ತಂತ್ರನಾಥನನ್ನು ಹೊರಗೆ ಓಡಿಸಬೇಕೆಂದು ತೋರಿತು. ಆದರೆ ಒಬ್ಬರೂ ಇರಲಿಲ್ಲ. ಉಪಾಯಾಂತರವಿಲ್ಲದೆ ಕಡೆಗೆ ವಿಕೃತಸ್ವರದಿಂದ - ಹುಚ್ಚ! ಹೊರಡು, ಇಲ್ಲಿ ನಿಲ್ಲಬೇಡ! ನಿನ್ನ ಭೋಗ ಭಾಗ್ಯಾದಿಗಳು ನನಗೆ ಬೇಡ. ಪಾತಿವ್ರತ್ಯಕ್ಕೆ ಮಿಗಿಲಾದ ವಸ್ತು ಈ ಜಗತ್ತಿನಲ್ಲೇ ಮತ್ತಾವುದೂ ಇಲ್ಲ. ಚೆನ್ನಾಗಿ ತಿಳಿದಿರು. ಮೂರ್ಖ! ರಾವಣನಿಗೆ ಐಶ್ವರ್ಯ-ಅಧಿಕಾರಾದಿಗಳು ಹೇರಳವಾಗಿತ್ತೆಂಬುದು ಸೀತೆಗೆ ತಿಳಿದೇ ಇದ್ದುದು; ಆದರೂ ಅವಳು ಅವುಗಳೆಲ್ಲವನ್ನೂ ಹುಲ್ಲಿಗೂ ಕಡೆಯಾಗಿ ಭಾವಿಸಿ, ತನ್ನ ನಿಶ್ಚಲಮನೋವೃತ್ತಿಗೆ ತಕ್ಕ ಮಹತ್ಫಲವನ್ನೇ ಹೊಂದಿದಳಲ್ಲವೆ? ಆ ದೇವಿಯ ದಾಸಿಯೇ ನಾನೆಂದು ತಿಳಿ. ಈ ಶರೀರ, ಮನಸ್ಸು, ಐಶ್ವರ್ಯಗಳೇ ಮೊದಲಾರ ಸರಸ್ವವನ್ನೂ ನನ್ನ ಸ್ವಾಮಿಗೆ ಸಮರ್ಪಿಸಿರುವೆನು. ಆತನ ಅನುಗ್ರಹ ಬಲದಿಂದ ಈ ಶರೀರವು ನಷ್ಟವಾದರೂ ಆತನಲ್ಲಿ ಸೇರಿರುವ ನನ್ನ ಮನಸ್ಸು ಮಾತ್ರ ಚಲಿಸಲಾರವೆಂದು ನಂಬು! ನೀನೀಪರಸ್ತಾಪಕ್ಕೆರಗುವುದು ಸರಿಯಲ್ಲ. ನಡೆ!

ತಂತ್ರ - (ಕಾತರಸ್ವರದಿಂದ) ಬೇಡ, ಸುಶೀಲೆ! ಹೀಗೆ ನಿಷ್ಟುರೆಯಾಗಬೇಡ!! ನಿನ್ನ ಸುಖವನ್ನೇ ಕೋರುತ್ತಿರುವವನಲ್ಲಿ ಈ ಬಗೆಯಾದ ಬಿರುನುಡಿ ತಕ್ಕುದಲ್ಲ. ಸುಮ್ಮನೆ ಹಟಮಾಡಬೇಡ. ಸುಶೀಲೆ - ಸುಮ್ಮನೇಕೆ ದುರ್ಲಭವಸ್ತುವನ್ನು ಬಯಸುವೆ? ಈ ದುರಾಶೆಯನ್ನು ಬಿಟ್ಟುಬಿಡು.

ತಂತ್ರ - ಹಾಗೆಯೇ ಹೇಳುವೆಯಲ್ಲವೆ? ಸುಶೀಲೆ! ನೀನಾಗಿ ನನ್ನ ಮಾತನ್ನು ನಡೆಯಿಸಿಕೊಡದಿದ್ದರೆ ನಾನು ಬಲವಂತದಿಂದಾದರೂ ನನ್ನ ಇಚ್ಛಾಪೂರ್ತಿಗಾಗಿ, ಇಂದಿಲ್ಲದಿದ್ದರೆ-ಎಂದಾದರೊಂದುದಿನ, ನಿನ್ನನ್ನು ಭ್ರಷ್ಟಳನ್ನಾಗಿ ಮಾಡದಿರಲಾರೆನು! ಇನ್ನಾದರೂ ನನ್ನ ಅನಂತ....................................

ಸುಶೀಲೆ - ಪಾಪಿ! ನಿನ್ನೀ ಉನ್ಮತ್ತ ಪ್ರಲಾಪಕ್ಕೆ ಧಿಕ್ಕಾರ! ಮತ್ತೆ ಈ ಮಾತೆತ್ತದೆ ಅಲ್ಲಿಂದ ಹಾಗೆಯೇ ಹೊರಟುಹೋಗು. ನನ್ನ ಸುಖದ ಚಿಂತೆ ನನ್ನ ಸ್ವಾಮಿಗೆ ಮಾತ್ರವೇ! ನನ್ನ ಅಭ್ಯದಯಕ್ಕೆ ಕಾರಣವಾದರೂ ಸತೀತ್ವವೊಂದೇ! ನೀನು ನನ್ನನ್ನು ಎಂದಿಗೂ ಮುಟ್ಟಲಾರೆ! ಭ್ರಷ್ಟ! ಹೆಂಗಸು ಎಂದಿನವರೆಗೆ ತನ್ನ ಸತೀತ್ವವನ್ನು ರಕ್ಷಿಸಿಕೊಂಡಿರುವಳೋ, ಅಂದಿನವರೆಗೆ ಅವಳು ಅಬಲೆ, ಆದರೆ ನಿನ್ನಂತಹರ ವಿಚಾರದಲ್ಲಿ ಅವಳು ಅತಿಬಲೆಯೇ! ಸುಳ್ಳಲ್ಲ. ಅವಳು ತನ್ನ ಪಾತಿವ್ರತ್ಯವನ್ನು ಕಡೆಗಣಿಸಿದವಳಾದರೆ, ಆಗ ಅವಳಂತಹ ನೀಚವಸ್ತುವೊಂದೂ ಇರುವುದಿಲ್ಲ. ಇದನ್ನು ಚೆನ್ನಾಗಿ ತಿಳಿದಿರು. ಹೋಗು! ನಿನ್ನ ಆಸೆಯಲ್ಲಿ ಎಳ್ಳಷ್ಟಾದರೂ ಈ ಜನ್ಮದಲ್ಲಿ ಮಾತ್ರವಲ್ಲ; ಎಂದೆಂದಿಗೂ ಕೈ ಕೂಡಲಾರದೆಂದು ತಿಳಿ.

ತಂತ್ರ - ಹಾಗೋ? ನಿಜವೋ? ನಾನೊಬ್ಬನೇ ಹೊರಡಲೋ ನೀನು.............

ಸುಶೀಲೆ - ಚಿಃ! ..... ......ನಿಲ್ಲಬೇಡ, ನನ್ನ ಸ್ವಾಮಿಯ ಅನುಗ್ರಹವು ಪೂರ್ಣವಾಗಿರುವವರೆಗೂ, ಮತ್ತೂ ಗುರುಜನರ ಉಪ ದೇಶಾಮೃತವು ನನ್ನ ಹೃದಯದಲ್ಲಿ ನೆಲೆಗೊಂಡಿರುವವರೆಗೂ ಆತ್ಮದ್ರೋಹ, ಗುರುದ್ರೋಹ, ಪತಿದ್ರೋಷಾದಿಗಳಿಗೆಂದಿಗೂ ನಾನು ಎಡೆಕೊಡಲಾರೆನು, ಹೊರಟುಹೋಗು.

ತಂತ್ರ-ಹಾಗಾದರೆ ನೀನು ಸಾಯುವೆ | ನಿನಗಾಗಿ ನಿನ್ನ ಗಂಡನೂ ಸಾಯುವನು, ಇದು ನಿಜವು.

ಸುಶೀಲೆ-ಸಾಯುವೆನು; ನನ್ನ ಸತಿಯ ಸಂಗಡ ನಾನು ಸಾಯುವು ದೆಂದರೆ ಸಂತೋಷವೇ ಸರಿ, ಹಗಲನ್ನು ಬಿಟ್ಟು ಇರಳ, ನೆರಳನ್ನು ಬಿಟ್ಟು ವಸ್ತುವೂ ಹೇಗೆ ಇರಲಾರದೋ, ಹಾಗೆಯೇ ಹುಟ್ಟು (ಜನ್ಮ) ಸಾವನ್ನು ಬಿಟ್ಟಿರಲಾರದು, ನನ್ನ ಪತಿಯ ಸಾವಿಗೆ ನೀನು ಕಾರಣೀಭೂತವಾದರೆ ಇಹಪರಗಳಲ್ಲಿ ಎಂತಹ ಯಾತನೆಗಳಿಗೆ ಗುರಿಯಾಗುವೆಯೆಂಬುದನ್ನು ಕ್ಷಣಕಾಲ ಭಾವಿಸಿ ನೋಡು ? ಇನ್ನು ಹೇಳಲಾರೆನು ಇಲ್ಲಿಂದ ಮೊದಲು ಹೊರಗು.

ತಂತ್ರ-ಕೈ ಬೆರಳುಗಳನ್ನು ಕಚ್ಚಿಕೊಳ್ಳುತ್ತ ಕರ್ಕಶಸ್ವರದಿಂದ-ಪಾಪಿ! ಚoಡಿ!! ಹೀಗೆ ಹೇಳಿದೆಯಲ್ಲವೆ ? ಇರಲಿ, ಇನ್ನು ಒಂದು ವಾರದೊಳಗಾಗಿಯೇ ನಿನ್ನೀ ಕಾಠಿಣ್ಯಕ್ಕೆ ತಕ್ಕ ಪ್ರತೀಕಾರ ವನ್ನು ಹೊಂದುವೆ! ಎಂದುಸಿರಿ ಅಲ್ಲಿ ನಿಲ್ಲದೆ ಉನ್ಮತ್ತನಂತೆ ಹೊರಟುಹೋದನು.

ಪಾಪ ! ಸುಶೀಲೆಗೆ ಚಿಂತೆ-ಅನುತಾಪ,-ಕಳವಳಗಳು ಮಿತಿ ಮೀರಿದ್ದುವು. ಚದರಿರುವ ಧೈರ್ಯವನ್ನು ಮತ್ತೆ ಹೊಂದಲು ಅವಕಾಶವಿಲ್ಲ, ಮುಂದೆ ಮಾಡುವುದನೇನೆಂಬುದನ್ನರಿಯಲಾರದೆ ಕಾತರಿಸಿ, ಕಣ್ಣೀರಸುರಿಸುತ್ತ ಮತ್ತೆ ದೇವತಾಪ್ರಾರ್ಥನೆಗೆ ತೊಡಗಿ-ದೇವರ ಜಗುಲಿಯ ಮೇಲೆಯೇ ತಲೆಯಿಟ್ಟು ಮಲಗಿ ಪರವಶಳಾದಳು.


‖ಶ್ರೀ‖

ತೃತೀಯ ಹರಿಚ್ಛೇದ

(ಕ್ರೋಧಾನಲ)

ರಾತ್ರಿ ಹನ್ನೊಂದು ಗಂಟೆ ಹೊಡೆದುಹೋಗಿದ್ದುದು, ಶಾಂತಿ ದೇವಿ ಜಯಪತಾಕೆಯನ್ನು ಹಿಡಿದು, ರಾಜ್ಯಭಾರವನ್ನು ನಿರ್ವಹಿ ಸುತ್ತಿದ್ದಳು, ತಟ್ಟಿ ಯಲ್ಲಿ ಮರಿಯೊಬ್ಬಳೇ ತೂಕಡಿಸುತ್ತ ಕುಳಿತಿದ್ದಳು, ಬೀದಿಯ ಬಾಗಿಲು ಹಾಕಲ್ಪಟ್ಟಿದ್ದು ದು, ಸುಶೀಲೆಗೆ ಇನ್ನೂ ಬಾಹ್ಯವ್ಯಾಪಾರದ ಸ್ಮತಿಯೇ ಉಂಟಾಗಿರಲಿಲ್ಲ, ತುಕರಿ ಸುತ್ತಿದ್ದ ಮಯೂರಿಯ ಕಿವಿಯನ್ನು ಕೊರವಂತ ಮನೆಯ ನವಾದ ವಿನೋದು ಬೀದಿಯ ಬಾಗಿಲನ್ನು ತಟ್ಟಿ ಕೂಗಿದ ಶಟ್ಟವು ಕೇಳಬಂದುದು, ಮಯರಿಯು ಕೂಡಲೆ ಎದ್ದು ಹೋಗಿ ಬಾಗಿಲನ್ನು ತಂದು ತನು ಮೊದಲು ಕುಳಿತಿದ್ದೀರಿಗೇ ಬಂದು ನಿಂತಳು, ವಿನೋದ-' ಮಯಂ | ಯಜಮಾನಿಯೆಲ್ಲಿ?' ಮಯೂರಿ—ದೇವರ ಮನೆಯಲ್ಲಿ.

ಎನೋವನು ದೇವರ ಮನೆಯೊಳಕ್ಕೆ ಹೊಕ್ಕು ನೋಡಿದನು. ಸುಶೀಲೆ ಎಸ್ಕೃತಿಯಲ್ಲಿದ್ದುದರಿಂದ ತಿಳಿಯಲಿಲ್ಲ, 'ಸಾಕು; ಏಳುಏಳು!' ಎಂದರಡುಬಾರಿ ಕೂಗಿದನು, ಆರರೂ ಸುಶೀಲೆಗೆ ಎಚ್ಚರ ವಾಗಲಿಲ್ಲ. ಎನೋದನು ಕೋಪಗೊಂಡು,-'ಈ ಹಾಳು ಮೃತಾ ಇವು ಇನ್ನೂ ಸಾಯಲಿಲ್ಲ,' ಎಂದು ಹೇಳಿ ಆಲಿಂರ ಒದ್ದನು.

ಸುಲಿಗೆ ಎಚ್ಚರವಾಯ್ತು, -ಚಿಕಿತೆಯಾಗಿ_' ಯಾರದು? ಎಂದು ಕೂಗಿದಳು, ವಿನೋದ - ಕರ್ಕಶಸ್ವರದಿಂದ - ನಾನು, ನಿನ್ನ ಭಾಗದ ಮೃತ್ಯು!

ಸುಶೀಲೆ - ಕುತೂಹಲದಿಂದ ತಲೆಯೆತ್ತಿ ನೋಡಿದಳು. ಸಾಕಾರ
ಬ್ರಹ್ಮಸ್ವರೂಪನಾದ ಪತಿಯ ಸಾಕ್ಷಾತ್ಕಾರ! ಆನಂದಕ್ಕೆ ಪಾರವಿಲ್ಲ;
ಅನುತಾಪಕ್ಕೆ ಅಂಶವಿಲ್ಲ; ವಂದಿಸಿದಳು. ಅನುಕಂಪಿತಸ್ವರದಿಂದ
ಹೇಳಿದಳು "ಸ್ವಾಮಿ! ಇಂದೇಕೆ ಇಷ್ಟು ಹೊತ್ತಾಯ್ತು?"

ವಿನೋ - ಅದಿರಲಿ; ದೇವರ ಮುಂದೆ ಮಹಾ ತಪಸ್ಸನ್ನು ಮಾಡುತ್ತಿದ್ದೆಯಲ್ಲವೆ?
ಏನೇನು ವರಗಳನ್ನು ಬೇಡಿಕೊಂಡೆ? ನಾನು ಸಾಯಬೇಕೆಂದೊ?

ಸುಶೀಲೆ - ಅಂತಹ ವರವೇನೂ ನನಗೆ ಬೇಕಾಗಿಲ್ಲ. ನಾನು ಕೋರಿದ ವರವು
ನನಗೆ ದೊರತಿದೆ.

ವೀನೋ - ಏನದು?

ಸುಶೀಲೆ - ತಮ್ಮ ಆಗಮನವೇ!

ವಿನೋ - ಹೇಗೆ? ನಾನು ಬಾರದಿದ್ದರೆಯೇ ನಿನಗೆ ಸಂತೋಷವಲ್ಲವೆ?

ಸುಶೀಲೆ - ತಮ್ಮ ಪಾದಸೇವೆಯೊಂದೇ ನನಗೆ ಬೇಕಾದುದಲ್ಲದೆ ಮತ್ತಾವುದೂ
ಬೇಕಾಗಿರದು. ತಮ್ಮ ಮೇಲೆ ಹೊರೆಯಿಸುತ್ತಿರುವ ಅಪಲಾಪಿಗಳ ಅಲ್ಲದ
ಸಲ್ಲದ ಅಪನಿಂದೆಯನ್ನು ದೂರಮಾಡಬೇಕೆಂಬುದೇ ಭಗವಂತನಲ್ಲಿ ನನ್ನ
ಪ್ರಾರ್ಥನೆ.

ವಿನೋ - ಗರ್ವದಿಂದ ನಕ್ಕು - ನಿನ್ನ ತಂತ್ರಗಳನ್ನೂ ಈ ಕುಟಿಲ
ನಟನೆಯನ್ನೂ ಬಲ್ಲೆನು. ಇಂತಹ ಚಾಕಚಕ್ಯವೂ, ಮರುಳು ಮಾಡುವ
ಮೋಹಿನೀ ವಿದ್ಯೆಯೂ, ನಿನ್ನಂತಹ ಸ್ತ್ರೀಯರೊಡನೆಯೇ ಹುಟ್ಟಿತೆಂಬುದನ್ನೂ
ಚೆನ್ನಾಗಿ ಬಲ್ಲೆನು. ಸುಶೀಲೆ - ನಾಥ! ತಮ್ಮ ಅನುಗ್ರಹವಿರುವವರೆಗೂ, ನಾನು ಅಂತಹ
ದೋಷಕ್ಕೆ ಎಡೆಗೊಡಲಾರೆನು. ತಾವು ಹೇಗೆ ಭಾವಿಸಿದರೂ ನನಗೆ
ಸಂತೋಷವೇ!

ವಿನೋ - ಆಗಲಿ; ನೀಜವನ್ನು ಹೇಳು?

ಸುಶೀಲೆ - ನಾನು ಹೇಳಿತಕ್ಕುದೇನು | ನಿನ್ನನ್ನು ಕೇಳದೆಯೇ ನೀವು ನನ್ನ
ಮನೋಭಾವವನ್ನು ತಿಳಿಯುತ್ತಿದ್ದಿರಿ; ನನ್ನ ಕೋರಿಕೆಯನ್ನೂ
ನೆರವೇರಿಸುತ್ತಿದ್ದಿರಿ. ಈಗ ನನ್ನ ಮಾತುಗಳಲ್ಲಿ ನಂಬುಗೆಯೇ ಇಲ್ಲದಿದ್ದರೆ,
ನಾನೇನು ಮಾಡಲಿ?

ವಿನೋ - ಸ್ತ್ರೀಯರೂ, ಅವರ ಮಾತುಗಳೂ ಎಂದಿಗೂ ನಂಬುಗೆಗೆ
ಅರ್ಹವಾದವುಗಳಲ್ಲ. ಸ್ತ್ರೀಯರ ಸ್ವಭಾವವಾದ ಚಪಲ ಚಿತ್ತವ ಕ್ಷಣಕ್ಕೆ ಅರವತ್ತು
ಬಗೆಯಾಗಿ ತಿರುಗುವುದು! ಎಲ್ಲರಲ್ಲಿಯೂ, ವಂಚನೆಯೇ!
ಅವರಿಗೆ ಸುಳ್ಳೆಂಬುದೇ ಕುಲದೇವತೆ!

ಸುಶೀಲೆ - ನಾಥ! ನಾನೆಂದಿಗೂ ಸುಳ್ಳಾಡುವವಳಲ್ಲ. ಸ್ತ್ರೀಯರಲ್ಲಿ
ಯಾರಾದರೂ, ಕೆಲವರು ಸುಳ್ಳನ್ನು ಹೇಳಬಹುದು. ಆದ ಮಾತ್ರಕ್ಕೆ
ಸ್ತ್ರೀ ಜಾತಿಗೇ ಕಲಂಕವನ್ನು ಹೊರೆಯಿಸುವುದು ಸರಿಯಲ್ಲ!
ಸದಾಚಾರಸಂಪನ್ನೆಯಾಗಿದ್ದ ನಿಮ್ಮ ತಾಯಿಯ ಮೇಲೆ
ಯಾರಾದರೂ ಅನೃತದ ಹೊರೆಯನ್ನು ಹೊರೆಯಿಸುತ್ತಿದ್ದರೆ ನೋಡಿ
ಸುಮ್ಮನಿರಲಾದೀತೆ? ಸತ್ಯಾತ್ಮದಲ್ಲಿ ದೋಷವನ್ನಾರೋಪಿಸುವುದು ತಕ್ಕುದಲ್ಲವೆಂದು
ಹೇಳಬೇಕೆ? ಇದೇಕೆ ಶಂಕೆ?

ವಿನೋ - ನಿನ್ನ ವೇದಾಂತಗಳನ್ನು ಕೇಳಲಿಲ್ಲ. ನೀನು ಮಹಾ ಸಾದ್ವಿ
| ಅದಿರಲಿ, ಮಧ್ಯಾಹ್ನದಲ್ಲಿ ಮನೆಗೆ ಆರಾರು ಬಂದಿದ್ದರು? ಏನೇನು
ನಡೆಯಿತು? ಯಾರಾರು ಏನನ್ನು ಹೇಳಿದರು? ಎಲ್ಲವನ್ನೂ ಹೇಳು, ಸುಶೀಲೆ - ಮನೆ ಕೆಲಸಗಳೆಲ್ಲವನ್ನೂ ಮುಗಿಸಿ, ತಮ್ಮ ಬರುವಿಕವಿಯನ್ನಿದಿರು ನೋಡುತ್ತೆ, ಓದುತ್ತಿದ್ದೆನು. ನೆರೆಮನೆಯ ಗಿರಿಯಮ್ಮನು ಬಂದಿದ್ದಳು ಅವಳು ಹೊರಟು ಹೋದಬಳಿಕ ತಂತ್ರನಾಥನೂ ಬಂದಿದ್ದನು. ನನ್ನ ಗ್ರಹಚಾರವಶದಿಂದ ಅವರಿಬ್ಬರೂ ಏನೇನನ್ನೋ ಕೆಲವು ಅಪ್ರಿಯಮಾತುಗಳನ್ನಾಡಿ ನನ್ನಿಂದ ಅವಮಾನಿತರಾಗಿ ಹೊರಟುಹೋದರು.

ವಿನೋ - ಅದೆಂತಹ ಅಪ್ರಿಯವಾದ ಮಾತುಗಳು?

ಸುಶೀಲೆ - ಆ ಮಾತುಗಳು ನೆನೆಯಿಸಿಕೊಳ್ಳುವುದಕ್ಕೂ ಯೋಗ್ಯವಲ್ಲ!

ವಿನೋ - ನನ್ನಲ್ಲಿಯೂ ಮರೆಮಾಚುವುದನ್ನು ಬಿಡುವುದಿಲ್ಲವೆ?

ಸುಶೀಲೆ - ಮರೆಮಾಚುವುದಲ್ಲ. ಅವರ ಮಾತುಗಳು ತಮ್ಮ ಅನಿಷ್ಟವನ್ನೇ ಕೋರತಕ್ಕವುಗಳಾಗಿವೆ. ಅದನ್ನು ಹೇಗೂ ನಾನು ಹೇಳಲಾರೆನು. ಇಷ್ಟಕ್ಕೇ ಬೇರೆಯಾಗಿ ಒಗೆಯದೆ ಕ್ಷಮಿಸಬೇಕು! ಅವೆಲ್ಲವೂ ಅಪನಿಂದೆ................

ವಿನೋ - ಏನು? ನನ್ನ ಮೇಲಿನ ಅಪನಿಂದೆಯೆ? ನಿನ್ನ ಬಾವನು ನನ್ನನ್ನು ನಿಜವಾಗಿ ನಿಂದಿಸಿದನೆ? ಚಿಃ! ಇಂದು ನಿನ್ನ ಅಭಿಸಂಧಾನವು ತಿಳಿದುಬಂದಿದೆ. ಏಕೆ ಈ ಸುಳ್ಳು? ಮಾಡು! ನಿನ್ನ ಇಷ್ಟವಿದ್ದಂತೆ ಮಾಡು!! ನಾನು ಕಾರ್ಯಗೌರವದಿಂದ ಮನೆಗೆ ಬರಲು ತಡವಾದರೆ, ಹಸಿದಿರಬೇಡವೆಂದು ನಿನಗೆ ಎಷ್ಟು ಸಾರಿ ಹೇಳಿಲ್ಲ! ಆದರೂ ನೀನು ಊಟಮಾಡದೆ ಸಾಯುತ್ತಿರುವುದೇಕೆ? ಕಂಡವರೊಡನೆ ಮನೆವಾರ್ತೆಯನ್ನು ಕುರಿತು ಮನಬಂದಂತೆ ಹೇಳುವುದೇಕೆ?

ಸುಶೀಲೆ - ಕಂಪಿತಸ್ವರದಿಂದ - 'ಪ್ರಭೋ! ತಾವು ನನ್ನಲ್ಲಿಯೂ ಇಂತಹ ಸಂದೇಹವನ್ನು ಕಲ್ಪಿಸಿಕೊಂಡು ತೊಳಲುವಿರೆಂದು ನಾನು ನಂಬಿರಲಿಲ್ಲ. ಬಾಲ್ಯದಿಂದಲೂ, ತಾಯ್ತಂದೆಗಳ ಶಿಕ್ಷಣೆಯಿಂದ ಬೆಳೆದು ಈವರೆಗೂ ತಮ್ಮ ಅನುಗ್ರಹದಿಂದ ಎಷ್ಟೋ ಸುಖವನ್ನನುಭವಿಸಿರುವೆನು. ನಾನು ಅಂತಹ ಅಭಿಸಂಧಾನವನ್ನೇ ಮಾಡಬೇಕಾದುದಿಲ್ಲ! ನೀವೇ ನನ್ನ ಜೀವನಸರ್ವಸ್ವ | ಇತರರು ಆರೋಪಿಸುತ್ತಿರುವ ದೋಷಗಳು ಒಂದು ವೇಳೆ ತಮ್ಮಲ್ಲಿದ್ದರೂ, ಅದನ್ನು ನಾನು ನಿಜವಾಗಿರತಕ್ಕುವುಗಳೆಂದು ಭಾವಿಸಲಾರೆನು. ತಮ್ಮ ಕ್ಷೇಮಲಾಭವೊಂದಲ್ಲದೆ ಮತ್ತಾವುದೂ ನನಗೆ ಬೇಕಾಗಿಲ್ಲ. ಇನ್ನೇನನ್ನು ಹೇಳಲಿ? (ಸುಶೀಲೆಗೆ ಮುಂದೆ ಮಾತು ಹೊರಡದೆ ಕಣ್ಣುಗಳಲ್ಲಿ ನೀರು ತುಂಬಿತು. ಪತಿಯ ಮುಖವನ್ನು ನೋಡಿದಳು.)

ವಿನೊ - (ತಲೆದೂಗಿ ಪರಿಹಾಸದಿಂದ ನಗುತ್ತೆ) - 'ಮಾಯಾವಿನಿ! “ಅತಿವನಯಂ ಧೂರ್ತಲಕ್ಷಣಂ" ಎಂಬುದು ಸುಳ್ಳಲ್ಲ. ನಿನ್ನ ಆತ್ಮನು ಕಲುಷಿತನಾಗಿರುವನೆಂದು ನಿರ್ಧರವಾಗಿ ತಿಳಿದೆನು. ನೀನು ನನಗೆ ದ್ರೋಹವನ್ನಾಚರಿಸುತ್ತಿರುವೆಯೆಂಬುದನ್ನು ನನ್ನ ಪ್ರಿಯಜನರ ಬಾಯಿಂದ ಕೇಳಿ ತಿಳಿದೇ ಇಲ್ಲಿಗೆ ಬಂದಿರುವೆನು. ನನಗೆ ನಿನ್ನ ನಟನೆಯೊಂದೂ ರುಚಿಸುವಂತಿಲ್ಲ.' ಎಂದಾಡಿ ಭಯಂಕರವಾದ ಕೆಂಗಣ್ಣುಗಳಿಂದ ಒಮ್ಮೆ ಕೂರವಾಗಿ ಪತ್ನಿ ಯನ್ನು ನೋಡಿದನು.

ಸುಶೀಲೆ - ಉಕ್ಕಿ ಸುರಿಯುತ್ತಿದ್ದ ಕಣ್ಣೀರನ್ನು ತಡೆದು, ಗದ್ಗದಸ್ವರದಿಂದ - ಸ್ವಾಮಿನಾಥ! ನನ್ನ ಮಾತನ್ನು ನಂಬಲಾರದವರು, ತಮ್ಮನ್ನು ತಾವೇ ನಂಬಲಾರದವರು, ತಮ್ಮ ಈ ಬಗೆಯ ಸಂಶಯಕ್ಕೆ ನಾನು ಎಷ್ಟು ಮಾತ್ರಕ್ಕೂ ಪಕ್ಕಾಗತಕ್ಕವಳಲ್ಲವೆಂದು ದೃಢವಾಗಿ ತಿಳಿಯಿರಿ!" ಎಂದು ಹೇಳುತ್ತಿದ್ದಂತೆಯೇ ಪತಿಯ ಪದತಲದಲ್ಲಿ ಬಿದ್ದಳು. ವಿನೋ - ಉನ್ಮತ್ತನಂತೆ ವಿಕೃತಸ್ವರದಿಂದ - ಧೂರ್ತೆ! ನೀನೇ ನನ್ನ ಸುಖದ ದಾರಿಯಲ್ಲಿರುವ ಪ್ರಬಲ ಕಂಟಕೆ. ನಿನ್ನೀ ಕರ್ಮಕ್ಕೆ ತಕ್ಕ ಫಲವನ್ನು ಇಷ್ಟರಲ್ಲಿಯೇ ಹೊಂದದಿರಲಾರೆ | ತಿಳಿದೆಚ್ಚತ್ತಿರು." ಎಂದು ಧಿಕ್ಕರಿಸಿ, ಎಡಗಾಲಿಂದೊದ್ದು ನೂಕಿ ಬಾಗಿಲನ್ನು ತೆಗೆದುಕೊಂಡು ಹೊರಟುಹೋದನು.

ಅಬಲೆಯೂ, ಆರ್ತೆಯೂ, ಸತ್ಯಾಗ್ರಹಭೀತಿಸಂತಪ್ತೆಯೂ ಆದ ಸುಶೀಲೆ, ಏನನ್ನು ಮಾಡಬಲ್ಲಳು? ನೀರವವಾಗಿ ರೋದಿಸುತ್ತೆ ಅಲ್ಲಿಯೇ ಮೈ ಮರೆದು ಮಲಗಿದಳು. ಅವಳ ಆರ್ಗನ ಮನೋವ್ಯಾಕುಲವು ಎಷ್ಟು ಮಟ್ಟಿಗೆ ಇದ್ದುದೆಂಬುದನ್ನು ವರ್ಣಿಸಲು ನಿಜವಾಗಿಯೂ ನಮ್ಮ ಕ್ಷುದ್ರಲೇಖನಿಗೆ ಶಕ್ತಿಯಿಲ್ಲ.

ಸಹೃದಯಸೋದರೀ ಸೋದರರೇ!

ಭಾರತ ವರ್ಷದಲ್ಲಿ, ಎಷ್ಟು ಮನೆಗಳಲ್ಲಿ ಇಂತಹ ಸಂಸಾರಗಳಿಲ್ಲ? ಇದೇನು? ಮನೆಯೇ? ಸಂಸಾರವೆ? ನಿಷ್ಕಾರಣವಾಗಿ ಕೊಡಲ್ಪಡುವ ಕ್ರೂರದಂಡನೆಯಿಂದ ನಿಷ್ಕಪಟಿಯಾದ ಸಾಧ್ವಿಯ ಕಣ್ಗಳಿಂದ ಹರಿವ ಬೆನ್ನೀರು ಆವ ದೇಶವನ್ನು ಸುಟ್ಟು ಹಾಕಲೊಲ್ಲದು? ತನ್ನ ಸತಿಯ ನೈಜ ಮನೋಭಾವವನ್ನು ಚೆನ್ನಾಗಿ ತಿಳಿದೂ, ಸುಗುಣವತಿಯೆಂಬ ಅನುಭವವುಂಟಾಗಿದ್ದರೂ, ಅಂತಹ ನಾರೀಮಣಿಯನ್ನು ಸಂತೈಸದೆ, ಚಿಂತೆಗೀಡುಮಾಡುವಾತನು, ನಿಜವಾಗಿಯ ಕ್ಷುದ್ರ ಜೀವಿಗಳಾದ ನಾಯಿ-ನರಿಗಳಿಗೂ ಕಡೆಯಾದ ಲೋಕಕಂಟಕನೆನ್ನಿಸುವನಲ್ಲದೆ ಮಾನವನೆನ್ನಿಸುವನೆ? ಅಂತವನಿಂದ ದೇಶವು ಅಭಿವೃದ್ಧಿಗೆ ಬರುವುದೆಂಬ ಆಶೆ, ಎಳ್ಳಷ್ಟಾದರೂ ಇರುವುದೆ? ನಿರರ್ಥಕವಾದ ಅವನ ಜೀವಿತವು ಭೂಭಾರಭೂತವಲ್ಲದೆ ಮತ್ತೇನು?

!!ಶ್ರೀಃ!!

ಚತುರ್ಥ ಹರಿಚ್ಛೇದ

(ಅಂತರಂಗದ ಅಭಿಸಂಧಿ.)

ಧ್ಯಾಹ್ನ ಮೂರು ಘಂಟೆಯ ಸಮಯ; ಸಕಲ ಚರಾಚರಾತ್ಮಕ ಪ್ರಪಂಚವನ್ನು ಸಮತಾದೃಷ್ಟಿಯಿಂದ ನೋಡುತ್ತಿರುವ ಸೂರ್ಯದೇವನು ತನ್ನ ಪೂರ್ಣತೇಜಸ್ಸಿನಿಂದ ಪ್ರಕಾಶಿಸುತ್ತಿದ್ದನು. ಸಮಸ್ತ ಪ್ರಾಣಿಗಳು ಕೃತಾಕೃತ್ಯಗಳಿಗೂ ಸಾಕ್ಷೀಭೂತನಾದ ಜಗಚ್ಚಕ್ಷುವೇ ಸರ್ವರಕ್ಷಕನು. ಆದರೂ, ಕ್ಷುದ್ರಮಾನವನು ಅತನನ್ನೇ ದೂರುವನು. (ಇದಲ್ಲವೇ ಸ್ವಕಾರ್ಯಧುರಂಧರರ ಸ್ವಭಾವವೆಂಬುದು?) ಅದಿರಲಿ, ನಮ್ಮ ಪಾಠಕರ ಪೂರ್ವಪರಿಚಿತೆಯಾದೆ ಗಿರಿಯಮ್ಮನು ತನ್ನ ಮನೆಯ ಮುಂಗಡೆ ಜಗಲಿಯ ಮೇಲೆ ಕುಳಿತು, ತಾಂಬೂಲಚರ್ವಣದಿಂದ ನಲಿದು, ಹಾಡುತ್ತ ಕುಳಿತಿದ್ದಳು. ಅಲ್ಲಿಗೇ ತಂತ್ರನಾಥನೂ ಬಂದು ಅವಳಿದಿರೆ ಹತ್ತಿರದಲ್ಲಿಯೇ ಕುಳಿತನು.

ಗಿರಿ - ಹಾಡನ್ನು ನಿಲ್ಲಿಸಿ - ತಂತ್ರನಾಥ! ಮನೆಯಲ್ಲಿ ಎಲ್ಲರೂ ಸೌಖ್ಯವಷ್ಟೆ?

ತಂತ್ರ - ಎಲ್ಲರೂ ಸೌಖ್ಯವೇ.

ಗಿರಿ - ಇಂದೇಕೆ ಹೀಗಿರುವೆ? ದೇಹಸ್ಥಿತಿ ಆರೋಗ್ಯವಿಲ್ಲವೇನು?

ತಂತ್ರ - ಆರೋಗ್ಯವಾಗಿಯೇ ಇದೆ; ಆದರೆ ನಿನ್ನೆಯಿಂದ ಮನಸ್ಸಮಾಧಾನವಿಲ್ಲ.

ಗಿರಿ - ಅದೇಕೆ? ತಂತ್ರ - ಅದನ್ನೇಕೆ ಕೇಳುವಿರಿ? ಬಹು ಅಂತರಂಗ; ಅನರ್ಥಕಾರಿ'

ಗಿರಿ - ಕುತೂಹಲದಿಂದ ಅದೇನು? ಹೇಳಲಾಗದಷ್ಟು ಗುಟ್ಟೇ?

ತಂತ್ರ - ನಿಮ್ಮಲ್ಲಿ ಹೇಳಲಾಗದುದೇನೂ ಅಲ್ಲ : ಆದರೂ ಬಲು ಗುಟ್ಟಾಗಿರತಕ್ಕುದು.

ಗಿರಿ - ನನ್ನ ವಿಷಯವು ನಿನಗಿನ್ನೂ ತಿಳಿಯದೆ? ಹೇಳು__

ತಂತ್ರ - ಅದನ್ನು ತಾವು ಹೊರಡಿಸುವುದಿಲ್ಲವೆಂದು ಮಾತು ಕೊಟ್ಟರೆ ಹೇಳುವೆನು.

ಗಿರಿ - ಇಲ್ಲವಪ್ಪ! ನನ್ನಾಣೆ | ಯಾರಿಗೂ ಹೇಳುವುದಿಲ್ಲ.

ತಂತ್ರ - ಸುಶೀಲೆ ತಮಗೇನಾಗಬೇಕು?

ಗಿರಿ - ಆ ದುರಹಂಕಾರದ ಹುಡಗಿಗೂ ನನಗೂ ಏನೂ ಸಂಬಂಧವಿಲ್ಲ. ಅವಳ ತಾಯಿ, ನನ್ನ ಚಿಕ್ಕಂದಿನ ಸಂಗಾತಿ. ಅವಳ ಅತ್ತೆಯೂ ನನಗೆ ಬೇಕಾದವಳೇ ಆಗಿದ್ದಳು.

ತಂತ್ರ - ಅವಳ ನಡೆನುಡಿ ವಿಚಾರವೇನಾದರೂ ತಮಗೆ ತಿಳಿದಿದೆಯೋ!

ಗಿರಿ - ಯಾರು ಬಲ್ಲರು! ನೋಡುವುದಕ್ಕೇನೋ ಬಲು ಒಳ್ಳೆಯವಳಾಗಿ ಕಾಣುವಳು. ಓದು ಬರಹ ಬಲ್ಲ ಈ ಕಾಲದ ಹುಡುಗಿಯರನ್ನು ನಂಬುವುದು ಹೇಗೆ? ಯಾವಾಗ ನೋಡಿದರೂ ಪುಸ್ತಕವನ್ನು ಹಿಡಿದಿರುವಳು. ಒಳ್ಳೊಳ್ಳೆಯ ಮಾತುಗಳನ್ನಾಡುವಳು.

ತಂತ್ರ - ನಿಜ, ಹಾಗೆಯೇ ಮಾಡಬೇಕಷ್ಟೆ! ಹತ್ತಿಯಹಣ್ಣು ಮೇಲೆ ನೋಡಲಿಕ್ಕೆ ಅಂದವಾಗಿಯೇ ಇರುವುದು, ಆದರೇನು? ಸುಶೀಲೆಯ ಹೆಸರೂ ಚೆನ್ನಾಗಿರುವುದು. ನಡತೆಯಲ್ಲಿ ಮಾತ್ರವೇ?
................... ಗಿರಿ - ಗಿರಿಯಮ್ಮನ ಮುಖದಲ್ಲಿ ಉತ್ಸಾಹವು ಹೆಚ್ಚಿತು. ಆತುರದಿಂದ, 'ಏನು? ನಡತೆಯಲ್ಲಿ ಕುಂದೇನು?'

ತಂತ್ರ - ಮತ್ತೇನು? ಕುಲಟಾವರ್ತನವೊಂದೇ ಸಾಲದೆ?

ಗಿರಿ - ಸಂಭ್ರಮದಿಂದ, - 'ನಿನಗೆ ಹೇಗೆ ತಿಳಿಯಿತು!

ತಂತ್ರ - (ಕಳ್ಳನೆಂದಿದ್ದರೂ ಹೊರಬೀಳುವನಲ್ಲವೆ?) ನನ್ನ ಚಿಂತೆಗೆ ಕಾರಣವಾದರೂ ಮತ್ತಾವುದು?

ಗಿರಿ - ಹೇಗೆ? ನೀನೇನಾದರೂ ಅವಳ ಮನೆಗೆ ಹೋಗಿದ್ದೆಯೊ? ವಿಶೇಷವೇನು?

ತಂತ್ರ - ವಿನೋದನನ್ನು ನೋಡಬೇಕೆಂದು ಹೋಗಿದ್ದೆನು, ಅವನು ಮನೆಯಲ್ಲಿರಲಿಲ್ಲ.

ಗಿರಿ - ಅವಳೊಬ್ಬಳೇ ಇದ್ದಳೇನು? ಏನಾಯ್ತು?

ತಂತ್ರ - ತುಟಿಯನ್ನು ತುದಿನಾಲಿಗೆಯಿಂದ ನೆಕ್ಕುತ್ತೆ, 'ನಡೆದದೆಲ್ಲವನ್ನೂ ಹೇಳಲು ನನಗೆ ಹೆದರಿಕೆಯಾಗುವುದು. ನೀವು ಯಾರೊಡನಯೂ,..................

ಗಿರಿ - ತಂತ್ರನಾಥ! ನಾನು ಯಾರೊಡನೆಯಾದರೂ, ಎಂದಿಗಾದರೂ ಹೇಳುವೆನೇನು?

ತಂತ್ರ - ಹಜಾರಕ್ಕೆ ಹೋದೆನು. ನನ್ನನ್ನು ನೋಡಿದೊಡನೆಯೇ ಕೈ ಹಿಡಿದು ಒಳಕ್ಕೆ ಕರೆದುಕೊಂಡುಹೋದಳು, ಆ ಬಳಿಕ........

ಗಿರಿ - ಓದಿ ಕೆಟ್ಟಳು! ತಿಳಿಗೇಡುವಿದ್ಯೆ!! ಆಮೇಲೆ?

ತಂತ್ರ - ಅತ್ತಿತ್ತ ನೋಡಿ__ ತೊದಲು ನಾಲಿಗೆಯಿಂದ,__ ಆಮೇಲೇನು? ನಿನ್ನನ್ನೇ ಮದುವೆಯಾಗಬೇಕೆಂಬ ಆಶೆ ನನಗೆ ಬಲವಾಗಿತ್ತು. ಆದರೂ, ನನ್ನ ತಂದೆ.......... ಹಾಗೆ ಮಾಡಲಿಲ್ಲ. ಈಗಲಾದರೂ ಏನಾಯ್ತು? ನನ್ನನ್ನು .........

ಗಿರಿ - ಸಾಕು! ಸಾಕು!! ಕೇಳಲಾರೆನಪ್ಪ! ನಿನ್ನೆಯಸಾಯಂಕಾಲ, ನನಗೆಷ್ಟೋ ವೇದಾಂತಗಳನ್ನು ಬೋಧಿಸಿದವಳಿಗೆ ಈ ಕೆಟ್ಟಕೆಲಸ ಮಾಡಬಾರದೆಂಬ ತಿಳಿವು ಬೇಡವೆ? ಈಗಿನ ಹುಡುಗಿಯರೇನಪ್ಪ | ಹಾಳು ಶಾಲೆಯಲ್ಲೇ ಇದೆಲ್ಲವನ್ನೂ ಕಲ್ತು ಬರುವರೆಂದೇ ಕಾಣುವುದು. ಆಗಲಿ, ಈದಿನ ಅವಳಮನೆಗೆ ಹೋಗಿ, ಅವಳ ಗಂಡನೂ ಮನೆಯಲ್ಲಿಯೇ ಇರಬಹುದು. ಅವನಿದಿರಾಗಿಯೇ ಅವಳ ಪಿತ್ತವನ್ನು ಇಳಿಸಿಬರುತ್ತೇನೆ!

ತಂತ್ರ - ನೋಡಿದಿರಾ ! ಇದಕ್ಕೆ ....... ....

ಗಿರಿ - ಇಲ್ಲವಪ್ಪ! ನನಗೆ ಮೈಯುರಿದುಹೋಗುತ್ತಿದೆ! ಇರಲಿ, ಮುಂದೆಹೇಳು?

ತಂತ್ರ - ಅವಳು ನಿನ್ನೆಯರಾತ್ರಿಯೇ ನನ್ನೊಡನೆ ಓಡಿಬರಲು ಸಿದ್ಧಳಾಗಿದ್ದಳು. ಕೈಗೆ ಸಿಕ್ಕಿದ ನಗನಾಣ್ಯಗಳನ್ನು ತರುವೆನೆಂದಳು; ನನಗೇ ಭಯವಾಯ್ತು. ಉಪಾಯದಿಂದ ತಪ್ಪಿಸಿಕೊಂಡು ಮತ್ತೆ ಬರುವೆನಂದುಹೇಳಿ ಎಷ್ಟು ಕಷ್ಟದಿ೦ದ ಬ೦ದೆನೋ? ಹೇಳಲಾರೆನು, ಇನ್ನು ಈ ಜನ್ಮವಿರುವವರೆಗೂ ಅವರಮನೆಗೆ ಹೋಗಬಾರದಮ್ಮ! ಅವಳ ಅಕ್ಕ ಆ ನನ್ನ ಹಿರಿಯ ಕೆಂಡತಿ, ಇದ್ದಳಲ್ಲ ಅವಳೆoತಹ ಪತಿವ್ರತೆ! ಇವಳಿಂದ ನೆಂಟರಿಗೆಲ್ಲಾ ಅಪಮಾನ. ಈ ವಿಚಾರ ತುಂಬಾ ಗುಟ್ಟಾಗಿರಲಮ್ಮ! ತಲೆಹೋಗುವಮಾತು | ಎಲ್ಲಿಯಾದರೂ ಬಾಯಿಬಿಟ್ಟೀರಿ | ಜೋಕೆ | ಜೋಕೆ!! ಗುಟ್ಟು ರಟ್ಟಾದರೆ ಕಷ್ಟ ತಪ್ಪದು. ಗಿರಿ - ಗಲ್ಲದಮೇಲೆ ಕೈಯಿಟ್ಟುಕೊಂಡು‚... ಹಾಳಾಗಲಿ ಕೆಟ್ಟಸುದ್ದಿ! ನೋಡು ನನಗೂ ನಿನಗೂ ಯಾವ ನಂಟತನವೂ ಇಲ್ಲದಿದ್ದರೂ ನಾವಿಬ್ಬರೂ ಎಷ್ಟು ಅನ್ನೋನ್ಯವಾಗಿಲ್ಲ | ನೀನೇನು ನನ್ನನ್ನು ಅಕ್ಕನಂತೆಯೇ ಭಾವಿಸುತ್ತಿರುವೆಯಲ್ಲವೆ? ಅವಳಿಗೇನುಬಂದಿದೆ! ಕೇಡುಗಾಲದ ಬುದ್ದಿ? ಪವಿತ್ರವಾದ ಕುಲ, ಅಸಾಧಾರಣವಾದ ರೂಪಲಾವಣ್ಯ, ಪ್ರಾಪ್ತವಾದ ಯೌವನ, ಶ್ರೇಷ್ಟವಾದ ನಾರೀ ಧನು೯, ಇವೆಲ್ಲವನ್ನೂ ಕ್ಷಣಿಕ ಸುಖಕ್ಕಾಶೆಪಟ್ಟು ಹಾಳುಮಾಡಿಕೊಳ್ಳುವಳಲ್ಲಾ! ಎಂಬುದೊಂದೇ ನನಗೆ ಸಂಕಟ | ಹೇಗಾದರೂ ಅವಳು ದಾರಿಗೆ ಬಂದರೆ ಸಾಕಾಗಿದೆ. ಆದರೆ ನಾನು ಮಾಡುವುದೇನು? ಒಂದು ಮಾತನ್ನು ಹೇಳಿದರೆ ಅವಳು ಹತ್ತು ಮಾತುಗ೪ಾಡಿ ಹಳಿರುತೊಡಗುವಳು,

ತಂತ್ರ - ತಾವು ಹೇಳುವುದರಿಂದೆನೂ ಫಲವಿಲ್ಲ.'ವಿನೋದನು ನಿಮ್ಮ ಮನೆಗೆ ಬರುವದುಂಟೋ?

ಗಿರಿ - ಏಕೆ ನಿತ್ಯವೂ ಬರುತ್ತಿರುವನು. ನಮ್ಮ ಮನೆಯವರಲ್ಲಿ- ಅವನಿಗೆ ತುಂಬಾ ನಂಬಿಕೆ.

ತಂತ್ರ - ಹಾಗಾದರೆ, ಅದು ಅವನಿಂದಲೇ ಸರಿಪಡಿಸಲ್ಪಡಬೇಕು. ಅವನು ನಿಮ್ಮ ಮನೆಗೆ ಬಂದಾಗ, ಈ ವಿಷಯವ ಅವನ ಕಿವಿಗೆ ಬೀಳುವಂತೆ ಮಾಡಿಬಿಟ್ಟರೆ, ಅವನೇ ಸರಿಪಡಿಸಿಕೊಳ್ಳುವನು.

ಗಿರಿ - ಸರಿ! ಸರಿ!! ನಿನ್ನ ಆಲೋಚನೆಯೇ ಸರಿಯಾದುದು, ಹಾಗೆಯೇ ಮಾಡುವೆನು. ನನಗೇನು ಭಯ? ಅವನಪ್ಪನಿಗೂ ನಾನು ಹೆದರುವುದಿಲ್ಲ. ಸಮಯವೊದಗಿದರೆ ಇನ್ನು ಮುಂದೆ ಅವನು ನಮ್ಮ ಮನೆಗೆ ಬಾರದಂತೆಯೇ ಮಾಡಿಬಿಡುವೆನು. ತಂತ್ರ - ಅಮ್ಮಾ! ನಾನು ಹೇಳಿದೆನೆಂದು ಬಾಯಿಬಿಟ್ಟೀರಿ. ನಮ್ಮೀ ಅಭಿಸಂಧಿ ಹೊರಬಿತ್ತೆಂದರೆ, ನನ್ನ ಮತ್ತು ನಿಮ್ಮ ಇಬ್ಬರ ತಲೆಗಳೂ ಹೋದವು! ಎಚ್ಚರಿಕೆ! - ಎಂದು ಹೇಳಿ ಹೊರಟು ಹೋದನು.

(ಸುಹೃದರೇ! ಏನೆನ್ನುವಿರಿ? ವಿನೋದನನ್ನು ದೂರುವಿರೊ? ತಂತ್ರನಾಥನನ್ನು ದೂರುವಿರೊ? ಕುತ್ಸಿತಕಾರ್ಯದಲ್ಲಿ ಬಿದ್ದರೂ, ಸಾಧ್ವಿಯಾದ ಪರಸ್ತ್ರೀಯಲ್ಲಿ ಕಲಂಕವನ್ನು ಹೊರೆಯಿಸುವನಲ್ಲದ ವಿನೋದನೇ ತಂತ್ರನಾಥನಿಗೂ ಮೇಲೆಂದಿರಲ್ಲವೇ? ಹಾಗೆಯೇ ಹೇಳಿರಿ.)

!!ಶ್ರೀಃ!!

ಪಂಚಮ ಪರಿಚ್ಛೇದ.

______∆______

(ನಮ್ಮ ಸ್ತ್ರೀ ಸಮಾಜದಲ್ಲಿ)

ಗಿರಿಯಮ್ಮನ ಮನೆ ದೊಡ್ಡದಲ್ಲ. ಸಾಮಾನ್ಯವಾದ ಹೆಂಚಿನಮನೆ. ಹಳೆಯ ಪದ್ಧತಿಯಂತೆಯೇ ಕಟ್ಟಲ್ಪಟ್ಟಿದ್ದುದು, ಬೀದಿಯ ಬಾಗಿಲಲ್ಲಿ ಎರಡು ಕಡೆಯಲ್ಲಿಯ ಪಡಸಾಲೆ; ಒಳಹೊಕ್ಕರೆ ಒಂದು ಸಣ್ಣ ನಡುಮನೆ; ಅಲ್ಲಿಂದ ಒಳಗೆ ಹೋದರೆ ದೊಡ್ಡದಾದ ಹಜಾರೆ; ಅವರ ಹಿಂದೆ ಒಂದೆರಡು ಕಿರುಮನೆಗಳು; ಹಿಂಗಡೆಯಲ್ಲಿ ಊಟದ ಅಂಗಳ; ಅದಕ್ಕೆ ಹಿಂಗಡೆ ಹಿತ್ತಲು; ಹಿತ್ತಲಲ್ಲಿ ಬಗೆಬಗೆಯ ಗಿಡಗಳಿದ್ದುವು. ಮಧ್ಯಭಾಗದ ಹಜಾರದಲ್ಲಿಯೇ ಗಿರಿಯಮ್ಮನ ಗಂಡನು ಓಲೆಯ ಪುಸ್ತಕಗಳನ್ನು ಹಿಡಿದು ಓದುತ್ತ ಕುಳಿತಿದ್ದನು.

ತಂತ್ರನಾಥನು ಹೊರಟುಹೋದ ಬಳಿಕ, ಗಿರಿಯಮ್ಮನು ಬಂದು ನಡುವೆಯಲ್ಲಿ ಕುಳಿತಳು. ನಿತ್ಯದಂತೆಯೇ ಬಂದ ವಿನೋದನು ಬಾಗಿಲಲ್ಲಿ ನಿಂದು - "ಅಮ್ಮಾ! ಸಿದ್ದಾಂತಿಯರಿರುವರೆ?” ಎಂದು ಕೇಳಿದನು.

ಗಿರಿ - ಹಜಾರದಲ್ಲಿರುವರು ಹೋಗಪ್ಪ' ಎಂದಾಡಿ ವಿನೋದನನ್ನು ಒಳಕ್ಕೆ ಕಳಿಸಿ, ಅತ್ಯವಸರದಿಂದ ಬೀದಿಗೆ ಬಂದ ದಾರಿಯಲ್ಲಿ ಹೋಗುತ್ತಿದ್ದ ವೆಂಕಮ್ಮ, ಮೀನಾಕ್ಷಮ್ಮ ಎಂಬ ತನ್ನ ಜತೆಗಾರ್ತಿಯಾರನ್ನು ಕೂಗಿ ಕರೆದುಕೊಂಡು ಊಟದಮನೆಗೆ ಹೊರಟುಹೋದಳು. ವಿನೋದನು ಹಜಾರಕ್ಕೆ ಬಂದು ಸಿದ್ಧಾನ್ತಿಯ ಬಳಿಯಲ್ಲಿ ಕುಳಿತು,- ಏನು ಸಿದ್ಧಾಂತಿಗಳೇ| ಏನೇನೋ ವಿಚಾರದಲ್ಲಿರುವಂತಿದೆ? ಸಿದ್ಧಾನ್ತಿ - ವಿಚಾರವೇನು? ಈ ವರೆಗೆ ಈ ವರ್ಷದ ಪಂಚಾಂಗಗಳು ಹನ್ನೆರಡು ಬಂದಿವೆ ಅವಾವುದರಲ್ಲಿ ಏನೇನು ವ್ಯತ್ಯಾಸವಿರುವುದೋ ನೋಡುತ್ತಿದ್ದೇನೆ. ಈಗೇನಪ್ಪ! ಎಲ್ಲರೂ ಜ್ಯೋತಿಷ್ಯರೇ ಆಗಿರುವರು.

ವಿನೋದ - ಕಿರುನಗೆಯಿಂದ, - ತಾವೇ ಒಂದು ಪಂಚಾಂಗವನ್ನು ಮಾಡಬಾರದೇಕೆ?

ಸಿದ್ಧಾನ್ತಿ - ಏಕಪ್ಪ? ಏನಾದರೂ ಅನುಮಾನಬಂದರೆ ಗುಣಿಸಿ ನೋಡಿಕೊಂಡರಾಯ್ತು! ನಾನೇಕೆ ಬೈಯಲಿ? ನೀನೇನು ಮೂರು ದಿನಗಳಿಂದ ಬರಲಿಲ್ಲ? ಊರಲ್ಲಿರಲಿಲ್ಲವೇನು?

ವಿನೋದ - ಊರಲ್ಲಿಯೇ ಇದ್ದೆನು. ಆದರೆ, ನನ್ನ ಮಿತ್ರಮಂಡಲಿಯ ಪ್ರೀತ್ಯರ್ಥವಾಗಿ ನಿನ್ನೆ ಮತ್ತು ಮೊನ್ನೆ ಊಟಉಪಚಾರಗಳನ್ನು ನಡೆಯಿಸಿದೆನು. ಆ ಕೆಲಸದಲ್ಲಿ ನಿರತನಾಗಿದ್ದುದರಿಂದ ಇತ್ತ ಬರಲಾಗಲಿಲ್ಲ.

ಸಿದ್ಧಾನ್ತಿ - ನ್ಯಾಯ, ಅಧಿಕಾರಿಗಳಾದ ಸ್ನೇಹಿತರಿಗೆ ಔತನಾದಿಗಳನ್ನು ಮಾಡಿ ಅವರನ್ನು ಮೆಚ್ಚಿಸಿಕೊಂಡರೆ, ಮುಂದೆ ದೊಡ್ಡ ಉದ್ಯೋಗವಾದರೂ ದೊರೆವುದು. ನಮ್ಮಿಂದೇನಾದೀತು?

ವಿನೋದ - ಹಾಗೆ ಹೇಳಲಾಗದು. ನಾನು ಹೊಂದಿರುವ ಅಲ್ಪಸ್ವಲ್ಪ ತಿಳಿವಿಗೂ ಕಾರಣಭೂತರಾದ ತಮ್ಮನ್ನೇ ಮರೆತರೆ ನಾನು ಕೃತಘ್ನನಲ್ಲದೆ ಮತ್ತೇನು?

ಸಿದ್ಧಾನ್ತಿ - ಹೋಗಲಿ; ನಿನ್ನ ಹೆಂಡತಿಗೇನೋ ಅನಾರೋಗ್ಯವೆಂದು ಕೇಳಿದೆನು. ನಿಜವೇ?

ವಿನೋದ - ಹೇಳಿದವರಾರು? ಸಿದ್ಧಾನ್ತಿ -ನಮ್ಮ ಮನೆಯಾಕೆ.

ವಿನೋದ- ಏನಂದೋ ?

ಸಿದ್ಧಾನ್ತಿ : "ಇವಳೇನೋ ಉನ್ಮಾದರೋಗಕ್ಕೆ ಗುರಿಯಾ -- ದೆ" ಯೆಂದೂ, ಅದರಿಂದಲೇ ತನ್ನನ್ನು ಬಾಯ್ಗೆ ಬಂದು ಕಳುಹಿಸಿದಳೆಂದೂ, ಹೇಳಿದಳು.

ವಿನೋದ -ಅದೆಂದೂ ನನಗೆ ತಿಳಿಯದು.

ಸಿದ್ದಾನ್ತಿ -ಹೆಂಗಸರು ಚಪಲೆಯರು; ಅವರ ಯಾವ ಮಾತನ್ನು ನಂಬಬಾರದು, ಒಂದಕ್ಕೆ ಸಾವಿರ ಕಯ್ಕಾಲುಗಳನ್ನಾದರೂ ಹುಟ್ಟಿಸಿ, ಊರಲ್ಲೆಲ್ಲಾ ಹಬ್ಬಿಸಬಲ್ಲರು, ಸಂಸಾರದ ಸ್ಥಿತಿ ಗತಿ ವಿಚಾರವು ಗುಟ್ಟಾಗಿರುವವರೆಗೂ ಚೆನ್ನಾಗಿರುವುದು. ಆ ಬಳಿಕ ರಸಹೀನವಾಗುವುದು, ಹೇಗೂ ಹೆಂಗಸರ ಮಾತನ್ನೇ ನಂಬಿ, ನಡೆವವರು ಬದುಕುವ ಸಂಭವವೇ ಇರುವುದಿಲ್ಲ.

ವಿನೋದ-ಸ್ವಾಮಿ ! ನನ್ನ ಹೆಂಗಸಿನಲ್ಲಿಯೂ ಅಂತಹದೇನಾದರೂ ದೋಷವಿರಬಹುದೊ ?

ಸಿದ್ಧಾನ್ತಿ -ನಾನೇನು ಬಲ್ಲೆನು ? ನಿನಾವಾಗಲೂ ಹೆರವರ ಮನೆಯ ಲ್ಲಿಯೇ ಬಿದ್ದಿರುವೆ ? ನಾನು ಯಾವಾಗಲೂ ಮನೆಯಲ್ಲಿಯೇ ಇದ್ದರೂ ನಮ್ಮ ಮನೆ ಹೆಂಗಸು, ನನ್ನ ಮುಂದೆಯೇ ನಡೆಯಿಸುವ ಕೆಲಸಗಳಿ೦ತಹವೆಂಬುದನ್ನು ನಾನೇ ತಿಳಿಯಲಾರೆನು.ಇನ್ನು ನಿನಗೆ ಹೇಳುವುದೇನು ?

ವಿನೋದ--ನೀವು ಹಂಗಿಸಬಾರದು, ನಾನು ಯಾವುದಾದರೂ ಒಂದು ಉದ್ಯೋಗಕ್ಕೆ ಸೇರಬೇಕೆಂದಿರುವೆ, 'ಜಾಗ್ರತೆಯಾಗಿಯೇ ಸೇರುವೆನು. ಸಿದ್ಧಾನ್ತಿ - "ಅದೀಗ ತಕ್ಕನುಡಿ!" ಎಂದು ಪಂಚಾಂಗವನ್ನು ತಿರುಹಿ
ಹಾಕುತ್ತೆ ಕುಳಿತನು. ವಿನೋದನೂ ಅದಾವುದೋ ವಿಷಯಗ
ಳನ್ನು ಕುರಿತು ಮನದಲ್ಲಿಯೇ ವಿಚಾರಮಾಡುತ್ತೆ ಕುಳಿತನು.
ಹಿಂದೆ ಹೇಳಿರುವಂತೆ ಊಟದ ಮನೆಯ ಕಡೆಯಲ್ಲಿ ಗಿರಿಯಮ್ಮನ
ಜತೆಗಾರ್ತಿಯರೊಡನೆ ಮಹಿಳೆಯರ ಕೂಟವು ಸೇರಿತ್ತು. ಈ ದಿನದ ಸಭೆಗೆ ಗಿರಿಯಮ್ಮನೇ ಅಗ್ರಸ್ಥಾನವನ್ನು ಅ೦೦ಕರಿಸಿದ್ದಳು. ಮೊದಲು ಸಭಿಕರ ಅಡುಗೆ ಊಟ, ಉಪಚಾರಾದಿಗಳ ವಿಚಾರವು ಸ್ವಲ್ಪಮಟ್ಟಿಗೆ ನಡೆಯಿಸಲ್ಪಟ್ಟಿತು. ಅಂದು ಸಭೆಗೆ ಬಾರದಿದ್ದವರ ವಿಚಾರಣೆಯೂ ಸ್ವಲ್ಪ ಮಟ್ಟಿಗೆ ಅತ್ಯಾದರದಿಂದ ನಡೆದು, ಅವರ ಆಗಮನಕ್ಕೆ ಅಭ್ಯಂತರವು ಅಲ್ಲಿದ್ದವರಿಂದೇ ತೀರ್ಮಾನಿಸಲ್ಪಟ್ಟುವು. ಆ ಬಳಿಕ ಎಷ್ಟೋ ವಿಚಾರಗಳು ನಡೆದುವು. ತಿಮ್ಮಕ್ಕನ ಗಂಡನ ಸಂಬಳ - ರಾಮಕ್ಕನ ಬಾವನ ವರಮಾನ ಸೀತಮ್ಮನ ಗಂಡನ ವಿತರಣೆಯಿಲ್ಲದ ಖರ್ಚು - ರುಕ್ಮಿಣಿಯಮ್ಮನ ಮನೆಯ ಅಡುಗೆ - ಅಲಮೇಲಮ್ಮನ ಮನೆಯ ಸಮಾರಾಧನೆಯ ಆದರ - ತಿಮ್ಮಣ್ಣಭಟ್ಟರ ಅಲೆದಾಟ - ಹದಿನಾಲ್ಕು ವರ್ಷವಾದರೂ ಅವಿವಾಹಿತೆಯಾಗಿರುವ ಗೌರಮ್ಮನ ಮಗಳ ವಿಚಾರ - ಕೃಷ್ಣರಾಯರ ಮಗನು ಹನ್ನೊಂದು ವರ್ಷವಾದರೂ ಉಪನಯನಕರ್ಮಹೀನನಾಗಿರುವ ವಿಷಯ - ವಿಧವಾ ವಿವಾಹ - ಸ್ತ್ರೀ ವಿದ್ಯಾಭ್ಯಾಸ -ಇನ್ನೂ ಎಷ್ಟೆಷ್ಟೋ ವಿಷಯಗಳು ಚರ್ಚಿಸಲ್ಪಟ್ಟುವು. ಅವೆಲ್ಲವನ್ನೂ ಹೇಳಬೇಕೆ?

ವಾಚಕರೆ! ಇಷ್ಟಕ್ಕೇ ನೀವು ಬೇಸರಪಟ್ಟಿರಬೇಕಲ್ಲವೆ? ನಾವು ಎಲ್ಲಾ ವಿಷಯಗಳನ್ನೂ, ಅವುಗಳ ತೀರ್ಮಾನಗಳನ್ನೂ ಬರೆವುದಿಲ್ಲ. ಎಷ್ಟೋ ವಿಚಾರಗಳು ನಡೆದುದರಲ್ಲಿ ಸುಶೀಲೆಯ ವೃತ್ತಾಂತವೂ ಹೊರ ಹೊರಟುದು. ಆ ವಿಷಯವು ಮತ್ರ ನಮಗೆ ಬೇಕಾದುದರಿಂದ ಅದನ್ನು ಇಲ್ಲಿ ಉಲ್ಲೇಖಿಸುವುದು. ಆಗ್ರಹವಿಲ್ಲದೆ, ಬೇಸರಗೊಳ್ಳದೆ, ಓದಿದರೆ ಫಲವುಂಟು. ವೆಂಕಮ್ಮ - ಮೀನಾಕ್ಷಮ್ಮ! ಏನು ಕೇಡುಗಾಲವೆನ್ನಬೇಕೆಮ್ಮ| ಹಾಳು ಸುಶೀಲೆ ಯಾವಾಗ ನೋಡಿದರೂ, ಪುಸ್ತಕವನ್ನು ಹಿಡಿದೇ ಇರುವಳು, ಹೆಂಗಸು......ಗೆ ಓದೆಂದರೇನು?

ಗಿರಿ - ಓದಿಗೆ ಬೆಂಕಿಬೀಳಲಿ! ಹಾಳು.......ಸುದ್ದಿ!

ಮೀನಾಕ್ಷಮ್ಮ - ಏಕಮ್ಮ! ಅವಳ ಸೌಂದರ್ಯ, ಬುದ್ಧಿ ಜಾಣ್ಮೆ, ಗುಣ, ವಿವೇಚನಾಶಕ್ತಿ, ಪಾತಿವ್ರತ್ಯ - ಇವೆಲ್ಲವೂ ಚೆನ್ನಾಗಿಲ್ಲವೇನಮ್ಮ? ಓದಿದರೆ ಕುಂದೇನು?

ಗಿರಿ - ಎಲ್ಲವೂ ಇವೆ. ಆದರೆ ದುರ್ಗುಣಗಳು ಇಲ್ಲದಿದ್ದರೆ ಚೆಂದ (ಹಜಾರದಲ್ಲಿ ಆಲೋಚನಾಪರನಾಗಿ ಕುಳಿತಿದ್ದ ವಿನೋದನಿಗೆ ಕಿವಿಗಳು ನಾಲ್ಕಾದಂತಾದುವು. ಆತುರದಿಂದ ಕೇಳತೊಡಗಿದನು. ಮತ್ತೆ ಮಾತಿಗೆ ಮೊದಲಾಯ್ತು.)

ಮೀನಾಕ್ಷಮ್ಮ - ಹಾ! ಏನಮ್ಮ? ಅವಳಲ್ಲಿರುವ ದುರ್ಗುಣಗಳು? ನಾನೇನೋ ಅವಳನ್ನು ಒಳ್ಳೆಯವಳೆಂದೇ ತಿಳಿದಿರುವೆನು.

ಗಿರಿಯಮ್ಮ - ಅವಳ ಒಳ್ಳೆಯ ತನವು ಉರಿದು ಹೋಯ್ತು............... ಅವಳನ್ನು ಯಾವ ವಿಲಾಸವತಿಗೆ ಕಡಿಮೆಯೆಂದಿರುವಿರಿ?

ವೆಂಕಮ್ಮ - ಹಾಳು ಓದುಬರೆಹಬಲ್ಲ ಹೆಂಗಸರು | ಅವರು ಮಾಡುವುದೆಲ್ಲ ಕೆಟ್ಟ ಕೆಲಸವೇ !| ಹೊರಗೆ ಮಾತ್ರ ಒಹು ಸಜ್ಜನೆಯರಂತೆ ಕಾಣುತ್ತಿರುವರು. ಮೀನಾಕ್ಷಮ್ಮ! ಆ.......ಗೇನು ಬಂದಿದೆಯಮ್ಮ, ಕೇಡುಗಾಲದ ಬುದ್ಧಿ! ಒಂದು ದಿನವಾದರೂ ಹಣೆಯ ತುಂಬ ಕುಂಕುಮ, ಕೈಕಾಲುಗಳಿಗೆ ಅರಿಸಿನ ಹಚ್ಚಿಕೊಂಡುದನ್ನು ನಾನು ನೋಡಿಲ್ಲವಮ್ಮ! ನಮ್ಮ ಮನೆಯವರಿದ್ದಾಗ,.......

ಮೀನಾಕ್ಷಮ್ಮ- ಅದು ಹೋಗಲಿ, ಅವಳ ವಿಷಯವೇನು? ಹೇಳಬಾರದೆ? ಗಿರಿಯಮ್ಮ - ಅದು ತುಂಬಾ ಗುಟ್ಟಾಗಿರಬೇಕಮ್ಮ.

ವೆಂಕಮ್ಮ - ಹಾಗಿದ್ದರೆ, ಮೆಲ್ಲಗೆ ಹೇಳಿ; ಅವಳ ಗಂಡನು ಹಜಾರದಲ್ಲಿರುವನು. ನಿಮ್ಮ ಮನೆಯವರರೂ ಇರುವರು.

ಗೀಯಮ್ಮ - ಅವರಿಗೆ ನಾನು ಹೆದರಲೊ? ಆ ಪೋರ ನನ್ನ ಮುಂದಿನವನು. ನಮ್ಮ ಮನೆಯವರಿಗೆ ಎಲ್ಲಾ ವಿಷಯವೂ ತಿಳಿದೇ ಇದೆ.

ಮೀನಾಕ್ಷಮ್ಮ - ಹಾಗಾದರೆ ಹೇಳಿಯೇ ಬಿಡಿ?

ಗಿರಿಯಮ್ಮ - ಅವಳು ಯಾವನನ್ನೋ ಎತ್ತಿಕೊಂಡು ಓಡಿಹೋಗಲು ಸಮಯ ನಿರೀಕ್ಷಣೆಯಲ್ಲಿರುವಳು.

ವೆಂಕಮ್ಮ - ಯಾರನ್ನು? ಯಾರು ಹೇಳಿದರು?

ಗಿರಿಯಮ್ಮ - ಯಾವನೋ ಒಬ್ಬ ತಲೆಮಾಸಿದವನನ್ನು | ಯಾವರಂಡೆ ಬಲ್ಲಳು? ಯಾರೋ ಹೇಳಿದರು. ನಿನ್ನಯೇ ಓಡಿಹೋಗಬೇಕೆ೦ದಿದ್ದಳು. ಪಾಪ! ಅವನು ಒಳ್ಳೆಯವನಾಗಿದ್ದುದರಿಂದ ಹೆದರಿ, ಮತ್ತೆ ಬರುವೆನೆಂದು ಹೇಳಿ ಬಂದನಂತೆ! ತುಂಟನಾಗಿದ್ದರೆ,...

ವೆಂಕಮ್ಮ - ಕುಲದ ಗೌರವವನ್ನು ಹಾಳುಮಾಡುವವರು ಇದ್ದರೇನು? ಸತ್ತರೇನು? ಅವಳ ಗಂಡನಿಗೇನು ಬುದ್ದಿಯಿಲ್ಲವೆ? ಅವನೇನು ಬಳೆ ತೊಟ್ಟಿರುವನೇ! ಎಂತಹ ಷಂಡ........?

ವಿನೋದನಿಗೆ ಭಯವಿಸ್ಮಯಗಳು ಹೆಚ್ಚಿದುವು. ಮೇಲಕೆದ್ದು ಘಟ್ಟಿಯಾಗಿ ಹೇಳಿದನು, - 'ಅಮ್ಮ | ಗಿರಿಯಮ್ಮ! ಒಂದೇ ಒಂದು ಪ್ರಶ್ನೆಯನ್ನು ಕೇಳಬೇಕು; ದಯೆಯಿಟ್ಟು ಸ್ವಲ್ಪ ಇತ್ತಬನ್ನಿರಿ?'

ಗಿರಿಯಮ್ಮನು ಬಂದು ದರ್ಪಿತಸ್ವರದಿಂದ, - ಏನಪ್ಪ, ಅದು? ಉಡುಗೊರೆ|' ವಿನೋದ - ಸಂಕುಚಿತಭಾವದಿಂದ, - ನನ್ನ ಪತ್ನಿಯ ವಿಚಾರವಾಗಿ ತಾವು ಹೇಳಿದುದೆಲ್ಲಾ ನಿಜವೆ? ಏನಾದರೂ ಸಾಕ್ಷ್ಯವಂಟೇ! ಅವಳು ನಿಜವಾಗಿಯೂ ಪಾತಿವ್ರತ್ಯವನ್ನು ಕಳೆದುಕೊಂಡಿರುವಳೆ?

ಗಿರಿಯಮ್ಮ - ಮೊಗದಿರುಹಿ "ನಿನ್ನ ಹೆಂಡತಿಯ ಗುಣವನ್ನು ನೀನೇ ಹೊಗಳಿಕೊಳ್ಳಬೇಕು. ಅವಳ ಗುಣಗಳಲ್ಲಿ ಒಂದನ್ನೊಂದೇ ಮೀರಿಸುತ್ತಿದೆ. ಇರಲಿ; ಹೋಗಪ್ಪ| ಸಾಕು! ಸಾಕು!!

ವಿನೋದ - ಇದೆಲ್ಲವೂ ಏಕೆ? ನೀವೇನಾದರೂ ನಿಜವಾದ ಸಂಗತಿಯನ್ನು ಬಲ್ಲಿರೊ?

ಗಿರಿಯಮ್ಮ - ಸುಳ್ಳನ್ನು ಹೇಳಿ ನನ್ನ ಮನೆಗೆ ಚಿನ್ನದ ಕಳಸವನ್ನು ಹಾಕಿಸುತ್ತೇನಪ್ಪ! ಅವಳು ನಿನ್ನೆಯ ರಾತ್ರಿ ನಿನ್ನ ಪಡ್ಡಕ ತಂತ್ರನಾಥನೊಡನೆ ಓಡಿಹೋಗಲು ಸಿದ್ಧಳಾಗಿದ್ದಳು. ನಾನೇ ನೋಡಿದೆ. ಅವನು ಧರ್ಮಕ್ಕೂ ನಿನಗೂ ಹೆದರಿ ಹೇಗೋ ತಪ್ಪಿಸಿಕೊಂಡು ಓಡಿಬಂದನು. ಲಜ್ಜೆಗೆಟ್ಟು ಬೀದಿಯಲ್ಲಿ ನಿಲ್ಲದಿದ್ದರೂ, ಒಳಗೇ ಎಂತೆಂತಹ ಕೆಲಸಗಳನ್ನು ಮಾಡುವಳೆಂದು ಬಲ್ಲೆ? ನೀನಂತು, ನಿಮ್ಮ ಅಪ್ಪ ಅಜ್ಜಂದಿರು ಗಳಿಸಿಟ್ಟಿದ್ದ ದ್ರವ್ಯವೆಲ್ಲವನ್ನೂ ಕಸಕ್ಕೂ ಕಡೆಯಾಗಿ ಹಾಳುಮಾಡುತ್ತಿರುವೆ| ನಿಮ್ಮಿಬ್ಬರ ದುರ್ವರ್ತನದಿಂದ ನಮ್ಮ ಜನಕ್ಕೇ ಅಗೌರವವುಂಟಾಗಿದೆ.' ಹೀಗೆ ಹೇಳುತಿದ್ದಂತೆಯೇ ಗಿರಿಯಮ್ಮನ ಮುಖವು ಕೆಂಪೇರಿ ಕೋಪದಿಂದ ಮಯ್ನಡುಗುವಂತಾಯ್ತು. ಗಂಡನ ಕಡೆಗೆ ತಿರುಗಿ ಕರ್ಕಶಸ್ವರದಿಂದ ನಿಮಗೆ ಸ್ವಲ್ಪವೂ ಬುದ್ಧಿಯಿಲ್ಲ! ಇಂತಹ ಪೋಕರಿ ಹುಡುಗರನ್ನೆಲ್ಲ ಮನೆಗೆ ಸೇರಿಸುವಿರಿ! ಇಂತವರಿಂದ ನಿಮಗಾಗುವ ಆದಾಯವೇನು? ಈಗಳೂ ಹೊರಗೆ ಕಳಿಸಬಾರದೆ? ನಿಮಗೇಕೆ ಈ ಮಂಕುಬುದ್ದಿ?”
ವಿನೋದನು ಕ್ಲೇಶರೋಷಗಳಿಂದ ಮಯ್ಯರೆತು. - 'ಅಮ್ಮ ಸಾಕು! ಸಾಕು!! ನಿಮಗೂ, ನಿನ್ನ ಮಾತುಗಳಿಗೂ, ನಿಮ್ಮ ಮನೆಗೂ, ಇದೊ ಇದೊ ಅನೇಕಾನೇಕ ವಂದನೆಗಳು!!!' ಎಂದು ಕೈಮುಗಿದು, ಅಲ್ಲಿ ನಿಲ್ಲದೆ ಹೊರಟುಹೋದನು.

ಸಿದ್ಧಾನ್ತಿ - ಖಿನ್ನಮನಸ್ಕನಾಗಿ ಸುಮ್ಮನೆ ಕುಳಿತುಬಿಟ್ಟನು.

ಗಿರಿಯಮ್ಮನು ಸಂತೋಷಾತಿಶಯದಿಂದ ಸಭಾಂಗಣಕ್ಕೆ ಹೋಗಿ ತನ್ನ ಪ್ರಭಾವವನ್ನು ಪ್ರಕಾಶಪಡಿಸಿಕೊಂಡು ಅಂದಿನ ಸಭೆಯನ್ನು ವಿಸರ್ಜಿಸಿದಳು.

ಸುಹೃದಯ ಸೋದರಿಯರೇ |

ನೀವೂ ಇಂತಹ ಸಭೆಗೆ ಸಂಬಂಧಿಸಿದವರೇ ಆಗಿದ್ದರೆ, ನಮ್ಮ ಮೇಲೆ ನಿಮಗೆ ಅತ್ಯಾಗ್ರಹವಿರಬಹುದು! ಆದರೆ ನಾವೇನು ಮಾಡುವ? ಒಂದು ಸಂಸಾರ ಚಿತ್ರದ ಸ್ವರೂಪವನ್ನು ಯಥಾವತ್ತಾಗಿ ನಿಮ್ಮ ಮುಂದಿಟ್ಟಿರುವೆವಲ್ಲದೆ ಬೇರಿಲ್ಲ. ಆದರೂ, ಪ್ರಕೃತಿಯು ಒಬ್ಬೊಬ್ಬನಿಗೆ ಒಂದೊಂದು ಬಗೆಯಾಗಿ ಕಾಣುವಂತೆ ಇದೂ ಕಾಣುತ್ತಿರಬಹುದು. ಸಂಸಾರಸಾಗraದಲ್ಲಿ ಮುಳುಗಿ ತೇಲುತ್ತಿರುವ ಮಹಾಶಯರಿಗೆ ಇದು ಸುಳ್ಳಾಗಿ ತೋರಲಾರದು. ಹಾಗಾದರೆ ನಿಮ್ಮಲ್ಲಿ ಇಂತಹ ಸಭಾಸದರಾಗಿರುವವರಿದ್ದರೂ - ಅವಳು ಇಂದೇ ದೃಢಸಂಕಲ್ಪದಿಂದ ಅನಂಗೀಕಾರ ಪತ್ರವನ್ನು ಬರೆದು ಕಳಿಸಿಬಿಡಬೇಕೆಂಬುದೇ ನಮ್ಮ ಪ್ರಾರ್ಥನೆ. ಮಯೂರಿಯ ಮಾತಿಗೆ ವಿನೋದನು ಭಯದಿಂದ ಬೆದರಿ ನೋಡುತ್ತೆ - ಏನು? ಪೋಲೀಸರು ನನ್ನನ್ನು ಹಿಡಿಯಲು? ಹಾ - ಪೋಲಿಸರೆ?” ಎಂದು ಹೇಳುತಿದ್ದಂತೆಯೇ ಹಿಂದುಮುಂದು ನೋಡದೆ ಹಿತ್ತಿಲ ಕದವನ್ನು ತೆರೆದು ಹೊರಬಿದ್ದು ತಲೆತಪ್ಪಿಸಿಕೊಂಡು ಬಿಟ್ಟನು. ಮಯೂರಿ, ಓಡಿದನು - ಹಿತ್ತಲ ಕಡೆಯಿಂದ ಓಡಿದನು - ಹಿಡಿಯಿರಿ! - ಹಿಡಿಯಿರಿ!” ಎಂದು ಕೂಗಿ ಹೇಳಿ ಸುಶೀಲೆಯನ್ನು ಪಚರಿಸಲುದ್ಯುಕ್ತೆಯಾದಳು.

ಪೊಲೀಸ್ ಇನ್ಸ್ಪೆಕ್ಟರನ ಆಜ್ಞೆಯಂತೆ ಪೋಲಿಸು ಜವಾನರೂ ವಿನೋದನ ಬೆನ್ನಟ್ಟಿ ಹೋದರು.

ಆರ್ಯಭ್ರಾತ್ರುಗಳೇ!

ವಿನೋದನಂತಹ ಸುಖಬಾಹಿರರು ಎಷ್ಟೋ ಮಂದಿ ಈಗಲೂ ಇರಬೇಕಲ್ಲವೆ? ಅಂಥವರನ್ನು ಆವ ಧನ್ಯವಾದದಿಂದ ಸಂಸ್ತುತಿಸಿ ಧನ್ಯರಾಗು? ಹೋಗಲಿ, ಉಳಿದವರಾದರೂ ತಮ್ಮ ತಮ್ಮ ಸತೀಮಣಿಯರಲ್ಲಿ ಮುಳಿದು ಮನಬಂದಂತೆ ಮಾಡುವ ಕೆಟ್ಟ ಕೆಲಸಗಳನ್ನು ಬಿಟ್ಟು ಬಿಡಬಹುದಷ್ಟೆ? (ಹಾಗಾಗಲಿ)

——

ಶ್ರೀ.

ಅಷ್ಟಮ ಪರಿಚ್ಛೇದ.

_________

(ಪಾಪಪಂಕ)

ಲೆಯಪುರದ ಮಂಗಳವಾರಪೇಟೆಗೆ ಸೇರಿದ ಓಣಿ ಬೀದಿಯಲ್ಲಿಯ ಒಂದು ಮನೆ. ಮನೆಯೇನೂ ಅಷ್ಟು ದೊಡ್ಡದಲ್ಲ. ಮಹಡಿಯ ಮನೆಯಾದುದರಿಂದ ನೋಡಲಿಕ್ಕೆ ಇಕ್ಕಾಗಿ ಕಾಣುತ್ತಿಲ್ಲ. ಮನೆಯ ಹೊರಗಡೆ ಶೂನ್ಯಾಂತರಂಗದ ಮಲಿನತೆ ತೋರಿಬರುತ್ತಿರುವಂತೆ ಅವಳ ಮನೆಯೂ ಕಾಂತಿಹೀನವಾಗಿತ್ತೆಂದರೆ ಸಾಕು.

ಚಪಲೆ, ಬೀದಿಯ ಬಾಗಿಲ ನಡುವೆ ಕಿರುಮನಯಲ್ಲಿ, ತಂತ್ರನಾಥನೊಡನೆ ಲಲ್ಲೆಯಲ್ಲಿದ್ದಳು. ತಂತ್ರನಾಥ-ಚಪಲೆ-ಇಬ್ಬರ ಮುಖಗಳಲ್ಲಿಯೂ ಉತ್ಸಾಹವು ಹೊರಹೊಮ್ಮುತಿತ್ತು. ಈ ಕೂರ್ಮೆಗಾರರ ಕುಹುಕವೇನೆಂಬುದನ್ನು ನಮ್ಮ ವಾಚಕವರ್ಗವು ಚೆನ್ನಾಗಿ ತಿಳಿದಿರುವುದೊಳ್ಳಿತಲ್ಲವೆ?

ಚಪಲೆ; - ನೀವು ನನ್ನ ಮಾತನ್ನು ಮೀರುವುದಿಲ್ಲವಷ್ಟೆ?

ತಂತ್ರ - ಎಂದೂ ನಿನ್ನ ಮಾತನ್ನು ಮೀರುವುದಿಲ್ಲ. ನೀನು ನನ್ನ ಕೋರಿಕೆಯನ್ನು ನೆರವೇರಿಸಿಕೊಟ್ಟರೆ...............

ಚಪಲೆ - ನಗುತ್ತ - "ಆ ವಿಷಯದಲ್ಲಿ ಪ್ರಾರ್ಥಿಸಬೇಕಾದುದಿಲ್ಲ. ಅದಿರಲಿ; ನೀವು ಪುನಃ ಸಂಸಾರಕ್ಕೆ ಸಿಕ್ಕಿ. ಕಡೆಗೆ ನನ್ನನ್ನು ಮರೆತರೂ ಮರೆಯಬಹುದು! ನಿಮ್ಮ ಹೆಂಡತಿ ಇನ್ನೂ ಹುಡುಗಿ, ಆದರೂ ಅವಳು ಪ್ರಾಯಸಮರ್ಥೆಯಾದ ಬಳಿಕ ನೀವು ನನ್ನ ಕೈಬಿಟ್ಟರೆ ನಾನು ಮಾಡುವುದೇನು? ಈಗ ನೋಡಿರಿ! ವಿನೋದನು ನನ್ನಿಂದ ಎಷ್ಟೋ ಸುಖವನ್ನು ಅನುಭವಿಸಿರುವನು. ಆದರೂ ಅದೆಲ್ಲವನ್ನೂ ಮರೆತು, ಹೆಂಡತಿಯ ಮಾತಿಗೆ ಮರುಳಾಗಿ, ಇಲ್ಲಿಗೆ ಬರುವುದನ್ನೇ ಕಡಿಮೆ ಮಾಡಿರುತ್ತಾನೆ. ಅದರೆ ನಾನು ಚಾಕಚಕ್ಯದಿಂದ ಅವನಿಗೆ ಹೆಂಡತಿಯಲ್ಲಿ ದ್ವೇಷವುಂಟಾಗುವಂತೆ ಮಾಡಿರುವೆನು. ನಿನ್ನೆಯೇ ಅವಳ ಮೇಲೆ ಅಲ್ಲದ ಸಲ್ಲದ ದೋಷವನ್ನ ಹೊರೆಯಿಸಿ ಅವನನ್ನು ಚೆನ್ನಾಗಿ ಕೆರಳಿಸಿ ಕಳಿಸಿಕೊಟ್ಟನು. ಆದರೂ ನಿನ್ನೆ ಅವನು ಏತರಿಂದಲೋ ದುಡುಕಲಿಲ್ಲ. ಈ ದಿನ ನಿಮ್ಮ ಸಲಹೆ ದೊರೆತುದರಿಂದ ನಾನೇ ಹೋಗಿ, ಅಡಗಿದ್ದ ಉರಿಯನ್ನು ಮತ್ತೆ ಉರಿಮಾಡಿ ಹಬ್ಬಿಸಿಬಿಟ್ಟು ಬಂದೆನು. ಇಷ್ಟು ಹೊತ್ತಿಗಾಗಲೇ ಅವನ ಕೋಪಾಗ್ನಿಗೆ ಸಿಕಿ, ಸುಶೀಲೆ ಸುಟ್ಟು ಹೋಗಿರಬೇಕು! ಅಲ್ಲದೆ ಮಯೂರಿಯೂ ಬಲಿಯಾಗಿರಬೇಕು. ಅವನ ಕೃತಘ್ನತೆಗೆ ಇದೇ ಪ್ರತೀಕಾರವಲ್ಲವೆ!"

ತಂತ್ರ - ಅದೇನು?

ಚಪಲೆ - ನೀವು ಮಾತ್ರ ಹಾಗೆ ಮಾಡಬೇಡಿರಿ, ಅವನು ತನ್ನ ಆಸ್ತಿಯೆಲ್ಲವನ್ನೂ ನನ್ನ ಹೆಸರಿಗೆ ಬರೆದು ರಿಜಿಸ್ಟರ್ ಮಾಡಿಸಿ ಕೊಡುವೆನೆಂದು ಹೇಳಿ, ಸುಖಪಟ್ಟು ನನ್ನನ್ನು ಮೋಸಮಾಡಿರುವನು. ಅವನಿಂದಾದ ಹಿಂಸೆ ನನಗೆ ಅಷ್ಟಿಷ್ಟಲ್ಲ!! ಅದಕ್ಕೆ ಪ್ರತೀಕಾರ ಮಾಡಬೇಕೆಂದೇ ನಾನು ಈ ದಿನ ತಮ್ಮ ಸಹಾಯದಿಂದ ಮಾಡಿದ ಹೂಟವು ಹೇಗೂ ತಪ್ಪಿಹೋಗುವುದಿಲ್ಲವೆಂದು ನಂಬುವೆನು, ಇದಕ್ಕಾಗಿ ನಾನು ತಮಗೆ ಕೃತಜ್ಞಳಾಗಿರುವೆನು.

ತಂತ್ರನಾಥನು ಚಪಲೆಯ ಬೆನ್ನು ತಟ್ಟಿ - "ಭಲೆ! ಚಪಲೆ! ಭಲೆ!! ಈಗ ನಿನ್ನ ಮಾಟದ ಹೂಟವು ತಿಳಿಯಿತು. ಬಂದವರನ್ನು ಆದರಿಸುವುದರಲ್ಲಿಯೂ, ಸಂತೋಷಪಡಿಸುವುದರಲ್ಲಿಯೂ ನಿನ ಗಿರುವ ಚಾತುರ್ಯವು, ಮತ್ತಾರಲ್ಲಿಯೂ ಇರಲಾರದು. ನಿನ್ನನ್ನು ನೋಡಿದಂದಿನಿಂದ ನನಗೆ ಮನ-ಹೆಂಡತಿ-ಮಕ್ಕಳು-ಮರಿಗಳೆಲ್ಲರೂ ಮರೆತೇಹೋಗಿರುವರು. ಯಾವಾಗಲೂ ನಿನ್ನ ಬಳಿಯಲ್ಲಿಯೇ ಇರಬೇಕೆಂಬ ಕುತೂಹಲವುಂಟಾಗಿರುವುದು. ನಿನಗೆ ಏನುಬೇಕಾದರೂ, ಸಂತೋಷವಾಗಿ ಕೊಡಲು ಸಿದ್ದನಾಗಿರುವೆನು' ಎಂದು ಚಪಲೆಯ ಮುಖವನ್ನೇ ನೋಡುತ್ತೆ ಕುಳಿತನು.

ಪಾಠಕವರ್ಗ !

ಇಲಿ, ಹಾವುಗಳು ತಲೆತಪ್ಪಿಸಿಕೊಳ್ಳಬೇಕಾದರೆ, ಬಿಲವನ್ನೂ, ಹುತ್ತವನ್ನು ಹುಡುಕುವುದು ಸ್ವಭಾವವಲ್ಲವೆ? ಕಳ್ಳರಿಗ ಕೊಲೆ ಪಾತಕರಿಗೂ ತಲೆಪ್ಪಿಸಿಕೊಳ್ಳುವುದಕ್ಕೆ ಕೂಡ, ಅಂತಹ ಸ್ಥಳಗಳನ್ನೇ ಹುಡುಕಬೇಕಾದುದೂ ಸಹಜವಾದುದಲ್ಲವೆ? ಪತ್ನೀಘಾತಕನಾದ ವಿನೋದನಿಗಾದರೂ, ಗ್ರಾಮರಕ್ಷಕರ (Police) ಕಯ್ಯಿಂದ ತಪ್ಪಿಸಿಕೊಳ್ಳುವುದಕ್ಕೆ ಚಪಲೆಯ ಮನೆಯೇ ಸರಿಯಾಗಿ ಕಂಡು ಬಂದುದರಿಂದ ಓಡಿಬಂದನು. ಬಂದವನು ಆತುರದಿಂದ ಬಾಗಿಲನ್ನು ಬಲವಾಗಿ ಒದ್ದನು. ಹಳೆಯದಾಗಿದ್ದುದರಿಂದ ಕದವು ಒಡೆದುಹೋಯಿತು. ಒಡನೆ ಒಳಹೊಕ್ಕನು, ನೋಡಿದನು; ಸರಸ ಸಲ್ಲಾಸದಲ್ಲಿದ್ದ ತಂತ್ರನಾಥ-ಚಪಲೆಯರ ತಾತ್ಕಾಲಿಕ ಸ್ಥಿತಿಗತಿಗಳನ್ನು ಕಂಡನು. ಆಗಲೆ ಚಪಲೆಯ ನೈಜ್ಯಭಾವವೂ ಹೃದ್ಗತವಾಯ್ತು. ಆ ವೇಳೆಯಲ್ಲಿ ವಿನೋದನಿಗೆ ಹೇಗಾಗಿರಬೇಕೆಂಬುದನ್ನು ಗ್ರಾಹಕರೇ ಊಹಿಸುವುದು ಲೇಸು! ಹೇಗೂ ಕ್ರೋಧ-ವಿಸ್ಮಯ-ಭಯ-ಶೋಕಗಳಿಂದ ಜಡನಂತಾಗಿ ಅಡ್ಡಗಟ್ಟಿ ನಿಂತನು.

ಚಪಲೆ - ಚಕಿತಭಾವದಿಂದ - ಇದೇನು? ವಿನೋದ! ಇಷ್ಟು ರೌದ್ರಾವೇಶವೇಕೆ? ಏನುಮಾಡಿದೆ? ಮುಗಿಸಿಬಿಟ್ಟೆಯಾ? (ಅತ್ತಿತ್ತ ನೋಡಿ) - ಅಯ್ಯೋ! ಪ್ರಮಾದ!! ಪ್ರಮಾದ!!| ಕೊಲೆಮಾ
ಡಿರುವನು ಕೊಲೆ!! ಯಾರೂ ಇಲ್ಲವೆ? ಹಿಡಿಯಿರಿ! ಹಿಡಿಯಿರಿ!!'
ಎಂದು ಕೂಗಿದಳು.

ತಂತ್ರ - ಓಹೋ! ನಿಜ! ಸುಳ್ಳಲ್ಲ. ಕೊಲೆಮಾಡಿರುವನು. ಇವ
ನಿಂದ ನಮಗೂ ಹಾನಿತಪ್ಪದು. ಮೊದಲು ಪೋಲಿಸಿಗೆ ಹಿಡಿದು
ಕೊಡಬೇಕು.

ವಿನೋದನ ಸ್ಥಿತಿ ಹೇಗಾಯ್ತೆಂಬುದನ್ನು ಹೇಳಬೇಕೆ? ಕೋ
ಪಾನುತಾಪಗಳಿಂದ ಕಂಪಿಸುತ್ತ - 'ಹಾನಿಯೆ? ನಿನಗೆಂದೂ ಹಾನಿಯೂ
ತಪ್ಪಿದುದಲ್ಲ! ಕುಲನಾಶಿನಿ! ಮಾಯಾವನಿ! ಈ ದುರಭಿಸಂಧಿಗೆಂದು
ಎಂದಿನಿಂದ ಚಿಂತಿಸುತ್ತಿದ್ದೆ! ಢಾಕಿನಿ! ನಿನ್ನ ಈ ವಂಚನೆಯನ್ನು ತಿಳಿ
ಯದೆ ನೀನೇ ನನ್ನ ಸುಖದ ಸಾರವೆಂದಿದ್ದೆನಲ್ಲವೆ? ಹಾಲಿನಂತಿದ್ದ ನನ್ನ
ಸಂಸಾರದಲ್ಲಿ ವಿಷವನ್ನು ಬೆರಸಿದ ಪಾತಕಿ ನೀನೇ ಅಲ್ಲವೆ? ನನ್ನ
ದುರಾಚಾರ-ದುಷ್ಕೃತಿ-ದುಃಖ-ದೌರ್ಭಾಗ್ಯಗಳೆಲ್ಲಕ್ಕೂ ನೀನೇ
ಹೇತುವೆಂಬುದು ಈಗಳಲ್ಲವೇ ನಿರ್ಧಾರವಾದುದು? ಪಾಪಿನಿ | ನಿನ್ನ
ಈ ದುಷ್ಕರ್ಮಕ್ಕೆ ಪ್ರಾಯಶ್ಚಿತ್ತವನ್ನು ಮಾಡದೆ ಬಿಡುವೆನೇನು?

ತಂತ್ರ - ಚೀ! ಕೊಲೆಗಡುಗ! ಕೈಹಿಡಿದ ಹೆಂಡತಿಯನ್ನೇ ಕೊಂದು
ಬಂದಿರುವ ನೀನು ಇಲ್ಲಿ ಕ್ಷಣಮಾತ್ರವೂ ನಿಲ್ಲಲಾಗದು. ಹೊ
ರಟು ಹೋಗು! ಇಲ್ಲವಾದರೆ ಪೊಲೀಸಿನವರನ್ನು ಕರೆತ
ರುವೆನು.

ವಿನೋದ - ಗರ್ವದಿಂದ ನಕ್ಕು, "ಪಾಮರ! ಸರ್ವಸ್ವಾಪಹಾರಿಣಿ
ಯಾದ ಈ ಧೂರ್ತೆಯ ಮಾತಿಗೆ ಮರಳಾಗಿ, ನನ್ನ ಸಂಸಾರ
ವನ್ನು ನಾಶಮಾಡಿಸಿದೆಯಲ್ಲವೆ? ಪಾಪಿ | ಇವಳನ್ನು ಉಳಿಸಿಕೊ
ಳ್ಳಲು ನಿನಗೆ ಶಕ್ತಿಯುಂಟೆಂದಿರುವೆಯೊ ! ತೊಲಗತ್ತ! ಚಪಲೆ - ತಂತ್ರನಾಥನನ್ನು ನೋಡುತ್ತ - ಪ್ರಿಯತಮ! ಮೊದಲೇ
ಇವನು ತಿಳಿಗೇಡಿ ಸಾಲದುದಕ್ಕೆ ಈಗತಾನೇ ಹೆಂಡತಿಯನ್ನು
ಕೊಂದೂ ಬಂದಿರುವನು. ಮೊದಲು ಇವನನ್ನು ಹೊರಡಿಸು
ವುದೊಳ್ಳೆಯದು. ಉಳಿದುವು ಆಬಳಿಕಾಗಬಹುದು.

ಚಪಲೆಯು ಈ ಬಗೆಯ ಕ್ರೂರವಾಕ್ಯಗಳಿಂದ ವಿನೋದನು
ಮರ್ಮಾಹತನಾದನು. ಸಾಧ್ವೀಮಣಿಯಾದ ತನ್ನ ಹೆಂಡತಿಯ ಹಿತ
ಬೋಧೆಗಳು ನೆನಪಿಗೆ ಬಂದು ಅನುತಾಪಾಗ್ನಿಯಿಂದ ಸುಡತೊಡಗಿದುವು.
ಯಾನಾಧಿಕ್ಕದಿಂದ ನಿಲ್ಲಲಾರದೆ ಕ್ಷಣಕಾಲ ಗೋಡೆಯನ್ನು ನೆಮ್ಮಿ
ಎಡಗಯ್ಯಿಂದೆ ತಲೆಯನ್ನು ಬಲವಾಗಿ ಹಿಡಿದು ನಿಂತಿದ್ದು, ಆಬಳಿಕ
ತನ್ನಲ್ಲಿ ತಾನೇ ತಿಳದೆಚ್ಚೆತ್ತು, ನಿಟ್ಟುಸಿರಿಟ್ಟು__ದಿಷ್ಟೆ! ನನ್ನ ಧರ್ಮ
ಪತ್ನಿ, ನನ್ನನ್ನು ಕುರಿತು ಅಡಿಗಡಿಗೂ ಹೇಳುತ್ತಿದ್ದ ಹಿತವಾದಗಳು
ಈಗಲೀಗ ನನಗೆ ಹೃದಯಂಗಮವಾಗುತ್ತಿವೆ! ನಿನ್ನ ಕುಟಿಲನಟನೆಗೆ
ಮರುಳಾಗಿ ನಿನ್ನನ್ನೇ ನಂಬಿ ನನ್ನ ಸರ್ವಸ್ವವನ್ನೂ ನಿನಗೆ ಕೊಡಬೇಕೆಂ
ದಿದ್ದೆನು. ನಿನ್ನ ಸಂಸರ್ಗದಿಂದ ಈ ಬಗೆಯ ಸಹಿಸಲಾರದ ಸಂತಾ
ಪಕ್ಕೆ ಪಕ್ಕಾದೆನಲ್ಲದೆ, ಪತ್ನಿಯನ್ನೂ ಮೃತ್ಯು ಮುಖದಲ್ಲಿ ಬಿಟ್ಟು
ಬಂದೆನು. ಇನ್ನು ನನಗುಳಿದಿವುದು ಮರಣವೊಂದೇ! ಇದೇ ನನ್ನ
ಘೋರಕರ್ಮಕ್ಕೆ ಪ್ರಾಯಶ್ಚಿತ್ತವು. ಆದರೂ, ಈ ನನ್ನ ಸಂಕಟಕ್ಕೆ
ಕಾರಣಳಾದ ನಿನ್ನನ್ನು ಕಡಿದಲ್ಲದೆ ನನ್ನ ಆತ್ಮಕ್ಕೆ ತಣಿವಾಗದೆಂದು
ತಿಳಿ.' ಎಂದು ಚಪಲೆಯ ಮುಂದೆ ನಿಂತನು.

ತಂತ್ರ - ಹಿಂದಿನಿಂದ ಬಂದು ತನ್ನ ತೋಳುಗಳಿ೦ದ ವಿನೋದನನ್ನು
ಬಲವಾಗಿ ಬಿಗಿದು, - 'ಚಪಲೆ! ಆ ಮೂಲೆಯಲ್ಲಿರುವ ಕೊಡಲಿ
ಯನ್ನು ತೆಗೆದುಕೊಂಡು ಬಾ! ಮೊದಲು ಇವನನ್ನು ಕೊನೆ
ಗಾಣಿಸು' ವಿನೋದನು ಉನ್ಮತ್ತನಂತೆ ವಿಕಾರವಾಗಿ ನಕ್ಕು ತಂತ್ರನಾಥಸ ಬಾಹುಬಂಧನದಿಂದ ಸುಲಭವಾಗಿ ಬಿಡುಗಡೆ ಹೊಂದಿ, ಕಯ್ಯಲ್ಲಿದ್ದ ಕತ್ತಿಯಿಂದ ತಂತ್ರನಾಥನ ತೋಳನ್ನು ತಿವಿದು ಕೆಳಗುರುಳಿಸಿದನು; ಮತ್ತೆ ಚಪಲೆಯ ಜಡೆಯನ್ನು ಎಡಗಯ್ಯಿಂದ ಹಿಡಿದೆಳೆದು - ಚಪಲೆ! ನಿನ್ನ ದುರ್ಭೋಧನೆಯಿಂದ ನಾನು ಕುಲ, ಮಾನ, ಧನ, ಕೀರ್ತಿ, ಗೌರವ, ಸುಖ ಭೋಗಗಳೆಲ್ಲವನ್ನೂ ಕೆಡಿಸಿಕೊಂಡುದಲ್ಲದೆ, ಆನಂದಕ್ಕೆ ಆಧಾರವಾಗಿದ್ದ ಆರಾಮವನ್ನೂ ಹಾಳುಮಾಡಿದೆನು! ನಿನ್ನ ಕುಟಿಲಪ್ರೀತಿಯನ್ನು ನಿಜವೆಂದೇ ನಂಬಿ, ನಿನ್ನ ಮುಖೋಲ್ಲಾಸಕ್ಯಾಗಿ, ಎಷ್ಟೋ ಕೆಟ್ಟ ಕೆಲಸಗಳನ್ನು ಮಾಡಿಬಿಟ್ಟೆನು! ಅಷ್ಟಕ್ಕೂ ತಣಿಯದೆ ನೀನು ನನ್ನ ಪತ್ನಿಯ ಮೇಲೆ ಮಿಥ್ಯಾಪವಾದವನ್ನು ಹೊರೆಯಿಸಿ, ಅವಳ ಪ್ರಾಣವನ್ನು ನನ್ನ ಕಯ್ಯಿಂದೆ ತೆಗೆಯಿಸಲು ಪ್ರಯತ್ನ ಪಟ್ಟೆ | ಆಗಲಿ; ಈಗ ಆ ಕರ್ಮಗಳಿಗೆ ಫಲವನ್ನು ಅನುಭವಿಸು!” ಎಂದು ಹೇಳುತ್ತಿದ್ದಂತೆಯೇ ಒಮ್ಮೆ ಚಪಲೆಯ ಮುಖವನ್ನು ನೋಡಿದನು, ಈತನ ಕ್ರೂರ ದೃಷ್ಟಿಗೆ ಚಪಲೆಯು ಗದಗದಿಸುತ್ತೆ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟ ಳು; ಸಾಧ್ಯವಾಗಲಿಲ್ಲ ಇವಳ ಪ್ರಯತ್ನದಿಂದ ಮತ್ತೂ ಕುಪಿತನಾದ ವಿನೋದನು 'ಮರುಳೆ ನೀನೀ ಅಂತಕನ ಕಯ್ಯಿಂದ ಬಿಡಿಸಿಕೊಳ್ಳಬಲ್ಲೆಯಾ? ನಿನ್ನಿ೦ದಾದೀತೇ? ಎಂದಿಗೂ ಸಾಗದು!.........

ವಿನೋದನ ಮಾತು ಮುಗಿವುದಕ್ಕೆ ಮೊದಲೇ, ಪೆಟ್ಟು ತಿಂದು ನೆಲದ ಮೇಲೆ ಬಿದ್ದಿದ್ದ ತ೦ತ್ರನಾಥನು ಮೇಲಕ್ಕೆದ್ದು ಬಂದು ತಾನೇ ಕೊಡಲಿಯನ್ನು ತಂದುದಲ್ಲದೆ; ಅದನ್ನೇ ವಿನೋದನ ತಲೆಯ ಮೇಲೆ ಗುರಿಯಿಟ್ಟು ಹೊಡೆಯಲೆತ್ತಿದನು.

ವಿನೋದನು ಈ ಸುಳಿವನ್ನು ಮುಂದಾಗಿ ತಿಳಿದು, ಕೊಡಲಿಯೇಟು ತನ್ನ ಕಡೆಗೆ ಬೀಳುವ ವೇಳೆಗೆ ಸರಿಯಾಗಿ ಬಲಗಡೆ ಸರಿದನು; ಅದರ ಬಲವಾದ ಏಟು ಗುರಿತಪ್ಪಿ ಹೋಗಿ ಚಪಲೆಯ ಮೇಲೆಯೇ ಬಿದ್ದು ಅವಳು ವಿಗತಪ್ರಾಣಳಾಗಿ ಕೆಳಗೆ ಬೀಳುವಂತೆ ಮಾಡಿಬಿಟ್ಟಿತು. ವಿನೋದನು; ತಂತ್ರನಾಥನನ್ನು ಕೊಲ್ಲಹೋದನು. ಆದರೆ ತಂತ್ರನಾಥನು ಚಪಲೆಯ ಕೊಲೆಗೆ ತಾನೇ ಕಾರಣನೆಂದರಿತೂ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್ಲಿ ನಿಲ್ಲದೆ ಬೀದಿಗೆ ಬಂದು, 'ಕೊಲೆ, ಕೊಲೆ'! ಎಂದು ಕೂಗಿಕೊಂಡನು. ಹತ್ತಿರದಲ್ಲಿಯೇ ಬರುತ್ತಿದ್ದ ಪೋಲೀಸಿನವರು ಆಗಲೇ ಮನೆಯೊಳಹೊಕ್ಕು ನೋಡಿದರು. ಅಷ್ಟರಲ್ಲಿ ತಂತ್ರನಾಥನು ಹೊರಟುಹೋಗಿದ್ದುದರಿಂದ ಮನೆಯಲ್ಲಿ ಚಪಲೆಯ ಮೃತದೇಹದ ಬಳಿಯಲ್ಲಿಯೇ ಸಂಭ್ರಾಂತನಾಗಿ ನಿಂತಿದ್ದ ವಿನೋದನನ್ನು ಕಂಡರು. ಆಬಳಿಕ ವಿನೋದನು ಅವರಿಂದ ಬಂಧಿತನಾಗಿ ಒಯ್ಯಲ್ಪಟ್ಟನೆಂಬುದನ್ನು ಹೇಳಬೇಕಾದುದಿಲ್ಲವಷ್ಟೆ.

ಮಹೋದಯರೇ!

ವಿಚಾರಶೂನ್ಯರಿಗಾಗುವ ಫಲವೆಂತಹುದೆಂಬುದು, ಈಗಳಲ್ಲವೇ ತಿಳಿಯಬೇಕು? ಮಾಡತಕ್ಕುದೇನು? ಕರ್ತವ್ಯ ಜ್ಞಾನಶೂನ್ಯತೆಯಿಂದ ವಿನೋದನಿಗುoಟಾದ ವಿಪತ್ತಿಗಾಗಿ ಮರುಮರುಗುವುದೊಂದೇ ಮಾಡತಕ್ಕುದು; ಮುಂದೆಯಾದರೂ ಜ್ಞಾನಾಮೃತವರ್ಷದಿಂದ ಸುಖ ಸಂಗತಿ ಸಂಗಡಿಸಬೇಕಲ್ಲವೇ (ಅ೦ತಾಗಲಿ.)

-----*-----

ಶ್ರೀಃ

ನವಮ ಪರಿಚ್ಛೇದ

—————♦—————

(ಕರ್ಮಫಲ)



ಸುಶೀಲೆಯ ತಂದೆಯ ಹೆಸರು ಸುಜ್ಞಾನಶರ್ಮ. ಮಲಯಪುರಕ್ಕೆ ಮೂರು ಹರದಾರಿ ದೂರದಲ್ಲಿರುವ ಮಹಾನಂದ ಗಾಮದಲ್ಲಿಯೇ ಈತನು ವಾಸವಿರುವುದು. ಈತನು ಆಗರ್ಭ ಶ್ರೀಮಂತನೂ, ವಿದ್ಯಾವಿನಯಾದಿ ಸುಗುಣಸಂಪನ್ನನೂ ಆದ ಗಣ್ಯಪುರುಷನು, ಅಲ್ಲದೆ ಗಾಮಕ್ಕೆ ಮುಖ್ಯಸ್ಥನಾಗಿ ಗೌರವಿಸಲ್ಪಟ್ಟು, ಎಷ್ಟೋ ಸಭೆಗಳಿಗೆ ಸಹಾಯಕ ಕಾರ್ಯದರ್ಶಿಯೂ ಆಗಿದ್ದನು.

ಸುಶೀಲೆ ದಯಾಳುಗಳಾದ ಪೋಲೀಸಿನವರ ಸಹಾಯದಿಂದ ಮಯೂರಿಯೊಡನೆ ಪಿತೃಗ್ರಹವನ್ನು ಸೇರಿದಳು. ಮಗಳ ಬಾಯಿಂದೆಯೂ ಮಯೂರಿಯ ಬಾಯಿಂದೆಯೂ ವಿಷಯವನ್ನು ತಿಳಿದ ಸುಜ್ಞಾನಶರ್ಮನು ಅಳಿಯಂದಿರ ಅವಿವೇಕಕ್ಕೂ, ಮಗಳ ಆಪತ್ತಿಗೂ ಮರುಗುತ್ತೆ ಮಗಳನ್ನು ಬಹುನಿಗದಿಂದ ಸಮಾಧಾನಪಡಿಸಲು ಪ್ರಯತ್ನಿಸಿದನು.

ಹೇಗೂ ಸುಶೀಲೆ ಪತಿಗೃಹವನ್ನು ಸೇರಿ ಇಂದಿಗಾಗಲೇ ಎರಡು ವಾರಗಳು ಕಳೆದುಹೋದುವು. ಆದರೂ ಪತಿಯ ಸಂದರ್ಶನವು ದೊರೆಯಲಿಲ್ಲ; ತೊಡೆಯ ಗಾಯವೂ ಚೆನ್ನಾಗಿ ಮಾಗಿಲ್ಲ; ಮನೋವ್ಯಾಕುಲವನ್ನೆಂತು ವಿವರಿಸುವಂತಿಲ್ಲ. ಅಹೋರಾತ್ರಿಯೂ ಹಾಸಿಗೆಯ ಮೇಲೆ ಹೊರಳಾಡುತ್ತೆ ಪತಿಯ ದುರ್ದಶೆಗಾಗಿ ಕಣ್ಣೀರು ಸುರಿಸುತಿದ್ದಳು. ಮಯೂರಿ, ಕ್ಷಣಮಾತ್ರವೂ ಸುಶೀಲೆಯನ್ನು ಬಿಟ್ಟು ಅತ್ತಿತ್ತ ಹೋಗದೆ ಕಾವಲಿದ್ದಳು. ಸುಶೀಲೆ — ಕಣ್ಣೀರು ಸುರಿಸುತ್ತೆ ಕೈ ಕುಗ್ಗಿದ ಕಂಠದಿಂದ - ಮಯೂರಿ ನನ್ನ ಸ್ವಾಮಿ, ಈಗ ಇರುವುದೆಲ್ಲಿ? ಹದಿನೈದು ದಿನಗಳಾದರೂ ನನಗೇಕೆ ಕಾಣಿಸುತ್ತಿಲ್ಲ! ಏನಾಗಿರುವರು? ಹೇಳು | ಆ ನನ್ನ ಪ್ರಭು ಸುಖವಾಗಿರುವರೆಂದು ತಿಳಿವವರೆಗೂ, ನನ್ನೀ ರೋಗವು ಗುಣವಾಗುವಂತಿಲ್ಲ. ಅವರು ನನ್ನನ್ನು ಕ್ಷಮಿಸಿ ಶಾಂತಚಿತ್ತರಾಗಿ ವಿವೇಕವನ್ನು ಹೊಂದಿರುವರೆಂದು ಕೇಳಿದಾಗಳೇ ನಾನು ಸುಖಿಯಾಗಬೇಕು. ಮಯೂರಿ! ನಿಜವಾಗಿ ಹೇಳು | ನನಗಷ್ಟು ಭಾಗ್ಯವುಂಟಾದೀತೆ? ಎ೦ದಿಗೆ? ಹೇಗೆ?

ಮಯೂರಿ - ತಾಯೀ! ಚಿಂತಿಸಬಾರದು, ನಿಮ್ಮ ಸ್ವಾಮಿಗೆ ಏನೂ ಕೇಡಾಗದು. ನಿಮ್ಮ ಸಾಕ್ಷ್ಯಪತ್ರದ ಬಲವೇ ಅವರನ್ನು ಸುರಕ್ಷಿತರನ್ನಾಗಿ ಮಾಡಬಲ್ಲುದೆಂದು ವಿಚಾರಣಾಕರ್ತರು ದೃಢವಾಗಿ ಹೇಳುತ್ತಿರುವರು. ನಿಮ್ಮ ಶೀಲ-ಸತ್ಯ-ಶ್ರಮಸಹಿಷ್ಣುತೆ - ಇವುಗಳ ಪ್ರಭಾವವೇ ನಿಮ್ಮನ್ನು ಈ ವಿಪತ್ತಿನಿಂದ ಪಾರಾಗಿಸತಕ್ಕುದಾಗಿದೆ. ಅಂಜಬೇಡಿರಿ!?” ಎಂದು ಹೇಳಿ, ಹಾಲನ್ನು ತರುವೆನೆಂದು ಬೇರೆ ಕಡೆಗೆ ಹೋದಳು. ಸುಶೀಲೆಯೊಬ್ಬಳೇ ಮಲಗಿದ್ದಳು.

ದ್ರೋಹಿಯಾದ ತಂತ್ರನಾಥನು ಇದೇ ಸಮಯವನ್ನೇ ನೋಡುತ್ತಿದ್ದನೆಂದು ತೋರುವುದು, ಹೇಗೂ ಮಯೂರಿ ಅತ್ತ ಹೋಗಲು, ಇವನಿತ್ತ ಬಂದೇ ಬಂದನು. ಸುಶೀಲೆ ಮಲಗಿದ್ದೆಡೆಗೆ ಬಂದು, ಮೆಲ್ಲನೆ “ಸುಶೀಲೆ! ಹೇಗಿರುತ್ತೀಯೆ? ವ್ರಣವಿನ್ನೂ ಮಾಗಿಲ್ಲವೆ?

ಸುಶೀಲೆ, ಭಯ-ರೋಷಗಳಿಂದ ಕಂಪಿಸುತ್ತೆ, “ಪ್ರಾಣವುಹೋಗುವವರೆಗೂ ವ್ರಣವೂ ಮಾಸುವಂತಿಲ್ಲ.” ತಂತ್ರ - ಪ್ರಾಣಭಯವಿಲ್ಲವೆಂದು ಈಗಲೇ ಪಂಡಿತರಿಂದ ತಿಳಿದು ಬಂದಿರುವೆನು, ಹೆದರಬೇಡ.

ಸುಶೀಲೆ - ಉದಾಸೀನದಿಂದ - ಸಾಯಬೇಕೆಂದೇ ಇರುವ ನನಗೆ ಪ್ರಾಣ ಭಯವೆಳ್ಳಷ್ಟೂ ಇಲ್ಲ.

ತಂತ್ರ - ಸುಶೀಲೆ, ಆಗ ನೀನು ನನ್ನ ಮಾತನ್ನು ಕೇಳಿದ್ದರೆ ಇಷ್ಟರ ತೊಂದರೆಗಳುಂಟಾಗುತ್ತಿರಲಿಲ್ಲ!! ಈ ರೋಗಕ್ಕೆ ನೀನು ತುತ್ತಾಗುತ್ತೆಯೂ ಇರಲಿಲ್ಲ. ನಿನ್ನ ಗಂಡನು, ಮರಣಭೀತಿಯಿಂದ ನರಳುತ್ತಿರುವುದಕ್ಕೂ ಅವಕಾಶವಿರುತ್ತಿರಲಿಲ್ಲ ||| ಅಂದೇ ನೀನು ನನ್ನೊಡನೆ ಬಂದಿದ್ದರೆ ಎಷ್ಟು ಸುಖವಾಗಿರಬಹುದಾಗಿತ್ತು, ಆ ಮರುದಿನವೆ ನಿನ್ನ ಗಂಡನು ಚಪಲೆಯನ್ನು ಕೊಂದನು. ಕೊಲೆಯನ್ನು ಮಾಡಿದುದಕ್ಕಾಗಿ ಕಾರಾಗಾರದಲ್ಲಿ ನರಳುತ್ತಿರುವನು. ಮರಣದಂಡನೆಯಾದರೂ ಆದೀತು! ಈಗಳಾದರೂ ನನ್ನ ಮಾತನ್ನು ಕೇಳು? ಬಾಳುವ ದಾರಿಯನ್ನು ತೋರುವೆನು.

ಸುಶೀಲೆ - ತಿರಸ್ಕಾರಭಾವದಿಂದ - ಮೂರ್ಖ! ಇಲ್ಲಿಗೇಕೆ ಬಂದೆ? ನಿಲ್ಲದೆ ಹೊರಟುಹೋಗು. ಇಹಸೌಖ್ಯವು ಸ್ಥಿರವಲ್ಲ. ನಶ್ವರಸುಖಕ್ಕಾಗಿ ಆಶೆಪಟ್ಟು ಪಾಮರನಾಗುವುದು ಮಾನವಧರ್ಮವಲ್ಲ. ಎಷ್ಟೇ ಕಷ್ಟ ನಷ್ಟಗಳುಂಟಾದರೂ ಕರ್ತವ್ಯವನ್ನು ಮೀರದೆ ನಡೆಯಿಸಿದರೆ ಶಾಶ್ವತವಾದ ಸರಸೌಖ್ಯವುಂಟಾಗುವುದು. ಕರ್ಮಕ್ಕೆ ತಕ್ಕ ಫಲಾನುಭವವು ಆರಿಗೂ ತಪ್ಪುವುದಿಲ್ಲವಾದುದರಿಂದ ನನ್ನ ಸ್ವಾಮಿ, ಕುತ್ಸಿತರ ಸಹವಾಸದಿಂದ ಮಾಡಿದ ಕರ್ಮಗಳಿಗೆ ಪ್ರಾಯಶ್ಚಿತ್ತವನ್ನು ಅನುಭವಿಸಿಯೇ ತೀರಬೇಕು. ನಾನು ಆತನ ಗತಿಯನ್ನು ಅನುವರ್ತಿಸದೆ ಸ್ವಧರ್ಮ, ನೀತಿ, ತತ್ವಗಳನ್ನು ತೊರೆದು, ದುರ್ಮಾರ್ಗದಲ್ಲಿ ಬಿದ್ದು ಅತ್ಯುತ್ತಮವಾದ ಸುಖಾನಂದಕ್ಕೆ ಬಾಹಿರೆಯಾಗುವಂತಹ ದುರಾಶೆಯು ನನಗೆ ಕನಸಿನಲ್ಲಿಯಾದರೂ, ಎಳ್ಳಷ್ಟೂ ಉಂಟಾಗದೆಂದು ತಿಳಿದಿರು; ಹುಚ್ಚ! ಸಾರಿ ಸಾರಿ ಹೇಳುವೆನು. ಒಂದು ವೇಳೆ, ನನ್ನ ಸ್ವಾಮಿಗೆ ಮದಣದಂಡನೆಯೇ ವಿಧಿಸಲ್ಪಟ್ಟರೂ ನನಗೂ ಮರಣವು ಮುಂದಾಗಿಯೇ ಲಭಿಸುವುದು. ನನಗದರಿಂದ ದುಃಖವಾಗುವಂತಿಲ್ಲ. ನಿನ್ನ ದುರಾಶೆ ಸ್ವಪ್ನದಲ್ಲಿಯೂ ಸಫಲವಾಗದೆಂದು ನಂಬಿ ಹೊರಟುಹೋಗು.

ತಂತ್ರ - ಸುಶೀಲೆ! ಹಟಮಾಡಿ ಕೆಡಬೇಡ!! ಇದರಿಂದ ಮತ್ತಷ್ಟು ಕಷ್ಟವುಂಟಾಗುವುದು. ನನ್ನ ಮನಸ್ಸ೦ತೋಷಪಡಿಸದೆ ಇದ್ದರೆ, ನಿನಗೆಂದಿಗೂ ಸುಖವುಂಟಾಗಲಾರದೆಂದು ನಂಬಿರು. ನೀನು ಇಷ್ಟು ಕಾಠಿಣ್ಯವನ್ನು ಸಹಿಸಿ ನಿಷ್ಠುರವಾಡುತ್ತಿದ್ದರೂ ನಿನ್ನ ಮೇಲಿರುವ ಅಭಿಮಾನದಿಂದ ಅವೆಲ್ಲವನ್ನೂ ಸಹಿಸಿ, ನಿನ್ನನ್ನೂ ಜೀವಸಹಿತ ಬಿಟ್ಟಿರುವೆನಲ್ಲದೆ ಬೇರೆಯಿಲ್ಲ, ಈಗಳೂ ನನ್ನ ಮಾತನ್ನು ಕೇಳಿದರೆ ಬದುಕುವೆ, ಇಲ್ಲವಾದರೆ ಸಾಯುವೆ.

ಸುಶೀಲೆ - ತಿರಸ್ಕಾರದಿಂದ, - ಉನ್ಮತ್ತ! ನಿನ್ನಿ ಉನ್ಮಾದಪ್ರಲಾಪವಿನ್ನು ಸಾಕು! ತೊಲಗು. ನನ್ನನ್ನು ನೀನು, ಈಗಲೇ ಕೊ೦ದರೂ ಸರಿಯೆ, ನಾನೆಂದೂ ನಿನಗೆ ಒಳಗಾಗಲೊಲ್ಲೆನು. ವಿಚಾರಮಾಡದೆ ನೀನು ದುಡುಕಿ ನನ್ನನ್ನು ಮುಟ್ಟಬಂದರೂ ಹಾನಿ ತಪ್ಪದು ನನ್ನ ಸ್ವಾಮಿ ದುಃಖಕ್ಕಾಗಿ ನನ್ನ ಸ್ವಾಮಿಗೆ ಸುಖವೇ ಆದೀತು. ಹೊರಟುಹೋಗು, ನಿಲ್ಲಬೇಡ.

ತಂತ್ರನಾಥನಿಗೆ ಕ್ರೋಧವು ಮಿತಿಮೀರಿತು. ಅಭಿವಾನವೊಂದೆಡೆಯಲ್ಲಿಯೂ ಶೋಕವು ಮತ್ತೊಂದೆಡೆಯಲ್ಲಿಯೂ, ಆಗ್ರಹ ವಿನ್ನೊಂದೆಡೆಯಲ್ಲಿಯೂ, ಅಸೂಯೆ ಮುನ್ನೊಂದೆಡೆಯಲ್ಲಿಯೂ, ಹೇಗೂ ನಾಲ್ಕು ಕಡೆಯಲ್ಲಿಯೂ ಜ್ವಾಲೆಯಂತೆ ಸುತ್ತಿ ತಪಿಸುತ್ತಿದ್ದುವು. ಕಾಮ ಮೋಹಿತನಾದ ತಂತ್ರನಾಥನು ಮುಂದಿಣಾಲೋಚನೆಯಿಲ್ಲದೆ, ಸುಶೀಲೆಯ ಕೊರಲನ್ನು ಎಡಗಯ್ಯಿ೦ದೆ ಬಿಗಿಯಾಗಿ ಹಿಡಿದು, ಬಲಗಯ್ಯನ್ನು ಮೇಲಕ್ಕೆತ್ತಿ ಎದೆಯ ಮೇಲೆ ಗುದ್ದಲು, ಸರಿಯಾಗಿ ಹಿಡಿದನು. ಅದರೆ ಆಪದ್ಬಂಧುವಾದ ಮಯೂರಿ, ಅಷ್ಟರಲ್ಲಿಯೇ ಬಂದುಗರಿಂದ ದೂರದಲ್ಲಿಯೇ ತಂತ್ರನಾಥನ ಪ್ರಯತ್ನವನ್ನು ನೋಡಿ ಅವಸರದಿಂದ ಓಡಿಹೋಗಿ ಸುಶೀಲೆಯ ತಾಯ್ತಂದೆಯರನ್ನು ಕರೆತಂದು ತೋರಿಸಿ, ಹಿಂದಿನಿಂದ ಬಂದು ತಂತ್ರನಾಥನನ್ನು ಹಿಡಿದೆಳೆದು ಕೆಳಗೆ ಕೆಡಹಿದಳು.

ಸುಶೀಲೆಯ ತಂದೆಯಾದ ಸುಜ್ಞಾನಶರ್ಮನು, ಕೆಳಗೆ ಬಿದ್ದಿದ್ದ ತಂತ್ರನಾಥನನ್ನು ನೋಡಿ, ಕರ್ಕಶಸ್ವರದಿಂದ,- ಕೃತಘ್ನ ! ಪಾಷಂಡ|! ಘಾತಕ ! ನಿನ್ನೀ ದುರ್ಜೀವಿತಕ್ಕೆ ಧಿಕ್ಕಾರ ! ನಿನ್ನ ಮಾನವ ಜನ್ಮಧಾರಣೆಗೆ ಧಿಕ್ಕಾರ !! ಧಿಕ್‌ ! ಧಿಕ್‌ |! ವಿದ್ರೋಹಿ ! ನಿನಗಿರೊ ಸಹಸ್ರಶಃ ಧಿಕ್' ! ನಿನ್ನಿ, ಘೋರಕೃತ್ಯಕ್ಕೆ ಪ್ರಾಯಶ್ಚಿತ್ತವನ್ನು ಹೊಂದು | ಎಂದು ಹೇಳುತ್ತೆ ತಂತ್ರನಾಥನ ಕಯ್ಕಾಲುಗಳನ್ನು ಕಟ್ಟಿ ಕೆಡಹಿದನು.

ಸುಶೀಲೆಯ ತಾಯಿ, -ಅಳಿಯನ ಅವಸ್ಥೆಗೆ ರೋಷ- ಕ್ಲೇಶದಿಂದ ಕಣ್ಣೀರು ಸುರಿಸುತ್ತೆ ನಿಟ್ಟುಸಿರಿಟ್ಟು-“ನಿರ್ಭಾಗ್ಯ, ನಿನ್ನೀ ದುರ್ನಡತೆಗಾಗಿ ನನಗೆಷ್ಟು ದುಃಖವೆಂಬುದನ್ನು ಬಲ್ಲೆಯಾ? ನನ್ನ ಮಗಳು ಬದುಕಿದ್ದರೆ ನಿನ್ನೀ ದುರಾಚಾರಕ್ಕಾಗಿ ಎಷ್ಟು ದುಃಖಿಸುತ್ತಿದ್ದಳೊ! ಸ್ವಲ್ಪ ಭಾವಿಸಿನೋಡು ! ಅವಳು ಅಳಿದು ಪುಣ್ಯವತಿಯೆನಿಸಿದ್ದಳಲ್ಲವೆ? ಪಾಪಿ| ನನ್ನ ಭಾಗ್ಯದೇವತೆಯಾದ ಸುಶೀಲೆಯ ಈ ವಿಪತ್ತಿಗೆ ನೀನಲ್ಲವೆ, ಕಾರಣಭೂತನೂ, ಕಾರ್ಯಕಾರಿಯೂ ಆದವನು? ನಿನಗಿ ದುರ್ಬುದ್ಧಿಯುಂಟಾದುದು ನಿನ್ನ ನಾಶಕ್ಕಲ್ಲದೆ ಮತ್ತೆ ಬೇರಿಲ್ಲ; ಅನುಭವಿಸು.”

ಮಯೂರಿ- ಅಮ್ಮಾ ! ಈ ಘಾತಕನಿಗಾಗಿ ಕನಿಕರಪಡಬಾರದು, ಇವನ ದುತ್ಕಾರ್ಯಕ್ಕೆ ಎಂತಹ ಶಿಕ್ಷೆಯಾಗಬೇಕೋ ತಿಳಿಯದು. ಇವನನ್ನು ಈಗಲಾದರೂ ಹಿಡಿದು ಶಿಕ್ಷಿಸದಿದ್ದರೆ ಸಮಾಜಕ್ಕೂ-ನ್ಯಾಯಕ್ಕೂ-ಹಾನಿ ತಪ್ಪದು. ಇವನು ಮತ್ತೆ ತಪ್ಪಿಸಿಕೊಂಡರೆ ಸುಶೀಲೆಗೆ ಮೃತ್ಯುವೆಂದೇ ತಿಳಿಯಬೇಕು. ಹಿಂದಿನ ಮಮತೆ ಈಗ ಸಲ್ಲದು, ಈಗಲೇ ಅವನನ್ನು ಪೋಲೀಸಿನವರ ಕೈವಶಪಡಿಸಿದರೆ ನಾಳಿನ ದಿನದ ವಿಚಾರಣೆಯಲ್ಲಿ ನೈಜಸಂಗತಿಯು ಹೊರಬೀಳುವಂತಾದೀತು. ಇವನ ವಿಚಾರಣೆಯಿಂದ ವಿನೋದನಿಗೆ ನಿಜವಾಗಿಯ ಸುಖಸಂಗತಿಯಾಗಲು ಸಂಶಯವಿಲ್ಲ.

ಸುಜ್ಞಾನಶರ್ಮನು ನರಿಯ ಹಿತಬೋಧನೆಗೆ ಸಮ್ಮತಿಸಿ, ತಂತ್ರನಾಥನನ್ನು ಪೋಲೀಸಿನವರ ವಶಕ್ಕೊಪ್ಪಿಸಿದನು. ಅಂದು ತಲೆತಪ್ಪಿಸಿಕೊಂಡರೂ, ಇಂದು ಪಾಪ ಜ್ಞಾನಮಂಟಪ ಪ್ರವೇಶವು, ತಂತ್ರನಾಥಗೆ ತಪ್ಪಲಿಲ್ಲ, ಇದಕ್ಕೆಂದಲ್ಲವೇ ಕಳ್ಳನೆಂದಿದ್ದರೂ, ಸಿಕ್ಕುವನೆಂದಾಡುವುದು ?

ಸುಹೃದರೆ !

"ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎಂಬುದರಲ್ಲಿ ಸಂಶಯವೇನು ? ಕಾಮಮೋಹಿತನಿಗೆ ಭಯ, ಲಜ್ಜೆಗಳು ಮಾತ್ರವಲ್ಲ; ಉಚಿತಾನುಚಿತ ವ್ಯಾಪಾರದ ಪ್ರಜ್ಞೆಯೇ ಇರುವುದಿಲ್ಲ. ಏಕೆಂದರೆ- "ಕ್ಷುಧಾತುರಾಣಾಂ ನ ರುಚಿನಪಕ್ವಂ". ಹಸಿದು ಬಳಸಿದಾತನಿಗೆ ರುಚಿಯೂ, ಪಕ್ವವೂ ತಿಳಯದೆಂಬುದು ನಿಜವಷ್ಟೆ? ಹಾಗೆಯೇ ಕಾಮಾಂಧನಿಗೂ ಯುಕ್ತಾಯುಕ್ತ ವಿಚಾರವೇ ಇಲ್ಲದೆ, ವಿಷಯಾ ತುರವೆಂಬ ಕ್ಷುದ್ಬಾಧೆಯೊಂದೇ ಮುಂದಾಗಿ, ಆವುದನ್ನಾದರೂ ಮಾಡಿಸಿಬಿಡುವುದು. ಇಂತಹ ಕಾಮಾತುರರಾದವರಿಂದ ಈ ಜಗತ್ತಿನಲ್ಲಿ ಎಂತೆಂತಹ ಕಾರ್ಯಗಳು ನಡೆಯುತ್ತಿರುವುದೆಂಬುದನ್ನು ಇಲ್ಲಿ ಹೇಗೂ ಹೇಳಿ ಮುಗಿಯುವಂತಿಲ್ಲ. ಕಾಮಕ್ಕೆ ಅಧೀನರಾಗದೆ, ಶತ್ರುಸ್ವರೂಪವಾದ ಅರಿಷಡ್ವರ್ಗವನ್ನು ಜಯಿಸಿರತಕ್ಕವರಾರೋ, ಅವರೇ ಸಿದ್ಧರು, ಅವರೇ ಪರಮಪುರುಷರು. ಅಂತಹ ಧನ್ಯಾತ್ಮರಿಗೆ ನಮ್ಮ ಸಹಸ್ರ ವಂದನೆಗಳು.


ದಶಮಪರಿಚ್ಛೇದ

[ನ್ಯಾಯಸ್ಥಾನ]

ಇಂದು ಮಲಯಪುರದ ಮ್ಯಾಯಸ್ಥಾನ(Court)ದಲ್ಲಿ ಧರ್ಮಾವತಾರನ (Judge) ಮುಂದೆ ಅಪರಾಧಿಗಳ ವಿಚಾರಣೆಯಾಗಬೇಕು. ಗಿರಿಯಮ್ಮ, ತಂತ್ರನಾಥ, ವಿನೋಧ ಮಯೂರಿ, ಸುಜ್ಞಾನಶರ್ಮ ಇವರ ವಿಚಾರಣೆಯೇ ಮುಖ್ಯವಾದುದು.

ಧರ್ಮಾವತಾರನ ಮುಂದೆ, ಮೊದಲು ಗಿರಿಯಮ್ಮನು ಕರೆಯಿಸಲ್ಪಟ್ಟಳು. ವಿಚಾರಕ್ಕೆ ಮೊದಲಾಯ್ತು ; ಗಿರಿಯಮ್ಮನು ಗದಗದಿಸುತ್ತೆ, ಮೆಲ್ಲನೆ- “ಸ್ವಾಮಿ ! ಧರ್ಮಾವತಾರರಾದ ಪ್ರಭುಗಳ ಮುಂದೆ ಸುಳ್ಳಾಡಲಾರೆನು” ಎಂದು ಹೇಳಿ, ತನ್ನ ಸಂಕಲ್ಪ, ತಂತ್ರನಾಥನ ಕುತಂತ್ರ, ತಾನು ವಿನೋದನಿಗೆ ತಿಳಿಸಿದ ಸಂಗತಿ, ಇವೇ ಮೊದಲಾದ ತನ್ನಿಂದ ನಡೆಯಿಸಲ್ಪಟ್ಟ ಕೃತ್ಯಗಳೆಲ್ಲವನ್ನೂ ಸ್ವಲ್ಪವೂ ವ್ಯತ್ಯಾಸವಿಲ್ಲದೆ ತಿಳಿಸಿಬಿಟ್ಟಳು.

ಆ ಬಳಿಕ ಧರ್ಮಾವತಾರನ ಮುಂದೆ ಮಯೂರಿ ಕರೆಯಿಸುಟ್ಟಳು. ವಿಚಾರಕ್ಕೆ ಮೊದಲಾಯ್ತು ; ಜಡ್ಜಿಯ (ಧರ್ಮಾವತಾರ ನ್ಯಾಯಾಧಿಕಾರಿ) ಪೃಚ್ಛೆಗೆ ಮಯೂರಿ, ಸ್ಥಿರಭಾವನೆಯಿಂದ ತನಗೆ ತಿಳಿದ ಸಂಗತಿಯೆಲ್ಲವನ್ನೂ, ಗಿರಿಯಮ್ಮ-ಸುಶೀಲೆಯರ ಸಂವಾದ ಮೊದಲ್ಗೊಂಡು, "ತಂತ್ರನಾಥನ ಆಗಮನ, ಅವನ ದುರಭಿಸಂಧಾನ ಕ್ರಮ, ವಿನೋಜನ ಆಗ್ರಹ, ಪರಿಣಾಮ, ತಾನು ಇನಸ್ಪೆಕ್ಟರನ್ನು ಕರೆತಂದ ಕಾರಣ," ಇವೆಲ್ಲವನ್ನೂ ತಿಳಿಸಿದಳು, ಆ ಬಳಿಕ ಇನಸ್ಪೆಕ್ಟರ ವಿಚಾರಣೆಯಾಗಿ ಆತನು ಮಯೂರಿಯಿಂದ ತನಗೆ ತಿಳಿದ ಬಂದ ಘಾತವೃತ್ತಾಂತವನ್ನು ಯಥಾವತ್ತಾಗಿ ತಿಳಿಸಿದುದಲ್ಲದೆ, ಚಪ ಲೆಯ ಮರಣವು ತಂತ್ರನಾಥನ ಕಯ್ಯಿಂದಲೇ ನಡೆಯಿತೆಂಬುದನ್ನು ದೃಢಪಡಿಸಿದನು.

ನಾಲ್ಕನೆಯವನಾಗಿ ಸುಜ್ಞಾನಶರ್ಮನು ಬಂದು, ಸುಶೀಲೆಯನ್ನು ಮಯೂರಿಯೊಡನೆ ಇನಸ್ಪೆಕ್ಟರು ತನ್ನ ಮನೆಗೆ ಕಳಿಸಿದನ್ನೂ ಹೊಂಚಿನಿಂದ ಸಂಚುಕಾಯುತ್ತಿದ್ದ ತಂತ್ರನಾಥನು ಸುಶೀಲೆಯ ಮೇಲೆ ನಡಿಯಿಸಲು ಯತ್ನಿಸಿದ ಅತ್ಯಾಚಾರವನ್ನೂ ವಿವರಿಸಿದನು. ಅಲ್ಲದೆ ಕೃತಘ್ನನಾದ ತಂತ್ರನಾಥನಿಗೆ ತಕ್ಕ ಶಿಕ್ಷೆಯಾಗದೆ ಹೋದರೆ ಸುಶೀಲೆಗೂ, ಸಮಾಜಕ್ಕೂ ಹಾನಿ ತಟ್ಟುವುದೆಂದೂ ಮನವಿ ಮಾಡಿಕೊಂಡನು.

ಇದಾದ ಬಳಿಕ, ತಂತ್ರನಾಥನು ಕರೆಯಿಸಲ್ಪಟ್ಟನು, ಆ ವೇಳೆಯಲ್ಲಿ ಆತನು ಹೇಗಾಗಿದ್ದನೆಂಬುದನ್ನು ತಿಳಿಯ ಹೇಳಲು, ನಮಗಂತೂ ಅಳವಲ್ಲ, ಗ್ರಾಹಕಶಕ್ತಿಯಿದ್ದಷ್ಟೂ ಊಹಿಸಿ ತಿಳಿದುಕೊಳ್ಳುಬೇಕು, ಹೇಗೂ, ತಂತ್ರನಾಥನು ಕಂದುಬಣ್ಣಕ್ಕೆ ತಿರುಗಿ, ಸುಕ್ಕಿಹೋಗಿದ್ದ ಮುಖವನ್ನು ಮೇಲಕ್ಕೆತ್ತಿ ನ್ಯಾಯಾಧಿಕಾರಿಯನ್ನು ದೈನ್ಯದೃಷ್ಟಿಯಿಂದೆ ನೋಡುತ್ತೆ, ಕೇಳಿಕೊಂಡನು— "ಧರ್ಮಪ್ರಭೋ! ನಾನು ನಡೆಯಿಸಿರುವ ಕೆಲಸಗಳೆಲ್ಲವನ್ನೂ ನಿಜವಾಗಿ ಹೇಳುವೆನು . ಆದರೆ ನನ್ನನ್ನು ಬಿಡುವುದಾಗಿ ಮೊದಲು ವಾಗ್ದಾನಮಾಡಬೇಕು." ಧರ್ಮಾವತಾರನು 'ಆಗಬಹುದು' ಎಂದು ಅಭಯವಿತ್ತನು. ಅಲ್ಲದೆ ಈವರೆಗೆ ತನ್ನ ಅಕ್ರಮ ಸಂಬಂಧವಾಗಿ ಇತರರಿಂದ ಕೊಡಲ್ಪಟ್ಟ ಸಾಕ್ಷ್ಯಗಳಿಂದ ತಾನು ಹೇಗೂ ತಪ್ಪಿಸಿಕೊಳ್ಳುವಂತಿಲ್ಲವೆಂಬುದ ತಂತ್ರನಾಥನ ಮನದಲ್ಲಿ ನೆಟ್ಟುಹೋಗಿದ್ದುದು, ಇನ್ನು ಮಾಡುವುದೇನೆಂಬುದೇ ತಿಳಿಯದೆ ಎಲ್ಲವನ್ನೂ ಸಂಗ್ರಹವಾಗಿ ಹೇಳಿ ಸುಮ್ಮನಾದನು.

ಕಡೆಗೆ ವಿನೋದನು ಕರೆಯಿಸಲ್ಪಟ್ಟು, ಅಪರಾಧಿ ಸ್ಥಾನದಲ್ಲಿ ತಲೆ ಬಾಗಿನಿಂತನು, ಮೊದಲು ಅವನಲ್ಲಿ ವಿದ್ಯಾವೈಭವ ಪ್ರದರ್ಶನವಾಗಿದ್ದ ಕಾಂತಿಯಾಗಲೀ, ಉತ್ಸಾಹವಾಗಲೀ, ಶಕ್ತಿಯಾಗಲೀ ಯಾವುದೂ ಕಾಣುತ್ತಿಲ್ಲ, ಮುಖವು ಬಾಡಿಹೋಗಿದೆ. ಕಾಂತಿಹೀನವಾದ ಕಣ್ಗಳಿಂದ ನೀರು ಸೋರುತ್ತಿದೆ. ಕ್ಷಣಕ್ಷಣಕ್ಕೂ ನಿಟ್ಟುಸಿರು ಹೊರಹೊರಡುತ್ತಿದೆ. ಇಂತಿರುವ ವಿನೋದನನ್ನು ನೋಡಿ ಸಹಿಸಬಲ್ಲವರಾರು? ಆದರೆ ಮಾಡತಕ್ಕುದೇನು ? ಅಟ್ಟುದನ್ನು ಉಣದಿದ್ದರಾದಿತೆ ? ಪಾಪ , ವಿನೋದನು ಧರ್ಮಾವತಾರರನ್ನು ನೋಡುತ್ತೆ ಕ್ಷೀಣಸ್ವರದಿಂದ ಹೇಳಿತೊಡಗಿದನು.-'"ಧರ್ಮಾವತಾರ, ನಾನು ಮಹಾಪರಾಧಿ. ನನ್ನ ಪೂರ್ವಸ್ಥಿತಿಗಳನ್ನು ನೆನೆನೆನೆದು ಈಗ ನಾನು ಸಂತಪಿಸುತ್ತಿರುವೆನು. ಮಾಯಾವಿನಿಯಾದ ಚಪಲೆಯ ಕುಟಿಲೋಕ್ತಿಗಳಿಗೆ ಮರಳಾದ ನಾನು, ಗಿರಿಯಮ್ಮ-ತಂತ್ರನಾಥನ ಹೇಳಿಕೆಯೆಲ್ಲವೂ ನಿಜವಾದುವುದೆಂದೇ ನಂಬಿ, ದುಡುಕಿ ಕೆಟ್ಟೆನು. ಕಾಮಮೋಹಿತನಾದ ನನಗೆ, ಆ ನನ್ನ ಧರ್ಮಪತ್ನಿಯ ವಿಚಾರವಾಗಿ ಇವರಾಡಿದ ಅಪರಾಧಗಳೆಲ್ಲವೂ ಸತ್ಯವೆಂದು ತಿಳಿದು ಅವಳನ್ನು ದ್ವೇಷಿಸಿದೆನು. ಈಗ ಅದನ್ನು ಹೇಳಿ ಫಲವಿಲ್ಲ ನಾನು ಚಪಲೆಯನ್ನು ಕೊಲ್ಲಬೇಕೆಂದಿದ್ದುದು ನಿಜ, ಆದರೆ ಕೊಂದವನು ನಾನಲ್ಲ. ನನ್ನ ಸರ್ವಸ್ವವನ್ನೂ ಅಪಹರಿಸಿ, ನನ್ನನ್ನು ಕೊಲ್ಲಬೇಕೆಂದಿದ್ದ ಚಪಲೆ-ಮತ್ತು ತಂತ್ರನಾಥರನ್ನು ಕೊಲ್ಲಬೇಕೆಂದು ಯೋಚಿಸಿದೆನು. ಅಷ್ಟರಲ್ಲಿ ಚಪಲೆಯೇ ತಂತ್ರನಾಥನ ಸಹಾಯದಿಂದ ನನ್ನನ್ನು ಕೊಲ್ಲಲು ಪ್ರಯತ್ನ ಪಟ್ಟು, ತಾನೇ ಮೃತಳಾದಳು, ಅ೦ದು ನಾನು ತಂತ್ರನಾ ಥನ ಕೊಡಲಿಯೇಟನ್ನು ತಪ್ಪಿಸಿಕೊಳ್ಳದಿದ್ದರೆ ಅದು ಚಪಲೆಯನ್ನು ಕೊಲ್ಲದಿದ್ದರೆ, ನಿಜವಾಗಿಯೂ ನಾನು ಇಂದಿನ ಈ ವಿಚಾರಣೆಗಾಗಿ ಇಲ್ಲಿಯವರೆಗೂ ಬರುವಂತಾಗುತ್ತಿರಲಿಲ್ಲ. ದೈವವಿಲಾಸದಿಂದ ಹಾಗಾಗಲಿಲ್ಲ. ಆ ವೇಳೆಯಲ್ಲಿ ಅವರಿಬ್ಬರನ್ನೂ ಕೊಲ್ಲಬೇಕೆಂದಿದ್ದ ದುರ್ಬುದ್ದಿಯು ಈಗ ಇಲ್ಲ. ಈಗ ತಂತ್ರನಾಥನನ್ನು ನೋಡಿ ಅತಿಯಾಗಿ ಕನಿಕರ ಪಡುತ್ತಿರುವೆನಲ್ಲದೆ, ನನ್ನ ಅಕಾರ್ಯಗಳಿಗಾಗಿ ನನ್ನನ್ನು ನಾನೇ ನಿಂದಿಸಿಕೊಳ್ಳುತ್ತಿರುವೆನು.” ಎಂದು ಹೇಳುತ್ತಿದ್ದಂತೆಯೇ ಅನುತಾಪಾಗ್ನಿಯಿಂದ ಸಂತಪಿಸುತ್ತೆ ಕೆಲವು ಹೊತ್ತು ಸ್ತಭ್ಧನಾಗಿ ನಿಂತಿದ್ದು, ಮತ್ತೆ ಚೇತರಿಸಿಕೊಂಡು - “ಧರ್ಮಪ್ರಭೊ! ನನ್ನ ಅಪರಾಧಗಳು ಅನೇಕವಾಗಿವೆ. ಧರ್ಮಪತ್ನಿಯಲ್ಲಿ ದ್ರೋಹಿ! ಸತೀಮಣಿಯಾದ ಪತ್ನಿಯ ಕೊಲೆಗಾಗಿ ಪ್ರಯತ್ನ ಪಟ್ಟ ಪಾಪಿ!! ಕುಲದ ಮಾನ-ಕೀರ್ತಿಗಳಿಗೆ ಕುಂದನ್ನು ತಂದ ನೀತಿಬಾಹಿರ!!! ಹೆಚ್ಚಾಗಿ ಹೇಳುವುದೇನು? ಆ ವೇಳೆಯಲ್ಲಿ ನನಗೆ ನಿವೇಚನಾಶಕ್ತಿಯೇ ಲೋಪವಾಗಿತ್ತೆಂದರೆ ಸಾಕಾಗಿದೆ. ಈಗ ಅದಕ್ಕಾಗಿ ಅನುತಾಪಪಟ್ಟು ನರಲುವುದೊಂದೇ ನನಗೆ ಫಲವಾಗಿದೆ. ನಿನ್ನ ‍ದುಷ್ಕರ್ಮಗಳಿಗಾಗಿ ವಿಧಿಸಲ್ಪಡುವ ಕ್ರೂರಶಿಕ್ಷೆಯನ್ನು ಸಮಾಧಾನದಿಂದ ಅನುಭವಿಸಲು ಸಿದ್ಧನಾಗಿರುವೆನು. ಆದರೆ, ಆ ನನ್ನ ಧರ್ಮಪತ್ನಿಯನ್ನು ಒಮ್ಮೆ ಸಂದರ್ಶಿಸಿ, ಅವಳಲ್ಲಿ ಕ್ಷಮೆಬೀಡಿ, ಅನುಮತಿ ಹೊಂದಿ ಆ ಬಳಿಕ ಯಾವ ಶಿಕ್ಷೆಗೆ ಬೇಕಾದರೂ ಗುರಿಯಾಗುವೆನು. ಆ ಸಾದ್ವಿಯ ಉಪದೇಶವು, ಪ್ರತಿನಿಮಿಷದಲ್ಲಿಯೂ ನನ್ನ ಹೃದಯದಲ್ಲಿ ದವಾನಲದಂತೆ ಜ್ವಲಿಸುತ್ತಿರುವುದು, ಈ ಸಂತಾಪಶಮನಕ್ಕಾಗಿ ಆ ಪುಣ್ಯಮೂರ್ತಿಯಲ್ಲಿ ನನ್ನ ಅಪರಾಧ ಕ್ಷಮೆಯನ್ನು ಪ್ರಾರ್ಥಿಸಲು ನಿಶ್ಚಯಿಸಿರುತ್ತೇನೆ. ಅದುದರಿಂದ ಇದೊಂದು ಕೊರಿಕೆಯನ್ನು ಹೇಗಾದರು ಧರ್ಮಪ್ರಭುಗಳು ಅನುಗ್ರಹಿಸಬೇಕಾಗಿ ಬೇಡುತ್ತೇನೆ. ಧರ್ಮಾವತಾರ - ಪಂಚಾಯಿತರ ಕಡೆಗೆ ತಿರುಗಿ, - 'ವಿನೋದನ ವಿದ್ಯಮಾನವೆಲ್ಲವನ್ನೂ ಕೇಳಿ ತಿಳಿದಿರುವಿರಷ್ಟೆ; ನಿಮ್ಮ ಅಭಿಪ್ರಾಯವೇನು?

ಪಂಚಾಯಿತರು - ವಿನೋದನು ದೊಡ್ಡ ಮನೆತನಕ್ಕೆ ಸೇರಿದವನೂ, ಶ್ರೀಮಂತನೂ, ವಿದ್ಯಾವಿನಯ ಸಂಪನ್ನನೂ, ಗೌರವಸ್ಥನೂ ಆಗಿರುವನು. ಈತನ ಈ ಬಗೆಯ ಅಚಾತುರ್ಯಕ್ಕೆ ಚಪಲೆ, ತಂತ್ರನಾಥ, ಗಿರಿಯಮ್ಮ ಇವರೇ ಕಾರಣಭೂತರು. ಇವರುಗಳ ದೋಷಾರೋಪಗಳಿಂದ ವಿನೋದನು ಇಂತಹ ಅಕಾರ್ಯವನ್ನು ಮಾಡಿರುವನು. ಕೃತಘ್ನನೂ, ಘಾತಕನೂ ಆದ ತಂತ್ರನಾಥನೇ ಚಪಲೆಯನ್ನು ಹೊಡೆದು ಕೊಂದನೆಂಬುದಕ್ಕೆ ಸಂಶಯವಿಲ್ಲ. ಪತ್ನಿಯನ್ನೂ ಮತ್ತು ಚಪಲೆಯನ್ನೂ ವಧಿಸಲು ಪ್ರಯತ್ನಿಸಿದ ಅಪರಾಧಗಳು ಮಾತ್ರವೆ ವಿನೋದನ ಮೇಲೆ ಆರೋಪಿತವಾಗುವಂತವುಗಳು. ಒಂದು ಕೊಲೆಮಾಡಿ ತಲೆ ತಪ್ಪಿಸಿಕೊಂಡಿದ್ದ, ಮತ್ತೊಂದು ಕೊಲೆಗೂ ಕಯ್ಯೆತ್ತಿದ ತಂತ್ರನಾಥನು ದಂಡಾರ್ಹನು. ದೊಹಿಗಳನ್ನು ಆಗಾಗಲೇ ದಂಡಿಸಬೇಕೆಂಬುದು ವಿದಿತವಿಷಯವು. ವಿನೋದನಿಗೆ ಆತನ ವಾಙ್ಮೂ ಲದಿಂದ ಈಗ ಜ್ಞಾನೋದಯವಾಗಿರುವಂತೆ ತೋರಿ ಬರುತ್ತಿರುವುದರಿಂದ ಇವನನ್ನು ಸರಿಯಾದ ಹೊಣೆಗಾರರ ನಂಬಿಕೆಯ ಮೇಲೆ ಬಿಟ್ಟರೂ ಬಿಡಬಹುದು.

ಧರ್ಮಾವತಾರಿ - ವಿನೋದನ ಕಡೆಗೆ ತಿರುಗಿ,...... “ವಿನೋದ! ಸಭಿಕರು ನಿನ್ನನ್ನು ತಪ್ಪಿತಸ್ಥನಾಗಿದ್ದರೂ, ಜ್ಞಾನೋದಯದಿಂದ ಮುಕ್ತಾರ್ಹನೆಂದು ಹೇಳುತ್ತಿರುವುದರಿಂದೆಯೂ, ಕಾಗದ ಪತ್ರಗಳಲ್ಲಿ ನೀನು ಕೊಲೆಗೆ ಕಾರಣನಲ್ಲವೆಂಬುದು, ಅಷ್ಟಾಗಿ ದೃಢಪಡಿಸುವಂತಿಲ್ಲವಾದುದರಿಂದೆಯೂ, ಈಗ ನಿನ್ನನ್ನು ಅರ್ಥ ದಂಡದಮೇಲೆ, ಯೋಗ್ಯನಾದ ಒಬ್ಬ ಮನುಷ್ಯನ ಹೊಣೆಯಿಂದ ಮುಕ್ತನನ್ನಾಗಿ ಮಾಡಬೇಕೆಂದಿರುವೆನು ಇಲ್ಲಿ ಯಾರನ್ನಾದರೂ ಹೊಣೆ ಕೊಡಬಲ್ಲೆಯಾ ?

ವಿನೋದ-ಮಹಾಸ್ವಾಮಿ, ನಾನು ತಮ್ಮ ಕೃಪೆಗಾಗಿ ಕೇವಲ ವಿಧೇಯನಾಗಿರುವನು. ಆದರೆ, ನನ್ನ ಪಾಪಾಚರಣೆಯ ಫಲಾನುಭವಕ್ಕಾಗಿ ನನಗೆ ಮರಣವೇ ವರವಾಗಿರುವುದುoತೆ ಈಗ ನಾನು, ಯಾರನ್ನೂ ಹೊಣೆಯಾಗಿರಲು ಪ್ರಾರ್ಥಿಸಲಾರೆನು. ಅಂತಹ ಮಹನೀರರರಾರಾದರೂ ಇದ್ದರೂ, ಅವರಿಗೆ ಧನ್ಯವಾದವನ್ನು ಸಮರ್ಪಿಸಿ ಯಾವಜ್ಜೀವವೂ ಅವರಿಗೆ ಕೃತಜ್ಞನಾಗಿರುವೆನು.

ಈವರೆಗೂ ನಡೆಯುತ್ತಿದ್ದ ವಿದ್ಯಮಾನಗಳನ್ನು ನೋಡುತ್ತ ಸಂಭ್ರಾಂತನಾಗಿದ್ದ ಸುಜ್ಞಾನಶರ್ಮನು, ವಿನೋವನ ಮಾತಿಗೆ ಖೇದ ಮೋದಗಳಿಂದ ತಲ್ಲಣಿಸುತ್ತೆ ಧರ್ಮಾವತಾರನ ಮುಂದೆ ನಿಂತು ವಿನಯದಿಂದ ಕೇಳಿದನು, “ಸ್ವಾಮಿ, ಈ ವಿನೋದನಿಗಾಗಿ ನಾನು ಹೊಣೆಯಾಗಿರುವೆನು, ಇನ್ನು ಮುಂದೆ ಈತನಿಂದ ಎಂತಹ ಅಪರಾಧಗಳು ನಡೆಯಿಸಲ್ಪಟ್ಟರೂ ನಾನು ಶಿಕ್ಷೆಗೆ ಬದ್ಧನಾಗಲುಳ್ಳವನು. ಈತನನ್ನು ನನ್ನ ಹೊಣೆಯಮೇಲೆ ಬಿಟ್ಟು ಕೊಡಬೇಕಾಗಿ ಕೋರುವೆನು"

ಧರ್ಮಾವತಾರ-ವಿನೋದನಕಡೆಗೆ ತಿರುಗಿ; -"ವಿನೋದ, ನಿನ್ನ ಮೇಲೆ ಎರಡು ಅಪರಾಧಗಳು ಆರೋಪಿತವಾಗಿ, ಒಂದೊಂದಕ್ಕೂ ಅಯ್ದುನೂರು ರೂಪಾಯಿಗಳಂತೆ ಅರ್ಥದಂಡವು ವಿಧಿಸಲ್ಪಟ್ಟು, ಸುಜ್ಞಾನಶರ್ಮರ ಹೊಣೆಯಮೇಲೆ ಸೀನು ಬಿಡಲ್ಪಟ್ಟಿರುವೆ ! ಇನ್ನು ಮುಂದೆ ಇಂತಹ ಅಕ್ರಮಕ್ಕೆಡೆ ಗೂಡದೆ, ನಿನ್ನ ಕುಲದ ಗೌರವ, ಸಾಪದಗಳನ್ನು ಮತ್ತೆ ಗಳಿಸಿ, ಯಶೋಭಾಗಿಯಾಗು.”

ವಿನೋದ-ತಲೆಬಾಗಿ ಕಯ್ಮುಗಿದು ಸ್ಥಿರತೆಯಿಂದ, "ಸ್ವಾಮಿ, ಎಂದು, ನನಗೀ ಕೃತ್ರಿಮಸಂಧಾನವು ತಿಳಿದುಬಂದುದೋ, ಅಂದೇ ನನಗೆ ಕಾಲದಬೆಲೆ, ಸತ್ಯದಬಲ, ಧರ್‍ಮದವಿಜಯ, ಸಹೃದಯ ಬಾಂಧವ್ಯದ ನೈಜಸಂಕಲ್ಪಗಳು ಚೆನ್ನಾಗಿ ಹೃದಯಂಗಮವಾಗಿ, ಸನ್ಮಿತ್ರ-ಕುಮಿತ್ರರ ಪ್ರಕೃತಿ-ಸ್ವಭಾವ-ತಾರತಮ್ಯಗಳೂ ವ್ಯಕ್ತವಾದವು. ತುಚ್ಛವಾದ ಕ್ಷಣಿಕಸುಖಕ್ಕಾಶೆಪಟ್ಟು ಕುಟಿಲೆಯರ ಬೆಳ್ಳುಡಿಗೆ ಮರುಳಾಗಿ, ವಿಚಾರವಿಲ್ಲದೆ ದುಡುಕುವದರ ಫಲವೂ ಅನುಭವಕ್ಕೆ ಬಂದುದು. ಈಗ ಸರ್ಕಾರದವರ ಆಜ್ಞೆ, ಯಾವರೀತಿಯಾದರೂ ಆ ರೀತಿ ನಡೆಯಲು ಸಿದ್ದನಾಗಿರುವೆನು."

ಧರ್ಮಾವತಾನು ಸಂತೋಷಾಶ್ಚರ್ಯಗಳಿಂದ,- "ವಿನೋದ, ಸಂತೃಪ್ತನಾದೆನು. ಇನ್ನು ಸಾಕು, ನಿನ್ನನ್ನು ಹಿಂದೆ ಹೇಳಿರುವಂತೆ ಮುಕ್ತನನ್ನಾಗಿ ಮಾಡಿರುವೆನು."

ಧರ್ಮಾವತಾರನು ಮತ್ತೆ ಗಿರಿಯಮ್ಮನನ್ನು ಕುರಿತು, "ಗಿರಿಯಮ್ಮ ! ನಿಮ್ಮ ನಡತೆಗೆ ತಕ್ಕ ಶಿಕ್ಷೆ ಅರ್ಥದಂಡವಲ್ಲದೆ ಯಾವಜ್ಜೀವವೂ, ಜನಾಪವಾದಕ್ಕೆ ಗುರಿಯಾದುದೂ ಆಗಿದೆ. ಈ ಕಲಹಕ್ಕೆ ಬೀಜಪ್ರಾಯರಾದ ನಿಮ್ಮಿಂದಲೇ ಈ ಅನಾಹುತವು ಪ್ರಾಪ್ತವಾಯ್ದೆಂದು ತಿಳಿದುಬಂದಿರುವುದರಿಂದ ನಷ್ಟದ್ರವ್ಯಕ್ಕೆ ನೀವೇ ಹೊಣೆಯಾಗಬೇಕು. ಅರ್ಥದಂಡವನ್ನೊಪ್ಪಿಸಿ ಹೋಗಬಹುದು, ವಿದ್ಯಾಗಂಧವನ್ನೇ ತಿಳಿಯದ ನಿಮ್ಮ೦ತಹ ಸ್ತ್ರೀಸಾಮಾನ್ಯರಲ್ಲಿ ನೆಲೆಗೊಂಡಿರುವೆ ದ್ವೇಷ-ರೋಷ-ಅಭಿಮನ-ಪ್ರತಿಷ್ಠೆಗಳಿಂದ ಎಂತೆಂತಹ ಅನರ್ಥಗಳು ಸಂಭವಿಸುವುವೆಂಬುದು ನಿದರ್ಶನಕ್ಕೆ ಬಂದುದು. ನಿಮ್ಮ ಮತ್ತು ಚಪಲಿಯಂತವರ ಕುಹುಕಗಳು ಸ್ತ್ರೀಜಗತ್ತಿಗೇ ಅಪಕೀರ್ತಿಯನ್ನು ತರತಕ್ಕವುಗಳೆಂಬುದೂ ನಿರ್ಧರವಾಯ್ತು. ಅಲ್ಲದೆ ಸುಶೀಲೆ, ಮತ್ತು ಮಯೂರಿಯರಿಗೆ ಎಂತಹ ವಿಪತ್ತು ಪ್ರಾಪ್ನವಾಗಿದ್ದರೂ, ಎದೆಗೆಡೆದ ತಾಳ್ಮೆಯಿಂದ ಕಾರ್ಯವನ್ನು ನಿರ್ವಹಿಸಿದುದು ಉತ್ತಮಗುಣವನ್ನಿಸಿರುವದಲ್ಲದೆ, ಅವರ ಸದ್ವರ್ತನೆಯು, ಪ್ರಪಂಚಕ್ಕೇ ಪರವಾದರ್ಶ ಜೀವನವಾಗಿರುವುದೆಂದು ಹೇಳಲು ಸಂತೋಷಪಡುವೆನು." ಹೀಗೆ ಹೇಳಿ, ಮತ್ತೆ ತಂತ್ರನಾಥನನ್ನು ಕುರಿತು,-"ತಂತ್ರನಾಥ, ನಿನ್ನ ಮೇಲೆ ಮರು ಅಪರಾಧಗಳು ಆರೋಪಿತವಾಗಿವೆ. ಇದಕ್ಕೆ ನೀನೇನು ಹೇಳುವೆ ?"

ತಂತ್ರ--ಕೋಪದಿಂದ ದರ್ಪಿತಸ್ವರದಲ್ಲಿ "ನಾನು ಹೇಳಬೇಕಾದುದು ಇಷ್ಟೆ, ಈ ಕೂರನಾದ ವಿನೋದ, ನಿಷ್ಟುರೆಯಾರಿ ಸುಶೀಲೆ ಇವರಿಬ್ಬರನ್ನೂ ವಧೆಮಾದಲ್ಲದೆ ನನ್ನ ಮನಸ್ಸು ಶಾಂತಿಯನ್ನು ಹೊಂದುವಂತಿಲ್ಲ, ನನಗೆ ಮರಣದಂಡನೆ ವಿಧಿಸಲ್ಪಟ್ಟರೂ, ಈ ಕಾರ್ಯವನ್ನು ಮಾಡಿಯೇ ಮೃತಿಹೊಂದಬೇಕೆಂಬುದು ನನ್ನ ಸಂಕಲ್ಪ."

ಧರ್ಮಾವತಾರ--ಧಿಕ್ಕಾರಮಾಡಿ ನಕ್ಕು "ಈತನು, ಎಂದೆಂದಿಗೂ ನೀಚನೇಸರಿ. ಇವನಲ್ಲಿ ಇನ್ನು ಕನಿಕರಕ್ಕೆ ಅವಕಾಶವಿರುವುದಿಲ್ಲ, ಇಂತಹ ದ್ರೋಹಿಗಳಿಗೆ ಆಮರಣಾಂತವಾಗಿ ಕಾರಾಗಾರವಾಸವನ್ನು ವಿಧಿಸುವುದಕ್ಕಿಂತ ಮರಣದಂಡನೆಯೇ ಉತ್ತಮವಿಧಿ."

ತಂತ್ರನಾಥನಿಗೆ ಮರಣದಂಡನೆಯಿಂರು ಮತ್ತೊಮ್ಮೆ ಹೇಳಬೇಕಾದುದಿಲ್ಲವಷ್ಟೆ ? ಹೇಗೂ ಅಂದಿನಿಂದ ಕುಟಿಲ ಆನೃತ ಅತ್ಯಾಚಾರಗಳ ನಿಗ್ರಹದಿಂದ ಶಾಂತತೆಯೇ ನ್ಯಾಯಸ್ಥಾನದಲ್ಲಿ ಪೂರ್ಣಾಧಿಕಾರವನ್ನು ವಹಿಸಿ ಸರ್ವತ್ರ ಪ್ರಕಾಶಿಸಲಾರಂಭಿಸಿತು. ಪ್ರಿಯಸೋದರಿಯರೇ,

ಸ್ತ್ರೀವಿದ್ಯಾಭ್ಯಾಸವು ದೇಶಕ್ಕೆ ಹಾನಿಯನ್ನುಂಟುಮಾಡುವುದೇನು ? ಎಂದಿಗೂ ಅಲ್ಲ, ಅವಿದ್ಯಾವತಿಯರಾದ ಗಿರಿಯಮ್ಮನಂಥವರ ಅಹಂಕಾರವಲ್ಲದೆ ಸುಶೀಲೆಯಂಥವರ ವಿದ್ಯಾಭ್ಯಾಸವೆಂದೂ ಹಾನಿಯನ್ನುಂಟುಮಾಡಲೊಲ್ಲವು, ಸನ್ಮಾರ್ಗದಲ್ಲಿ ಸುಶಿಕ್ಷಾರೂಪದಲ್ಲಿ ಹೊಂದುವ ವಿದ್ಯಾಧನವು, ದೇಶವನ್ನು ಅತ್ಯುತ್ತಮಸ್ಥಿತಿಗೆ ತರಬಲ್ಲುದೆಂಬಲ್ಲಿ ಏನೂ ಸಂಶಯವಿಲ್ಲ, ಆದರೆ, ಪ್ರಕೃತದಲ್ಲಿ, ಸುಶಿಕ್ಷೆಯೆಂಬುದು, ಮರೆಯಾಗಿ, ಕ್ರಮವಿಲ್ಲದೆ ಕೊಡುವ ವ್ಯಾಸಂಗದಿಂದೆಯೂ ವಿದ್ಯಾವತಿಯೆನ್ನಿಸಿದ ಮಹಿಳೆಯರು ತಮ್ಮ ಕಲಾಕೌಶಲ್ಯವನ್ನು ಸನ್ಮಾರ್ಗದಲ್ಲಿ ವಿನಿಯೋಗಿಸಲಾರದೆ ದುರ್ವಿನಿಯೋಗ ಪಡಿಸುತ್ತಿರುವುದರಿಂದೆಯೂ, ಸ್ತ್ರೀವಿದ್ಯಾಭ್ಯಾಸಕ್ಕೆ ಅಪಮಾನವನ್ನೂ, ಅನ್ಯ ಜನಾಂಗಕ್ಕೆ ಕಳಂಕವನ್ನೂ ತಂದಿರುವುದೆಂಬುದರಲ್ಲಿ ಆಕ್ಷೇಪವೇನು ? ಅಷ್ಟು ಮಾತ್ರಕ್ಕೆ ಸ್ತ್ರೀವಿದ್ಯಾಭ್ಯಾಸವೇ ಕೆಟ್ಟದಾಗಲಿಲ್ಲ. ವಿದ್ಯಾವತಿಯರು, ಅಶಿಕ್ಷಿತೆಯರಾಗಿ ಕೆಟ್ಟದಾರಿಯನ್ನು ಹಿಡಿದರೆ, ಅವರಿಂದ ಅದು ಕೆಟ್ಟುದೆನ್ನಿಸುವುದು, ಸನ್ಮಾರ್ಗದಲ್ಲಿ ನಡೆದ ಸತಿಯರ ವಿದ್ಯೆಯು ಸರ್ವೋತ್ತಮವಾದುದೆಂದು ಧೈರ್ಯದಿಂದ ಸಾರಿಸಾರಿ ಹೇಳಬಲ್ಲೆವು, ಇದಕ್ಕೆ ನಿದರ್ಶನಕ್ಕೆಂದರೆ ಕೆಟ್ಟದಕ್ಕೆ ಚಪಲೆಯನ್ನೂ, ಒಳ್ಳೆಯದಕ್ಕೆ ಸುಶೀಲೆಯನ್ನೂ ಮಾದರಿಯಾಗಿಟ್ಟು ಭಾವಿಸಿನೋಡಿರಿ !.



ಏಕಾದಶ ಪರಿಚ್ಛೇದ


(ಆನಂದಸಾಮ್ರಾಜ್ಯ)

ಇಂದು ವಿನೋದನ ಸೌಭಾಗ್ಯಲಕ್ಷ್ಮಿ, ಪುನರುಜ್ಜೀವಿಸಿರುವಳು. ಸುಜ್ಞಾನಶರ್ಮನ ಮನೆಯೊಳಗಡೆಯ ಕಿರುಮನೆಯಲ್ಲಿ ಮಂಚದಮೇಲೆ, ಸತೀಮಣಿ ಸುಶೀಲೆ ಕುಳಿತಿರುವಳು. ಪತ್ನಿಯ ಪಕ್ಕದಲ್ಲಿಯೇ, ಅವಳ ಸಾಕಾರಬ್ರಹ್ಮಸ್ವರೂಪನಾದ ವಿನೋದನು ಕುಳಿತು ಪತ್ನಿಯ ಕೊರಳ ಮೇಲೆ ತನ್ನ ಎಡದತೋಳನ್ನಿರಿಸಿ, ಬಲಗೈಯಿಂದ ಸುಶೀಲೆಯ ಗಲ್ಲವನ್ನು ಮೇಲಕ್ಕೆತ್ತಿ, "ಪ್ರಿಯೆ ! ಕ್ಷಮಿಸಲಾರೆಯ? ನನ್ನ ಅಪರಾಧಗಳೆಲ್ಲವನ್ನೂ ಕ್ಷಮಿಸಿ, ಕಟಾಕ್ಷಿಸಿಲೊಲ್ಲೆಯಾ?" ಎಂದು ಪ್ರಾರ್ಥಿಸುತ್ತಿರುವನು.

ಪ್ರಿಯ ಸೋದರೀ ಸೋದರರೇ !

ಕಾಲಪುರುಷನ ವಿಚಿತ್ರಗತಿಯೇ ಹೀಗಲ್ಲವೆ ? "ದೈವೀ ವಿಚಿತ್ರಾಗತಿಃ" ಎಂಬುದಕ್ಕೆ ಇಷ್ಟೇ ಸಾಲದೆ ? ಲೀಲಾನಂದ ವಿಭೂತಿಯನ್ನೊಳಗೊಂಡಿರುವ ಭಗವನ್ಮಾಯೆಯೂ ಇದೇ ಅಲ್ಲವೆ ? ಈ ಮಾಯೆಯಲ್ಲಿಯೇ ನಾವೆಲ್ಲರೂ ನಲಿನಲಿದಾಡುತ್ತಿರುವೆವೆಂದರೆ ಸಾಕಲ್ಲವೇ ? ಹಾಗಲ್ಲವೆಂದರೆ, ಅವಮೂರ್ತಿಯ ದರ್ಶನ, ಸ್ಪರ್ಶನ, ಸಂಭಾಷಣಾ ಕ್ರಿಯೆಗಳು ವಿನೋದನಿಗೆ ಯಾತನಾರೂಪಗಳಾಗಿ ಪರಿಣಮಿಸಿದ್ದುವೋ ಅದೇ ಮೂರ್ತಿಯೇ ಆ ರಮಣೀಮೂರ್ತಿಯೇ ಈಗ ಆತನ ಹೃದಯದಲ್ಲಿ ಸರ್ವಾಧಿಕಾರವನ್ನೂ ವಹಿಸಿ, ವರಪ್ರದಾನಕ್ಕೆ ಸಂಪ್ರಾರ್ಥಿಲ್ಪಡುತ್ತಿರುವುದೆಂದರೆ ನೀವೇನು ಹೇಳುವಿರಿ ? ಆಗಲಿ, ವಿನೋದ ! ಕ್ಷಮಾಪ್ರಾರ್ಥನೆಯಾಗಲಿ!! ಬೇಡು; ಪಾಪನಿವಾರಣೆಗಾಗಿ, ಮನಸ್ಸಮಾಧಾನಕ್ಕಾಗಿ ವರವನ್ನು ಬೇಡು ಬೇಡು! | ದಯಾಭರಿತೆಯೂ ಆದ ಸಾದ್ವೀಮಣೀ ಸುಶೀಲೆಯನ್ನು ಪತ್ನಿಯಾಗಿ ಪಡೆದ ನೀನೇ ಧನ್ಯನೆಂದು ತಿಳಿದು, ನಲಿನಲಿದಾಡು.

ವಿನೋದನು ಮತ್ತೆ ; “ಪ್ರಿಯೆ | ಕ್ಷಮಿಸಲಾರೆಯ ಹೇಳು; ಕ್ಷಮಿಸಿದೆನೆಂದು ಒಮ್ಮೆ ಹೇಳು?”

ಸುಶೀಲೆ - (ಪತಿಯಪಾದದ ಮೇಲೆ ಮಸ್ತಕವನ್ನಿರಿಸಿ ಬಾಷ್ಪಾಕುಲಿನಲೋಚನೆಯಾಗಿ ಅನುಕಂಪಿತಸ್ವರದಿಂದ, “ಸ್ವಾರ್ಮಿ | ನಾನು ಕ್ಷಮಿಸಲು ಸತ್ಯವಾಗಿಯೂ ಶಕ್ತಳಲ್ಲ!! ನಾನು, ತಮ್ಮ ಚರಣದಾಸಿ ; ತಮ್ಮ ಕುಂದುಕೊರತೆಗಳನ್ನು ಕ್ಷಮಿಸಬಲ್ಲವನು ಆ ದಯಾಮಯನಾದ ಪರಮಾತ್ಮನಲ್ಲದೆ ಮತ್ತೊಬ್ಬನಿಲ್ಲ!! ಪ್ರಭೋ : ನಾನು ಕೈಕೊಂಡಿದ್ದ ವ್ರತವು, ಇಂದು ಸಿದ್ಧಿಹೊಂದಿತು. ಇ೦ದು ನನ್ನ ಸ್ವಾಮಿ, ಸನ್ಮಾರ್ಗಯಾಮಿಯಾದುದನ್ನು ಕಂಡು ಧನ್ಯಳಾದೆನು. ಹತಶಳಾಗಿ ಶೋಕದಿಂದ ಸಂತಪಿಸುತ್ತಿದ್ದೀವಳನ್ನು ಕರುಣಾಕಟಾಕ್ಷದಿಂದ ನೋಡಿ ದ ಆ ಭಗವ೦ಳ್ಳಗೆ, ನನ್ನ ಅನಂತಪ್ರಣಾಮಗಳನ್ನು ತಮ್ಮ ಸಮ್ಮುಖದಲ್ಲಿಯೇ ಸಮರ್ಪಿಸುವೆನು. ಕ್ಲೇಶಾಧಿಕ್ಯದಿಂದ ನಾನು ಎಂದಾದರೂ, ಮಯ್ಮರೆತು ಅಪರಾಧವೇನನ್ನಾದರೂ ಮಾಡಿದ್ದರೆಯೂ ದಯೆಯಿಂದ ಕ್ಷಮಿಸಬೇಕೆಂದು ಬೇಡುವೆನು.”

ವಿನೋದನು, ಸುಶೀಲೆಯ ಮೃದುಮಧುರ ವಚನದಿಂದ ಆನಂದೋದ್ರೇಕವನ್ನು ತಡೆಯಲಾರದೆ, ತನ್ನೆರಡು ತೋಳ್ಗಳೆಂದಿಯೂ ಪತ್ನಿಯನು ಬಲವಾಗಿ ಬಿಗಿದಪ್ಪಿಕೊಂಡುಬಿಟ್ಟನು. ಸುಶೀ ಲೆಯೂ, ಉನ್ಮತ್ತೆಯಂತೆ, ಆನಂದಾಶ್ರುವನ್ನು ಸುರಿಸುತ್ತೆ ಪತಿಯನ್ನು ಗಾಢಾಲಿಂಗನಮಾಡಿಕೊಂಡಳು.

ಆ ಅನಂದಮಂದಿರದಲ್ಲಿ, ಪತಿಯ ಬಾಹು ಪಂಜರಮಧ್ಯದಲ್ಲಿ, ಸತೀಮಣಿ ಸುಶೀಲೆಯು, ಆನಂದದಾಯಿನಿಯಾದ ಅಧಿಷ್ಠಾತ್ರಿದೇ ವತೆಯಂತೆ ಪ್ರಕಾಶಿಸಿದಳು. ನೈಜವಾದ ಪತಿಪತ್ನೀಪ್ರೇಮಾನು ಬಂಧವು, ಒವತ್ತರವಾದುದಲ್ಲವೆ? ಸಂದೇಹವೇನು?

ಸಾಧು! ಸಾಧ್ವೀ! ಸಾಧುಸಾಧು!! ದುಸ್ಸಹವಾಸದಲ್ಲಿ ಸೇರಿ, ಕುಲಟೆಯ ಕುಟಿಲೋಕ್ತಿಗೆ ಮರುಳಾಗಿ,! ಪದಕ್ಕೊಳಗಾಗಿ ನರಳುತ್ತಿದ್ದ ಪತಿಯನ್ನು ಸನ್ಮಾರ್ಗಗಾಮಿಯನ್ನಾಗಿ ಮಾಡಿ, ದೇಶಹಿತಿಕಾರ್ಯದಲ್ಲಿ ಬದ್ದಾದುನಾಗುವಂತೆ ಮಾಡಿದ ನೀನಲ್ಲವೇ ನಮ್ಮ ಸಾಧುವಾದನಕ್ಕೆ ತಕ್ಕವಳು? ನೀನಲ್ಲವೇ ನಮ್ಮೀ ಸತೀಜೀವನಕ್ಕೆ ಪರ ಮಾದರ್ಶಳಾದವಳು?
ಸುಶೀಲೆ! ಈ ನನ್ನ ಲೋಕೋತ್ತರೆ, ಅದೆ ಅದ್ಭುತವಹಿಸಾಗ ರ್ಶಕಗಳಾದ ಸತ್ಯಕ್ಷವಾದ Jಾದಿ ಮನೋಯೋಗ ಶಕ್ತಿಯಲ್ಲಿ ಸ್ವಲ್ಪಕ್ಕೆ ಸ್ವಲ್ಪವಾದರೂ ಆಧುನಿಕ ಮಹಿಳೆಯರಿಂದ ಅನುರ್ಸಸಲ್ಪಟ್ಟ ನವಿಭಾ ರತಮಾತೆಯು ಧನ್ಯಳೇಸt ! ನಮ್ಮ ನೆರೆ ಸುತ್ತಿ ಮುತ್ತಿರುವ ಸ್ವಾಮಿ ದ್ರೋಹ ಪರನಿಂದೆ, ಆತ್ಮ ಸ್ತುತಿ, ಪ್ರಾಣಿಹಿಂಸೆ, ಅಸತ್ಯ ಅನ್ಯ ಛಿದ್ರಾನ್ವೇ ಷಣೆಗಳು ದೂರೀಕರಿಸಲ್ಪಟ್ಟು ಕರ್ಮಕ್ಷಮತೆ, ಸ್ನೇಹಪರಾಕಾಷ್ಠೆ ಗಳು ಮುಂದಾಗಿ ನಿಂದಲ್ಲಿ ನಮ್ಮ ಮಾತೆಯ ಸ್ವರ್ಗಸೌಂದಿಲ್ಯವನ್ನು ಧಿಕ್ಕ ರಿಸುವ ಪೂರ್ವಸೌಂದರವ, ಮತ್ತೆ ಪ್ರಕಾಶಿಸುವುದರಲ್ಲಿ ಸಂದೇಹ ವೇನು ? ಆದರೂ ನಮ್ಮ ಇದೊಂದು ಕJರಿಕೆಯನ್ನು ನೆರವೇರಿಸು ? ಸುಶೀಲೆ ! ನಿನ್ನ ಅದ್ಭುತ ತಪಃಪ್ರಭಾವದಿಂದ ಸುಪ್ರಸನ್ನನಾದ ಪರಮಾ ಆ ನ ಕ 27x ಆಟ ಕ್ಷ: ನವರಾ-ನುಷ್ಯ ಮಾತ್ರರನ್ನಾಗಿ ಮಾಡು | ದೇವಿ | ಈ ನಿನ್ನ ದಿವ್ಯಸ್ವರೂಪದಿಂದಲೇ ಆನಂದಸಾಮ್ರಾಜ್ಯದಲ್ಲಿ ಸ್ವಾಮಿಯಾದ ವಿನೋದನೊಡಗೊಂಡು ಅಭಿಷಿಕ್ಷೆಯಾಗಿ, ಶಾಂತಿ, ದೃತಿ, ಕ್ಷಮೆ, ಸತ್ಯ, ಸಂತೋಷಗಳೆಂಬ ಪಂಚಾಯುಧಗಳನ್ನು ಧರಿಸಿ, ಸಾರ್ವಭೌಮಪದವಿಯನ್ನಲಂಕರಿಸುತ್ತಿರು | ನಿನ್ನ ಛತ್ರಭಾಯೆಯ ನ್ನಾಶ್ರಯಿಸಿಯೇ ನಮ್ಮೀ ಸ್ತ್ರೀಪ್ರಪಂಚವೂ, ಪ್ರಕಾಶಿಸುವಂತಾಗಲಿ ! |(ಅಂತಾಗಲಿ.)

ಕಾಲೇವರ್ಷತು ಪರ್ಜನ್ಯ ಪ್ರಥಿವೀ ಸಸ್ಯಶಾಲಿನೀ |
ದೇಶಸ್ಸ್ಯಾತ್ ಕ್ಷೋಭರಹಿತ ಕೋಭರಹಿತಃ ಸದ್ಭಕ್ತಾಸ್ಸಂತುನಿರ್ಭಯಃ ‖

ಶ್ರೀಕೃಷ್ಣಾರ್ಪಣಮಸ್ತು.

"https://kn.wikisource.org/w/index.php?title=ಸುಶೀಲೆ&oldid=273349" ಇಂದ ಪಡೆಯಲ್ಪಟ್ಟಿದೆ