ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದ ವ ಫ್ಯಾಸಿಸ್ಟ್ ಸರ್ಕಾರಗಳ ದೌರ್ಜನ್ಯಗಳ ಬಗ್ಗೆ ಸಮಾಜವಾದಿಗಳೆಂದು ಕರೆದುಕೊಳ್ಳುವ ಸುಧಾರಕರೂ ಸಹ ತಟಸ್ಥರಾಗಿ ನಿಂತರು, ಸುಧಾರಕ ಸಮಾಜವಾದಿಗಳ ಪ್ರತಿಗಾಮಿ ತತ್ತ ಅವರನ್ನು ನಿರ್ವೀಯ್ರರನ್ನಾಗಿ ಮಾಡಿತ್ತು. ಅಮೆರಿಕಾ, ಇಂಗ್ಲೆಂಡ್‌ ಮತ್ತು ಫ್ರಾನ್ಸ್ ದೇಶಗಳ ಬಂಡವಾಳಶಾಹಿ ಸರ್ಕಾರಗಳು ಹಿಟ್ಲರ್- ಮುಸಲೋನಿಯರು ಪ್ರಪಂಚವನ್ನು ಕಮ್ಯೂನಿಸಂ ನಿಂದ ರಕ್ಷಣೆ ಮಾಡುವರೆಂಬ ಭ್ರಮೆಗೆ ಒಳಗಾಗಿ ಫ್ಯಾಸಿಸ್ಟ್ ಸರ್ಕಾರಗಳ ಆಕ್ರ ಮಣ ನೀತಿಯನ್ನು ವಿರೋಧಿಸಲು ಇಷ್ಟ ಪಡಲಿಲ್ಲ. ನಾಗಾಲೋಟದಿಂದ ಅಭಿ ವೃದ್ಧಿಯನ್ನು ಸಾಧಿಸುತ್ತಿದ್ದ ಸೋವಿಯಟ್ ರಷ್ಯಾ ಬಂಡವಾಳ ಶಾಹಿ ವ್ಯವ ಸ್ಥೆಯ ಭದ್ರತೆಗೆ ಪ್ರಥಮ ಶತ್ರುವೆಂದೇ ಬಗೆದರು. ಹಿಟ್ಲರ್ ಮತ್ತು ಮುಸ ಲೋನಿಯವರು ವಿಧಿಸಬಹುದಾದ ಎಂತಹ ಷರತ್ತನ್ನಾದರೂ ಒಪ್ಪಿಕೊಳ್ಳಲು ಸಿದ್ಧರಿದ್ದರೇ ಹೊರತು ರಷ್ಯಾದೊಡನೆ ಮಾತ್ರ ಯಾವ ಸಂಧಾನಕ್ಕಾಗಲಿ ಅಥವಾ ರಕ್ಷಣಾ ಒಪ್ಪಂದಕ್ಕಾಗಲಿ ಸಿದ್ಧರಾಗಿರಲಿಲ್ಲ, ಒಳಗೊಳಗೇ ಫ್ಯಾಸಿಸ್ಟ್ ಸರ್ಕಾರಗಳಿಂದ ಬಂಡವಾಳಶಾಹಿ ವ್ಯವಸ್ಥೆಗೆ ಭದ್ರತೆ ಸಿಕ್ಕುವಂತಾಯಿತು. ಸೋವಿಯಟ್ ರಷ್ಯಾ ಫ್ಯಾಸಿಸ್ಟ್ ಸರ್ಕಾರಗಳ ಪರಮ ಶತ್ರು ಎಂಬ ಹಿಟ್ಲರ್ ಮತ್ತು ಮುಸಲೋನಿಯರ ಕೂಗು ಬಂಡವಾಳಶಾಹಿ ಸರ್ಕಾರಗ ಳನ್ನು ಸಂತೈಸಿತು. ಫ್ಯಾಸಿಸ್ಟ್ ಸರ್ಕಾರಗಳು ರಷ್ಯಾದಮೇಲೆ ಯುದ್ಧ ಹೂಡಿ ಅದನ್ನು ನಿರ್ನಾಮ ಮಾಡುವುದನ್ನು ಆಶಿಸಿದರು. ಆ ತರುವಾಯ ಸಮಸ್ಯೆ ಗಳನ್ನು ಹೇಗಾದರೂ ಬಗೆಹರಿಸಿಕೊಳ್ಳಬಹುದೆಂಬ ಹಗಲುಗನಸಿನ ರಾಜ್ಯ ದಲ್ಲಿ ಬಂಡವಾಳಶಾಹಿ ರಾಷ್ಟ್ರಗಳು ಕಾಲ ಕಳೆದವು. ಇದಕ್ಕಾಗಿ ಫ್ಯಾಸಿಸ್ಟ್ ಸರ್ಕಾರಗಳ ಮೈತ್ರಿಯನ್ನು ಬಂಡವಾಳಶಾಹಿ ಪ್ರಜಾಸತ್ತೆ ಸರ್ಕಾರಗಳು ಬೆಳಸಿದವು. ಫ್ಯಾಸಿಸ್ಟ್ ಸರ್ಕಾರಗಳ ದೌರ್ಜನ್ಯಗಳನ್ನು ಬಂಡವಾಳಶಾಹಿ ಪ್ರಜಾ ಸತ್ತೆ ಸರ್ಕಾರಗಳು ತಡೆಗಟ್ಟಿದಿದ್ದುದಕ್ಕೂ, ಅವುಗಳನ್ನು ಸಂತುಷ್ಟಿ ಪಡಿ ಸುವ ನೀತಿಯನ್ನು ಅನುಸರಿಸಿದ್ದಕ್ಕೂ ಹಲವು ಕಾರಣಗಳಿವೆ. ಮುಖ್ಯವಾಗಿ ಹಿರಿಯ ಬಂಡವಾಳಶಾಹಿ ಪ್ರಜಾಸತ್ತೆ ಸರ್ಕಾರಗಳು ತಮ್ಮ ಉಳಿವನ್ನು ಸಿಸ್ಟ್ ಸರ್ಕಾರಗಳ ಉಳಿವಿನಲ್ಲಿ ಕಂಡವು. ಫ್ಯಾಸಿಸ್ಟ್ ರಾಷ್ಟ್ರಗಳ ಹೆದರಿಕೆಗಿಂತ ಮಿಗಿಲಾಗಿ, ಯುದ್ಧಾನಂತರ ಕಮ್ಯೂನಿಸ್ಟ್ ತತ್ತ್ವದ ಪ್ರಭಾವವು ಇತರ ಬಂಡವಾಳಶಾಹಿ ರಾಷ್ಟ್ರಗಳಿಗೆ ಹಬ್ಬದಂತೆ ತಡೆಗಟ್ಟು ವುದು ಆವಶ್ಯಕವಾಗಿತ್ತು. ಹಿರಿಯ ಬಂಡವಾಳಶಾಹಿ ರಾಷ್ಟ್ರಗಳಲ್ಲೇ