ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದ I ಯಾಗಿ ಏಕಮಾತ್ರ ರಾಜಕೀಯ ಪಕ್ಷವಿರಲು ಸಾಧ್ಯ. ಅದು ಎಲ್ಲರ ಹಿತವನ್ನು ಬಯಸುತ್ತದೆ. ಈಗ ಖಾಸಗೀ ಸ್ವಾಮ್ಯವು ರಾಷ್ಟ್ರದ ಹಿತವನ್ನು ಬಯಸುವ ರೀತಿಯಲ್ಲಿ ಇರುವುದರಿಂದ ಕಾರ್ಮಿಕವರ್ಗ ಸ್ವಾಮ್ಯದ ವಿರುದ್ಧ ಚಳವಳಿ ಹೂಡುವುದು ಅನಾವಶ್ಯಕವಾಗುವುದಲ್ಲದೆ ದೇಶದ್ರೋಹವಾಗು ಇದೆ. ರಾಷ್ಟ್ರದ ಹಿತದೃಷ್ಟಿಯಿಂದ ಜನಜೀವನವು ನಿರ್ದಿಷ್ಟ ಕ್ರಮದಲ್ಲಿ ಹೋಗುವಂತೆ ತೀರ್ಮಾನಿಸಲು ಸರ್ಕಾರಕ್ಕೆ ಹಕ್ಕಿದೆ. ಫ್ಯಾಸಿಸ್ಟ್ ಸರ್ಕಾರಗಳು ಅನುಸರಿಸಿದ ಆರ್ಥಿಕ ರೀತಿನೀತಿಗಳು ಫ್ಯಾಸಿಸ್ಟ್ ರಾಷ್ಟ್ರಗಳಿಗೆ ಮುಕ್ತಾಯಗೊಳಲಿಲ್ಲ. ಹದಗೆಟ್ಟ ಆರ್ಥಿಕಪರಿಸ್ಥಿತಿ ಹಿರಿಯ ಬಂಡವಾಳಶಾಹಿ ಪ್ರಜಾಸತ್ತೆ ರಾಷ್ಟ್ರಗಳನ್ನೂ ಸಹ ರಾಷ್ಟ್ರವೇ ಬಂಡವಾಳಉದ್ಯಮದಾರನಾಗುವ (State Capitalism) ಆರ್ಥಿಕ ನೀತಿ ಯನ್ನು ಅನುಸರಿಸುವಂತೆ ಬಲಾತ್ಕರಿಸಿತು. ಹಾಗೆ ಬಲಾತ್ಕರಿಸಿದ ಆರ್ಥಿಕ ಪರಿಸ್ಥಿತಿಗಳಲ್ಲಿ ಯುದ್ಧಾನಂತರ ಹಿರಿಯ ಬಂಡವಾಳಶಾಹಿ ಪ್ರಜಾಸತ್ತೆರಾಷ್ಟ್ರ ಗಳು ಎದುರಿಸಬೇಕಾದ ಸಮಸ್ಯೆಗಳೇ ಮುಖ್ಯ ಕಾರಣವಾಗಿದ್ದವು. ಬಂಡವಾಳ ಶಾಹಿ ಪ್ರಜಾಸತ್ತೆ ರಾಷ್ಟ್ರಗಳು (ಇಂಗ್ಲೆಂಡ್, ಫ್ರಾನ್ಸ್, ಬೆಲ್ಸಿಯಂ, ಜರ್ಮನೀ ಇಟಲಿ ಇತ್ಯಾದಿ) ಒಂದನೇ ಮಹಾಯುದ್ಧದಲ್ಲಿ ತೊಡಗಿರುವಾಗ ವಸಾ ಹತುಗಳಲ್ಲಿರುವ ವ್ಯಾಪಾರವರ್ಗ ಮತ್ತು ಯುದ್ಧದಿಂದ ದೂರವಿದ್ದ ಅಥವಾ ಯುದ್ಧದಿಂದ ಅತಿಯಾದ ನಷ್ಟವನ್ನು ಹೊಂದದ ಬಂಡವಾಳಶಾಹಿ ರಾಷ್ಟ್ರಗಳು (ಅಮೆರಿಕಾ ಮತ್ತು ಜಪಾನ್) ಮಾರುಕಟ್ಟೆ ಯನ್ನು ಕಸಿದುಕೊಂಡಿದ್ದವು. وله (1) ಫ್ಯಾಸಿಸ್ಟ್ ರಾಷ್ಟ್ರಗಳಲ್ಲಿ ಪ್ರತಿಪಾದಿತವಾಗಿರುವ ಏಕಪಕ್ಷದ ಸರ್ಕಾರದ (One-Party Government) ತ ಕಾರ್ಮಿಕ ಪ್ರಜಾಸತ್ತೆಯಲ್ಲಿ ಪ್ರತಿಪಾದಿತವಾಗಿರುವ ಮುಂದಾಳುಸಮಹದ (Vanguard) ತತ್ತ್ವಕ್ಕೂ (ಪುಟ 104) ಯಾವ ಹೋಲಿಕೆಯೂ ಇಲ್ಲ. ಒಂದರಲ್ಲಿ ವರ್ಗಗಳು ಇದ್ದು ಎಲ್ಲ ವರ್ಗಗಳನ್ನೂ ಪ್ರತಿನಿಧಿಸುವ ರೀತಿಯಲ್ಲಿ ಏಕಪಕ್ಷವಿದೆ, ಇನ್ನೊಂದರಲ್ಲಿ ವರ್ಗ ಗಳೇ ಇಲ್ಲದಿರುವ ವರ್ಗರಹಿತ ಸಮಾಜವಿದೆ ಮತ್ತು ರಾಜಕೀಯ ಪಕ್ಷದ ಅವಶ್ಯ ಕತೆಯೇ ಇಲ್ಲವಾಗಿದೆ. ಮುಂದಾಳತ್ವವನ್ನು ಕೊಡಲು ಮುಂದಾಳು ಸಮೂಹ ವಿದೆ. ಫ್ಯಾಸಿಸ್ಟ್ ರಾಷ್ಟ್ರಗಳ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗೂ ಮತ್ತು ಸಮಾಜವಾದಿ: ರಾಷ್ಟ್ರಗಳ ಸಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗೂ ಇರುವ ವೆತ್ಯಾಸವೇ ಈ ಬಗೆಯ ರೂಪಭೇದಕ್ಕೆ ಕಾರಣವಾಗಿದೆ.