ವೈಜ್ಞಾನಿಕ ಸಮಾಜವಾದ ಬಗೆಯ ಸಮಾಜವಾದೀ ಸ್ವಾತಂತ್ರ್ಯವನ್ನು ಆದರದಿಂದ ಬರಮಾಡಿ ಕೊಳ್ಳಬೇಕು. ಸಮಾಜವಾದೀ ವ್ಯವಸ್ಥೆಯಲ್ಲಿ ಸ್ವಾತಂತ್ರಕ್ಕೆ ಚ್ಯುತಿಬರುತ್ತದೆ ಎಂಬ ರೋದನ ಬಂಡವಾಳಶಾಹಿ ವ್ಯವಸ್ಥೆಯೇ ಶಾಶ್ವತ ಮತ್ತು ಚಿರವಾದದ್ದೆಂಬ ಭ್ರಮೆಯ ಪ್ರತಿಫಲವಾಗಿದೆ. ಸದ್ಯಕ್ಕೆ ಆಧುನಿಕ ಸಮಾಜವಾದೀ ವ್ಯವಸ್ಥೆ ಯನ್ನು ಬಿಟ್ಟರೂ, ಪ್ರಕೃತ ಬಂಡವಾಳಶಾಹಿ ವ್ಯವಸ್ಥೆ ತಂದೊಡ್ಡಿರುವ ವಿರಸಗಳಿಂದ ಪಾರಾಗಲು ಬಂಡವಾಳಶಾಹಿ ಪ್ರಜಾಸತ್ತೆಗಳು ಕೈಗೊಂಡಿರುವ ಆರ್ಥಿಕ ನೀತಿ-ಹತೋಟಿಗಳು, ಸರ್ಕಾರೀ ಉದ್ಯಮಗಳು, ಕನಿಷ್ಠ ಕೂಲಿಯ ನಿಯಮ ಲಾಭದ ನಿಯಮ, ಇತ್ಯಾದಿ-ಬಂಡವಾಳಶಾಹಿ ವ್ಯವಸ್ಥೆಯಲ್ಲಿ ರುವ ಸ್ವಾತಂತ್ರ್ಯಗಳಿಗೆ ಧಕ್ಕೆ ತಂದಿದೆ. ಸರ್ಕಾರಿ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಸರ್ಕಾರ ರಚಿಸುತ್ತಿರುವ ಶಿಸ್ತಿನ ನಿಯಮಗಳಿಗೆ ಒಳಪಟ್ಟ ಆರ್ಥಿಕವಾಗಿ ಅಲ್ಲದೆ, ರಾಜಕೀಯ ದೃಷ್ಟಿಯಿಂದಲೂ ಅಸ್ವಾತಂತ್ರರಾಗುತ್ತಿದ್ದಾರೆ. 1 ಖಾಸಗೀ ಉದ್ಯಮಗಳಲ್ಲಿರುವ ನೌಕರರ ಸ್ವಾತಂತ್ರವನ್ನು ಇನ್ನು ವರ್ಣಿಸಬೇಕಾದ ಪ್ರಮೇಯವೇ ಇಲ್ಲ. ಮುಖ್ಯ ವಾಗಿ ಗಮನಿಸಬೇಕಾದದ್ದೆಂದರೆ ಆರ್ಥಿಕ ವ್ಯವಸ್ಥೆಯ ಮಾರ್ಪಾಟನೊಡನೆ ಆರ್ಥಿಕ ಸಂಬಂಧಗಳಲ್ಲಿ ಉಂಟಾಗುವ ಬದಲಾವಣೆಗಳು, ಮತ್ತು ಈ ಬದಲಾವಣೆಗಳು ಶಾಶ್ವತವೆಂದು ಪರಿಗಣಿಸಲಾಗಿದ್ದ ಹಲವು ವ್ಯಕ್ತಿ (1) ಸರ್ಕಾರೀ ಕೆಲಸಕ್ಕೆ ಸೇರುವವರು ಸರ್ಕಾರ ರಚಿಸುವ ನಿಯಮಗಳಿಗೆ ತಲೆಬಾಗದಿದ್ದರೆ ಕೆಲಸ ದೊರಕುವುದಿಲ್ಲ. ಆದರೆ, ಉದರಪೋಷಣೆ ಸರ್ಕಾರಿ ಕೆಲಸವನ್ನು ಅಪೇಕ್ಷಿಸುವಂತೆ ಬಲಾತ್ಕರಿಸುತ್ತದೆ. ನಿಯಮಗಳಿಗೆ ತಲೆಬಾಗಲು ಇಷ್ಟವಿಲ್ಲದಿದ್ದರೆ ನಿರುದ್ಯೋಗಿಯಾಗಿ ಇರಬೇಕು, ಇಲ್ಲವೇ ಸಾಕಷ್ಟು ಸ್ಟಾಮ್ಯ ಶಕ್ತಿ ಇರಬೇಕು. ಬಂಡವಾಳಶಾಹಿ ಸಮಾಜ ವ್ಯವಸ್ಥೆಯಲ್ಲಿ ಖಾಸಗಿ ಸ್ನಾನದ ಆವಶ್ಯಕತೆ ಈಗ ಎದ್ದು ಕಾಣುತ್ತದೆ. ಸರ್ಕಾರೀ ನೌಕರರಿಗೆ ರಚಿಸುವ ಸೇವಾ ನಿಯಮಗಳು ಇಲ್ಲದಿದ್ದರೆ ಸರ್ಕಾರದ ಕೆಲಸಕಾರ್ಯಗಳು ನಡೆಯುವುದೇ ಅಸಾಧ್ಯ ವಾಗುತ್ತದೆಂಬ ವಾದವಿದೆ. ಸದ್ಯಕ್ಕೆ ಈ ವಾದದಲ್ಲಿ ಅಡಗಿರುವ ಸತ್ಯ ಅಥವ ಅಸತ ಏನೇ ಇರಲಿ, ಉತ್ಪಾದನಾ ಸಾಧನಗಳ ಸಮಾಜೀಕರಣ ಮುಂದುವರಿದ ಹಾಗೆ ಮತ್ತು ಹೆಚ್ಚು ಹೆಚ್ಚು ಜನರು ಸರ್ಕಾರೀ ಉದ್ಯಮಗಳಲ್ಲಿ ಕೆಲಸಕ್ಕೆ ಸೇರಿಕೊಂಡ ಹಾಗೆ, ಸರ್ಕಾರಿ ಸೇವಾ ನಿಯಮಗಳು ವ್ಯಕ್ತಿ ಸ್ವಾತಂತ್ರದ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಗಮನಿಸುವುದು ಬಹು ಅಗತ್ಯವಾಗಿದೆ.
ಪುಟ:ಕಮ್ಯೂನಿಸಂ.djvu/೧೮೨
ಗೋಚರ