ಸಮಾಜವಾದ ಮತ್ತು ಭಾರತ ಅಧ್ಯಾಯ 10 ಆಧುನಿಕ ಕಾಲದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಇತಿಹಾಸದಲ್ಲಿ ವೈಜ್ಞಾನಿಕ ಸಮಾಜವಾದ ನಿರ್ವಿವಾದವಾದ ಮತ್ತು ನಿರ್ದಿಷ್ಟ ವಾದ ಸ್ಥಾನವನ್ನು ಗಳಿಸಿದೆ. ಪ್ರಪಂಚದ ಈ ಭಾಗದಲ್ಲಿ ವೈಜ್ಞಾನಿಕ ಸಮಾಜವಾದ ಕಾರ್ಯಗತವಾಗಿ ವ್ಯವಸ್ಥೆ ಹೊಂದುತ್ತಲಿದೆ. ಮಿಕ್ಕ ಕಡೆಗಳಲ್ಲಿ ಸಮಾಜವಾದದ ಮುಂದೋಟದ ಅಲೆಗಳು ಕಾಣಿಸಿಕೊಂಡಿವೆ. ವೈಜ್ಞಾನಿಕ ಸಮಾಜವಾದ (ಮಾರ್ಕ್ಸ್‌ವಾದ) ನಿರ್ವೀಯ್ರದ ವಾದ, ಸುಳ್ಳುವಾದ, ಗತಿಸಿಹೋದ ವಾದ ಎಂದು ಹೇಳಿಕೆಗಳು ಬರುತ್ತಿದ್ದ ಈ ಹೇಳಿಕೆಗಳ ನಡುನಡುವೆಯೇ ಅದರ ಮುಂದೋಟ ಸಾಗುತ್ತಿದೆ. ಹೆಚ್ಚು ಹೆಚ್ಚು ಜನರು ವೈಜ್ಞಾನಿಕ ಸಮಾಜವಾದ ಸೂಚಿಸಿರುವ ಮುಕ್ತಿ ಮಾರ್ಗದ ಅನುಯಾಯಿಗಳಾಗುತ್ತಿದ್ದಾರೆ. ವೈಜ್ಞಾನಿಕ ಸಮಾಜವಾದ ಇಷ್ಟು ಜನಪ್ರಿಯವಾಗಲು, ಇಷ್ಟು ಮುಂದೋಟ ಸಾಗಿಸಲು, ಈ ವಾದದಲ್ಲಿ ಅಡಗಿರುವ ಸತ್ಯ ನಿರೂಪಣೆಯೇ ಕಾರಣವಾಗಿದೆ. ಐತಿಹಾಸಿಕ ಭೌತವಾದ, ಹೆಚ್ಚಿಗೇ ಮೌಲ್ಯ, ವರ್ಗ ಗಳ ಇರುವಿಕೆ ಮತ್ತು ವರ್ಗಹೋರಾಟ ಇವುಗಳನ್ನು ಇತಿಹಾಸದ ಪದರಗಳಿಂದ ಸಂಶೋಧಿಸಿ ಸಮಾಜ ವಿಜ್ಞಾನವನ್ನು ಮಾರ್ಕ್ಸ್ವಾದ ಪ್ರತಿಪಾದಿಸಿದೆ ಜನಸಮುದಾಯದ ಕಲ್ಯಾಣಕ್ಕಾಗಿ ಮಾರ್ಕ್ಸ್-ಏಂಗೆ ಬ್ಬರು ಬಿಟ್ಟು ಹೋಗಿರುವ ವಿಮರ್ಶಾಸಾಧನಗಳಿಂದ ಕಳೆದ ಮತ್ತು ಈಗಿನ ಸಮಾಜದ ಸ್ವರೂಪವನ್ನು ಅರಿಯುವುದಕ್ಕೂ, ವರ್ಗರಹಿತ, ಶೋಷಣಾ ರಹಿತ ಸಮಾಜವನ್ನು ಸ್ಥಾಪಿಸಲು ಶ್ರಮಿಸುವುದಕ್ಕೂ ಆದೇಶ ಸಿಕ್ಕಿದೆ ಬಂಡವಾಳಶಾಹಿ ವ್ಯವಸ್ಥೆಯಿಂದ ಉಂಟಾಗಿರುವ ಕೋಭೆಯಿಂದ ಜನಸಮು ದಾಯ ಎಚ್ಚೆತ್ತಿದೆ; ಕಾರ್ಮಿಕವರ್ಗ ಜಾಗೃತಿಗೊಂಡು ಕಾರ್ಯೋನ್ಮುಖ ರಾಗಿದ್ದಾರೆ; ಸಂಘಟನೆಗೊಂಡು ಚಳವಳಿಯನ್ನು ಹೂಡಿದ್ದಾರೆ. F ಮಾರ್ಕ್ಸ್-ಏಂಗೆಲ್ಲರ ವಾದ ಜನರ ಆಶೋತ್ತರಗಳನ್ನು ಪ್ರತಿ ಬಿಂಬಿಸಿರುವುದಲ್ಲದೆ, ಶೋಷಣೆಯಿಂದ ವಿಮುಕ್ತರಾಗುವುದಕ್ಕೂ ಮಾರ್ಗ
ಪುಟ:ಕಮ್ಯೂನಿಸಂ.djvu/೧೮೯
ಗೋಚರ