ಏಕಾರಿಗಿಸಿ 5 65 “ಹೂಂ, ಬರೀತೀನಿ.” “ಏನೇನಾಯ್ತಂತ ನಂಗೆ ತಿಳಿಸ್ಟೇಕು.” "B00..." 99 ಪಕ್ಕದ ಹಾಸಿಗೆಯೆಡೆಗೆ ವಿಜಯಾ ದೃಷ್ಟಿ ಬೀರಿದಳು. “ಎಲ್ಲಕ್ಕ ಮಗು?” ಅಕ್ಕನನ್ನು ಬಿಡುವುದು ಹೇಗೆ ಕಷ್ಟವೋ ಹಾಗೆಯೇ ಅಕ್ಕನ ಮಗುವನ್ನು ಬಿಟ್ಟಿರುವುದು ಕೂಡ, “ಒಳಗೆ ಅಮ್ಮನ ಜತೇಲಿದ್ದೇಕು.” ಐವತ್ತರ ಗಡಿ ಸಮೀಪಿಸುತ್ತಿದ್ದ ತಾಯಿ, ವಯಸ್ಸಾದ ತಂದೆ...... ವಿಜಯಳ ಮದುವೆಯೇ ಈ ಭೂಮಿಯ ಮೇಲೆ ಅವರು ಮಾಡಲು ಉಳಿದಿದ್ದ ಕೊನೆಯ ಕರ್ತವ್ಯ. ಈಗ ಅದೂ ಮುಗಿಯಿತೆಂದು ಅವರು ನಿಶ್ಚಿಂತೆಯಾಗಿ ಇರಬಹುದು... ಹಾಗಿರುವುದು ಸಾಧ್ಯವಿತ್ತು. ಆದರೆ “ನೀನು ಏನ್ಮಾಡೋಕೂಂತಿದೀಯಾ ಅಕ್ಕ?” ಮಾಡಬೇಕಾದುದೇನೆಂಬುದನ್ನು ಕುರಿತು ಅದೆಷ್ಟು ಸಾರೆ ಯೋಚಿಸಿದ್ದಳೋ ಸುನಂದಾ! ಆದರೆ ಒಮ್ಮೆಯೂ ಏನೂ ಸ್ಪಷ್ಟವಾಗಿ ಹೊಳೆದಿರಲಿಲ್ಲ. “ಈಗಾಗಲೇ ಏನವಸರ? ನಿಧಾನವಾಗಿ ಏನಾದರೂ ಮಾಡಿದರಾಯ್ತು.”
- ಅಂತೂ ಹೆಣ್ಣಾಗಿ ಹುಟ್ಟಿ ಹೆತ್ತವರಿಗೆ ಕೊಡಬಾರದ ಕಷ್ಟ ಕೊಟ್ಟೆವು.”
ಇಂಥ ಒಳ್ಳೆಯ ದಿನ ಹಾಗೆಲ್ಲ ಆಡಬಾರದಮ್ಮ. “ಏನು ಒಳ್ಳೆಯ ದಿನವೊ!” ಸುನಂದಾ ತನ್ನ ತಂಗಿಯ ಬಾಯನ್ನು ತನ್ನ ಅಂಗೈಯಿಂದ ಮುಚ್ಚಿದಳು. ವಿಜಯಾ ಹಿಂದಕ್ಕೆ ಸರಿದು ತಲೆ ಕೊಸರಿಕೊಂಡಳು. “ನೀನು ಕೂಡ ನಾಲ್ಕು ವರ್ಷಗಳ ಹಿಂದೆ ಒಂದು ಒಳ್ಳೆಯ ದಿನವೇ ನಮ್ಮನ್ನೆಲ್ಲ ಬಿಟ್ಟು ಗಂಡನ ಮನೆಗೆ ಹೋದೆ, ಅಲ್ವೆ ಅಕ್ಕ?” ಬೇಡ ಬೇಡವೆಂದರೂ ಬಾರಿ ಬಾರಿಗೂ ಸೂಜಿಮೊನೆಯಿಂದ ಚುಚ್ಚುತ್ತಿದ್ದ ಕಹಿ ನೆನಪು.., 66 “ಈಗ ಯಾಕಮ್ಮಾ ಅದೆಲ್ಲ?” “ಕರಕೊಂಡು ಹೋಗೋಕೆ ಬಾರೇಂತ ನಿನಗೂ ಆಗ ಸಂತೋಷವಾಗಿತ್ತು.” ಆಗಿತ್ತು. ಅದು ನಿಜ, “ನನ್ನ ಮಾತು ಕೇಳು ವಿಜಯ, ಬಂಗಾರದಂತಹ ಮನುಷ್ಯ ನಿನ್ನ ಗಂಡ, ಸುಮ್ಮನೆ ಕೆಟ್ಟ ಯೋಚನೆ ಮಾಡಬೇಡ,” ಅಕ್ಕನ ಮಾತಿನಲ್ಲಿ ಸತ್ಯಾಂಶವೂ ಇದೆ ಎಂದಿತು, ತಂಗಿಯ ಹೃದಯದೊಳಗಿನ ಕಿರುದನಿ, ಜತೆಯಲ್ಲಿದ್ದ ಸ್ವಲ್ಪ ಕಾಲ ಸ್ನೇಹಮಯಿಯಾಗಿ ಆತ ವರ್ತಿಸಿದ್ದ. ಅನಂತರ