ವಿಷಯಕ್ಕೆ ಹೋಗು

ಪುಟ:Ekaangini by Nirajana.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿಸಿ 12 ಅರೆಬಿರಿದ ಮುಗುಳುನಗೆ, ಚಂಚಲವಾದ ನೋಟ....ಮರುಕ್ಷಣ ದೃಷ್ಟಿಯನ್ನು ನೆಲದೆಡೆಗೆ ಎಳೆಯುತ್ತಿದ್ದ ಲಜ್ಜೆ... 66 ನಿಮ್ಮಕ್ಕ ತುಂಬಾ ಕೆಟ್ಟೋರು ಕಣೇ. 99 "05508?" “ಎಷ್ಟೊಂದು ಪೀಡಿಸ್ತಾರೆ!” ವಿಜಯಾ ನೆಲವನ್ನು ನೋಡುತ್ತ ಕಿಸಕ್ಕನೆ ನಕ್ಕಳು. ಕಾಫಿ, ಇನ್ನೂ ಆಕೆಯ ಕೈಯಲ್ಲೇ ಇತ್ತು ಲೋಟ, ಅದನ್ನೆ ಕಿಟಿಕಿಯ ದಂಡೆಯ ಮೇಲಿರಿಸಿ ಬಾಗಿಲನ್ನು ಮರೆಮಾಡಿದೆ.

  • ಇತ್ತು ಲೋಟ. ಅದನ್ನೆ ವೆಂಕಟರಾಮಯ್ಯ

“ಎಷ್ಟೊಂದು ನಾಚಿಕೆಯೇ ನಿನಗೆ?” ಕಾಫಿ ಹೀರಲು ವೆಂಕಟರಾಮಯ್ಯನಿಗೆ ಆಗ ಪುರಸೊತ್ತಿರಲಿಲ್ಲ... ಮತ್ತೆ ಉಸಿರಾಡುವುದು ಸಾಧ್ಯವಾದಾಗ ವಿಜಯಾ ಮೆಲುದನಿಯಲ್ಲಿ ಕೇಳಿದಳು.

  • ಆ ಕಾಫಿ ಮೇಲೂ ಇಷ್ಟು ಕನಿಕರ ತೋರಿಸ್ಸಾರೆ?"

ಆತ ನಕ್ಕು ಲೋಟವನ್ನೆತ್ತಿಕೊಂಡ. ಕಾಫಿ ರುಚಿಯಾಗಿತ್ತು. “ಒಂದು ಗುಟುಕು ನಿನಗೂ ಕೊಡಲಾ? “ಬೇಡಿ, ಒಳಗಿದೆ. ಬರೇ ಉಪಚಾರದ ಮಾತು, ಅಷ್ಟೆ, ಆ ತುಟಿಗಳ ಸ್ಪರ್ಶಸುಖವನ್ನು ಅನುಭವಿ ಸಿದ್ದ ಲೋಟ ಈ ತುಟಿಗಳ ಬಳಿಗೆ ಬಂದಾಗ ವಿಜಯಾ ಬೇಡವೆನ್ನಲಿಲ್ಲ. ಆತ ತುಂಟನೋಟ ಬೀರುತ್ತ ಕೇಳಿದ: “ಕಾಫಿ ಚೆನ್ನಾಗಿದೆ. ನಿಮ್ಮಕ್ಕನಾ ಮಾಡಿದ್ದು?" “ಅಲ್ಲ. ನಾನೇ ಮಾಡ್ಡೆ. “ಅದಕ್ಕೇ

  • ಹೀಗಿದೆ. ಏನು ರುಚಿಯೋ! ದೇವರಿಗೇ ಪ್ರೀತಿ!”

ಅದು ನಗೆಮಾತೇ ಆಗಿದ್ದರೂ ಮುಖ ಕಪ್ಪಿಡುವ ಹಾಗಾಯಿತು. ಕೊಂಕಿಸಿ ರಾಗವೆಳೆದಳು: "Zoeye!... 99 "... ಲೋಟ ಬರಿದಾಯಿತು. ಆದರೆ ಹೃದಯ ತುಂಬಿರಲೇ ಇಲ್ಲ. ಬಾಗಿಲಿನತ್ತ ನೋಡುತ್ತ ಆತ ಮಲೆನಾಡಿನ ಬಾಹು ಬಳ್ಳಿಯಿಂದ ಆಕೆಯನ್ನು ಬಂಧಿಸಿದ. “ಒಬ್ಬನೇ ಇರೋಕೆ ನನ್ನಿಂದಾಗಲ್ಲ ಕಣೇ, ಎಷ್ಟೋ ಸಲ, ಇನ್ನೇನು ಹುಚ್ಚೇ ಹಿಡಿಯುತ್ತೆ ಅನಿಸುತ್ತೆ. ವಿಜಯಾ ಆತನ ಗುಂಗುರು ಕೂದಲಿನೊಡನೆ ಆಟವಾಡಿದಳು.