ವಿಷಯಕ್ಕೆ ಹೋಗು

ಪುಟ:Ekaangini by Nirajana.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ಬೇಕೆನ್ನುವಷ್ಟರಲ್ಲಿ ಆಕೆಯ ತಂದೆ ಅಂದರು: “ಎಲ್ಲಾ ಗೊತ್ತಾಡ್ಕೊಂಡು ಬಂದಿದೀನಮ್ಮಾ ನಾಳೆಯೇ ಆಗಿಹೋಗ್ಲಿ, ನಾಡದು ಪ್ರಯಾಣಕ್ಕೆ ಘಳಿಗೆ ಚೆನ್ನಾಗಿದೆ. ಆಗದಾ?” "ಹಾಗೇ ಆಗಲಪ್ಪ,” ಎಂದಳು ಸುನಂದಾ. 2 ರಾತ್ರಿ ವೆಂಕಟರಾಮಯ್ಯನೊಬ್ಬನೆ ಕೊಠಡಿಯಲ್ಲುಳಿದ. ಸುನಂದೆಯ ತಂದೆ ಸೆಖೆ ಎನ್ನುತ್ತ ಜಗಲಿಯನ್ನಾ ಕ್ರಮಿಸಿದರು. ಆಕೆಯ ತಾಯಿ ತನ್ನಿಬ್ಬರು ಮಕ್ಕಳೊಡನೆ, ಮಾರನೆಯ ದಿನದ ಸಮಾರಂಭದ ಸಿದ್ಧ ತೆಯಲ್ಲಿ ತಲ್ಲೀನರಾದರು. ವಿತ್ತಳು. “ನಿನ್ನ ಯಜಮಾನರಿಗೆ ಕುಡಿಯೋಕೆ ನೀರಿಟ್ಟಿದೀಯೇನೆ?” ಎಂದು ಕೇಳಿದರು 66 ಎಂದು ವಿಜಯ, ಮರೆತುಹೋಯಿತೆನ್ನುವ ಧ್ವನಿಯಲ್ಲಿ ಉತ್ತರ ಹೋಗು, ಇಟ್ಟು ಬಾ, ಎಂದರು ಆಕೆ, ಸಿಟ್ಟಾದವರಂತೆ, “ಏನು ಮರೆವು ಈ ಚಿಕ್ಕ ವಯಸ್ಸಿನಲ್ಲೆ!” ಎಂದು ಗೊಣಗಿದರು. ಆದರೆ ಸುನಂದೆಗೆ ಗೊತ್ತಿತ್ತು, ವಿಜಯ ಮರೆತಿರಲಿಲ್ಲವೆಂಬುದು ಮತ್ತೊಮ್ಮೆ ಗಂಡನ ಕೊಠಡಿಗೆ ಹೋಗುವ ಅವಕಾಶ ದೊರೆಯಲೆಂದು ಆ ಕೆಲಸವನ್ನು ಹಾಗೆಯೇ ಮಾಡದೆ ಬಿಟ್ಟಿದ್ದಳು ಹುಡುಗಿ, ವಿಜಯಾ ಗಂಡನ ಕೊಠಡಿಯಿಂದ ಹಿಂತಿರುಗುವುದು ಎರಡು ನಿಮಿಷ ತಡ ಪಾಯಿತು. ಅಡುಗೆ ಮನೆಯೊಳಕ್ಕೆ ಬಂದ ಮಗಳನ್ನು ಕುರಿತು ತಾಯಿ ಕೇಳಿದರು: “ನಿದ್ದೆ ಬಂದಿತ್ತೆ?”

  • ಇಲ್ಲಾಂತ ತೋರುತ್ತೆ. ನಾನು ಕೇಳಿಲ್ಲ," ಎಂದಳು ವಿಜಯಾ.

ತಂಗಿಯ ಮಾತು ಕೇಳಿ ಸುನಂದೆಗೆ ನಗು ಬಂತು, ವಿಜಯಾಳನ್ನು ಆಕೆ ಗಟ್ಟಿ ಯಾಗಿ ಚಿವುಟಿದಳು. “ಅಯ್ಯೋ!” “ಅದೇನೇ ಅದು? ಸುಮ್ಮಿದ್ದಾರಾ? ಹೊರಗೆ ಕೇಳಿಸಿತು!" ಎಂದರು ತಾಯಿ. “ಕೇಳಿಂತಾನೆ ಕುಯ್ಯೋ ಅನ್ನೋದು ಸಹಾಯಕ್ಕೆ ಬಾರೇನೋಂತ