ವಿಷಯಕ್ಕೆ ಹೋಗು

ಪುಟ:Ekaangini by Nirajana.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

21 ಆದರೂ ಮಾತು ಹೊರಡಲಿಲ್ಲ. ಕೊನೆಗೆ ಆ ಮೌನ ದುಸ್ಸಹವಾಯಿತೆಂದು ಸುನಂದಾ ಅಂದಳು: “ಪದ್ಮಾ ಅಂತ ನಿನ್ನನ್ನು ಕೂಗಿದ್ದಕ್ಕೆ ಅವರೇನಂದರು?" “ಪದ್ಮಾ ಅನ್ನೋದೂ ನನ್ನ ಹೆಸರೇ ಇರಬಹುದೂಂತ ತಿಳಿಕೊಂಡಿದ್ರು. ತಮಾಷಿ! ಅಂಥದೊಂದು ಹಾಡಿದೇಂತ ಅವರಿಗೆ ಗೊತ್ತೇ ಇಲ್ಲ!” “ಹೇಳ್ಕೊಟ್ಟೆ ತಾನೆ?" “ಶಿವಮೊಗ್ಗೆಗೆ ಹೋದ್ಮಲೆ ಮೈಸೂರು ಮಲ್ಲಿಗೆ ಪುಸ್ತಕ ಕೊಂಡ್ಕೊಳ್ಳೋ ಸುನಂದೆಗೂ ಹಿಂದೆ ಅಂತಹ ಆಸೆಗಳಿದ್ದುವು. ಗತಕಾಲದೊಂದು ಸಂಭಾಷಣೆಯ ತುಣುಕು ಆಕೆಯ ಕಿವಿಗಳಲ್ಲಿ ಮೊರೆಯುತ್ತಿತ್ತು. “ನಾವು ಕಲ್ಬರ್ ಆಗಿದ್ದೇಕು, ಅಲ್ವಾ?” 'ಅದೇನೆ ಕಲ್ಟರ್ ಅಂದ್ರೆ?? ಹಸುಳೆಯ ಮರು ಪ್ರಶ್ನೆಯಲ್ಲ. ತಿರಸ್ಕಾರ ಬೆರೆತ ವ್ಯಂಗ್ಯಕ್ತಿ, ಆಸೆಯ ಎಳೆಯ ಕುಡಿ ಕಡಿದು ಹೋಗಿತ್ತು ಅಲ್ಲಿಗೆ, ಅಕ್ಕ ಮರುಮಾತನಾಡಲಿಲ್ಲವೆಂದು ಕಾತರ ಧ್ವನಿಯಲ್ಲಿ ವಿಜಯಾ ಕೇಳಿದಳು. “ಯಾಕಕ್ಕೆ ಸುಮಿ ದೀಯಾ?” ತೂಕಡಿಸುತ್ತಿದ್ದವಳನ್ನು ಎಚ್ಚರಿಸಿದ ಹಾಗಾಯಿತು ಸುನಂದೆಗೆ, “ಏನೂ ಇಲ್ಲ ವಿಜಯಾ, ಸುಮ್ಮೆ ಯೋಚಿಸ್ತಿದ್ದೆ.” “ಏನು ಯೋಚೆ ? ಬೇಸರವಾಗುತ್ತಾ?.... 54 ಯೋಚನೆಯ ಮಾತೆತ್ತಿದುದೇ ತಪ್ಪಾಯಿತು. ಮತ್ತಷ್ಟು ತೊಡಕಿನ ಪ್ರಶ್ನೆ ... ಪ್ರಶ್ನೆ...

  • ಇನ್ನು ನೀನು ಹೊರಡ್ತೀಯಲ್ಲಮ್ಮ....”

ತಾನು ಹೊರಟು ಹೋದಮೇಲೆ ಉಳಿಯುವಾಕೆ ಅಕ್ಕನೊಬ್ಬಳೇ, ಚಿಕ್ಕಂದಿ ನಿಂದಲೂ ತಾವು ಒಬ್ಬರಿಗೊಬ್ಬರು ಅಂಟಿಕೊಂಡೇ ಬಂದವರು, ಗಂಡನ ಮನೆಯಿಂದ ಅಕ್ಕ ಹೊರಟು ಬಂದ ಮೇಲಂತೂ ಆ ಅನ್ನೋನ್ಯತೆ ಹೊಸ ಹಂತವನ್ನು ಮುಟ್ಟಿತು. ಈ ಆಗಲಿಕೆಯಿಂದ ತನಗೂ ಸಂಕಟವಾಗುವುದು. ಆದರೆ ತನ್ನ ಇನಿಯನ ಸಾನ್ನಿಧ್ಯ ದಲ್ಲಿ ಆ ಸಂಕಟ ಮರೆತು ಹೋಗುವುದು ಖಂಡಿತ. ಅಕ್ಕನಿಗಾದರೆ ಹಾಗಲ್ಲ. ಆಕೆಯ ಕೊರಗಿಗೆ ಪರಿಹಾರ ಮಾರ್ಗವೇ ಇಲ್ಲ. “ನಾನೇನಕ್ಕ ಮಾಡ್ಲಿ...? ದುಃಖದ ಸೆಲೆಯೊಡೆಯಿತು ವಿಜಯಳ ದ್ವನಿಯಲ್ಲಿ, ಸುನಂದಾ ಧಿಗ್ಗನೆದು ದೀಪ ಆರಿಸಿ, ತಂಗಿಯ ಬಳಿ ಕುಳಿತಳು. ಕತ್ತಲಲ್ಲಿ ಕೈ ಬೆರಳುಗಳು ಒಡಹುಟ್ಟಿದವಳ ಮುಖವನ್ನು ತಡವುತ್ತ ಕಣ್ಣುಗಳನ್ನು ಮುಟ್ಟಿ ನೋಡಿದುವು. ತುಂಬಿ ಹರಿಯು ತಿದ್ದ ಕಂಬನಿ, ತಂಗಿಯನ್ನು ತಬ್ಬಿಕೊಂಡು ಸುನಂದಾ ತಾನೂ ಅತ್ತಳು.