ವಿಷಯಕ್ಕೆ ಹೋಗು

ಪುಟ:Ekaangini by Nirajana.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

నింగిని 35 “ಬುಧವಾರ ಬೆಂಗಳೂರಿಗೆ ಹೋಸ್ಪಿಟ್ಟು, ಬತ್ತೀನಿ.” ಅವರ ಪತ್ನಿ ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ. ಕೃಷ್ಣಪ್ಪನವರೇ ಅಂದರು; “ಕೇಳಿದ್ದೆ?” ಕ್ಷೀಣವಾದ ಸ್ವರದಿಂದ ಉತ್ತರ ಬಂತು; "3.00." ಸುನಂದೆಗೆ ರಾಧಮ್ಮ ಕಾಗದ ಬರೆದ ವಿಷಯವನ್ನು, ಬಂದ ಕಾಗದದಲ್ಲಿ ಅಳಿಯ ನನ್ನು ಕುರಿತು ಇದ್ದ ಮಾಹಿತಿಯನ್ನು, ಹೆಂಡತಿಗೆ ಕೃಷ್ಣಪ್ಪನವರು ತಿಳಿಸಲಿಲ್ಲ.

  • ಆತ ಹೆಂಡತಿ ಮಗುವಿನ ಯೋಚನೇನೇ ಮಾಡ್ತಾ ಇಲ್ಲ ಅನಿಸುತ್ತೆ. ವಿಚಿತ್ರ

ಮನುಷ್ಯ!” ಎಂದಷ್ಟೆ ಅಂದರು. “ಯಾಕಾದರೂ ಹೀಗೆ ನಮ್ಮ ಹೊಟ್ಟೆ ಉರಿಸ್ತಾನೋ,” ಎಂದು, ಸುನಂದೆಯ ತಾಯಿ ನಿಟ್ಟುಸಿರು ಬಿಟ್ಟರು. ಕೊಡ್ಲಿಲ್ಲ.” ವಿಜೀ ಮದುವೆ ಆದ್ಮಲೆ ಒಂದೆರಡಲ ನಾನು ಬರೆದಾಗ್ಯೂ ಆತ ಉತ್ತರ "." “ಈಗ ಅವನನ್ನು ಕಂಡು ಏನು ಹೇಳಿ?” ಆ ಪ್ರಶ್ನೆಗೆ ಉತ್ತರ ಕಠಿನವೆಂದು ಸುನಂದೆಯ ತಾಯಿಗೆ ತೋರಿತು, ಗೇನೂ ಹೊಳೆಯದೆ ಅವರೆಂದರು: “ಏನ್ಹೇಳೀರಾ?” $22 ಒಲೆಯೊಳಗೆ ಉರಿಯುತ್ತಿದ್ದ ಸೌದೆಯನ್ನೆ ಬಿಟ್ಟಿಸುತ್ತ ಕೃಷ್ಣಪ್ಪನವರು ಉತ್ತರ ಕೊಟ್ಟರು: 'ನಾವು ಹೆಣ್ಣು ಹೆತ್ತೋರು, ನಿಷ್ಟುರವಾಗಿ ಮಾತಾಡೋಕೆ ಆಗುತ್ತಾ ಹೇಳು? ಸಂಕಟ ಅನುಭವಿಸ್ಟೇಕಾದೋರು ನಾವು ತಾನೆ? ಆತನನ್ನ ಅಂಗಲಾಚಿ ಕೇಳ್ಕೊತೀನಿ ಹೀಗೆ ಮಾಡೇಡ ಮಾರಾಯ, ಶತಾಪರಾಧವಾಗಿದ್ದರೂ ಕ್ಷಮಿಸು ಅಂತ. ಮನಸ್ಸಾಕ್ಷಿ ಎಂದೂ ಒಪ್ಪದ, ಆದರೆ ಅಸಹಾಯತೆಯ ಫಲವಾಗಿ ಆಡಲೇ ಬೇಕಾದ, ಮಾತು! ಅದನ್ನು ಉಚ್ಚರಿಸುತ್ತಿದ್ದಂತೆಯೇ ಕೃಷ್ಣಪ್ಪನವರ ಕಂಠ ಗದ್ಗದಿತ ವಾಯಿತು. ಮೂವತ್ತು ವರ್ಷಗಳಿಗೂ ಮಿಕ್ಕಿ ಬದುಕಿನ ಜತೆಗಾರನಾಗಿದ್ದ ಆ ಜೀವದ ಬೇಗುದಿಯ ನಿಜರೂಪವನ್ನು ತಿಳಿಯುವುದು ಇನ್ನೊಂದು ಜೀವಕ್ಕೆ ಕಷ್ಟವಾಗಿರಲಿಲ್ಲ; ತಮ್ಮದೂ ಅದೇ ಬೇಗುದಿ ಎನ್ನುವಂತೆ ಶೋಕದ ಏದುಸಿರು ಬಿಡುತ್ತ ಸುನಂದೆಯ ತಾಯಿ ಅಂದರು: “ನಿನ್ನ ವರ್ತನೇನ ದೇವರು ಮೆಚ್ಚಲಾರ ಅಂತ, ಆ ಪಾಪಿಗೆ ಹೇಳಿ.”