ವಿಷಯಕ್ಕೆ ಹೋಗು

ಪುಟ:Ekaangini by Nirajana.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

41 ವೆಂಬ ಆಕ್ರೋಶವೂ ಬೆರೆತಿತ್ತು. ಮುಂದುವರಿಯುತ್ತ ಆಕೆಯೆಂದರು. “ನೀವು ಆ ರೀತಿ ಖಂಡಿತ ಭಾವಿಸ್ಸಾರು. ಸುನಂದೆಯಂಥ ಹೆಂಡತಿ ಸಿಗಬೇಕಾದರೆ ಜನ್ಮಾಂತರದ ಪುಣ್ಯ ಬೇಕು. ನಾನು ನೋಡಿಲ್ವೆ? ಆತ ಅಯೋಗ್ಯ ಮನುಷ್ಯ, ಅದೇನು ಬಂತೋ ಕಾಲ, ಹ್ಯಾಗಿದ್ದೋನು ಹ್ಯಾಗಾಗಿ ಹೋದ!" ಗೆಳತಿಯನ್ನು ಸಮರ್ಥಿಸುವ ಆತುರದಲ್ಲಿ ಆಕೆಯ ಗಂಡನನ್ನು ಕುರಿತು ಸಂಬೋ ಧನ ಅನಿರೀಕ್ಷಿತವಾಗಿ ಏಕವಚನಕ್ಕಿಳಿದಿತ್ತು. ಕೃಷ್ಣಪ್ಪನವರಿಗೆ ಅದರಿಂದ ಬೇಸರ ವಾಗಲಿಲ್ಲ. ರಾಮಯ್ಯನವರ ಹೆಂಡತಿಯ ಉದ್ವೇಗವನ್ನು ಟೀಕಿಸುವ ಮುಖಭಾವ ತೋರಲಿಲ್ಲ. ಆದರೂ ರಾಧಮ್ಮನೇ ತುಟಿಮೀರಿದ ಮಾತಿಗಾಗಿ ತವಕಗೊಂಡರು. “ನಿಮ್ಮ ಅಳಿಯನ ವಿಷಯದಲ್ಲಿ ಚಾಡಿ ಹೇಳಿದೇಂತ ದಯವಿಟ್ಟು ಭಾವಿಸ್ಟೇಡಿ ಆತ ಸುಧಾರಿಸ್ಕೊಂಡು ಸುನಂದಾ ಸುಖವಾಗಿದ್ದೇಕು ಅನ್ನೋದಷ್ಟೇ ನನ್ನ ಆಪೇಕ್ಷೆ, ಎಂದರು. ಕೃಷ್ಣಪ್ಪನವರು ಹಾಗೆ ಭಾವಿಸಿದ್ದರೆ ತಾನೆ? “ಇಲ್ಲವಮ್ಮ, ತಪ್ಪು ತಿಳಕೊಂಡೇನೇ ನಾನು? ನನ್ನ ಮಗಳ ವಿಷಯದಲ್ಲಿ ನನಗೇನೂ ಅಪನಂಬಿಕೆ ಇಲ್ಲ. ಆದರೆ ನಿಮ್ಮಂಥವರ ಬಾಯಿಂದಲೇ ಅಂಥ ಮಾತು ಕೇಳಿದಾಗ ಹೆಚ್ಚು ಸಮಾಧಾನವಾಗುತ್ತೆ.” “ಯಾರ ಕೈಲಾದರೂ ನಿಮ್ಮ ಅಳಿಯನಿಗೆ ಹೇಳಿಸೋಕಾಗಲ್ವ?” ಎಂದು ರಾಮಯ್ಯ ಕೇಳಿದರು.

  • ಆತನ ಕಡೇಲಿ ಹಿರಿಯರು ಅನ್ನೋರಿಲ್ಲ. ಯಾರ ಮಾತನ್ನೂ ಆತ ಕೇಳೋ

ಹಾಗೂ ಕಾಣೆ, ಆದರೂ ಆತನ ಸ್ನೇಹಿತರು ಯಾರು ಎತ್ತ ಅಂತ ವಿಚಾರಿಸಿ ನೋಡ್ತೀನಿ. ಮಾಡೋ ಪ್ರಯತ್ನ ಮನುಷ್ಯ ಮಾಡೋಕು. ಉಳಿದದ್ದು ದೇವರ ಚಿತ್ರ” ಎಂದರು ಕೃಷ್ಣಪ್ಪ. ಸುನಂದೆಯ ಗಂಡ ಬೇರೆ ಊರಿಗೆ ಹೋಗಿರಲಾರ ಎಂಬ ತಿಳಿವಳಿಕೆಯಿಂದ ರಾಧಮ್ಮನಿಗೆ ಸ್ವಲ್ಪ ಸಮಾಧಾನವಾಯಿತು. “ಸಾಧ್ಯವಾದರೆ ನಿಮ್ಮ ಅಳಿಯನನ್ನ ಇಲ್ಲಿಗೂ ಒಮ್ಮೆ ಕರಕೊಂಡನ್ನಿ, ಎಂದರು ಆಕೆ. ಅದು ಸಾಧ್ಯವೆಂಬ ಭ್ರಮೆ ಕೃಷ್ಣಪ್ಪನವರಿಗೆ ಇರಲಿಲ್ಲ. ಆದರೂ ಉತ್ತರವಾಗಿ, “ಪ್ರಯತ್ನ ಮಾಡ್ತೀನಿ,” ಅಂದರು. ರಾಧಮ್ಮ ಒಂದು ಲೋಟ ಹಾಲು ತಂದಿಟ್ಟರು. ಆ ಮನೆಯ ಮಟ್ಟಕ್ಕೆ ಅನು ಗುಣವಾದ ಹಾಲು, ರಾತ್ರಿ ಹುಡುಗರು ಮಕ್ಕಳು ಕುಡಿಯಬೇಕಾದುದು ಅತಿಥಿಗೆ ದೊರೆತಿತ್ತು. ನಿರಾಕರಿಸಲಾಗದೆ ಕೃಷ್ಣಪ್ಪ ಅದನ್ನು ಕುಡಿದರು. ರಾಮಯ್ಯನವರನ್ನು ರಾಧಮ್ಮ ಒಳಕ್ಕೆ ಕರೆದರು. ಕೃಷ್ಣಪ್ಪನವರು ಹೊರಟು ನಿಂತುದನ್ನು ಕಂಡು ಅವಸರವಾಗಿಯೇ ಹೊರಬರುತ್ತ ರಾಮಯ್ಯನೆಂದರು;