೧೭ ತಳಮಳವಿದೇನಿಳೆಗೆ?

ವಿಕಿಸೋರ್ಸ್ದಿಂದ


ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆ |
ಜಳನಿಧಿಯೊಳಾದಂತೆ ಸುಧೆಗೆ ಪೇಡಿಕೆಯೇಂ? ||
ಹಾಳಾಹಲವ ಹುಡಿವ ಗಿರಿಶನಿದ್ದಿರ್ದೋಡೀ |
ಕಳವಳದೇತಕೆಲೋ? - ಮಂಕುತಿಮ್ಮ || ೧೭

(ತಳಮಳ+ಇದು+ಏನು+ಇಳೆಗೆ) (ಜಳನಿಧಿಯೊಳು+ಆದಂತೆ) (ಗಿರಿಶನು+ಇದ್ದಿರ್ದೋಡೇ+ಈ) (ಕಳವಳ+ಅದು+ಏತಕೆ+ಎಲೋ)
ರಾಕ್ಷಸರೂ, ದೇವತೆಗಳೂ, ಸಮುದ್ರವನ್ನು ಕಡೆದಾಗ ಕೊನೆಯಲ್ಲಿ ಅಮೃತ ದೊರಕಿದಂತೆ, ಈ ಜಗತ್ತಿನ ಈವತ್ತಿನ ತಳಮಳ, ಆ ಅಮೃತಕ್ಕೆ ನಾಂದಿಯೋ ?
ಆ ಮಥನದಲ್ಲಿ, ಅಮೃತಕ್ಕೆ ಮುಂಚಿತವಾಗಿ, ಹಾಲಾಹಲವೆಂಬ ವಿಷ ಹುಟ್ಟಿ, ದೇವದಾನವರಲ್ಲಿ ಗಾಬರಿಯನ್ನುಂಟು ಮಾಡಿದಾಗ, ಈಶ್ವರನು ಬಂದು, ಅದನ್ನು
ಕುಡಿದು, ಆ ಕಳವಳವನ್ನು ಹೋಗಲಾಡಿಸಿದಂತೆ, ಅದೇ ಈಶ್ವರನು ಈಗಲೂ ಇರುವಾಗ, ಈ ಕಳವಳ ಬೇಕಾಗಿಲ್ಲ. ಅನಗತ್ಯ.