ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ ಸಕಲವಿಸ್ತಾರದ ರೂಹು ನೀನೇ ದೇವಾ `ವಿಶ್ವತಶ್ಚಕ್ಷು' ನೀನೆ ದೇವಾ `ವಿಶ್ವತೋಮುಖ' ನೀನೆ ದೇವಾ `ವಿಶ್ವತೋಬಾಹು' ನೀನೇ ದೇವಾ `ವಿಶ್ವತಃಪಾದ' ನೀನೆ ದೇವಾ ಕೂಡಲಸಂಗಮದೇವಾ.