ಉದಯ ಮಧ್ಯಾಹ್ನ ಸಂಧ್ಯಾಕಾಲವ ನೋಡಿ ಮಾಡುವ ಕರ್ಮಿ ನೀ ಕೇಳಾ; ಉದಯವೆಂದೇನೊ ಶರಣಂಗೆ ಮಧ್ಯಾಹ್ನವೆಂದೇನೊ ಶರಣಂಗೆ ಅಸ್ತಮಾನವೆಂದೇನೊ ಶರಣಂಗೆ ಮಹಾಮೇರುವಿನ ಮರೆಯಲ್ಲಿರ್ದು ತಮ್ಮ ನೆಳಲನರಸುವ ಭಾವಭ್ರಮಿತರ ಮೆಚ್ಚ ನಮ್ಮ ಕೂಡಲಸಂಗಮದೇವರು.