ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಲು / ಹನುಮಾಪುರದಲ್ಲಿ ಹನುಮಜಯಂತಿ ೧೭೧

ಮೂಲರಯಲ್ಲಿನ ಬಚ್ಚಲಲ್ಲಿ ಕಾಲು ತೊಳೆಯುತ್ತಿದ್ದಂತೆ ಆತ ಕೇಳಿದ, 'ಇದೇನಬೇ ಯವ್ವ, ಚೆಂಜೇ ಹೊತ್ತಿನ್ಯಾಗ ಮನೀ ತೊಳ್ಯಾಕ ನಿಂತಿದೆ ?'

       ಸರ್ರನೆ ಮಗನ ಕಡೆ ತಿರುಗಿದಳು ಗೌಡಶಾನಿ, 'ನೀ ಬಂದ್ಯಯಪ್ಪ ? ಮಧ್ಯಾಹ್ನದಾಗ ನಿನ್ನ ಕಾರಿಯಾಕ ಹಚಗೊಡಬೇಕು ಅಂತಿದ್ನಿ. ಏನ ಹೇಳ್ಲಿಲಿ, ನಿನ್ನ ಹೆಂಡ್ತಿ ಒಮ್ಮೆ ಕಿಲೇ ಕಣ್ಣ ಬೆಳ್ಳಗೇ ಮಾಡಿದ್ಲು, ಈ ಸುಡುಗಾಡ ಊರಾಗ ಒಬ್ಬ ದಾಗದಾರನ ನೋಡಾಕ ಆ ಆಚಾರಿ ಒಳತನ ಬಂದ. ಏನ ಮನ್ನಾ ಕೊಟ್ಟಾ. ಜರಾ ಕಮ್ಮ ಆತು. ಈಗ ಮಣಿಗ್ಯಾಳು. ಗಣರಾಸಿಬಿಟ್ಟೀವು ಎಲ್ಲರೊ. ಈ ವಾರಾ ಗಾಡಿ ಕಟ್ಟಿಸಿಕೊಂಡಕ್ಯಾಸಿ ಶಾರಕ್ಕ ಹೋಗಿ ಚಲೋ ದಾಗದಾರನ್ನ ಕರಕೊಂಡು ಬಾ. ಇಂಜೀಶನ್ನ ಕೊಡ್ಲಿ. ಈ ಗೋಪಾಲಾಚಾರಿ ಮನಿಗೆ ಬರೋದೂ ಸಾಕು, ಮಣಿಯೆಲ್ಲ ಈ ಹಾರೂರು ಮುಂದುವನಿಂದ ಮುಡಚಿತ್ತಾಗಿ ನಾ ಸತಗೋತ ತೋಳ್ಯುದು ಸಾಕು.'
       *
       ಗೌಡರ ಸೊಸೆಗೆ ಚಿಕಿತ್ಸೆ ಮಾಡಿ ತಮ್ಮ ಬೇರು-ನಾರುಗಳ ಚಿಕ್ಕ ಪೆಟ್ಟಿಗೆ ಗಳನ್ನೂ ಹೊತ್ತು ಮನೆಗೆ ಹಿಂದಿರುಗಿದ ಗೋಪಾಲಚಾರ್ಯರು ಬಾಗಿಲಲ್ಲಿ ನಿಂತು ಹೆಂಡತಿಯನ್ನು ಕೂಗಿದರು. 'ಏ ಈ,ಪೀಠಿಗಿ ಒಳಗ ಒಯಿದ್ದಿದ : ನಾ ಹಿಂಗ ಒಂದಿಷ್ಟ ಶ್ರೀನಿವಾಸಚಾರ್ಯರ ಕಡೆ ಹೋಗಿ ತುಳಸಿ ತಗೊಂಡು ಬರ್ತೀನಿ,' 
       ಹೊರಗೆ ನಿಂತು, ಬಾಗಿಲಿಗೆ ಬಂಡ ಹೆಂಡತಿಗೆ ಪೆಟ್ಟಿಗೆಕೊಟ್ಟು ಹಾಗೆಯೇ ತಮ್ಮ ಅಂಗವಸ್ತ್ರದಲ್ಲಿ ಕಟ್ಟಿಕೊಂಡು ಬಂದಿದೆ ತಾಜಾ ರಾಜಗಿರಿಸೊಪ್ಪಿನ ಎರೆಡು ದೊಡ್ಡ ಸೂಡುಗಳನ್ನು ಅವಳಿಗೆ ಕೊಡುತ್ತ ಆಚಾಯರೆಂದರು, 'ಇಕ, ಹಿಡಿ, ನಾಳೆ ಪ್ರಾಣದೇವರ ನೈವೇದ್ಯಕೆ ಪಲ್ಯ ಇಲ್ಲ - ಪಲ್ಯಇಲ್ಲ ಅಂತ ಜೀವ ತಿಂತಿದ್ದಿ. ಬಂತಿಲ್ಲೋ ಪಲ್ಯ? ರಾಮಗೌಡ ಪಾಪ ಕೀಳದನ ಕೊಟ್ಟ.' 
       ತಟ್ಟನೆ ಪಲ್ಯದ ಸೂಡುಗಳನ್ನು ಬದಿಯ ಕತ್ತೆಯ ಮೇಲೆ ಚಲ್ಲಿ ಮುಖ ಸಿಂಡರಿಸಿ ಆಕೆ ಅಂದಳು ಅಯ್ಯ ಸುಡ್ಲಿ, ಮೊದಲ ಹೇಳ್ಬಾರ್ದ? ನೀರ ಹಾಕಿ ಒಳಗ ತಗೋತಿದ್ದೆ ನಿಮಗ ಹಜಾರ್ ಬಾರಾ ಬ್ಯಾರೆ ಹೆಲಿನಿ. ಹಿಂಗ ಮೈಲಿಗಿ ಮಾಡಬ್ಯಾಡ್ರಿ ಅಂತ. ಸುಮ್ಮನ ರೊಕ್ಕ ಕೊಡುಅಂದ್ರಿ ಆರಿಗೆ ಔಷದ ಕೊತ್ತಡಕ್ಕ. ಇಲ್ಲಿದ್ರಾ ಔಷದಾನ ಕೊಡಬ್ಯಾಡ್ರಿ. ಶೈಲಿ ಸೂಳೆಮಕ್ಕಳು.' 
       ಬಡಿಯಲೇ ನಿಂತಿದ್ದ ಕೇಶವಾಚಾಯ್-' ಹಂಗ ನೋಡಿದರ ಅವರ ರೊಕ್ಕನೂ ನಮಗ ಮೈಲಿಗಿನ, ಅಪ್ಪ ಶುಉದ್ರರ ಮನೆಗೆ ಹೋಗೋದ ನನಗ ಸೋರೋದಿಲ್ಲ.