ಪುಟ:ನಡೆದದ್ದೇ ದಾರಿ.pdf/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು ಶೋಷಣೆ / ಬಂಡಾಯ, ಇತ್ಯಾದಿ.... ೪೩೭

ಗಾಳಿಯಿಂದ ನಾನು ಎಲ್ಲಾದರೂ ದೂರ-ದೂರ ಓಡಿ ಹೋಗಬೇಕು ಅನಿಸುತ್ತದೆ. ಆದರೆ ಎಲ್ಲಿಗೆ ? ಎಷ್ಟು ಸಂತಾಪವಾಗಿದ್ದರೂ ದುಃಖವಾದರೂ ಎದೆ ಬಿರಿದು ಹೋದರೊ ಮೂರ್ತಿಯ ತೋಳಿನಾಸರೆ ಸಿಕ್ಕ ಕ್ಷಣವೇ ನಾನು ಇನ್ನೂ ಎಲ್ಲ ಮರೆಯುತ್ತೇನೆ. ನನಗೆ ಯಾಕೆ ಈ ದೌರ್ಬಲ್ಯವೋ...... ಎಂದೂ, ಯಾರಿಂದಲೂ ಅತ್ತ ಸರಿ ಅನ್ನಿಸಿಕೊಂಡವಳಲ್ಲ . ಹೆತ್ತವರಿಂದ ಬೆಳೆಸಿದವರಿಂದ ಒಂದು ಬಿರುಸು ಮಾತು ಅನ್ನಿಸಿಕೊಂಡವಳಲ್ಲ. ಈ ಮನುಷ್ಯನಿಂದ ಇಷ್ಟು ಅಪಮಾನ, ಅನ್ಯಾಯ, ಅತ್ಯಾಚಾರ ಯಾಕಾದರೂ ಸಹಿಸುತ್ತಿರುವೆ....... ಹೊರಗಿನ ಜಗತ್ತು ನನ್ನ ಪ್ರತಿಭೆಯನ್ನು, ಕಲೆಯನ್ನು, ಸೌಂದರ್ಯವನ್ನು ಎಲ್ಲವನ್ನೂ ಮುಕ್ತಕಂಠದಿಂದ ಹೊಗಳುವಾಗ ನನಗೆ ಏನೂ ಅನ್ನಿಸುವುದಿಲ್ಲ. ನಾನು ಪ್ರೀತಿಸಿದ ಈ ಮನುಷ್ಯನ ಕಣ್ಣನೋಟದಲ್ಲಿ ಎಂದಾದರೊಮ್ಮೆ ಪ್ರಶಂಸೆ ಮಿಂಚಿದರೆ ನಾನು ಪುಲಕಿತಳಾಗುತ್ತೇನೆ. ಈತ ಎಂದಾದರೂ ತಪ್ಪಿಯಾದರೂ ನನ್ನ ಬಗ್ಗೆ ಒಂದು ಒಳ್ಳೆಯ ಮಾತು ಹೇಳಿಲ್ಲ ಇತ್ತೀಚಿನ ದಿನಗಳಲ್ಲಿ.... ಹೊಗಳಿದರೆ ಹೆಂಗಸರು ಸೊಕ್ಕಿಗೇರಿ ಕೆಡುತ್ತಾರೆಂದು ಆತನ ಅಭಿಪ್ರಾಯ .... ಈ ಥರ ಒದ್ದಾಡುತ್ತ ನಾನು ಎಷ್ಟು ದಿನ ತಲೆ ಕೆಡದೆ ಇರಬಲ್ಲೆ ?

                                                  *  *  *
               ಸಂಜೆಯಾದರೂ ಕಮಲಾಳ ಡಾಯರಿ ಹಿಡಿದು ಶಶಿ ಮಲಗಿಯೇ ಇದ್ದಳು. ಕತ್ತಲು ಕವಿಯುತ್ತಿದ್ದರೂ ಎದ್ದು ದೀಪ ಹಾಕದೆ ಮಬ್ಬು ಬೆಳಕಿನಲ್ಲಿ ಹಾಗೇ ಓದುತ್ತ ಹೋದಳು.ಕಣ್ಣು ಉರಿಯತೊಡಗಿದ್ದವು. ತಲೆ ನೋಯತೊಡಗಿತ್ತು, ಮಿದುಳು ಧೀಂಗುಡುತಿತ್ತು. ಇವತ್ತು ಇಡಿಯ ದಿನಾ ತಾನು ಊಟವನ್ನೂ ಮಾಡಿಲ್ಲವೆನ್ನುವುದು ನೆನಪಾಗಿ ಬೇಸರವಾಯಿತು. ಏಳಲು, ಅಡಿಗೆ ಮಾಡಿಕೊಳ್ಳಲು, ದೀಪ ಹಾಕಲು ಏಳಕ್ಕೂ  ಬೇಸರವಾಗಿ ಆಕೆ ಹಾಗೇ ಕಣ್ಣುಮುಚ್ಚಿ ಬಿದ್ದುಕೊಂಡಳು.
                ಕರೆಗಂಟೆಯ ಸದ್ದಾದಾಗಲೂ ಆಕೆಗೆ ಏಳಬೇಕು ಅನ್ನಿಸಲಿಲ್ಲ. ಯಾರಾದರೂ ಬಂದಿರಲೊಲ್ಲರೇಕೆ, ಗಂಟೆ ಬಡಕೊಳ್ಳಲೊಲ್ಲದೇಕೆ, ಏಳುವುದು ಬೇಡ, ಯಾರಿದ್ದರೂ ಇರಲಿ, ಹಾಳಾಗಿ ಹೋಗಲಿ.......
               ಆದರೆ ಕರೆಗಂಟೆಯ ಸದ್ದಿನೊಂದಿಗೆ ಅವಳಿಗೆ ತೀರ ಪರಿಚಿತ 'ಡಾಕ್ಟರ್ ಬಾಯೀ' ಕರೆ ಕೇಳಿ ಆಕೆ ಧಡಕ್ಕನೆ ಎದ್ದಳು ತುಸು ಆಶ್ಚರ್ಯದಿಂದಲೇ ಬಾಗಿಲು ತೆರೆದಳು. ಹೌದು, ಆಕೆ ಧ್ವನಿ ಗುರುತಿಸಿದಂತೆ ಸರಿಯಾಗಿ ರೋಶನ್ ಬಿ  ಬಂದಿದ್ದಳು. ನಗುನಗುತ್ತ ಅವಳೆದುರು ನಿಂತಿದ್ದಳು. ಹೊಸ ಕೆಂಪು ಬಣ್ಣದ ಸೀರೆಯುಟ್ಟು, ಕಿವಿಯಲ್ಲಿ