ಪುಟ:ನಡೆದದ್ದೇ ದಾರಿ.pdf/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೬ ನಡೆದದ್ದೇ ದಾರಿ ನಂಬಿಸಿ, ಈಗ ಎಂದೋ ಒಮ್ಮೆ ನನ್ನ ಜೀವನದಲ್ಲಿ ನಡೆದುಹೋದ ಕಹಿ ಘಟನೆಯನ್ನು ತಿರುತಿರುಗಿ ಹೀಗೆ ಎತ್ತಿ, ಆಡಿ, ಹಂಗಿಸಿದರೆ ಇದು ಮೋಸವಲ್ಲವೇ?

       ಉಳಿದದ್ದು ಹಾಗಿರಲಿ, ನಾವಿಬ್ಬರು ಒಂದಾಗಿದ್ದು ಆನೇಕ ಜನ್ಮಗಳ ಪುಣ್ಯದ ಫಲವೆಂದು ಎಷ್ಟೋ ಸಲ ಇಬ್ಬರು ತಿರುತಿರುಗಿ ಅಂದುಕೊಂಡು ಈಗ ಎಲ್ಲವು ಒಂದು ದೊಡ್ಡ ತಪ್ಪೆಂದು ಆತನಿಗೆ ಅನಿಸುವುದಾದರೆ ನನ್ನ ಜೀವನಕ್ಕೆ ಉಳಿದಿರುವ ಅರ್ಥವಾದರೂ ಏನು?
       -ಮರು ದಿನ ಮುಂಜಾನೆ ತಡವಾಗಿ ಎದ್ದ ಮುರ್ತಿ ಯಾಚನೆಯ ಧ್ವನಿಯಲ್ಲಿ ಅಂದ, 'ನನ್ನ ಕ್ಷಮಿಸು ಕಮಲಾ, ರಾತ್ರಿ ನನ್ನ ಮೈಯ್ಯಾಗ ಏನು ದೆವ್ವ ಬಂದಿತ್ತೋ ಏನೋ. ನ ನಿನಗ ಭಾಳ ತ್ರಾಸ ಕೊಟ್ಟೆ. ಪ್ಲೀಜ್, ಅದೆಲ್ಲ ಮರ್ತು ಬಿಡು. ನನ್ನ ಸಲುವಾಗಿ ನೀ ಎಷ್ಟ ತ್ಯಾಗ ಮಾಡೀದಿ.ನನ್ನ ಕ್ಷಮಿಸು. ಪ್ಲೀಜ್, ಮರ್ತು ಬಿಡು ಎಲ್ಲ.'
       ಅದು-ಇದು ಬೈದದ್ದು ಮರೆಯಬಲ್ಲೆ, ಹೊಡೆದದ್ದು ಮರೆಯಬಲ್ಲೆ, ನನ್ನನ್ನು ಅಲಕ್ಷಿಸಿದ್ದು, ಅವಮಾನಿಸಿದ್ದು, ಕಾಲ ಕಸವಾಗಿ ನಡೆಯಿಸಿಕೊಂಡದ್ದು, ನನ್ನ ಸುಖ-ಸಂತೋಷಗಳಿಗೆ, ಆಸೆ-ಆಕಾಂಕ್ಷೆಗಳಿಗೆ ಬೆಲೆ ಕೊಡಲಾರದ್ದು-ಈ ಎಲ್ಲ ಮರೆಯಬಲ್ಲೆ, ಕ್ಷಮಿಸಬಲ್ಲೆ. ಆದರೆ ಕಾಲ ಮೇಲೆ ಹಸಿರು ಕಲೆ ಕಂಡು ನಾನು ಪರಪುರುಷನ ಸಂಗ ಮಾಡಿರಬಹುದೆಂದು ಸಂಶಯಪಟ್ಟಿದ್ದು?ಹಲವಾರು ಬಾರಿ ಎಗ್ಗಿಲ್ಲದೇ ನನ್ನನ್ನು 'ಸೂಳೆ' ಅಂತ ಕರೆದಿದ್ದು? ಮಗಳ ವಯಸಿನ ನೀಲಾನ ಮೇಲೆ ಕಣ್ಣು ಹಾಕಿದ್ದು? ಇದ್ದನ್ನೆಲ್ಲ ಹೀಗೆ ಮರೆಯಲಿ? ಒಂದು ವೇಳೆ ನಾನು ಇದನ್ನು ಹೇಗಾದರೂ ಮಾಡಿ ಮರೆತರೂ, ಕ್ಷಮಿಸಿದರೂ ದೇವರು ಕ್ಷಮಿಸೆಬಹುದೇ?" 
                             ...........
       ಈ ಘಟನೆ ನಡೆದ ನಂತರ ನನಗೊಂದು ಥರಾ ಮಬ್ಬು ಕವಿದಂತಾಗಿದೆ. ನಾನು ಏನು ಮಾಡುವೆನೋ, ಎಲ್ಲಿಗೆ ಹೊರಟಿದ್ದೇನೂ, ಯಾವುದರ ಖಬರೂ ಇರುವುದಿಲ್ಲ. ಯಾವಾಗಕೂ ಒಂದು ಬಗೆಯ ಅಧ ನಿದ್ರಾವಸ್ಥೆಯಲ್ಲಿದ್ದಂತಿರುತ್ತೇನೆ. ಕೆಲಸದ ಕಡೆ ಲಕ್ಷ್ಯವೇ ಉಳಿದಿಲ್ಲ. ಮನೆಯಲ್ಲಿ, ದಾರಿಯಲ್ಲಿ, ಯಲ್ಲಕಡೆ ಉಸಿರುಗಟ್ಟಿಸುವಂತೆನಿಸುತ್ತದೆ. ಈ ಪ್ರತಿಕ್ಷಣ ಕೊಳ್ಳುವ